User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

 
ಇತರ ವಿಭಾಗಗಳು
 
ಇಷ್ಟೇ - ಇಷ್ಟು

ದೀಪಾ ಹಿರೇಗುತ್ತಿ : ಕವಯಿತ್ರಿ

 

ಕಾವ್ಯ ಪ್ರಕಾರವನ್ನೇ ಮಾಧ್ಯಮವಾಗಿ ಆಯ್ದುಕೊಂಡಿದ್ದು ಏಕೆ?

ಕಾವ್ಯ ಪ್ರಕಾರವನ್ನು ಪ್ರಜ್ಞಾಪೂರ್ವಕವಾಗಿ ನನ್ನ ಮಾಧ್ಯಮವಾಗಿ ಆಯ್ದುಕೊಳ್ಳುವ ಮೊದಲೇ ನಾನು ಕಾವ್ಯವನ್ನು ಬರೆಯಲಾರಂಭಿಸಿದ್ದೆ. ನಂತರ ಸಿಕ್ಕ ಪ್ರೋತ್ಸಾಹ ನನ್ನ ಕಾವ್ಯಜೀವನವನ್ನು ರೂಪಿಸಿದವು.

ನಿಮ್ಮ ಮಟ್ಟಿಗೆ ಕಾವ್ಯ ಎಂದರೆ ಏನು?

ಕವಿತೆ ಎಂದರೆ, ನಮ್ಮೆದುರು ನಾವೇ ಮುಖಾಮುಖಿಯಾಗುವ ಸುಂದರ ಕ್ಷಣ. ನಮ್ಮೊಂದಿಗೆ ನಾವೇ ಸಂವಾದಿಸುವ, ಸಂಭ್ರಮಿಸುವ ಕ್ಷಣ. ಆದ್ದರಿಂದಲೇ ನನ್ನ ಪಾಲಿಗೆ ಕಾವ್ಯ ಎಂದರೆ ಆಪ್ತಸ್ನೇಹಿತನಿದ್ದಂತೆ.

ನಿಮ್ಮ ತಲೆಮಾರಿನವರಲ್ಲಿ ಕವಿತೆ ಎಂದರೆ ಏನು?

ಇಂದಿನ ಕೆಲವು ಯುವ ಕವಿಗಳಿಗೆ, ಕಾವ್ಯವೆಂದರೆ ಒತ್ತಡದಿಂದ ಬಿಡುಗಡೆ ಪಡೆಯುವ ಅವಕಾಶ. ಇನ್ನು ಕೆಲವರಿಗೆ ಒತ್ತಡದ ಮುಂದುವರಿಕೆ, ಮತ್ತೂ ಕೆಲವರಿಗೆ ಒಂದು ಭಾವನಾತ್ಮಕ ಅನಿವಾರ್ಯತೆ.

ನಿಮ್ಮ ತಲೆಮಾರಿನ ಕವಿಗಳ ಕುರಿತು ವಿಮರ್ಶಕರ ಧೋರಣೆ ಏನು?

ಸಕಾರಾತ್ಮಕವಾಗಿದೆ. ಇಂದಿನ ಕವಿಗಳ ಬಗ್ಗೆ ವಿಮರ್ಶಾ ಲೋಕ ನಿರ್ಲಕ್ಷ್ಯ ಧೋರಣೆ ತಾಳಿದೆ ಎಂಬ ಆಪಾದನೆಗಳ ನಡುವೆಯೂ ಕಿರಿಯರ ಕವಿತೆಗಳನ್ನು ಓದಿ, ಅವರ ಪ್ರತಿಭೆಯನ್ನು ಗುರುತಿಸಿ ಬೆನ್ನು ತಟ್ಟುವ ಹಿರಿಯರಿಗೂ ಕೊರತೆಯಿಲ್ಲ.

ಟಿಎಸ್‌ಐ

ಕೆ.ಆರ್. ಅರುಣ್ ಕುಮಾರ್

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .