|
|
ಇಷ್ಟೇ - ಇಷ್ಟು
|
|
|
|
|
ಗುಬ್ಬಚ್ಚಿಗಳು ಚಿತ್ರದ ಅನುಭವ ಹೇಗಿತ್ತು ?
ತುಂಬಾ ಚೆನ್ನಾಗಿತ್ತು . ಅದರಲ್ಲಂತೂ
ಗುಬ್ಬಚ್ಚಿಗಳ ಬಗ್ಗೆ ಅಜ್ಜಿಯನ್ನು ಕೇಳಿದ ಸನ್ನಿವೇಶ ತುಂಬಾ ಚೆನ್ನಾಗಿತ್ತು.
ಸಿನೆಮಾದಲ್ಲಿ ಆಸಕ್ತಿ ಹೇಗೆ ಬೆಳೆಯಿತು? ಮನೆಯಲ್ಲಿ ಯಾರಾದರೂ
ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆಯೇ?
ಇಲ್ಲ . ಕಾರ್ಯಕ್ರಮವೊಂದರಲ್ಲಿ ನನ್ನನ್ನು ನೋಡಿ, ಧಾರಾವಾಹಿಯಲ್ಲಿ
ಅಭಿನಯಿಸಲು ಆಫರ್ ಬಂತು. ಅದಾದ ಮೇಲೆ
ಅವಕಾಶಗಳು ಬರುತ್ತಾ ಹೋದವು.
ಈ ಹಿಂದೆ ಯಾವುದಾದರೂ ಚಿತ್ರ ಅಥವಾ
ಧಾರಾವಾಹಿಗಳಲ್ಲಿ ಅಭಿನಯಿಸಿದ್ದೀರಾ?
' ಪ್ರೀತಿ
ಏಕೆ ಭೂಮಿ ಮೇಲಿದೆ' ಚಿತ್ರದಲ್ಲಿ
ನಟಿಸಿದ್ದೆ. ಹಾಗೆ ತಕಧಿಮಿತಾ, ನಾಕುತಂತಿ, ಮುಕ್ತಾ, ಮಿಂಚು
ಧಾರಾವಾಹಿಗಳಲ್ಲೂ ನಟಿಸಿದ್ದೆ.
ಶಾಲೆ ಹಾಗೂ ಮನೆಯಲ್ಲಿ ಪ್ರೋತ್ಸಾಹ ಹೇಗಿದೆ...?
ಪ್ರಿನ್ಸಿಪಾಲ್ ಅನುಮತಿ ಪಡೆದೇ ನಟನೆಗೆ
ಹೋಗುತ್ತೇನೆ . ಮನೆಯಲ್ಲಿ ಅಪ್ಪ- ಅಮ್ಮ ಹೋಮ್‌ವರ್ಕ್
ಬರೆದುಕೊಡೋಲ್ಲ! ಆದರೆ ಓದಿನ
ವಿಚಾರದಲ್ಲಿ ನೆರವು ನೀಡುತ್ತಾರೆ.
ಗುಬ್ಬಚ್ಚಿಗಳು ಚಿತ್ರದಿಂದ ನೀವು ಯಾವ ಪಾಠ
ಕಲಿತಿರಿ?
ವಿಕಿರಣಗಳಿಂದ ಗುಬ್ಬಚ್ಚಿಗಳು ನಶಿಸುತ್ತಿವೆ . ಈ ಪಕ್ಷಿಗಳನ್ನು
ಕಾಪಾಡಬೇಕು. ಪರಿಸರ ಮಾಲಿನ್ಯ
ಕಡಿಮೆ ಮಾಡಬೇಕು...
ಟಿಎಸ್‌ಐ
ಕೆ. ದಿವ್ಯದರ್ಶಿನಿ
|
ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.
|
|
|
|
| |