|
|
ಪ್ರಸೂನ್ ಮಜುಂದಾರ್ |
ವಾಣಿಜ್ಯ ಸಂಪಾದಕ
ದ ಸಂಡೆ ಇಂಡಿಯನ್
|
ಇತ್ತೀಚೆಗೆ ಪಂಜಾಬ್ ಸರ್ಕಾರ ಕೈಗೊಂಡ
ಮಹತ್ವದ ನಿರ್ಣಯವೊಂದು ಪ್ರಚಾರ ಪಡೆಯದೇ ಪ್ರಮುಖ ಮಾಧ್ಯಮಗಳಲ್ಲಿ ಸಣ್ಣ
ಸುದ್ದಿಯಾಗಿ ಬಂದು ಹೋಗಿತ್ತು.
ಮದ್ಯದ ಮೇಲೆ ಶಿಕ್ಷಣ ತೆರಿಗೆ ವಿಧಿಸುವ
ನಿರ್ಣಯವಾಗಿತ್ತದು!
ಮದ್ಯ ಮಾರಾಟದ ಮೇಲೆ ಸುಂಕ ವಿಧಿಸಿ,
ಸಂಗ್ರಹಿಸಿದ ಹಣವನ್ನು ಶಿಕ್ಷಣ ಕ್ಷೇತ್ರದ
ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಬಳಸುವ ಯೋಜನೆಯನ್ನು ಪಂಜಾಬ್
ಸರ್ಕಾರ ಹಾಕಿಕೊಂಡಿದೆ.
ಇದು ತಾರ್ಕಿಕ ಚಿಂತನೆ ಮತ್ತು ತಳಹದಿಯಾಗಬಲ್ಲ
ಹೆಜ್ಜೆ ಮಾತ್ರವಲ್ಲ,
ಕಾರ್ಯರೂಪಕ್ಕೆ ತರಬಹುದಾದ ಮಾದರಿ ಯೋಜನೆ.
ಒಂದು ರಾಜಕೀಯ ಮತ್ತು ಸಾಮಾಜಿಕ ಚೌಕಟ್ಟನ್ನು
ಹೊಂದಿರುವ ಚಿಂತನೆ.
ಈ ಯೋಜನೆಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ಪಾಲುದಾರಿಕೆ
ಇರುತ್ತದೆ.
ರಾಜ್ಯ ಮತ್ತು ಖಾಸಗಿ ವಲಯಗಳು ಒಟ್ಟಾಗಿ ತಲಾ ಒಬ್ಬ
ಮಗುವಿನ ಶಿಕ್ಷಣಕ್ಕೆ ಕ್ರಮವಾಗಿ ರೂ.
600
ಮತ್ತು ರೂ.
500ರಷ್ಟು
ವೆಚ್ಚ ಮಾಡಲಿವೆ.
ಮುಖ್ಯವಾಗಿ ಬಡ ಕುಟುಂಬದಿಂದ ಬಂದ ಮಕ್ಕಳು ಸಂಪೂರ್ಣ
ಉಚಿತವಾಗಿ ಶಿಕ್ಷಣ ಪಡೆಯುವ ಸೌಲಭ್ಯವನ್ನು ಒದಗಿಸಲಾಗುತ್ತಿದೆ.
ಈಗಾಗಲೇ ಯೋಜನಾ ಆಯೋಗ ಈ ಉದ್ದೇಶಕ್ಕೆ ರೂ.
75
ಕೋಟಿ ಮಂಜೂರು ಮಾಡಿದೆ.
ಮುಂಬರುವ ವರ್ಷಗಳಲ್ಲಿ ಯೋಜನೆಯಡಿ ಸುಮಾರು
37
ಶಾಲೆಗಳು ಆರಂಭವಾಗಲಿವೆ.
ಭವಿಷ್ಯದಲ್ಲಿ ಸರ್ಕಾರ ಈ ಯೋಜನೆಯಡಿ
2,700ರಿಂದ
6,000
ಶಾಲೆಗಳನ್ನು ಆರಂಭಿಸುವ ಉದ್ದೇಶ ಹೊಂದಿದೆ.
ಪ್ರಮುಖ ಭಾರತೀಯ ಉದ್ಯಮಗಳು ಈ ಯೋಜನೆಯನ್ನು
ಸ್ವಾಗತಿಸಿವೆ.
ಇಂತಹ ಮಾದರಿ ಯೋಜನೆಯ ಭಾಗವಾಗುವ ಇಚ್ಛೆಯನ್ನೂ
ವ್ಯಕ್ತಪಡಿಸಿವೆ.
ಯೋಜನೆಯ ಮಹತ್ತರ ಸಂಗತಿ ಎಂದರೆ ಮದ್ಯದ ಮೇಲೆ
ಹೇರಲಾಗುತ್ತಿರುವ ಸುಂಕದ ಬಹುಪಾಲು ಉತ್ತಮ ಶಿಕ್ಷಣ ಪೂರೈಸಲು
ನೆರವಾಗುತ್ತಿರುವುದು.
ಈ ಯೋಜನೆಯಲ್ಲಿ ಇತರ ಉದ್ಯಮಗಳು
ಪಾಲುಗೊಳ್ಳುತ್ತಿರುವುದಕ್ಕಿಂತ ಹೆಚ್ಚಾಗಿ,
ಮದ್ಯದಿಂದ ಸಂಗ್ರಹಿಸಿದ ಸುಂಕವನ್ನು
ಶಿಕ್ಷಣಕ್ಕೆ ಬಳಸಿಕೊಳ್ಳುವ ಕಲ್ಪನೆಯೇ ಅತ್ಯದ್ಭುತ ಎನ್ನುವುದು ನನ್ನ
ಭಾವನೆ.
ಇತ್ತೀಚೆಗಿನ ದಿನಗಳಲ್ಲಿ ಭಾರತದಲ್ಲಿ ಮದ್ಯಸೇವನೆ ದಿನೇ
ದಿನೇ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಇದು ತಾರ್ಕಿಕ ಯೋಚನೆ.
ವರದಿಗಳ ಪ್ರಕಾರ,
ಮುಖ್ಯವಾಗಿ ಉತ್ತರ ಭಾರತದಲ್ಲಿ ಕಳೆದ ಐದು
ವರ್ಷಗಳಲ್ಲಿ ಬಿಯರ್‌ಗಳಂತಹ ಮಾದಕ ದ್ರವ್ಯಗಳ ಸೇವನೆ ಶೇ.
90ರಷ್ಟು
ಅಧಿಕವಾಗಿದೆ.
ದಕ್ಷಿಣ ಭಾರತವೂ ಈ ನಿಟ್ಟಿನಲ್ಲಿ ಹಿಂದೆ ಬಿದ್ದಿಲ್ಲ.
ಕೇರಳದಂತಹ ರಾಜ್ಯಗಳಲ್ಲಿ ಮದ್ಯ ಸೇವನೆ ವಿಪರೀತ
ಪ್ರಮಾಣದಲ್ಲಿ ಏರಿದ್ದು,
ತಲಾ ಆದಾಯಕ್ಕೆ ಅತೀ ಹೆಚ್ಚು ಬೇಡಿಕೆ ಇರುವ
ಉತ್ಪನ್ನವಾಗಿ ಮದ್ಯ ಗ್ರಾಹಕ ಮಾಪನದಲ್ಲಿ ಮೊದಲ ಸ್ಥಾನದಲ್ಲಿದೆ.
ಇತರ ರಾಜ್ಯಗಳ ವಿಚಾರದಲ್ಲೂ ಇದು ನಿಜವಾಗಿದೆ.
'ಆಲ್ಕೋಹಾಲ್
ಅಟ್ಲಾಸ್ ಆಫ್ ಇಂಡಿಯಾ'ದ
ಇತ್ತೀಚೆಗಿನ ಆವೃತ್ತಿಯ ಪ್ರಕಾರ
1992-93ರಲ್ಲಿ
887.2
ಮಿಲಿಯ ಲೀಟರುಗಳಿದ್ದ ಮದ್ಯ ಉತ್ಪನ್ನ ಪ್ರಮಾಣ ಈಗ ದುಪ್ಪಟ್ಟಾಗಿದೆ.
1999-
2000ದಲ್ಲಿ
1,654
ಮಿಲಿಯ ಲೀಟರುಗಳಿಗೆ ಏರಿದೆ.
2007-08ರಲ್ಲಿ
ಈ ಪ್ರಮಾಣ ಮೂರು ಪಟ್ಟು ಅಂದರೆ,
ಸುಮಾರು
2,300
ಮಿಲಿಯ ಲೀಟರುಗಳಷ್ಟು ಏರುವ ಸಾಧ್ಯತೆ ಇದೆ ಎಂದು ಅಂದಾಜು ಮಾಡಲಾಗಿದೆ.
ಹೀಗೆ ಮದ್ಯ ಸೇವನೆ ಪ್ರಮಾಣ ಮಿತಿ
ಮೀರುತ್ತಿರುವಂತೆಯೇ ಬೆಲೆಯಲ್ಲೂ ಏರಿಳಿತವಾಗುತ್ತಿದೆ.
ಹಾಗೆಯೇ ಸುಂಕದಲ್ಲಿ ಏರಿಳಿತವಾಗುತ್ತಿದೆ.
ಇಂತಹ ಪರಿಸ್ಥಿತಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ
ಅನುದಾನವನ್ನು ಪೂರೈಸುವ ನಿಟ್ಟಿನಲ್ಲಿ ಮದ್ಯದ ಮೇಲೆ ಸುಂಕ ವಿಧಿಸುವ
ಪಂಜಾಬ್ ಮಾದರಿ ಅತ್ಯುತ್ತಮ ಯೋಜನೆಯಾಗಲಿದೆ.
ಹಾಗೆ ನೋಡಿದಲ್ಲಿ ಬರೀ ಮದ್ಯ ಮಾತ್ರವಲ್ಲ,
ತಂಬಾಕು ಮತ್ತಿತರ ಮಾದಕ ದ್ರವ್ಯಗಳ ಉತ್ಪಾದನೆ
ಮೇಲೂ ಸುಂಕ ವಿಧಿಸುವ ಯೋಜನೆಗಳ
(ಸಾರ್ವಜನಿಕ-
ಖಾಸಗಿ ಪಾಲುದಾರಿಕೆ)
ಮೂಲಕ ಶಿಕ್ಷಣ ಕ್ಷೇತ್ರದ ಜೊತೆಗೆ ಆರೋಗ್ಯ
ಮೂಲಸೌಕರ್ಯಗಳನ್ನು ನೀಡುವಲ್ಲೂ ಅನುದಾನ ಸಂಗ್ರಹಿಸಬಹುದು.
ತಂಬಾಕು ಸೇವನೆ ಮತ್ತು ತಂಬಾಕು ಆಧಾರಿತ
ಉತ್ಪನ್ನಗಳು ಅನೇಕ ರಾಜ್ಯ ಸರ್ಕಾರಗಳ ವಿವಿಧ ನಿಷೇಧಗಳ ನಡುವೆಯೂ ಅಪಾಯಕಾರಿ
ಮಟ್ಟದಲ್ಲಿ ಏರುತ್ತಲೇ ಇವೆ.
ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳ ಪ್ರಕಾರ
ಈಗಾಗಲೇ ಜಗತ್ತಿನ ಒಟ್ಟು ಶೇ.
12ರಷ್ಟು
ಧೂಮಪಾನಿಗಳ ತವರೂರು ಭಾರತ.
ಮದ್ಯ ಮತ್ತು ತಂಬಾಕು ಜೊತೆಯಲ್ಲೇ ಬರುವ
ಸಾಮಾಜಿಕ ಮತ್ತು ಪರಿಸರ ಸಮಸ್ಯೆಗಳು ಅಪಾಯಕಾರಿ ಮಟ್ಟದಲ್ಲಿವೆ
ಎನ್ನುವುದರಲ್ಲಿ ಎರಡು ಮಾತಿಲ್ಲ.
ನಮ್ಮಂತಹ ಅಭಿವೃದ್ಧಿ ಹೊಂದುತ್ತಿರುವ
ದೇಶಗಳಲ್ಲಿ ಇದು ಇನ್ನೂ ತೀವ್ರ ಪರಿಣಾಮ ಬೀರಬಹುದು.
ಈ ಮಾದಕ ದ್ರವ್ಯಗಳ ಜೊತೆಯಲ್ಲೇ ಆರೋಗ್ಯ
ಸಮಸ್ಯೆಗಳೂ ಬರಲಿವೆ. (ಭಾರತದಲ್ಲಿ
ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುವ ಸುಮಾರು ಶೇ.
60ರಿಂದ
ಶೇ.
70ರಷ್ಟು
ಮಂದಿ ಮದ್ಯಪಾನಿಗಳು!)
ಹಾಗೆಯೇ ಮದ್ಯ-
ತಂಬಾಕು ಸೇವನೆಯಿಂದ ಸಮಾಜ ಇತರ ಸಾಮಾಜಿಕ-
ಆರ್ಥಿಕ ಪರಿಣಾಮಗಳನ್ನೂ ಎದುರಿಸಬೇಕಾಗುತ್ತದೆ.
ಹೀಗಾಗಿ ಈಗಿನ ಪರಿಸ್ಥಿತಿಯಲ್ಲಿ ಮದ್ಯಪಾನದಿಂದ
ಸಮಾಜಕ್ಕೆ ಆಗುತ್ತಿರುವ ಹಾನಿಯನ್ನು ಭರಿಸಲು ಇದಕ್ಕಿಂತ ಉತ್ತಮ ಯೋಜನೆ
ಮತ್ತೊಂದಿಲ್ಲ ಎನ್ನಬಹುದು.
ಐಐಪಿಎಂ
'ಥಿಂಕ್ ಟ್ಯಾಂಕ್'
|