ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಪ್ರತಿಧ್ವನಿ
ಓದುಗರ ಪತ್ರ
 

Letters- The Sunday Indian - Kannada

ಸರ್ಕಾರದ ನಿರ್ಲಕ್ಷ್ಯ ಧೋರಣೆ

ಟಿಎಸ್‌ಐನ ಮುಖಪುಟ ಲೇಖನ 'ಹಸಿರು ಮತ್ತು ಕೆಂಪಿನ ಕರಿನೆರಳು' ದೇಶದಲ್ಲಿ ಜಿಹಾದಿ ಮತ್ತು ನಕ್ಸಲ್ ಅಟ್ಟಹಾಸದ ಸಂಪೂರ್ಣ ಚಿತ್ರಣ ನೀಡಿದೆ ಜೊತೆಗೆ ಈ ಕುರಿತು ಸರ್ಕಾರದ ನಿರ್ಲಕ್ಷ್ಯ ಧೋರಣೆ ಹೇಗಿದೆ ಎಂಬುದನ್ನು ಅತ್ಯಂತ ವಿಶ್ಲೇಷಣಾತ್ಮಕವಾಗಿ ತೆರೆದಿಟ್ಟಿದೆ ಮೊನ್ನೆಯಷ್ಟೇ ಕರ್ನಾಟಕ ಮತ್ತು ಗುಜರಾತ್‌ನಲ್ಲಿ ಸಂಭವಿಸಿದ ಭಯೋತ್ಪಾದನಾ ಕೃತ್ಯಗಳು, ಭಯೋತ್ಪಾದನೆ ಎಂಬುದು ಕೇವಲ ಉತ್ತರಭಾರತಕ್ಕೆ ಮಾತ್ರ ಸೀಮಿತವಾಗಿರದೆ ದಕ್ಷಿಣ ಭಾರತದಲ್ಲೂ ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಲೇ ಇದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಭಯೋತ್ಪಾದಕರು ಇಂತಹ ಕೃತ್ಯ ಹೆಚ್ಚಿಸುತ್ತಿರಲು ಭಾರತೀಯ ಪೊಲೀಸ್ ಮತ್ತು ಗುಪ್ತಚರ ಇಲಾಖೆ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸದಿರುವುದೇ ಪ್ರಮುಖ ಕಾರಣ ಒಟ್ಟಿನಲ್ಲಿ ಸರ್ಕಾರ ದೇಶದ ಪ್ರಗತಿಗೆ ಮಾರಕವಾದ ಭಯೋತ್ಪಾದನೆ ಹೊಡೆದೋಡಿಸಲು ಗಂಭೀರ ಚಿಂತನೆ ನಡೆಸಿ ಸೂಕ್ತಕ್ರಮ ಕೈಗೊಳ್ಳಬೇಕು ಅಲ್ಲದೆ ಸರ್ಕಾರ ಇಲ್ಲಿನ ಪೊಲೀಸ್ ವ್ಯವಸ್ಥೆ ಮತ್ತು ಭಯೋತ್ಪಾದನಾ ನಿಗ್ರಹ ದಳವನ್ನು ಸದೃಢಗೊಳಿಸಬೇಕು ಇಲ್ಲದೆ ಹೋದರೆ ಈಗಾಗಲೇ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ದೇಶ ಇಂತಹ ಹಸಿರು ಮತ್ತು ಕೆಂಪಿನ ಕರಿನೆರಳನ್ನು ಗಂಭೀರವಾಗಿ ಪರಿಗಣಿಸದೆ ಹೋದಲ್ಲಿ, ಭಯೋತ್ಪಾದಕರು ಮುಂದೆ ದೇಶದ ಆಡಳಿತ ಚುಕ್ಕಾಣಿ ಹಿಡಿದರೆ ಅಚ್ಚರಿ ಪಡಬೇಕಾಗಿಲ್ಲ

ವಿಜಯ್ ಕುಮಾರ್
ಮೂಡಬಿದಿರೆ

ಭಯೋತ್ಪಾದನೆ ನಿಗ್ರಹಕ್ಕೂ ಪೊಳ್ಳು ನೆಪ

ಭಯೋತ್ಪಾದನೆ ಕುರಿತಂತೆ ಟಿಎಸ್‌ಐನಲ್ಲಿ ಮೂಡಿಬಂದ ಮುಖಪುಟ ಲೇಖನ 'ಹಸಿರು ಮತ್ತು ಕೆಂಪಿನ ಕರಿನೆರಳು' ತುಂಬಾ ಮೆಚ್ಚುಗೆಯಾಯಿತು ಒಂದು ಕಡೆ ಅಣು ಒಪ್ಪಂದ ನಡೆದರೆ ಇನ್ನೊಂದು ಕಡೆ ಸರಣಿ ಸ್ಪೋಟದ ದು:ಸ್ವಪ್ನ 'ಕಳ್ಳನಿಗೊಂದು ಪಿಳ್ಳೆ ನೆವ' ಎಂಬಂತೆ ವಿರೋಧ ಪಕ್ಷದವರೇ ಇದಕ್ಕೆ ಕಾರಣ ಎನ್ನುವ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ನಿಜ ಹೇಳಬೇಕೆಂದರೆ ನಮ್ಮ ರಾಜಕಾರಣಿಗಳೇ ದೊಡ್ಡ 'ಭಯೋತ್ಪಾದಕರು' ಪರಿಹಾರ ಘೋಷಿಸುವುದರಲ್ಲಷ್ಟೇ ಇವರು ನಿಸ್ಸೀಮರು ಇಂತಹ ಸ್ಪೋಟ ನಡೆದಾಗಷ್ಟೇ ಎಚ್ಚೆತ್ತುಕೊಳ್ಳುವ ಪ್ರವೃತ್ತಿಯಿಂದಲೇ ಈ ಸಮಸ್ಯೆ, ಆತಂಕ ಸೃಷ್ಟಿಯಾಗಿದೆ ಅಧಿಕಾರದ ಚುಕ್ಕಾಣಿ ಹಿಡಿದವರು ತಾವು ಮಾಡುವ ಕೆಲಸವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದರಷ್ಟೇ ಭಯೋತ್ಪಾದನೆ ತಡೆಗಟ್ಟಲು ಸಾಧ್ಯ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೆಸೆಯುವ ಬದ್ಧತೆಯನ್ನು ಅರ್ಥಪೂರ್ಣ ಹಾಗೂ ಪ್ರಾಮಾಣಿಕ ರೀತಿಯಲ್ಲಿ ಅನುಷ್ಟಾನಗೊಳಿಸಬೇಕಾಗಿರುವುದು ಸದ್ಯದ ಅನಿವಾರ್ಯತೆ

ವಿಶ್ವಕುಮಾರ
ರಾಯಚೂರು

ರಾಜಕೀಯ ಇಚ್ಛಾಶಕ್ತಿ ಕೊರತೆ

Letters- The Sunday Indian - Kannada

ಭಯೋತ್ಪಾದನಾ ನಿಗ್ರಹ ದಳ ಬಲಪಡಿಸಬೇಕು ಎಂದು ಟಿಎಸ್‌ಐ 'ಹಸಿರು ಮತ್ತು ಕೆಂಪಿನ ಕರಿನೆರಳು' ಮುಖಪುಟ ಲೇಖನದಲ್ಲಿ ಹೇಳಿರುವುದು ಅಕ್ಷರಶಃ ಒಪ್ಪುವಂತಹುದು. ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥ ಬದಿಗೊತ್ತಿ ಭಯೋತ್ಪಾದನೆ ನಿಗ್ರಹ ಮಾಡಬೇಕು ಎನ್ನುವ ಇಚ್ಛಾಶಕ್ತಿಯೊಂದಿಗೆ ದಕ್ಷ ಮತ್ತು ಸೂಕ್ತ ಅಧಿಕಾರಿಗಳನ್ನು ಭಯೋತ್ಪಾದನೆ ನಿಯಂತ್ರಣಕ್ಕೆ ನೇಮಿಸಬೇಕು. ಪ್ರತಿಯೊಂದು ನಗರದಲ್ಲೂ ಬಾಂಬ್ ನಿಷ್ಕ್ರಿಯ ದಳ ಮತ್ತು ಭಯೋತ್ಪಾದನಾ ನಿಗ್ರಹ ದಳದ ತುಕಡಿ ನೇಮಿಸಬೇಕು. ಭಯೋತ್ಪಾದನೆ ನಿಗ್ರಹಕ್ಕೆ ಪೋಟಾ ಕಾಯ್ದೆ ಜಾರಿಗೆ ತರುವುದು ಅನಿವಾರ್ಯ. ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಗುರಿ ಸಾಧನೆಗಾಗಿ ಧರ್ಮವನ್ನು ಉಪಯೋಗಿಸಿಕೊಳ್ಳಬಾರದು. ರಾಜಕೀಯ ಪಕ್ಷಗಳು ಒಬ್ಬರ ಮೇಲೊಬ್ಬರು ಕೆಸರೆರಚುವುದನ್ನು ನಿಲ್ಲಿಸಿ ಜೊತೆಯಾಗಿ ಸೇರಿಕೊಂಡು ಒಂದೇ ಮನಸ್ಸಿನಲ್ಲಿ ಭಯೋತ್ಪಾದನೆ ನಿಗ್ರಹಕ್ಕೆ ಪ್ರಯತ್ನಪಡಬೇಕು. ಇದರ ಜೊತೆಗೆ ಸಾರ್ವಜನಿಕರು ಭಯೋತ್ಪಾದಕರ ಬಗ್ಗೆ ತಮ್ಮಲ್ಲಿ ಮಾಹಿತಿ ಇದ್ದಲ್ಲಿ ಪೊಲೀಸ್ ಇಲಾಖೆಗೆ ಸಹಕರಿಸಬೇಕು. ಒಟ್ಟಾರೆಯಾಗಿ ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಪಟ್ಟಂತೆ ರಾಜಕೀಯ ಪಕ್ಷಗಳು ಕಾರ್ಯಪ್ರವೃತ್ತವಾಗಲೇ ಬೇಕಾಗಿದೆ.

ವಿನಿತ್ ಸ್ವರೂಪ್
ಮಂಗಳೂರು

ಕೇವಲ ಮುಖವಾಡ

'ಗ್ರಾಮೀಣ ಭಾರತ: ಕೆಂಪು ಸೈನ್ಯದ ಆರ್ಭಟ' (ಧ್ರುತಿಕಂ ಮೊಹಂತಿ ಮತ್ತು ಅನಿಲ್ ದ್ವಿವೇದಿ) ಲೇಖನ ಕೇಂದ್ರ ಹಾಗೂ ರಾಜ್ಯಗಳ ಆಡಳಿತಗಾರರ ಮತ್ತು ಬುದ್ಧಿಜೀವಿಗಳ ಭ್ರಮೆಯ ಪರದೆ ತೆಗೆದು ಹಾಕಿದೆ ಜಿಹಾದಿಗಳು, ಉಗ್ರಗಾಮಿಗಳಿಗಿಂತ ಕೆಂಪು ಸೈನಿಕರ ಆರ್ಭಟವೇ ಈಗ ಅಧಿಕವಾಗಿದೆ ಕೇಂದ್ರ ಗೃಹಸಚಿವರು ಹೇಳಿರುವಂತೆ ನಕ್ಸಲರು ದಾರಿ ತಪ್ಪಿದ ಯುವಕರಲ್ಲ ಬಡವರು, ರೈತರು ಹಾಗೂ ಆದಿವಾಸಿಗಳ ಕಲ್ಯಾಣಕ್ಕಾಗಿ ಹೋರಾಡುವ ಸಂಘಟನೆಯೆಂದು ಅವರನ್ನು ಭಾವಿಸಿರುವುದೇ ತಪ್ಪು ಅವರು ಬಡವರ ಹಾಗೂ ಆದಿವಾಸಿಗಳ ಮತ್ತು ರೈತರಿಗೆ ಮೂಲಭೂತ

ಸೌಲಭ್ಯಗಳನ್ನು ಒದಗಿಸುವ ಮುಖವಾಡ ಧರಿಸಿದ್ದಾರೆ ಸಮಗ್ರ ಭಾರತದ ಆಂತರಿಕ ಆಡಳಿತ ವ್ಯವಸ್ಥೆ ಹದಗೆಡಿಸಿ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸಾಮ್ರಾಜ್ಯ ಸ್ಥಾಪಿಸುವುದೇ ಅವರ ಮುಖ್ಯ ಗುರಿ ಈಗಾಗಲೇ ಗ್ರಾಮೀಣ ಭಾಗದಲ್ಲಿ ಸಾವಿರಾರು ಜನರನ್ನು ಕೊಂದು ರಕ್ತದ ಕೋಡಿಯನ್ನೇ ಹರಿಸಿದ್ದಾರೆ ನೇಪಾಳದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯ ಸೋಗಿನಲ್ಲಿ ನೇಪಾಳದ ರಾಜರ ಆಡಳಿತವನ್ನು ತೆಗೆದು ಹಾಕಿರುವುದು ಈಗಿನ ಮಟ್ಟಿಗೆ ಒಳ್ಳೆ ಕಾರ್ಯ ಎಂದೆನಿಸಿದರೂ ಮುಂದೆ ಅದೇ ನೇಪಾಳದಿಂದ ಒರಿಸ್ಸಾದವರೆಗೂ ಕೆಂಪು ಕಾರಿಡಾರ್ ಸ್ಥಾಪಿಸುವ ದುಷ್ಟ ಯೋಜನೆ ಇದರಲ್ಲಡಗಿದೆ ಈ ಮಾವೋವಾದಿಗಳದ್ದು ಕೇವಲ ಒಂದು ಸೈದ್ಧಾಂತಿಕ ಸಂಘಟನೆ ಎಂದು ಭಾವಿಸದೆ ನಮ್ಮ ರಾಷ್ಟ್ರದ ಅಸ್ತಿತ್ವದ ಬುಡಕ್ಕೇ ಕೊಡಲಿ ಪೆಟ್ಟು ನೀಡುತ್ತಿದ್ದಾರೆ ಎಂಬುದನ್ನು ಸರ್ಕಾರ ಗಮನದಲ್ಲಿರಿಸಬೇಕು

ರೇಚ ರೇವಡಿಗಾರ
ಸಿಂಧಗಿ

ಗುಪ್ತಚರ ಇಲಾಖೆಯೇ ಕಾರಣ

'ಉಗ್ರರ ಅಟ್ಟಹಾಸದೆದುರು ಎಟಿಸಿ ಎಂಬ ಬಡಕಲು ಹಸು' (ಚಿತ್ರಾ ಕರ್ಕೇರಾ) ಲೇಖನ ವಿಚಾರಯೋಗ್ಯವಾಗಿತ್ತು ಪ್ರಸ್ತುತ ಎಟಿಸಿಯಲ್ಲಿ ಕೇವಲ ಐದು ಜನ ಸಿಬ್ಬಂದಿಗಳಿರುವುದು 'ಭಯೋತ್ಪಾದನೆ ಹತ್ತಿಕ್ಕುವುದು ನಮ್ಮ ಗುರಿ' ಎನ್ನುವವರು ಎಷ್ಟು ಪರಿಣಾಮಕಾರಿಯಾಗಿ ಭಯೋತ್ಪಾದನೆಯನ್ನು ಹತ್ತಿಕ್ಕಬಹುದು ಎಂಬುದಕ್ಕೆ ಸಣ್ಣ ಉದಾಹರಣೆ ಆಡಳಿತ ಯಂತ್ರ ಐದು ಕೋಕನ್ನಡಿಗರಿಗೆ ಕೋಟಿಗೊಬ್ಬನಂತೆ ಸಿಬ್ಬಂದಿ ನೇಮಿಸಿರುವುದು ಹಾಸ್ಯಾಸ್ಪದ! 'ಊರಿಗೆ ಊರೇ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಮುಚ್ಚಿದರಂತೆ' ಎಂಬಂತೆ ಬಾಂಬ್ ಸ್ಪೋಟವಾದ ನಂತರವೇ ನಮ್ಮ 'ಇಲಾಖೆ'ಗಳು ನಿದ್ದೆಯಿಂದ ಎಚ್ಚರಗೊಳ್ಳುವುದು ಮನುಕುಲಕ್ಕೆ ಒದಗಿದ ಮಾರಿಯಂತಿರುವ ಭಯೋತ್ಪಾದನೆಯನ್ನು ಹತ್ತಿಕ್ಕಲು ಸಾಧ್ಯವಿಲ್ಲವೇ? ಖಂಡಿತ ಸಾಧ್ಯವಿದೆ ಮಾಜಿ ಪೊಲೀಸ್ ಕಮಿಷನರ್ ಹೆಚ್ಟಿ ಸಾಂಗ್ಲಿಯಾನ ಹೇಳಿದಂತೆ ಗುಪ್ತಚರ ಇಲಾಖೆಗಳ ವೈಫಲ್ಯದಿಂದಲೇ ಇಂತಹ ಘಟನೆಗಳು ಸಂಭವಿಸುತ್ತಿರುವುದು ಎಲ್ಲೂ ಸಲ್ಲದವರನ್ನು ಗುಪ್ತಚರ ಇಲಾಖೆಯಲ್ಲಿ ಕೂರಿಸುವ ಮಹಾಕಾರ್ಯ ಇನ್ನಾದರೂ ಕೊನೆಯಾಗಬಹುದೇ?

ಇರ್ಷಾದ್ಎಂ ವೇಣೂರು
ಉಜಿರೆ

ಹಿರಿಯಣ್ಣನ ಸ್ವಾರ್ಥಪರತೆ

'ಭಯೋತ್ಪಾದನೆ ವಿರುದ್ಧ ಸಮರದ ಕುಯಿಲು ಕೊಯ್ದ ಪಿಎಂಸಿ ಉದ್ಯಮ' (ಅರಿಂದಮ್ ಚೌಧುರಿ) ಸಂಪಾದಕೀಯದಲ್ಲಿ ಅಮೆರಿಕದ ಧೋರಣೆ, ಸ್ವಾರ್ಥಪರತೆಗೆ ಕನ್ನಡಿ ಹಿಡಿಯಲಾಗಿದೆ ಅಮೆರಿಕದಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರ ಜಗತ್ತಿಗೆ ಹಿರಿಯಣ್ಣನಾಗಿ ಏನೇ ಮಾಡಿದರೂ ಸರಿ ಎನ್ನುವ ಮನೋಭಾವನೆಯಲ್ಲಿ ಜಗತ್ತನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಏನೆಲ್ಲಾ ಪ್ರಯತ್ನ ನಡೆಸುತ್ತಿದೆ ಇರಾನಿನಲ್ಲಿ ತನ್ನ ಉದ್ದೇಶ ಸಾಧನೆಗಾಗಿ ಬಡವರನ್ನು ದಾಳಗಳನ್ನಾಗಿ ಬಳಸಿಕೊಳ್ಳುತ್ತಿದೆ ಇದಕ್ಕೆ ಪೂರಕವಾಗಿ ಪಿಎಂಸಿ ಎಂಬ ಖಾಸಗಿ ಉದ್ಯಮವು ಕೇವಲ ಆರ್ಥಿಕ ಉದ್ದೇಶಕ್ಕಾಗಿ ಬಡರಾಷ್ಟ್ರಗಳ ಬಡಜನತೆಯನ್ನು ದಾಳವಾಗಿ ಮಾಡಿಕೊಂಡು ಅವರಿಗೆ ಅನ್ನದ ಆಮಿಷವೊಡ್ಡಿ ತಮ್ಮ ಸೇನಾ ಪಡೆಗೆ ಸೇರಿಸಿ ನಂತರ ಅಮೆರಿಕದಂತಹ ಬಲಶಾಲಿ ರಾಷ್ಟ್ರಗಳ ಸ್ವಹಿತ ಕಾಪಾಡಲು ಇವರ ಪ್ರಾಣ ಒತ್ತೆಯಿಡುವುದು ಎಷ್ಟು ಸರಿ? ಪಿಎಂಸಿಗಳ ಈ ಧೋರಣೆಯಿಂದ ಜಗತ್ತಿನ ಸ್ಥಿತಿವಂತ ರಾಷ್ಟ್ರಗಳು ಇದರ ಸಹಾಯ ಪಡೆದು ಏನು ಬೇಕಾದರು ಮಾಡಬಹುದು ಎಂಬುದು ಸಾಬೀತಾಗುತ್ತದೆ ಈ ನಿಟ್ಟಿನಲ್ಲಿ ವಿಶ್ವಶಾಂತಿ ಕಾಪಾಡುವ ವಿಶ್ವಸಂಸ್ಥೆಯ ಅಸ್ತಿತ್ವಕ್ಕೆ ಕೊಡಲಿಪೆಟ್ಟು ಬಿದ್ದಂತಾಗಿದೆ ಅಮೆರಿಕದ ಈ ಧೋರಣೆಯನ್ನೇ ಜಗತ್ತಿನ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಮ್ಮ ಹಿತಕ್ಕಾಗಿ ಬಳಸಿದರೆ ಮತ್ತೊಮ್ಮೆ ವಸಾಹತುಶಾಹಿ ಆಳ್ವಿಕೆ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ

ನೇತ್ರಾ ಎಲ್ ಎಸ್
ಚಿತ್ರದುರ್ಗ

ಕಲೆಗೆ ಪೋಷಣೆ ದೊರಕಬೇಕು

'ನೃತ್ಯಗ್ರಾಮದಲಿ ಗೆಜ್ಜೆನಾದ ಕ್ಷೀಣ' (ಡಿಎಸ್ ಶ್ರೀಕಲಾ) ಲೇಖನ ಕಲಾಸಕ್ತರಲ್ಲಿ ಕುತೂಹಲ ಮೂಡಿಸುವಂತಿತ್ತು ಪ್ರಸಿದ್ಧ ನೃತ್ಯಗಾತಿ ಪ್ರೊತಿಮಾ ಬೇಡಿಯವರು

ಭಾರತೀಯ ನೃತ್ಯ ಪ್ರಕಾರ ದೇಶಾದ್ಯಂತ ಪ್ರಸಾರಗೊಂಡು ಬೆಳೆಯಬೇಕೆಂಬ ಆಕಾಂಕ್ಷೆ ಹೊತ್ತು ನೃತ್ಯ ಗ್ರಾಮವನ್ನೇ ಕಟ್ಟಿದರು ಭಾರತೀಯ ನೃತ್ಯಗಳನ್ನು ಬೆಳೆಸುವಲ್ಲಿ ಇಂತಹ ಸಂಸ್ಥೆ ಸಕ್ರಿಯ ಕಾರ್ಯದಲ್ಲಿ ತೊಡಗಿದೆ ಎಂಬ ವಿಚಾರ ಸಾಕಷ್ಟು ಜನರಿಗೆ ತಿಳಿಯದ ವಿಷಯ ಭಾರತೀಯ ನೃತ್ಯ, ಕಲೆ ಮತ್ತು ಪರಂಪರೆ ಉಳಿಸುವ ಇಂತಹ ನೃತ್ಯಗ್ರಾಮದ ಬಗ್ಗೆ ಟಿಎಸ್‌ಐ ಧೋರಣೆ ನಿಜಕ್ಕೂ ಶ್ಲಾಘನೀಯ ಪ್ರಸಿದ್ಧ ಕಲಾವಿದೆಯಾದ ಪ್ರೊತಿಮಾ ಬೇಡಿಯವರು ಭಾರತದ ಪ್ರಸಿದ್ಧ ಪ್ರಕಾರಗಳಾದ ಒಡಿಸ್ಸಿ, ಮೋಹಿನಿಯಾಟ್ಟಂ, ಕಥಕ್, ಭರತನಾಟ್ಯ, ಕೂಚಿಪುಡಿ, ಕಥಕ್ಕಳಿ, ಮಣಿಪುರಿ ನೃತ್ಯಪ್ರಕಾರಗಳನ್ನು ಕಲಿಸುವ ಉದ್ದೇಶದಿಂದ ಎಲ್ಲದಕ್ಕೂ ಒಂದೇ ಸೂರಿನಡಿ ಆಶ್ರಯ ಒದಗಿಸಿದರು ಇಂತಹ ಸಂಸ್ಥೆಗೆ ಇಂದು ಪೋಷಕರಿದ್ದರೂ ಆರ್ಥಿಕ ಕೊರತೆಯಿಂದ ಕೇವಲ ಒಡಿಸ್ಸಿ ನೃತ್ಯಪ್ರಕಾರಕ್ಕೆ ಶಿಕ್ಷಣ ನೀಡುವುದಷ್ಟೇ ಉಳಿದುಕೊಳ್ಳುವಂತಾಗಿದೆ ಇದು ಹೀಗೆಯೇ ಮುಂದುವರಿದರೆ ಭಾರತೀಯ ಕಲೆ ಪ್ರೋತ್ಸಾಹಿಸುವ ಸಂಸ್ಥೆಯೊಂದು ಹೇಳಹೆಸರಿಲ್ಲದೆ ಹೋದೀತು ಇಂತಹ ಸಂಸ್ಥೆಗಳಿಗೆ ಸರಕಾರ ಹಾಗೂ ಇತರೆ ಆರ್ಥಿಕ ಸಂಸ್ಥೆಗಳು ಸಹಕಾರ ನೀಡುವ ಮೂಲಕ ನಮ್ಮ ಕಲೆ ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಆಗಲೇ ಪ್ರಸಿದ್ಧ ಕಲಾವಿದೆಯ ಕನಸು ನನಸಾಗವುದು

ಕೆಪಿ ಗಿರಿರಾಜ್
ಚಿತ್ರದುರ್ಗ

ವೈಜ್ಞಾನಿಕ ಜಗತ್ತಿಗೆ ಸವಾಲು

'ತರ್ಕಬದ್ಧ ವೈಜ್ಞಾನಿಕ ಕಾರಣ ಮದ್ದು' (ಡಾಕೆಎ ಅಶೋಕ್ ಪೈ) ಅಂಕಣ ಚಿಂತನಾರ್ಹ ಒಂದೆಡೆ ಮೂಢನಂಬಿಕೆಗಳಿದ್ದರೆ, ಇನ್ನೊಂದೆಡೆ ಅದನ್ನು ನಂಬುವ ಒಂದು ವರ್ಗ ಇದ್ದೇ ಇರುತ್ತದೆ ಗಣಪತಿ ಹಾಲು ಕುಡಿದ, ಬಾಬಾ ಕಣ್ಣು ಬಿಟ್ಟ ಇಂತಹ ವಿಚಾರಗಳನ್ನು ಎಲ್ಲರೂ ನಂಬುವಂತಹ ಸ್ಥಿತಿ ನಮ್ಮಲ್ಲಿ ಸೃಷ್ಟಿಯಾಗಿದೆ ಇನ್ನು ವೈಜ್ಞಾನಿಕ ಜಗತ್ತಿಗೆ ಇದೊಂದು ಸವಾಲು ತರ್ಕಬದ್ಧ ವೈಜ್ಞಾನಿಕ ಕಾರಣಗಳನ್ನು ತೋರಿಸಿದರೆ ಜನ ತಾವಾಗಿಯೇ ಮೂಢನಂಬಿಕೆಗಳಿಂದ ಹೊರಬರುತ್ತಾರೆ 'ಸಾಮೂಹಿಕ ಮಾನಸಿಕ ಸಮಸ್ಯೆ' ತಾನಾಗಿಯೇ ಮೂಲೆ ಸೇರುತ್ತದೆ

ಆರ್ ಕುಸುಮ
ಬೆಂಗಳೂರು

ಸೊಗಸಾದ ಲೇಖನ

ದೆಹಲಿಯಲ್ಲಿ ನಡೆದ ಚಿತ್ರೋತ್ಸವದ ಕುರಿತ 'ಓಸಿಯನ್ ಟಾಕೀಸ್‌ನಲ್ಲಿ ಗುಲಾಬಿಯ ಕಂಪು' (ಕೆರಾಘವ ಶರ್ಮ) ಲೇಖನ ಚೆನ್ನಾಗಿತ್ತು ಗಿರೀಶ್ ಕಾಸರವಳ್ಳಿ ಅವರ ಸಂದರ್ಶನವೂ ಸೊಗಸಾಗಿ ಮೂಡಿ ಬಂದಿದೆ ಸಿನಿಮಾವನ್ನು ಸಾರ್ವಜನಿಕರಿಗೆ ಯಾವಾಗ ತೋರಿಸುತ್ತಾರೆ ಎಂಬುದು ತಿಳಿದಿದ್ದರೆ ಚೆನ್ನಾಗಿರುತ್ತಿತ್ತು ಹೆಚ್ಚಿನ ಕಲಾತ್ಮಕ ಚಿತ್ರಗಳು ಎಲ್ಲಿ, ಯಾವಾಗ ಬಿಡುಗಡೆಯಾಗುತ್ತದೆ ಮತ್ತು ಚಿತ್ರಮಂದಿರದಿಂದ ಹೇಗೆ ಕಾಣೆಯಾಗುತ್ತದೆ ಎಂಬುದು ಗೊತ್ತೇ ಆಗುವುದಿಲ್ಲ ಇದು ಕನ್ನಡ ಚಿತ್ರರಂಗದ ದುರದೃಷ್ಟ

ಮಹೇಶ್ ಮಲ್ನಾಡ್
ಬೆಂಗಳೂರು

ಶ್ಲಾಘನೀಯ

ಟಿಎಸ್‌ಐ ಪತ್ರಿಕೆಯಲ್ಲಿ ಮೂಡಿಬರುತ್ತಿರುವ ಎಲ್ಲಾ ಲೇಖನಗಳು ಮಾಹಿತಿಪೂರ್ಣವಾಗಿರುತ್ತವೆ ಪ್ರತಿ ಸಂಚಿಕೆಯೂ ಹೀಗೆ ಹೊಸ ಸಂಗತಿಗಳನ್ನು ಹೊತ್ತು ತರಲಿ ಎಂಬುದೇ ನನ್ನ ಆಶಯ

ವಿನಿತ್
ಉಡುಪಿ

ಹೇಗಾದ ಗೊತ್ತಾ

ಓಡುತ್ತಲೇ ತನ್ನ ಪ್ರತಿಭೆಯನ್ನು 'ಚಿನ್ನಾರಿ ಮುತ್ತಾ' ಚಿತ್ರದಲ್ಲಿ ತೋರಿಸಿದ ಬಾಲನಟ ವಿಜಯ ರಾಘವೇಂದ್ರ ಇಂದಿಗೂ ತಮ್ಮ ಅಭಿನಯ ಸಾಮರ್ಥ್ಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ಯಶಸ್ಸಿನ ಹಾದಿಯಲ್ಲಿ ಮುಂದುವರಿಯುತ್ತಿದ್ದಾರೆ 'ಹೇಗಾದ ಗೊತ್ತಾ, ಚಿನ್ನಾರಿ ಮುತ್ತಾ..' (ಎನ್ಕೆ ಸುಪ್ರಭಾ) ಜೊತೆಗಿನ ಬಿಚ್ಚುಮಾತು ಅತ್ಯುತ್ತಮವಾಗಿ ಮೂಡಿಬಂದಿದೆ

ಚಿನ್ಮಯ
ಮಂಗಳೂರು

ಬಹುಮಾನಿತ ಪತ್ರಗಳು

Letters- The Sunday Indian - Kannada

ಹೊಣೆ ಯಾರು?

ಮುಸ್ಲಿಂಮರಲ್ಲೂ ಸ್ವತಂತ್ರ ಮನೋಭಾವ ಇರುವ ವ್ಯಕ್ತಿಗಳಿದ್ದಾರೆ ಎಂಬುದು ಸಂತಸದ ವಿಚಾರ. 'ಅಲ್ಲಾ ಹೆಸರಲ್ಲಿ ಹಿಂಸೆ ಸಲ್ಲ' (ಫಿರೋಜ್ ಭಕ್ತ್ ಅಹಮದ್) ಲೇಖನದ ವಿಚಾರಧಾರೆ ಉತ್ತಮ. ಆದರೆ ಇದನ್ನು ಎಷ್ಟು ಜನ ಮುಸ್ಲಿಮರು ಕೇಳುತ್ತಿದ್ದಾರೆ? ಮುಲ್ಲಾಗಳು ಹಾಗೂ ಮೌಲ್ವಿಗಳು ಮುಸ್ಲಿಮರ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದಾರೆ. ಖುರಾನ್ ಅಥವಾ ಜಿಹಾದ್ ಕುರಿತಾಗಿ ಮುಸ್ಲಿಮನೊಬ್ಬ ತನ್ನ ದನಿ ಎತ್ತಿದರೆ ಆತನ ವಿರುದ್ಧ ಇಡೀ ಮುಸ್ಲಿಂ ಸಮುದಾಯವೇ ತಿರುಗಿ ಬೀಳುತ್ತದೆ. ಮುಸ್ಲಿಂ ಅಲ್ಲದ ವ್ಯಕ್ತಿಯೊಬ್ಬನನ್ನು ಮುಸ್ಲಿಂ ಧಾರ್ಮಿಕ ಮುಖಂಡನೊಬ್ಬ ಖಾಫಿರ್ ಎಂಬುದಾಗಿ ಚಿತ್ರಿಸುತ್ತಾನೆ. ಬಹುತೇಕ ಮುಸ್ಲಿಮರು ಬಡವರು. ಅವರಿಗೆ ಮಸೀದಿಯೊಂದಿಗೆ ಭಾವನಾತ್ಮಕ ಸಂಬಂಧವಿರುತ್ತದೆ. ಇಲ್ಲೇ ಮುಸ್ಲಿಂ ಯುವಕರಿಗೆ ಜಿಹಾದ್ ಪಾಠ ಆರಂಭವಾಗುತ್ತದೆ. ಇವರಿಗೆ ಲಾಡೆನ್ ಹೇಳಿದ್ದಷ್ಟೇ ಜಿಹಾದ್. ಮುಸ್ಲಿಂ ರಾಷ್ಟ್ರಗಳಾದ ಈಜಿಪ್ಟ್, ಟರ್ಕಿ ಜೊತೆಗೆ ಸದ್ದಾಂ ಹುಸೇನ್ ಆಳುತ್ತಿದ್ದ ಇರಾಕ್ ಕೂಡಾ ಬದಲಾವಣೆ ಹಾದಿಯಲ್ಲಿ ಸಾಗಿದ್ದರೂ ಅದಕ್ಕೆ ಮುಸ್ಲಿಂ ಮೂಲಭೂತವಾದಿಗಳ ವಿರೋಧ ಎದುರಿಸಬೇಕಾಯಿತು. ಆದರೆ ಎಲ್‌ಟಿಟಿಇ ಅಥವಾ ಭಾರತೀಯ ನಕ್ಸಲ್‌ರಂತಹ ಹಿಂದೂ ಭಯೋತ್ಪಾದನೆ ಅಥವಾ ಅಮೆರಿಕದ ರೂಪದಲ್ಲಿರುವ ಕ್ರಿಶ್ಚಿಯನ್ ಭಯೋತ್ಪಾದನೆಗೆ ಏನೆನ್ನೋಣ? ಇತಿಹಾಸದಲ್ಲಿ ಮೊದಲ ಬಾರಿಗೆ ಅಣುಬಾಂಬ್ ದಾಳಿ ನಡೆಸಿದ್ದು ಕ್ರಿಶ್ಚಿಯನ್ ರಾಷ್ಟ್ರ ಎಂಬುದನ್ನು ಮರೆಯಬಾರದು. ಕಮ್ಯುನಿಸ್ಟ್ ಚೀನಾ ಮತ್ತು ಹಿಂದಿನ ಯುಎಸ್‌ಎಸ್‌ಆರ್ ಭಯೋತ್ಪಾದನೆಯನ್ನೇ ಆಯುಧವನ್ನಾಗಿ ಬಳಸಿದ್ದವು. ಆದರೆ ಮುಸ್ಲಿಮರನ್ನಷ್ಟೇ ಗುರಿಯಾಗಿಸುವುದು ಏಕೆ?

ಸಂತೋಷ್ ಮೋಹನ್ ಜೋಶಿ
ಸಾಂಗ್ಲಿ

ಆ ಯೋಧನ ನೆನಪಿರಲಿ

ಭಾರತೀಯರ ಜೀವನದಲ್ಲಿ ಸೈನ್ಯ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಆದರೆ ನಾವು ಯಾವತ್ತೂ ಅಲ್ಲಿರುವ ನಿಜವಾದ ಸ್ಪೂರ್ತಿ ಕಡೆಗಣಿಸಿದ್ದೇವೆ. ಸೈನಿಕ ನಮ್ಮ ಮಟ್ಟಿಗೆ ಸಾಮಾನ್ಯ ವ್ಯಕ್ತಿಯಾಗಷ್ಟೇ ಉಳಿಯುತ್ತಾನೆ. ಮಾಣಿಕ್ ಷಾ ನಿಧನದ ನಂತರ ಅವರನ್ನು ನೆನಪಿಸಿಕೊಂಡ ರೀತಿಯೇ ನಾವು ಎಂತಹ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ ಎಂಬುದನ್ನು ಹೇಳುತ್ತದೆ. ಭಾರತ ಜಗತ್ತಿನಲ್ಲೇ ಅತ್ಯಂತ ಸೂಕ್ಷ್ಮವಾದ ಗಡಿಪ್ರದೇಶ ಹೊಂದಿದ್ದು ಆಧುನಿಕ ಸೈನ್ಯದ ಅವಶ್ಯಕತೆ ಇದೆ. ಸೈನಿಕರು ಸೇನೆಯಲ್ಲಿ ಉಳಿಯುವಂತೆ ಮಾಡುವುದು ಇಂದಿನ ತುರ್ತು. ವಿಪತ್ತಿನ ಸಂದರ್ಭದಲ್ಲಿ ಸಹಾಯಕ್ಕೆ ಬರುವುದು ಸೈನ್ಯವಲ್ಲದೆ ಬೇರೇನೂ ಅಲ್ಲ. ನಾವು ಯುದ್ಧ ಮಾಡಬೇಕೆಂದಲ್ಲ; ಆದರೆ ಸೈನ್ಯದ ಅಗತ್ಯವಂತೂ ಇದೆ. ಏಕಾಂಗಿ ಯೋಧನೊಬ್ಬ ಕೊರೆಯುವ ಚಳಿಯಲ್ಲಿ ದೇಶ ರಕ್ಷಣೆ ಮಾಡುತ್ತಿದ್ದಾನೆ ಎಂಬ ಯೋಚನೆ ಪ್ರತಿ ದಿನ ಮಲಗುವ ಮುನ್ನ ನಮ್ಮ ಮನದಲ್ಲಿ ಒಮ್ಮೆಯಾದರೂ ಹಾದುಹೋಗಬೇಕು.

ಸುನೀಲ್ ಮೆಲ್ವಾನಿ
ಪುಣೆ

Letters- The Sunday Indian - Kannadaಭಯೋತ್ಪಾದನೆ ನಿಗ್ರಹಿಸಿ

ನಾವು ಭಯೋತ್ಪಾದಕರನ್ನು ಭರಿಸಲು ಖಂಡಿತ ಸಾಧ್ಯವಿಲ್ಲ. ರಾಜಕೀಯ ಉದ್ದೇಶಕ್ಕಾಗಿ ಜನರನ್ನು ಬಳಸಿಕೊಳ್ಳಲಾರಂಭಿಸಿದಾಗ ರಾಜಕೀಯ ಉದ್ದೇಶವೇ ಅನ್ಯಾಯದ ಮಾರ್ಗ ಹಿಡಿಯುತ್ತದೆ. ಇಂದು ಭಯೋತ್ಪಾದನೆಯನ್ನು ಉದ್ದೇಶಪೂರ್ವಕವಾಗಿ ಮತ್ತು ಅಷ್ಟೇ ಲೆಕ್ಕಾಚಾರದಿಂದ ಬೆಳೆಸಲಾಗುತ್ತಿದೆ. ಇತ್ತೀಚೆಗೆ ಪ್ರಮುಖ ನಗರಗಳಲ್ಲಿ ನಡೆದ ಘಟನೆಗಳೇ ಇದಕ್ಕೆ ಸಾಕ್ಷಿ. ಇಲ್ಲಿ ಮತ್ತೊಂದು ವಿಚಾರ ಎಂದರೆ ಭಯೋತ್ಪಾದಕರ ಉದ್ದೇಶ- ಸಾಮಾಜಿಕ, ಧಾರ್ಮಿಕ, ರಾಷ್ಟ್ರೀಯ- ಒಂದು ಸ್ಥಳದಿಂದ ಮತ್ತೊಂದಕ್ಕೆ ಬದಲಾಗುತ್ತಿರುತ್ತದೆ. ಆದರೆ ಈ ಎಲ್ಲಾ ಸಮಸ್ಯೆಗಳಿಗೆ ಅವರು ಕಂಡುಕೊಂಡ ಒಂದೇ ಮಾರ್ಗ ಎಂದರೆ ಸಾಮಾಜಿಕ ರೂಪುರೇಷೆಯನ್ನೇ ಹಾಳುಗೆಡವುದು. ಸರ್ಕಾರ ಅಣುಒಪ್ಪಂದವನ್ನು ಬಗೆಹರಿಸುವ ಮುನ್ನ ಭಯೋತ್ಪಾದನಾ ಸಮಸ್ಯೆ ಬಗೆಹರಿಸಬೇಕು. ಭಾರತ ಈಗಾಗಲೇ ಭಯೋತ್ಪಾದನೆಯಿಂದ ಬಹಳಷ್ಟನ್ನು ಕಳೆದುಕೊಂಡಿದೆ. ಅದರಲ್ಲಿ ಇಬ್ಬರು ಪ್ರಧಾನಮಂತ್ರಿಗಳೂ ಸೇರಿದ್ದಾರೆ ಎಂಬುದನ್ನು ಮರೆಯಬಾರದು.

ಅರ್ಚನಾ ಗುಪ್ತಾ
ಇ-ಮೇಲ್ ಮೂಲಕ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .