|

ನಿಮ್ಮ ಅನುಭವಗಳನ್ನೇ ಚಿತ್ರ ಸಾಹಿತ್ಯದಲ್ಲಿ
ಒಡಮೂಡಿಸಲು ಯತ್ನಿಸಿದ್ದೀರಾ?
ಹೌದು. ನಾನು ಅಪ್ಪ- ಅಮ್ಮನನ್ನು
ಕಳೆದುಕೊಂಡಾಗ ಬದುಕಿನ ಸಂಬಂಧಗಳೆಲ್ಲಾ ದೂರವಾದಂತೆ ಅನಿಸಿತು. ಆ ಒಂಟಿತನ,
ದುಃಖವೇ ಸವಾರಿ ಚಿತ್ರದ ಬಿಸಿಲು ತಾಗಿ, ಮಂಜು ಕರಗಿ.. ಹಾಡಿನಲ್ಲಿ
ಹೊರಹೊಮ್ಮಿದೆ.
ನಿಮ್ಮೊಳಗಿನ ಚಿತ್ರ ಸಾಹಿತಿಗೆ ಪ್ರೇರಣೆ..?
ಜಿ.ಎಸ್. ಶಿವರುದ್ರಪ್ಪ, ಕೆ.ಎಸ್.
ನರಸಿಂಹಸ್ವಾಮಿ, ಜಯಂತ ಕಾಯ್ಕಿಣಿ ಅವರ ಗೀತೆಗಳು.
ಪ್ರಸ್ತುತ ಕನ್ನಡ ಚಿತ್ರಗೀತೆಗಳ ಕುರಿತು...
ಸಂಗೀತ ಮತ್ತು ಸಾಹಿತ್ಯ ಗಂಡ-ಹೆಂಡತಿ ಇದ್ದಂತೆ.
ಎರಡಕ್ಕೂ ತಾಳ-ಮೇಳ ಇರಬೇಕು. ಸುಮ್ಮನೆ ಪ್ರಾಸ ಬರೆಯುವ ಬದಲು ಜನರ
ಮನಮುಟ್ಟುವಂತೆ ಬರಬೇಕಿದೆ.
ರಂಗಭೂಮಿ ತೊರೆದು ಸಂಪೂರ್ಣ ಚಿತ್ರರಂಗದಲ್ಲೇ
ತೊಡಗಿಸಿಕೊಳ್ಳುವಿರಾ?
ಖಂಡಿತಾ ಇಲ್ಲ, ರಂಗಭೂಮಿ ನನ್ನ ತವರು. ಅಲ್ಲಿ
ಖುಷಿ, ನೆಮ್ಮದಿ ಇದೆ. ಆದರೆ, ಹೊಟ್ಟೆಪಾಡಿನ ಖುಷಿಗೆ ಚಿತ್ರರಂಗ.
ಹೊಸ ಚಿತ್ರಗಳು?
ಇಜ್ಜೋಡು, ಜಸ್ಟ್ ಮಾತಾಡು ಮಾತಾಡು, ಲಹರಿ,
ಮರಳಿ ಮರೆಯಾಗಿ ಚಿತ್ರಗಳಿಗೆ ಹಾಡು ಬರೆಯುತ್ತಿದ್ದೇನೆ. ಜೊತೆಗೆ ನನ್ನ
ನಿರ್ದೇಶನದ ಮಡಿ ಬಿಡುಗಡೆಗೆ ಸಿದ್ಧವಾಗುತ್ತಿದೆ.
ಟಿಎಸ್‌ಐ
ಚಿತ್ರಾ ಕರ್ಕೇರಾ
|