User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
ವಿನಾಯಕ ಕೃಷ್ಣ ಗೋಕಾಕ್
 

 

ಕನ್ನಡದ ಬಹುಮುಖ್ಯ ಸಾಹಿತಿಗಳಲ್ಲಿ ಒಬ್ಬರಾದ ವಿ.ಕೃ. ಗೋಕಾಕ್ 1909ರ ಆಗಸ್ಟ್ 10ರಂದು ಧಾರವಾಡದಲ್ಲಿ ಜನಿಸಿದರು. ಕನ್ನಡ-ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸಾಹಿತ್ಯ ಕೃಷಿ ಮಾಡಿ, ಕನ್ನಡದ ಹಿರಿಮೆಯನ್ನು ರಾಷ್ಟ್ರೀಯ-ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಎತ್ತಿಹಿಡಿದ ಗೋಕಾಕ್ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಮೊದಲ ಕನ್ನಡಿಗ. ನಂತರ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನವನ್ನೂ ಅಲಂಕರಿಸಿದರು. ಇಂಗ್ಲಿಷ್‌ನಲ್ಲಿ ಸುಮಾರು 30ಕ್ಕೂ ಹೆಚ್ಚು ಕೃತಿಗಳನ್ನು ಬರೆದ ಇವರ ಮೊದಲ ಕೃತಿ 'ಕಲೋಪಾಸಕರು'. 'ಸಮುದ್ರಗೀತೆಗಳು', 'ಭಾರತ ಸಿಂಧು ರಶ್ಮಿ', 'ದ್ಯಾವಾ ಪೃಥವೀ' ಕೃತಿಗಳು ಸೇರಿದಂತೆ 'ಸಮರಸವೇ ಜೀವನ' ಎಂಬ ಮಹತ್ವದ ಕಾದಂಬರಿ ರಚಿಸಿದ್ದಾರೆ. ಪ್ರೌಢಶಾಲಾ ವ್ಯಾಸಂಗದಲ್ಲಿ ಭಾಷಾ ಸ್ಥಾನಮಾನ ಕುರಿತಂತೆ ಗೋಕಾಕರ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರ ಸಮಿತಿಯೊಂದನ್ನು ರಚಿಸಿದ್ದು, ಈ ಸಮಿತಿ ನೀಡಿದ ವರದಿ ಕನ್ನಡದ ಪರವಾಗಿತ್ತು. ಇದನ್ನು ಅಂಗೀಕರಿಸಲು ಸರ್ಕಾರ ಹಿಂದೇಟು ಹಾಕಿದಾಗ ವರದಿ ಜಾರಿಮಾಡಲು ರಾಜ್ಯದಾದ್ಯಂತ ಕಂಡುಬಂದ ಹೋರಾಟ ಇಂದಿಗೂ 'ಗೋಕಾಕ್ ಚಳವಳಿ' ಎಂದೇ ಜನಜನಿತ. 1958ರಲ್ಲಿ ಬಳ್ಳಾರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ ಗೋಕಾಕ್‌ರಿಗೆ 1991ರಲ್ಲಿ 'ಜ್ಞಾನಪೀಠ ಪ್ರಶಸ್ತಿ' ಒಲಿಯಿತು. ಗೋಕಾಕರು 1992ರ ಏಪ್ರಿಲ್ 8ರಂದು ಮುಂಬೈಯಲ್ಲಿ ನಿಧನರಾದರು. ಪ್ರಸಕ್ತ ವರ್ಷ ಗೋಕಾಕರ ಜನ್ಮಶತಮಾನೋತ್ಸವ ವರ್ಷ.

ಟಿಎಸ್‌ಐ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .