|
ನ ಟನೆ
ಕಡೆ ಆಸಕ್ತಿ ಬೆಳೆದದ್ದು ಹೇಗೆ ?
ಆರಂಭದ ಪ್ರೇರಣೆ ಸಿಕ್ಕಿದ್ದು
ಕುಟುಂಬದಿಂದಲೇ. ನನ್ನ ತಂದೆ ಮತ್ತು ಸಂಬಂಧಿಕರು ಗುಜರಾತಿ ನಾಟಕ ಮತ್ತು
ಸಿನಿಮಾಗಳಲ್ಲಿ ನಟಿಸುತ್ತಿದ್ದರಿಂದ ಚಿಕ್ಕ ವಯಸ್ಸಿನಿಂದಲೇ ಅಭಿನಯದತ್ತ
ಒಲವು ತೋರಿದ್ದ. ಹೀಗಾಗಿ ನಟನೆ ವೃತ್ತಿಪರವಾಗಿ ಅತ್ಯುತ್ತಮ ಮತ್ತು ಸಕಾಲಿಕ
ಆಯ್ಕೆಯಾಗಿತ್ತು. ಆದರೆ ನನ್ನ ಕುಟುಂಬ ಈ ವೃತ್ತಿಯಲ್ಲಿದೆ ಅಥವಾ ಅದು
ಸರಳವಾದ ಕೆಲಸ ಎನ್ನುವ ಕಾರಣದಿಂದ ನಾನು ಈ ವೃತ್ತಿಗೆ ಇಳಿದಿಲ್ಲ.
ನಟನೆಯಲ್ಲಿ ನನಗೆ ಪರಿಪಕ್ವತೆ ಇತ್ತು. ಒಂದು ಕಾಲದಲ್ಲಿ ನಾನು
ಮ್ಯಾನೇಜ್‌ಮೆಂಟ್ ಕಡೆಗೆ ಹೋಗಬೇಕು ಎಂದು ಬಯಸಿದ್ದೂ ಇದೆ. ಆದರೆ ನಡುವೆ
ನನಗೆ ಕೆಲ ಅಂತರ್ ಕಾಲೇಜು ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ
ಸಿಕ್ಕಿತು. ಹೀಗೆ ಒಂದರ ಹಿಂದೆ ಮತ್ತೊಂದು ನಾಟಕ ಎಂದು ವೃತ್ತಿಪರವಾಗಿ ನಟನೆ
ಆರಂಭವಾಯಿತು. ಇದೇ ಸಂದರ್ಭದಲ್ಲಿ ನಾನು ಹಿಂದಿ ಮತ್ತು ಗುಜರಾತಿ ವೃತ್ತಿಪರ
ನಾಟಕಗಳಲ್ಲಿ ಅಭಿನಯಿಸಿದೆ. ಹೀಗೆ ಮುಂದುವರಿದ ಜೀವನದಲ್ಲಿ ಅಂತಿಮವಾಗಿ ನನ್ನ
ಮುಂದಿದ್ದದ್ದು ಸಿನಿಮಾ. ಮುಂಬೈಯ ಖ್ಯಾತ ರಂಗಕರ್ಮಿ ಸತ್ಯದೇವ್ ದುಬೆ ನನ್ನ
ಹೆಸರನ್ನು ವಿನಯ್ ಶುಕ್ಲಾ ಅವರಿಗೆ ಶಿಫಾರಸು ಮಾಡಿದ ಪರಿಣಾಮವಾಗಿ
ಗಾಡ್ ಮದರ್
ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಹೀಗೆ ಸಿನಿಮಾ
ವೃತ್ತಿಗೆ ಚಾಲನೆ ಸಿಕ್ಕಿತು.
ಅಭಿನಯದಲ್ಲಿ ನಿಮ್ಮ ಅತ್ಯುತ್ತಮ
ಸಾಮರ್ಥ್ಯವೇನು ?
ನಟನೆ ಏನೆಂಬುದೇ ತಿಳಿಯದೆ ಇರುವುದು ಮತ್ತು
ಅದನ್ನು ವಿಶ್ಲೇಷಣೆ ಮಾಡಲು ಹೋಗದೆ ಇರುವುದೇ ನನ್ನ ಬಹುದೊಡ್ಡ ಪ್ರತಿಭೆ.
ನನಗೆ ನಟನೆ ಜನ್ಮತಃ ಬಂದ ಕಲೆ. ನಾನು ಜೀವನವನ್ನು ಬಂದ ಹಾಗೆ
ಸ್ವೀಕರಿಸುತ್ತೇನೆ. ಒಂದು ಪಾತ್ರ ,
ದೃಶ್ಯ ಅಥವಾ ಸಿನಿಮಾವನ್ನು ಮೊದಲೇ ಅಭ್ಯಸಿಸಿ
ಅಭಿನಯಿಸುವುದರಿಂದ ನಟನೆಯ ದಿನದ ಸಂತೋಷ ಮತ್ತು ದೃಶ್ಯದಲ್ಲಿ ಅಭಿನಯಿಸುವ
ಸಂತೃಪ್ತಿಯನ್ನು ಕಳೆದುಕೊಂಡಂತೆಯೇ ಸರಿ ಎನ್ನುವುದು ನನ್ನ ನಂಬಿಕೆ.
ಬಹಳಷ್ಟು ಮಂದಿ ನನ್ನನ್ನು ನಟನೆಯ ಕುರಿತ ಪುಸ್ತಕಗಳನ್ನು ಓದುವಂತೆ ,
ಅಭಿನಯ ಶಾಲೆಗಳಿಗೆ ಸೇರಿ ಅಧಿಕೃತವಾಗಿ ನಟನಾ
ಕಲೆಯನ್ನು ಕಲಿಯುವಂತೆ ಸಲಹೆ ನೀಡಿದ್ದಾರೆ. ಆದರೆ ನಾನು ಇದ್ಯಾವುದರ ಕಡೆಯೂ
ಆಸಕ್ತಿ ತೋರಲಿಲ್ಲ. ಅದೃಷ್ಟವಶಾತ್ ನನ್ನ ಕಾಲೇಜು ದಿನಗಳಲ್ಲಿ ನಟನೆಯನ್ನು
ಕಲಿಸಲು ಮಣಿಂದರ್ ಜೋಶಿ ಅವರು ನನ್ನೊಡನಿದ್ದರು. ಅವರ ಜೊತೆ ಎರಡು ವರ್ಷಗಳ
ಕಾಲ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ನಾನು ಅವರಿಂದ ನಟನಾ
ಪಾಠ ಕಲಿಯದಿದ್ದರೂ ಅಭಿನಯಕ್ಕೆ ಸಂಬಂಧಿಸಿದ ಕೆಲವು ನಿಯಮಗಳನ್ನು ಅರಿತೆ.
ಸಮಯಪಾಲನೆ ಮತ್ತು ಸಂಭಾಷಣೆಯ ವಿಚಾರದಲ್ಲಿ ಅವರು
ಅಚ್ಚುಕಟ್ಟಾಗಿರುತ್ತಿದ್ದರು. ಈ ಮೂಲ ಪಾಠವನ್ನು ಚೆನ್ನಾಗಿ ಅಳವಡಿಸಿಕೊಂಡ
ಕಾರಣ ನಟನಾಗಿ ಬೆಳೆಯಲು ನನಗೆ ಅನುಕೂಲವಾಯಿತು.
3 ಈಡಿಯಟ್ಸ್
ಚಿತ್ರ ನಿಮ್ಮ ನಟನಾ ಸಾಮರ್ಥ್ಯವನ್ನು ಮತ್ತೊಂದು ಸ್ತರಕ್ಕೆ ತಲುಪಿಸಿದೆ
ಎನ್ನಬಹುದು. ಭವಿಷ್ಯದಲ್ಲಿ ನೀವು ಅಭಿನಯಿಸಬಹುದಾದ ಪಾತ್ರಗಳು ಮತ್ತು
ಸಿನಿಮಾಗಳ ಬಗ್ಗೆ ಏನಾದರೂ ಯೋಜನೆ ಹಾಕಿಕೊಂಡಿದ್ದೀರೇನು ?
ನನ್ನ ಪ್ರಕಾರ ನಟನಾದವನಿಗೆ ಆಯ್ಕೆಗಳೇ
ಇರುವುದಿಲ್ಲ. ಚಿತ್ರಕಥೆಯೇ ನಟರನ್ನು ಆರಿಸುತ್ತದೆ. ಒಬ್ಬ ನಟ ತಾನೇ ಮುಂದೆ
ಹೋಗಿ ಚಿತ್ರಕಥೆಯನ್ನು ಬರೆಯಲು ಸಾಧ್ಯವಿಲ್ಲ. ಅದನ್ನು ಮಾಡಲು ನನ್ನಿಂದ
ಸಾಧ್ಯವಾದಲ್ಲಿ ನಾನು ಕುಳಿತು ಎಂಥ ಚಿತ್ರಗಳಲ್ಲಿ ನಟಿಸಬೇಕು ಎಂಬ
ಕಾರ್ಯಯೋಜನೆಯನ್ನು ಹಾಕಿಕೊಳ್ಳುವೆ. ಒಬ್ಬ ನಟನಾಗಿ ನಾನು ಎಲ್ಲಾ ವಿಧದ
ಚಿತ್ರಕಥೆಯತ್ತಲೂ ಒಲವು ತೋರುತ್ತೇನೆ ಮತ್ತು ನನಗೆ ಆಸಕ್ತಿ ಹುಟ್ಟಿಸಿದ
ಪಾತ್ರವನ್ನು ಆರಿಸಿಕೊಳ್ಳುವೆ.
ನೀವು ಕೆಲಸ ಮಾಡುವ ಸಿನಿಮಾಗಳ ನಿರ್ದೇಶಕರು ಯಾರು
ಮತ್ತು ಬ್ಯಾನರ್ ಯಾವುದು ಎಂಬ ವಿಚಾರಗಳಿಗೆ ಮಹತ್ವ
ಕೊಡುವುದಿಲ್ಲವೆ ?
ಇದೆಲ್ಲ ಮುಖ್ಯ ಎಂದು ನಿಮಗೆ ಅನಿಸುವುದೇ
ಇಲ್ಲವೆ ?
ಹೌದು ,
ಅವೆಲ್ಲ ಮುಖ್ಯವೆ. ಇದೆಲ್ಲವೂ ಚಿತ್ರಕಥೆಯಿಂದಲೇ
ಆರಂಭವಾಗುತ್ತದೆ. ಅದೇ ಕಾರಣದಿಂದಲೇ ನಾನು ಚಿತ್ರಕಥೆಯೇ ಮುಖ್ಯ ಎನ್ನುವುದು.
ಆದರೆ ನನ್ನ ಪ್ರಾಶಸ್ತ್ಯವನ್ನು ಹೇಳಬೇಕೆಂದರೆ ಮೊದಲ ಸ್ಥಾನ ಚಿತ್ರಕಥೆಗೆ.
ನಿರ್ದೇಶಕ , ಪಾತ್ರ
ಮತ್ತು ಬ್ಯಾನರ್‌ಗಳಿಗೆ ನಂತರದ ಸ್ಥಾನ.
ನೀವು ಮೊದಲು ಗಾಡ್
ಮದರ್ ನಲ್ಲಿ
ಅಭಿನಯಿಸಿದಿರಿ. ನಂತರ ಹಾಸ್ಯಚಿತ್ರ ಸ್ಟೈಲ್ ನಲ್ಲಿ
ಅಭಿನಯಿಸಿದಿರಿ. ಚೊಚ್ಚಲ ಚಿತ್ರವೇ ಕಲಾತ್ಮಕವಾಗಿದ್ದರೂ ,
ಎರಡನೇ ಸಿನಿಮಾವಾಗಿ ಹಾಸ್ಯಚಿತ್ರವನ್ನು
ಆರಿಸಿಕೊಂಡಿದ್ದೇಕೆ ?
ಇದು ಸಾಹಸಕ್ಕೆ ಕೈ ಹಾಕಿದಂತಲ್ಲವೆ ?
ಕಲಾತ್ಮಕ ಚಿತ್ರಗಳು ಅಥವಾ ಪ್ರಾಯೋಗಿಕ
ಚಿತ್ರಗಳ ನಟನೆಂಬ ವರ್ಚಸ್ಸನ್ನು ಸಾಧ್ಯವಾದಷ್ಟು ಶೀಘ್ರ
ತೊರೆಯಬೇಕೆಂದಿದ್ದೆ. ನಾಟಕದ ಹಿನ್ನೆಲೆಯಿಂದ
ಬಂದು
ಗಾಡ್ ಮದರ್ ನಂತಹ
ಚಿತ್ರದಲ್ಲಿ ನಟಿಸಿದ ಮೇಲೆ ನಾನು ಕಲಾತ್ಮಕ ಹಾಗೂ ಪ್ರಾಯೋಗಿಕ
ಚಿತ್ರಗಳೆಡೆಗೆ ಸರಿಯುವ ಸಾಧ್ಯತೆಯೇ ಹೆಚ್ಚಾಗಿತ್ತು. ಅತ್ತ ಕಡೆ ಹೊರಳುವ
ಆಸಕ್ತಿ ನನಗಿರಲಿಲ್ಲ. ನಾನು ಮನೋರಂಜನಾ ಉದ್ಯಮದಲ್ಲಿ ಇದ್ದೇನೆ ಎಂದ ಮೇಲೆ
ಜನರಿಗೆ ಮನೋರಂಜನೆ ನೀಡುವುದರಲ್ಲಿ ಅಳುಕಿರಲಿಲ್ಲ. ಒಟ್ಟಾರೆಯಾಗಿ ಇದು
ನೇರವಾದ , ಆಸಕ್ತಿ
ಹುಟ್ಟಿಸುವ ಮತ್ತು ಅದ್ಭುತ ಅನುಭವವಾಗಿರಬೇಕು ಅಷ್ಟೆ. ಹೀಗಾಗಿ ನನ್ನ ಮುಂದೆ
ಗುರಿ ಸ್ಪಷ್ಟವಾಗಿತ್ತು. ಅದಕ್ಕೆ ತಕ್ಕುದಾದ ಅವಕಾಶಗಳಿಗಾಗಿ ನಾನು
ಸಾಧ್ಯವಾದ ಎಲ್ಲಾ ಮೂಲಗಳನ್ನೂ ಹುಡುಕುತ್ತಿದ್ದೆ.
ಸ್ಟೈಲ್
ನನಗೆ ಸೂಕ್ತವಾದ ಚಿತ್ರ ಎಂದೆನಿಸಿತ್ತು. ಅದು ಒಂದು ಹಾಸ್ಯ ಚಿತ್ರ. ಹೀಗಾಗಿ
ಸಂಪೂರ್ಣ ಮನೋರಂಜನಾ ಸಿನಿಮಾವನ್ನು ಪ್ರಯತ್ನಿಸುವುದರಲ್ಲಿ ನನಗೇನೂ
ಅಭ್ಯಂತರವಿರಲಿಲ್ಲ. ಚಿತ್ರರಂಗದಲ್ಲಿ ಪೋಷಕರು ಯಾರೂ ಇಲ್ಲದೆ ಇದ್ದುದರಿಂದ
ಸಂಪ್ರದಾಯಬದ್ಧವಾಗಿ ಒಂದು ವರ್ಚಸ್ಸನ್ನು ಬೆಳೆಸಿಕೊಂಡು ನಟನಾಗಿ
ಸಿನಿಮಾರಂಗಕ್ಕೆ ಹೆಜ್ಜೆ ಇಡುವ ಅವಕಾಶ ನನಗೆ ಇಲ್ಲವಾಗಿತ್ತು. ಹೀಗಾಗಿ ಅಂಥ
ಒಂದು ಪ್ರಯತ್ನದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ನಾನು ಕಾಯಲು
ಸಾಧ್ಯವಿರಲಿಲ್ಲ. ನಾನು ಗಾಡ್
ಮದರ್ ಚಿತ್ರವನ್ನು
ಆರಿಸಲು ಕಾರಣವೂ ಅದೇ. ನನ್ನ ಕೆಲಸವೇ ಮಾತನಾಡಲಿ ಎನ್ನುವುದು ನನ್ನ
ಅಭಿಲಾಷೆಯಾಗಿತ್ತು.
ಸಾಹಸ ಪಾತ್ರದಲ್ಲಿ ನಟಿಸುವ ಆಸಕ್ತಿ
ನಿಮ್ಮಲ್ಲಿದೆಯೆ ?
ಖಂಡಿತಾ ಇದೆ. ನಾನು ನಟಿಸಿರುವ
ಅಲ್ಲಾ ಕೇ ಬಂದೇ
ಅಂತಹುದೇ ಒಂದು ಚಿತ್ರ. ಇದು ಅರ್ನಾಲ್ಡ್ ಶ್ವಾಸ್ನೇಗರ್ ಅಥವಾ ಸಿಲ್ವಸ್ಟರ್
ಸ್ಟಲೋನ್ ನಟಿಸುವಂತಹ ಸಾಹಸ ಚಿತ್ರ ಅಲ್ಲದೆ ಇರಬಹುದು. ಆದರೂ ಇದೊಂದು
ಸಾಹಸಮಯ ಚಿತ್ರವೇ. ಮುಂಬೈಯ ಕೊಳಗೇರಿಗಳಲ್ಲಿ ಬೆಳೆದ ಇಬ್ಬರು ಹುಡುಗರ ಜೀವನ
ಕಥೆ ಇದು. ಚಿತ್ರಕಥೆ ಸ್ವಲ್ಪ ಹಸಿ ಹಸಿಯಾಗೇ ಇದೆ.
ನಿಮ್ಮ ಅತ್ಯದ್ಭುತ ಪ್ರತಿಭಾ
ಪ್ರದರ್ಶನ ?
ಅದರ ಕಲ್ಪನೆಯೇ ನನಗಿಲ್ಲ! ನಾನು ಪ್ರತಿ
ಚಿತ್ರಕ್ಕೂ ಪರಿಪೂರ್ಣವಾಗೇ ಕೆಲಸ ಮಾಡಿದ್ದೇನೆ. ಕೆಲ ಚಿತ್ರಗಳಿಗೆ ಉತ್ತಮ
ಪ್ರತಿಕ್ರಿಯೆ ಬಂದಿದೆ. ಇನ್ನು ಕೆಲವು ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ
ಸಿಗದಿದ್ದಾಗ ಬೇಸರವೂ ಆಗಿದ್ದಿದೆ.
ಟಿಎಸ್‌ಐ
|