An IIPM Initiative
ಶನಿವಾರ, ಏಪ್ರಿಲ್ 30, 2016
 
 

ರಾಜ್ಯದಾದ್ಯಂತ ’ಸಕಾಲ’ ಯೋಜನೆ ಜಾರಿಗೆ ಚಾಲನೆ

ರಾಜ್ಯದಾದ್ಯಂತ ’ಸಕಾಲ’ ಯೋಜನೆ ಜಾರಿಗೆ ಚಾಲನೆ

 

'sakala' yojana
M N AHOBALAPATHY | Bangalore , ಏಪ್ರಿಲ್ 3, 2012 14:51
 

 ರಾಜ್ಯದಾದ್ಯಂತಸಕಾಲಯೋಜನೆ ಜಾರಿಗೆ ಚಾಲನೆ

 

ನಾಗರಿಕರಿಗೆ ಅತ್ಯಗತ್ಯ ಸೇವೆಗಳನ್ನು ನಿಗದಿತ ಸಮಯದಲ್ಲೇ ಒದಗಿಸುವ ಮತ್ತು ಆಡಳಿತದಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ನಾಗರಿಕ ಸೇವಾ ಖಾತ್ರಿ ಕಾಯ್ದೆ - ೨೦೧೨ಕ್ಕೆ ಅಧಿಕೃತ ಚಾಲನೆ ನೀಡಿದೆ. ಸರ್ಕಾರದ ೧೧ ಇಲಾಖೆಗಳ ಸುಮಾರು ೧೫೧ ಸೇವೆಗಳನ್ನು ಕಾಯ್ದೆಯ ವ್ಯಾಪ್ತಿಯಲ್ಲಿ ತರಲಾಗಿದ್ದು ಯೋಜನೆಗೆಸಕಾಲಎಂದು ಹೆಸರಿಸಲಾಗಿದೆ.

 

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ರಾಜ್ಯಮಟ್ಟದಲ್ಲಿ ಕಾಯ್ದೆಯ ಅನುಷ್ಠಾನಕ್ಕೆ ಚಾಲನೆ ನೀಡಿದರು. ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿಸಕಾಲಜಾರಿ ಆರಂಭ ಕಾರ್ಯಕ್ರಮ ನಡೆದಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು ನೂತನ ಯೋಜನೆ ಅನುಷ್ಠಾನಕ್ಕೆ ಮುನ್ನುಡಿ ಬರೆದರು.

 

ಸಕಾಲ ನನ್ನ ಕನಸಿನ ಯೋಜನೆ. ಜನಸಾಮನ್ಯರಿಗೆ ಇಂತಹದೊಂದು ಸೇವೆ ನೀಡುವ ನನ್ನ ಕನಸು ಇಂದು ಸಾಕಾರಗೊಂಡಿದೆ. ಗ್ರಾಮ ಪಂಚಾಯ್ತಿಯಿಂದ ಹಿಡಿದು ರಾಜ್ಯದ ಮುಖ್ಯಮಂತ್ರಿ ಹುದ್ದೆಯವರೆಗೂ ಬಂದಿದ್ದೇನೆ. ಆದರೆ, ಸಕಾಲದಂತ ಯೋಜನೆ ಅನುಷ್ಠಾನದಿಂದ ನನ್ನ ರಾಜಕೀಯ ಜೀವನವನ್ನು ಸಾರ್ಥಕ್ಯಗೊಳಿಸಿಕೊಂಡ ಧನ್ಯತೆ ನನಗಾಗಿದೆ ಎಂದು ಮುಖ್ಯಮಂತ್ರಿ ಸದಾನಂದಗೌಡ ಹೇಳಿದರು.

 

ಸಕಾಲದಲ್ಲಿ ಏನುಂಟು? ಏನಿಲ್ಲ?

ಪಡಿತರ ಚೀಟಿ ನೀಡುವುದು, ವಾಣಿಜ್ಯ ಪರವಾನಗಿ, ಉಚಿತ ಮತ್ತು ರಿಯಾಯಿತಿ ದರದ ಬಸ್ ಪಾಸ್‌ಗಳ ವಿತರಣೆ, ವಾಹನ ಚಾಲನ ಪರವಾನಗಿಗಳ ವಿತರಣೆ, ವಾಹನಗಳ ನೋಂದಣಿ, ಆಸ್ತಿಯ ಖಾತಾ ನೀಡಿಕೆ, ಕಟ್ಟಡ ನಕ್ಷೆ ಅನುಮೋದನೆ, ನೀರು ಮತ್ತು ಒಳಚರಂಡಿ ಸಂಪರ್ಕ, ದ್ವಿಪ್ರತಿ ಪಡೆಯುವುದು, ಅಪಘಾತ ಪರಿಹಾರ ನಿಧಿಯಡಿ ಪರಿಹಾರ ವಿತರಣೆ, ಹಿಂದಕ್ಕೆ ಪಡೆಯುವುದು, ನವೀಕರಣ; ಆಹಾರ ಧಾನ್ಯ, ಬೇಳೆ, ಖಾದ್ಯತೈಲ ಮತ್ತು ಸೀಮೆಎಣ್ಣೆ ಸಗಟು ಮಾರಾಟ ಪರವಾನಗಿ ನೀಡುವ ಸೇವೆಗಳು ಕಾಯ್ದೆಯ ವ್ಯಾಪ್ತಿಯಲ್ಲಿವೆ.

 

ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣಪತ್ರ, ಪರಿಶೀಲನೆ ಮತ್ತು ಸಿಂಧುತ್ವ ಪ್ರಮಾಣ ಪತ್ರ, ಭೂಮಿಯ ಮೇಲಿನ ಹಕ್ಕುಗಳ ಪ್ರಮಾಣ ಪತ್ರ, ಕೃಷಿ ಭೂಮಿ ಪರಿವರ್ತನೆ, ಭೂಸ್ವಾಧೀನ ಪರಿಹಾರ ಸಂದಾಯ, ಭೂರಹಿತ ಪ್ರಮಾಣ ಪತ್ರನಿವಾಸಿ ಪ್ರಮಾಣ ಪತ್ರ, ಜನಸಂಖ್ಯೆ ಪ್ರಮಾಣ ಪತ್ರ, ಕೃಷಿಕುಟುಂಬದ ಸದಸ್ಯ ಪ್ರಮಾಣ, ವಿವಾಹ ಸಂಬಂಧ ಪ್ರಮಾಣ ಪತ್ರಗಳು, ನಿರುದ್ಯೋಗ ಪ್ರಮಾಣ ಪತ್ರ, ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ ಪ್ರತಿ ನೀಡುವುದು, ಸಭೆ ಮತ್ತು ಮೆರವಣಿಗೆಗೆ ಅನುಮತಿ ನೀಡುವುದು, ವೀಸಾ ನಿರಾಕ್ಷೇಪಣಾ ಪತ್ರ ವಿತರಣೆ, ಪಾಸ್‌ಪೋರ್ಟ್ ಸಂಬಂಧ ಪರಿಶೀಲನೆ ಸೇರಿದಂತೆ ಹಲವು ಸೇವೆಗಳು ಯೋಜನೆಯಲ್ಲಿ ನಿಗದಿತ ಸಮಯದಲ್ಲಿ ಲಭ್ಯವಾಗಲಿವೆ.

 

ಗ್ರಾಮ ಪಂಚಾಯಿತಿಗಳ ಮೂಲಕ ಬೀದಿದೀಪಗಳು ಹಾಗೂ ಕುಡಿಯುವ ನೀರಿನ ನಿರ್ವಹಣೆ ಮತ್ತಿತರ ಅನಿವಾರ್ಯ ಸೇವೆಗಳನ್ನು ಕಾಯ್ದೆಯಡಿ ತರಲಾಗಿದೆ. ಉತ್ತರ ಪತ್ರಿಕೆಗಳ ಛಾಯಾ ಪ್ರತಿ ಪಡೆಯುವುದು ಮತ್ತು ಮರುಮೌಲ್ಯಮಾಪನ, ಶಿಕ್ಷಣ ಸಂಸ್ಥೆಗಳ ನೋಂದಣಿ, ಮಾನ್ಯತೆ ನವೀಕರಣ, ಸ್ಥಳೀಯ ಆಡಳಿತ ಸಂಸ್ಥೆಗಳ ಮೂಲಕ ನೀಡುವ ಹೆಚ್ಚಿನ ಸೌಲಭ್ಯಗಳು ಇನ್ನುಸಕಾಲ ವ್ಯಾಪ್ತಿಯಲ್ಲೇ ಸಿಗಲಿವೆ.

 

ಸೇವೆ ನೀಡದ ಅಧಿಕಾರಿಗಳಿಗೆ ದಂಡ:

 

ಪ್ರತಿ ಸೇವೆಯನ್ನೂ ಒದಗಿಸುವ ಅಧಿಕಾರಿಯನ್ನು ಕಾಯ್ದೆಯಲ್ಲೇ ಗುರುತಿಸಲಾಗಿದೆ. ಸಾರ್ವಜನಿಕರು ಸೂಕ್ತ ದಾಖಲೆಗಳೊಂದಿಗೆ ಸಂಬಂಧಿಸಿದ ಅಧಿಕಾರಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸ್ವೀಕರಿಸಿದ ಬಳಿಕ ಪರಿಶೀಲನೆ ನಡೆಸಿ, ಸ್ವೀಕೃತಿ ಸಂಖ್ಯೆಯನ್ನು ನೀಡಲಾಗುತ್ತದೆ. ನಂತರದ ದಿನಗಳಲ್ಲಿ ಅರ್ಜಿದಾರರು ಸಂಖ್ಯೆಯನ್ನು ಬಳಸಿಕೊಂಡುಸಕಾಲವೆಬ್‌ಸೈಟ್ ಮೂಲಕ ತಮ್ಮ ಅರ್ಜಿಯ ಸ್ಥಿತಿಯ ಬಗ್ಗೆ ನಿರಂತರ ಮಾಹಿತಿ ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸಲು ನೆರವು ಒದಗಿಸಲು ಎಲ್ಲ ಪ್ರಮುಖ ಕಚೇರಿಗಳಲ್ಲಿ ಸಹಾಯ ಕೇಂದ್ರಗಳನ್ನೂ ಸ್ಥಾಪಿಸಲಾಗಿದೆ.

 

ಸಕಾಲಯೋಜನೆ ಜಾರಿಗಾಗಿ ಸರ್ಕಾರ ಪ್ರತ್ಯೇಕ ಸಾಫ್ಟ್‌ವೇರ್ ಕೂಡ ಸಿದ್ಧಪಡಿಸಿದೆ. ವಿದ್ಯುನ್ಮಾನ ಮಾದರಿಯ ಕಡತಗಳು ಲಭ್ಯವಿರುವ ಸೇವೆಗಳು ಬಹುಬೇಗ ಲಭ್ಯವಾಗುತ್ತವೆ. ಗ್ರಾಮ ಪಂಚಾಯಿತಿಗಳ ಮೂಲಕ ಬೀದಿದೀಪಗಳು ಹಾಗೂ ಕುಡಿಯುವ ನೀರಿನ ನಿರ್ವಹಣೆ ಮತ್ತಿತರ ಅನಿವಾರ್ಯ ಸೇವೆಗಳನ್ನು ಕಾಯ್ದೆಯಡಿ ತರಲಾಗಿದೆ. ಸೇವೆ ಒದಗಿಸುವ ಅಧಿಕಾರಿ, ಸಕ್ಷಮ ಅಧಿಕಾರಿ ಮತ್ತು ಮೇಲ್ಮನವಿ ಪ್ರಾಧಿಕಾರಿಗಳನ್ನೂ ನಿಗದಿಪಡಿಸಲಾಗಿದೆ. ನಿಗದಿತ ಸೇವೆಯನ್ನು ಸಕಾಲಕ್ಕೆ ನೀಡಲು ವಿಫಲವಾಗುವ ಅಧಿಕಾರಿಗೆ ನಿತ್ಯ ೨೦ ರೂಪಾಯಿಯಂತೆ ಗರಿಷ್ಠ ರೂ ೫೦೦ ದಂಡ ವಿಧಿಸುವ ಅವಕಾಶವೂ ಕಾಯ್ದೆಯಲ್ಲಿದೆ. ಮೊತ್ತವನ್ನು ಅಧಿಕಾರಿಯು ಅರ್ಜಿದಾರನಿಗೆ ಸಂದಾಯ

ಮಾಡಬೇಕು.

 

ರಾಜ್ಯವ್ಯಾಪಿ ಕಾಯ್ದೆಯ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಸರ್ಕಾರವು ಕಾಲ್‌ಸೆಂಟರ್ ಒಂದನ್ನು ಅಸ್ತಿತ್ವಕ್ಕೆ ತಂದಿದೆ. ಕಾಲ್‌ಸೆಂಟರ್‌ನ ದೂರವಾಣಿ ಸಂಖ್ಯೆ ೦೮೦-೪೪೫೫೪೪೫೫ಗೆ ಕರೆಮಾಡಿ ಅರ್ಜಿಗಳ ಸ್ಥಿತಿಗತಿ, ಯೋಜನೆಯ ಪೂರ್ಣ ವಿವರಗಳ ಬಗ್ಗೆ ಮಾಹಿತಿ ಪಡೆಯಬಹುದು.

ನಿಮ್ಮ ಅಂಕ:
ಕಳಪೆ ಉತ್ತಮ    
ಪ್ರಸ್ತುತ ಅಂಕ 2.5
Post CommentsPost Comments
ಸಂಚಿಕೆ ದಿನಾಂಕ: ಸೆಪ್ಟೆಂಬರ್ 30, 2012

ಫೋಟೋ