|
|
|
|
|
|
|
ಸಂಕಷ್ಟ ಎದುರಿಸಲು ಮೈತ್ರಿ ಅನಿವಾರ್ಯ
|
|
|
ಸಾಲ ಭರಿಸಲು ಅಮೆರಿಕಕ್ಕೆ ಚೀನಾದ ಅಗತ್ಯವಿದ್ದರೆ, ತನ್ನ ಉತ್ಪನ್ನಗಳ ಮಾರುಕಟ್ಟೆಗೆ ಚೀನಾಕ್ಕೆ ಅಮೆರಿಕದ ಅವಶ್ಯಕತೆ ಇದೆ
|
|
|
ಇಯಾನ್ ಬ್ರೆಮರಿ
'ಯುರೇಷಿಯಾ ಗ್ರೂಪ್' ಅಧ್ಯಕ್ಷ ಮತ್ತು 'ವರ್ಲ್ಡ್ ಪಾಲಿಸಿ ಇನ್‌ಸ್ಟಿಟ್ಯೂಟ್'ನ ಹಿರಿಯ ಸದಸ್ಯ
ಡೇವಿಡ್ ಗಾರ್ಡನ್
'ಯುರೇಷಿಯಾ ಗ್ರೂಪ್'ನ ಸಂಶೋಧನಾ ವಿಭಾಗದ ಮುಖ್ಯಸ್ಥ |
ಫೋರ್ಬ್ಸ್ ನಿಯತಕಾಲಿಕ ಕಳೆದ ವರ್ಷ ಅಮೆರಿಕ
ಅಧ್ಯಕ್ಷ ಬಾರಕ್ ಒಬಾಮ ಹಾಗೂ ಚೀನಾ ಅಧ್ಯಕ್ಷ ಹೂ ಜಿಂಟಾವೋ ಅವರನ್ನು
'ಜಗತ್ತಿನ ಅತ್ಯಂತ
ಪ್ರಬಲ ವ್ಯಕ್ತಿಗಳು'
ಎಂದು ಬಣ್ಣಿಸಿತ್ತು.
ಆದರೆ ಅಮೆರಿಕ ಮತ್ತು ಚೀನಾ ಬಾಂಧವ್ಯ
ಕಾಪಾಡಿಕೊಳ್ಳಲು ಇಬ್ಬರಲ್ಲೂ ಶಕ್ತಿಯಿಲ್ಲ ಎಂಬುದು ಈ ವರ್ಷ ಸಾಬೀತಾಗಲಿದೆ.
ಹಾಗೆ ನೋಡಿದರೆ ಜಾಗತಿಕ ಆರ್ಥಿಕತೆ,
ಹವಾಮಾನ ಬದಲಾವಣೆಯ ಸವಾಲು,
ಪರಮಾಣು ಪ್ರಸರಣದ ಹಾನಿಗಳನ್ನು ತಡೆಗಟ್ಟಲು
ಅಮೆರಿಕ-ಚೀನಾ
ಮೈತ್ರಿ ಅತ್ಯವಶ್ಯಕ ಎಂದು ಪರಿಗಣಿಸಿದ ರಾಷ್ಟ್ರಗಳಿಗೆ ಈ ಬೆಳವಣಿಗೆ
ಆತಂಕಕಾರಿಯಾಗಿ ಪರಿಣಮಿಸಬಲ್ಲದು.
ಚೀನಾ-ಅಮೆರಿಕ
ಕೂಡ ಇದರಿಂದ ಹೊರತಲ್ಲ.
ನಾವಿಲ್ಲಿ ಸಂಖ್ಯೆ 10 ನ್ನು ಸೂಕ್ಷ್ಮವಾಗಿ
ಗಮನಿಸಬೇಕು.
ಏಕೆಂದರೆ ಅಮೆರಿಕದ ಶೇಕಡಾ 10ರಷ್ಟಿರುವ
ನಿರುದ್ಯೋಗ ಮತ್ತು ಚೀನಾದ ಶೇಕಡಾ 10ರಷ್ಟಿರುವ
ಒಟ್ಟು ರಾಷ್ಟ್ರೀಯ ಉತ್ಪನ್ನ ಅಭಿವೃದ್ಧಿ ದರ ಪರಸ್ಪರ ಸಂಘರ್ಷದ
ಸನ್ನಿವೇಶವನ್ನು ನಿರ್ಮಾಣ ಮಾಡಿದೆ.
ಅಮೆರಿಕದ ಜನಸಂಖ್ಯೆ ಚೀನಾದ ಪ್ರತಿಷ್ಠೆಗೆ ಸಮವಾಗಲಿದೆ.
ಆದರೆ ಅಮೆರಿಕದ ಮಧ್ಯಂತರ ಚುನಾವಣೆ ನಿರ್ಮಾಣ
ಮಾಡಿದ ವಿಲಕ್ಷಣ ರಾಜಕೀಯ ಸನ್ನಿವೇಶ ಜಾಗತಿಕವಾಗಿ ನಿರ್ಣಾಯಕ ಎನಿಸಿದ
ಅಮೆರಿಕ-ಚೀನಾ
ದ್ವಿಪಕ್ಷೀಯ ಬಾಂಧವ್ಯಕ್ಕೆ ಇನ್ನಿಲ್ಲದ್ದ ಅಡ್ಡಿ-ಆತಂಕಗಳನ್ನು
ಒಡ್ಡಲಿದೆ.
ಅಮೆರಿಕ ಮತ್ತು ಚೀನಾ ಇಂದು ಪರಸ್ಪರ ಖಚಿತ
ಎನಿಸಿದ ಆರ್ಥಿಕ ಪತನವನ್ನು ಎದುರಿಸುತ್ತಿದ್ದು, ಎರಡೂ ರಾಷ್ಟ್ರಗಳ ಅಧ್ಯಕ್ಷರಿಗೆ ಈ ವಾಸ್ತವದ
ಬಗ್ಗೆ ಅರಿವಿದೆ.
ಏರುತ್ತಲೇ ಇರುವ ತನ್ನ ಸಾಲವನ್ನು ಭರಿಸಲು ಅಮೆರಿಕಕ್ಕೆ ಚೀನಾದ
ಅಗತ್ಯವಿದ್ದರೆ,
ತನ್ನ ಉತ್ಪನ್ನಗಳನ್ನು ಖರೀದಿಸಲು ಚೀನಾಕ್ಕೆ ಅಮೆರಿಕದ ಅವಶ್ಯಕತೆ ಅಷ್ಟೇ
ಇದೆ.
ಹೌದು, ಆರ್ಥಿಕ ಬಿಕ್ಕಟ್ಟು ಚೀನಾಕ್ಕೆ ಅತ್ಯಂತ ಪ್ರಖರ
ಹೊಡೆತವನ್ನೇ ನೀಡಿದೆ.
ಇಂದಿಗೂ ಚೀನಾದ ಆರ್ಥಿಕ ಪ್ರಗತಿ ಅಮೆರಿಕ,
ಯುರೋಪ್ ಹಾಗೂ ಜಪಾನ್ನಲ್ಲಿರುವ
ಗ್ರಾಹಕರನ್ನೇ ಅವಲಂಬಿಸಿದೆ.
ಚೀನಾದ ನಾಯಕರು ಸ್ಥಳೀಯ ಉತ್ಪನ್ನಗಳನ್ನೇ ಹೆಚ್ಚು
ಅವಲಂಬಿಸಿ ಆ ಮೂಲಕ ಉತ್ತಮ ಅಭಿವೃದ್ಧಿ ಮಾದರಿಯನ್ನು ಕಂಡುಕೊಳ್ಳಬೇಕು ಎಂಬ
ಚಿಂತನೆಯಲ್ಲಿದ್ದಾರೆ.
ಇತ್ತೀಚಿನ ಸಮೀಕ್ಷೆಯೊಂದರಲ್ಲಿ ಅಮೆರಿಕದ ಶೇಕಡಾ
44ರಷ್ಟು ಮಂದಿ
"ಆರ್ಥಿಕತೆಯಲ್ಲಿ ಇಂದು
ಮೊದಲನೇ ಸ್ಥಾನ ಚೀನಾಕ್ಕೆ"
ಎಂದು ಪ್ರತಿಕ್ರಿಯಿಸಿದ್ದರು.
ಕೇವಲ ಶೇಕಡಾ 27ರಷ್ಟು
ಜನರಷ್ಟೇ ಅಮೆರಿಕಕ್ಕೆ ಮೊದಲ ಸ್ಥಾನ ನೀಡಿದ್ದರು.
ನಿಜ ಹೇಳಬೇಕೆಂದರೆ ಅಮೆರಿಕದ ಚೇತರಿಕೆ
ನಿರೀಕ್ಷಿತ ಎನಿಸಿದರೂ,
ಅಲ್ಲಿ ಉದ್ಯೋಗ ಪ್ರಗತಿ ಕಾಣಲು ಇನ್ನಷ್ಟು ಸಮಯ ಬೇಕು.
ಎಲ್ಲಿಯವೆರೆಗೆ ಮತದಾರರು ತಮ್ಮ
'ಜೋಳಿಗೆ'
ಬಗ್ಗೆ ಚಿಂತೆ ನಡೆಸುತ್ತಲೇ ಇರುತ್ತಾರೋ
ಅಲ್ಲಿಯವೆರೆಗೆ ಡೆಮಾಕ್ರೆಟ್ ಹಾಗೂ ರಿಪಬ್ಲಿಕನ್ನರು ಅಮೆರಿಕದ ಕಾರ್ಮಿಕರ
ರಕ್ಷಣಾ ಕಾರ್ಯದಲ್ಲಿ ಸವಾಲೊಡ್ಡುತ್ತಲೇ ಇರುತ್ತಾರೆ.
ಮುಕ್ತ ಮಾರುಕಟ್ಟೆಯಲ್ಲಿ ಯಶಸ್ಸು ಸಾಧಿಸಿದ
ವಾಷಿಂಗ್ಟನ್,
ಆರ್ಥಿಕ ರಕ್ಷಣಾ ನೀತಿಗೆ ಏಕೆ ಬೆದರಿಕೆಯೊಡ್ಡುತ್ತಿದೆ
ಎಂಬುದನ್ನು ಚೀನಾ ನಾಯಕ ವರ್ಗ ತಿಳಿಯಬಯಸುತ್ತಿದೆ.
ಈ ಮಧ್ಯೆ ಚೀನಾದ ಪ್ರಗತಿ ಏರುತ್ತಿದ್ದಂತೆ
ವ್ಯಾಪಾರ ಅಸಮತೋಲನ ಅಮೆರಿಕವನ್ನು ಮತ್ತಷ್ಟು ಕಾಡಲಿದೆ.
ಆಶಾಭಂಗಕ್ಕೆ ಒಳಗಾದ ಅಮೆರಿಕ ಚುನಾವಣೆಯನ್ನು
ಎದುರು ನೋಡುತ್ತಿದ್ದಂತೆ,
ಆ ದೇಶದ ಎರಡೂ ಪಕ್ಷಗಳ ನೀತಿ ನಿರೂಪಕರು ಹಲವು
ಕಾರಣಗಳನ್ನು ಮುಂದಿಟ್ಟು ಚೀನಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇಬೇಕು ಎಂದು
ಒತ್ತಾಯ ಹೇರಲಿದ್ದಾರೆ.
ಒಬಾಮ ಆಡಳಿತ ಚೀನಾದ ಟೈರ್ ಹಾಗೂ ಉಕ್ಕಿನ
ಪೈಪ್ ರಫ್ತು ಉತ್ಪನ್ನಗಳ ವಿರುದ್ಧವೇ ಕಾರ್ಯೋನ್ಮುಖವಾಗಿದ್ದು, ಈ ವರ್ಷ ವ್ಯಾಪಾರ ಹೊರತುಪಡಿಸಿ ಇನ್ನಿತರ
ವಿಚಾರಗಳಲ್ಲೂ ಚೀನಾವನ್ನು ಎದುರು ಹಾಕಿಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.
ಹಾಗೆ ನೋಡಿದರೆ ತನ್ನ ಸ್ವಾರ್ಥಕ್ಕೆ
ಇತರರನ್ನು ಬಲಿಪಶು ಮಾಡಬೇಕೆಂಬ ಇರಾದೆ ಚೀನಾ ನಾಯಕರಲ್ಲೂ ಇಲ್ಲ. ತಮ್ಮ ದೇಶದಲ್ಲಿರುವ ಅಗಾಧ ಸಂಪನ್ಮೂಲಗಳನ್ನು
ಬಳಸಿ ತಮ್ಮ ಅಸ್ತಿತ್ವ ಹಾಗೂ ಇರುವಿಕೆಯನ್ನು ಇನ್ನಷ್ಟು ಬಲಗೊಳಿಸಿ ಆ ಮೂಲಕ
ಸಂಧಾನಕ್ಕೂ ತಮ್ಮದೇ ಆದ ಕೊಡುಗೆ ನೀಡಲು ಅವರು ಉತ್ಸುಕರಾಗಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಚೀನಾ ಸರ್ಕಾರಿ
ಮಾಲೀಕತ್ವದ ಹಾಗೂ ಖಾಸಗಿ ಮಾಲೀಕತ್ವದ ಕಂಪನಿಗಳಲ್ಲೂ ಸಾಕಷ್ಟು ಹೂಡಿಕೆ
ಮಾಡಿದ್ದು, ತನ್ನ
ಮಾರುಕಟ್ಟೆ ಸಾಮರ್ಥ್ಯದಿಂದಲೇ ಚೀನಾ ಲಾಭಗಳಿಸುತ್ತಿರುವುದನ್ನು
ಸಾಬೀತುಪಡಿಸಲು ಮುಂದಾಗಿದೆ.
ಸ್ಥಳೀಯ ಶಕ್ತಿ ಕೇಂದ್ರಗಳಿಂದ ಮಾರುಕಟ್ಟೆ ನಿಯಂತ್ರಣ
ಹಾಗೂ ಪ್ರಭಾವವನ್ನು ದುಪ್ಪಟ್ಟು ಏರಿಸುವ ಉದ್ದೇಶದಿಂದ ವಿದೇಶಿ
ಸ್ಪರ್ಧಿಗಳಿಗೇ ಬೃಹತ್ ಮಟ್ಟದ ಸವಾಲು ಒಡ್ಡಲೇಂದೇ ಚೀನಾ ಸರ್ಕಾರ ಸೂಕ್ತ
ವ್ಯವಸ್ಥೆ ಕಲ್ಪಸಿದೆ.
ಮಾತಿನಲ್ಲೇ ಮಂಟಪ ಕಟ್ಟ ಬಯಸುವ ಎದುರಾಳಿ ಅಮೆರಿಕದ
ವ್ಯಾಪಾರಿ ಗುಣಗಳು ಚೀನಾಕ್ಕೆ ತನ್ನ ವ್ಯಾಪಾರಿ ಮಾದರಿಯನ್ನು
ಮುಂದುವರಿಸುವಂತೆ ಪ್ರೇರೇಪಿಸಿದೆ.
ಅಂತರ್ ರಾಷ್ಟ್ರೀಯ ನಾಯಕತ್ವದಲ್ಲಿನ
ಜವಾಬ್ದಾರಿಗಳನ್ನು ಚೀನಾ ಕೂಡ ಹಂಚಿಕೊಳ್ಳಬೇಕು ಎಂಬುದನ್ನು ಅಮೆರಿಕ ಆಡಳಿತ
ವರ್ಗವೂ ಬಯಸುತ್ತದೆ.
ಅಂತರ್ ರಾಷ್ಟ್ರೀಯ ಸಮುದಾಯದ ಒತ್ತಾಸೆಗಳನ್ನು
ಬದಿಗಿಟ್ಟು ತನ್ನದೇ ನೆಲೆಯಲ್ಲಿ ಮುಂದುವರಿಯುತ್ತಿರುವ ಇರಾನ್,
ಮ್ಯಾನ್ಮಾರ್
ಹಾಗೂ ಸೂಡಾನ್ನಂಥ
ರಾಷ್ಟ್ರಗಳತ್ತ ಒತ್ತಡ ಹೇರಲು ಚೀನಾ ತನಗೆ ಸಾಥ್ ನೀಡಬೇಕೆಂದು ಅಮೆರಿಕ
ಬಯಸುತ್ತದೆ. ಆದರೆ
ಚೀನಾ ಸರ್ಕಾರದ ಮಾಲೀಕತ್ವ ಹೊಂದಿರುವ ಹಲವು ಕಂಪನಿಗಳು ಈ ಎಲ್ಲಾ
ದೇಶಗಳೊಂದಿಗೆ ಉತ್ತಮ,
ಲಾಭದಾಯಕ ವಾಣಿಜ್ಯ ಸಂಬಂಧವನ್ನು ಹೊಂದಿದೆ.
ಚೀನಾ ಸರ್ಕಾರದ ಆರ್ಥಿಕ ಹಾಗೂ ರಾಜಕೀಯ
ಉದ್ದೇಶಗಳು ಈ ಸಂಬಂಧದಿಂದ ಈಡೇರುತ್ತಿರುವಾಗ ಚೀನಾ ನಾಯಕರು ತಮ್ಮ ದೇಶದ
ಆಂತರಿಕ ಉದ್ದೇಶಗಳಿಗೆ ಧಕ್ಕೆಯುಂಟುಮಾಡುವಂತಹ ಯಾವುದೇ ವಿಷಯದಲ್ಲಿ
ಹೊಂದಾಣಿಕೆ ಮಾಡಿಕೊಳ್ಳಲು ಖಂಡಿತ ಮುಂದಾಗುವುದಿಲ್ಲ ಎಂಬುದು ಸರ್ವವಿದಿತ.
ಆದರೆ ಈ ಎರಡು ರಾಷ್ಟ್ರಗಳ ನಡುವೆ ಸದ್ಯಕ್ಕೆ
ವ್ಯಾಪಾರ ಸಮರ ಅಸಂಭವ ಎಂದೇ ಹೇಳಬಹುದು. ಏಕೆಂದರೆ ಇದು ಎರಡೂ ಬಲಿಷ್ಠ ಆರ್ಥಿಕ
ರಾಷ್ಟ್ರಗಳಿಗೆ ಕೊಡಲಿಪೆಟ್ಟಾಗಿ ಪರಿಣಮಿಸಲಿದೆ ಎಂಬುದು ಒಬಾಮ ಮತ್ತು ಹೂ
ಅವರಿಬ್ಬರಿಗೂ ಗೊತ್ತು.
ಹಾಗಾಗಿ ಇಬ್ಬರೂ ಕಠಿಣ ಪರಿಶ್ರಮದ ಮೂಲಕ ಎಲ್ಲವೂ
ರಚನಾತ್ಮಕ ಮಾದರಿಯಲ್ಲೇ ಸದೃಢವಾಗಿ ಸಾಗುವಂತೆ ಕಾರ್ಯ ನಿರ್ವಹಿಸಲಿದ್ದಾರೆ.
ಆದರೆ ಆರೋಪ ಪ್ರತ್ಯಾರೋಪ ಅಥವಾ ಟೀಕೆಗಳಿಂದ ಏನೂ
ನಡೆಯದು ಎಂಬುದನ್ನು ಇಬ್ಬರೂ ನಾಯಕರು ಅರಿತಿಲ್ಲ ಎಂಬುದು ವಿಪರ್ಯಾಸ.
ಉದಾಹರಣೆಗೆ ಹೇಳುವುದಾದರೆ, ಚೀನಾ ಉತ್ಪನ್ನ ಆಮದು ಕುರಿತಾದ ಸುದ್ದಿಗಳು
ಅಮೆರಿಕದ ಪತ್ರಿಕೆಗಳಲ್ಲಿ ಮತ್ತೆ ಮುಖ್ಯ ಸುದ್ದಿಗಳಾಗಿ ಕಂಡುಬಂದರೆ,
ನಿರಾಶೆಯ ಬದಲಾಗಿ ಕೋಪದ ವಾತಾವರಣ
ನಿರ್ಮಾಣವಾದರೂ ಅಚ್ಚರಿಯಲ್ಲ.
ಚೀನಾದ ಉತ್ಪನ್ನಗಳು ಅವರ ಆರೋಗ್ಯ ಹಾಗೂ ಸುರಕ್ಷತೆಗೆ
ಹಾನಿಯುಂಟು ಮಾಡಿದರೆ ಅವಕಾಶವಾದಿ ನೀತಿ ನಿರೂಪಕರು ಖಂಡಿತ ತಮ್ಮ
ಧ್ವನಿಯನ್ನು ಇನ್ನಷ್ಟು ಗಟ್ಟಿಗೊಳಿಸಲಿದ್ದಾರೆ.
ಇತ್ತ ಬೀಜಿಂಗ್ ಅಧಿಕಾರಿಗಳು ಅಮೆರಿಕದ
ಟೀಕೆಗಳನ್ನು ಅತಿ ಸೂಕ್ಷ್ಮತೆಯಿಂದ ಪರಿಗಣಿಸುತ್ತಿದ್ದು, ತಮ್ಮ ಗುಣಮಟ್ಟದ ಉತ್ಪನ್ನ ಹಾಗೂ ಸೇವೆಯ ಮೂಲಕ ಈ
ಟೀಕೆಗಳಿಗೆ ಉತ್ತರ ನೀಡಲು ಮುಂದಾಗಿದ್ದಾರೆ.
ಹಾಗಾಗಿಯೇ 'ವಿಶ್ವದ
ಅತ್ಯಂತ ಬಲಿಷ್ಠ ಜನರು'
ಸದ್ಯದ ಬಿಗುವಿನ ವಾತಾವರಣದಲ್ಲಿ ಮೈತ್ರಿ ಮೂಲಕವೇ
ಜಾಗತಿಕ ಸವಾಲುಗಳನ್ನು ಎದುರಿಸಲು ಮುಂದಾಗಬೇಕಿದೆ.
ಟಿಎಸ್‌ಐ
|
ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.
|
|
|
|
| |