|

ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ
ಸಮಾನರೇ?
ಟಿಎಸ್‌ಐನ ಏಳು ಜನರನ್ನೊಳಗೊಂಡ ತಂಡ
24 ಜನ
'ಕಂಬಿ ಹಿಂದಿನ
ಕುಖ್ಯಾತ'ರ
ಕುರಿತು ಬರೆದ ಲೇಖನದ ಗುಚ್ಛ ಭಾರತದ ನ್ಯಾಯಾಂಗ ವ್ಯವಸ್ಥೆಗೆ ಹಿಡಿದ
ಕೈಗನ್ನಡಿಯಾಗಿತ್ತು.
ಹೌದು,
ಭಾರತದಲ್ಲಿ ಹೀಗೆಯೇ.
ಅಪರಾಧ ಮಾಡಿದವನಿಗೆ ಶಿಕ್ಷೆ ಪ್ರಕಟಿಸುವ ಮೊದಲು ಆತ ಯಾವ
ಪಕ್ಕಕ್ಕೆ ಸೇರಿದವನು?
ಯಾರ ಮಗ?
ಶ್ರೀಮಂತನೋ ಬಡವನೋ?
ಎಂಬ 'ಮಾನದಂಡ'ದ
ಮೂಲಕ ಪರೀಕ್ಷಿಸುವ ಜಾಯಮಾನ ಬೆಳೆಯುತ್ತಿದೆ.
ಇದು ಇತ್ತೀಚಿನ ತೀರ್ಪುಗಳಲ್ಲಿ ಮೇಲ್ನೋಟಕ್ಕೆ
ಕಂಡುಬರುತ್ತಿದೆ.
'ಕಾನೂನಿನ
ದೃಷ್ಟಿಯಲ್ಲಿ ಎಲ್ಲರೂ ಸಮಾನರು'
ಎಂಬುದು ಕಾನೂನು ಗ್ರಂಥಗಳಿಗೆ ಮಾತ್ರ ಸೀಮಿತವಾಗಿದೆ.
ಕಾರ್ಯರೂಪದಲ್ಲಿ ಅದೆಲ್ಲಾ ಶೂನ್ಯ,
ನಗಣ್ಯ!
ಕಂಬಿ ಹಿಂದಿನ ಕುಖ್ಯಾತರಲ್ಲಿ ಕೆಲವರು ತಮ್ಮ ಸದ್ಗುಣಗಳ
ಮೂಲಕ ಖ್ಯಾತರಾಗುತ್ತಿರುವುದು ಬದಲಾವಣೆಯ ಸಂಕೇತ.
ಜೈಲಿನಲ್ಲಾದರೂ
'ಎಲ್ಲರೂ ಸಮಾನರು'
ಎಂಬ ಕಾನೂನು ಜಾರಿಗೆ ಬರಲಿ.
ಇಲ್ಲದಿದ್ದರೆ ಸವಲತ್ತು ಅನುಭವಿಸುತ್ತಿರುವವರ
'ಪ್ರಭಾವ'
ಇನ್ನೂ ಹೆಚ್ಚಾದೀತು!
ಇರ್ಷಾದ್ ಎಂ.
ವೇಣೂರು
ಅಧಿಕಾರ ದುರುಪಯೋಗ
ಟಿಎಸ್‌ಐನ
'ಕಂಬಿ ಹಿಂದಿನ
ಕುಖ್ಯಾತರು'
ಲೇಖನ ಅತ್ಯಂತ ಆಕರ್ಷಕವಾಗಿ ಮೂಡಿಬಂದಿದೆ.
ದೇಶದ ಕುಖ್ಯಾತ ಜೈಲು ಹಕ್ಕಿಗಳು ಜೈಲೊಳಗೇ ಕುಳಿತುಕೊಂಡು
ಏನೆಲ್ಲಾ ವ್ಯವಹಾರಗಳನ್ನು ನಿರಾತಂಕವಾಗಿ ನಡೆಸುತ್ತಿದ್ದಾರೆಂಬುದನ್ನು ಪತ್ರಿಕೆ
ವಿವರವಾಗಿ ತಿಳಿಸಿದೆ.
ತಿಹಾರ್ ಜೈಲಿನ ವಾಸ್ತವಾಂಶಗಳ ಬಗ್ಗೆ ಮುಂಬೈ ಹೈಕೋರ್ಟ್ ವಕೀಲ
ಶಾಹೀದ್ ಅಜ್ಮಿ ಅವರು ನೀಡಿದ ವಿವರ ಓದಿದಾಗ ನಿಜಕ್ಕೂ ಆಶ್ಚರ್ಯವಾಗಿದೆ.
ಜೈಲಿನಲ್ಲಿನ ಅವರ ಅನುಭವಗಳು ರೋಚಕ.
ಇವೆಲ್ಲದರ ಜೊತೆಗೆ ಜೈಲುಹಕ್ಕಿಗಳ ಅಕ್ರಮ ಚಟುವಟಿಕೆಗಳಿಗೆ
ಒಳಗಿನಿಂದ ಕುಮ್ಮಕ್ಕು ನೀಡುವ ಅಧಿಕಾರಿಗಳ ಬಗ್ಗೆಯೂ ವಿವರ ನೀಡಬೇಕಿತ್ತು.
ಆಗ ಸಾರ್ವಜನಿಕರಿಗೂ ಪೊಲೀಸ್ ಅಧಿಕಾರಿಗಳು ತಮ್ಮ
ಅಧಿಕಾರವನ್ನು ಹೇಗೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬುದರ
ಅರಿವಾಗುತ್ತಿತ್ತು.
ಅದೇನೇ ಇರಲಿ ಉತ್ತಮ ಮುಖಪುಟ ಲೇಖನಕ್ಕಾಗಿ ಟಿಎಸ್‌ಐಗೆ ಥ್ಯಾಂಕ್ಸ್.
ವಿಘ್ನೇಶ್ ಪ್ರಸಾದ್
ಉಡುಪಿ
| ಮುಖ್ಯಮಂತ್ರಿಗಳ ಗಮನಕ್ಕೆ
|

ರೈತರಿಗೆ ರಸಗೊಬ್ಬರ ಪೂರೈಕೆಯಲ್ಲಿ ಭಾರೀ ಅವ್ಯವಸ್ಥೆಯಾಗಿದ್ದು ಈ ಸಲ ರಾಷ್ಟ್ರಪತಿ ಆಡಳಿತದ ಫಲವೋ? ಅಥವಾ ಯುಪಿಎ ಸರ್ಕಾರದ ಮಲತಾಯಿ ಧೋರಣೆಯೋ? ಆದರೆ ಇವೆರಡರ ವಿಫಲತೆಯಿಂದ ಸಾವನ್ನಪ್ಪಿದ್ದು ನಿರಪರಾಧಿ ರೈತ. ಕೃಷಿ ಇಲಾಖೆಯ ಕೃಷಿ ಸಹಾಯಕರು, ಗ್ರಾಮ ಲೆಕ್ಕಿಗರು ಹಾಗೂ ಪಂಚಾಯತ್ ಕಾರ್ಯದರ್ಶಿಗಳು ಜೊತೆಗೂಡಿ ಈಗಿನಿಂದಲೇ ಮುಂದಿನ ವರ್ಷಕ್ಕೆ ಬೇಕಾಗುವ ಗುಣಮಟ್ಟದ ಬೀಜ, ರಸಗೊಬ್ಬರ ಹಾಗೂ ಇತರ ಸಲಕರಣೆಗಳ ಪಟ್ಟಿ ಮಾಡಿ ಪ್ರತಿ ವರ್ಷ ಮೇ ತಿಂಗಳ ಮೊದಲ ವಾರದಲ್ಲಿ ಗ್ರಾಮದ ಸಹಕಾರಿ ಸಂಘ ಅಥವಾ ಗ್ರಾಮ ಪಂಚಾಯತ್ ಕಟ್ಟಡಗಳಲ್ಲಿ ಸಂಗ್ರಹಿಸಿ ಇಡಬೇಕು. ಆಗಷ್ಟೇ ರಕ್ತಪಾತ ತಪ್ಪಿಸಬಹುದು. ಈ ಕಾರ್ಯ ಸಮರೋಪಾದಿಯಲ್ಲಿ ನಡೆಯಬೇಕಿದೆ. ಕೃಷಿ ಸಚಿವರು, ಮುಖ್ಯಮಂತ್ರಿಗಳು ಮುಂದಿನ ವರುಷದ ರೈತರ ಅವಶ್ಯಕತೆಗಳ ಬಗ್ಗೆ ಈಗಿನಿಂದಲೇ ಸಮೀಕ್ಷೆ ಆರಂಭಿಸಬೇಕು. ಈ ಕಾರ್ಯಕ್ಕೆ ಗ್ರಾಮದ ನಿರುದ್ಯೋಗಿ ಪದವೀಧರರನ್ನು ಉಪಯೋಗಿಸಿಕೊಳ್ಳಬೇಕು. ಕೊಳವೆ ಬಾವಿಗಳಲ್ಲಿ ನೀರಿದ್ದರೂ ವಿದ್ಯುತ್ ನಿಲುಗಡೆಯಿಂದಾಗಿ ನೀರು ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ. ಕನಿಷ್ಠ 10-12 ತಾಸು ನಿರಂತರ ವಿದ್ಯುತ್ ಪೂರೈಕೆ ಅತಿ ಅವಶ್ಯ. ಇದರ ಬಗ್ಗೆ ತುರ್ತು ಗಮನ ಹರಿಸಿ ಉಚಿತ ವಿದ್ಯುತ್ ಪೂರೈಸಬೇಕು. ರೈತರ ಹಿಂದಿನ ಪಂಪ್‌ಸೆಟ್‌ಗಳ ಬಾಕಿ ಮನ್ನಾ ಮಾಡಬೇಕು. ಬೆಳೆಗೆ ಯೋಗ್ಯ ಬೆಲೆ ದೊರಕಬೇಕು. ಆಗಷ್ಟೇ ರೈತರು ಕೃಷಿಕಾರ್ಯಗಳತ್ತ ಪೂರ್ಣ ಗಮನ ಹರಿಸಲು ಸಾಧ್ಯ. ರೈತ ರಾಷ್ಟ್ರದ ಬೆನ್ನೆಲುಬು ನಿಜ. ಆದರೆ ಸರ್ಕಾರದ ಸದ್ಯದ ಧೋರಣೆ ರೈತನ ಬೆನ್ನು ಮುರಿಯುವುದಾಗಿದೆ. ಈ ನಿಟ್ಟಿನಲ್ಲಿ ರೈತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪನವರು ರೈತರ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇದಕ್ಕೆ ವಿರೋಧ ಪಕ್ಷದ ಧುರೀಣರ ಸಹಕಾರವೂ ಅಗತ್ಯ.
ಈಶ್ವರಗೌಡ್ರು ಎಲ್. ಪಾಟೀಲ
ಸೂರಶೆಟ್ಟಿಕೊಪ್ಪ |
ಅಡಕತ್ತರಿಯೊಳಗೆ
ಸರ್ಕಾರ
ಒಂದು ಕಡೆ ಹಣದುಬ್ಬರದ ಹೊಡೆತ,
ಇನ್ನೊಂದು ಕಡೆ ಅಣು ಒಪ್ಪಂದದ ಕುರಿತಾಗಿ ವಾಮಪಕ್ಷಗಳ
ವಿರೋಧ...
ಹೀಗೆ ಯುಪಿಎ ಸರ್ಕಾರವೇ ಈಗ ಅಡಕತ್ತರಿಯಲ್ಲಿದೆ.
'ಯುಪಿಎ
ಸರ್ಕಾರಕ್ಕೆ ಭರಿಸಲಾಗದ ನಷ್ಟ ತರಲಿದೆ ಹಣದುಬ್ಬರ'
ಸಂಪಾದಕೀಯದಲ್ಲಿ ಅರಿಂದಮ್ ಚೌಧುರಿ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳು ಚಿಂತನಾರ್ಹ.
ಹಣದುಬ್ಬರವನ್ನು ನಿಯಂತ್ರಿಸದೆ,
ಸಾರ್ವಜನಿಕ ಬದುಕಿನ ಕುರಿತು ಒಂದಿಷ್ಟೂ ಕಾಳಜಿ ವಹಿಸದೆ
ಆಡಳಿತ ನಡೆಸುತ್ತಿರುವ ಯುಪಿಎ ಸರ್ಕಾರದ ನಡೆ ಆಶ್ಚರ್ಯ ಮೂಡಿಸಿದೆ.
ಯುಪಿಎಯ ಮಹಾನ್ ಬೌದ್ಧಿಕ ಪ್ರತಿಭೆಗಳು ಸಾರ್ವಜನಿಕರ
ಸಂಕಷ್ಟವನ್ನು ಇನ್ನಾದರೂ ಅರಿತು ಪರ್ಯಾಯ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ
ಚುನಾವಣೆಯಲ್ಲಿ ಅವರು ನೀರು ಕುಡಿಯುವುದು ಗ್ಯಾರಂಟಿ!
ಮಹೇಶ್ ಗೌಡ
ಹುಬ್ಬಳ್ಳಿ
ಉತ್ತರ ನೀಡುವುದು ಯಾರು?
ಜಾಗತಿಕ ಮಟ್ಟದಲ್ಲಿ ಹಣದುಬ್ಬರದಲ್ಲಿ ಸ್ವಲ್ಪ
ಏರುಪೇರಾದರೂ ಅದು ಯಾವುದೋ ಹಳ್ಳಿಯ ಮೂಲೆಯಲ್ಲಿರುವ ಬಡ ವ್ಯಕ್ತಿಯ ಮೇಲೆ ಅಷ್ಟೇ
ಪ್ರಭಾವ ಬೀರುತ್ತದೆ.
ಇನ್ನು ಅಗತ್ಯ ವಸ್ತುಗಳ ಬೆಲೆ ಏರಿಕೆಯಂತೂ ಭಾರತದಂತಹ ಬಡ
ಜನರಿರುವ ರಾಷ್ಟ್ರದ ಮೇಲೆ ಎಂತಹ ಪರಿಣಾಮ ಸೃಷ್ಟಿಸಬಹುದು?
ಪ್ರಜೆಗಳ ಪ್ರತಿನಿಧಿಯಾದ ಸರ್ಕಾರ ಈ ಸಮಸ್ಯೆಗಳಿಗೆ
ಉತ್ತರ ನೀಡಬೇಕು.
ಆದರೆ ಈಗಿನ ಪರಿಸ್ಥಿತಿ ಹೇಗಿದೆ ಎಂದರೆ ಚುನಾವಣಾ
ಸಂದರ್ಭದಲ್ಲಷ್ಟೇ ಮನೆ-ಮನೆಗೆ
ಹೋಗಿ ಮತ ಯಾಚಿಸುವ ರಾಜಕೀಯ ಪುಢಾರಿಗಳು ಸಮಸ್ಯೆ ಎದುರಾದಾಗ ನುಣ್ಣಗೆ
ಜಾರಿಕೊಳ್ಳುತ್ತಾರೆ.
ಇನ್ನೊಂದೆಡೆ ಕಚ್ಚಾತೈಲ ಬೆಲೆ ಜಾಗತಿಕ ಮಟ್ಟದಲ್ಲಿ ಕೈ ಮೀರಿ
ಹೋಗುವಂತೆ ಏರುತ್ತಿದೆ.
ಬೆಲೆ ಏರಿಕೆ ಸೂಚನೆ ಕಾಣಿಸಿಕೊಂಡಿದ್ದು ನಿನ್ನೆ ಮೊನ್ನೆಯೇನಲ್ಲ.
ಹಾಗಿದ್ದೂ ಯುಪಿಎ ಸರ್ಕಾರ ಸುಮ್ಮನೆ ಕುಳಿತದ್ದು ಏಕೆ
ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಏನೇ ಇರಲಿ ಸರ್ಕಾರದ ನಿರ್ಲಕ್ಷ್ಯ ಮನೋಭಾವ ಮಾತ್ರ ಇಲ್ಲಿ
ಸ್ಫುಟವಾಗಿ ಕಂಡುಬರುತ್ತಿದೆ.
ಮತ್ತೊಂದು ಸರ್ಕಾರ ಅಧಿಕಾರಕ್ಕೆ ಬರುವವರೆಗೆ ತಮ್ಮ ಐದು ವರ್ಷಗಳ
ಅಧಿಕಾರವನ್ನು ಯಾವುದೇ ಆತಂಕವಿಲ್ಲದೆ ನೀಗಿಸಿಕೊಳ್ಳುವ ಮನೋಭಾವವೇ ಇದು?
ಯುಪಿಎಯ 'ಆಮ್
ಆದ್ಮಿ'
ಘೋಷಣೆಯನ್ನು ಅದೇ ಮರೆತು ಬಿಟ್ಟಿದೆಯೇ?
ಕೆ.
ಎಚ್.
ಅನಿತಾ
ದಾವಣಗೆರೆ
ಭಯೋತ್ಪಾದನೆ ವಿರುದ್ಧ ಸಮರ
ಭಯೋತ್ಪಾದನೆಗೆ ಕಡಿವಾಣ ಹಾಕಬೇಕಾದರೆ ಅಂತರ್
ರಾಷ್ಟ್ರೀಯ ಸಮುದಾಯದಲ್ಲಿ ಪರಸ್ಪರ ಸಹಕಾರ ಹೆಚ್ಚಬೇಕು.
ಪ್ರಜ್ಞಾವಂತ ಸಮಾಜದ ವಿದ್ಯಾವಂತ ಯುವಕ,
ಯುವತಿಯರನ್ನು ಭಯೋತ್ಪಾದನಾ ಸಂಘಟನೆಗಳಿಂದ ಹೊರತರುವ
ಕಾರ್ಯವಾಗಬೇಕು.
ಸಮಾಜದ್ರೋಹಿ ಚಟುವಟಿಕೆಗಳು,
ಸಜ್ಜನರನ್ನು ನೆಮ್ಮದಿಯಿಂದ ಬದುಕಲು ಬಿಡದ ಭಯೋತ್ಪಾದನೆ
ದೇಶದ ಪ್ರಗತಿಗೆ ಮಾರಕ.
ಆದರೆ ಭ್ರಷ್ಟ,
ದ್ವೇಷ,
ವೈಷಮ್ಯಗಳ ನೆರಳಿನಲ್ಲಿ ಹುಟ್ಟಿಕೊಳ್ಳುವ ಭಯೋತ್ಪಾದನೆ
ಈಗ ಜಗತ್ತಿನ ಒಂದು ಭಾಗವಾಗಿ ಹೋಗಿದೆ.
ಆದ್ದರಿಂದ ಭಯೋತ್ಪಾದನೆ ನಿಯಂತ್ರಿಸುವ ಕೆಲಸ ಸರ್ಕಾರದ್ದೆ
ಆದರೂ ಅದನ್ನು ತಡೆಯುವ ಪ್ರಯತ್ನದಲ್ಲಿ ಸರ್ಕಾರದೊಂದಿಗೆ ಸಾರ್ವಜನಿಕರೂ ನೆರವಾದರೆ
ಭಯೋತ್ಪಾದನೆ ಕೊನೆಗೊಳ್ಳಬಹುದು.
ಹನುಮಂತ ವಿಠ್ಠಪ್ಪನವರ
ಗೋಕಾಕ
ನಿರ್ಲಕ್ಷ್ಯದ ಪ್ರತಿರೂಪ
ಪ್ರತಿ ಬಾರಿ ನಾವು ಎಚ್ಚೆತ್ತುಕೊಳ್ಳುವುದು
ಏನಾದರೊಂದು ಅವಘಡವಾದಾಗಲೇ.
ರಾಜ್ಯದಲ್ಲಿ ನಡೆದ ರೈತರ ಆತ್ಮಹತ್ಯೆಯೂ ಇಂತಹುದ್ದೇ
ನಿರ್ಲಕ್ಷ್ಯದ ಪ್ರತಿರೂಪ.
ರಾಜಕಾರಣಿಗಳು ಅಸಡ್ಡೆ ಪ್ರವೃತ್ತಿ ಪ್ರದರ್ಶನವನ್ನು ಇನ್ನೂ
ನಿಲ್ಲಿಸಿಲ್ಲ ಎಂಬುದಕ್ಕೆ ಈ ಬಾರಿ ನಡೆದ ಘಟನೆಯೇ ನಿದರ್ಶನ.
ಹಾಗಿದ್ದಲ್ಲಿ ಅಧಿಕಾರದ ಗದ್ದುಗೆ ಮೇಲೆ ಕುಳಿತು ಇವರು
ಮಾಡುತ್ತಿರುವುದಾದರೂ ಏನು?
ಒಂದೆಡೆ ಹೆಣ ಉರುಳುತ್ತಿದ್ದರೆ ಈ ರಾಜಕಾರಣಿಗಳು ಎಸಿ ರೂಮಿನಲ್ಲಿ
ಕುಳಿತು ಪರಿಹಾರ ಘೋಷಿಸುತ್ತಾರೆ!
ಈ ನಿಟ್ಟಿನಲ್ಲಿ
'ಸಾವಿನ ಮನೆಯಲ್ಲೂ
ರಾಜಕೀಯ'
(ಶಶಿ ಸಂಪಳ್ಳಿ)
ಲೇಖನ ಸಕಾಲದಲ್ಲಿ ಅರ್ಥವತ್ತಾಗಿ ಮೂಡಿಬಂದಿದೆ.
ನೀರಜಾ ಮೂರ್ತಿ
ಬೆಂಗಳೂರು
ಕುತೂಹಲ ಹೆಚ್ಚಿಸಿತು
ನನ್ನ
ಕೆಲವು ಅಚ್ಚುಮೆಚ್ಚಿನ ಪತ್ರಿಕೆಗಳಲ್ಲಿ ಟಿಎಸ್‌ಐ ಕೂಡ ಒಂದು.
ಯಾವುದೇ ಪತ್ರಿಕೆ ಬೆಳಕಿಗೆ ಬರಬೇಕಾದರೆ,
ಜನಪ್ರಿಯಗೊಳ್ಳಬೇಕಾದರೆ ಪತ್ರಿಕೆಯು ಓದುಗರ ಮನಸ್ಸನ್ನು
ತಟ್ಟುವಂತಿರಬೇಕು.
ನಿಮ್ಮ ಪತ್ರಿಕೆ ಇನ್ನಷ್ಟು ಜನರನ್ನು ಆಕರ್ಷಿಸಿ ಜನರ ಮೆಚ್ಚುಗೆ
ಪಡೆಯುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.
ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಉಡುಪಿ ಶಾಸಕರ ಪತ್ನಿ
ಪದ್ಮಪ್ರಿಯಾರ ಬಗ್ಗೆ ಮೂಡಿಬಂದ ಲೇಖನ 'ಪದ್ಮಪ್ರಿಯ
ಹುಟ್ಟು ಹಾಕಿದ ಪ್ರಶ್ನೆಗಳಿಗೆ ಉತ್ತರ?'
(ಕೆ.
ರಾಘವ ಶರ್ಮ)
ಕುತೂಹಲ ಕೆರಳಿಸುವಂತಿತ್ತು.
ಸಾಮಾನ್ಯ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದರೆ
ಇಷ್ಟೊಂದು ಪ್ರಶ್ನೆಗಳು ಹುಟ್ಟುತ್ತಲೇ ಇರಲಿಲ್ಲ.
ಆದರೆ ಈಕೆ ಸಮಾಜದ ಉನ್ನತ ಸ್ಥಾನದಲ್ಲಿರುವವರ ಪತ್ನಿ.
ಇಲ್ಲಿ ಮತ್ತೊಂದು ಖೇದಕರ ವಿಚಾರವೆಂದರೆ ಉನ್ನತ
ಸ್ಥಾನದಲ್ಲಿರುವ ವ್ಯಕ್ತಿಯ ಪರಿಸ್ಥಿತಿಯೇ ಹೀಗಾದರೆ ಸಾಮಾನ್ಯರ ಪಾಡೇನು?
ಪತಿಯೊಂದಿಗೆ ಸಪ್ತಪದಿ ತುಳಿದು ಇಷ್ಟು ವರ್ಷ ಸಂಸಾರ
ನಡೆಸಿದ ಪದ್ಮಪ್ರಿಯಾರಿಗೆ ಆತ್ಮಹತ್ಯೆ ಅನಿವಾರ್ಯವಾಗಿತ್ತೆ?
ಹಾಗೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದರೆ ದೆಹಲಿಗೆ
ಹೋಗಿ ಏಕೆ ಮಾಡಿಕೊಂಡರು?
ಎಂಬ ಸಂಶಯ ಸಹಜವಾಗಿಯೇ ಹುಟ್ಟುತ್ತದೆ.
ಆತ್ಮಹತ್ಯೆ ಪ್ರಕರಣದ ಹಿಂದೆ ಯಾರ ಕೈವಾಡ ಇರಬಹುದೆಂಬುದು
ಇನ್ನಷ್ಟು ಕುತೂಹಲ ಮೂಡಿಸಿದೆ.
ಜಿ.
ಶ್ರೀಶೈಲ
ಧಾರವಾಡ
ಭಾಷೆಯ ಗಡಿ ಮೀರಬೇಕು
ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಕಡಿಮೆ
ಆಗುತ್ತಿರುವುದು ಅಕ್ಷರಶಃ ಸತ್ಯ.
ಕನ್ನಡ ಚಿತ್ರ ನೋಡುವುದಾದರೂ ಯಾರು ಎಂಬ ಭಾವ ಜನರಲ್ಲಿ
ಮೂಡುತ್ತಿದೆ.
ಎಲ್ಲೋ ಒಂದು 'ಮುಂಗಾರು
ಮಳೆ'ಯಂತಹ
ಚಿತ್ರಗಳು ಯಶಸ್ಸು ಕಾಣುತ್ತವೆ.
ಅಂದರೆ ಕನ್ನಡದಲ್ಲಿ ಉತ್ತಮ ಚಿತ್ರ ಬರಲು ಸಾಧ್ಯವೇ ಇಲ್ಲ ಎಂಬ
ಜನರ ಅಭಿಪ್ರಾಯವೂ ಸುಳ್ಳು ಎಂದಾಯಿತು.
ಒಳ್ಳೆಯ ಚಿತ್ರಕ್ಕೆ ಭಾಷೆಯ ಗಡಿ ಮೀರಿ ಪ್ರೇಕ್ಷಕರು
ಹುಟ್ಟಿಕೊಳ್ಳುತ್ತಾರೆ ಎಂಬ ಸತ್ಯವನ್ನು ಗಾಂಧಿನಗರಿ ಅರ್ಥೈಸಿಕೊಳ್ಳಬೇಕು.
'ಮೊಂಡು ನಟನ
ಖಡಕ್ ಮಾತು'
(ಎನ್.ಕೆ.
ಸುಪ್ರಭಾ)
ಲೇಖನದಲ್ಲಿ ದರ್ಶನ್
'ಹೊರಗಡೆ ಇರುವ
ನಮ್ಮವರೇ ಕನ್ನಡ ಚಿತ್ರ ನೋಡುವುದಿಲ್ಲ'
ಎಂಬ ಮಾತುಗಳನ್ನು ಕನ್ನಡ ಚಿತ್ರರಂಗ ವಿಮರ್ಶಿಸಬೇಕು.
ತೇಜಸ್ವಿನಿ ಶಂಕರ್
ಮಂಗಳೂರು
ಅಧಿಕಾರ ವ್ಯಾಮೋಹ
ನಾವು ತಮಿಳುನಾಡಿನ ಕಾಂಚ್‌ಪುರದಲ್ಲಿ ವಾಸವಾಗಿದ್ದು
ಇಲ್ಲಿ ಯಾವುದೇ ಕನ್ನಡ ಪತ್ರಿಕೆಗಳು ದೊರೆಯುತ್ತಿಲ್ಲ.
ಈ ಸಂದರ್ಭದಲ್ಲಿ ನಮಗೆ ಸಿಕ್ಕಿದ್ದು ಟಿಎಸ್‌ಐ.
ಲೇಖನಗಳು ತುಂಬಾ ಚೆನ್ನಾಗಿ ಬರುತ್ತಿದೆ.
ಆದರೆ 'ಕಂಬಿ
ಹಿಂದಿನ ಕುಖ್ಯಾತರು'
ಓದಿ ನಮ್ಮ ರಾಜಕೀಯ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿದು ಹೋಯಿತಲ್ಲ ಎಂದು ಬೇಸರವಾಯಿತು.
ಹಾಗೆಯೇ ಕರ್ನಾಟಕದ ಬಿಜೆಪಿ ಸರ್ಕಾರ ನಾಡಿನ ಏಳಿಗೆಗಾಗಿ
ಅಧಿಕಾರಕ್ಕೆ ಬಂದಿದೆಯೋ ಅಥವಾ ಅಧಿಕಾರದ ವ್ಯಾಮೋಹದಿಂದ ಬಂದಿದೆಯೋ
ಗೊತ್ತಾಗುತ್ತಿಲ್ಲ.
ಮಾಹಿತಿ ಯೋಗ್ಯ ಪತ್ರಿಕೆಯ ಪ್ರಧಾನ ಸಂಪಾದಕ ಅರಿಂದಮ್
ಚೌಧುರಿಯವರಿಗೆ ಧನ್ಯವಾದಗಳು.
ರಾಜು ಕೆ.
ಇ-ಮೇಲ್ ಮೂಲಕ
ಕೃತಜ್ಞತೆಗಳು
'ದ ಸಂಡೆ ಇಂಡಿಯನ್'
ಕನ್ನಡ ವೆಬ್ ಆವೃತ್ತಿ ಬರುತ್ತಿರುವುದು ಸಂತಸದ ವಿಚಾರ.
ತಾಯ್ನಾಡಿನಿಂದ ದೂರದ ದೇಶದಲ್ಲಿದ್ದರೂ ನಮ್ಮ
ಮಾತೃಭಾಷೆಯಲ್ಲೇ ಪತ್ರಿಕೆಯನ್ನು ಓದುತ್ತಿದ್ದೇವೆ.
ಟಿಎಸ್‌ಐ ಬಳಗಕ್ಕೆ ಕೃತಜ್ಞತೆಗಳು.
ವಿಲ್‌ಫ್ರೆಡ್ ಫರ್ನಾಂಡಿಸ್
ಇ-ಮೇಲ್ ಮೂಲಕ
ಸಮಗ್ರ ವಾರಪತ್ರಿಕೆ
ಒಂದೆಡೆ ರಾಷ್ಟ್ರೀಯ,
ಅಂತರ್ ರಾಷ್ಟ್ರೀಯ ವಿಚಾರಗಳ ಸೊಗಡು.
ಮತ್ತೊಂದೆಡೆ ರಾಜ್ಯದ ಆಗುಹೋಗುಗಳ ಪರಿಚಯ.
ಜಗತ್ತಿನ ವಿದ್ಯಮಾನಗಳನ್ನು ತಿಳಿದುಕೊಳ್ಳಬೇಕೆಂಬ ಆಸಕ್ತಿ
ಉಳ್ಳವನಿಗೆ ಇದಕ್ಕಿಂತ ಹೆಚ್ಚಿನದಿನ್ನೇನು ಬೇಕು?
ಸಾಹಿತ್ಯ ಪ್ರಿಯರಿಗೆ ಕಥೆ,
ಪುಸ್ತಕ ವಿಮರ್ಶೆಗಳು,
ಚಿಂತನಯೋಗ್ಯ ಅಂಕಣಗಳು.
ಟಿಎಸ್‌ಐ ಸಮಗ್ರ ಪತ್ರಿಕೆ ಎನ್ನಲಡ್ಡಿಯಿಲ್ಲ.
ಸಾಗರ್
9845*****
ಉತ್ತಮ ವೆಬ್‌ಸೈಟ್
ಉತ್ತಮ ಅಂತರ್ಜಾಲ ತಾಣ ಹಾಗೂ ಜ್ಞಾನ ವೃದ್ಧಿಗೂ ವೆಬ್‌ಸೈಟ್
ಸಂಚಿಕೆ ಯೋಗ್ಯವಾಗಿದೆ.
ಈಶ್ವರ್ ಪ್ರಸಾದ್
ಇ-ಮೇಲ್ ಮೂಲಕ
| ಬಹುಮಾನಿತ ಪತ್ರಗಳು |
|

ಯುವಕರು ಮುಂದೆ ಬರಲಿ
ಭಾರತದ ಇಂದಿನ ಯುವಪೀಳಿಗೆ ಸಂಪೂರ್ಣ ಭರವಸೆಯ
ಪ್ರತೀಕ.
ಯುವಜನತೆ ರಾಷ್ಟ್ರದ ರಾಜಕೀಯ,
ವ್ಯವಹಾರ,
ಸಂಗೀತ,
ಸಿನಿಮಾ,
ಸಮಾಜ ಮತ್ತು ಮೂಲಭೂತವಾಗಿ ಭಾರತದ ಪ್ರತಿ
ಕ್ಷೇತ್ರಗಳ ಪ್ರತಿನಿಧಿಗಳಾಗುವ ಸಾಮರ್ಥ್ಯ ಹೊಂದಿದ್ದು ನಾಯಕತ್ವ ವಹಿಸಲು
ಮುನ್ನುಗುತ್ತಿದ್ದಾರೆ.
ಆದರೆ ಇಲ್ಲಿನ ವಿರೋಧಾಭಾಸ ಎಂದರೆ ಹೊಸ ಭಾರತವನ್ನು
ಮುನ್ನಡೆಸುವ ಪೀಳಿಗೆ ದೇಶ ಅಥವಾ ವಿದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ
ಸಾಧನೆಯಲ್ಲಿ ತೊಡಗಿದ್ದರೆ ದೇಶದ ರಾಜಕೀಯ ಪರಿಸ್ಥಿತಿಯ ಕುರಿತು ಅಷ್ಟೇ
ನಿರುದ್ವಿಗ್ನರಾಗಿದ್ದಾರೆ.
ಕೇವಲ ಬೆರಳೆಣಿಕೆಯಷ್ಟು ಯುವ ಭಾರತೀಯರು ರಾಜಕೀಯವನ್ನು ತಮ್ಮ
ಆಸಕ್ತಿಯ ಕ್ಷೇತ್ರವೆಂದಿದ್ದಾರೆ.
ಇಂದಿನ ರಾಜಕೀಯ ಮತ್ತು ರಾಜಕಾರಣಿಗಳನ್ನು
ಪ್ರಾಮಾಣಿಕತೆ,
ನೈತಿಕತೆಯ ಪ್ರತಿರೂಪ ಎಂದು ಪರಿಗಣಿಸದೆ ಇರುವುದೇ ಬಹುಶಃ ಈ
ಸ್ಥಿತಿ ಸೃಷ್ಟಿಯಾಗಲು ಕಾರಣ.
ಯುವಪೀಳಿಗೆ ರಾಜಕೀಯದಿಂದ ದೂರ ಉಳಿಯಲೇಬಾರದು.
ಏನೂ ಬದಲಾಗದು,
ರಾಜಕೀಯ ಕೊಳಕು ಕ್ಷೇತ್ರ,
ನೀನು ರಾಜಕಾರಣಿಯಾಗಲು ಸಾಧ್ಯವಿಲ್ಲದಷ್ಟು ಸಾಧ್ವಿ
ಎಂಬ ಮಾತುಗಳಿಗೆ ಯುವಕರು ಕಿವಿಗೊಡಬಾರದು.
ಇವೆಲ್ಲಾ ನಕಾರಾತ್ಮಕ ಧೋರಣೆಯುಳ್ಳ ವ್ಯಕ್ತಿಗಳ
ವಿಚಾರ ಲಹರಿ.
ರಾಜಕೀಯ ಈಗ ಕೇವಲ ವ್ಯಕ್ತಿಗತವಾದ ವಿಷಯವಾಗಿ ಉಳಿದಿಲ್ಲ.
ಪ್ರತಿ ಯುವಕರು ರಾಜಕೀಯ ಪ್ರವೇಶಿಸುವಂತಾಗಬೇಕು.
ಏನಲ್ಲವೆಂದರೂ ಭವಿಷ್ಯದಲ್ಲಿ ಉತ್ತಮ ಭಾರತದ
ನಿರ್ಮಾಣಕ್ಕಾದರೂ.
ಪ್ರವೀಣ್ ಕುಮಾರ್
ಕೇರಳ
ಶೂನ್ಯ ಸಾಧನೆ
ಏನೂ ಮಾಡದೆ ಇರುವ ಕಲೆಯನ್ನು
ವ್ಯಾಖ್ಯಾನಿಸಬೇಕೆಂದರೆ ಯುಪಿಎ ಸರ್ಕಾರದಷ್ಟು ಉತ್ತಮ ನಿದರ್ಶನ ಇನ್ನೊಂದಿಲ್ಲ.
ಹೆಚ್ಚುತ್ತಿರುವ ಹಣದುಬ್ಬರವನ್ನು ನೋಡಿದಲ್ಲಿ ಬರುವ
ಕೆಲ ವರ್ಷಗಳವರೆಗಾದರೂ ಈ ಮಾತನ್ನು ಯುಪಿಎ ಅನಿವಾರ್ಯವಾಗಿ ಕೇಳಬೇಕಾಗಿರುವುದು
ಸತ್ಯ.
ಮೈತ್ರಿ ಒಡೆಯಬಾರದೆಂಬ ದೃಷ್ಟಿಯಿಂದ ಯುಪಿಎ ಭ್ರಷ್ಟಾಚಾರ ಮತ್ತು ದುರಾಡಳಿತ
ಕೈಗೊಂಡ ಯಾವುದೇ ಸಚಿವರ ವಿರುದ್ಧ ಕ್ರಮ ಕೈಗೊಳ್ಳಲೇ ಇಲ್ಲ.
ಸರ್ಕಾರ ಹೆಚ್ಚುತ್ತಿರುವ ಬೆಲೆ ಏರಿಕೆಯನ್ನು
ನಿಭಾಯಿಸಲು ಪಟ್ಟಪಾಡೇ ಇದಕ್ಕೆ ಸಾಕ್ಷಿ.
ಕಳೆದ ನಾಲ್ಕು ವರ್ಷಗಳ ಯುಪಿಎ ಸರ್ಕಾರದ ಸಾಧನೆ
ಪಟ್ಟಿಯನ್ನು ತೆಗೆದು ನೋಡಿದರೆ ಕಂಡುಬರುವುದು ಕೇವಲ ಭಾರತ-ಅಮೆರಿಕ
ಅಣು ಒಪ್ಪಂದದ ವಿಚಾರ ಮಾತ್ರ.
ಯುಪಿಎ ಸಾಧನೆ ಎಂದರೆ ದೊಡ್ಡ ಶೂನ್ಯವಷ್ಟೇ
ಕಣ್ಣೆದುರಿಗೆ ಬರುತ್ತದೆಯೇ ವಿನಃ ಮತ್ತೇನೂ ಅಲ್ಲ.
ಬಹುಶಃ ಪ್ರಧಾನಮಂತ್ರಿ ಹಾಗೂ ಸೋನಿಯಾ ಗಾಂಧಿ
ಇಬ್ಬರಿಗೂ ಇದು ಅರಿವಿಗೆ ಬರುತ್ತಿದೆ.
ವಿಷ್ಣು ಕುಮಾರ್ ಶರ್ಮಾ
ಇ-ಮೇಲ್ ಮೂಲಕ
ಕಾರ್ಯಪ್ರವೃತ್ತಗೊಳ್ಳಲಿ
ಪೆಟ್ರೋಲ್,
ಡೀಸೆಲ್ ಮತ್ತು ಎಲ್‌ಪಿಜಿ ಬೆಲೆಗಳಲ್ಲಿ ಇತ್ತೀಚೆಗೆ
ಏರಿಕೆ ಕಂಡು ಬಂದಿದ್ದರೂ ದೇಶದುದ್ದಗಲ ಗ್ರಾಹಕರು ಎಲ್‌ಪಿಜಿ ಸಿಲಿಂಡರ್
ಪಡೆಯುವಲ್ಲಿ ತೀವ್ರ ಅಭಾವ ಎದುರಿಸುತ್ತಿದ್ದಾರೆ.
ಟಿಎಸ್‌ಐ ಸಾಮಾನ್ಯ ಜನತೆಯ ದೃಷ್ಟಿಕೋನದಿಂದ ವರದಿ
ಮಾಡಿದೆ.
ಸಿಲಿಂಡರ್ ಬೆಲೆ ರೂ.
50
ಏರಿದ್ದರೂ ಕಂಪನಿಗಳು ಎಲ್‌ಪಿಜಿ ಹೊಸ ಸಂಪರ್ಕ ಕೊಡಲು ನಿರಾಕರಿಸುತ್ತಿವೆ.
ಸಣ್ಣ ನಗರ ಹಾಗೂ ಗ್ರಾಮೀಣ ಭಾರತದಲ್ಲಿ ಹೊಸ ಸಂಪರ್ಕ
ಕೊಡುವುದನ್ನು ಅನಧಿಕೃತವಾಗಿ ರದ್ದು ಮಾಡಿದ್ದರೆ,
ದೊಡ್ಡ ಪಟ್ಟಣ ಹಾಗೂ ಮೆಟ್ರೋಗಳಲ್ಲಿ ಸಂಪರ್ಕ
ಪಡೆದುಕೊಳ್ಳಬೇಕೆಂದರೆ ಬಹಳ ಪ್ರಯಾಸ ಪಡಬೇಕಾಗುತ್ತದೆ.
ಎಲ್‌ಪಿಜಿ ಸಿಲಿಂಡರ್ ಮೇಲೆ ಹೆಚ್ಚಿನ ಸಬ್ಸಿಡಿ
ನೀಡಲಾಗಿರುವುದೇ ಕಂಪನಿಗಳು ಹೊಸ ಸಂಪರ್ಕ ನೀಡದೆ ಇರುವುದಕ್ಕೆ ಕಾರಣ.
ತಮಗಾದ ನಷ್ಟವನ್ನು ತುಂಬಿಸಿಕೊಳ್ಳಲೇ ಕಂಪನಿಗಳು
ಪ್ರಯತ್ನ ಪಡುತ್ತಿವೆ.
ಅಲ್ಲದೆ ಎಲ್‌ಪಿಜಿ ಸರಬರಾಜು ವ್ಯವಸ್ಥೆಯೂ ಅನಿಶ್ಚಿತ
ಸ್ಥಿತಿಯಲ್ಲಿದೆ.
ಸರ್ಕಾರ ಎಲ್‌ಪಿಜಿ ಸರಬರಾಜು ವ್ಯವಸ್ಥೆಯ ಬಗ್ಗೆ ಕೂಲಂಕಷ
ಪರೀಕ್ಷೆ ನಡೆಸಬೇಕು.
ನೀಲಂ
ಜೈಪುರ |
|