|
|
ಪ್ರಸೂನ್ ಮಜುಂದಾರ್ |
ವಾಣಿಜ್ಯ ಸಂಪಾದಕ
ದ ಸಂಡೆ ಇಂಡಿಯನ್
|
ಇತ್ತೀಚೆಗಷ್ಟೇ ನಾನು ಹಾಂಕಾಂಗ್ ಪ್ರವಾಸ
ಮುಗಿಸಿ ಬಂದೆ.
ಹಾಂಕಾಂಗ್ ನಗರದೊಳಗೆ ಒಂದು ಸುತ್ತು ಹೊಡೆಯುತ್ತಿದ್ದಾಗ
ಒಂದು ಕಡೆ ನೂರಾರು ಹೆಂಗಸರು ಕುಳಿತು ಮಾತನಾಡುತ್ತಿರುವ ದೃಶ್ಯ ಕಣ್ಣಿಗೆ
ಬಿತ್ತು.
ನಮ್ಮ ಮಾರ್ಗದರ್ಶಕ ಅವರೆಲ್ಲಾ ಹೊರ ದೇಶಗಳಿಂದ
ಮನೆಕೆಲಸಕ್ಕೆಂದೇ ಬಂದ ಹೆಂಗಸರೆಂದೂ ಭಾನುವಾರ ರಜಾದಿನವಾಗಿರುವುದರಿಂದ
ತಮ್ಮ ಬಂಧು ಮಿತ್ರರ ಜೊತೆ ಆರಾಮವಾಗಿ ಕಾಲ ಕಳೆಯುತ್ತಿದ್ದಾರೆಂದೂ
ತಿಳಿಸಿದರು.
ಮನೆಕೆಲಸಕ್ಕಾಗಿ ಹಾಂಕಾಂಗ್‌ಗೆ ಬರುವವರಲ್ಲಿ ಬಹುತೇಕರು
ಇಂಡೋನೇಷಿಯಾ ಹಾಗೂ ಫಿಲಿಪೈನ್ಸ್‌ನಿಂದ ಬರುತ್ತಾರೆ ಎಂಬ ಪೂರಕ ಮಾಹಿತಿಯೂ
ನಮಗೆ ಅವರಿಂದ ದೊರಕಿತು.
ತಮ್ಮ ಮನೆಯ ಪರಿಸ್ಥಿತಿಯನ್ನು ಸುಧಾರಿಸಲು
ಅವರೆಲ್ಲಾ ಹಾಂಕಾಂಗ್‌ಗೆ ಬಂದು ಇಲ್ಲಿ ಇತರರ ಮನೆಯಲ್ಲಿ ದುಡಿಮೆ
ಮಾಡುತ್ತಿದ್ದರು.
ನಮ್ಮ ದೇಶವನ್ನೂ ಹಾಂಕಾಂಗ್‌ನ್ನೂ ಹೋಲಿಸಿ
ನೋಡಿದೆ.
ನಮ್ಮಲ್ಲೂ ಮನೆ ಪರಿಸ್ಥಿತಿ ಸುಧಾರಿಸಲು ಹಳ್ಳಿಗಳಿಂದ
ಜನ ನಗರದ ಕಡೆಗೆ ವಲಸೆ ಬರುತ್ತಾರೆ.
ಹಳ್ಳಿಯಲ್ಲಿ ಎಷ್ಟು ದುಡಿದರೂ ಅದರಿಂದ
ದೊರೆಯುವ ಕೂಲಿ ತುಂಬಾ ಕಡಿಮೆ
ಆದರೆ ನಗರಗಳಲ್ಲಿ ಸ್ವಲ್ಪ ಕಾಸು ಉಳಿಸಬಹುದು
ಎಂಬ ದೂರದ ಆಸೆಗೆ ಸಿಲುಕುವ ಇವರು ನಂತರ ನಗರಗಳಲ್ಲಿ ನೆಲೆ ಕಂಡುಕೊಳ್ಳಲು
ಒದ್ದಾಡುತ್ತಾರೆ.
ಏನಾದರೂ ಉದ್ಯೋಗ ಮಾಡಿ ಮನೆ ಖರ್ಚುವೆಚ್ಚಗಳನ್ನು
ಸರಿದೂಗಿಸುವ ಲೆಕ್ಕಾಚಾರದಿಂದ ಬರುವ ಇವರೆಲ್ಲಾ ಕೊನೆಗೆ ಇತರರ
ಮನೆಕೆಲಸದವರಾಗಿ ಬಿಡುತ್ತಾರೆ ಎಂಬುದು ಕಟು ವಾಸ್ತವ.
ಆಧುನಿಕ ನಗರ ಜೀವನದ ಆರ್ಥಿಕ ಒತ್ತಡ ಕೂಡು
ಕುಟುಂಬವನ್ನು ಛಿದ್ರಗೊಳಿಸುತ್ತದೆ.
ಅಷ್ಟು ಮಾತ್ರವಲ್ಲದೆ ಅದೇ ಆರ್ಥಿಕ ಒತ್ತಡ
ಕುಟುಂಬವೊಂದಕ್ಕೆ ಎರಡು ಮೂಲಗಳ ಆದಾಯ ಅತ್ಯವಶ್ಯಕ ಎಂಬಂತಾಗಿಸಿದೆ.
ಇಂಥ ವಿಭಕ್ತ ಕುಟುಂಬಗಳು ಮನೆಕೆಲಸದವರನ್ನು
ಇಟ್ಟುಕೊಳ್ಳುವುದು ಅನಿವಾರ್ಯವಾಗಿರುತ್ತದೆ.
ಪತಿ ಪತ್ನಿಯರಿಬ್ಬರೂ ಉದ್ಯೋಗಸ್ಥರಾಗಿರುವುದು
ನಗರ ಜೀವನದಲ್ಲಿ ಸರ್ವೇ ಸಾಮಾನ್ಯ.
ಹಾಗೆ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ
ಮನೆಕೆಲಸದವರಿಗೆ ಹಿಂದೆಂದೂ ಕಂಡು ಕೇಳಿರದಂಥ ಬೇಡಿಕೆ.
ವಿಶೇಷವಾಗಿ
ಚಿಕ್ಕಮಕ್ಕಳಿರುವ ಮನೆಯಲ್ಲಿ ಮನೆಗೆಲಸದವರ
ಅಗತ್ಯ ಇನ್ನೂ ಹೆಚ್ಚು.
ಬದಲಾಗುವ ಕಾಲಕ್ಕೆ ತಕ್ಕಂತೆ
ಕೆಲಸದಾಳುಗಳ ಅವಶ್ಯಕತೆ ಇರುವ ಮನೆಗಳಿಗೆ
ಜನರನ್ನು ಒದಗಿಸಲು ಹಾಗೂ ಕೆಲಸಕ್ಕಾಗಿ ಹಳ್ಳಿಗಳಿಂದ ಜನರನ್ನು ಕರೆತರಲು
'ಪ್ಲೇಸ್‌ಮೆಂಟ್
ಏಜೆನ್ಸಿ'ಗಳೂ
ತಲೆಯೆತ್ತಿವೆ.
ಆದರೆ ಇಂಥ ಬಹುತೇಕ ಸಂಸ್ಥೆಗಳು ಕೆಲಸ ಕೊಡಿಸುವ
ನೆಪದಲ್ಲಿ ಶೋಷಣೆ ಮಾಡುವಂಥ ನಂಬಿಕೆದ್ರೋಹಿಗಳಾಗಿರುವುದು ವಿಪರ್ಯಾಸ.
ಭಾರತದಂತಹ ರಾಷ್ಟ್ರದಲ್ಲಿ ಮನೆಕೆಲಸದವರು
ಸಂಪೂರ್ಣ ಅಸಂಘಟಿತರಾಗಿರುವುದರಿಂದ ಇಂತಹ ಶೋಷಣೆ ಅಚ್ಚರಿ ಎನಿಸುವುದಿಲ್ಲ.
ಆದ್ದರಿಂದಲೇ ಮನೆಗೆಲಸದವರು ವಾರದ ರಜೆ
ತೆಗೆದುಕೊಳ್ಳುವ ಪರಿಪಾಠ ಭಾರತದಲ್ಲೆಲ್ಲೂ ಕಂಡು ಬರುವುದಿಲ್ಲ.
ರಜೆ ಏಕಿಲ್ಲ ಎಂಬ ಪ್ರಶ್ನೆಯ ಉತ್ತರ ಯಜಮಾನ
ಹಾಗೂ ಕೆಲಸಗಾರನ ಸುತ್ತಲೇ ಅಡಗಿದೆ ಎಂಬುದರಲ್ಲಿ ಅನುಮಾನ ಇಲ್ಲ.
ಮನೆಕೆಲಸದವರು ಸಂಬಳ
ಕೆಲಸದ ಸಮಯ
ಸಾಮಾಜಿಕ ಭದ್ರತೆ
ದೈಹಿಕ ಸುರಕ್ಷೆ ಮುಂತಾದ ವಿಷಯಗಳಲ್ಲಿ
ಶೋಷಿತರಾಗುತ್ತಲೇ ಇದ್ದಾರೆ.
ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಮನೆ
ಕೆಲಸಕ್ಕಿರುವ ವ್ಯಕ್ತಿಯ 'ಅಳಿವು-
ಉಳಿವು'
ಎಲ್ಲವೂ ಯಜಮಾನನ ಮುಷ್ಟಿಯಲ್ಲೇ ಇದೆ.
ಇದು ಆಧುನಿಕ ಯುಗದ ಜೀತ ಎಂಬುದು ವಾಸ್ತವ.
ದೇಶದ ಮೂಲೆ ಮೂಲೆಯಲ್ಲೂ ನಡೆಯುತ್ತಿರುವ
ಇಂಥ ಶೋಷಣೆಗಳಿಂದಾಗಿ ಮನೆಕೆಲಸಕ್ಕಿರುವ ವ್ಯಕ್ತಿಗಳ ಅಪರಾಧ
ಪ್ರವೃತ್ತಿಯಲ್ಲಿ ಗಣನೀಯ ಏರಿಕೆ ಕಂಡು ಬಂದರೆ ಆಶ್ಚರ್ಯವಿಲ್ಲ.
ಆದರೆ ಈ ರೀತಿಯ ಅಪರಾಧಗಳು ಜರುಗುವುದಕ್ಕೆ
ಕಾರಣವಾದ ಸಮಸ್ಯೆಯ ಮೂಲವನ್ನು ಹುಡುಕಿ ಬಗೆಹರಿಸುವುದನ್ನು ಬಿಟ್ಟು
ಕೆಲಸಕ್ಕಿರುವ ವ್ಯಕ್ತಿಗಳ ಗುರುತು-
ವಿವರಗಳ ಖಚಿತತೆಯನ್ನು ಕಡ್ಡಾಯಗೊಳಿಸುವಂತಹ
ತಾತ್ಕಾಲಿಕ ಕ್ರಮಗಳಿಗೆ ಮುಂದಾಗುವ ಆಡಳಿತ ವ್ಯವಸ್ಥೆ ನಮ್ಮದು.
ಸಮಸ್ಯೆಯಿರುವುದು ಕೆಲಸಗಾರರಲ್ಲ
ಬದಲಿಗೆ ಅವರು ಸಂಘಟಿತರಾಗಿರುವ ಪರಿಯೇ
ಸಮಸ್ಯೆಯ ಮೂಲ.
ಕಾನೂನು ಮಾಹಿತಿಯನ್ನು ಒದಗಿಸಿ
ಶೋಷಣೆಯಿಂದ ಜನರನ್ನು ಮುಕ್ತಗೊಳಿಸಿ
ಅವರ ಹಕ್ಕುಗಳಿಗೆ ರಕ್ಷಣೆಯೊದಗಿಸುವಂಥ ಸಮರ್ಥ
ಕಾನೂನು ವ್ಯವಸ್ಥೆ ಜಾರಿಯಾದರೆ ಮಾತ್ರ ಸಮಸ್ಯೆಗಳ ನಿರ್ಮೂಲನೆ ಸಾಧ್ಯ.
ಹಾಗಾದರೆ ಮಾತ್ರ ಮನೆಕೆಲಸದವರಿಗೂ ಸಮಾಜದಲ್ಲಿ
ಗೌರವ ದೊರೆಯಲು ಸಾಧ್ಯ;
ಅವರ ಅಮೂಲ್ಯ ಕಾರ್ಯಕ್ಕೂ ಶ್ಲಾಘನೆ ದೊರೆಯುವುದು
ಸಾಧ್ಯ.
ಅಲ್ಲಿಯವರೆಗೂ ನಮ್ಮ ದೇಶ
'ಗೌರವಾನ್ವಿತ
ಜೀತದಾಳು'ಗಳ
ರಾಷ್ಟ್ರವಾಗೇ ಉಳಿಯುತ್ತದೆ. (ಆ
ಗೌರವಾನ್ವಿತ ಜೀತದಾಳುಗಳ ಸಾಲಿನಲ್ಲಿ
400 ದಶಲಕ್ಷ
ಅಸಂಘಟಿತ ವಲಯದ ಕಾರ್ಮಿಕರೂ ಸೇರಿದ್ದಾರೆ ಎಂಬುದನ್ನೂ ಮರೆಯುವಂತಿಲ್ಲ!)
ಐಐಪಿಎಂ
'ಥಿಂಕ್ ಟ್ಯಾಂಕ್'
|