User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

 
ಇತರ ವಿಭಾಗಗಳು
 
ಇಷ್ಟೇ - ಇಷ್ಟು

ಯಶವಂತ ಸರದೇಶಪಾಂಡೆ ರಂಗಭೂಮಿ ಕಲಾವಿದ

 

ಚಲನಚಿತ್ರಗಳ ಹಾಸ್ಯ ಸನ್ನಿವೇಶಗಳಲ್ಲಿ ಕೆಲವೊಮ್ಮೆ ಉತ್ತರ ಕರ್ನಾಟಕ ಭಾಷೆಯನ್ನು ಅಪಹಾಸ್ಯ ಮಾಡಿದಂತೆ ಬಳಸಲಾಗುತ್ತದೆ...

ಯಾವ ಭಾಷೆಯಾದರೂ ಅದರ ಬಗ್ಗೆ ಪ್ರಬುದ್ಧತೆಯಿಲ್ಲದೆ ಬಳಸಿದಾಗ ಮಾತ್ರ ಅದಕ್ಕೆ ಅಪಹಾಸ್ಯ ಮಾಡಿದಂತಾಗುತ್ತದೆ. ನಾವು ಭಾಷೆಯ ಬಳಕೆಯನ್ನು ಅಪಹಾಸ್ಯ ಮಾಡಬಾರದಷ್ಟೆ. ನನಗೆ ಚಿತ್ರರಂಗದಲ್ಲಿ ಉತ್ತರ ಕರ್ನಾಟಕ ಭಾಷೆಯ ಬಳಕೆಯ ಬಗ್ಗೆ ಯಾವ ಅಸಮಾಧಾನವೂ ಇಲ್ಲ.

ಚಿತ್ರರಂಗದಂತೆ ರಂಗಭೂಮಿಯೂ ಈಗ ಕೇವಲ ಲಾಭ-ನಷ್ಟದ ಲೆಕ್ಕಾಚಾರಕ್ಕೆ ಜಾರುತ್ತಿದೆ. ನಿಮ್ಮ ಅನಿಸಿಕೆ?

ಕಲೆ ಅದರ ಜೀವನ ಪರ್ಯಂತ ಯಾವುದೋ ಅಕ್ಯಾಡೆಮಿಯನ್ನೇ ನಂಬಿ ಕುಳಿತಿರಬೇಕೆ? ಕುಂಬಾರ ಚಂದದ ಮಡಿಕೆ ಮಾಡಿ ತನ್ನ ಮುಂದಿಟ್ಟು ಕುಳಿತರೆ ಜೀವನ ಸಾಗಿಸಲು ಸಾಧ್ಯವೇ? ಆತ ಅದನ್ನು ತನ್ನ ಜಾಣ್ಮೆ ಬಳಸಿ ಮಾರಾಟ ಮಾಡಬೇಕು. ನಾಟಕ ಕಲೆಯೂ ಹಾಗೆಯೇ...

ಹಾಗಾದರೆ ನಾಟಕದ ಮೂಲ ಉದ್ದೇಶ ಜನರನ್ನು ಚಿಂತನೆಗೆ ಹಚ್ಚುವುದಲ್ಲವೇ?

ಒಂದು ಕಾದಂಬರಿ ಓದಿದ ಮಾತ್ರಕ್ಕೆ ಯಾರೂ ಪ್ರಬುದ್ಧರಾಗಿ ಬಿಡುವುದಿಲ್ಲ. ಜ್ಞಾನಾರ್ಜನೆಗೆ ವಿಶ್ವವಿದ್ಯಾಲಯಗಳಿವೆ. ಜನರನ್ನು ರಂಜಿಸುವ ಪ್ರಯತ್ನ ನಾವು ಮಾಡುತ್ತೇವೆ ಅಷ್ಟೆ. ಜ್ಞಾನ ಪ್ರಸರಣ ಮತ್ತು ಮನೋರಂಜನೆ ಜೊತೆ ಜೊತೆ ಯಾಗಿಯೇ ಸಾಗಬೇಕು.

ಟಿಎಸ್‌ಐ

ಎಸ್.ಎನ್. ಸ್ಮಿತಾ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .