ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಮುಖಪುಟ ಲೇಖನ
ರಕ್ಷಣಾಪಡೆ ವಿಶೇಷಾಂಕ :  ಭಾರತೀಯ ವಾಯುಪಡೆ
ಹಾರುವ ಯಂತ್ರಗಳ ಬೆನ್ನೇರಿ ಹೊರಟಾಗ

ವಾಯುಪಡೆಯಲ್ಲಿ ಸಾವು ಮತ್ತು ಬದುಕಿನ ನಡುವಿನ ಅಂತರ ಗಂಟೆ ಅಥವಾ ನಿಮಿಷಗಳಲ್ಲ. ಬದಲಿಗೆ ಅರೆ ಕ್ಷಣಗಳಷ್ಟೇ ಎನ್ನುತ್ತಾರೆ ಅಂಬಾಲದ ವಾಯುನೆಲೆಗೆ ಭೇಟಿ ನೀಡಿದ ಮಾಯಾಂಕ್ ಸಿಂಗ್. ಚಿತ್ರಗಳು: ರಂಜನ್ ಬಸು
 

ನಿಧಾನ ಎಂಬ ಪದ ರಕ್ಷಣಾ ವಾಯುನೆಲೆ ಅಂಬಾಲದ ಶಬ್ದಕೋಶದಲ್ಲೇ ಇಲ್ಲ. ಸ್ವತಂತ್ರ ಭಾರತದ ಈ ಸುಸಜ್ಜಿತ ಮತ್ತು ಪ್ರಪ್ರಥಮ ವಾಯುನೆಲೆಯಲ್ಲಿ ವೇಗಿಗಳಿಗೇ ಪ್ರಾಧಾನ್ಯತೆ. ವಾಯುನೆಲೆಗೆ ನಮ್ಮ ಭೇಟಿ ಮತ್ತು ಪೈಲಟ್‌ಗಳ ಪರೀಕ್ಷೆ ನಡೆಸುವ ತಂಡದ ಆಗಮನ ಒಂದೇ ಕಾಲಕ್ಕೆ ನಡೆದಿದ್ದು ಶುಭ ಸಂಯೋಗವೇ ಸರಿ. ಇಲ್ಲಿ ಪ್ರತಿವರ್ಷ ಭಾರತೀಯ ವಾಯುಪಡೆಯ ಪ್ರತಿ ಪೈಲಟ್ ಪರೀಕ್ಷೆ ಎದುರಿಸುತ್ತಾನೆ. ಫಲಿತಾಂಶವನ್ನು ಅನುಸರಿಸಿ ಅವರವರ ಸಾಮರ್ಥ್ಯಕ್ಕೆ ತಕ್ಕ ರೇಟಿಂಗ್ ನೀಡಲಾಗುತ್ತದೆ.

ಶೌರ್ಯಚಕ್ರ ಮತ್ತು ವಾಯುಪಡೆಯ ಪದಕ ಪಡೆದಿರುವ 'ಏರ್ ಕಮಡೋರ್' ರಾಹುಲ್ ಧರ್ ಪ್ರಕಾರ, ವೇಗ ಮತ್ತು ಚುರುಕು ಬರೀ ಪದಗಳಲ್ಲ, ನಮ್ಮ ಜೀವನಶೈಲಿಯಾಗಿ ಹೋಗಿದೆ. ಅವರು ಹೀಗೆ ಹೇಳಿರುವುದರಲ್ಲಿ ಆಶ್ಚರ್ಯವೇನಿಲ್ಲ ಬಿಡಿ, ಎಷ್ಟೆಂದರೂ ರಾಹುಲ್ ವಾಯುನೆಲೆಯ ಸರ್ವಸ್ವವಲ್ಲವೆ? ಪೈಲಟ್‌ಗಳು ಸಾಧ್ಯವಾದಷ್ಟು ಸಮಯವನ್ನು ಆಕಾಶದಲ್ಲೇ ಕಳೆಯಬೇಕು. ಈಗಲೂ ನಾನು ವಿಮಾನ ಚಾಲನೆಗೆ ಸಮಯಾವಕಾಶ ಮಾಡಿಕೊಳ್ಳುತ್ತಿದ್ದೇನೆ. ಅದೆಲ್ಲಾ ನಮ್ಮ ಮನಸ್ಥಿತಿಯನ್ನು ಅವಲಂಬಿಸಿದೆ ಎನ್ನುವುದನ್ನು ಇತರರಿಗೆ ತೋರಿಸಿಕೊಡುವುದಷ್ಟೇ ನನ್ನ ಹಾರಾಟದ ಉದ್ದೇಶ ಎನ್ನುತ್ತಾರೆ ರಾಹುಲ್. 53ರ ವಯಸ್ಸಿನಲ್ಲಿ ಅವರ ಸಾಮರ್ಥ್ಯ ಮತ್ತು ಕೆಲಸದ ಮೇಲಿನ ಶ್ರದ್ಧೆ ಅವರ ವಯಸ್ಸನ್ನೇ ಸುಳ್ಳಾಗಿಸಿತ್ತು.

'ಹಾರಾಡುವ ಶವಪೆಟ್ಟಿಗೆ' ಎಂದು ವಿವರಿಸುವ ಮೂಲಕ ಮಾಧ್ಯಮಗಳು ಮಿಗ್ 21 ಅಥವಾ ಕೋಬ್ರಾ ಸ್ಕ್ವಾಡ್ರನ್‌ಗಳ ಬಗ್ಗೆ ತಪ್ಪು ಕಲ್ಪನೆ ಮೂಡಿಸುತ್ತಿರುವುದಕ್ಕೆ ವಾಯುಪಡೆ ವಲಯದಲ್ಲಿ ಕಳವಳ ವ್ಯಕ್ತವಾಗಿದೆ. ಮಾಧ್ಯಮಗಳು ನಮ್ಮನ್ನು ಅವಮಾನಿಸುವುದೇಕೆ? ಮಿಗ್ 21ನ್ನು 'ಹಾರಾಡುವ ಶವಪೆಟ್ಟಿಗೆ' ಎಂದು ಕರೆಯುವುದೇಕೆ? ಯಾವುದೇ ಕಾಲಕ್ಕೂ ಇದು ಅತ್ಯಂತ ಉಪಯುಕ್ತ ವಿಮಾನ ಎನ್ನುತ್ತಾರೆ ಅವರು.

ಕೋಬ್ರಾ ಸ್ಕ್ವಾಡ್ರನ್‌ನ ಮನೋರಂಜನಾ ಕೊಠಡಿಯ ವಾತಾವರಣದಲ್ಲಿ ಆಗ ವಿದ್ಯುತ್ ಸಂಚಾರವಾದಂತಿತ್ತು. ವಿಂಗ್ ಕಮಡೋರ್ ಆರಿಫ್ ಪಟೇಲ್ ಇತರ ಸಹೋದ್ಯೋಗಿಗಳ ಜೊತೆಗೆ ಚರ್ಚೆಗೆ ಕುಳಿತಿದ್ದರು. ಅಚ್ಚುಮೆಚ್ಚಿನ ಯಂತ್ರ, ಕುಟುಂಬ, ಮಕ್ಕಳು ಹೀಗೆ ಸಾಮಾನ್ಯವಾಗಿ ಒಂದು ಕೌಟುಂಬಿಕ ಚರ್ಚೆಯಲ್ಲಿ ಏನೆಲ್ಲಾ ಬರುತ್ತದೋ ಅವೆಲ್ಲಾ ಅಲ್ಲಿತ್ತು. ವಾಯುಪಡೆಯ ಅಧಿಕಾರಿಗಳ ಪತ್ನಿಯರು ತಮ್ಮ ಪತಿಯ ಅನಿರೀಕ್ಷಿತ ಕೆಲಸದೊತ್ತಡಗಳ ಬಗ್ಗೆ ಹೇಗೆ ಪ್ರತಿಕ್ರಿಯಿಸುತ್ತಾರೆ? ಸ್ಕ್ವಾಡ್ರನ್‌ನ ಕಮಾಂಡಿಂಗ್ ಆಫೀಸರ್ (ಸಿಒ) ವಿಂಗ್ ಕಮಡೋರ್ ಎಂ.ಕೆ. ಗುಪ್ತಾ ಪ್ರತಿಕ್ರಿಯೆ ನೀಡಿ, ಸೇನಾ ಹಿನ್ನೆಲೆ ಇಲ್ಲದೆ ಇದ್ದಲ್ಲಿ ಅವೇಳೆಯಲ್ಲಿ ಕರ್ತವ್ಯದ ಕರೆಗೆ ಓಗೊಟ್ಟು ಓಡುವ ಪತಿಯ ಬಗ್ಗೆ ಆರಂಭದಲ್ಲಿ ಪತ್ನಿ ಬೇಸರ ಮಾಡಿಕೊಳ್ಳುವುದು ಸಹಜವೇ ಎಂದರು ಗುಪ್ತಾ.

ವಾಯುಪಡೆಯ ಅಧಿಕಾರಿಗಳು ಅವೇಳೆಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಆಗಲೇ ನಮಗೆ ರನ್‌ವೇ ಮೇಲೆ ಒಂದು ಮಿಗ್ 21 ವಿಮಾನ ಓಡುವ ಶಬ್ದ ಕೇಳಿಸಿತು. ಕೆಲ ಕ್ಷಣಗಳಲ್ಲಿ ಆ ವಿಮಾನ ಆಗಸದಲ್ಲಿ ಎಲ್ಲೋ ಮರೆಯಾಗಿ ಹೋಯಿತು. ತುರ್ತಿನ ವೇಳೆಯಲ್ಲಿ ತಕ್ಷಣ ಪ್ರತಿಕ್ರಿಯೆ ನೀಡುವ ಸಲುವಾಗಿ ಎಲ್ಲ ವಿಮಾನಗಳನ್ನೂ ರನ್‌ವೇ ಸಮೀಪದಲ್ಲೇ ಇರಿಸಲಾಗಿದೆ. ಅಲ್ಲೇ ಇದ್ದ ಕೆಲವು ಗಗನಚುಂಬಿ ಕಟ್ಟಡಗಳ ಬಗ್ಗೆ ನಾನು ಅವರನ್ನು ವಿಚಾರಿಸಿದೆ. ಅವುಗಳೆಲ್ಲಾ ಫೈಟರ್ ವಿಮಾನಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿರುವ ಕಟ್ಟಡಗಳು ಎಂದು ನಂತರ ತಿಳಿಯಿತು. ಪೈಲಟ್‌ಗಳು ತಮ್ಮ ಹೆಚ್ಚಿನ ಸಮಯವನ್ನು ತಮ್ಮ ಸ್ಕ್ವಾಡ್ರನ್‌ಗಳಲ್ಲಿ ಮತ್ತು ವಿವರಣಾ ಕೊಠಡಿಗಳಲ್ಲೇ ಕಳೆಯುತ್ತಾರೆ. ಆ ವಿವರಣಾ ಕೊಠಡಿಯ ಒಳಗಿನ ವಾತಾವರಣ ತೀರಾ ಔಪಚಾರಿಕ ಮತ್ತು ಗಂಭೀರವಾಗಿದ್ದು, ಮನೋರಂಜನಾ ಕೊಠಡಿಗೆ ಸಂಪೂರ್ಣ ವ್ಯತಿರಿಕ್ತವಾಗಿರುತ್ತದೆ. ನಾವು ನಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವ ಪ್ರಾಮಾಣಿಕತೆ ತೋರಿಸಬೇಕು. ಇಲ್ಲಿ ಸಾವು ಮತ್ತು ಬದುಕಿನ ಅಂತರ ಗಂಟೆ ಅಥವಾ ನಿಮಿಷಗಳಲಲ್ಲ. ಒಂದರೆಕ್ಷಣಗಳಲ್ಲಿ ನಡೆದು ಹೋಗುತ್ತದೆ. ಪ್ರತಿಯೊಬ್ಬರ ಕುಂದುಕೊರತೆಗಳ ಬಗ್ಗೆ ಮುಕ್ತ ಚರ್ಚೆ ನಡೆಸುವ ಮೂಲಕ ಹೊಸ ವಿಷಯಗಳನ್ನು ಕಲಿತುಕೊಳ್ಳುತ್ತೇವೆ. ನಾವು ಆಗಸದಲ್ಲಿ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುತ್ತಲೇ ಇರುತ್ತೇವೆ. ಅಣಕು ಯುದ್ಧ ನಡೆಸಿ ನಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುತ್ತಾ ಇರುತ್ತೇವೆ. ಸಮರಾಭ್ಯಾಸದಲ್ಲಿ ಪರಸ್ಪರರನ್ನು ಗುರಿಯಾಗಿಸಿ ಗುಂಡಿನ ಸುರಿಮಳೆಗರೆಯುತ್ತೇವೆ. ಈ ಅಭ್ಯಾಸವನ್ನು ನಾವೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತೇವೆ. ನಿಜ ಯುದ್ಧದಲ್ಲಿ ಎದುರಾಳಿಯ ಮೇಲೆ ಎರಗುವಂತೆಯೇ ಇಲ್ಲೂ ಅಭ್ಯಾಸ ಮಾಡುತ್ತೇವೆ. ನಿಜವಾದ ಸೆಣಸಾಟದಲ್ಲಿ ಕೊಂಚ ಎಚ್ಚರ ತಪ್ಪಿದರೆ ಪ್ರಾಣವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ನಾವು ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎನ್ನುತ್ತಾರೆ ಗುಪ್ತಾ.

ಸಾವು ಮತ್ತು ಬದುಕಿನ ನಡುವೆ ಒಂದರೆಕ್ಷಣಗಳ ವ್ಯತ್ಯಾಸ ಅಷ್ಟೆ ಎನ್ನುವ ಪದಗಳು ಮನದಲ್ಲಿ ಸುಳಿದಾಡುತ್ತಲೇ ಇದ್ದವು. ಮಿಗ್ ಸ್ಕ್ವಾಡ್ರನ್‌ನಿಂದ ನಾವು ಭಾರತೀಯ ವಾಯುಪಡೆಯ ಬತ್ತಳಿಕೆಯಲ್ಲಿರುವ ಮತ್ತೊಂದು ವಿಶೇಷ ಫೈಟರ್ ವಿಮಾನ ಜಾಗ್ವರ್‌ಗಳ ಕಡೆಗೆ ಹೊರಳಿದೆವು. ಪೈಲಟ್‌ಗಳು ಗುರುತ್ವಶಕ್ತಿಯ ವಿಶೇಷ ಉಡುಪುಗಳನ್ನು ಧರಿಸಿ ಹಾರಾಡುವುದರಿಂದ ಅವರ ಮೆದುಳಿನ ರಕ್ತಪರಿಚಲನೆ ಸುಗಮವಾಗುತ್ತದೆ. ಹಾಗಿದ್ದರೂ ಬ್ಲಾಕ್‌ಔಟ್ ಆಗುವ ಸಾಧ್ಯತೆಗಳು ಬೇಕಾದಷ್ಟಿವೆ. ಆ ಸ್ಥಿತಿಯಲ್ಲಿ ಮೆದುಳಿಗೆ ರಕ್ತಸಂಚಾರ ನಿಂತುಹೋಗುವುದರಿಂದ ಜೀವ ಉಳಿಯುವ ಸಾಧ್ಯತೆ ಕಡಿಮೆ.

ಅವರು ಹಾರಿಸುವ ವಿಮಾನಗಳಂತೂ ಅನಿಶ್ಚಿತ ಯಂತ್ರಗಳು. ಸ್ಕ್ವಾಡ್ರನ್ ಲೀಡರ್ ಎಸ್. ಧನ್‌ಕರ್ ಅವರ ಉದಾಹರಣೆಯನ್ನೇ ತೆಗೆದುಕೊಳ್ಳಿ. ಅವರು ತಮ್ಮ ಮಿಗ್ 21ರ ಸಮೇತ ಧರೆಗುರುಳಿದ್ದರು. ಕಣ್ಣ ಮುಂದೆಯೇ ತಮ್ಮ ವಿಮಾನ ಚೂರಾಗುವುದನ್ನು ಕಂಡ ದೌರ್ಭಾಗ್ಯ ಅವರದು. ಅದೃಷ್ಟವಶಾತ್ ಧನ್‌ಕರ್ ಬಚಾವಾದರು. ಈ ದುರ್ಘಟನೆಯ ಬಗ್ಗೆ ಕೇಳಿದಾಗ ಅವರು ಹೆಚ್ಚು ವಿವರ ನೀಡಬಯಸಲಿಲ್ಲ.

ಏಕಯಂತ್ರದ ಮಿಗ್ 21ನಿಂದ ಎರಡು ಎಂಜಿನ್‌ಗಳಿರುವ ಜಾಗ್ವಾರ್‌ಗಳವರೆಗೆ ಎಲ್ಲವೂ ವಿಭಿನ್ನ ಅನುಭವ. ಜಾಗ್ವಾರ್ ಸ್ಕ್ವಾಡ್ರನ್ 12ನಲ್ಲಿನ ದೃಶ್ಯವನ್ನು ನೋಡಿದಾಗ ಪರೀಕ್ಷೆ ಮತ್ತು ಸಂದರ್ಶನಕ್ಕಾಗಿ ಕಾತುರದ ಮುಖಭಾವದಲ್ಲಿ ಶಾಲೆಯ ಮುಂದೆ ಸೇರಿದ ವಿದ್ಯಾರ್ಥಿಗಳ ನೆನಪಾಯಿತು.

ಸ್ಕ್ವಾಡ್ರನ್ 12 ಪರೀಕ್ಷೆಗೆ ಸಿದ್ಧವಾಗಿ ನಿಂತಿತ್ತು. ಅಧಿಕಾರಿಗಳೆಲ್ಲಾ ಯುವ ಪದವೀಧರರಂತೆ ಸಂದರ್ಶನಕ್ಕಾಗಿ ತಮ್ಮ ಸರದಿಯನ್ನು ಕಾಯುತ್ತಿದ್ದರು. ಅವರಿಗೆ ಪರೀಕ್ಷೆಗಳೆಂದರೆ ಬಹು ಗಂಭೀರ ವಿಷಯ. ಸ್ವಲ್ಪ ಸಮಯದಲ್ಲೇ ಏರ್ ಕಮಡೋರ್ ರಾಹುಲ್ ಧರ್ ಆಗಮಿಸಿದರು. ಕೆಲವು ಆದೇಶಗಳನ್ನು ನೀಡಿದ ಬಳಿಕ ಅವರು ಸ್ಕ್ವಾಡ್ರನ್ 12ನ ಕಮಾಂಡಿಂಗ್ ಅಧಿಕಾರಿ ವಿಂಗ್ ಕಮಡೋರ್ ಶೈಲೇಂದ್ರ ಚೌಹಾಣ್ ಜೊತೆ ಹೊರಟು ಹೋದರು.

ವೇಗಕ್ಕೆ ವಾಯುನೆಲೆ ನೀಡುವ ಮಹತ್ವ ಅರಿಯುವ ಪ್ರಸಂಗವೂ ನಮಗೆ ಸಿಕ್ಕಿತು. ನಾವು ವಿಂಗ್ ಕಮಡೋರ್ ಚೌಹಾಣ್ ಜೊತೆ ಮಾತನಾಡುತ್ತಿದ್ದಾಗ ಅವರಿಗೆ ಯಾವುದೋ ಸಹಿ ಹಾಕಲು ಕರೆ ಬಂತು. 3೦ ಸೆಕೆಂಡ್‌ನಲ್ಲಿ ವಾಪಸಾಗುವೆ ಎಂದು ಆಶ್ವಾಸನೆ ಇತ್ತು ಅವರು ಮರೆಯಾದರು. ಹೇಳಿದ ಸಮಯಕ್ಕೆ ಸರಿಯಾಗಿ ವಾಪಸಾದರು. ಸೆಕೆಂಡುಗಳು ಮತ್ತು ನಿಮಿಷಗಳು ಅವರ ಶಬ್ದಕೋಶದ ಸಾಮಾನ್ಯ ಪದಗಳು. ಹಾಗೆಯೇ ಸಾಂಘಿಕ ಶಕ್ತಿಯ ನಿಜವಾದ ವಿವರಣೆ ನನಗೆ ಅಲ್ಲಿ ಸಿಕ್ಕಿತು. ಎಲ್ಲಾ ಅಧಿಕಾರಿಗಳು ಯಾವುದೇ ತಾರತಮ್ಯವಿಲ್ಲದೆ ಜೊತೆಯಾಗಿ ಕುಳಿತು ತಮಗೆ ನೀಡಲಾದ ಜವಾಬ್ದಾರಿಗಳಿಗೆ ತಕ್ಕಂತೆ ಕೆಲಸದಲ್ಲಿ ನಿರತರಾಗಿದ್ದರು.

ಅಧಿಕಾರಿಗಳು ಕಾರ್ಯನಿರತರಾಗಿದ್ದರೆ, ನಾವು ಇದೇ ಅವಕಾಶವನ್ನು ಬಳಸಿಕೊಂಡು ಫ್ಲೈಟ್ ಲೆಫ್ಟಿನೆಂಟ್ ಶೈಲೇಂದ್ರ ಮತ್ತು ಸ್ಕ್ವಾಡ್ರನ್ ಲೀಡರ್ ರಾಹುಲ್ ಅರೋರ ಜೊತೆ ಮಾತಿಗಿಳಿದೆವು. ಒಬ್ಬ ಫೈಟರ್ ಪೈಲಟ್‌ನ ಮನದ ಮಾತೇನು ಎಂದು ತಿಳಿಯುವ ಕುತೂಹಲ ನಮ್ಮದು. ನಾನು ಫೈಟರ್ ಪೈಲೆಟ್ ಎಂದು ಅರಿತ ಕೂಡಲೇ ಯುವಕರ ಮನದಲ್ಲಿ ನೂರಾರು ಪ್ರಶ್ನೆಗಳು ಏಳುತ್ತವೆ. ಅಂತಿಮವಾಗಿ ಅವರು ನನ್ನ ಹಾದಿಯಲ್ಲೇ ನಡೆಯಲು ತೀರ್ಮಾನಿಸುತ್ತಾರೆ. ಹದಿಹರೆಯದ ಯುವ ಜನರು ಫೈಟರ್ ಪೈಲಟ್ ಆಗಲು ಆಸಕ್ತಿ ತೋರುವುದಕ್ಕಿಂತ ಖುಷಿಯ ಸಂಗತಿ ಮತ್ತೊಂದಿಲ್ಲ.

ನಾವು ಅವರ ಜೊತೆ ಕುಳಿತಿದ್ದಂತೆ, ಇನ್ನೇನು ಕೆಲ ಗಂಟೆಗಳಲ್ಲಿ ವಿಮಾನಗಳ ಹಾರಾಟ ಆರಂಭವಾಗಲಿದೆ ಎಂದು ತಿಳಿಯಿತು. ವಾಯುಸಾರಿಗೆ ನಿಯಂತ್ರಣ (ಎಟಿಸಿ)ದಲ್ಲಿ ತಮ್ಮ ಸಾಧನೆಗಾಗಿ ಅತೀ ಹೆಚ್ಚು ರೇಟಿಂಗ್ ಪಡೆದಿದ್ದ ವಿಂಗ್ ಕಮಡೋರ್ ಶ್ರೀಕಾಂತ್ ನಮಗೆ ಜೊತೆಯಾದರು. ರನ್‌ವೇ ಪಕ್ಕದಲ್ಲೇ ಇದ್ದ ವಾಯುಸಾರಿಗೆ ನಿಯಂತ್ರಣ ಕಚೇರಿಗೆ ತೆರಳಿದೆವು. ತಕ್ಷಣ ಸಂಖ್ಯೆಯೊಂದನ್ನು ಹೇಳುತ್ತಾ ಟೇಕಾಫ್‌ಗೆ ಸಮ್ಮತಿ ಕೇಳುವ ಧ್ವನಿ ತೇಲಿ ಬಂತು. ರಾಡಾರ್ ಸ್ಕ್ರೀನ್ ಮುಂದೆ ಕುಳಿತಿದ್ದ ವ್ಯಕ್ತಿ ಹೇಳಿದ, ಟೇಕಾಫ್‌ಗೆ ಎಟಿಸಿ ಸಮ್ಮತಿ ನೀಡಿದೆ

ಆಗಲೇ ಕಿವಿಗಡಚಿಕ್ಕುವ ಸದ್ದು ಕೇಳಿ ಬಂತು. ನಮ್ಮ ಛಾಯಾಗ್ರಾಹಕ ಚಿತ್ರ ತೆಗೆಯಲು ಪರದಾಡುತ್ತಿದ್ದಂತೆಯೇ ಫೈಟರ್ ವಿಮಾನ ಭಗ್ಗನೆ ಬೆಂಕಿಯುಗುಳುತ್ತಾ ಗುಂಯ್ಯನೆ ಆಕಾಶಕ್ಕೆ ನೆಗೆಯಿತು. ಚಿತ್ರ ಹೇಗೆ ಬಂದಿದೆ ಎಂದು ಪರೀಕ್ಷಿಸಿದರೆ, ಮಿಂಚಿನಂತಹ ಬೆಳಕಿನ ಗೆರೆಯೊಂದನ್ನು ಬಿಟ್ಟು ಮತ್ತೇನೂ ಕ್ಯಾಮರಾ ಕಣ್ಣಿಗೆ ಸಿಕ್ಕಿರಲಿಲ್ಲ! ಪೈಲಟ್‌ಗಳು ವಾಯುಕೂಪ (ಕಡಿಮೆ ವಾಯುಒತ್ತಡ ಇರುವ ಪ್ರದೇಶ)ದಲ್ಲಿ ಅಭ್ಯಾಸ ಮಾಡಲು ಅವಕಾಶ ನೀಡುವ ಮೂಲಕ ಅವರು ಪರಿಣತ ಪೈಲಟ್‌ಗಳಾಗಲು ನೆರವಾಗುತ್ತೇವೆ ಎನ್ನುತ್ತಾರೆ ವಿಂಗ್ ಕಮಡೋರ್ ಶ್ರೀಕಾಂತ್. ನಮ್ಮಲ್ಲಿರುವ ಪ್ರತಿ ಪೈಲಟ್ ಕೂಡ ಅವರಿಗೆ ನೀಡಲಾದ ಕೆಲಸವನ್ನು ಚೆನ್ನಾಗಿ ಪೂರೈಸಬೇಕು ಎನ್ನುವುದೇ ನಮ್ಮ ಆಕಾಂಕ್ಷೆ. ಇದಕ್ಕಾಗಿ ನಮ್ಮ ಬಳಿ ಹಲವು ಯೋಜನೆಗಳಿವೆ. ಒಂದು ವರ್ಷ ಕಳೆದು ನೀವು ಇಲ್ಲಿಗೆ ಮತ್ತೆ ಬಂದರೆ ನಮ್ಮ ಪೈಲಟ್‌ಗಳನ್ನಾಗಲಿ ಅಥವಾ ಸ್ಥಳವನ್ನಾಗಲಿ ಗುರುತಿಸಲಾರಿರಿ ಎನ್ನುತ್ತಾರೆ ಧರ್. ಸತತ ಪ್ರಯತ್ನ ಎನ್ನುವುದು ಭಾರತೀಯ ವಾಯುಪಡೆಯ ಧ್ಯೇಯವಾಗಿದೆ ಎಂದೆನಿಸದೆ ಇರಲಿಲ್ಲ.

ಟಿಎಸ್‌ಐ

ಮುಖಪುಟ ಲೇಖನದಲ್ಲಿ ಇನ್ನೇನಿದೆ

ಭಾರತೀಯ ಸೇನೆ

  ರಕ್ಷಣೆಯ ನೊಗಹೊತ್ತ ಹೋರಾಟಗಾರರು

  ಕಠಿಣ ಕಮಾಂಡೋ ಜೀವ

  ಸರಹದ್ದಿನ ಸೋಲರಿಯದ ಸರದಾರ

  ಹೋರಾಟದ ಬದುಕಿಗೆ ಮುನ್ನುಡಿ

  ಯುದ್ಧ ತಂತ್ರಜ್ಞರ ಸಾಹಸಗಾಥೆ

  'ಗೆರಿಲ್ಲಾ' ಕಲೆ ಕಲಿಸುವ ಅಪರೂಪದ ಶಾಲೆ

  ಇವರೆಂದರೆ ಭಯವೂ ಬೆಚ್ಚುತ್ತದೆ!

  'ನಮಗೀಗ ಸಮರ್ಥ ಮಾನವ ಸಂಪನ್ಮೂಲದ ಅವಶ್ಯಕತೆ ಇದೆ' : ಜನರಲ್ ದೀಪಕ್ ಕಪೂರ್

  ವೇತನ ಸುಳಿಯಲ್ಲಿ ಸೇನಾ ಸಿಬ್ಬಂದಿ

ಭಾರತೀಯ ನೌಕಾಪಡೆ

  ಅಜೇಯ 'ಐಎನ್‌ಎಸ್ ಮುಂಬೈ'

  'ಚೀನಾದೊಂದಿಗಿನ ಸ್ಪರ್ಧೆ ಯುದ್ಧದಲ್ಲಿ ಪರ್ಯವಸಾನವಾಗದಂತೆ ತಡೆಯಬೇಕು' : ಅಡ್ಮಿರಲ್ ಸುರೀಶ್ ಮೆಹ್ತಾ

 "ಸರ್ಕಾರಿ ನೀತಿಯಲ್ಲಿ ನೌಕಾಪಡೆಗೆ ಪ್ರಮುಖ ಆದ್ಯತೆ' :ಅಡ್ಮಿರಲ್ ಅರುಣ್ ಪ್ರಕಾಶ್

ಭಾರತೀಯ ವಾಯುಪಡೆ

  ಹಾರುವ ಯಂತ್ರಗಳ ಬೆನ್ನೇರಿ ಹೊರಟಾಗ

  'ಸಿಬ್ಬಂದಿ ಆಯ್ಕೆ: ಗುಣಮಟ್ಟದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ' : ಫಾಲಿ ಮೇಜರ್

ಇತರ

ಯಾರೂ ಅರಿಯದ ಹೀರೋ ಪಡೆ

  ಬಾಲಿವುಡ್ ಗ್ಲಾಮರ್ ಸೇನೆ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .