|
ಕೈ
ಜೋಡಿಸಬೇಕು
'ಭವಿಷ್ಯದಲ್ಲಿ ಇಂತಹ ನಾಚಿಕೆಗೇಡಿನ ಪ್ರಸಂಗ ತಡೆಯಲು ಪರಸ್ಪರ
ಕೈಜೋಡಿಸುವ ಎದೆಗಾರಿಕೆ ಕಾಂಗ್ರೆಸ್-
ಬಿಜೆಪಿಗೆ ಇದೆಯೇ?'
ಮುಖಪುಟ ಲೇಖನ (ಅರಿಂದಮ್
ಚೌಧುರಿ) ಭಾರತದಲ್ಲಿ ಹೊಸ
ರಾಜಕೀಯ ಚಿಂತನೆಗೆ ನಾಂದಿಯಾಗುವುದರಲ್ಲಿ ಸಂಶಯವಿಲ್ಲ.
ಕಾಂಗ್ರೆಸ್-
ಬಿಜೆಪಿ ಹೊರತುಪಡಿಸಿ ಯಾವುದೇ ಪ್ರಾದೇಶಿಕ ಪಕ್ಷಕ್ಕೂ ರಾಷ್ಟ್ರೀಯ ದೂರದರ್ಶಿತ್ವ
ಇಲ್ಲ ಎಂಬುದು ವಿಶ್ವಾಸಮತ ಯಾಚನೆಯ ಸಂದರ್ಭ ಬಯಲಾಗಿದೆ.
ಸದ್ಯದ ರಾಜಕೀಯ ಪರಿಸ್ಥಿತಿಯನ್ನು ನೋಡಿದರೆ ಜಾತಿಯಾಧಾರಿತ ರಾಜಕೀಯ
ಭಾರತದ ದೊಡ್ಡ ಸಮಸ್ಯೆ.
ಎಷ್ಟೋ ವೇಳೆ ಈ 'ವಿಭಜನೆ'ಗಳು
ಕಲಹಗಳಿಗೂ ದಾರಿ ಮಾಡಿಕೊಟ್ಟಿವೆ.
ಸದ್ಯಕ್ಕೆ ಭಾರತದಲ್ಲಿನ ಎರಡು ಅತೀ ದೊಡ್ಡ ಪಕ್ಷಗಳಾದ ಕಾಂಗ್ರೆಸ್ ಮತ್ತು
ಬಿಜೆಪಿಯಲ್ಲಿ ದೇಶವನ್ನು ಆರ್ಥಿಕವಾಗಿ ಸದೃಡಗೊಳಿಸಬಲ್ಲ ಸಮರ್ಥ ನಾಯಕರಿದ್ದಾರೆ.
ಎರಡು ಕೈ ಸೇರಿದರೆ ಚಪ್ಪಾಳೆ ಎಂಬಂತೆ
ಈ 2 ಪಕ್ಷಗಳು ಕೈ ಜೋಡಿಸಿದರೆ
ಬೆರಳೆಣಿಕೆಯಷ್ಟೂ ಇಲ್ಲದ ಸಂಸದರನ್ನಿಟ್ಟುಕೊಂಡು 'ಕಿಂಗ್‌ಮೇಕರ್'
ಆಗ ಬಯಸುವ ಚಿಕ್ಕ ಪಕ್ಷಗಳನ್ನು ದೂರವಿಡಬಹುದು.
ಆ ಮೂಲಕ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸ್ಥಾನ-ಮಾನ
ಸುಧಾರಿಸಬಹುದು. ಎರಡೂ
ಪಕ್ಷಗಳು ದೇಶದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ಬಗ್ಗೆ ಚಿಂತಿಸಬೇಕು ಅಷ್ಟೇ...
ಇರ್ಷಾದ್ ಎಂ. ವೇಣೂರು
ಉಜಿರೆ
ಲಜ್ಜೆಗೆಟ್ಟ ರಾಜಕೀಯ
ನಾಚಿಕೆಗೇಡಿನ ರಾಜಕೀಯ ನಾಟಕಗಳನ್ನು ತಡೆಯಲು ನಮ್ಮ ದೇಶದ ದೊಡ್ಡ ಪಕ್ಷಗಳಾದ ಕಾಂಗ್ರೆಸ್-
ಬಿಜೆಪಿ ಕೈ ಜೋಡಿಸಬೇಕೆಂಬ ವಿಷಯವನ್ನು ಹೊತ್ತು ತಂದ ಮುಖಪುಟ ಲೇಖನ
ವಿಶೇಷವಾಗಿತ್ತು.
ಏರುತ್ತಿರುವ ಹಣದುಬ್ಬರ,
ರೈತರ ಸಂಕಷ್ಟಗಳನ್ನು ಪರಿಹರಿಸಲು ಸಾಧ್ಯವಾದ ಪಕ್ಷಗಳು ನಮ್ಮಲ್ಲಿಲ್ಲ.
ಯಾವೊಬ್ಬ ರಾಜಕಾರಣಿಯೂ ದೇಶದ ಉದ್ಧಾರಕ್ಕಾಗಿ ದುಡಿಯುತ್ತ್ತಿಲ್ಲ.
ಹಾಗಾಗಿ ಕಾಂಗ್ರೆಸ್-
ಬಿಜೆಪಿ ಪಕ್ಷಗಳು ಒಂದಾಗಿ ದೇಶವನ್ನು ಪ್ರಗತಿ ಪಥದತ್ತ ಸಾಗಿಸಬೇಕಿದೆ.
ಅಭಿನಯ
ಶಂಕರ್
ನಂದಿಪುರ
| 'ಕುಚೇಲನ್' ಬಿಡುಗಡೆ ಪ್ರಹಸನ
|

ನೆನಪಿಸಿಕೊಳ್ಳಿ, ಇನ್ನೂ ಕಾಮಗಾರಿ ಆರಂಭ ಆಗಬೇಕಾಗಿರುವ ಹೊಗೇನಕಲ್ ಯೋಜನೆಯ ಶಂಕುಸ್ಥಾಪನೆಗೆ ತಮಿಳುನಾಡು ಸರ್ಕಾರ ಮುಹೂರ್ತವಿಟ್ಟಾಗಲೇ ಕರ್ನಾಟಕ-ತಮಿಳುನಾಡು ಹೊತ್ತಿ ಉರಿದಿದ್ದವು. ಚೆನ್ನೈನ ಪ್ರತಿಭಟನಾ ಸಭೆಗೆ ಅಲ್ಲಿ ನೆಲೆಸಿರುವ ಕನ್ನಡ ಬಲ್ಲ ನಟರಾದ ರಜನೀಕಾಂತ್, ಮುರಳಿ, ಮೋಹನ್ ಮುಂತಾದ ನಟರು ಹಾಜರಾಗಿದ್ದರು. ಸಭೆಯಲ್ಲಿ ರಜನೀಕಾಂತ್ ಮತ್ತಿತರರು ಪಾಲ್ಗೊಳ್ಳಲಾರರೆಂಬ ವಿಶ್ವಾಸ ತಮಗಿದೆ ಎಂದು ಕರ್ನಾಟಕದ ಪ್ರಭಾವಿ ನಟರು ಹೇಳಿಕೆ ಕೊಟ್ಟಿದ್ದರು. ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಅಂತಹುದೇ ಸಭೆಗೆ ಹಾಜರಾಗಲು ಕನ್ನಡ ಚಿತ್ರರಂಗದ ಕೆಲವು ಮುಂಚೂಣಿ ನಾಯಕರು ಧೈರ್ಯವಹಿಸಲಿಲ್ಲ. ಆದರೆ ಚೆನ್ನೈನ ಸಭೆಯಲ್ಲಿ ಮಾತನಾಡಿದ ರಜನೀಕಾಂತ್ ಈ ವಿವಾದಕ್ಕೆ ಕೆಲವೇ ಮಂದಿ ಕರ್ನಾಟಕದ ರಾಜಕಾರಣಿಗಳು ಕಾರಣವೆಂದು ಗುಡುಗಿ ತಮ್ಮ ನಿಷ್ಠೆ ತಮಿಳುನಾಡು ಸರ್ಕಾರದ ಪರವಾಗಿಯೆ ಇರುತ್ತದೆ ಎಂದು ತುಂಬಿದ ಸಭೆಯಲ್ಲಿ ಪ್ರಮಾಣ ಮಾಡಿದರು. ಬೆಂಗಳೂರಿನ ಸಭೆಗೆ ಗೈರುಹಾಜರಾದ ನಟರಿಗೆ ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅದರ ಬಿಸಿ ತಟ್ಟಿದೆ. ನಂತರ ರಜನೀಕಾಂತ್ ಅವರ 'ಕುಚೇಲನ್' ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಕನ್ನಡಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಯಿತು. ರಜನೀಕಾಂತ್‌ಗೆ ಬುದ್ಧಿ ಕಲಿಸಿದೆವು ಎಂದುಕೊಳ್ಳುವಷ್ಟರಲ್ಲಿ ಎಲ್ಲವೂ ತಣ್ಣಗಾಯ್ತು. ಹಿಂದೆ ಕನ್ನಡದ ಉದಯೋನ್ಮುಖ ನಟನಿಗೆ ಕೇವಲ ಚಿತ್ರವೊಂದರ ಬಿಡುಗಡೆ ದಿನಾಂಕದ ವಿಚಾರದಲ್ಲಿ ಬಹಿಷ್ಕಾರ ಹಾಕಿ ಸಂಧಾನದ ನಾಟಕವಾಡಿ ದಂಡ ವಿಧಿಸಿದ ಚಲನಚಿತ್ರ ವಾಣಿಜ್ಯ ಮಂಡಳಿ, ಈಗ ರಜನೀಕಾಂತ್ ವಿಚಾರದಲ್ಲಿ ತಾನೇ ಮುಂದಾಗಿ ಕ್ಷಮೆ ಕೇಳಿಸಿದ ಪ್ರಹಸನ ಮಾಡಿ ಅವರ 'ಕುಚೇಲನ್' ಬಿಡುಗಡೆಗೆ ಕನ್ನಡ ದ್ವಾರವನ್ನು ಮುಕ್ತಗೊಳಿಸಿದ್ದು ವಿಪರ್ಯಾಸವಲ್ಲವೇ?
ಎಂ.ಎಸ್. ವೆಂಕಟರಾಮಯ್ಯ
ಬೆಂಗಳೂರು |
ಸಂಸತ್ತಿಗೆ ಕಳಂಕ
ವಿಶ್ವಾಸಮತಯಾಚನೆ ಸಂದರ್ಭದಲ್ಲಿ ನಡೆದ ಘಟನೆಗಳು ಸಂಸತ್ತಿನ ಮೌಲ್ಯಗಳಿಗೆ ಕಳಂಕ
ತರುವಂತಹವು.
ಈ ಕುರಿತು ಟಿಎಸ್‌ಐನ 'ಕಾಸಿನ
ಕೈ ಚಳಕ'
ಸಂಪಾದಕೀಯ ತರ್ಕಬದ್ಧವಾಗಿತ್ತು.
ಆಡಳಿತ ಪಕ್ಷದ ನಾಯಕರು ಮತ್ತು ವಿರೋಧ ಪಕ್ಷಗಳ ನಾಯಕರ ನಡುವಿನ
ಕೆಸರೆರಚಾಟದಿಂದ ಪ್ರಜಾಪ್ರಭುತ್ವಕ್ಕೆ ಮಸಿಬಳಿದಂತಾಗಿದೆ.
ನೋಟಿನ ಕಂತೆಗಳನ್ನು ಪ್ರದರ್ಶಿಸಿ ಸಂಸತ್ತನ್ನು
ಅವಮಾನಿಸಲಾಗಿದೆ.
ಇಂತಹ ಮಾಹಿತಿಗಳನ್ನು ಅತ್ಯುತ್ತಮ ವಿಶ್ಲೇಷಣೆಯೊಂದಿಗೆ ನೀಡುವ
ಟಿಎಸ್‌ಐ ಹೀಗೇ ಯಶಸ್ಸಿನತ್ತ ಸಾಗಲಿ.
ಕರುಣೋದಯ
ಹುಳಿಯಾರು
ವ್ಯವಸ್ಥೆ ಬದಲಾಗಲಿ
ಯುಪಿಎ ಸರಕಾರದ ವಿಶ್ವಾಸಮತ ಯಾಚನೆಯ ನಾಟಕಕ್ಕೆ ಪರದೆಯೇನೋ ಬಿತ್ತು ಸರಿ.
ಆದರೆ ಯಾರು ಏನನ್ನು ಸಾಧಿಸಿದರು ಎಂದು ಕೊನೆಗೂ ತಿಳಿಯಲೇ
ಇಲ್ಲ. ತಮ್ಮ
ಕೈಯಲ್ಲಿರುವ ಅಧಿಕಾರವನ್ನು ಉಳಿಸಿಕೊಳ್ಳಲು ಮತ್ತು ಹೊಸದಾಗಿ ಅಧಿಕಾರವನ್ನು
ಪಡೆದುಕೊಳ್ಳಲು ಈ ರಾಜಕಾರಣಿಗಳು ಯಾವ ಕೀಳುಮಟ್ಟಕ್ಕೆ ಇಳಿಯಬಲ್ಲರು ಎನ್ನುವುದನ್ನು
ಇಡೀ ವಿಶ್ವಕ್ಕೆ ತೋರಿಸಿಕೊಟ್ಟರು.
ಪ್ರಜಾಪ್ರಭುತ್ವದ ಮಂದಿರದೊಳಗೇ ಪ್ರಜಾಪ್ರಭುತ್ವದ ಕೊಲೆ
ನಡೆದುಹೋಯಿತು.
ಆದರೂ ಈ ಸಾವಿಗೆ ಮರುಕಪಟ್ಟವರು,
ಅತ್ತವರೂ ಒಬ್ಬರೂ ಇರಲಿಲ್ಲ ಅಲ್ಲಿ.
ಎಲ್ಲರದೂ ವಿಜಯದ ನಗೆಯೇ.
ವಿರೋಧ ಪಕ್ಷದ ಸದಸ್ಯರದ್ದು ಯುಪಿಎಯನ್ನು ಸದನದೊಳಗೇ
ನಗ್ನರನ್ನಾಗಿಸಿದ ನಗು.
ಮರುಕಪಟ್ಟವರು ಅರಿಂದಮ್ ಚೌಧುರಿ ಅವರಂತಹ ಚಿಂತಕರು ಮತ್ತು ನಮ್ಮ-
ನಿಮ್ಮಂತಹವರು ಮಾತ್ರ.
ಇದಕ್ಕೆಲ್ಲಾ ಅಷ್ಟು ಸುಲಭದಲ್ಲಿ ಮುಕ್ತಾಯ ಹಾಡುವುದು
ಕಷ್ಟ. ಇದು
ಬೆಳೆಯುತ್ತಲೇ ಹೋಗುವುದು ಖಚಿತ.
ಆದರೆ ತಕ್ಕ ಮಟ್ಟಿನ ಪರಿಹಾರ ಸಿಗಬೇಕೆಂದರೆ,
ಎರಡು ಪಕ್ಷಗಳು ಮಾತ್ರ ಇರುವ ವ್ಯವಸ್ಥೆ ಭಾರತದಲ್ಲಿ
ಬರಬೇಕಿದೆ.
ಒಂದೋ ಇಲ್ಲಿರು,
ಇಲ್ಲಾ ಅಲ್ಲಿರು.
ಎರಡೂ ಸಾಧ್ಯವಾಗದೆ ಇದ್ದಲ್ಲಿ ಮನೆಯಲ್ಲೇ ಬಿದ್ದಿರು.
ಹೀಗಾದೀತೇ?
ಎಂದಾದೀತು?
ಆತ್ರಾಡಿ ಸುರೇಶ್ ಹೆಗ್ಡೆ
ಬೆಂಗಳೂರು
ವಾಸ್ತವಿಕ ಯೋಜನೆ
ಬೇಕು
'ಬರದ ಬವಣೆ ಬಯಲು'
(ಶಶಿ ಸಂಪಳ್ಳಿ)
ಚಿಂತನಾರ್ಹ ಲೇಖನ.
ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಮ್ಮ ರಾಜ್ಯ
ಪ್ರಕಾಶಿಸುತ್ತಿದೆ ಎಂದು ಜಂಭ ಕೊಚ್ಚಿಕೊಳ್ಳುತ್ತಿದ್ದಾರೆ.
ತಮ್ಮ ಸರ್ಕಾರ ಭದ್ರವಾಗಿರಲಿ ಎಂದು ಜಪತಪ
ನಡೆಸುತ್ತಿದ್ದಾರೆಯೇ ವಿನಾ ವಾಸ್ತವ ಸಮಸ್ಯೆಗಳತ್ತ ಗಮನ ಹರಿಸುತ್ತಿಲ್ಲ ಎನ್ನುವುದು
ರುಜುವಾತಾಗಿದೆ.
ಅಧಿಕಾರಕ್ಕೆ ಬಂದು ಎರಡು ತಿಂಗಳಾದರೂ ತಮ್ಮೊಳಗಿನ
ಭಿನ್ನಾಭಿಪ್ರಾಯಗಳನ್ನು ಪರಿಹರಿಸುವಲ್ಲೇ ಸಮಯ ಕಳೆಯುತ್ತಿದ್ದಾರೆ.
ಯಾರಿಗಾಗಿ ಈ ಮೋಡ ಬಿತ್ತನೆ?
ಅದಕ್ಕೆ ಬದಲಾಗಿ ರೈತರಿಗೆ ಪರಿಹಾರ ಒದಗಿಸಬಹುದಿತ್ತು.
ವಾಸ್ತವಕ್ಕೆ ದೂರವಾಗಿರುವ ಯೋಜನೆಗಳನ್ನು
ಕೈಗೆತ್ತಿಕೊಳ್ಳುವ ಬದಲಾಗಿ ಉತ್ತಮ ಯೋಜನೆಗಳನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ
ತರುವ ಬಗ್ಗೆ ಚಿಂತನೆ ನಡೆಸುವುದು ಒಳಿತು.
ಎಂ.ಜಿ.
ಮಹಂತೇಶ್ ಉಡಿಕೇರಿ
ಬೆಳಗಾವಿ
ವಿಪರ್ಯಾಸ
ಪರಮಾಣು ರಿಯಾಕ್ಟರ್‌ಗಳು ಪರಿಸರ,
ಮಾನವ ಮತ್ತು ಇತರ ಜೀವಜಂತುಗಳ ಮೇಲೆ ಮಾರಕವಾಗುತ್ತಿರುವ
ಬಗ್ಗೆ ಪ್ರಕಟವಾದ 'ಇಲ್ಲೇ
ಇದೆ ಇಂಧನ ಮೂಲ!'
(ಪ್ರಸೂನ್ ಮಜುಂದಾರ್)
ಚಿಂತನಾರ್ಹ ಲೇಖನ.
ಕೇಂದ್ರ ಸರ್ಕಾರ ಈ ಬಗ್ಗೆ ತಿಲಮಾತ್ರವೂ ಗಮನ ಹರಿಸಿಲ್ಲ
ಎನ್ನುವುದು ವಿಪರ್ಯಾಸ.
ಯೂರೋಪ್ ರಾಷ್ಟ್ರಗಳಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಪರಮಾಣು
ರಿಯಾಕ್ಟರ್‌ಗಳನ್ನು ಮುಚ್ಚಲು ನಿರ್ಧರಿಸಲಾಗಿದೆ ಮತ್ತು ಹೊಸ ರಿಯಾಕ್ಟರ್‌ಗಳ
ಸ್ಥಾಪನೆಯಂತೂ ಕನಸಿನ ಮಾತಾಗಿದೆ.
ಬದಲಾಗಿ ಯುರೋಪ್ ರಾಷ್ಟ್ರಗಳು ನೀರು-
ಗಾಳಿಯಂತ್ರ-
ಸೌರಶಕ್ತಿಯಿಂದ ಇಂಧನ ಪಡೆಯಲು ಮುಂದಾಗುತ್ತಿವೆ.
ಕಳೆದ 30
ವರ್ಷಗಳಿಂದ ಸ್ವತಃ ಅಮೆರಿಕ ಯಾವುದೇ ಪರಮಾಣು ರಿಯಾಕ್ಟರ್‌ಗಳನ್ನು ತೆರೆದಿಲ್ಲ.
ಜಗತ್ತಿನ ಶೇ.
೨೪ರಷ್ಟು ಯುರೇನಿಯಂ ಸಂಪನ್ಮೂಲವಿರುವ ಆಸ್ಟ್ರೇಲಿಯಾದಲ್ಲಿ
ಒಂದೇ ಒಂದು ಪರಮಾಣು ರಿಯಾಕ್ಟರ್ ಇಲ್ಲ.
ಇಂಥ ಪರಿಸ್ಥಿತಿಯಲ್ಲಿ ನಮ್ಮ ಕೇಂದ್ರ ಸರ್ಕಾರ ಪರಮಾಣು
ರಿಯಾಕ್ಟರ್‌ಗಳ ನಿರ್ಮಾಣಕ್ಕೆ ಟೊಂಕ ಕಟ್ಟಿದೆ.
ಎಂತಹ ವಿಪರ್ಯಾಸ?
ರೇ.ಚ.
ರೇವಡಿಗಾರ
ಸಿಂಧಗಿ
'ಗುಲಾಬಿ' ಕಂಪು
ದೆಹಲಿಯಲ್ಲಿ ಪಸರಿಸಿದ ಗುಲಾಬಿಯ ಕಂಪು ಅದ್ಭುತವಾಗಿತ್ತು.
ಆದರೆ ನಮ್ಮ ಕರ್ನಾಟಕದ ಯಾವುದೇ ಮಾಧ್ಯಮಗಳು ಈ ಪ್ರಶಸ್ತಿ
ಸಮಾರಂಭಕ್ಕೆ ಇಷ್ಟೊಂದು ಅದ್ಭುತ ಪ್ರಚಾರ ಕೊಟ್ಟಿಲ್ಲ.
ಗ್ಲಾಮರ್/
ಕ್ರೈಂ ಇದ್ದರಷ್ಟೇ ಹೆಚ್ಚು ಪ್ರಚಾರ ಕೊಡುವ
ಮಾಧ್ಯಮದವರಿಗೆ ಕಾಸರವಳ್ಳಿ ಅವರ ಕಲಾತ್ಮಕ ಚಿತ್ರ ಅಥವಾ ಉಮಾಶ್ರೀ ಅವರ ಕಲಾ
ಪ್ರತಿಭೆಯಲ್ಲಿ ಗ್ಲಾಮರ್ ಮುಖ ಕಂಡಿಲ್ಲವೇನೋ?!
ಏನೇ ಆಗಲಿ,
'ಗುಲಾಬಿ'
ತಂಡ ವಿಶ್ವಮಟ್ಟದ ಸ್ಪರ್ಧೆಯೊಂದರಲ್ಲಿ ಕನ್ನಡ ಚಿತ್ರರಂಗದ ಘನತೆಯನ್ನು ಎತ್ತಿ
ಹಿಡಿದಿರುವುದು ನಮಗೆ ಹೆಮ್ಮೆಯ ವಿಚಾರ.
ಕಾಸರವಳ್ಳಿಗೆ ಹಾಗೂ ಅವರ ತಂಡಕ್ಕೆ ಅಭಿನಂದನೆಗಳು.
ಈ ಬಗ್ಗೆ ಮಾಹಿತಿ ನೀಡಿದ ಲೇಖಕರಿಗೆ
(ಕೆ.
ರಾಘವ ಶರ್ಮ)
ಧನ್ಯವಾದಗಳು.
ಚಿನ್ಮಯ,
ಮಂಗಳೂರು
ಇ-ಮೇಲ್
ಮೂಲಕ
ವಿಶೇಷ
ಮಾಹಿತಿ
'ಓಸಿಯನ್ ಟಾಕೀಸ್‌ನಲ್ಲಿ ಗುಲಾಬಿಯ ಕಂಪು'
(ಕೆ.
ರಾಘವ ಶರ್ಮ)
ಈ ಲೇಖನ ಮನೋಜ್ಞವಾಗಿ ಮೂಡಿಬಂದಿದೆ.
ಸಿನಿಮಾ ಮತ್ತು ಚಿತ್ರತಂಡದ ಕುರಿತು ವಿಶೇಷ ಮಾಹಿತಿ
ಒದಗಿಸಿದೆ.
ಶಂಶೀರ್,
ಬುಡೋಳಿ
ಇ-ಮೇಲ್
ಮೂಲಕ
ಗುಲಾಬಿ...
ಕಾಸರವಳ್ಳಿಗೆ ಮತ್ತೂ ಉಮಕ್ಕನಿಗೆ ಪ್ರಶಸ್ತಿ ಸಿಕ್ಕಿದ್ದು ನನಗೇ ಪ್ರಶಸ್ತಿ
ಸಿಕ್ಕಷ್ಟು ಸಂತೋಷವಾಗಿದೆ.
ಲೇಖನ,
ಸಂದರ್ಶನ,
ಸೊಗಸಾಗಿದೆ.
ಅಭಿನಂದನೆಗಳು.
ಮಂಡ್ಯ ರಮೇಶ್, ಬೆಂಗಳೂರು
ಇ-ಮೇಲ್
ಮೂಲಕ
ಅತ್ಯುತ್ತಮ
ವಿನ್ಯಾಸ
'ದ ಸಂಡೆ ಇಂಡಿಯನ್'
ಪತ್ರಿಕೆ ಭಾನುವಾರದ ರಜೆಯಷ್ಟೇ ಸೊಗಸಾಗಿದೆ.
ರಜಾದಿನದ ಸವಿ ಸವಿಯಲು ಅತ್ಯುತ್ತಮ ಸುದ್ದಿ
ಪತ್ರಿಕೆಯೊಂದು ನಮ್ಮ ಕೈಗೆ ಸಿಕ್ಕಂತಾಗಿದೆ.
ಮನೋಹರವಾಗಿ ಮೂಡಿಬರುವ ಗ್ರಾಫಿಕ್‌ಗಾಗಿ ವಿಶೇಷ
ಅಭಿನಂದನೆಗಳು.
ಫಯಾಜ್, ಬೆಂಗಳೂರು
ಇ-ಮೇಲ್
ಮೂಲಕ
| ಬಹುಮಾನಿತ ಪತ್ರಗಳು |
|

ಕೊಳಕು ಮುಖಗಳ ಅನಾವರಣ
ಸಂಸತ್ತಿನಲ್ಲಿ ನಡೆದ ವಿಶ್ವಾಸಮತ ಯಾಚನೆಯನ್ನು ಕುರಿತ ಅರಿಂದಮ್ ಚೌಧುರಿ ಅವರ 'ಬದುಕುಳಿದ ಯುಪಿಎ ಬಸವಳಿದ ಪ್ರಜಾಪ್ರಭುತ್ವ' ಕುರಿತಂತೆ ಈ ಪತ್ರ. ಜುಲೈನಲ್ಲಿ ನಡೆದ ಕಲಾಪ ಭಾರತೀಯ ಲೋಕಸಭೆಯ ಕೊಳಕು ಮುಖಗಳನ್ನು ಅನಾವರಣ ಮಾಡಿತು. ಲೋಕಸಭೆಯಲ್ಲಿ ಸದಸ್ಯರು ನಡೆದುಕೊಂಡ ರೀತಿ, ಹಣ ಚೆಲ್ಲಾಟ, ಕೆಸರೆರಚಾಟ ಮತ್ತು ಮುಖ್ಯವಿಷಯ ಅಣು ಒಪ್ಪಂದದ ಕುರಿತು ಮಾಡಿದ ಅನ್ಯಮನಸ್ಕ ಚರ್ಚೆ. ಇವೆಲ್ಲವೂ ಸಂಸದೀಯ ಮೌಲ್ಯ ಮತ್ತು ಘನತೆಗೆ ಕಳಂಕ ತರುವಂತಹವು. ಲೋಕಸಭೆಯ ಈ ಅವಹೇಳನಕಾರಿ ಬೆಳವಣಿಗೆಗೆ ಆಡಳಿತ ಪಕ್ಷ, ಅದರ ಮಿತ್ರ ಪಕ್ಷಗಳು ಮತ್ತು ವಿರೋಧ ಪಕ್ಷಗಳೆಲ್ಲವೂ ಸಮಾನ ಹೊಣೆಗಾರರು. ಅಣು ಒಪ್ಪಂದ ದೇಶಕ್ಕೆ ಎಷ್ಟರ ಮಟ್ಟಿಗೆ ಒಳಿತು ಮಾಡುತ್ತದೆ ಎಂಬುದು ಕಾಲವೇ ನಿರ್ಧರಿಸುತ್ತದೆ. ತಾಂತ್ರಿಕವಾಗಿ ಮತ್ತು ಸಾಮಾಜಿಕವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಕೈ ಜೋಡಿಸುವುದು ಭಾರತದ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು. 'ಕಾಂಗ್ರೆಸ್‌ನ ಹಸ್ತ ಮತ್ತು ಬಿಜೆಪಿಯ ಕಮಲ' ಆದರ್ಶ ಮಾದರಿಯಾಗಬಹುದು. ಆದರೆ ಪೂರ್ವ ಪೂರ್ವವೇ, ಪಶ್ಚಿಮ ಪಶ್ಚಿಮವೇ. ಇವೆರಡೂ ಎಂದೂ ಒಂದಾಗಲು ಸಾಧ್ಯವಿಲ್ಲ ಎಂಬ ಉದ್ಘಾರದಂತೆ ಇದು ಕನಸಾಗಿಯೇ ಉಳಿಯುತ್ತದೆ. ಆದರೂ ನಾವು ಆಶಾವಾದವನ್ನು ಬಿಡುವುದು ಬೇಡ. ಪ್ರೀತಿ ಮತ್ತು ರಾಜಕೀಯದಲ್ಲಿ ಅಸಾಧ್ಯ ಎನ್ನುವುದು ಇಲ್ಲ ಅಲ್ಲವೇ?
ಡಾ.ಎಸ್.ಕೆ. ಅಗರವಾಲ್
ಇ-ಮೇಲ್ ಮೂಲಕ ಅರಿವು ಮೂಡಬೇಕು
ಭಯೋತ್ಪಾದನೆ ಕುರಿತ ಮುಖಪುಟ ಲೇಖನ ಸೊಗಸಾಗಿ ಮೂಡಿ ಬಂದಿದೆ. ಇತ್ತೀಚೆಗೆ ನಡೆದ ಸರಣಿ ಸ್ಫೋಟಗಳು ನಮ್ಮ ರಕ್ಷಣಾ ವ್ಯವಸ್ಥೆ ಮತ್ತು ಪೊಲೀಸ್ ವ್ಯವಸ್ಥೆಗಳ ದಕ್ಷತೆ ಹಾಗೂ ಗುಣಮಟ್ಟದ ಕುರಿತು ಮತ್ತೊಮ್ಮೆ ಯೋಚಿಸುವಂತೆ ಮಾಡಿವೆ. ಬೆಂಗಳೂರಿನಲ್ಲಾದ ಸ್ಫೋಟ, ಅಹಮದಾಬಾದ್‌ನ ವಿಧ್ವಂಸಕ ಕೃತ್ಯ ಹಾಗೂ ಸೂರತ್‌ನಲ್ಲಿ ಬಾಂಬ್ ಸ್ಫೋಟಿಸಲು ಮಾಡಿದ ವಿಫಲ ಯತ್ನ ಇವೆಲ್ಲಾ ದೇಶದ ಯಾವ ಭಾಗದಲ್ಲಾದರೂ ಭಯೋತ್ಪಾದನೆ ಸಾಧ್ಯ ಎಂಬ ಸಂದೇಶವನ್ನು ರವಾನಿಸಿವೆ. ಇದು ಭಾರತ ಸೋಲನ್ನೊಪ್ಪಿಕೊಳ್ಳಲು ಸಾಧ್ಯವಿಲ್ಲದ ಯುದ್ಧ. ಭಯೋತ್ಪಾದನೆಗೆ ಪರೋಕ್ಷವಾಗಿ ಕಾರಣವಾಗಿರುವ ಸಮಾಜದ ಕೆಲವು ಸ್ತರಗಳಲ್ಲಿನ ಅಸಮಾಧಾನವನ್ನು ತೊಡೆದು ಹಾಕಿ ನಡೆಸುವ ಯುದ್ಧ. ಭಯೋತ್ಪಾದಕರ ಬಂದೂಕಿನ ಗುರಿ ಈಗ ಭಾರತದ ಕಡೆಗಿದೆ. ಭಯೋತ್ಪಾದನೆ ವಿರೋಧಿ ವ್ಯವಸ್ಥೆಯನ್ನು ಸುಸಜ್ಜಿತಗೊಳಿಸುವ, ಅದರ ಸಾಮರ್ಥ್ಯವನ್ನು ವೃದ್ಧಿಸುವ, ಆಧುನೀಕರಣಗೊಳಿಸುವ ಮತ್ತು ಇನ್ನಷ್ಟು ಬಿಗಿಗೊಳಿಸುವ ಮೂಲಕ ಇಂತಹ ವಿನಾಶಕಾರಿ ಶಕ್ತಿಗಳ ವಿರುದ್ಧ ಹೋರಾಡಬಹುದು. ಇದರ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸುವ ಕ್ರಿಯೆ ಕೂಡ ಅಷ್ಟೇ ಮಹತ್ವದ್ದು.
ರುಕ್ಮಣಿ ದೇವಿ
ಇ-ಮೇಲ್ ಮೂಲಕ
ಖಾಸಗಿಯವರ ಕೈಗೆ ಬಂದೂಕು
ಜಾಗತಿಕವಾಗಿ ಎಲ್ಲಿ ಬಿಕ್ಕಟ್ಟು ಎದುರಾಗುತ್ತದೆಯೋ ಅಲ್ಲೆಲ್ಲ ಇವರಿದ್ದಾರೆ. ಶೀತಲ ಸಮರದ ನಂತರದ ದಿನಗಳಲ್ಲಿ ಖಾಸಗಿ ಸೇನಾ ಸಂಸ್ಥೆಗಳ ವಹಿವಾಟು ಗಮನಾರ್ಹವಾಗಿ ವೃದ್ಧಿಸಿದೆ. ಸೇನಾ ಸಿಬ್ಬಂದಿ ಸಂಖ್ಯೆಯಲ್ಲಾದ ಕಡಿತದಲ್ಲಿ ಕೆಲಸ ಕಳೆದುಕೊಂಡ ತರಬೇತಿ ಹೊಂದಿದ 'ನಿರುದ್ಯೋಗಿ' ಸೈನಿಕರನ್ನು ಈ ಸಂಸ್ಥೆಗಳಲ್ಲಿ ನೇಮಿಸಿಕೊಳ್ಳಲಾಗುತ್ತದೆ. ಅಮೆರಿಕ ತನ್ನ ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಈ ಖಾಸಗೀ ಸೇನೆಗಳ ಬಳಕೆಗೆ ಪ್ರೋತ್ಸಾಹ ನೀಡುತ್ತಿದೆ. ಸಂಪಾದಕೀಯದಲ್ಲಿ 'ಪಿಎಂಸಿ'ಯಲ್ಲಿ ಹೀಗೆ ಕೊಲೆಗೆ ಪರವಾನಗಿ ಸಿಕ್ಕ ಸಾವಿರಾರು ಸೈನಿಕರು ಇರುವ ಬಗ್ಗೆ ಮಾಹಿತಿ ನೀಡಲಾಗಿದೆ. 'ಪಿಎಂಸಿ'ಯ ಬೆಳವಣಿಗೆಗೂ ಅಮೆರಿಕದ ರಾಜಕೀಯ ಮಹತ್ವಕಾಂಕ್ಷೆಗೂ ನೇರ ಸಂಬಂಧ ಇದೆ. ಸಮವಸ್ತ್ರ ಧರಿಸಿದ ಸೈನಿಕರು ಯುದ್ಧಗಳಿಗಷ್ಟೇ ಸೀಮಿತರಾಗಿದ್ದಾರೆ. ಹೀಗಾಗಿ ಖಾಸಗಿ ಸಂಸ್ಥೆಗಳ ಕೈಗೆ ಸಿಕ್ಕ ಬಂದೂಕು ಯಥೇಚ್ಛವಾಗಿ ಗುಂಡಿನ ಮಳೆಗರೆಯುತ್ತದೆ. ನಾವೆಲ್ಲಿದ್ದೇವೆ ಮತ್ತು ಎತ್ತ ಕಡೆಗೆ ಸಾಗುತ್ತಿದ್ದೇವೆ ಎಂಬುದನ್ನು ಅರಿಯಲು ಬಯಸುವವರಿಗೆ ಇದು ಅತ್ಯುತ್ತಮ ಲೇಖನ.
ರಘುನಾಥ್ ಶರ್ಮಾ
ಇ-ಮೇಲ್ ಮೂಲಕ
|
|