|
ಸಿಬ್ಬಂದಿಗಳ ಕೊರತೆ ಹಿನ್ನೆಲೆಯಲ್ಲಿ ನೌಕಾಪ ಡೆಗೆ
ಅತ್ಯುತ್ತಮ ಅಭ್ಯರ್ಥಿಗಳನ್ನು ಹೇಗೆ ಆರಿಸುವಿರಿ?
ಹೌದು,
ಸೇನಾಧಿಕಾರಿಗಳ ಕೊರತೆಯೇ ಶೇ.
10ರಿಂದ
ಶೇ.
16ರಷ್ಟಿದೆ.
ಇನ್ನು ಶೇ.
5ರಷ್ಟು
ನಾವಿಕರ ಅಗತ್ಯವಿದೆ.
ಕೆಲ ದಿನಗಳಲ್ಲಿ ನೇಮಕಾತಿಗೆ ಸರ್ಕಾರದ ಅನುಮತಿ
ಸಿಗಲಿದ್ದು,
ಈ ಕೊರತೆ ನೀಗಿಸಲಿದ್ದೇವೆ.
ಆದರೆ ಪ್ರಸ್ತುತ ಸುಮಾರು
7,500
ನಾಗರಿಕ ಸಿಬ್ಬಂದಿ ಕೊರತೆ ಇದ್ದು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ.
ನಮ್ಮ ನಿರ್ವಹಣಾ ವಿಭಾಗದ ಬೆನ್ನೆಲುಬಾಗಿರುವ
ಮತ್ತು ದೀರ್ಘಕಾಲೀನ ಕೌಶಲ್ಯ ಪಡೆದಿರುವ ನಾಗರಿಕ ಸಿಬ್ಬಂದಿ ಕೊರತೆಯನ್ನು
ನೀಗಿಸುವುದು ಅಗತ್ಯ.
ಇದರಲ್ಲಿ ರಾಜಿ ಮಾಡಿಕೊಳ್ಳುವುದು ಸಾಧ್ಯವೇ ಇಲ್ಲ.
ಈ ಬಗ್ಗೆ ಹಣಕಾಸು ಸಚಿವರ ಜೊತೆ ಮಾತನಾಡಿದ್ದೇವೆ.
ಕಳೆದ ಅರ್ಧ ದಶಕದಲ್ಲಿ ನೌಕಾಪಡೆ ಈ ನಿಟ್ಟಿನಲ್ಲಿ
ಹಲವಾರು ಸವಾಲುಗಳನ್ನು ಸಮರ್ಥವಾಗಿ ಎದುರಿಸಿದೆ.
ಈ ಕ್ಷೇತ್ರದ ಅನನ್ಯ ಅವಕಾಶಗಳ ಬಗ್ಗೆ
ದೇಶದಾದ್ಯಂತ ಯುವಜನರಲ್ಲಿ ಜಾಗೃತಿ ಮೂಡಿಸಲಾಗಿದೆ.
ಈಗಿರುವ ಸಿಬ್ಬಂದಿ ಕೌಶಲ್ಯ ಅಭಿವೃದ್ಧಿಪಡಿಸಲು ಯಾವ
ಯೋಜನೆಗಳನ್ನು ಹಾಕಿಕೊಂಡಿದ್ದೀರಿ?
ಒಂದು ದೇಶ ಸಾಧಿಸಿದ ತಂತ್ರಜ್ಞಾನ ಪ್ರಗತಿಯ
ಪ್ರತಿಬಿಂಬ ಅದರ ನೌಕಾಪಡೆ.
ಭಾರತೀಯ ನೌಕಾಸೇನೆಯ ಅತ್ಯಾಧುನಿಕ ಯುದ್ಧನೌಕೆಗಳು,
ಜಲಾಂತರ್ಗಾಮಿಗಳು ಮತ್ತು ವಿಮಾನಗಳನ್ನು
ಸಮರ್ಥವಾಗಿ ನಿಭಾಯಿಸುವ ಪರಿಣತಿ ಸಾಧಿಸುವುದು ಸುಲಭವಲ್ಲ.
ಪ್ರತಿರೋಧ ಎದುರಿಸುವ ಅನುಭವ ರೂಢಿಸಿಕೊಳ್ಳಬೇಕು.
ಶಾಂತಿ ಕಾಪಾಡುವ ಸಂದರ್ಭದಲ್ಲಿರಲಿ ಅಥವಾ ಬಲಾಬಲ
ಪ್ರದರ್ಶನದಲ್ಲೇ ಇರಲಿ,
ವಿರೋಧವನ್ನು ಸಮರ್ಥವಾಗಿ ಎದುರಿಸಿ ಗೆಲುವು ಸಾಧಿಸುವುದು
ಸುಲಭವಲ್ಲ.
ನೌಕಾಸೇನೆಯ ವ್ಯಾವಹಾರಿಕ ಕೌಶಲ್ಯ ಎಷ್ಟು
ಪರಿಣಾಮಕಾರಿಯಾಗಿದೆ?
ಸಮುದ್ರ ತೀರ ಹೊಂದಿದ ಯಾವುದೇ ದೇಶ ಯುದ್ಧ
ಇಲ್ಲದ ವೇಳೆ ತನ್ನ ನೌಕಾಸೇನೆಯ ವ್ಯವಹಾರ ಕುಶಲತೆಯನ್ನು ಪರಿಣಾಮಕಾರಿಯಾಗಿ
ಬಳಸಿಕೊಳ್ಳುತ್ತದೆ.
ಭದ್ರತಾ ವ್ಯವಸ್ಥೆಯನ್ನು ಸುಸ್ಥಿರವಾಗಿಟ್ಟುಕೊಳ್ಳಲು
ನೌಕಾ ಪಡೆಗಳ ಸಾಮರ್ಥ್ಯವನ್ನು ಒರೆಗೆ ಹಚ್ಚುತ್ತದೆ.
ತಮ್ಮ ಸಾಗರಸಂಬಂಧ ವ್ಯಾಪ್ತಿಗೆ ಬರುವ ದೇಶಗಳು
ಮತ್ತು ಇತರ ದೇಶಗಳ ಸಮುದ್ರ ಭಾಗದಲ್ಲಿ ನಡೆಯುವ ಚಟುವಟಿಕೆ ಮತ್ತು
ಹಿತಾಸಕ್ತಿಗಳ ಮೇಲೆ ಕಣ್ಣಿಟ್ಟಿರುತ್ತವೆ.
ಭಾರತದ ವಿಚಾರಕ್ಕೆ ಬಂದರೆ ಇದು ಇನ್ನೂ ಪ್ರಸ್ತುತ.
ಭಾರತದ ವ್ಯಾಪ್ತಿಗೆ ಬರುವ ಸಾಗರವಲಯದಲ್ಲಿ ಅಂತರ್
ರಾಷ್ಟ್ರೀಯ ಹಡಗು ಸಂಚಾರದಟ್ಟಣೆ ಹೆಚ್ಚು.
ಹೀಗಾಗಿ ಭದ್ರತಾ ವ್ಯವಸ್ಥೆಯ ಸವಾಲುಗಳೂ ಅಧಿಕ.
ಪ್ರಾಕೃತಿಕ ಮತ್ತು ಮಾನವ ನಿರ್ಮಿತ ದುರಂತಗಳೆರಡೂ
ಈ ಪ್ರಾಂತ್ಯದಲ್ಲಿ ಸಾಮಾನ್ಯ.
ಸಮುದ್ರದ ಮೂಲಕ ಅಕ್ರಮ ಮಾದಕದ್ರವ್ಯ,
ಶಸ್ತ್ರಾಸ್ತ್ರ ಮತ್ತು ಮಾನವ ಸಾಗಾಟ,
ಕಡಲುಗಳ್ಳರು,
ಭಯೋತ್ಪಾದನೆ ಮೊದಲಾದ ಎಲ್ಲಾ ಸಮಸ್ಯೆಗಳನ್ನೂ
ಎದುರಿಸಬೇಕಿದೆ.
ಈ ಸವಾಲುಗಳನ್ನೆಲ್ಲಾ ನೌಕಾ ಪಡೆ ರಾಜತಾಂತ್ರಿಕ ಕೌಶಲ್ಯಗಳ
ಮೂಲಕ ವ್ಯವಸ್ಥಿತವಾಗಿ ನಿರ್ವಹಿಸುತ್ತಿದೆ.
ಹಿಂದೂ ಮಹಾಸಾಗರದಲ್ಲಿ ದೇಶೀಯ ಮತ್ತು ವಿದೇಶೀಯ
ಚಟುವಟಿಕೆಗಳು ಹೆಚ್ಚಾಗುತ್ತಿರುವ ಬಗ್ಗೆ?
ಹಿಂದೂ ಮಹಾಸಾಗರದಲ್ಲಿ ಭದ್ರತಾ ಸಂಬಂಧಿ
ಸವಾಲುಗಳು ಒಂದೆರಡಲ್ಲ.
ಪ್ರಾಕೃತಿಕ ಮತ್ತು ಮಾನವ ನಿರ್ಮಿತ ದುರಂತಗಳೆರಡೂ ಇಲ್ಲಿ
ಸಾಮಾನ್ಯ.
ಸಮುದ್ರದ ಮೂಲಕ ಅಕ್ರಮ ಮಾದಕದ್ರವ್ಯ,
ಶಸ್ತ್ರಾಸ್ತ್ರ ಮತ್ತು ಮಾನವ ಸಾಗಾಟ,
ಕಡಲುಗಳ್ಳರು,
ಭಯೋತ್ಪಾದನೆ ಮೊದಲಾದ ಎಲ್ಲಾ ಸಮಸ್ಯೆಗಳೂ
ಇಲ್ಲಿವೆ.
ನಮ್ಮ ವ್ಯಾಪ್ತಿಗೆ ಬರುವ ಸಮುದ್ರದಲ್ಲಿನ ಸಮಗ್ರ ಭದ್ರತಾ
ಸಮಸ್ಯೆಗಳು ಎಷ್ಟು ವ್ಯಾಪಕವಾಗಿವೆಯೋ,
ಹಾಗೆಯೇ ಅವಕಾಶಗಳೂ ಸಹ.
ಉದಾಹರಣೆಗೆ ಮಲಾಕ್ಕಾ ಜಲಸಂಧಿಯ ಸುತ್ತಮುತ್ತಲೂ
ಇರುವ ದೇಶಗಳ ನಡುವೆ ಸಾಮರಸ್ಯ ಮತ್ತು ಸಹಕಾರ ವೃದ್ಧಿ ಪ್ರಯತ್ನಗಳಿಂದಾಗಿ
ಶಸ್ತ್ರಾಸ್ತ್ರ ಕಳವಿನಂತಹ ವಿಧ್ವಂಸಕ ಕೃತ್ಯಗಳಲ್ಲಿ ನಾಟಕೀಯ ಕುಸಿತ ಕಂಡಿದೆ.
ಕೆಲ ವರ್ಷಗಳ ಹಿಂದಿನವರೆಗೂ ನಿತ್ಯ ಒಂದಲ್ಲ ಒಂದು
ರೀತಿಯಲ್ಲಿ ನಡೆಯುತ್ತಿದ್ದ ಕ್ರೌರ್ಯ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು.
ಭಾರತದ ವ್ಯಾಪ್ತಿಗೆ ಬರುವ ಸಮುದ್ರದ ಪಶ್ಚಿಮ
ಭಾಗದಲ್ಲಿ ಬಹುರಾಷ್ಟ್ರೀಯ 'ಟಾಸ್ಕ್
ಫೋರ್ಸ್ 150'
ನಡೆಸಿರುವ ಪ್ರಯತ್ನಗಳು ಕಡಲ ತಡಿಯಲ್ಲಿ ಸೊಮಾಲಿಯಾ ಮೂಲದ ಸಮುದ್ರಗಳ್ಳರ
ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ.
ನೌಕಾಪಡೆಗೆ ಸೇರಿದ ಹಳೇ ಯುದ್ಧನೌಕೆಗಳನ್ನು
ನಿಭಾಯಿಸಲು ಯಾವ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ?
ಭಾರತೀಯ ನೌಕಾಸೇನೆಯ
'ಅರ್ಹತೆಯ ಹಂತ'ದ
ಸಂಪೂರ್ಣ ಪರಿಕಲ್ಪನೆಯೇ ಬದಲಾಗಿದೆ.
ಈಗ ನಮ್ಮಲ್ಲಿ ಎಷ್ಟು ಯುದ್ಧನೌಕೆಗಳಿವೆ ಎನ್ನುವ
ಲೆಕ್ಕಾಚಾರಗಳಿಗಿಂತ ಹೆಚ್ಚಾಗಿ ಅವು ಕಾರ್ಯ ನಿರ್ವಹಿಸಲು ಎಷ್ಟು
ಸಮರ್ಥವಾಗಿವೆ ಎನ್ನುವುದಕ್ಕೇ ಪ್ರಾಮುಖ್ಯತೆ ಕೊಡುತ್ತಿದ್ದೇವೆ.
ಭಾರತೀಯ ನೌಕಾಪಡೆಯ ದೀರ್ಘಕಾಲೀನ
ದೂರದೃಷ್ಟಿಯುಳ್ಳ ಯೋಜನೆಗೆ ಸಂಬಂಧಿಸಿದಂತೆ ಪ್ರಸ್ತುತ ಸುಮಾರು
42
ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿಗಳು ಭಾರತೀಯ ಮತ್ತು ವಿದೇಶಿ
ನೆಲೆಗಳಲ್ಲಿ ನಿರ್ಮಾಣ ಹಂತದಲ್ಲಿವೆ.
ಇವುಗಳಲ್ಲಿ
32
ಯುದ್ಧನೌಕೆಗಳು ಮತ್ತು ಆರು ಜಲಾಂತರ್ಗಾಮಿಗಳು ಭಾರತೀಯ ನಿರ್ಮಾಣದವು;
ಉಳಿದ ಆರು ರಷ್ಯಾ ನಿರ್ಮಾಣದವು.
ರಷ್ಯಾ ನಿರ್ಮಾಣದವುಗಳಲ್ಲಿ ಎಕ್ಸ್-ಗೊರೊಶ್ಕವ್
(ವಿಕ್ರಮಾದಿತ್ಯ
ಎಂದು ಹೆಸರಿಸಲಾಗುವುದು)
ರಿಪೇರಿ ಮತ್ತು ನವೀಕರಣ ಹಂತದಲ್ಲಿದೆ.
3
ಯುದ್ಧನೌಕೆಗಳು ತಲ್ವಾರ್ ವರ್ಗಕ್ಕೆ ಬರುತ್ತವೆ.
ವರ್ಷದಲ್ಲಿ ಮೂರರಿಂದ
4
ಯುದ್ಧನೌಕೆಗಳು ನೌಕಾಪಡೆಗೆ ಸೇರ್ಪಡೆಯಾಗುತ್ತವೆ.
ಹಳೇ ಯುದ್ಧನೌಕೆಗಳ ಸಾಮರ್ಥ್ಯ ಕುಂದುತ್ತಾ
ಹೋಗುತ್ತಿರುವ ಹಿನ್ನೆಲೆಯಲ್ಲಿ ನಮ್ಮ ದಕ್ಷತೆಯನ್ನು ಅದೇ ಮಟ್ಟದಲ್ಲಿ
ಕಾಪಾಡಿಕೊಳ್ಳಲು ಹೊಸದಾಗಿ ಸೇರ್ಪಡೆಯಾಗುವ ಯುದ್ಧನೌಕೆಗಳು ನೆರವಾಗುತ್ತವೆ.
ಚೀನಾದಿಂದ ಹಿಂದೂ ಮಹಾ ಸಾಗರದ ಭದ್ರತೆಗೆ ಅಪಾಯ
ಸಂಭವಿಸುವ ಆತಂಕ ವ್ಯಕ್ತವಾಗುತ್ತಿದೆ.
ನಿಮ್ಮ ಅಭಿಪ್ರಾಯ?
ನಮ್ಮ ಪ್ರಕಾರ ಚೀನಾದ ಜೊತೆ ಮತ್ತೊಂದು ಯುದ್ಧ
ನಡೆಯುವ ಸಂಭವ ಸೃಷ್ಟಿಯಾಗದು.
ಭಾರತದಂತೆ ಚೀನಾದ ಅರ್ಥ ವ್ಯವಸ್ಥೆಯೂ ಪ್ರಗತಿ
ಪಥದಲ್ಲಿ ಸಾಗುತ್ತಿದೆ.
ಭಾರತ ಮತ್ತು ಚೀನಾಗಳೆರಡೂ ಇಂಧನಕ್ಕಾಗಿ ಕಲ್ಲಿದ್ದಲನ್ನೇ
ಅಧಿಕವಾಗಿ ಅವಲಂಬಿಸಿದೆ.
ತೈಲ ಬಳಕೆ ದಿನೇ ದಿನೇ ವೃದ್ಧಿಸುತ್ತಿರುವುದರಿಂದ ಇದು
ಎರಡೂ ರಾಷ್ಟ್ರಗಳ ವಿದೇಶಿ ನೀತಿ ಮತ್ತು ಭದ್ರತಾ ನೀತಿಯ ಮೇಲೆ ಪರಿಣಾಮ
ಬೀರುವುದು ಸಹಜವೇ.
ಸಾಗರ ಪ್ರಾಂತಗಳ ನಿಯಂತ್ರಣಕ್ಕಾಗಿ ಉನ್ನತ ಮಟ್ಟದ ಭದ್ರತಾ
ವ್ಯವಸ್ಥೆ ಅಳವಡಿಸುವುದರಲ್ಲಿ ಭಾರತ ಮತ್ತು ಚೀನಾಗಳೆರಡರಲ್ಲೂ ನಾವು
ಹೋಲಿಕೆಗಳನ್ನು ಕಾಣಬಹುದು.
1985ರಲ್ಲಿ
ಚೀನಾ ಪೂರ್ವ ಏಷ್ಯಾದ ಅತೀ ದೊಡ್ಡ ತೈಲ ಸಾಗಣೆ ರಾಷ್ಟ್ರವಾಗಿತ್ತು.
1993ರಲ್ಲಿ
ಚೀನಾ ತೈಲ ಆಮದು ಮಾಡಿಕೊಳ್ಳಲು ಆರಂಭಿಸಿತು.
2003ರಲ್ಲಿ
ಅದು ಜಾಗತಿಕವಾಗಿ ತೈಲ ಆಮದು ಮಾಡಿಕೊಳ್ಳುವ ಎರಡನೇ ಅತೀ ದೊಡ್ಡ
ರಾಷ್ಟ್ರವಾಯಿತು.
ಹಾಗೆ ಆರ್ಥಿಕ ಪ್ರಗತಿಯನ್ನು ಸುಸ್ಥಿರಗೊಳಿಸಲು ಚೀನಾ
ಮತ್ತು ಭಾರತಗಳೆರಡೂ ವಿದೇಶಿ ಇಂಧನ ಮತ್ತು ಕಚ್ಚಾವಸ್ತುಗಳನ್ನೇ
ಅವಲಂಬಿಸಬೇಕಾಗಿದೆ.
ಈ ಸಂಪನ್ಮೂಲಗಳನ್ನು ಸರಬರಾಜು ಮಾಡುವ ಪ್ರಮುಖ
ದೇಶಗಳೆಲ್ಲಾ ಹಿಂದೂ ಮಹಾ ಸಾಗರದ ಮಗ್ಗುಲಲ್ಲೇ ಇವೆ.
ಅಥವಾ ಆ ಮಾರ್ಗದ ಮೂಲಕ ಸಾಗಬೇಕು.
ಹೀಗಾಗಿ ಹಿಂದೂ ಮಹಾಸಾಗರ ಮತ್ತು ಅದರ
ಸುತ್ತಮುತ್ತಲ ಪ್ರಾಂತ ಕುರಿತು ಚೀನಾಕ್ಕೆ ತನ್ನದೇ ಆದ ರಾಷ್ಟ್ರೀಯ
ಹಿತಾಸಕ್ತಿಗಳಿರುವುದರಲ್ಲಿ ಅನುಮಾನವೇ ಇಲ್ಲ.
ಆದರೆ ಈ ಹಿತಾಸಕ್ತಿಗಳನ್ನು ಪೂರೈಸಲು ಅದು ಯಾವ
ಮಟ್ಟದವರೆಗೂ ಹೋಗಲು ಸಿದ್ಧವಿದೆ ಮತ್ತು ಯಾವ ಗತಿಯಲ್ಲಿ ಕಾರ್ಯ
ನಿರ್ವಹಿಸಲಿದೆ ಎನ್ನುವುದು ಮುಖ್ಯ.
ಎರಡೂ ದೇಶಗಳ ಭೌಗೋಳಿಕ ಸ್ಪರ್ಧೆ ಹಿಂದೂ
ಮಹಾಸಾಗರದಲ್ಲಿ ಕೊನೆಗೊಳ್ಳುವ ಕಾರಣದಿಂದಾಗಿ ನಾವು ಜಾಗೃತರಾಗಿದ್ದೇವೆ.
ಈ ಸ್ಪರ್ಧೆ ಯುದ್ಧದಲ್ಲಿ ಪರ್ಯವಸಾನವಾಗದಂತೆ
ತಡೆಯಲು ವ್ಯಾವಹಾರಿಕ ತಂತ್ರಗಳ ಅಗತ್ಯವಿದೆ.
ಪ್ರಸ್ತುತ ಚೀನಾ ಜೊತೆಗೆ ನಮ್ಮ ಸಂಬಂಧ
ಸ್ಥಿರವಾಗಿದ್ದು ಸುಧಾರಿಸುತ್ತಿದೆ.
ನಾವು 'ಬ್ಲೂವಾಟರ್'
ನೌಕಾಪಡೆಯಾಗಲು ಎಷ್ಟು ಸಮೀಪದಲ್ಲಿದ್ದೇವೆ?
ಭಾರತೀಯ ನೌಕಾಪಡೆ
'ಐಎನ್‌ಎಸ್
ವಿರಾಟ್'
ಮತ್ತು 'ಜಲಾಶ್ವ'ದಂತಹ
ದೊಡ್ಡ ಯುದ್ಧನೌಕೆಗಳನ್ನು ಹೊಂದಿದೆ.
ಮತ್ತು ಇತರ ಅತ್ಯಾಧುನಿಕ ಸರ್ಫೇಸ್ ಮತ್ತು ಸಬ್
ಸರ್ಫೇಸ್ ಯುದ್ಧ ನೌಕೆಗಳೂ ನಮ್ಮ ಸಾಮರ್ಥ್ಯವನ್ನು ಸಾಗರದ ಬಹುದೂರಕ್ಕೂ
ಹರಡಬಲ್ಲವು.
ಹಾಗೆ ನೋಡಿದರೆ ಭಾರತೀಯ ನೌಕಾಪಡೆ
'ಬ್ಲೂ ವಾಟರ್'
ಪಡೆಯೇ.
ಸಾಗರದಾಳದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವಿರುವ
ನೌಕಾಪಡೆಗೆ 'ಬ್ಲೂ
ವಾಟರ್'
ನೌಕಾಪಡೆ ಎನ್ನಲಾಗುತ್ತದೆ.
ಟಿಎಸ್‌ಐ
|