User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಬಣ್ಣದ ಲೋಕ
 
 

ಜೂಲಿ-ಪಿಟ್ ನಡುವೆ ಬಿರುಕು

ಬ್ರಾಡ್ ಪಿಟ್ ಮತ್ತು ಅಂಜೆಲಿನಾ ಜೂಲಿ ನಡುವಿನ ಸಂಬಂಧ ಹಳಸಿದೆ ಎನ್ನುವ ವಿಷಯ ಬಹಿರಂಗಗೊಂಡಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಹಾಲಿವುಡ್ನ 'ಡೈರೆಕ್ಟರ್ಸ್ ಗಿಲ್ಡ್ ಆಫ್ ಅಮೆರಿಕ' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇತ್ತೀಚೆಗೆ ಭಾಗವಹಿಸಿತ್ತಾದರೂ ಈ ಜೋಡಿ ರತ್ನಗಂಬಳಿ ಮೇಲೆ ಜೊತೆಯಾಗಿ ನಡೆಯಲಿಲ್ಲ. ಛಾಯಾಗ್ರಾಹಕರಿಗೆ ಪೋಸು ನೀಡುವಾಗಲೂ ಅವರ ಮೊಗದಲ್ಲಿ ಮೊದಲಿದ್ದ ಉತ್ಸಾಹ ಕಾಣಲೇ ಇಲ್ಲ. ಆದರೆ ಪಿಟ್ ತನ್ನ ಮೇಕೆ ಗಡ್ಡ ಎದ್ದು ಕಾಣುವಂತೆ ಪೋಸ್ ನೀಡಿದರು ಎನ್ನುವುದಷ್ಟೆ ಸಂತಸದ ವಿಚಾರ!

ಹೊಸ ವರ್ಷದಲ್ಲಿ ಹಬ್ಬ?

ಯುವತಿಯರ ಕನಸಿನ ರಾಜ ಎಂದೇ ಖ್ಯಾತಿಯಾಗಿರುವ ಜಸ್ಟಿನ್ ಟಿಂಬರ್ಲೇಕ್ ಇತ್ತೀಷಿಗಷ್ಟೇ 29ರ ಹರೆಯಕ್ಕೆ ಕಾಲಿಟ್ಟಿದ್ದಾರೆ. ತನ್ನ ಭಾವೋದ್ರೇಕದ ಹಾಡುಗಳು ಮತ್ತು ಮೈ ನವಿರೇಳಿಸುವ ನೃತ್ಯದ ಮೂಲಕ ಅಭಿಮಾನಿಗಳ ಮನದಲ್ಲಿ ಹುಚ್ಚೆಬ್ಬಿಸುವ ಜಸ್ಟಿನ್, ಇತ್ತೀಚೆಗೆ ಯಾವುದೇ ಅಲ್ಬಂ ಬಿಡುಗಡೆ ಮಾಡಿರಲಿಲ್ಲ. ಆದರೆ ಇದೀಗ ಒಂದಷ್ಟು ಸುದ್ದಿ ಮಾಡುತ್ತಿದ್ದಾರೆ. ಸೋಶಿಯಲ್ ನೆಟ್ವರ್ಕಿಂಗ್ ತಾಣ 'ಫೇಸ್ಬುಕ್' ಕುರಿತ 'ದ ಸೋಶಿಯಲ್ ನೆಟ್ವರ್ಕ್' ಎಂಬ ಚಿತ್ರದಲ್ಲಿ ಬ್ಯುಸಿಯಾಗಿಬಿಟ್ಟಿದ್ದಾರೆ ಜಸ್ಟಿನ್. ಈ ಬರ್ತ್ಡೇ ಬಾಯ್ಗೆ ಹೊಸ ವರ್ಷ ಬೊಂಬಾಟ್ ಆಗಿರಲಿ ಎಂಬುದು ನಮ್ಮ ಹಾರೈಕೆ.

ಮತ್ತೆ ಏಕಾಂಗಿ

ವೃತ್ತಿ ಜೀವನದಲ್ಲಿ ಮತ್ತೆ ಮುಂದುವರಿಯಲು ಅಮಿಷಾ ಪಟೇಲ್ ನಿರ್ಧರಿಸಿರುವುದರಿಂದ ಕನವ್ ಪುರಿ ಜೊತೆಗಿನ ಆಕೆಯ ಸಂಬಂಧ ಸರಿಪಡಿಸಲಾರದಷ್ಟು ಹದಗೆಟ್ಟಿದೆ. ಅಮಿಷಾಗೆ ತಾಳಿ ಕಟ್ಟಲು ಕನವ್ ತುದಿಗಾಲಲ್ಲಿ ನಿಂತಿದ್ದರೆ, ಆಕೆ ಮಾತ್ರ ತನ್ನ ಸೋಲುತ್ತಿರುವ ವೃತ್ತಿ ಜೀವನಕ್ಕೆ ಪುನಶ್ಚೇತನ ನೀಡಲು ಹೊರಟಿದ್ದಾರೆ. ಹೀಗಾಗಿಯೇ ಮದುವೆಗೆ ಅಮಿಷಾ ಕೊನೆಯ ಆದ್ಯತೆ ನೀಡಿದ್ದಾರೆ. ಒಂದು ವರ್ಷದ ಹಿಂದೆಯೇ ಮದುವೆಗೆ ಪ್ರೊಪೋಸ್ ಮಾಡಿದ್ದ ಕನವ್ ಮಾತ್ರ ಇಂದು ಹತಾಶರಾಗಿಬಿಟ್ಟಿದ್ದಾರೆ. ಅದೇನೇ ಆಗಲಿ, ಎರಡು ಹೊಸ ಚಿತ್ರಗಳೊಂದಿಗೆ ಮರಳಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿರುವ ಅಮಿಷಾಗೆ ಈ ವರ್ಷ ಹೇಗಿರುತ್ತದೆ ಎಂಬುದನ್ನು ಕಾಲವೇ ಹೇಳಬೇಕು.

ಬಡಾಯಿ ಕೊಚ್ಚುವ ಝರೀನ್

ತನ್ನ ಮನಸ್ಸಿಗೆ ಬೇಕಾದಂತೆ ತೂಕ ಗಳಿಸಬಹುದು ಅಥವಾ ಇಳಿಸಬಹುದು ಎಂದು ಝರೀನ್ ಖಾನ್ ಬಡಾಯಿ ಕೊಚ್ಚಿಕೊಳ್ಳಲು ಆರಂಭಿಸಿದ್ದಾಳೆ. ಕಾರಣ; 'ವೀರ್' ಚಿತ್ರಕ್ಕಾಗಿ ಆಕೆ ಮಾಡಿದ ಕಸರತ್ತು. ಒಂದು ಕಾಲದಲ್ಲಿ ನೂರರ ಗಡಿ ದಾಟಿದ್ದ ಝರೀನ್ ಈ ಬಾರಿ 40ರಿಂದ 45 ಕೆ.ಜಿ.ಗಳಷ್ಟು ತೂಕ ಕಳೆದುಕೊಂಡಿದ್ದಾಳೆ. ಆದರೆ ಬಿಕಿನಿ ತೊಡುವ ಸಾಹಸಕ್ಕೆ ಮಾತ್ರ ಇಂದಿಗೂ ಕೈ ಹಾಕಿಲ್ಲ. ಎಲ್ಲರೂ ಆಕೆಯನ್ನು ಈಗ ಕತ್ರಿನಾ ಜೊತೆ ಹೋಲಿಸುತ್ತಿದ್ದು, ಕತ್ರಿನಾಗೂ ಈ ವಿಷಯ ಖುಶಿ ತಂದಿದೆ! ಸಲ್ಮಾನ್ ಜೊತೆ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರೆಲ್ಲರೂ ತಮ್ಮ ವೃತ್ತಿ ಜೀವನದಲ್ಲಿ ಉತ್ತುಂಗಕ್ಕೆ ಏರಿದ್ದಾರೆ. ಝರೀನ್ಗೆ ಸಹ ಅದೃಷ್ಟದ ಬಾಗಿಲು ತೆರೆಯಲಿದೆಯೇ?

ವಿಭಿನ್ನ ಚಿತ್ರದಲ್ಲಿ ಮೇಘನಾ

'ವೆಂಕಟ ಇನ್ ಸಂಕಟ'ದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಮೇಘನಾ ಚಿತ್ರಜೀವನಕ್ಕೆ ಈಗ 'ಡೆಡ್ಲಿ ಸೋಮ-2'ರ ಆವೇಗ ಸಿಕ್ಕಿದೆ. 'ಶಿಶಿರ' ಮತ್ತು 'ಬೆಂಗಳೂರ್ಡ್' ಚಿತ್ರದಲ್ಲಿ ತಮ್ಮ ನಟನಾ ಪ್ರಾವಿಣ್ಯತೆಯನ್ನು ಬಿಂಬಿಸಿದ ಮೇಘನಾಗೆ ಈಗ ಆದಿತ್ಯ ಜೋಡಿಯ ಹೊಸ ಚಿತ್ರದಲ್ಲಿ ಪರಿಪೂರ್ಣ ನಾಯಕಿಯಾಗುವ ಅವಕಾಶ ಸಿಕ್ಕಿದೆ. ಸಂಕೋಚದ ಹುಡುಗಿಯಾಗಿ ನಟಿಸಿದ್ದ ಮೇಘನಾಗೆ ಈಗ ಲಂಗ-ದಾವಣಿ ತೊಟ್ಟ ಸಾಂಪ್ರದಾಯಿಕ ಹುಡುಗಿಯ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಆಧುನಿಕ ಮನೋಭಾವದ ಮೇಘನಾಗೆ ಈ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿರುವ ಬಗ್ಗೆ ಬಹಳ ಖುಷಿ ಇದೆ.

ಯೋಗರಾಜ್ ಕ್ಯಾಂಪ್ಗೆ 'ನಿಧಿ'

ನಿಧಿ ಸುಬ್ಬಯ್ಯಗೆ ಬಂಪರ್ ಲಾಟರಿ ಹೊಡೆದಿದೆ. 'ಅಭಿಮಾನಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಆಗಮಿಸಿದ ನಿಧಿ ಸುಬ್ಬಯ್ಯ ನಂತರ 'ಚಮ್ಕಾಯ್ಸಿ ಚಿಂದಿ ಉಡಾಯಿಸಿ' ಹಾಗೂ 'ಕೃಷ್ಣಾ ನೀ ಲೇಟಾಗಿ ಬಾರೋ' ಚಿತ್ರದಲ್ಲಿ ನಟಿಸಿದ್ದಳು. ಪ್ರತಿಭೆ ಇದ್ದರೂ ಅದನ್ನು ಶ್ರುತಪಡಿಸಲು ಸೂಕ್ತ ಚಿತ್ರಗಳು ಸಿಗದೆ ತಡವರಿಸುತ್ತಿದ್ದ ನಿಧಿಗೆ ಈಗ ಯೋಗರಾಜ್ ಭಟ್ ಕ್ಯಾಂಪ್ನ ಆಶ್ರಯ ಸಿಕ್ಕಿದೆ. ಯೋಗರಾಜ್ ಭಟ್ ಅವರ ಹೊಸ ಚಿತ್ರ 'ಪಂಚರಂಗಿ'ಗೆ ನಿಧಿ ನಾಯಕಿ. ಶಿಕ್ಷಣ, ಪ್ರೀತಿ, ಕೆಲಸ, ಪೋಷಕರು ಮತ್ತು ಮದುವೆಯ ಸುತ್ತ ಹೆಣೆಯಲಾದ ಈ ಚಿತ್ರಕ್ಕೆ ಗುಳಿಕೆನ್ನೆಯ ದಿಗಂತ್ ನಾಯಕ.

ಎನ್.ಕೆ. ಸುಪ್ರಭಾ ಮತ್ತು ರವಿ ಇಂದರ್ ಸಿಂಗ್

 

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .