|

ಏಕೆ?
1984ರ ಅಕ್ಟೋಬರ್
31ರಂದು
ಭಾರತದ ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರನ್ನು ಸಿಖ್ ಭದ್ರತಾ
ಸಿಬ್ಬಂದಿಗಳಿಬ್ಬರು ಕ್ರೂರವಾಗಿ ಹತ್ಯೆ ಮಾಡಿದರು.
ಇದು ದೇಶದ ರಾಜಧಾನಿಯ ಪ್ರತಿ ಗಲ್ಲಿಗಳಲ್ಲಿ ಮತ್ತು
ಉತ್ತರ ಭಾರತದ ಪ್ರಮುಖ ಪ್ರದೇಶಗಳಲ್ಲಿ ಹತ್ಯಾಕಾಂಡಕ್ಕೆ ಕಾರಣವಾಯಿತು.
ಸಾವಿರಾರು ಸಿಖ್ಖರ ಕಗ್ಗೊಲೆಯಾಯಿತು.
2733ಕ್ಕೂ
ಹೆಚ್ಚು ಮಂದಿ ಸಾವನ್ನಪ್ಪಿದರೂ ಆರೋಪಿಗಳೆಂದು ಪರಿಗಣಿಸಿದ್ದು ಕೇವಲ
13 ಮಂದಿಯನ್ನು.
ಪ್ರಮುಖ ಕಾಂಗ್ರೆಸ್ ಧುರೀಣರಾದ ಹರ್‌ಕಿಶನ್‌ಲಾಲ್
ಭಗತ್,
ಸಜ್ಜನ್ ಕುಮಾರ್ ಮತ್ತು ಜಗದೀಶ್ ಟೈಟ್ಲರ್ ಗಲಭೆಗೆ ಪ್ರಚೋದನೆ ನೀಡಿದವರು ಎಂದು
ಸಾರ್ವಜನಿಕವಾಗಿ ಹೇಳಲಾಯಿತು.
ಈಗಲೂ ಸಾವಿರ ಗಟ್ಟಲೆ ಸಿಖ್ಖ್ ಕುಟುಂಬ
ಪರಿಹಾರಕ್ಕಾಗಿ ಸರ್ಕಾರದ ಮುಂದೆ ಕಾದು ಕುಳಿತಿದೆ.
ಗಲಭೆ ಹೊತ್ತಿ ಉರಿಯಲು ಕಾರಣರಾಗಿದ್ದ ಮುಖಂಡರು
ಸ್ವತಂತ್ರವಾಗಿ ಅಲೆದಾಡುತ್ತಿದ್ದಾರೆ.
ಅಷ್ಟಲ್ಲದೆ ಚುನಾವಣೆಯಲ್ಲೂ ಅವರು ಜಯಗಳಿಸಲು
ಸಾಧ್ಯವಾಗಿದೆ.
ಈಗೇನು ಅಗತ್ಯ?
ಗಲಭೆಗೆ ಬಲಿಯಾದವರಿಗೆ ಪರಿಹಾರ ನೀಡಬೇಕು ಮತ್ತು
ಆರೋಪಿಗಳಿಗೆ ಶೀಘ್ರ ಶಿಕ್ಷೆಯಾಗಬೇಕು.
ಟಿಎಸ್‌ಐ
ವಿಕಾಸ್ ಕುಮಾರ್ |