ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
ಪತ್ರ ಚರಿತ್ರೆ
ಯಾಹ್ಯಾ ಖಾನ್‌ಗೆ ಕಿಸ್ಸಿಂಜರ್ ಪತ್ರ
 
 

History Mail - The Sunday Indian - Kannadaಶೀತಲ ಸಮರದ ಸಮಯದಲ್ಲಿ ಅಮೆರಿಕ ಮತ್ತು ಚೀನಾ ದೇಶಗಳ ನಡುವಿನ ಮಾತುಕತೆಗೆ ಭೂಮಿಕೆಯನ್ನು ಸಿದ್ಧ ಮಾಡಿದವರು ಫೀಲ್ಡ್ ಮಾರ್ಷಲ್ ಯಾಹ್ಯಾ ಖಾನ್. ಪಾಕಿಸ್ತಾನದ ತನ್ನ ಭೇಟಿಯ ಸಮಯದಲ್ಲಿ ಅಮೆರಿಕದ ರಕ್ಷಣಾ ಸಲಹೆಗಾರ ಹೆನ್ರಿ ಕಿಸ್ಸಿಂಜರ್ ಅನಾರೋಗ್ಯದ ನೆಪವೊಡ್ಡಿ 1971ರ ಜುಲೈನಲ್ಲಿ ಎರಡು ದಿನ (9 ಮತ್ತು 10) ಅಧ್ಯಕ್ಷ ನಿಕ್ಸನ್ ಮತ್ತು ಚೀನಾ ನಾಯಕರ ನಡುವೆ ಸಂವಾದ ಏರ್ಪಡಿಸಲು ಬೀಜಿಂಗ್‌ಗೆ ತೆರಳಿದ್ದರು. ಈ ಭೇಟಿಗೆ ವೇದಿHistory Mail - The Sunday Indian - Kannadaಕೆ ಸಿದ್ಧಪಡಿಸಿದವರು ಯಾಹ್ಯಾ ಖಾನ್. ಎರಡೂ ರಾಷ್ಟ್ರಗಳ ನಾಯಕರಿಗೆ ಹಲವು ಪತ್ರಗಳನ್ನು ಬರೆಯುವ ಮೂಲಕ ಯಾಹ್ಯಾ ಖಾನ್ ಇದನ್ನು ಸಾಧ್ಯವಾಗಿಸಿದ್ದರು. ಉಭಯ ದೇಶಗಳ ಮಾತುಕತೆಗೆ ನಾಂದಿ ಹಾಡಿದ ಯಾಹ್ಯಾ ಖಾನ್ ಅವರನ್ನು ಅಭಿನಂದಿಸಿ ಅಧ್ಯಕ್ಷ ನಿಕ್ಸನ್ ಪರವಾಗಿ ಹೆನ್ರಿ ಕಿಸ್ಸಿಂಜರ್ ಈ ಪತ್ರ ಬರೆದಿದ್ದಾರೆ.

ವಾಷಿಂಗ್ಟನ್

26 ಜುಲೈ 1971

ಆತ್ಮೀಯ ಅಧ್ಯಕ್ಷರೇ,

ನೀವು ಖಂಡಿತ ಅಭಿನಂದನೆಗೆ ಅರ್ಹರು ಎಂಬುದನ್ನು ನಾನು ಮತ್ತೊಮ್ಮೆ ನಿಮ್ಮಲ್ಲಿ ಹಾಗೂ ಎಲ್ಲರಲ್ಲೂ ಸ್ಪಷ್ಟಪಡಿಸುತ್ತಿದ್ದೇನೆ. ನಿಮ್ಮನ್ನು ಅಭಿನಂದಿಸಲು ನನ್ನಲ್ಲಿ ಅಸಂಖ್ಯಾತ ಕಾರಣಗಳಿವೆ ಕೂಡ. ಆದರೆ ಎಲ್ಲಿಂದ ಪ್ರಾರಂಭಿಸಲಿ ಎಂದು ನನಗೆ ಅರಿವಾಗುತ್ತಿಲ್ಲ.

ಮೊದಲನೆಯದಾಗಿ, ಅಮೆರಿಕ ಮತ್ತು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ನಡುವಿನ ಮಾತುಕತೆಯಲ್ಲಿನ ನಿಮ್ಮ ಪಾತ್ರ ಅಮೂಲ್ಯವಾದದ್ದು. ನೀವು ಹಾಕಿಕೊಟ್ಟ ಅಡಿಪಾಯ ಮತ್ತು ತೋರಿಸಿದ ರಾಜತಾಂತ್ರಿಕತೆ ನಮ್ಮಿಬ್ಬರ ನಡುವಿನ ಒಡನಾಟಕ್ಕೆ ವಿಶ್ವಾಸಾರ್ಹ ಮತ್ತು ಸುಭದ್ರ ಬುನಾದಿ ಹಾಕಿದೆ. ಸೂಕ್ತ ದೃಷ್ಟಿಕೋನ ಹಾಗೂ ನಿಮ್ಮ ಸಮಯೋಚಿತ ಚಿಂತನೆ ಎರಡು ದೇಶಗಳ ನಡುವೆ ಬಾಂಧವ್ಯ ಅಭಿವೃದ್ಧಿಗೂ ಕಾರಣವಾಗಿದೆ.

ಇದೇ ವಿಶ್ವಾಸ ನನ್ನ ಇಂದಿನ ಭೇಟಿ ಮತ್ತು ಭವಿಷ್ಯದಲ್ಲಿ ಅಮೆರಿಕ ಅಧ್ಯಕ್ಷರ ಚೀನಾ ಪ್ರವಾಸಕ್ಕೆ ದಾರಿ ಹಾಕಿಕೊಟ್ಟ್ಟಿದೆ. ಇಲ್ಲಿರುವ ನಿಮ್ಮ ಪ್ರತಿನಿಧಿಗಳೂ ಉತ್ತಮ ಸೇವೆ ಸಲ್ಲಿಸಿದ್ದಾರೆ. ರಾಯಭಾರಿ ಹಿಲಾಲಿ ಅವರ ಪಾತ್ರವಂತೂ ಈವರೆಗಿನ ರಾಜತಾಂತ್ರಿಕ ವೃತ್ತಿಯಲ್ಲೇ ಅಸಾಧಾರಣ ಸಾಧನೆ ಎನ್ನಬಹುದು. ಒಟ್ಟಾರೆ ನೀವು ಹಾಗೂ ನಿಮ್ಮವರಿಂದಾಗಿ ನಮ್ಮ ಹಾದಿ ಸುಗಮವಾಗಿದ್ದು, ನಮ್ಮಲ್ಲೂ ಆತ್ಮವಿಶ್ವಾಸ ತುಂಬಿದ್ದೀರಿ ಎನ್ನುವುದು ಗಮನಾರ್ಹ.

ಈ ನನ್ನ ರಹಸ್ಯ ಯೋಜನೆಯನ್ನು ನಿಮ್ಮ ಅಧಿಕಾರಿಗಳು ನಿಭಾಯಿಸಿದ ರೀತಿ, ಅವರ ವ್ಯವಹಾರ ಕೌಶಲ್ಯ ಮತ್ತು ಕಾರ್ಯದಲ್ಲಿನ ದಕ್ಷತೆ ಅಮೋಘ ಹಾಗೂ ಎಲ್ಲರಿಗೂ ಮಾದರಿ ಆಗುವಂಥದ್ದು. ಈ ಯೋಜನೆಯಲ್ಲಿ ಭಾಗಿಯಾಗಿದ್ದ ನಿಮ್ಮ ಸಲಹೆಗಾರರು, ವಿಮಾನ ನಿಲ್ದಾಣದಿಂದ ಮತ್ತು ನಿಲ್ದಾಣಕ್ಕೆ ದಾರಿ ತೋರಿದ ಸೈನ್ಯಾಧಿಕಾರಿಗಳು, ವಿಮಾನದ ಚಾಲಕ ಮತ್ತು ಸಿಬ್ಬಂದಿ ವರ್ಗ... ಹೀಗೆ ಎಲ್ಲರಿಗೂ ನನ್ನ ಮತ್ತು ನಮ್ಮ ಅಧ್ಯಕ್ಷರ ಅಭಿನಂದನೆಗಳು. ನಮ್ಮ ಈ ಪ್ರಯಾಣಕ್ಕಿದ್ದ ಐತಿಹಾಸಿಕ ಮಹತ್ವ ಮತ್ತು ಪ್ರಪಂಚದ ಕೆಲವು ಅತಿ ದೊಡ್ಡ ಪರ್ವತಗಳನ್ನು ದಾಟಿ ಬಂದ ನಮಗೆ ದೊರೆತ ಆತ್ಮೀಯ ಸ್ವಾಗತ ಮತ್ತು ಆದರದಿಂದ ಮನ ತುಂಬಿ ಬಂತು. ಇದನ್ನು ನಾವು ಎಂದಿಗೂ ಮರೆಯುವುದಿಲ್ಲ.

ಅಧ್ಯಕ್ಷರೇ, ನಮ್ಮ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಯೋಜಿಸಿದ ನಿಮಗೆ ನಮ್ಮ ಹೃದಯ ಪೂರ್ವಕ ಕೃತಜ್ಞತೆಗಳು. ನಿಮ್ಮ ದೇಶದ ಸಮಸ್ಯೆಗಳನ್ನೂ ಬದಿಗಿರಿಸಿ ಜುಲೈ ೮ರಂದು ನಡೆದ ನಮ್ಮ ಮಾತುಕತೆ ಮತ್ತು ನನ್ನ ಪೀಕಿಂಗ್ ಭೇಟಿಯ ಕುರಿತು ತಾವು ತೋರಿದ ಕಾಳಜಿಯನ್ನು ನಾವು ಮುಂದಿನ ದಿನಗಳಲ್ಲಿ ಕೃತಜ್ಞತೆಯಿಂದ ಸ್ಮರಿಸುತ್ತೇವೆ. ಜೊತೆಗೆ, ನಾನು ಪಾಕಿಸ್ತಾನದಲ್ಲಿ ಕಳೆದ ದಿನಗಳನ್ನು, ನಮ್ಮ ಸಂವಾದ ಮತ್ತು ಪಾಕಿಸ್ತಾನದ ಆತಿಥ್ಯ ಎಲ್ಲವನ್ನೂ ಆನಂದಿಸಿದ್ದೇನೆ. ಈ ಅಲ್ಪಾವಧಿಯ ಭೇಟಿಯಲ್ಲಿ ಬಹಳಷ್ಟನ್ನು ಪಡೆದಿದ್ದೇನೆ.

ನೀವು ಹಾಗೂ ಸಹೋದ್ಯೋಗಿಗಳು ನಿಮ್ಮ ಶ್ರಮದ ಮೂಲಕ ನನ್ನ ಅನುಭವ, ಅಮೆರಿಕದ ವಿದೇಶಾಂಗ ನೀತಿ ಮತ್ತು ಜಾಗತಿಕ ಶಾಂತಿ ಕಾಪಾಡುವ ನಮ್ಮ ಧ್ಯೇಯದ ಮೇಲೆ ಎಂದಿಗೂ ಅಳಿಸಲಾಗದ ಗುರುತುಗಳನ್ನು ಮೂಡಿಸಿದ್ದೀರಿ.

ನಿಮ್ಮವನೇ ಆದ, ಹೆನ್ರಿ ಕಿಸ್ಸಿಂಜರ್

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .