User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
 
 
ಪತ್ರ ಚರಿತ್ರೆ
ಸ್ಯಾಂಡೋರ್ ಫೆರೆನ್ಸಿಗೆ ಸಿಗ್ಮಂಡ್ ಫ್ರಾಯ್ಡ್ ಬರೆದ ಪತ್ರ
 

ಮಾನಸಿಕ ತರ್ಕಶಾಸ್ತ್ರದಲ್ಲಿ ಅದ್ಭುತ ಹಿಡಿತ ಸಾಧಿಸಿದ್ದ 20ನೇ ಶತಮಾನದ ಮನಃಶಾಸ್ತ್ರಜ್ಞ ಆಸ್ಟ್ರಿಯಾದ ಸಿಗ್ಮಂಡ್ ಫ್ರಾಯ್ಡ್. ಈಡಿಪಸ್ ಕಾಂಪ್ಲೆಕ್ಸ್‌ನ ಫ್ರಾಯ್ಡ್ ಸಿದ್ಧಾಂತಗಳು ಕಲೆ, ಸಾಹಿತ್ಯ ಮತ್ತು ಸಾಮಾಜಿಕ ಚಿಂತನೆಗಳ ಮೇಲೆ ಅಪಾರ ಪ್ರಭಾವ ಬೀರಿವೆ. ಮಾನವನಲ್ಲಿ ಸುಪ್ತ ಲೈಂಗಿಕ ಪ್ರಜ್ಞೆಗಳಿದ್ದು, ಆತ ಅದರ ನೆಲೆಯಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಾನೆ ಎನ್ನುವುದು ಫ್ರಾಯ್ಡ್ ಅವರ ಪ್ರಮುಖ ಸಿದ್ಧಾಂತವಾಗಿತ್ತು. ಇದ್, ಈಗೋ (ಅಹಂ) ಮತ್ತು ಸೂಪರ್ ಈಗೋ ಮೇಲೆ ಕೇಂದ್ರೀಕೃತವಾಗಿರುವ ಅವರ ಚಿಂತನೆಗಳು ಜಾಗತಿಕವಾಗಿ ಇಂದಿಗೂ ಮನಃಶಾಸ್ತ್ರಜ್ಞರ ನಡುವೆ ಚರ್ಚೆಯ ವಿಷಯವಾಗಿದೆ.

ಗೆ ,

ಸ್ಯಾಂಡೋರ್ ಫೆರೆನ್ಸಿ

ಅಕ್ಟೋಬರ್ 6 , 1910

ಪ್ರಿಯ ಸ್ನೇಹಿತ ,

ಮಾತಿನ ಮೂಲಕ ನಿನ್ನನ್ನು ನೀನು ತೋರ್ಪಡಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಬರವಣಿಗೆ ಮೂಲಕ ನಿನ್ನನ್ನು ಇನ್ನಷ್ಟು ಉತ್ತಮವಾಗಿ ಪ್ರಸ್ತುತಪಡಿಸುವುದು ಸಾಧ್ಯ ಎಂಬುದು ಎಷ್ಟು ಅದ್ಭುತ ಅಲ್ಲವೇ ? ಹೌದು , ನೀನು ಏನನ್ನು ಯಾವ ಉದ್ದೇಶದಿಂದ ಬರೆಯುತ್ತಿದ್ದಿ ಎಂಬುದು ನನಗೆ ತಿಳಿದಿದೆಯಾದರೂ , ಆ ವಿಷಯದ ಕುರಿತಾಗಿ ನಿನಗೆ ಕೆಲವು ಸ್ಪಷ್ಟನೆಗಳನ್ನು ನೀಡ ಬಯಸುತ್ತೇನೆ. ನಾನು ನಿನ್ನ ಮೇಲೆ ನೇರವಾಗಿ ಸಿಡುಕಲಿಲ್ಲ ; ಬೈಗುಳದ ಮೂಲಕ ನಿನಗೆ ನನ್ನ ವಿಚಾರಗಳನ್ನು ಅರ್ಥ ಮಾಡಿಸುವುದು ಸಾಧ್ಯವಾಗುವುದಿಲ್ಲವೇನೋ ? ಅದು ನನ್ನ ದೌರ್ಬಲ್ಯ ಎಂಬುದನ್ನು ಒಪ್ಪಿಕೊಳ್ಳುತ್ತೇನಾದರೂ , ಆ ದೌರ್ಬಲ್ಯವನ್ನು ಹತ್ತಿಕ್ಕುವಲ್ಲಿ ನಾನು ಸಫಲನಾಗಿಲ್ಲ ಎಂಬುದನ್ನೂ ಒಪ್ಪಿಕೊಳ್ಳುತ್ತೇನೆ. ಆ ರೀತಿಯಾಗಿ ಮಾಡಲು ನನ್ನಿಂದ ಸಾಧ್ಯವಿಲ್ಲ , ನನ್ನ ಮೂವರು ಮಕ್ಕಳ ವಿರುದ್ಧವೂ ನಾನು ಆ ರೀತಿ ವರ್ತಿಸಿಲ್ಲ. ಮುಂದೆಯೂ ನಾನು ಹೀಗೆ ಇರುತ್ತೇನೆ.

ನನ್ನ ಇಡೀ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ವಿವರಿಸುವ ಅಗತ್ಯವಿಲ್ಲ ಎನ್ನುವುದನ್ನು ನೀನು ಅರ್ಥಮಾಡಿಕೊಂಡಿದ್ದಿ. ನೀನು ಪರಿಸ್ಥಿತಿಯನ್ನು ಅರಿತುಕೊಂಡು ಅದಕ್ಕೆ ತಕ್ಕ ಪ್ರತಿಕ್ರಿಯೆಯನ್ನು ನೀಡಿರುವೆ. ಆದರೆ ನೀನು ಅದಕ್ಕೆ ಮಹತ್ವ ಕೊಟ್ಟಿದ್ದೇಕೆ ? ಫ್ಲೈಸ್ ಪ್ರಕರಣವಾದಂದಿನಿಂದ ನಾನು ಅದಕ್ಕೆ ಮಹತ್ವ ಕೊಡುವುದನ್ನು ನಿಲ್ಲಿಸಿರುವೆ. ಸಲಿಂಗಕಾಮ ಪ್ರಯೋಗವೊಂದನ್ನು ಹಿಂತೆಗೆದುಕೊಳ್ಳಲಾಗಿದ್ದು , ನನ್ನ ಅಹಂನ್ನು ಉದ್ದೀಪನಗೊಳಿಸಲು ಅದನ್ನು ಬಳಸಿಕೊಳ್ಳಲಾಗಿತ್ತು. ಆತಂಕ ಸೋತಾಗ ನಾನು ಗೆದ್ದಿರುವೆ. ಈ ಪ್ರಯೋಗದ ಬಹಳಷ್ಟು ಸಮಯದಲ್ಲಿ ನನಗೆ ಆರೋಗ್ಯ ಸರಿ ಇರಲಿಲ್ಲ. ನಾನು ಕರುಳಿಗೆ ಸಂಬಂಧಿಸಿದ ಕಾಯಿಲೆಯಿಂದ ನರಳುತ್ತಿದ್ದೆ. ಆರೋಗ್ಯ ಸರಿ ಇಲ್ಲದ ಸಂದರ್ಭದಲ್ಲಿ ಪ್ರಯಾಣ ಒಳ್ಳೆಯದಲ್ಲ ಎಂದು ನನಗೆ ನಾನೇ ಬಹಳಷ್ಟು ಬಾರಿ ಹೇಳಿಕೊಂಡಿದ್ದೇನೆ. ಪ್ರಾಮಾಣಿಕತೆ ಅಲ್ಲೇ ಆರಂಭವಾಗಬೇಕಿತ್ತು. ನಿನಗೂ ಆರೋಗ್ಯ ಸುಸ್ಥಿರವಾದಂತಿರಲಿಲ್ಲ.

ಈ ನಡುವೆ ನೀನು ನನಗೆ ಕೊಟ್ಟಿರುವ ಪ್ರತಿರೋಧದಂತಹ ಅಹಿತಕರ ಸಂಗತಿಗಳು ಪ್ರಯಾಣದ ನೆನಪಿನ ಜೊತೆ ಮಾಸಿ ಹೋಗಲಿದೆ. ಸ್ವವ್ಯಕ್ತಿತ್ವವನ್ನು ಕಂಡುಕೊಳ್ಳುವ ಪ್ರಕ್ರಿಯೆಯಲ್ಲಿ ಇಂಥ ಸಣ್ಣ ಪುಟ್ಟ ಸಂಘರ್ಷಗಳು ಮಹತ್ವ ಪಡೆಯುವುದಿಲ್ಲ.

ನನ್ನಲ್ಲಿ ಅನೇಕ ರಹಸ್ಯಗಳಿವೆ ಮತ್ತು ಆ ಬಗ್ಗೆ ನಿನಗೆ ಕುತೂಹಲವಿದೆ ಎನ್ನುವುದನ್ನೂ ನಾನು ಅರಿತುಕೊಂಡಿರುವೆ. ನಾನು ನನ್ನೆಲ್ಲ ವೈಜ್ಞಾನಿಕ ಮಾಹಿತಿಗಳನ್ನು ನಿನ್ನ ಜೊತೆ ಹಂಚಿಕೊಂಡಿರುವಂತೆ ನಿನ್ನಿಂದ ಕೊಂಚ ವ್ಯಕ್ತಿತ್ವದ ಉಡುಗೊರೆಯನ್ನೂ ಪಡೆದುಕೊಂಡಿರುವೆ. ಹಾಗೆಯೇ ರಾಷ್ಟ್ರೀಯ ಉಡುಗೊರೆ ಎನ್ನುವುದು ಮಹತ್ವದ ವಿಷಯವೇನಲ್ಲ. ನಾನು ಈ ಮುನ್ನ ನಿನಗೆ ಹೇಳಿರುವಂತೆ ಸದ್ಯದ ಮಟ್ಟಿಗೆ ನನ್ನ ಕನಸುಗಳೆಲ್ಲವೂ ಫ್ಲೈಸ್‌ನಲ್ಲೇ ಇದೆ. ಹೀಗಾಗಿ ನಿನ್ನಿಂದ ಕನಿಕರವನ್ನು ನಿರೀಕ್ಷಿಸುವುದೂ ಸಾಧ್ಯವಿಲ್ಲದಾಗಿದೆ.

ಹೀಗಾಗಿ ನಮ್ಮಿಬ್ಬರ ಭೇಟಿ ನೀನು ಅಂದುಕೊಂಡಷ್ಟು ಹಿತಕರವಾಗಿರದು ಎನ್ನುವುದನ್ನು ನೀನು ಕಂಡುಕೊಂಡಿದ್ದಿ. ಆದರೆ ವಾಸ್ತವದಲ್ಲಿ ಕರೆಸ್ಪಾಂಡೆನ್ಸ್ ಬ್ಲಾಟ್‌ನ ಮೊದಲ ಸಂಚಿಕೆಯ ವಿಯೆನ್ನಾ ಸೊಸೈಟಿಯ ಸದಸ್ಯರಲ್ಲಿ ನಿನ್ನ ಹೆಸರು ಇಲ್ಲ ಎನ್ನುವುದನ್ನು ತಿಳಿಸಲಿಚ್ಛಿಸುವೆ. ಈ ಬಗ್ಗೆ ನೀನು ದೂರು ದಾಖಲಿಸಬೇಕಿದೆ. ನಿನ್ನೆ ಸದಸ್ಯರಿಗಾಗಿ ಆರು ಹೊಸ ಶಿಫಾರಸ್ಸುಗಳು ಬಂದಿವೆ. ಜಂಗ್ ಅವರು ಕರೆಸ್ಪಾಂಡೆನ್ಸ್ ಬ್ಲಾಟ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿ ನಿಯಮಾವಳಿಗಳನ್ನು ರೂಪಿಸಿರುವುದಲ್ಲದೆ ನೇಮಕಾತಿ ಕರಪತ್ರಗಳನ್ನೂ ಹಂಚಿದ್ದು , ಸಂಸ್ಥೆ ಯಶಸ್ಸಿನತ್ತ ದಾಪುಗಾಲಿಡುತ್ತಿದೆ. ಈ ಕಾರ್ಯದಲ್ಲಿ ನಿನ್ನ ಪಾತ್ರ ಅಷ್ಟು ಶ್ರೇಷ್ಠವಾಗಿತ್ತು ಎನ್ನುವುದು ಆಗ ಎಲ್ಲರಿಗೂ ಅರಿವಾಗಲಿದೆ.

ಈ ಸಂಘಟನೆಯನ್ನು ಹುಟ್ಟುಹಾಕುವ ಪ್ರಯತ್ನವಾಗಿ ನಾನು ವೈಯಕ್ತಿಕವಾಗಿ ಬ್ಲೂವರ್‌ನ್ನು ಭೇಟಿ ಮಾಡಿದ್ದೇನೆ ಎಂಬುದನ್ನು ನಿನಗೆ ತಿಳಿಸಿದ್ದೇನೆಯೆ ? ಅತ್ತ ಕಡೆಯಿಂದ ಇನ್ನೂ ಪ್ರತಿಕ್ರಿಯೆ ಸಿಗಬೇಕಿದೆ.

ಝೆಂತ್ರಾಲ್ ಬ್ಲಾಟ್‌ಗಾಗಿ ನಾನು ಪುಟ್ನಮ್‌ನ ಬರಹವನ್ನು ಅನುವಾದ ಮಾಡಿರುವೆ. ಆದರೆ ನಾನು ಶ್ರೆಬರ್ ಮೂಲಕ ಕೆಲಸ ಮಾಡಿದ್ದೇನೆ ಎಂದು ಇನ್ನೂ ಬರೆದಿಲ್ಲ. ಪ್ಯಾರನೋಯಿಯ (ಬುದ್ಧಿ ಭ್ರಮಣೆ)ಗೆ ಸಂಬಂಧಿಸಿದಂತೆ ನಾನು ಎಲ್ಲವನ್ನೂ ದೃಢಪಡಿಸಿಕೊಂಡಿದ್ದೇನೆ. ಈ ಕುರಿತಂತೆ ಸಾಧ್ಯವಾಗುವ ಎಲ್ಲ ವಿವರಣೆಗಳನ್ನೂ ಕಲೆ ಹಾಕಲು ಪ್ರಯತ್ನಿಸಿರುವೆ. ಶ್ರೆಬರ್‌ನ ಎಲ್ಲ ವೈಯಕ್ತಿಕ ವಿವರಗಳನ್ನು ಕಲೆ ಹಾಕುವಂತೆ ನಾನು ಸ್ಟೆಗಮನ್‌ಗೆ ತಿಳಿಸಿರುವೆ. ಈ ವಿವರಗಳಿಂದಲೇ ಎಲ್ಲವೂ ಸಾಧ್ಯವಾಗಿದ್ದು.

ಡಾ. ಶ್ರೆಬರ್ ಅವರು ಮನಃಶಾಸ್ತ್ರಜ್ಞರಾಗಿ ಅದ್ಭುತಗಳನ್ನೇ ಸಾಧಿಸಿರುವ ಬಗ್ಗೆ ನಿನ್ನ ಅಭಿಪ್ರಾಯವೇನು ? ಶ್ರೆಬರ್‌ನನ್ನು ಅರ್ಥೈಸಿಕೊಳ್ಳಲು ನೀಡಿದ ಸಹಾಯಕ್ಕೆ ಧನ್ಯವಾದಗಳು.

ಆತ್ಮೀಯ
ಫ್ರಾಯ್ಡ್

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .