|

ರಂಗಭೂಮಿಯ ಅನುಭವ ಚಿತ್ರ ನಿರ್ದೇಶನಕ್ಕೆ ನೆರವಾಯಿತೇ?
ರಂಗಭೂಮಿಯಲ್ಲಿ ಹಿರಿಯ ಕಲಾವಿದರೊಂದಿಗಿನ
ಒಡನಾಟ ಅಗಾಧ ಜ್ಞಾನ ಮತ್ತು ಅನುಭವ ನೀಡಿದೆ. ಚಿತ್ರರಂಗ ಪ್ರವೇಶಿಸಲೆಂದೇ
ನಾನು ರಂಗಭೂಮಿಯಲ್ಲಿ ತೊಡಗಿಸಿಕೊಂಡದ್ದು.
'ಕಬಡ್ಡಿ' ಚಿತ್ರ 'ಚಕ್ ದೆ', 'ಲಗಾನ್'
ಚಿತ್ರಗಳಿಂದ ಪ್ರೇರಿತವೇ?
ಹಾಲಿವುಡ್‌ನ 'ಎಸ್ಕೇಪ್ ಟು ವಿಕ್ಟರಿ'
ಚಿತ್ರದಿಂದ ಪ್ರೇರಿತ. ಲಗಾನ್ ಚಿತ್ರದಲ್ಲಿ ಆಟದ ಮೂಲಕ ಒಂದು ದೇಶದ ಚರಿತ್ರೆ
ಅನಾವರಣ ಮಾಡಿದ ಬಗೆ ಇಷ್ಟ ಆಗಿತ್ತು.
ಚಿತ್ರ ವಿವಾದಕ್ಕೆ ಸಿಲುಕಿದ್ದೇಕೆ?
ಅದು ನಮ್ಮ ಚಿತ್ರದ ನಟರೊಬ್ಬರ ಅಚಾತುರ್ಯದ ಫಲ.
ಜನ ನಮ್ಮ ಕಚ್ಚಾಟ ನೋಡಿ ಚಿತ್ರ ನೋಡಲು ಹಿಂದೇಟು ಹಾಕಿದರು.
ನಟ ಕಿಶೋರ್ ಮತ್ತು ನಿಮ್ಮ ಹೇಳಿಕೆಗಳಲ್ಲಿ ಜನ
ಯಾವುದನ್ನು ನಂಬ ಬೇಕು?
ನಾನು ಜನರಿಗೆ ಮಾರ್ಗದರ್ಶನ ಮಾಡುವುದು
ಸರಿಯಲ್ಲ. ಒಬ್ಬ ನಟ ಚಿತ್ರವೊಂದನ್ನು ಒಪ್ಪಿದ ಮೇಲೆ ಅದಕ್ಕೆ ನ್ಯಾಯ
ಒದಗಿಸಬೇಕಿತ್ತು...
ನಿಮ್ಮ ಮುಂದಿನ ಚಿತ್ರ?
ಚಿತ್ರೋದ್ಯಮದಲ್ಲಿ ನೆಲೆಯೂರಬೇಕಾದರೆ
ಕಮರ್ಷಿಯಲ್ ಚಿತ್ರಕ್ಕೆ ಕೈ ಹಾಕಲೇಬೇಕು. ತೇಜಸ್ವಿ, ಟಾಲ್‌ಸ್ಟಾಯ್ ಕಾದಂಬರಿ
ಆಧಾರಿತ ಚಿತ್ರ ತಯಾರಿಸುವ ಆಸೆ ಇದೆ.
ಟಿಎಸ್‌ಐ
ಚಿತ್ರಾ ಕರ್ಕೇರಾ
|