User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಮುಖಪುಟ ಲೇಖನ
 

ಕೊನೆಗೂ ಆ ಫೋಟೋ ತೆಗೆದೇ ಬಿಟ್ಟೆ...

ಶತಪ್ರಯತ್ನ ನಡೆಸಿದರೂ ಫೋಟೋ ತೆಗೆಯಲು ಅವಕಾಶ ಸಿಗಲಿಲ್ಲ. ಆದರೂ ಹರಸಾಹಸದಿಂದ ಮುನ್ನುಗ್ಗಿದ ಈ ಛಾಯಾಗ್ರಾಹಕ ಬ್ಲೂ ಸ್ಟಾರ್ ಕಾರ್ಯಾಚರಣೆಯಿಂದ ಹಾನಿಗೊಳಗಾಗಿದ್ದ ಅಕಾಲ್ ತಖ್ತ್ ಫೋಟೋ ತೆಗೆದೇ ಬಿಟ್ಟರು... ಅಂದಿನ ಅನುಭವ ಹಂಚಿಕೊಂಡಿದ್ದಾರೆ ಪ್ರಮೋದ್ ಪುಷ್ಕರಣ

 

ಸ್ವರ್ಣಮಂದಿರದ ಒಳಗೆ ಅವಿತಿದ್ದ ಭಯೋತ್ಪಾದಕರ ವಿರುದ್ಧ 1984ರ ಜೂನ್ 3ರಂದು ಕಾರ್ಯಾಚರಣೆ ನಡೆಸಲು ಸರ್ಕಾರ ಖಚಿತ ನಿರ್ಧಾರ ಕೈಗೊಂಡಾಗಿತ್ತು. ಹೀಗಾಗಿ ಸೇನೆಯನ್ನೂ ನಿಯೋಜಿಸಿತ್ತು. ಇನ್ನೇನು ಶೀಘ್ರವೇ ಸೇನಾ ಕಾರ್ಯಾಚರಣೆ ನಡೆಯಲಿದೆ ಎನ್ನುವುದು ಎಲ್ಲರಿಗೆ ಮನದಟ್ಟಾಗಿತ್ತು.

ಜೂನ್ 4ರಂದು ನಾನು ರೈಲಿನಲ್ಲಿ ಅಮೃತಸರಕ್ಕೆ ಬಂದಿಳಿದೆ. ನಗರವಿಡೀ ಸೇನಾ ನಿಯಂತ್ರಣದಲ್ಲಿತ್ತು. ಪತ್ರಕರ್ತರನ್ನೆಲ್ಲ ವಾಪಾಸಾಗುವಂತೆ ಸೂಚಿಸಲಾಯಿತು. ಆದರೆ ನಾವ್ಯಾರೂ ಹಿಂತಿರುಗಲು ಒಪ್ಪಲಿಲ್ಲ. ಕೊನೆಗೆ ಸೇನಾ ವಾಹನವೊಂದರಲ್ಲಿ ನಮ್ಮನ್ನೆಲ್ಲ ಜಲಂಧರ್ಗೆ ಕಳುಹಿಸಲಾಯಿತು.

ದೆಹಲಿಗೆ ಮರಳುವ ಬದಲಾಗಿ ನಾನು ಅಮೃತಸರದಲ್ಲಿ ಓಡಾಡಬಯಸಿದ್ದೆ. ಸ್ವರ್ಣ ಮಂದಿರದ ಪಕ್ಕವೇ ಇದ್ದ ನನ್ನ ತಾತ (ತಾಯಿಯ ತವರುಮನೆ)ನ ಮನೆಗೆ ಕಷ್ಟಪಟ್ಟು ಹೋದೆ. ನಾನು ಅಲ್ಲೇ ಬೆಳೆದ ಕಾರಣದಿಂದ ಆ ಪರಿಸರ ನನಗೆ ಪರಿಚಿತ. ಹಾಗಾಗಿ ಸೇನಾ ನಿಯೋಜನೆಯ ಫೋಟೋ ತೆಗೆಯುವುದು, ಭದ್ರತಾ ವ್ಯವಸ್ಥೆಯ ವಿವರ ಪಡೆಯುವುದು, ಪ್ರತ್ಯಕ್ಷದರ್ಶಿಗಳ ಅನುಭವ ಮತ್ತು ಅಮೃತಸರದಲ್ಲಿ ನೆಲೆಸಿದ್ದ ಹಿರಿಯರ ಆಸಕ್ತಿದಾಯಕ ವಿಚಾರಗಳನ್ನು ಕಲೆ ಹಾಕುವ ಕಾರ್ಯದಲ್ಲಿ ನಿರತನಾದೆ.

ಆದರೆ ನನ್ನ ಈ ಚಟುವಟಿಕೆಗಳಿಂದ ಅಧಿಕಾರಿಗಳಲ್ಲಿ ಸಂಶಯ ಮೂಡಿತು. ಹಾಗೆಯೇ ಸೇನೆಗೆ ನನ್ನ ಕಾರ್ಯ ಚಟುವಟಿಕೆಗಳ ಸುದ್ದಿಯೂ ತಲುಪಿತು. ಅವರು ಮನೆಗೆ ಬಂದು ನನ್ನ ಕುಟುಂಬವನ್ನು ಬೆದರಿಸಿದರು. ಕ್ಯಾಮರಾದ ರೀಲು ತೆಗೆದು ನಾನು ತೆಗೆದ ಫೋಟೋಗಳನ್ನೆಲ್ಲ ನಾಶ ಮಾಡಿದರು. ಆ ಸಂದರ್ಭದಲ್ಲಿ ನನ್ನ ಕುಟುಂಬವೂ ವಾಪಾಸು ಮರಳುವಂತೆ ನನಗೆ ಸಲಹೆ ನೀಡಿತು. ನನಗೆ ಬೇರೆ ಆಯ್ಕೆಗಳೇ ಇರಲಿಲ್ಲ.

ಮನೆ ಬಿಟ್ಟು ಹೊಟೇಲ್ನಲ್ಲಿ ಉಳಿದುಕೊಂಡೆ. ಗುರುತು ಸಿಗದಂತೆ ಅಲ್ಲಿ ತುಂಬಾ ದಿನ ಇರುವ ಹಾಗಿರಲಿಲ್ಲ. ಅವಕಾಶ ಸಿಕ್ಕಾಗಲೆಲ್ಲಾ ನಾನು ಫೋಟೋ ತೆಗೆಯುತ್ತಲೇ ಇದ್ದೆ. ನಾನಲ್ಲಿರುವುದು ಇತರರಿಗೆ ತಿಳಿದ ಕೂಡಲೇ ಹೊಟೇಲ್ ತೊರೆದೆ. ಆದರೆ ಅವಸರದಲ್ಲಿ ನನ್ನ ಕ್ಯಾಮರಾ ಲೆನ್ಸ್ ಹೊಟೇಲ್ ಕೋಣೆಯಲ್ಲೇ ಬಿಟ್ಟು ಬಂದಿದ್ದೆ. ಅದನ್ನು ಪಡೆಯಲು ಹೊಟೇಲ್ಗೆ ಮರಳಿದಾಗ ಸೇನಾಧಿಕಾರಿಗಳು ನನಗಾಗಿ ಕಾಯುತ್ತಿದ್ದರು. ಅವರು ನನ್ನನ್ನು ಕಾರಿನಲ್ಲಿ ಅಂಬಾಲಕ್ಕೆ ಕರೆದೊಯ್ದರು.

ಆದರೆ ನಾನು ಅಷ್ಟು ಬೇಗನೇ ಸೋಲೊಪ್ಪಿಕೊಳ್ಳಲು ಸಿದ್ಧನಾಗಿರಲಿಲ್ಲ. ಜೂನ್ 8ರಂದು ಅಂಬಾಲದಿಂದ ವಾಹನವೊಂದನ್ನು ಬಾಡಿಗೆ ಪಡೆದ ನಾನು ಅಮೃತಸರಕ್ಕೆ ಹೋಗುವ ದಾರಿಯಲ್ಲಿ ಚೆಕ್ಪೋಸ್ಟ್ ಒಂದನ್ನು ದಾಟಬೇಕಾಗಿತ್ತು. ತಂತಿ ಸಂದೇಶದಲ್ಲಿ ಎಚ್ಚರಿಕೆ ಬಂದಿದ್ದರಿಂದಾಗಿ ಅಲ್ಲಿನ ಭದ್ರತಾ ಸಿಬ್ಬಂದಿಗೆ ನಾನು ಸಿಕ್ಕಿಬಿದ್ದೆ. ನನ್ನ ಜೊತೆ ಇಂಡಿಯನ್ ಎಕ್ಸ್ಪ್ರೆಸ್ ವರದಿಗಾರ ಓಂಕಾರ್ ಗಾರ್ಗ್ ಅವರೂ ಇದ್ದರು. ಸೇನಾಧಿಕಾರಿಗಳ ಮುಷ್ಟಿಯಿಂದ ತಪ್ಪಿಸಿಕೊಳ್ಳಲು ನನ್ನ ಹಳೇ ಸ್ನೇಹಿತ ಮೇಜರ್ ರಾಜ್ ಮನ್ಚಂದಾ ಅವರ ಸಹಾಯ ಯಾಚಿಸಿದೆ. ಅವರು ತಮ್ಮ ಪರಿಚಿತ ಅಧಿಕಾರಿಗಳ ಪ್ರಭಾವ ಬಳಸಿ ನಮ್ಮನ್ನು ಬಿಡುಗಡೆ ಮಾಡಿಸಿದರು.

ನಾವು ಚಂಡೀಗಢಕ್ಕೆ ಮರಳಿದೆವು. ಆವರಣದ ಒಳಗೆ ನಾನು ಫೋಟೋ ತೆಗೆಯುತ್ತಿದ್ದಾಗ ಸೇನೆ ನನ್ನನ್ನು ಮತ್ತೊಮ್ಮೆ ಬಂಧಿಸಿ ಕೇಂದ್ರ ಕಚೇರಿಗೆ ಕರೆದೊಯ್ದಿತು. ಅಲ್ಲಿಂದ ನಮ್ಮನ್ನು ಮೊಹಾಲಿಗೆ ಕರೆದೊಯ್ಯಲಾಯಿತು. ಜೂನ್ 14ರವರೆಗೆ ಅಲ್ಲಿಯೇ ಸೇನೆಯ ವಶದಲಿದ್ದೆವು. ಆ ಹೊತ್ತಿಗೆ ಕಾರ್ಯಾಚರಣೆ ಮುಗಿದಾಗಿತ್ತು. ಆದರೂ ಸಂಪೂರ್ಣ ನಾಶವಾಗಿದ್ದ ಅಕಾಲ್ ತಖ್ತ್ ಫೋಟೋವನ್ನು ಅಧಿಕಾರಿಗಳ ಕಣ್ತಪ್ಪಿಸಿ ತೆಗೆಯುವಲ್ಲಿ ನಾನು ಯಶಸ್ವಿಯಾದೆ. 

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location

ಮುಖಪುಟ ಲೇಖನದಲ್ಲಿ ಇನ್ನೇನಿದೆ

25 ವರ್ಷ ಕಳೆದ ಮೇಲೆ ಆಪರೇಷನ್ ಬ್ಲೂಸ್ಟಾರ್

25 ವರ್ಷ ಕಳೆದ ಮೇಲೆ ಆಪರೇಷನ್ ಬ್ಲೂಸ್ಟಾರ್

ಬದಲಾವಣೆ ಗಾಳಿಗೆ ಬಾಗಿದ ಪಂಜಾಬ್

1984ರ ಕರಾಳ ಇತಿಹಾಸದತ್ತ ಕಣ್ಣೋಟ

ಭಗತ್‌ಸಿಂಗ್‌ಗಿಂತ ಜನಪ್ರಿಯ ಭಿಂದ್ರನ್‌ವಾಲೆ

‘ಸಿಖ್ ಸಿಪಾಯಿ ದಂಗೆ’ಯ ಮರೆಯಲಾಗದ ನೆನಪುಗಳು

ದುರ್ಗಂಧದ ನಡುವೆ ಕಳೆದ ಆ ದಿನ

ಆಪರೇಷನ್ ಬ್ಲೂ ಸ್ಟಾರ್ ಅವಿವೇಕದ ಕ್ರಮ

ಖಾಲಿಸ್ತಾನ್ ಕನಸಿಗೆ ಕೊನೆಯಿಲ್ಲ?

ಪ್ರಬಂಧಕ್ ಸಮಿತಿ ಪಾತ್ರ

‘ಸಿಖ್ಖರ ವ್ಯಾಟಿಕನ್’ ಮೇಲಿನ ದಾಳಿ ಮಹಾಪರಾಧ

ಆಧುನಿಕ ಪಂಜಾಬ್‌ನ ಹತ್ತು ಮುಖಗಳು

ಕೊನೆಗೂ ಆ ಫೋಟೋ ತೆಗೆದೇ ಬಿಟ್ಟೆ...

‘ಪಾಕ್ ಸೇನೆಗೆ ಸಿಖ್ಖರೂ ಸೇರಬಹುದು’

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .