ಚುಂಬನ ರಹಸ್ಯ
ಹುಡುಗಿಯರ ಹೃದಯ ಕದ್ದ ಚೋರಗುರು ಮ್ಯಾಥ್ಯೂ
ಮೆಕ್‌ಕಾನ್ಹೇ ತಮ್ಮ ಮೊದಲ ಚುಂಬನದ ರಹಸ್ಯ ಬಿಚ್ಚಿಟ್ಟಿದ್ದಾರೆ. 'ವ್ಹಾಮ್!'
ಗಾಯನ ತಂಡ ರಚಿಸಿದ ಜಾರ್ಜ್ ಮೈಖಲ್ ತಮ್ಮ ಪ್ರಥಮ ಚುಂಬನಕ್ಕೆ ಸ್ಫೂರ್ತಿ
ಎನ್ನುತ್ತಾರೆ ಅವರು. ಅರರೆ, ತಪ್ಪು ತಿಳಿಯಬೇಡಿ 'ಫೂಲ್ಸ್ ಗೋಲ್ಡ್' ತಾರೆ
ಮ್ಯಾಥ್ಯೂ ತಮ್ಮ ಪ್ರಥಮ ಪ್ರಿಯತಮೆಗೆ ಪ್ರಥಮ ಚುಂಬನ ನೀಡಲು ಪ್ರೇರೇಪಣೆ
ನೀಡಿದ್ದೇ ಮೈಖಲ್‌ರ 'ಕೇರ್‌ಲೆಸ್ ವಿಸ್ಪರ್' ಹಾಡಂತೆ. ಹಾಗಾಗಿ ಪ್ರಥಮ
ಚುಂಬನದ ಶ್ರೇಯಸ್ಸಿಗೆ 80ರ ದಶಕದ ಖ್ಯಾತ ಸಂಗೀತ ತಾರೆ ಮೈಖೆಲ್‌ಗೆ ಶರಣು
ಹೊಡೆಯಲೇಬೇಕು ಎನ್ನುವುದು ಮ್ಯಾಥ್ಯೂ
ನ
ಂಬಿಕೆ. ಗತ ಇತಿಹಾಸದ ಇಂಥ ಸುಮಧುರ
ಕ್ಷಣಗಳೇ ನಲವತ್ತರ ಹರಯದ ಮ್ಯಾಥ್ಯೂರಲ್ಲಿ ಜೀವನೋತ್ಸಾಹ ತುಂಬುತ್ತಿದೆಯೆ?
ಮ್ಯಾಥ್ಯೂನೇ ಹೇಳಬೇಕು.
ಸೂಪರ್ ಸ್ಟಾರ್ ಹೃತಿಕ್
ಹೃತಿಕ್
ರೋಶನ್ ನಿಜ ಅರ್ಥದಲ್ಲಿ ಬಾಲಿವುಡ್ ಸೂಪರ್ ಸ್ಟಾರ್. ಅಲ್ವೇ ಮತ್ತೆ?
ಬಾಲಿವುಡ್‌ನ ತುಂಬಾ ಹೃತಿಕ್ ಮತ್ತು 'ಕೈಟ್ಸ್' ಹೀರೋಯಿನ್ ಬಾರ್ಬರಾ ಮೂರಿ
ಸಂಬಂಧದ ಬಗ್ಗೆ ಗುಲ್ಲು ಎದ್ದಿದ್ದರೆ ಹೃತಿಕ್ ಮಾತ್ರ
ಕೊಂಚವೂ ತಲೆಕೆಡಿಸಿಕೊಂಡಿಲ್ಲ. ಸಾಲದೆಂಬಂತೆ ತಮ್ಮ ಮತ್ತು ಬಾರ್ಬರಾ ನಡುವಿನ
ಚುಂಬನ ಪ್ರಕರಣದ ಸಹಜಾಭಿನಯದ ಬಗ್ಗೆ ಕಂತೆಗಟ್ಟಲೆ ಮಾಹಿತಿ ನೀಡುತ್ತಿದ್ದಾರೆ.
ಸಹಜ ಪ್ರೀತಿಯನ್ನು ತೆರೆ ಮೇಲೆ ಬಿಂಬಿಸುವಾಗ ಯಾವುದೇ ಹಿಂಜರಿಕೆ ಇರಬಾರದು
ಎನ್ನುವುದು ಹೃತಿಕ್ ನಂಬಿಕೆ. ಕೇನ್ಸ್‌ನಲ್ಲಂತೂ ಇಬ್ಬರೂ
ರತ
್ನಗಂಬಳಿ ಮೇಲೆ
ಜೊತೆಯಾಗಿ ಪೋಸು ಕೊಟ್ಟು ನಮ್ಮದು ಸೂಪರ್ ಜೋಡಿ ಎನ್ನುತ್ತಾ ಚಿತ್ರದೊಳಗೆ
ಸೆರೆಯಾಗಿ ಬಿಟ್ಟಿದ್ದಾರೆ.
ಅಮರ, ಮಧುರ, ಸ್ನೇಹ
ಹಾಲಿವುಡ್‌ನಲ್ಲಿ ನಿಜವಾದ ಸ್ನೇಹ ಇಲ್ಲ ಎಂದು
ಹೇಳುವವರಾರು? ವಿಶೇಷವಾಗಿ ಕೇಟ್ ವಿನ್ಸ್‌ಲೆಟ್ ಮತ್ತು ಲಿಯನಾರ್ಡೊ
ಡಿಕ್ಯಾಪ್ರಿಯೊ ಇರುವಾಗ! 'ಟೈಟಾನಿಕ್' ಚಿತ್ರೀಕರಣ ಸಂದರ್ಭ ಶುರುವಾದ ಅವರ
ಸ್ನೇಹ 'ರೆವೆಲ್ಯುಷನರಿ ರೋಡ್'ವರೆಗೂ ಮುಂದುವರಿದಿದೆ! ಅಷ್ಟೇ ಅಲ್ಲ, 'ಟೈಟಾನಿಕ್'
ಚಿತ್ರೀಕರಣ ಸಂದರ್ಭದಲ್ಲಿ ಲಿಯನಾರ್ಡೊ ಚಿನ್ನದ ಬಳೆ ಕೊಡುಗೆಯಾಗಿ ನೀಡಿದ್ದು
ಇಂದಿಗೂ ಕೇಟ್ ನೆನಪಿನಲ್ಲಿ ಚಿರಾಯುವಾಗಿದೆ. ಅಂದಿನಿಂದ ಇಂದಿನವರೆಗೂ ಕೇಟ್
ಆ ಬಳೆಯನ್ನು ಕೈಯಿಂದ
ತೆಗೆದೇ ಇಲ್ಲ! ಈ ಸ್ನೇಹ ಅಮರವಾಗಿರಲಿ...
ಬೆಂಕಿಯ ಕಿಡಿ
'ಟ್ರಾನ್ಸ್‌ಫಾರ್ಮರ್‍ಸ್' ಚಿತ್ರದ ಮಾದಕ ತಾರೆ
ಮೇಘನಾ ಫ್ಯಾಕ್ಸ್ ಕಾಲು ಕೆರೆದು ಜಗಳಕ್ಕೆ ಇಳಿಯುತ್ತಿದ್ದಾಳೆ. ಹೌದು ಕಣ್ರೀ,
ಸ್ಕಾರ್ಲೆಟ್ ಜಾನ್ಸ್‌ನ್ ತರಹ ಕಾಣುವುದು ನನಗಿಷ್ಟವಿಲ್ಲ ಎಂದು
ಇತ್ತೀಚೆಗಷ್ಟೇ ಬಾಂಬ್ ಹಾಕಿದ್ದಾಳೆ ಈ ಬೆಡಗಿ. ಸ್ಕಾರ್ಲೆಟ್ ತಾನು ಮಹಾ
ಬುದ್ಧಿವಂತೆ ಎಂದು ತೋರಿಸಿಕೊಳ್ಳುವ ಹುಚ್ಚಿನಲ್ಲಿ ಇಲ್ಲ ಸಲ್ಲದ ಟಾಕ್
ಶೋಗಳಲ್ಲೆಲ್ಲ ಭಾಗವಹಿಸಿ ದೊಡ್ಡ ದೊಡ್ಡ ಪದಗಳನ್ನು ಬಳಸಿ ಬೌದ್ಧಿಕ
ಪ್ರಾವೀಣ್ಯ ಪ್ರದರ್ಶಿಸುವ ಯತ್ನದಲ್ಲಿದ್ದಾಳೆ ಎನ್ನುವುದು ಮೇಘನಾ ಉವಾಚ!
ಫಾಕ್ಸ್ ನೋಡಲಷ್ಟೇ ಹಾಟ್ ಹಾಟ್ ತಾರೆಯಾಗಿಲ್ಲ... ಉಗುಳುವುದೂ ಬೆಂಕಿಯೇ
ಎನ್ನುವುದನ್ನು ಬಿಟ್ಟು ಇನ್ನೇನು ತಾನೇ ಹೇಳಬಹುದು?
ನೇಹಾ ಸರೀನ್