|
| ಅರಿಂದಮ್ ಚೌಧುರಿ, |
ಪ್ರಧಾನ ಸಂಪಾದಕರು,
ದ ಸಂಡೆ ಇಂಡಿಯನ್
|
ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಅಭಿನವ್
ಬಿಂದ್ರಾ ಗೆದ್ದ ಚಿನ್ನದ ಪದಕ ಇಡೀ ಭಾರತಕ್ಕೆ ದೊಡ್ಡ ಗೌರವ ತಂದುಕೊಟ್ಟಿದೆ.
ಅದು ಕೇವಲ ಕ್ರೀಡಾಪ್ರೇಮಿಗಳ ಪಾಲಿಗೆ
ಮಾತ್ರವಲ್ಲ,
ಇಡೀ ದೇಶದ ಜನತೆಯ ಪಾಲಿಗೆ ಹೆಮ್ಮೆಯ ಸಂಗತಿ.
ಆದರೆ,
ನನ್ನ ಪಾಲಿಗೆ ಆ ಸಾಧನೆ ಮೂರು ಕಾರಣಕ್ಕಾಗಿ
ಮಹತ್ವದ್ದು.
ಮಗುವಿನ ಮುಗ್ಧತೆಯಿಂದ ಇನ್ನೂ ಹೊರಬಂದಿಲ್ಲವೇನೋ
ಎಂಬಂತಹ ಈ ಯುವಕನ ಸಾಧನೆ ಭಾರತವನ್ನು ಅಕ್ಷರಶಃ ಜಾಗತಿಕ ಕ್ರೀಡಾಲೋಕದಲ್ಲಿ
ಬೇರುಬಿಟ್ಟಿದ್ದ ಆಳವಾದ ತಾರತಮ್ಯ ಭಾವನೆ ಮತ್ತು ಒಂದು ರೀತಿಯಲ್ಲಿ ಬಡತನ
ರೇಖೆಗಿಂತ ಕೆಳಗಿನ (ಬಿಪಿಎಲ್)
ಸ್ಥಿತಿಯ ಮನೋಭಾವದಿಂದ ಹೊರತಂದಿದೆ.
ಆ ಜಯ ನಮ್ಮ ಕಲ್ಪನೆಯನ್ನು ಮೀರಿದ ಮಹತ್ವ
ಪಡೆದಿದೆ.
ಏಕೆಂದರೆ,
ಶತಮಾನಕ್ಕಿಂತ ಹಳೆಯ ಒಲಿಂಪಿಕ್ಸ್ ಇತಿಹಾಸದಲ್ಲಿ
ಯಾವ ಭಾರತೀಯ ಕ್ರೀಡಾಪಟುವೂ ವೈಯಕ್ತಿಕವಾಗಿ ಒಂದೇ ಒಂದು ಚಿನ್ನದ ಪದಕವನ್ನೂ
ಪಡೆದಿಲ್ಲ.
ನಾವು ತಂಡ ಆಟಗಳಲ್ಲಿ ಕೂಡ ಆ ಪದಕವನ್ನು ಪಡೆದದ್ದು
28
ವರ್ಷಗಳ ಹಿಂದೆ,
ಹಾಕಿಯಲ್ಲಿ.
ಅಭಿನವ್ ಜಯ ವಿಶೇಷ ಎನಿಸಲು ಇರುವ ಮತ್ತೊಂದು
ಕಾರಣ,
ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದ ವೇಳೆ ನಡೆದ
ಪಥಸಂಚಲನದಲ್ಲಿ ನಮ್ಮ ಭಾರತೀಯ ಕ್ರೀಡಾಪಟುಗಳ ತಂಡದ ಅಶಿಸ್ತಿನ ವರ್ತನೆ.
ಅವರ ಆ ಬಗೆಯ ನಡತೆ ನನಗಂತೂ ತೀರಾ ನಾಚಿಕೆ
ತರಿಸಿತು.
ಅವರ ಆ ವೈಖರಿಯನ್ನು ನೋಡಿ ನಾನು ಇವರಿಂದ ಈ ನೂರು ಕೋಟಿ
ಜನಸಂಖ್ಯೆಯ ದೇಶಕ್ಕೆ ಅಷ್ಟೊಂದು ಅಗಾಧ ಎನಿಸಿರುವ ಒಂದೇ ಒಂದು ಚಿನ್ನದ
ಪದಕವನ್ನು ಕೂಡ ನಿರೀಕ್ಷಿಸುವುದು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ
ಬಂದಿದ್ದೆ.
ಅಮೆರಿಕದ ತಂಡ ಅತ್ಯಂತ ಶಿಸ್ತಾಗಿ ಉಡುಪು ಧರಿಸಿ,
ಅಧ್ಯಕ್ಷ ಬುಷ್‌ರತ್ತ ಕೈಬೀಸುತ್ತಾ
ನಡೆಯುತ್ತಿತ್ತು.
ಹಾಗೇ ವಿವಿಧ ದೇಶಗಳ ತಂಡಗಳು ಕೂಡ ಶಿಸ್ತಾಗಿ ಒಂದಾದ
ಮೇಲೊಂದರಂತೆ ಸಾಗಿದವು.
ಆ ಮೂಲಕ ತಂಡಗಳು ಚಿಕ್ಕವಿರಲಿ,
ದೊಡ್ಡವಿರಲಿ ತಮ್ಮ-
ತಮ್ಮ ದೇಶವನ್ನೂ ಅತ್ಯಂತ ಗೌರವಯುತವಾಗಿ
ಬಿಂಬಿಸಿದವು.
ಆದರೆ.
ಭಾರತೀಯ ತಂಡ ಸಾಗಿದ ರೀತಿ ಮಾತ್ರ ಯಾವ
ದೇಶಬಾಂಧವರೂ ಹೆಮ್ಮೆ ಪಡುವಂತಿರಲಿಲ್ಲ.
ಪುರುಷರು ಕೆಲಮಟ್ಟಿಗೆ ಒಪ್ಪಬಹುದಾದ ಶೇರ್ವಾನಿ
ತೊಟ್ಟಿದ್ದು ಪರವಾಗಿಲ್ಲ ಎನ್ನುವಂತಿತ್ತು.
ಆದರೆ,
ನಮ್ಮ ಮಹಿಳಾ ಕ್ರೀಡಾಪಟುಗಳ ವೇಷಭೂಷಣವಂತೂ
'ಭೀಕರ'ವಾಗಿತ್ತು
ಎನ್ನದೇ ಬೇರೆ ವಿಧಿಯೇ ಇಲ್ಲ.
ಕೆಲವರು ಸೀರೆ,
ಇನ್ನೂ ಕೆಲವರು ಯಾವ ರೀತಿಯಲ್ಲೂ ಹೊಂದಿಕೆಯಾಗದ
ಸಲ್ವಾರ್-
ದುಪ್ಪಟ್ಟಾ ತೊಟ್ಟಿದ್ದರು.
ಇದಕ್ಕೆಲ್ಲಾ ಕಳಶವಿಟ್ಟಂತೆ ನಮ್ಮ ರಾಷ್ಟ್ರೀಯ
ಹೆಮ್ಮೆ ಸಾನಿಯಾ ಮಿರ್ಜಾ ಅವರ ಟ್ರ್ಯಾಕ್‌ಸೂಟ್ ವೇಷಭೂಷಣ!
ಅದನ್ನು ನೋಡಿದರೆ ಆಕೆ ಅಭ್ಯಾಸದಿಂದ ನೇರವಾಗಿ
ಪಥಸಂಚಲನಕ್ಕೆ ಬಂದಂತಿತ್ತು.
ಪ್ರತಿ ತಂಡವೂ ದೇಶದ ಘನತೆಯ ಪ್ರಜ್ಞೆ
ಹೊಂದಿರುತ್ತದೆ.
ಅದು ಅವರ ವಸ್ತ್ರ ಸಂಹಿತೆಯಲ್ಲೇ
ವ್ಯಕ್ತವಾಗುತ್ತಿರುತ್ತದೆ.
ಆದರೆ,
ಜಾಗತಿಕ ವೇದಿಕೆಯೊಂದರಲ್ಲಿ ದೇಶದ ಗೌರವವನ್ನು
ಎತ್ತಿಹಿಡಿಯುವ ಒಂದು ಮಹತ್ವದ ಅವಕಾಶದಲ್ಲಿ ಭಾರತೀಯ ತಂಡ ವಸ್ತ್ರ
ಸಂಹಿತೆಯ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಂಡಿರಲಿಲ್ಲ.
ಭೂಮಿ ಮೇಲೆ ಅತಿ ಹೆಚ್ಚು ಜನ ವೀಕ್ಷಿಸಿದ
ಕಾರ್ಯಕ್ರಮವೊಂದರಲ್ಲಿ ನಮ್ಮ ಕ್ರೀಡಾಪಟುಗಳು ಪ್ರದರ್ಶಿಸಿದ ಅಶಿಸ್ತು
ನಿಜವಾಗಿಯೂ ರಾಷ್ಟ್ರೀಯ ಅವಮಾನವೇ ಸರಿ.
ಇಷ್ಟೆಲ್ಲಾ ಅವಾಂತರಗಳ ಜೊತೆಗೆ,
ಪಥಸಂಚಲನದ ವೇಳೆ ನಮ್ಮ ಆಟಗಾರರು ವಿಡಿಯೋ
ಕ್ಯಾಮರಾ ಹಿಡಿದುಕೊಂಡು ಸ್ಟೇಡಿಯಂ ಚಿತ್ರೀಕರಿಸುವುದರಲ್ಲೇ ಸಾಕಷ್ಟು
ಬ್ಯುಸಿಯಾಗಿದ್ದರು.
ಅದೆನ್ನೆಲ್ಲಾ ನೋಡುತ್ತಾ ನನಗೆ ತನ್ನ ದೇಶವನ್ನು
ಗೌರವಯುತವಾಗಿ ಪ್ರತಿನಿಧಿಸುವುದನ್ನೂ ಕೂಡ ಕಲಿಯದ ಆಟಗಾರರ ತಂಡದಿಂದ
ಕ್ರೀಡಾಂಗಣದಲ್ಲಿ ಮತ್ತೇನನ್ನೂ ನಿರೀಕ್ಷಿಸುವುದು ತಪ್ಪು ಎನಿಸಿತು.
ತಂಡದ ಉಡುಗೆ-ತೊಡುಗೆಯಂತಹ(ರಾಷ್ಟ್ರೀಯ
ಘನತೆಯ ವಿಷಯ)
ಪ್ರಾಥಮಿಕ ವಿಷಯಗಳ ಬಗ್ಗೆ ಕೂಡ ಕಾಳಜಿ ವಹಿಸದಿರುವಾಗ
ಅಷ್ಟೊಂದು ಅಧಿಕಾರಿಗಳು ತಂಡದೊಂದಿಗೆ ಹೋದದ್ದರ ಹಿಂದಿನ ಉದ್ದೇಶವೇನು?
ಆಟಗಾರರಿಗೆ ಪೂರಕವಾಗಿ ಕೆಲಸ ಮಾಡುವವರಿಗೆ ಬರ
ಬಂದಿರುವಾಗ ಸಾರ್ವಜನಿಕ ತೆರಿಗೆ ಹಣದಲ್ಲಿ ಪುಕ್ಕಟೆಯಾಗಿ ಒಲಿಂಪಿಕ್ಸ್
ವೀಕ್ಷಣೆಗೆ ಈ ಅಧಿಕಾರಿಗಳ ದಂಡು ದೌಡಾಯಿಸಿರುವುದು ನಿಜಕ್ಕೂ ದೌರ್ಭಾಗ್ಯದ
ಸಂಗತಿ.
ಅಭಿನವ್ ಜಯವನ್ನು ಮಹತ್ವದ್ದನ್ನಾಗಿಸಿದ
೩ನೇ ಅಂಶವೆಂದರೆ ಆತನ ವೈಯಕ್ತಿಕ ಸಾಧನೆ.
ಭಾರತದಲ್ಲಿ ಯಾರೇ ಸಾಧನೆ ಮಾಡಿದರೂ ಅದು ಆತ/ಆಕೆ
ತನ್ನ ಸ್ವಂತ ಹಣ,
ಕಠಿಣ ಪರಿಶ್ರಮದಿಂದ ಸಾಧಿಸಿದ ಗೆಲುವಾಗುತ್ತದೆಯೇ ವಿನಾ
ವ್ಯವಸ್ಥೆಯ ನೆರವಿನಿಂದ ಅಲ್ಲ ಎಂಬುದು ವಾಸ್ತವ.
ಅದು ಲಿಯಾಂಡರ್ ಪೇಸ್ ಇರಲಿ,
ಮಹೇಶ್ ಭೂಪತಿ ಆಗಿರಲಿ ಅಥವಾ ರಾಜ್ಯವರ್ಧನ
ಸಿಂಗ್ ರಾಥೋಡ್ ಆಗಿರಲಿ;
ಇನ್ನು ತನ್ನ ಮನೆಯಲ್ಲೇ ಸಣ್ಣ ಶೂಟಿಂಗ್ ರೇಂಜ್
ನಿರ್ಮಿಸಿಕೊಂಡಿದ್ದ ಅಭಿನವ್ ಬಗ್ಗೆ ಹೇಳುವುದೇ ಬೇಡ.
ಈ ಕ್ರೀಡಾ ದೈತ್ಯರ ಸಾಧನೆ ಬಗ್ಗೆ ಹೇಳುವಾಗ
ಅವರು ತಮ್ಮ ದೇಶಕ್ಕೆ ಗೌರವ ತಂದು ಕೊಡಲು ಎದುರಿಸಿದ ಅಡ್ಡಿ-
ಆತಂಕಗಳೆಷ್ಟು,
ಅಪಮಾನಗಳೆಷ್ಟು ಎಂಬುದನ್ನು ಹೇಳದೇ ಇರಲು
ಸಾಧ್ಯವಿಲ್ಲ.
ಕಳೆದ ಏಷಿಯನ್ ಕ್ರೀಡಾಕೂಟಕ್ಕೆ ಮುನ್ನ ಜಸ್ಪಾಲ್
ರಾಣಾನನ್ನು ಹೇಗೆ ನಡೆಸಿಕೊಳ್ಳಲಾಯಿತು ಎಂಬುದೇ ಇದಕ್ಕೊಂದು ಉತ್ತಮ
ಉದಾಹರಣೆ.
ಈ ಮುನ್ನ ಒಲಿಂಪಿಕ್‌ನಲ್ಲಿ ನಮಗೆ ನಿರಂತರವಾಗಿ ಪದಕ
ತಂದುಕೊಡುತ್ತಿದ್ದ ಏಕೈಕ ಕ್ರೀಡೆ ಎಂದರೆ ಅದು ಹಾಕಿ.
ಇಂತಹ ಹಾಕಿ ಕ್ರೀಡೆಗೆ ಕೂಡಾ ಜಾಗತಿಕ ಮಟ್ಟದ
ಸೌಲಭ್ಯಗಳು,
ಸ್ಪರ್ಧಾತ್ಮಕ ವಾತಾವರಣ ನಿರ್ಮಿಸಿಕೊಡುವಲ್ಲಿ ನಾವು
ವಿಫಲರಾದೆವು.
ನಾಚಿಕೆಗೇಡಿನ ವಿಷಯವೆಂದರೆ ಈ ಬಾರಿ ಒಲಿಂಪಿಕ್‌ನಲ್ಲಿ
ಅರ್ಹತಾ ಸುತ್ತು ದಾಟುವಲ್ಲೂ ಹಾಕಿ ತಂಡ ವಿಫಲವಾಗಿದೆ.
ಭಾರತೀಯ ಹಾಕಿ ಫೆಡರೇಷನ್ ಕಳೆದ ಹಲವಾರು
ವರ್ಷಗಳಲ್ಲಿ ದುಸ್ಥಿತಿಯ ಅಂಚನ್ನು ತಲುಪಿರುವುದೇ ಇದಕ್ಕೆ ಮುಖ್ಯ ಕಾರಣ
ಎಂದು ನಮಗೆಲ್ಲಾ ಗೊತ್ತು.
ಬರೀ ಹಾಕಿ ಮಾತ್ರವಲ್ಲ,
ಈ ದೇಶದ ಪ್ರತಿ ಕ್ರೀಡಾ ಫೆಡರೇಷನ್ ಕೂಡಾ
ಯಾವುದೋ ವ್ಯಕ್ತಿಯ ವೈಯಕ್ತಿಕ ಸ್ವತ್ತಾಗಿಬಿಟ್ಟಿದೆ.
ಅದಿರಲಿ,
ಅಭಿನವ್ ಬಿಂದ್ರಾನ ವಿಜಯೋತ್ಸವದ ಮಧ್ಯೆ ಮೋನಿಕಾ
ದೇವಿಯ ಉದ್ದೀಪನ ಸೇವನೆ ಪ್ರಕರಣವನ್ನು ನಾವು ಸಂಪೂರ್ಣವಾಗಿ ಮರೆತೇ
ಹೋಗಿದ್ದೇವೆ.
ಮತ್ತೊಬ್ಬ ವೇಯ್ಟ್‌ಲಿಫ್ಟರ್ ಶೈಲಜಾ ಎಂಬಾಕೆಗೆ ಅನುಕೂಲ
ಮಾಡಿಕೊಡುವ ಸಲುವಾಗಿ ಭಾರತೀಯ ಕ್ರೀಡಾ ಪ್ರಾಧಿಕಾರದ
(ಎಸ್‌ಎಐ)
ಹಿರಿಯ ಅಧಿಕಾರಿಗಳು ಪಕ್ಷಪಾತ ಎಸಗಿದ್ದಾರೆ
ಎಂಬ ಆಕೆಯ ಆರೋಪವಂತೂ ದಿಗ್ಭ್ರಮೆಗೊಳಿಸುವಂಥದ್ದು.
ಆಕೆಯ ಆರೋಪದ ನಂತರ ಹುಳುಕನ್ನು ಸರಿಪಡಿಸಲು
ಯತ್ನಿಸಿದ್ದು,
ಆಕೆ ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ
ತೇರ್ಗಡೆಯಾದ ಮೇಲೆ ಸರ್ಕಾರ ಮಧ್ಯೆ ಪ್ರವೇಶಿಸಿದ್ದು ಮತ್ತಷ್ಟು
ದಿಗ್ಭ್ರಮೆಗೊಳಿಸುವಂಥದ್ದು.
ಇದು ಭಾರತದ ಕ್ರೀಡಾಲೋಕದಲ್ಲಿ ಹುದುಗಿರುವ
ಅವ್ಯವಸ್ಥೆಯ ಒಂದು ತುಣುಕು ಮಾತ್ರ.
ಪ್ರಾಯಶಃ ಈ ವಿಷಯದಲ್ಲೇ ಚೀನಾ ನಮಗಿಂತ
ಭಿನ್ನವಾಗಿರುವುದು.
ಅಭಿನವ್‌ನಂತಹ ಹಲವಾರು ಪ್ರತಿಭಾವಂತ ಚಾಂಪಿಯನ್‌ಗಳು ಈ
ದೇಶದಲ್ಲಿ ಇದ್ದಾರೆ.
ಆದರೆ ಅಭಿನವ್ ಬಿಂದ್ರಾನ ತಂದೆಯಂತೆ ಎಲ್ಲರ ತಂದೆಯೂ
ಕೋಟ್ಯಧಿಪತಿಗಳಲ್ಲ;
ಬಡ,
ಪ್ರತಿಭಾವಂತ ಕ್ರೀಡಾಳುಗಳಿಗೆ ಪ್ರೋತ್ಸಾಹ,
ನೆರವು ಬೇಕಿದೆ.
ಈ ದೇಶದಲ್ಲಿ ಕ್ರೀಡೆಯನ್ನು ರಕ್ಷಿಸುವ ಒಂದೇ
ಮಾರ್ಗೋಪಾಯವೆಂದರೆ ಅದನ್ನು ರಾಜಕಾರಣಿಗಳು ಮತ್ತು ಮಧ್ಯವರ್ತಿಗಳ
ಕಪಿಮುಷ್ಟಿಯಿಂದ ಹೊರ ತರಬೇಕು,
ಅದರ ನಿರ್ವಹಣೆ ಮತ್ತು ಆಡಳಿತವನ್ನು
ವೃತ್ತಿಪರಗೊಳಿಸಬೇಕು.
ತನ್ನೆಲ್ಲಾ ನ್ಯೂನತೆಗಳ ನಡುವೆಯೂ ಬಿಸಿಸಿಐ ಕ್ರಿಕೆಟ್
ಅನ್ನು ಪೋಷಿಸುವುದು ಸಾಧ್ಯವಾದರೆ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಅದೇಕೆ
ಸಾಧ್ಯವಿಲ್ಲ?
ಒಬ್ಬ ಚೀನಾ ಪಟು ಪದಕ ಗೆದ್ದರೆ ಅದಕ್ಕೆ
ನೆರವು ನೀಡಿದ ಚೀನಾ ಕೂಡಾ ಗೆದ್ದಂತೆಯೇ.
ಆದರೆ ಒಬ್ಬ ಭಾರತೀಯ ಪದಕ ಗೆದ್ದರೆ
-ರಾಷ್ಟ್ರಗೀತೆ
ಹಿನ್ನೆಲೆಯಲ್ಲಿ ಮೊಳಗುತ್ತಿದ್ದರೂ-
ಗೆಲುವು ತನ್ನದು ಎಂದು ರಾಷ್ಟ್ರ ಹೇಳಿಕೊಳ್ಳಲು
ಸಾಧ್ಯವೇ?
|