|

ಪ್ರತಿಭಟನೆ ಅನಿವಾರ್ಯವಾದಾಗ...
ನಮ್ಮಲ್ಲಿ , ಅದರಲ್ಲೂ
ಇತ್ತೀಚಿನ ದಿನಗಳಲ್ಲಿ ಕ್ರೀಡೆ ಎಂದರೆ ಕ್ರಿಕೆಟ್ ಒಂದೇ ಎಂಬಂತಾಗಿದೆ.
ಅದಕ್ಕೆ ನೀಡುವಷ್ಟು ಅಬ್ಬರ, ನಿರಂತರ ಹರಿದು ಬರುವ ಹಣದ ಹೊಳೆ ಬೇರೆ
ಕ್ರೀಡಾ ಕ್ಷೇತ್ರದಲ್ಲಿ ಕಂಡುಬರುವುದು ವಿರಳ. ಕಾರಣಗಳೇನೇ ಇದ್ದರೂ,
ಇತರ ಕ್ರೀಡೆಗಳಿಗೂ ಈ ರೀತಿಯ ಸೌಲಭ್ಯ ಕಲ್ಪಿಸುವುದು ಅತ್ಯಗತ್ಯ.
ಭಾರತೀಯ ಹಾಕಿ ಆಟಗಾರರ ಒಗ್ಗ್ಟನ ಪ್ರತಿಭಟನೆಯಿಂದಲೇ ಆ ಸಂಸ್ಥೆಯ ತೆರೆಮರೆಯ ಹುಳುಕುಗಳು
ಬಿಡಿಬಿಡಿಯಾಗಿ ಹೊರಬಂದವು. ಹಾಕಿ ಆಟಗಾರರನ್ನು 'ದೇಶಭಕ್ತಿ
ಇಲ್ಲದವರು' ಎಂದು ಕಿಸಿದ್ದು ಮಂಡಳಿಯ ಅದಕ್ಷತೆ,
ಅಪಕ್ವತೆ ಮತ್ತು ಸ್ವಾರ್ಥ ಮನೋಭಾವವನ್ನು ಎತ್ತಿ ತೋರಿಸಿತು.
ಪ್ರತಿಭಟನೆಯೇ ಅಸ್ತ್ರವಲ್ಲ ಎಂದಾದರೂ ಕೆಲವೊಮ್ಮೆ ಅದು ಅನಿವಾರ್ಯವೆನಿಸುತ್ತದೆ.
ಭಾರತೀಯ ಕ್ರೀಡಾಕ್ಷೇತ್ರ ಬೆಳೆಯಬೇಕೆಂದರೆ ಇಂಥ ಅವ್ಯವಸ್ಥೆಗೆ ಕಾರಣರಾದವರನ್ನು ಮೊದಲು
ಮನೆಗೆ ಅಟ್ಟಬೇಕು. ಅದಕ್ಕೆ, 'ದ ಸಂಡೆ
ಇಂಡಿಯನ್' ಪತ್ರಿಕೆಯ ಪ್ರಧಾನ ಸಂಪಾದಕರಾದ ಪ್ರೊ.
ಅರಿಂದಮ್ ಚೌಧುರಿ ಅವರು ಸಂಪಾದಕೀಯದಲ್ಲಿ ಹೇಳಿರುವಂತೆ ಪ್ರಸಕ್ತ ಕ್ರೀಡಾ ನಿರ್ವಹಣ
ಮಂಡಳಿಗಳನ್ನು ಕಾರ್ಪೊರೇಟ್ ಸಂಸ್ಥೆಗಳನ್ನಾಗಿ ಮಾರ್ಪಡಿಸುವುದೊಂದೇ ದಾರಿ.
ಜಗದೀಶ ಶ ದುದ್ಗಿ
ಗಜೇಂದ್ರಗಢ
' ವಾಕ್‌ಸ್ವಾತಂತ್ರ್ಯ'ವೆಂಬ
ಭ್ರಮೆ
ಕಳೆದ ಸಂಚಿಕೆಯಲ್ಲಿ ಪ್ರಕಟವಾದ 'ಮಾಧ್ಯಮಗಳಿಗೆ
ಮಂಕುಬೂದಿ' ಲೇಖನ ನಿಜಕ್ಕೂ ವಸ್ತುನಿಷ್ಠವಾಗಿದೆ.
ಹಾಗೆಯೇ ಇದು ಯಾರೂ ಅರಿಯದ ಸಂಗತಿಯೇನಲ್ಲ. ತನ್ನ ಕಾರ್ಯ
ಸಾಧನೆಗೆ ಅವಶ್ಯವಿರುವ ಯಾವುದೇ ಅವಕಾಶವನ್ನು ಕೈ ಚೆಲ್ಲದ ಅಮೆರಿಕ ತನ್ನ ಈ ಶಕುನಿತನದ ಮೂಲಕವೇ
ಇಂದು ಜಗತ್ತಿನ 'ದೊಡ್ಡಣ್ಣ'ನಾಗಿ ಬೆಳೆದು
ನಿಂತಿದೆ. ತನ್ನ ಹಿತಾಸಕ್ತಿಗೆ ಪೂರಕವಾದ ಯಾವುದೇ ಸಂಗತಿ ಇರಲಿ
ಅದನ್ನು ಜಾರಿಗೆ ತರುವ ಮೊದಲು ಮಾಧ್ಯಮಗಳ ಮೂಲಕ ಜಗತ್ತು ಹಾಗೂ ತನ್ನ ಪ್ರಜೆಗಳ ಮನವೊಲಿಸಿಯೇ
ಮುಂದಿನ ಹೆಜ್ಜೆ ಇಡುವುದು ಅಮೆರಿಕದ ರಣತಂತ್ರಗಳಲ್ಲೊಂದು. ಅಮೆರಿಕ
ಮೂಲದವರೇ ಆದ ನೋಮ್ ಚಾಮಸ್ಕೀ ಅಮೆರಿಕದ ಈ ಕೃತ್ರಿಮತೆಯನ್ನು ಸಾಕಷ್ಟು ಬಾರಿ
ಬೆತ್ತಲೆಗೊಳಿಸಿದ್ದಾರೆ. ಅಮೆರಿಕದಲ್ಲಿ ಪ್ರಜಾತಂತ್ರವಿದೆ,
ವಾಕ್ಸ್ವಾತಂತ್ರ್ಯವಿದೆ ಎಂದು ಹೇಳಲಾಗುತ್ತದೆಯಾದರೂ
ಮಾಧ್ಯಮದಂಥ ಪರಿಣಾಮಕಾರಿ ಶಸ್ತ್ರವನ್ನು ಬಳಸಿಕೊಂಡು ತನ್ನದೇ ಅಭಿಪ್ರಾಯವನ್ನು
ಸಾರ್ವತ್ರಿಕಗೊಳಿಸುವ ನಿಪುಣತನ ಅಲ್ಲಿನ ರಾಜಕೀಯ ವ್ಯವಸ್ಥೆಗಿದೆ.
ಜನತೆ ಕೂಡ ಸರ್ಕಾರದ ಅಭಿಪ್ರಾಯವನ್ನೇ ಗಿಣಿಪಾಠ ಒಪ್ಪಿಸುತ್ತಾ 'ವಾಕ್ಸ್ವಾತಂತ್ರ್ಯ'
ಎಂಬ ಭ್ರಮೆಯಲ್ಲಿ ಬದುಕಲಾರಂಭಿಸುತ್ತಾರೆ. ಇದು ಇರಾಕ್ ಹಾಗೂ
ಅಫ್ಘಾನಿಸ್ತಾನ ಮೇಲಿನ ಅಮೆರಿಕದ ದಾಳಿಯಲ್ಲಿ ಸಾಬೀತಾಗಿತ್ತು.
ಪ್ರಾರಂಭದಲ್ಲಿ ಅಲ್ಲಿ ತಾನು ನಡೆಸುವ ಯಾವ ಹಿಂಸಾಚಾರವೂ ಮಾಧ್ಯಮದ ಕಣ್ಣಿಗೂ ಕಾಣದಂತೆ ಅಮೆರಿಕ
ಮುತುವರ್ಜಿ ವಹಿಸಿತ್ತು. ನಂತರ ಅಲ್ಲಿಂದ ಬರುವ ಪ್ರತಿಯೊಂದು
ಸುದ್ದಿಯನ್ನೂ 'ಸೆನ್ಸಾರ್' ಮಾಡಿ ಯುದ್ಧ
ಸಾರಿದ ತನ್ನ ನಿರ್ಧಾರವನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿತ್ತು.
ದಿವ್ಯಶ್ರೀ
ಚಿಕ್ಕಮಗಳೂರು
ಚಿರಋಣಿ
ದೇಸಿ ದನಿಯಲ್ಲಿ ಪ್ರಕಟವಾದ
'ದೇವರ ಎದುರಲ್ಲೂ ತಾರತಮ್ಯ' ಲೇಖನ
ಓದಿದಾಗ ಕಣ್ಣು ತೇವಗೊಂಡಿತ್ತು. ತಮಿಳುನಾಡು ರಾಜ್ಯವೊಂದರಲ್ಲೇ
7000ಕ್ಕೂ ಅಧಿಕ ಹಳ್ಳಿಗಳಲ್ಲಿ ಅಸ್ಪೃಶ್ಯತೆಯ ಆಚರಣೆಯಲ್ಲಿದೆ ಎಂದರೆ
ದೇಶದಲ್ಲಿ ಈ ಆಚರಣೆ ಜಾರಿಯಲ್ಲಿರುವ ಅದೆಷ್ಟು ಹಳ್ಳಿಗಳು ಇರಬಹುದು!
ಗಂಡು ಹೆಣ್ಣು ಎಂಬ ಎರಡು ಜಾತಿಗೆ ಅಸ್ಪೃಶ್ಯತೆಯ 41 ಮುಖವಾಡಗಳೇಕೆ?
ಯಾವ ತಪ್ಪಿಗಾಗಿ ಈ ಶೋಷಣೆ. ತಮಿಳುನಾಡಿನ ಸಿಪಿಐ(ಎಂ)
ಉತ್ತಮವಾದ ಕಾರ್ಯವನ್ನೇ ಕೈಗೊಂಡಿದೆ. ಅದೇ ರೀತಿ ದೇಶದಲ್ಲಿನ
ಇತರೆ ಸಂಘಟನೆಗಳೂ ಈ ಸಾಮಾಜಿಕ ಪಿಡುಗಿನ ವಿರುದ್ಧ ಹೋರಾಟ ಮಾಡಬಾರದೇಕೆ?
ಸಮಾಜದಲ್ಲಿರುವ ಈ ಅನಿಷ್ಟ ಪದ್ಧತಿಯ ವಿರುದ್ಧ ಮಾಹಿತಿ ಕೊಟ್ಟ ಎಸ್ಐಗೆ
ನಾನು ಚಿರಋಣಿ. ಅದೇ ರೀತಿ ಪ್ರತಿಯೊಂದು ರಾಜ್ಯದ ಅಸಮಾನತೆಯ ಕುರಿತ
ಲೇಖನಗಳನ್ನೂ ನಿಮ್ಮ ಪತ್ರಿಕೆಯಲ್ಲಿ ಓದಲು ಬಯಸುತ್ತೇನೆ
ವಿನೋ ದ್ ಎಂ
ಮಂಡ್ಯ
ಮರಣ
ರಾಜಕಾರಣದ
ಕೈವಾಡ!
ಮರಣವನ್ನೂ ಲಾಭವನ್ನಾಗಿ ಪರಿವರ್ತಿಸಿಕೊಳ್ಳುವ ರಾಜಕೀಯ
ಕ್ಷೇತ್ರಕ್ಕೆ ಏನನ್ನಬೇಕೋ ತಿಳಿಯುತ್ತಿಲ್ಲ . ಅಂಕದ
ಪರದೆಯಲ್ಲಿ ಪ್ರಕಟವಾದ 'ಮರಣ ರಾಜಕಾರಣ'
ಲೇಖನ ಓದುತ್ತಿದ್ದಂತೆ ಇದು ರಾಜಕಾರಣಿಗಳ ಲೆಕ್ಕಾಚಾರವೋ ಅಥವಾ ಮತದಾರನ ಅಜ್ಞಾನವೋ ಎಂಬ
ಗೊಂದಲಕ್ಕೀಡಾಗಿದ್ದು ನಿಜ. ಆದರೆ ಈ ಪ್ರಕ್ರಿಯೆ ಭಾರತಕ್ಕೆ ಮಾತ್ರ
ಸೀಮಿತವಲ್ಲದೆ ವಿದೇಶಗಳಲ್ಲೂ ಇದೆ ಎನ್ನುವ ವಿಚಾರವೂ ಕುತೂಹಲಕೆರಳಿಸಿತು.
ಭುಟ್ಟೋ ಹತ್ಯೆಯ ನಂತರ ಬೆನಜೀರ್ ಹಾಗೂ ಬೆನಜೀರ್ ಹತ್ಯೆಯ ನಂತರ ಆಸಿಫ್ ಆಲಿ ಜರ್ದಾರಿ
ಅಧಿಕಾರದ ಗದ್ದುಗೆಗೆ ಏರಿದ್ದು ಗೊತ್ತಿದ್ದರೂ ಅದರ ಹಿಂದೆ ಮರಣ ರಾಜಕಾರಣದ ಕೈವಾಡವಿದೆ ಎಂಬ
ಕುರಿತು ನಾನು ಈವರೆಗೂ ಚಿಂತಿಸಿಯೇ ಇರಲಿಲ್ಲ. ಒಟ್ಟಾರೆ ಈ ಲೇಖನ
ಕಣ್ತೆರೆಸುವಂತಿತ್ತು. ಜ್ಯೋತಿ ಬಸು ಮರಣ ಪಶ್ಚಿಮ ಬಂಗಾಳದಲ್ಲಿ ಎಂಥ
ಬದಲಾವಣೆ ತರಬಹುದು ಎಂಬುದನ್ನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ!
ಮರಣಕ್ಕೂ ಎಂಥಾ ಬೆಲೆಯಿದೆ ನೋಡಿ!
ನಾರಾಯಣ ಸ್ವಾಮಿ
ಮೈಸೂರು
ನಿಜಕ್ಕೂ
ಖೇದಕರ
ಪ್ರೊ .
ಅರಿಂದಮ್ ಚೌಧುರಿ ಅವರ 'ಪ್ರಸಕ್ತ ಕ್ರೀಡಾ ನಿರ್ವಹಣಾ
ಮಂಡಳಿಗಳನ್ನು ಕಾರ್ಪೊರೇಟ್ ಸಂಸ್ಥೆಗಳನ್ನಾಗಿ ಮಾರ್ಪಡಿಸುವುದು ಅತ್ಯಗತ್ಯ'
ಎಂಬ ಸಂಪಾದಕೀಯ ಚಿಂತನೆಗೆ ಒರೆಹಚ್ಚುವಂತಿತ್ತು. ಹಾಕಿ ಭಾರತದ
ರಾಷ್ಟ್ರ ಕ್ರೀಡೆಯಾಗಿದ್ದರೂ ಕ್ರಿಕೆಟ್ ವರ್ಚಸ್ಸಿನ ಮುಂದೆ ಅದು ಮಂಕಾಗಿರುವುದನ್ನು ಗಮನಿಸಿದರೆ
ಕ್ರೀಡಾಕ್ಷೇತ್ರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ತಿಳಿಯುತ್ತದೆ.
ಚೌಧುರಿ ಅವರು ಹೇಳಿದಂತೆ ಕ್ರೀಡಾ ಮಂಡಳಿಗಳನ್ನು ಕಾರ್ಪೊರೇಟ್ ಸಂಸ್ಥೆಗಳನ್ನಾಗಿಸಿದರೆ ಅವ್ಯವಹಾರ
ಕೊಂಚ ಮ್ಟಗೆ ತಗ್ಗುವುದಂತೂ ಖಚಿತ. ಆದರೆ ಅಲ್ಲೂ ಅವ್ಯವಹಾರಗಳು
ನಡೆಯುವುದೇ ಇಲ್ಲ ಎಂದೆನ್ನಲು ಸಾಧ್ಯವೂ ಇಲ್ಲ. ಒಟ್ಟಾರೆ ಕ್ರೀಡಾ
ಮಂಡಳಿಗಳಲ್ಲಿ ಇದ್ದವರಿಗೆ ಕ್ರೀಡೆಯ ಬಗ್ಗೆ ಗೌರವ ಬೆಳೆದು, ಆ ಮಂಡಳಿ
ಯಾವುದೋ ಒಬ್ಬ ರಾಜಕಾರಣಿಯ ಕೈಗೊಂಬೆಯಾಗದೇ ಇದ್ದರೆ ಮಾತ್ರ ಕ್ರೀಡಾಕ್ಷೇತ್ರ ಉಳಿಯಲು ಸಾಧ್ಯ.
ಹಾಕಿಯಂಥ ಅದ್ಭುತ ಕ್ರೀಡೆಯೊಂದು ಯಾರದ್ದೋ ಕ್ಷುಲ್ಲಕ ಬೇಜವಾಬ್ದಾರಿತನಕ್ಕೆ,
ಸ್ವಾರ್ಥಕ್ಕೆ ಬಲಿಯಾಗುತ್ತಿರುವುದು ನಿಜಕ್ಕೂ ಖೇದ
ಸಂತೋಷ್ . ಎನ್.
ಮಂಡ್ಯ
ರಣಜಿ
ರಭಸ !
ಭರವಸೆ ಮೂಡಿಸಿದ ಕರ್ನಾಟಕ ರಣಜಿ ತಂಡದ ಕುರಿತ
'ಗಂಗೋತ್ರಿ ಕಣ್ಣೀರು ಪಾಠ' ಲೇಖನ ಸಕಾಲಿಕ.
ಕೂದಲೆಳೆಯ ಅಂತರದಲ್ಲಿ ಚಾಂಪಿಯನ್ಷಿಪ್ ಕಳೆದುಕೊಂಡ ಈ ತಂಡದ
ಆಟದ ಶೈಲಿ ನಿಜಕ್ಕೂ ಉತ್ತಮವಾಗಿತ್ತು. ಮೈಸೂರಿನ ಗಂಗೋತ್ರಿ ಗ್ಲೇಡ್ಸ್ನಲ್ಲಿ
ನೆರೆದಿದ್ದ ಪ್ರೇಕ್ಷಕರಲ್ಲಿ ಒಬ್ಬನಾಗಿದ್ದ ನಾನು ಈ ಬಾರಿ ಮೈ ನವಿರೇಳಿಸುವ ಆಟಕ್ಕೆ
ಸಾಕ್ಷಿಯಾಗಿದ್ದೆ. ನಮ್ಮ ತಂಡ ಟ್ರೋಫಿ ಗೆಲ್ಲಲಿಲ್ಲವಲ್ಲಾ ಎಂಬ ವಿಷಯ
ಬೇಸರ ಮೂಡಿಸಿದರೂ ತಂಡದ ಆಟದ ಶೈಲಿ ಮಾತ್ರ ಭರವಸೆ ಮೂಡಿಸುವಂತಿದೆ.
ಅದರಲ್ಲಂತೂ ರಂಗನಾಥ್ ವಿನಯ್ ಕುಮಾರ್, ಅಭಿಮನ್ಯು ಮಿಥುನ್ ಮತ್ತು
ಅರವಿಂದ್ ಶ್ರೀನಾಥ್ ಆಟದ ಶೈಲಿಯ ಬಗ್ಗೆ ಎರಡು ಮಾತಿಲ್ಲ. ಈ ಅಪ್ಪಟ
ಪ್ರತಿಭೆಗಳು ಕ್ರಿಕೆಟ್ ರಾಜಕೀಯಕ್ಕೆ ಬಲಿಯಾಗದೆ ಅಂತರ್ ರಾಷ್ಟ್ರೀಯ ಕ್ರಿಕೆಟ್ನಲ್ಲೂ
ಸಾಧನೆ ಮಾಡುವಂತಾಗಲಿ ಎನ್ನುವುದಷ್ಟೇ ನನ್ನ ಅಭಿಲಾಷೆ. ಸಂಚಿಕೆಯಲ್ಲಿ
ಮೂಡಿಬಂದ ತ್ರಿವಳಿ ಆಟಗಾರರ ಸಂದರ್ಶನ ಭಿನ್ನವಾಗಿ, ರಸವತ್ತಾಗಿತ್ತು.
ಉಮರ್
ಫರೂಕ್
ಮೈಸೂರು
ಭಾವುಕ
ಶ್ರದ್ಧಾಂಜಲಿ
ಮೇರು ನಟ ಅಶ್ವತ್ಥ್ ಗೆ
ಎಸ್ಐ ಶ್ರದ್ಧಾಂಜಲಿ ಅರ್ಪಿಸಿದ ರೀತಿ ಓದಿ ನಿಜಕ್ಕೂ ಭಾವುಕಳಾದೆ.
ಆರಂಭದಲ್ಲಿ ಕೊಟ್ಟಂಥ ಚಿತ್ರಗಳ ಸನ್ನಿವೇಶಗಳಂತೂ ಕಣ್ಣ ಮುಂದೆಯೇ ಬಂದಂತಾಯಿತು.
ಪ್ರತಿ ಚಿತ್ರದಲ್ಲೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದ ಅಶ್ವತ್ಥ್ನಂಥ
ನಟನ ಮರಣದಿಂದ ಆವರಿಸಿದ ಶೂನ್ಯತೆಯನ್ನು ತುಂಬುವಂಥವರು ಈಗಿನ ಕನ್ನಡ ಚಿತ್ರರಂಗದಲ್ಲಂತೂ ಯಾರೂ
ಇಲ್ಲ. ಸರಳ ಸಜ್ಜನಿಕೆಯ ಅವರ ವ್ಯಕ್ತಿತ್ವ,
ಅಪಾರ ಅಭಿನಯ ಕೌಶಲ್ಯ, ಒಂದಿಷ್ಟೂ ಅಹಂಕಾರವಿಲ್ಲದ ಅವರ
ನಡೆನುಡಿ... ಇವೆಲ್ಲಾ ಇನ್ನು ಬರೇ ನೆನಪಷ್ಟೇ.
ಕನ್ನಡ ಚಿತ್ರಗಳ ಪೋಷಕ ನಟನ ಪಾತ್ರಗಳಿಗೆ ಜೀವ ತುಂಬಿದ ಅಶ್ವತ್ಥ್ ಸಾವು ಎಂದೆಂದಿಗೂ
ತುಂಬಲಾರದ ನಷ್ಟವೇ ಸರಿ.
ಮೋಹಿನಿ ಶಿವರಾಮ್
ಮಡಿಕೇರಿ
ದೂರವಾಗಲಿ ಈ
ಪೈಶಾಚಿಕತೆ
ತಮಿಳುನಾಡಿನ ಹಲವು ಹಳ್ಳಿಗಳಲ್ಲಿ ಇನ್ನೂ ಅಸ್ಪೃಶ್ಯತೆ
ಜೀವಂತವಾಗಿದೆ ಎನ್ನುವ ಸುದ್ದಿ ದಿಗಿಲು ಮೂಡಿಸಿತು .
ದೇವಾಲಯಕ್ಕೆ ದಲಿತರ ಪ್ರವೇಶದ ಕುರಿತ ಕಾನೂನೇ ಜಾರಿಯಾಗಿದ್ದರೂ ದಲಿತರನ್ನು ಅವಕಾಶ
ವಂಚಿತರನ್ನಾಗಿಸುವ ತಮಿಳು ನಾಡಿನ ಗ್ರಾಮೀಣರ ಕುರಿತು ಕೋಪವುಕ್ಕಿ ಬಂದರೂ ಸೂಕ್ತ ಜಾಗೃತಿ
ಕಾರ್ಯಕ್ರಮಗಳ ಮೂಲಕ ಗ್ರಾಮೀಣರ ಮನೋಭಾವವನ್ನು ಬದಲಾಯಿಸಬಹುದು ಎಂದೆನಿಸುತ್ತದೆ.
ಎಷ್ಟೇ ಒಳ್ಳೆಯ ಕಾರ್ಯವಾಗಿರಲಿ, ಅದನ್ನು ಒತ್ತಾಯಪೂರ್ವಕವಾಗಿ
ಸಾಧಿಸಹೊರಟರೆ ಹಿನ್ನಡೆ ಖಚಿತ. ಬಹುಶಃ ಅದೇ ಕಾರಣಕ್ಕೇ
ದೇವಾಲಯದೊಳಕ್ಕೆ ದಲಿತರ ಪ್ರವೇಶ ಮಾಡಿಸಹೊರದ್ದ ಸಿಪಿಐ(ಎಂ)
ಕಾರ್ಯಕರ್ತರ ವಿರುದ್ಧ ಗ್ರಾಮೀಣರು ಪ್ರತಿಭಟನೆ ನಡೆಸಿದ್ದು.
ಈ ಸಾಮಾಜಿಕ ಪಿಡುಗಿನ ವಿರುದ್ಧ ಸೂಕ್ತ ಜಾಗೃತಿ ಮೂಡಿದರೆ ದೇಶದ ಬಹುತೇಕ ಪ್ರದೇಶಗಳಂತೆ ಇಲ್ಲಿಯೂ
ಅಸ್ಪೃಶ್ಯತೆ ಮುಗಿದ ಅಧ್ಯಾಯವಾಗುವುದರಲ್ಲಿ ಅನುಮಾನವಿಲ್ಲ.
ಆಡಳಿತಾರೂಢ ಪಕ್ಷ ಅಥವಾ ವಿರೋಧಪಕ್ಷವೆನ್ನದೆ ಎಲ್ಲಾ ರಾಜಕೀಯ ನಾಯಕರೂ ಒಮ್ಮನಸಿನಿಂದ ಈ ಸಾಮಾಜಿಕ
ಪಿಡುಗನ್ನು ಸಂಪೂರ್ಣವಾಗಿ ತೊಡೆದು ಹಾಕಲು ಪ್ರಯತ್ನಿಸಬೇಕಿದೆ.
ಶ್ರೀಲ ತಾ
ಬೆಂಗಳೂರು
ಬೇಲಿಯೇ
ಎದ್ದು ಹೊಲ ಮೇಯ್ದರೆ...
ಸೇನೆಯೆಂದರೆ ಶಿಸ್ತು ಹಾಗೂ ಪ್ರಾಮಾಣಿಕತೆಯ ಪ್ರತೀಕ ;
ಭಾರತೀಯ ಸೇನೆಗೆ ಜಗತ್ತಿನೆಲ್ಲೆಡೆ ವಿಶೇಷ ಗೌರವವಿದೆ ಎಂದು ಕೇಳುತ್ತಾ ಬೆಳೆದ ನಮ್ಮನ್ನು
ಸೇನೆಯಲ್ಲಿ ನಡೆಯುವ ಅವ್ಯವಹಾರ ಬೆಚ್ಚಿ ಬೀಳಿಸುತ್ತದೆ. ಸೈನಿಕರ
ಆತ್ಮಹತ್ಯೆ, ವೇತನ ಸಮಸ್ಯೆ ಇವೆಲ್ಲವೂ ಸೇನೆಯೊಳಗೆ ಎಲ್ಲವೂ ಸರಿಯಿಲ್ಲ
ಎಂಬ ಸಂದೇಶವನ್ನು ದೇಶಕ್ಕೆ ಸಾರಿ ಹೇಳಿದ್ದರೂ ಭೂ ಹಗರಣದಲ್ಲೂ ಸೇನೆ ಭಾಗಿಯಾಗಿದ್ದು ನಿಜಕ್ಕೂ
ಎಸ್‌ಐ ವಿವರಿಸಿದಂತೆ ಭಾರತೀಯ ಸೇನೆಯ ಮುಖಕ್ಕೆ ಅಂಕೊಂಡ ಕಪ್ಪು ಚುಕ್ಕೆ.
ನಿವೃತ್ತ ಸೈನಿಕ ಅಥವಾ ನಿವೃತ್ತ ಸೇನಾಧಿಕಾರಿಗಳಿಗೂ ವಿಶೇಷ ಮರ್ಯಾದೆ ನೀಡುತ್ತಾ ಒಡನಾಡುವ
ದೇಶದ ಶ್ರೀ ಸಾಮಾನ್ಯ ಕೂಡಾ ಸೇನೆಯ ಮೇಲಿನ ಗೌರವ ಹಾಗೂ ವಿಶ್ವಾಸವನ್ನೇ ಕಳೆದುಕೊಳ್ಳುವ ಹಂತಕ್ಕೆ
ಬಂದಿದ್ದಾನೆ. ಮೇಲಧಿಕಾರಿ ಹುದ್ದೆ ಪಡೆದುಕೊಳ್ಳುವಲ್ಲಿನ ಪೈಪೋ,
ರಾಜಕೀಯ, ಅದೇ ಹೆಸರಲ್ಲಿ ಹ್ಟುಕೊಳ್ಳುವ ಎರಡು ಬಣಗಳು,
ಅವುಗಳ ನಡುವಿನ ಕಿತ್ತಾಟ... ಇವೆಲ್ಲದರ ನಡುವೆ ದೇಶ ಕಾಯಲು
ಇವರಿಗೆ ಸಮಯವಾದರೂ ಎಲ್ಲಿ? ಇಂಥ ಅವಕಾಶಗಳನ್ನು ಶತ್ರು ರಾಷ್ಟ್ರಗಳು
ಉಪಯೋಗಿಸಿ ದೇಶದ ಮೇಲೆ ದಾಳಿಗೆ ಮುಂದಾದರೆ ಅದಕ್ಕೆ ಬೇರಾರನ್ನೋ ದೂಷಿಸಿ ಪ್ರಯೋಜನವಿಲ್ಲ.
ಬೇಲಿಯೇ ಎದ್ದು ಹೊಲ ಮೇಯುತ್ತಿರುವಾಗ ಬೇಲಿಯಾಚೆಗಿನ ಹಸು ಕೂಡಾ ಹೊಲದೆಡೆಗೆ
ಆಕರ್ಷಿತವಾಗುವುದು ಸಾಮಾನ್ಯ!
ಗಂಗಾಧರ್ ಗೌಡ
ಮಡಿಕೇರಿ
ಹಿಂದಿನ ನಾಯಕರೂ ಭ್ರಷ್ಟರಾಗಿದ್ದಿರಬಹುದೇ?!
ವ್ಯಕ್ತಿಯೊಬ್ಬ ಮರಣಹೊಂದಿದಾಗ- ಆತ ಜನ ನಾಯಕನೇ ಆಗಿರಲಿ ಅಥವಾ ಶ್ರೀ ಸಾಮಾನ್ಯನೇ ಆಗಿರಲಿ, ವಾಸ್ತವವನ್ನು ಬದಿಗಿಟ್ಟು ಆತನ ಕುರಿತು ಒಳ್ಳೆಯ ಮಾತುಗಳನ್ನಾಡುವುದು ಭಾರತೀಯರ ಹುಟ್ಟು ಗುಣವಿರಬೇಕು. ಇಂಥ ಶ್ಲಾಘನೆಗಳು ಬಹುಶಃ ಶ್ರೀಸಾಮಾನ್ಯನ ಬಗೆಗಾದರೆ ಪರವಾಗಿಲ್ಲ, ಆದರೆ ಒಬ್ಬ ಹೆಸರುವಾಸಿ ವ್ಯಕ್ತಿಯ ಕುರಿತಾದರೆ ಅದರ ಮಾರಕ ಪರಿಣಾಮಗಳು ಸಣ್ಣದ್ದಲ್ಲ. ಆ ವ್ಯಕ್ತಿಯೊಬ್ಬ ಭ್ರಷ್ಟ ರಾಜಕಾರಣಿಯಾಗಿದ್ದರೂ ನಮ್ಮ ಮಾಧ್ಯಮಗಳು ಆತನ ಬಗ್ಗೆ ಪುಂಖಾನುಪುಂಖವಾಗಿ ಹೊಗಳುತ್ತಲೇ ಸಾಗುತ್ತವೆ. ಇದರಿಂದ ಮುಂದಿನ ತಲೆಮಾರಿಗೆ ನಾವು ತಪ್ಪು ಮಾಹಿತಿಯನ್ನು ನೀಡಿದಂತಲ್ಲವೇ? ಇದ್ದದ್ದನ್ನು ಇದ್ದ ಹಾಗೆ ವಸ್ತುನಿಷ್ಠವಾಗಿ ಪ್ರಕಸಿದರೆ ತಪ್ಪೇನು? ವ್ಯಕ್ತಿಯೊಬ್ಬ ಮರಣ ಹೊಂದಿದರೂ ಆತ ಮಾಡಿದ ಪಾಪಗಳು ಪಾಪಗಳೇ ಅಲ್ಲವೇ? ಅದಕ್ಕೆ ಹೊಗಳಿಕೆಯ ಮುಖವಾಡವೇಕೆ? ಭಾರತೀಯರ ಈ ಮನೋಭಾವದ ಬಗ್ಗೆ ಕೊಂಚ ಆಳವಾಗಿ ಗಮನಿಸಿದರೆ ನಮ್ಮ ಹಿರಿಯರೂ ಇಂಥ ಪ್ರಮಾದಗಳನ್ನು ಮಾಡಿರಬಹುದಲ್ಲವೇ ಎಂಬ ಅನುಮಾನ ಕಾಡಿತು. ಇಂದು ನಾವು ಅಪ್ಪಟ ರಾಷ್ಟ್ರಭಕ್ತರು ಎಂದು ಕೊಂಡಾಡುವ ಹಿಂದಿನ ನಾಯಕರೂ ಪ್ರಮಾದಗಳನ್ನು ಎಸಗಿರುವ ಸಾಧ್ಯತೆಗಳು ಇವೆಯಲ್ಲವೇ?! ಎಸ್‌ಐ ಪ್ರಕಸಿದ 'ಪ್ರಧಾನಿಯಾಗದ ಬಸುಗೆ ಪ್ರಾಮಾಣಿಕ ಬೀಳ್ಕೊಡುಗೆ' ಮುಖಪುಟ ಲೇಖನ ವಾಸ್ತವವನ್ನು ಮುಂದಿಡುವಲ್ಲಿ ಯಶಸ್ವಿಯಾಯಿತು. ನಿಷ್ಪಕ್ಷಪಾತವಾಗಿ ವಸ್ತುನಿಷ್ಠ ಲೇಖನ ಪ್ರಕಸಿದ ಪತ್ರಿಕೆಗೆ ಧನ್ಯವಾದಗಳು.
ಲಿಲ್ಲಿ ಜೋಸೆಫ್
ಬೆಂಗಳೂರು ರೂ .
3,000 ಬಹುಮಾನ ಗೆದ್ದವರು

ಗಂಭೀರ ಚಿಂತನೆ ಅಗತ್ಯ
ಅರಿಂದಮ್ ಚೌಧುರಿ ಅವರ 'ಪ್ರಸಕ್ತ
ಕ್ರೀಡಾ ನಿರ್ವಹಣಾ ಮಂಡಳಿಗಳನ್ನು ಕಾರ್ಪೊರೇಟ್ ಸಂಸ್ಥೆಗಳನ್ನಾಗಿ ಮಾರ್ಪಡಿಸುವುದು ಅತ್ಯಗತ್ಯ!'
ಎಂಬ ಸಂಪಾದಕೀಯದ ಕುರಿತು ಈ ಪ್ರತಿಕ್ರಿಯೆ.
ಪ್ರೊ.
ಚೌಧುರಿ ಅವರ ಅಭಿಪ್ರಾಯವನ್ನು ಅಕ್ಷರಶಃ ಒಪ್ಪುವ ನಾನು ಈ ಸಂಸ್ಥೆಗಳಲ್ಲಿ ಯಾವ ಬಗೆಯ
ಕೆಲಸಗಳ್ಳತನಕ್ಕೂ ಎಡೆ ಇರಬಾರದು ಎಂಬ ಅಭಿಪ್ರಾಯಪಡುತ್ತೇನೆ.
ಜೊತೆಗೆ ಇಂಥ ಮಂಡಳಿಗಳ ಜವಾಬ್ದಾರಿಯನ್ನು ಯಾವುದೇ ರಾಜಕಾರಣಿಯ
ಕೈಗೊಪ್ಪಿಸಬಾರದು. ಅಲ್ಲದೆ ಕ್ರೀಡಾ
ಮಂಡಳಿಗಳು ರಾಜಕೀಯ ಪ್ರಭಾವಕ್ಕೆ ಒಳಗಾಗುವುದನ್ನೂ ತಡೆಯಬೇಕು.
ಅಂದರೆ ಕ್ರೀಡಾ ಮಂಡಳಿಗಳು ರಾಜಕೀಯದಿಂದ ಸಂಪೂರ್ಣವಾಗಿ ಹೊರಗುಳಿಯಬೇಕು.
ಹಾಕಿ ಆಟಗಾರರಿಗೆ ಸಲ್ಲಬೇಕಾದ ವೇತನವನ್ನು ಕೂಡಲೇ ನೀಡಬೇಕು.
ಅರ್ಹವಾದ ಪ್ರತಿಫಲದಿಂದ ಕ್ರೀಡಾಪಟುಗಳನ್ನು ವಂಚಿತರನ್ನಾಗಿಸುವ
ಪರಿಪಾಠವೂ ನಿಲ್ಲಬೇಕು. ಹಾಕಿ,
ಫುಟ್ ಬಾಲ್ ಹಾಗೂ ಕ್ರಿಕೆಟ್ ಹೀಗೆ ಎಲ್ಲಾ ರೀತಿ ಕ್ರೀಡೆಗಳ
ಜವಾಬ್ದಾರಿಯನ್ನೂ ಕ್ರೀಡಾಮಂಡಳಿಗಳು ಹೊರಬೇಕು.
ಕ್ರೀಡೆಯ ಜವಾಬ್ದಾರಿ ಹೊರುವ ಈ ಸಂಸ್ಥೆ ಕ್ರಿಕೆಟ್ನಂತೆ
ಹಾಕಿ ಹಾಗೂ ಫುಟ್ಬಾಲ್ನಂಥ
ಕ್ರೀಡೆಗಳೂ ಪ್ರಚಲಿತಕ್ಕೆ ಬರುವಂತೆ ಮಾಡಬೇಕು.
ಇದರ ಮೊದಲ ಹೆಜ್ಜೆಯಾಗಿ ಕ್ರೀಡಾಪಟುಗಳಿಗಿರುವ ಅನುದಾನವನ್ನು ಹೆಚ್ಚಿಸಿ
ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸಬೇಕು.
ರಂಜಿತ್ ಸಿನ್ಹಾ
ಕೊಚ್ಚಿ
ಸುಂದರ ಚಿಂತನೆಗಳಿಂದ ಹೊಟ್ಟೆ ತುಂಬುವುದಿಲ್ಲ!
ನಾವು ಜೀವನವೊಂದು ಸುಂದರ ಕಥೆ ಎಂದು ಭಾವಿಸಿದರೂ ವಾಸ್ತವ ಕಣ್ಣಿಗೆ
ರಾಚುವಂತಿರುತ್ತದೆ . ಜ್ಯೋತಿ ಬಸು
ಒಬ್ಬ ಮಹಾನ್ ವ್ಯಕ್ತಿ. ಆದರೆ ಈ ಮಹಾನ್
ಗುಣವೇ ಕೆಲವೊಮ್ಮೆ ವಾಸ್ತವದಿಂದ ಬಹು ದೂರ ಉಳಿದುಬಿಡುತ್ತದೆ.
ಜಗತ್ತಿನ ನಿಯಮಗಳು ಬದಲಾಗುತ್ತಲೇ ಇರುತ್ತವೆ;
ಈ ಬದಲಾಗುವ ನಿಯಮಗಳ ಜೊತೆಗೇ ನಾವೂ ಬದಲಾಗುತ್ತಿರುತ್ತೇವೆ.
ಕಟು ನಿಯಮಗಳಿಗೆ ಬದ್ಧರಾಗಿರುವುದು ಕೆಲವೊಮ್ಮೆ ಆಳವಾದ ಕಂದಕವನ್ನೇ
ಸೃಷ್ಟಿಸುತ್ತದೆ. ಆರ್ಥಿಕ ಸ್ವಾತಂತ್ರ್ಯ
ಎನ್ನುವುದು ಯಾವುದೇ ಒಬ್ಬ ವ್ಯಕ್ತಿಯ ಕನಸು.
ಜಗತ್ತೇ ಬಂಡಾಳಶಾಹಿ ನಿಯಮಗಳಿಗೆ ಬದ್ಧವಾಗಿ ಬದುಕುವಾಗ ಕಮ್ಯುನಿಸ್ಟ್
ಆಗಿರುವುದಕ್ಕಿಂತ ಆತ್ಮಹತ್ಯೆಯೇ ವಾಸಿ.
ಜನತೆಯ ಆಯ್ಕೆಯನ್ನು ನಿಯಂತ್ರಿಸಲು ಯಾರಿಂದಲೂ ಸಾಧ್ಯವಿಲ್ಲ.
ನಾವೇ ಸೃಷ್ಟಿಸಿದ ಕೂಪದೊಳಗೆ ಇದ್ದುಕೊಂಡು ಎಲ್ಲವೂ ಸರಿಯಾಗಿದೆ ಎಂದು ನಾವು
ಭಾವಿಸಬಹುದು ಆದರೆ ಆ ಗೂಡಿನ ಹೊರಗೂ ಒಂದು ಪ್ರಪಂಚವಿದೆ.
ಕಾರ್ಯಸಾಧುವಲ್ಲದಿದ್ದರೇ ಎಂಥ ಉನ್ನತ ವಿಚಾರವೂ ಅರ್ಥಹೀನವೇ.
ಸತ್ತ ನಂತರ ಹೊಗಳುವ ನಾವು,
ಆತ ಬದುಕಿದ್ದಾಗ ಸತ್ಯವನ್ನು ಬಹಿರಂಗಪಡಿಸಲು ಭಯಪಡುತ್ತೇವೆ.
ಸತ್ತ ಎಲ್ಲಾ ವ್ಯಕ್ತಿಗಳನ್ನೂ ಅಮರರನ್ನಾಗಿಸಲಾಗುತ್ತದೆ.
ವ್ಯಕ್ತಿಯೊಬ್ಬ ಬದುಕಿದ್ದಾಗಲೇ ಆತನ ಕುರಿತ ಸತ್ಯವನ್ನು
ಬಯಲಿಗೆಳೆಯಬೇಕು. ಭಾವನೆಗಳಿಗೆ
ನೋವುಂಟಾಗುತ್ತದೆ ಎಂಬ ಕಾರಣಕ್ಕೆ ನಾವೇಕೆ ಭಯಪಡಬೇಕು?
ಲೊವೀನ್ ಮೋಟ್ವಾನಿ
ಪುಣೆ
ಎಷ್ಟು
ಮುಂದುವರಿದರೇನು ಪ್ರಯೋಜನ...!
' ದೇವರ ಎದುರಲ್ಲೂ ತಾರತಮ್ಯ'
ಲೇಖನ ಓದುತ್ತಿದ್ದಂತೆ ಅಸ್ಪೃಶ್ಯತೆ ಒಂದು ಅಪರಾಧವಾಗಿದ್ದರೂ ಅದನ್ನು
ಆಚರಿಸುವ ಸಮಾಜದ ಒಂದು ಅಂಗವಾದ ನನ್ನ ಮೇಲೇ ನನಗೆ ಹೇವರಿಕೆ ಉಂಟಾಯಿತು.
ತನ್ನಿಷ್ಟದ ಸ್ಥಳವೊಂದಕ್ಕೆ ಭೇ ನೀಡಲು ಪ್ರತಿಯೊಬ್ಬ ಭಾರತೀಯನಿಗೆ
ಸಾಧ್ಯವಿಲ್ಲವೆಂದಾದರೆ ಸ್ವಾತಂತ್ರ್ಯ ಸಿಕ್ಕಿದ ಪ್ರಯೋಜನವಾದರೂ ಏನು?
ನನ್ನ ಜಾತಿಯ ಕಾರಣದಿಂದ ದೇವಾಲಯದೊಳಕ್ಕೆ ಪ್ರವೇಶಿಸಲು ನನಗೆ ಅನುಮತಿ
ಇಲ್ಲವೆಂದರೆ ಸ್ವಾತಂತ್ರ್ಯವಿರುವುದಾದರೂ ಏಕೆ?
ಇಂಥ ಅಸಮಾನತೆಯನ್ನು ಆಚರಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.
ಯಾವುದೇ ದೇವರು ಅಥವಾ ಯಾವುದೇ ಧರ್ಮ ಅಸ್ಪೃಶ್ಯತೆಯನ್ನು
ಪ್ರತಿಪಾದಿಸಿಲ್ಲ ಎಂದಾದರೆ ದೇವಾಲಯದ ಆಡಳಿತ ಮಂಡಳಿಗೆ ದಲಿತರನ್ನು ದೇವಾಲಯಗಳಿಂದ ಹೊರಗಿಡುವ
ಅಧಿಕಾರ ನೀಡಿದವರಾರೂ ಯಾರು? ಅಸ್ಪೃಶ್ಯತೆ
ಒಂದು ಅಪರಾಧ. ಇದರ ಯಾವುದೇ ರೀತಿಯ
ಆಚರಣೆಯನ್ನು ಸಂವಿಧಾನದ ಪರಿಚ್ಛೇದ 17ರ
ಪ್ರಕಾರ ನಿಷೇಧಿಸಲಾಗಿದೆ. ಆದರೆ ಈ
ಕಟ್ಟಳೆಗಳೆಲ್ಲವೂ ಕಾಗದ ಪತ್ರಗಳಿಗಷ್ಟೇ ಸೀಮಿತವಾಗಿವೆ.
ವಾಸ್ತವ ಮಾತ್ರ ಇವಕ್ಕಿಂತ ಭಿನ್ನವಾಗಿದೆ.
ಇತರರು ಬಳಸುವ ಹಾದಿಯನ್ನೂ ದಲಿತರು ಬಳಸದಂತೆ ನಿರ್ಬಂಧ ವಿಧಿಸಿದ್ದು ನಿಜಕ್ಕೂ
ಅಮಾನವೀಯ. ಇತರೆ ರಾಷ್ಟ್ರಗಳ ಜನರನ್ನು
ತುಂಬು ಹೃದಯದಿಂದ ಸ್ವಾಗತಿಸುವ ನಾವು,
ನಮ್ಮದೇ ಜನರನ್ನು ಮಾತ್ರ ತೀರಾ ಅಮಾನವೀಯವಾಗಿ ನಡೆಸಿಕೊಳ್ಳುತ್ತೇವೆ ಎನ್ನುವುದು ಎಲ್ಲಕ್ಕಿಂತ
ದೊಡ್ಡ ದುರಂತ.
ಪ್ರೇಮ್ ಕೆ . ಮೆನೋನ್
ಇ ಮೇಲ್ ಮೂಲಕ |