|
ಭಾರತೀಯ ಸೇನೆಯ ಕುರಿತು ನಿಮ್ಮ ಕನಸುಗಳೇನು?
ಪೂರ್ಣ ಪ್ರೇರಿತ,
ಅತ್ಯಂತ ಸುಸಜ್ಜಿತ ಮತ್ತು ಆಧುನೀಕರಣಗೊಂಡು
ಕಾರ್ಯಾಚರಣೆಗೆ ಸದಾ ಸಿದ್ಧವಾಗಿರುವ,
ಎಂತಹ ಬಿಕ್ಕಟ್ಟಿನ ಸಮಯದಲ್ಲೂ ಪ್ರತಿಕೂಲ
ಪರಿಸ್ಥಿತಿಗಳನ್ನು ಹಿಮ್ಮೆಟ್ಟಿಸಿ ದಕ್ಷತೆಯಿಂದ ಕಾರ್ಯನಿರ್ವಹಿಸುವ
ಸಾಮರ್ಥ್ಯವುಳ್ಳ ಸಮಗ್ರ ಸೇನಾಪಡೆಯನ್ನಾಗಿಸುವುದು ನನ್ನ ಕನಸು.
ನಿಮ್ಮ ಪ್ರಕಾರ,
ಸದ್ಯಕ್ಕೆ ಮತ್ತು ಭವಿಷ್ಯದ ದಿನಗಳಲ್ಲಿ ಭಾರತೀಯ
ರಕ್ಷಣಾ ಪಡೆ ಎದುರಿಸಬೇಕಾಗುವ ಸವಾಲುಗಳೇನು?
ಸದ್ಯಕ್ಕೆ ಭಾರತೀಯ ಸೇನೆಯ ಮುಂದಿರುವ
ಸವಾಲುಗಳೆಂದರೆ 'ಕಡಿಮೆ
ತೀವ್ರತೆ ಬಿಕ್ಕಟ್ಟು ನಿಗ್ರಹ ಕಾರ್ಯಾಚರಣೆ'
(ಎಲ್‌ಐಸಿಓ)ಯಲ್ಲಿನ
ತನ್ನ ಆಕ್ರಮಣಕಾರಿ ಸಾಮರ್ಥ್ಯವನ್ನು ಕಾಯ್ದುಕೊಳ್ಳುವುದರೊಂದಿಗೆ
ಸಾಂಪ್ರದಾಯಿಕ ರಕ್ಷಣಾ ಬಿಕ್ಕಟ್ಟುಗಳನ್ನು ಎದುರಿಸಲು ದೊಡ್ಡ ಮಟ್ಟದ
ಪೂರ್ವಸಿದ್ಧತಾ ಕಾರ್ಯಾಚರಣೆಗಳನ್ನೂ ಮುಂದುವರಿಸಬೇಕಿದೆ.
ಅದಕ್ಕಾಗಿ ನಮ್ಮ ಕಾರ್ಯತಂತ್ರ ವಿಧಾನ ಮತ್ತು
ಸಾಮರ್ಥ್ಯದಲ್ಲಿ ಹಲವು ಬದಲಾವಣೆಗಳನ್ನು ಮಾಡಬೇಕಾಗಬಹುದು.
ಒಂದು ಕಡೆ ಆತಂಕವಾದಿಗಳ ಸಂಚನ್ನು ಬೇಧಿಸಿ
ಅವುಗಳನ್ನು ಸಮರ್ಥವಾಗಿ ನಿಭಾಯಿಸಲು ಇದು ಸಹಾಯ ಮಾಡುತ್ತದೆ.
ಮಾತ್ರವಲ್ಲ,
ನಮ್ಮ ಪಡೆಗಳನ್ನು ಆಧುನೀಕರಣಗೊಳಿಸುವ,
ನಮ್ಮಲ್ಲಿನ ಕುಂದು-ಕೊರತೆಗಳನ್ನು
ಗುರುತಿಸಿ ಆ ಮೂಲಕ ಅವುಗಳ ಕಾರ್ಯದಕ್ಷತೆಯನ್ನು ಹೆಚ್ಚಿಸುವಲ್ಲಿ,
ಮುಂದೆ ಆಕ್ರಮಣವನ್ನು ಪರಿಣಾಮಕಾರಿಯಾಗಿ
ಎದುರಿಸಲು ಇದು ನೆರವಾಗುತ್ತದೆ.
ಮಧ್ಯಾವಧಿ ಮತ್ತು ದೀರ್ಘಕಾಲದಲ್ಲಿ,
ನಮ್ಮೆದುರಿಗಿರುವ ಸವಾಲುಗಳೆಂದರೆ,
ಹೊಸ ರಕ್ಷಣಾ ತತ್ವಗಳನ್ನು ಚಲಾವಣೆಗೆ ತರುವುದು,
ತಾಂತ್ರಿಕ ವಿಷಯಗಳು,
ಜಂಟಿ ಪಡೆಗಳು ಮತ್ತು ದೇಶದಲ್ಲಿ ಬೆಳೆಯುತ್ತಿರುವ
ಪ್ರಾಂತೀಯ ಮತ್ತು ಜಾಗತಿಕ ರಕ್ಷಣಾ ಬದ್ಧತೆಗಳಿಗೆ ಉತ್ತೇಜನ ನೀಡುವ
ನಿಟ್ಟಿನಲ್ಲಿ ಜಂಟಿ ಕಾರ್ಯ ಸಾಮರ್ಥ್ಯಗಳನ್ನು ಹೆಣೆಯುವುದು.
ನಮ್ಮ ಅಗತ್ಯ ಸೇನಾ ಸಾಮರ್ಥ್ಯವನ್ನು
ವೃದ್ಧಿಸುವ ಮತ್ತು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ದೀರ್ಘಕಾಲಿಕ ಮತ್ತು
ಅಲ್ಪಕಾಲಿಕ ಕುಂದು-
ಕೊರತೆಗಳನ್ನು ಮೀರುವುದು ಅವಶ್ಯಕ.
ಅದನ್ನು ಸಾಧಿಸಲು ನಮಗೆ
'ಮಾನವ
ಸಂಪನ್ಮೂಲ'ದ
ಅವಶ್ಯಕತೆ ಇದೆ.
ನಮಗೆ ಲಭ್ಯವಿರುವ ದೇಶದ ಮಾನವ ಸಂಪನ್ಮೂಲದಲ್ಲಿ ನಮಗೆ
ಅವಶ್ಯಕತೆ ಇರುವ ಬಲಿಷ್ಠ ಹಾಗೂ ಆರೋಗ್ಯವಂತ ಯುವ ಸಮುದಾಯವನ್ನು ಸೆಳೆಯುವುದು
ಮತ್ತು ಅವರನ್ನು ಉಳಿಸಿಕೊಳ್ಳುವುದು ಈಗಿರುವ ಸವಾಲು.
ಸೇನೆಯನ್ನು ಆಧುನೀಕರಣ ಮಾಡುವ ದಿಸೆಯಲ್ಲಿ
ನಿಮ್ಮ ಆದತೆಗಳೇನು?
ಆಂತರಿಕ ಮತ್ತು ಬಾಹ್ಯ ಅಪಾಯಗಳನ್ನು
ಎದುರಿಸಲು,
ಸೇನೆಯನ್ನು ಸಮರ್ಥವಾಗಿ ಸಜ್ಜುಗೊಳಿಸಲು ಆಧುನೀಕರಣ
ಅತ್ಯಂತ ಮುಖ್ಯ.
ಶಸ್ತ್ರಾಸ್ತ್ರಗಳನ್ನು ತಾಂತ್ರಿಕವಾಗಿ
ಆಧುನೀಕರಣಗೊಳಿಸುವುದು,
ವಾಯುಪಡೆ ಮತ್ತು ನೌಕಾಪಡೆಯ ಶಸ್ತ್ರಗಳನ್ನು
ಆಧುನೀಕರಣಗೊಳಿಸುವುದು ನಮ್ಮ ಪ್ರಮುಖ ಆದತೆಗಳಲ್ಲಿ ಒಂದು.
ರಕ್ಷಣಾ ಸಿಬ್ಬಂದಿ ನೇಮಕಾತಿ,
ಮೊದಲಿದ್ದ ಡಿಪಿಪಿ
2006 ಮತ್ತು
ಈಗಿನ ಡಿಪಿಪಿ 2008
ಸಂಪೂರ್ಣ ಸುವ್ಯವಸ್ಥಿತಗೊಂಡಿವೆ.
ಮತ್ತು ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿದೆ.
ಜೊತೆಗೆ,
ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರವೇ
ಪೂರೈಸುವಂತೆ ಮಾಡುವ ನಿಟ್ಟಿನಲ್ಲಿ ರಕ್ಷಣಾ ಸಚಿವಾಲಯ ಸಕಾರಾತ್ಮಕ
ಹೆಜ್ಜೆಗಳನ್ನಿಟ್ಟಿದೆ.
ಈ ಕಾರ್ಯಕ್ರಮಗಳು ನಮ್ಮ ಸೇನೆಯ ಆಧುನೀಕರಣದ
ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತವೆ.
ಆಂತರಿಕ ರಕ್ಷಣೆಗೆ ಸೇನೆಯ ಬಳಕೆಯನ್ನು
ಆದಷ್ಟು ಕಡಿಮೆ ಮಾಡಿ ಪೊಲೀಸ್ ವ್ಯವಸ್ಥೆಯನ್ನು ಬಲಗೊಳಿಸಬೇಕು ಎನ್ನುವ ವಾದ
ಕೇಳಿಬರುತ್ತಿದೆ.
ನಿಮ್ಮ ಅಭಿಪ್ರಾಯವೇನು?
ದೇಶದೊಳಗೆ ಗಂಭೀರ ಸಮಸ್ಯೆ ಉದ್ಭವವಾದಾಗ
ಅದನ್ನು ಶಮನ ಮಾಡುವ ನಿಟ್ಟಿನಲ್ಲಿ ನಾಗರಿಕ ಆಡಳಿತ ವ್ಯವಸ್ಥೆಗೆ ಸಹಾಯ
ಮಾಡುವುದು ಸೇನೆಯ ಸಾಂವೈಧಾನಿಕ ಕರ್ತವ್ಯ.
ಆಂತರಿಕ ರಕ್ಷಣೆ ಗೃಹ ಸಚಿವಾಲಯದ ವ್ಯಾಪ್ತಿಗೆ
ಒಳಪಟ್ಟಾಗ,
ಆಂತರಿಕ ಅಪಾಯದ ಆಯಾಮಗಳು ಮತ್ತು ಅದರ ಸ್ವರೂಪ
ದೊಡ್ಡದಿದ್ದಾಗ,
'ಸ್ಥಳೀಯ
ಆಡಳಿತ'ಗಳ
ಕೈಮೀರಿದಾಗ ಸೇನೆ ಮಧ್ಯಪ್ರವೇಶ ಮಾಡುವುದು ಅನಿವಾರ್ಯ.
ಈಗಿನ ಸ್ಥಿತಿಯಲ್ಲಿ ಆಂತರಿಕ ಮತ್ತು ಬಾಹ್ಯ
ಆತಂಕವಾದಿ ಶಕ್ತಿಗಳು ಒಂದಕ್ಕೊಂದು ಕೈಜೋಡಿಸಿದ್ದು,
ಪರೋಕ್ಷ ಯುದ್ಧ ಮತ್ತು ಸಂಕೀರ್ಣವಾದ ಬಂಡಾಯದ
ಸ್ಥಿತಿ ನಿರ್ಮಾಣವಾಗುತ್ತಿದೆ.
ಇಂತಹ ಸೂಕ್ಷ್ಮ ಸನ್ನಿವೇಶಗಳಲ್ಲಿ ಸೇನೆಯ ಪ್ರಥಮ
ಕೆಲಸವೆಂದರೆ ಹಿಂಸಾಚಾರವನ್ನು ನಿಭಾಯಿಸಲು ಸಾಧ್ಯವಾಗುವ ಹಂತಕ್ಕೆ ತರುವುದು.
ಇದರಿಂದ ನಾಗರಿಕರಲ್ಲಿ ಭರವಸೆ ಮೂಡುತ್ತದೆ ಮತ್ತು
ಸುರಕ್ಷತೆಯ ವಾತಾವರಣ ಸೃಷ್ಟಿಯಾಗುತ್ತದೆ.
ಇದು ಸುಸೂತ್ರ ಆಡಳಿತಕ್ಕೆ,
ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗೆ ಸೂಕ್ತ
ವಾತಾವರಣ ನಿರ್ಮಾಣವಾಗುತ್ತದೆ.
ಹೊಸ ಅಪಾಯಗಳನ್ನು ಎದುರಿಸುವ ನಿಟ್ಟಿನಲ್ಲಿ
ಭಾರತೀಯ ಸೇನೆ ಜಾಗರೂಕವಾಗಿದ್ದರೂ ಚಿಕ್ಕ-
ಪುಟ್ಟ ಆಂತರಿಕ ಬಿಕ್ಕಟ್ಟುಗಳನ್ನು ಎದುರಿಸಲು
ದೊಡ್ಡ ಪ್ರಮಾಣದಲ್ಲಿ ಸೇನೆಯನ್ನು ಬಳಸುವುದು ಅದರ ಪೂರ್ವಸಿದ್ಧತಾ
ಕಾರ್ಯಾಚರಣೆಗಳ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರಬಹುದು.
ಸೇನೆ ಮತ್ತು ಸರ್ಕಾರಗಳಿಗೆ ಇದರ ಅರಿವಿದ್ದು,
ಅನಾವಶ್ಯಕ ಸೇನಾ ಬಳಕೆಯನ್ನು ಸಾಧ್ಯವಾದಷ್ಟು
ಕಡಿಮೆ ಮಾಡುವ ನಿಟ್ಟಿನಲ್ಲಿ ಚಿಂತನೆಗಳು ನಡೆಯುತ್ತಿವೆ.
ಇತ್ತೀಚಿನ ದಿನಗಳಲ್ಲಿ ಉಗ್ರವಾದ,
ಭಯೋತ್ಪಾದನೆ ಮತ್ತು ಪ್ರಾಂತೀಯ ಬಂಡಾಯಗಳನ್ನು
ಶಮನ ಮಾಡುವ ಮತ್ತು ಪರಸ್ಪರ ಅನುಭವಗಳನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ
ಭಾರತೀಯ ಸೇನೆ ಕೆಲವು ಮಿತ್ರ ರಾಷ್ಟ್ರಗಳ ಸೇನೆಗಳೊಂದಿಗೆ ಜಂಟಿ ಕಾರ್ಯಾಚರಣಾ
ತರಬೇತಿಗಳಲ್ಲಿ ಭಾಗವಹಿಸುತ್ತಿದೆ.
ತಮ್ಮ ಪ್ರಕಾರ ಇದರಿಂದ ಸೇನೆಗೆ ಯಾವ ಲಾಭವಾಗಿದೆ
ಮತ್ತು ಭವಿಷ್ಯದಲ್ಲಿ ಯಾವ ರೀತಿ ಸಹಕಾರಿಯಾಗಬಲ್ಲದು?
ಜಾಗತಿಕ ಮಟ್ಟದಲ್ಲಿ ತನ್ನ ಜಾಲವನ್ನು
ಹೊಂದಿರುವ ಭಯೋತ್ಪಾದನೆಯನ್ನು ಹತ್ತಿಕ್ಕಬೇಕಾದರೆ ಇಂತಹ ಜಂಟಿ
ಕಾರ್ಯಾಚರಣೆಗಳು ಅತ್ಯಗತ್ಯ ಎಂಬ ಅರಿವು ಎಲ್ಲೆಡೆ ಮೂಡುತ್ತಿದೆ.
ಕಳೆದ ಕೆಲವು ದಶಕಗಳಿಂದ ಭಯೋತ್ಪಾದನಾ ನಿಗ್ರಹ
ಕಾರ್ಯಾಚರಣೆಗಳಲ್ಲಿ ಭಾಗವಹಿಸುತ್ತಿರುವ ಭಾರತೀಯ ಸೇನೆ ವಿಶಿಷ್ಟ ಅನುಭವ
ಮತ್ತು ಕೌಶಲ್ಯವನ್ನು ಪಡೆದಿದೆ.
ಜಂಟಿ ಕಾರ್ಯಾಚರಣೆ ಮತ್ತು ವಿಶೇಷ ತರಬೇತಿ
ಪ್ಯಾಕೇಜ್‌ಗಳ ಮೂಲಕ ಭಾರತೀಯ ಸೇನೆ ಈ ವಿಚಾರದಲ್ಲಿ ಹಲವು ರಾಷ್ಟ್ರಗಳಿಗೆ
ಸಹಾಯ ಮಾಡಿದೆ.
ಈ ರೀತಿಯ ಜಂಟಿ ಕಾರ್ಯಾಚರಣೆಗಳು ಎರಡು ರಾಷ್ಟ್ರಗಳು ತಮ್ಮ
ತಮ್ಮ ನೈಪುಣ್ಯತೆಗಳನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತವೆ.
ಸೌಹಾರ್ದ ಸಂಬಂಧಗಳನ್ನು,
ಪರಸ್ಪರ ನಂಬಿಕೆಗಳನ್ನು ಮತ್ತು ತರಬೇತಿ
ಗುಣಮಟ್ಟವನ್ನು ಉತ್ತಮಪಡಿಸಿಕೊಳ್ಳಲು ಭಾರತೀಯ ಸೇನೆ ಹಲವು ಮಿತ್ರ
ರಾಷ್ಟ್ರಗಳೊಡನೆ ರಕ್ಷಣಾ ಸಹಕಾರಕ್ಕೆ ಚಾಲನೆ ನೀಡಿದೆ.
ಯೋಧರಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡ
ಮತ್ತು ಅದರಿಂದಾಗುತ್ತಿರುವ ಆತ್ಮಹತ್ಯೆಯಂತಹ ಪ್ರಕರಣಗಳನ್ನು
ತಡೆಗಟ್ಟುವಲ್ಲಿ ಸೇನಾಡಳಿತ ಯಾವ ಕ್ರಮ ಕೈಗೊಂಡಿದೆ?
ಯೋಧರರಲ್ಲಿ ಹೆಚ್ಚುತ್ತಿರುವ ಮಾನಸಿಕ
ಒತ್ತಡವನ್ನು ತಡೆಗಟ್ಟುವ ನಿಟ್ಟಿನಲ್ಲಿ ನಾವು ಎರಡು ಬಗೆಯ ಮಾರ್ಗವನ್ನು
ಆಯ್ದುಕೊಂಡಿದ್ದೇವೆ.
ಮೊದಲನೆಯದಾಗಿ ಒತ್ತಡವನ್ನು ಕಡಿಮೆ ಮಾಡುವುದು;
ಮತ್ತು ಎರಡನೆಯದಾಗಿ ಒತ್ತಡ ವೃತ್ತಿಗೆ
ಸಂಬಂಧಪಟ್ಟಿದ್ದು,
ಅದನ್ನು ಸಂಪೂರ್ಣವಾಗಿ ಶಮನ ಮಾಡಲು ಸಾಧ್ಯವಾಗದಿದ್ದರೆ,
ಅಂತಹ ಒತ್ತಡ ನಿರ್ವಹಣೆಗೆ ನಮ್ಮ ಪಡೆಗಳನ್ನು
ಸಜ್ಜುಗೊಳಿಸಲಾಗುತ್ತದೆ.
ಸೇನೆಯ ನಾಯಕತ್ವದಲ್ಲಿ ಯೋಧರ ಕುರಿತಾಗಿ
ಹೆಚ್ಚು ಸೂಕ್ಷ್ಮತೆ ಬೆಳೆಸುವ ಸೇನೆ ತನ್ನದೇ ಮಿತಿಗಳಲ್ಲಿ ಸಾಧ್ಯವಾದಷ್ಟು
ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಅದಕ್ಕಾಗಿ ಮಾನಸಿಕ ತಜ್ಞರ ಸಹಾಯವನ್ನೂ
ಪಡೆಯಲಾಗಿದೆ.
ಜೊತೆಗೆ,
ಯೋಧರ ಕಲ್ಯಾಣ ಯೋಜನೆಗೆ ಚಾಲನೆ ನೀಡಲಾಗಿದೆ.
ಹಿರಿಯ ಅಧಿಕಾರಿಗಳು ಮತ್ತು ಕೆಳವರ್ಗದ ಸಹಾಯಕ
ಅಧಿಕಾರಿಗಳ ನಡುವೆ ಸಂಬಂಧ ಸುಧಾರಣೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕಳೆದ ಹಲವು ವರ್ಷಗಳಿಂದ ನಮ್ಮ ಈ ಕಾರ್ಯಗಳು
ಸಕಾರಾತ್ಮಕ ಫಲಿತಾಂಶ ನೀಡುತ್ತಿವೆ.
ಹಾಗಾಗಿ ಒತ್ತಡ ಸಂಬಂಧಿ ಅವಘಡಗಳ ಸಂಖ್ಯೆಯಲ್ಲಿಯೂ
ಗಮನಾರ್ಹ ಇಳಿಕೆ ಕಂಡುಬಂದಿದೆ.
ಟಿಎಸ್‌ಐ
|