ಟರ್ಕಿ: ಸಾಂವೈಧಾನಿಕ ಬಿಕ್ಕಟ್ಟು
ಜಾತ್ಯತೀತತೆಯ ಹೆಸರಿನಲ್ಲಿ...
ಸಂವಿಧಾನದ ವ್ಯಾಪಕ ಸುಧಾರಣೆಯತ್ತ ಟರ್ಕಿ ಶೀಘ್ರವಾಗಿ ಗಮನಹರಿಸಬೇಕಿದೆ

ಮುಸ್ಲಿಂ ಬಹುಸಂಖ್ಯಾತರಿರುವ ಜಗತ್ತಿನ ಏಕೈಕ
ಜಾತ್ಯತೀತ ರಾಷ್ಟ್ರ ಟರ್ಕಿಗೆ ಇದು ಸಾಂವೈಧಾನಿಕ ಬಿಕ್ಕಟ್ಟಿನ ಕಾಲ.
ಕಾಲೇಜು-
ವಿಶ್ವವಿದ್ಯಾನಿಲಯಗಳಿಗೆ ತೆರಳುವ ಟರ್ಕಿ ಮಹಿಳೆಯರು
ಕಡ್ಡಾಯವಾಗಿ ಬುರ್ಖಾ ಧರಿಸಬೇಕು ಎಂಬ ವಾದದ ಪರ ಟರ್ಕಿ ಪ್ರಧಾನ ಮಂತ್ರಿ
ಎರ್ಡೋಗನ್ ಹಾಗೂ ಅವರ ಎಕೆಪಿ ಪಕ್ಷದ ಸದಸ್ಯರು ಸಂಸತ್ತಿನಲ್ಲಿ ಮತ
ಚಲಾಯಿಸಿದ್ದರು.
ಇದರಿಂದ ಕುಪಿತಗೊಂಡ ಟರ್ಕಿ ಉಚ್ಚ ನ್ಯಾಯಾಲಯ ದೇಶದಲ್ಲಿ
'ಶರಿಯಾ
ಕಾನೂನನ್ನು'
ಜಾರಿಗೆ ತರಲು ಯತ್ನಿಸುತ್ತಿರುವ ಆರೋಪ ಹೊರಿಸಿ ಪ್ರಧಾನಿ ರೆಸೆಪ್ ತಯ್ಯಿಪ್
ಎರ್ಡೋಗನ್
ಅಧ್ಯಕ್ಷ ಅಬ್ದುಲ್ಲಾ ಗುಲ್ ಹಾಗೂ ಪಕ್ಷದ
71 ಪ್ರಭಾವಿ
ನಾಯಕರು ಹಾಗೂ ಎಕೆಪಿ ಪಕ್ಷದ ಮೇಲೆ ನಿರ್ಬಂಧ ಹೇರಿದೆ.
ಜಾತ್ಯತೀತತೆಗೆ ವಿರುದ್ಧವಾದ ಧೋರಣೆ ಹೊಂದಿದ್ದ
ಕಾರಣ ಈ ಹಿಂದೆಯೇ ಬಹಿಷ್ಕಾರಗೊಂಡಿದ್ದ ಎರಡು ಮುಸ್ಲಿಂ ಗುಂಪುಗಳೊಂದಿಗೆ ಎಕೆಪಿ
ಪಕ್ಷಕ್ಕೆ ನಂಟಿದೆ.
ಈ ಐದು ವರ್ಷಗಳ ನಿರ್ಬಂಧ ಮಾನವ ಹಕ್ಕುಗಳ
ಉಲ್ಲಂಘನೆಯ ಇತಿಹಾಸದಲ್ಲೇ ಅತ್ಯಂತ ಕ್ರೂರ ಹಾಗೂ ಪ್ರಜಾತಾಂತ್ರಿಕ ತತ್ವಗಳಿಗೇ
ಮಾರಕವಾಗಲಿದೆ.
ಈ ಹಿನ್ನೆಲೆಯಲ್ಲಿ ಟರ್ಕಿ ಉಚ್ಚ ನ್ಯಾಯಾಲಯದ ಈ
ನಿರ್ಧಾರವನ್ನು ಅಮೆರಿಕ ಟೀಕಿಸಿದೆ ಮಾತ್ರವಲ್ಲ ಮುಂದಾಗಬಹುದಾದ ಪರಿಣಾಮಗಳ
ಬಗ್ಗೆ ಎಚ್ಚರಿಕೆಯನ್ನೂ ನೀಡಿದೆ.
ಮಾನವ ಹಕ್ಕುಗಳ ಉಲ್ಲಂಘನೆಯ ವಿಷಯದಲ್ಲಿ ಟರ್ಕಿಗೆ
ಮೊದಲ ಪಂಕ್ತಿಯೇ ದೊರಕಿದೆ.
ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕೆ ಶೇ.
7ರಷ್ಟು
ಕಾಣಿಕೆ ನೀಡುತ್ತಿದ್ದ ಚಾಲ್ತಿ ಖಾತೆಯ ಕೊರತೆಯ ಪ್ರಮಾಣ ಹೆಚ್ಚುತ್ತಿರುವುದು
ಹಾಗೂ ರಾಜಕೀಯ ಹಗೆತನ ಟರ್ಕಿಯ ಪ್ರಸ್ತುತ ಆರ್ಥಿಕ ಬಿಕ್ಕಟ್ಟನ್ನು ಮತ್ತಷ್ಟು
ಉಲ್ಬಣಿಸುವಂತೆ ಮಾಡಲಿವೆ.
ಒಟ್ಟು ರಾಷ್ಟ್ರೀಯ ಉತ್ಪನ್ನ
ರಫ್ತು ಹಾಗೂ ವಿದೇಶಿ ಹೂಡಿಕೆಗಳನ್ನು ಹೆಚ್ಚೆಚ್ಚು
ಸಮರ್ಥವಾಗಿಸಲು ಕೈಗೊಂಡಂಥ ಸುಧಾರಣಾ ಕ್ರಮಗಳು ಹಾಗೂ ಪ್ರಗತಿಪರ ಕಾರ್ಯಗಳು
ಆರ್ಥಿಕ ಕುಸಿತವನ್ನು ಎತ್ತಿ ನಿಲ್ಲಿಸುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.
ಏಕೆಂದರೆ ಮರುಚುನಾವಣೆ ನಡೆದು ಆಗಷ್ಟೇ ಒಂದು ವರ್ಷ
ಪೂರೈಸಿದ್ದ ಸರ್ಕಾರ ಈಗ ಉರುಳಿ ಬಿದ್ದಿದೆ.
ಅದೂ ಅಲ್ಲದೆ ಈ ಘಟನೆಗೆ ಜಾಗತಿಕ ಪ್ರಭಾವಗಳೂ
ಇರುತ್ತವೆ.
ಯುರೋಪಿಯನ್ ಒಕ್ಕೂಟಕ್ಕೆ ಸೇರಲು ಟರ್ಕಿ
ಶತಾಯಗತಾಯ ಪ್ರಯತ್ನಪಡುತ್ತಲೇ ಇದೆ.
ಆದರೆ ಟರ್ಕಿ ಉಚ್ಚ ನ್ಯಾಯಾಲಯದ ಇತ್ತೀಚೆಗಿನ
ತೀರ್ಪನ್ನು ಯುರೋಪಿಯನ್ ಒಕ್ಕೂಟ ಟೀಕಿಸಿರುವುದರಿಂದ
ಯುರೋಪಿಯನ್ ಒಕ್ಕೂಟ ಸೇರುವ ಟರ್ಕಿಯ ಕನಸು ಇನ್ನೂ
ಗಗನಕುಸುಮವಾಗೇ ಉಳಿದಿದೆ.
ಟರ್ಕಿಯ ಆಡಳಿತ ಚುಕ್ಕಾಣಿ ಎಕೆಪಿಯ ಕೈಯಲ್ಲಿದ್ದಾಗ
ಭಯೋತ್ಪಾದನೆ ಅದರಲ್ಲೂ ಕುರ್ದ್ ಕೇಂದ್ರಿತ ಭಯೋತ್ಪಾದನೆ ಸಂಪೂರ್ಣ
ಹತೋಟಿಯಲ್ಲಿತ್ತು.
ಅಷ್ಟೇ ಅಲ್ಲದೆ ಗ್ರೀಸ್‌ನೊಂದಿಗಿನ ಸೈಪ್ರಸ್ ಬಿಕ್ಕಟ್ಟು
ಹಾಗೂ ಜಗತ್ತಿನ ಬೇರೆ ಯಾವುದೇ ರಾಷ್ಟ್ರ ಒಪ್ಪದಿದ್ದರೂ ತಾನು ಯುರೋಪಿಯನ್
ಒಕ್ಕೂಟದ ಭಾಗ ಎಂದು ಟರ್ಕಿ ಹೇಳಿಕೊಳ್ಳುತ್ತಿರುವುದು...
ಮುಂತಾದ ಸಮಸ್ಯೆಗಳು ಮುಂದೆ ಪೆಡಂಭೂತವಾಗುವ ಎಲ್ಲಾ
ಸೂಚನೆಗಳೂ ಇವೆ.
1961ರಿಂದ
ಜಾತ್ಯತೀತತೆಯ ಹೆಸರಿನಲ್ಲಿ ಬಹಿಷ್ಕಾರಗೊಂಡ
24 ರಾಜಕೀಯ
ಪಕ್ಷಗಳಲ್ಲಿ ಒಂದನ್ನು ಬಿಟ್ಟು ಉಳಿದೆಲ್ಲಾ ಪ್ರಕರಣಗಳಲ್ಲೂ ಮಾನವ ಹಕ್ಕುಗಳ
ತೀವ್ರ ಉಲ್ಲಂಘನೆಯಾಗಿತ್ತು.
ಆದರೆ
1950ರಿಂದ ಪಶ್ಚಿಮ ಯುರೋಪಿನಲ್ಲಿ
ಬಹಿಷ್ಕಾರಕ್ಕೊಳಗಾದ ಪಕ್ಷಗಳ ಸಂಖ್ಯೆ ಕೇವಲ ಮೂರು.
ಆಡಳಿತಾರೂಢ ಪಕ್ಷವನ್ನು ಬಹಿಷ್ಕರಿಸುವುದು
ಸಮಸ್ಯೆಯನ್ನು ಪರಿಹರಿಸುವುದಿಲ್ಲ.
ಬದಲಿಗೆ ಇರುವ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿ
ಹೊಸ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.
ಎರ್ಡೋಗನ್ ಅಂಥ ಕ್ಷುಲ್ಲಕ ವಿಷಯಗಳ ಸುಧಾರಣೆಯತ್ತ
ಗಮನಹರಿಸದೆ
ಪ್ರಬಲ ರಾಜಕೀಯ ಪಕ್ಷಗಳೆಲ್ಲವೂ ಒಂದುಗೂಡಿ ವ್ಯಾಪಕ
ಸಾಂವೈಧಾನಿಕ ಸುಧಾರಣೆಯತ್ತ ಚಿಂತಿಸಬೇಕಿದೆ..
ಐಐಪಿಎಂ
'ಥಿಂಕ್ ಟ್ಯಾಂಕ್
ಅಕ್ರಂ ಹಕ್
ಬಿಪಿಎಲ್: ಭ್ರಷ್ಟಾಚಾರ
ಉದ್ಯೋಗ ಖಾತ್ರಿಯಲ್ಲೂ ಲಂಚ ಖಾತ್ರಿ!
ಭ್ರಷ್ಟಾಚಾರ ತಡೆಯಲು ಸ್ವಾಯತ್ತ ಅಂಗಸಂಸ್ಥೆ ರಚಿಸುವುದು ಈಗಿನ ತುರ್ತು

ಸಮಾಜದ ಉನ್ನತ ವರ್ಗದ ಜನರೇ ಭ್ರಷ್ಟಾಚಾರದ
ಪ್ರಮುಖ ವಾರಸುದಾರರು ಹಾಗೂ ಇದು ಅವರ ಹಣ ಗಳಿಸುವ ಒಂದು
(ಕು)ತಂತ್ರವೂ
ಹೌದು ಎಂದು ನಮ್ಮೆಲ್ಲರ ನಂಬಿಕೆ.
ಆದರೆ ಇತ್ತೀಚೆಗೆ
'ಟ್ರಾನ್ಸ್ಪರೆನ್ಸಿ
ಇಂಟರ್‌ನ್ಯಾಷನಲ್ ಇಂಡಿಯಾ'
(ಟಿಐಐ)
ಹಾಗೂ
'ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್'
(ಸಿಎಂಎಸ್)
ಜಂಟಿಯಾಗಿ ನಡೆಸಿದ ಸಮೀಕ್ಷೆಯತ್ತ
ಕಣ್ಣುಹಾಯಿಸಿದರೆ ಅಚ್ಚರಿಯ ಅಂಶಗಳೇ ಕಣ್ಣಿಗೆ ರಾಚುತ್ತವೆ.
ಇಂದು ಬಡತನ ರೇಖೆಗಿಂತ ಕೆಳಗಿರುವವರ
(ಬಿಪಿಎಲ್)
ಪಟ್ಟಿಯಲ್ಲಿನ ಪ್ರತಿ ಮೂರರಲ್ಲಿ ಒಬ್ಬರು ಸರ್ಕಾರಿ
ಅಧಿಕಾರಿಗಳಿಗೆ ಲಂಚ ನೀಡಿ ಮೂಲಸೌಕರ್ಯಗಳನ್ನು ಪಡೆಯುತ್ತಿದ್ದಾರೆ ಎಂಬ
ಅಂಶವನ್ನು 'ದ
ಇಂಡಿಯಾ ಕರಪ್ಷನ್ 2007'
ಬೆಳಕಿಗೆ ತಂದಿದೆ.
ಅದೂ ಅಲ್ಲದೆ ಯುಪಿಎ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ
'ರಾಷ್ಟ್ರೀಯ
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ'
(ಎನ್‌ಆರ್‌ಇಜಿಎ)
ಉದ್ಯೋಗ ಪಡೆಯಲು ಕೂಡ ಸುಮಾರು
10 ಲಕ್ಷ
ಬಿಪಿಎಲ್ ಕುಟುಂಬಗಳು (2007ರಲ್ಲಿ
ಸುಮಾರು 71.5
ದಶಲಕ್ಷ ರೂ.
ಲಂಚ ಸ್ವೀಕಾರವಾಗಿದೆ!)
ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡುತ್ತಿವೆ ಎಂಬ
ಅಂಶವೂ ವರದಿಯಿಂದ ಸಾಬೀತಾಗಿದೆ.
ತಮ್ಮ ಕಾರ್ಯಗಳು ಸುಗಮವಾಗಿ ನಡೆಯುವ
ನಿಟ್ಟಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡುವುದು ಹೊಸ ಸುದ್ದಿಯೇನಲ್ಲ.
ಆದರೆ ಸಮಾಜದಲ್ಲಿ ತೀರಾ ಕೆಳಮಟ್ಟದಲ್ಲಿ ಜೀವನ
ನಡೆಸುತ್ತಿರುವ ಭಾರತದ ಬಡ ಜನರೂ ಇಂದು ಲಂಚ ನೀಡುವುದರಿಂದ ಹೊರತಾಗಿಲ್ಲ
ಎಂಬುದು ಮಾತ್ರ ನಿಜವಾಗಿಯೂ ಆಘಾತಕಾರಿ ಸುದ್ದಿ.
ಬಡಜನರು ಕಳೆದ ಒಂದು ವರ್ಷದಲ್ಲಿ ಒಟ್ಟು
9 ಬಿಲಿಯನ್ ರೂ.ಗಳನ್ನು
ಲಂಚದ ರೂಪದಲ್ಲಿ ನೀಡಿದ್ದಾರೆ ಎಂದು ವರದಿಯಲ್ಲಿ ದಾಖಲಾಗಿದೆ.
ಆದರೆ ಒಮ್ಮೆ ಯೋಚಿಸಿ
ದಿನದ ಎರಡು ಹೊತ್ತಿನ ಊಟಕ್ಕೂ ಹಣ ಹೊಂದಿಸಲಾಗದ
ಬಿಪಿಎಲ್ ಕುಟುಂಬಗಳು
ಲಂಚ ನೀಡಲು ಅದೆಷ್ಟು ಹೆಣಗಾಡಬಹುದು?
ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಸೂಕ್ಷ್ಮ
ವಿಚಾರಗಳಲ್ಲಿ ಬಹುಮುಖ್ಯವಾಗಿ ಉದ್ಯೋಗಕ್ಕೆ ಸಂಬಂಧಪಟ್ಟ ವಿಚಾರಗಳಲ್ಲಿ
ಪಾರದರ್ಶಕತೆ ಕಾಪಾಡುವುದು ಅತ್ಯಗತ್ಯ.
ಸರ್ಕಾರಿ ಅಧಿಕಾರಿಗಳು ಪ್ರಾಮಾಣಿಕವಾಗಿ ಮತ್ತು
ಜವಾಬ್ದಾರಿಯುತವಾಗಿ ವರ್ತಿಸುವಂತೆ ಮಾಡಲು ಸಮರ್ಪಕ ಸ್ವಾಯತ್ತ
ಅಂಗಸಂಸ್ಥೆಯೊಂದನ್ನು ರಚಿಸುವುದು ಈಗಿನ ತುರ್ತು.
ಎನ್‌ಆರ್‌ಇಜಿಎ ಯೋಜನೆಯೊಂದೇ ಗ್ರಾಮೀಣ ಜನರ
ಉದ್ಯೋಗ ಸಮಸ್ಯೆಗೆ ಪರಿಹಾರವಲ್ಲ
ಜೊತೆಗೆ ಕೃಷಿ ಸಂಬಂಧಿತ ಮೂಲಸೌಕರ್ಯಗಳನ್ನು
ಸುಧಾರಿಸಿ
ಗ್ರಾಮೀಣರ ಕೌಶಲ್ಯಪೂರ್ಣ ಕೈಗಾರಿಕೆಗಳ ಅಭಿವೃದ್ಧಿಯತ್ತಲೂ
ಗಮನ ನೀಡಬೇಕಾದ್ದು ಅಗತ್ಯ ಎಂಬುದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು.
ಈ ಎನ್‌ಆರ್‌ಇಜಿಎ ಯೋಜನೆ ಬಿಪಿಎಲ್ ಕುಟುಂಬಗಳ
ಜೀವನೋಪಾಯಕ್ಕೆ ಶಾಶ್ವತ ಪರಿಹಾರವೂ ಅಲ್ಲ
ಆ ಜನರ ಸಾಂಪ್ರದಾಯಿಕ ಗಳಿಕೆಯ ಮೂಲಕ್ಕೆ ಬದಲಿಯೂ
ಅಲ್ಲ.
ಔದ್ಯಮಿಕ ಚಟುವಟಿಕೆಗಳನ್ನು ಗಣನೀಯವಾಗಿ ವೃದ್ಧಿಸಿ
ಭ್ರಷ್ಟಾಚಾರದ ಮೂಲೋಚ್ಛಾಟನೆಗೆ ಮುಂದಾಗಬೇಕು.
ಇದರಿಂದ ವ್ಯಕ್ತಿಯ ಆದಾಯ ಹೆಚ್ಚಿಸಲೂ ಸಾಧ್ಯ.
ಇದೆಲ್ಲಕ್ಕಿಂತ ಮೊದಲು ಬಡ ಕುಟುಂಬಗಳ ಜೀವನ
ಮಟ್ಟದ ಸುಧಾರಣೆಗೆ ಕ್ರಮ ಕೈಗೊಳ್ಳುವುದು ಅಗತ್ಯ.
ಏಕೆಂದರೆ
ವಸತಿ ಮತ್ತು ಒಳಚರಂಡಿ ವ್ಯವಸ್ಥೆಗಾಗಿಯೇ
ಬಡಜನರು ಸರ್ಕಾರಿ ಅಧಿಕಾರಿಗಳ ಜೇಬಿಗೆ ಸಾಕಷ್ಟು ಹಣ ತುಂಬಬೇಕಿದೆ!
ಗ್ರಾಮೀಣ ಜನರ ಅವಶ್ಯಕತೆಗಳನ್ನು
ಪೂರೈಸಬೇಕೆಂದರೆ ದೀರ್ಘಾವಧಿಯ ಕೃಷಿ ಚಟುವಟಿಕೆಗಳು ಅಗತ್ಯ.
ಜೊತೆಗೆ ವರ್ಷ ಪೂರ್ತಿ ಜನರನ್ನು ಔದ್ಯೋಗಿಕ
ಚಟುವಟಿಕೆಗಳಲ್ಲಿ ನಿರತರಾಗಿರುವಂತೆ ಮಾಡಲೂ ಕ್ರಮ ಕೈಗೊಳ್ಳಬೇಕು.
ಇದರಿಂದ ಅವರ ಉತ್ಪಾದನಾ ಮಟ್ಟದಲ್ಲೂ ಪ್ರಗತಿ
ಕಾಣುವುದಲ್ಲದೆ
ಯುವಜನತೆಗೂ ಉದ್ಯೋಗವಕಾಶ ಸೃಷ್ಟಿಯಾಗುತ್ತವೆ.
ಅಧಿಕಾರದ ಗದ್ದುಗೆ ಏರಿ ಕುಳಿತಿರುವ ನಮ್ಮ
ಜನಪ್ರತಿನಿಧಿಗಳು 100
ದಿನಗಳ ಉದ್ಯೋಗದ ಬದಲಾಗಿ ಶಾಶ್ವತ ಉದ್ಯೋಗದಿಂದ ಮಾತ್ರ ಬಡಜನರ ಏಳಿಗೆ ಸಾಧ್ಯ
ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
ಐಐಪಿಎಂ
'ಥಿಂಕ್ ಟ್ಯಾಂಕ್'
ಸ್ರೇ ಅಗರ್‌ವಾಲ್ |