ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
ಪತ್ರ ಚರಿತ್ರೆ
ಲುಸಿಯಸ್ ಡಿ. ಕ್ಲೇ ಬರೆದ ಪತ್ರ
 

ಭವಿಷ್ಯದ ಪಶ್ಚಿಮ ಜರ್ಮನಿ ರಾಷ್ಟ್ರದ ರಾಜ್ಯಗಳು ಮತ್ತು ಒಕ್ಕೂಟ ಸರ್ಕಾರದ ನಡುವೆ ಹಕ್ಕು ಮತ್ತು ಅಧಿಕಾರದ ಹಂಚಿಕೆಯ ವಿಷಯದಲ್ಲಿ ಅಲ್ಲಿನ ಸಂಸದೀಯ ಮಂಡಳಿ ಮತ್ತು ನ್ಯಾಟೋ ಮಿತ್ರರಾಷ್ಟ್ರಗಳ ನಡುವೆ ಸೃಷ್ಟಿಯಾಗಿದ್ದ ಬಿಕ್ಕಟ್ಟಿನ ನಂತರ ಮೂರೂ ಪಾಶ್ಚಾತ್ಯ ಸೇನಾಧಿಕಾರಿಗಳು ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿಯ ಸಂವಿಧಾನ(ಬೇಸಿಕ್ ಲಾ)ಕ್ಕೆ ಅನುಮೋದನೆ ನೀಡಿದರು. ಅಲ್ಲಿನ ಸಂಸದೀಯ ಮಂಡಳಿ ಆ ಮುನ್ನ ತನ್ನ ಅನುಮೋದನೆಯನ್ನೂ ನೀಡಿತ್ತು. 1949 ಮೇ 8ರಂದು ಮೂವರೂ ಸೇನಾಧಿಕಾರಿಗಳು ಒಮ್ಮತದ ನಿರ್ಧಾರಕ್ಕೆ ಬಂದ ಬಳಿಕ, ಕಾನ್ರಾಡ್ ಅಡೆನಾರ್‌ಗೆ ಈ ಪತ್ರ ಬರೆದಿದ್ದರು. ಒಕ್ಕೂಟ ಸರ್ಕಾರದ ಆಡಳಿತ ಮತ್ತು ಇತರ ರಾಜಕೀಯ ಪಕ್ಷಗಳು ರಾಜ್ಯಗಳ ವಿಲೀನ ಒಪ್ಪಂದದ ನಿರ್ಬಂಧಕ್ಕೆ ಒಳಪಟ್ಟಿರುತ್ತವೆ ಎಂಬುದನ್ನು ತಮ್ಮ ಪತ್ರದಲ್ಲಿ ಪ್ರಮುಖವಾಗಿ ಹೇಳಿದ್ದಾರೆ.

ಮೇ 12, 1949
 

ಆತ್ಮೀಯ ಡಾ. ಅಡೆನಾರ್!

ನೀವು ಆಸಕ್ತಿಯಿಂದ ಮತ್ತು ಕಾತರದಿಂದ ಎದುರು ನೋಡುತ್ತಿದ್ದ 'ಸಂವಿಧಾನ' (ಬೇಸಿಕ್ ಲಾ)ಗೆ ಮೇ 8ರಂದು ಸಂಸದೀಯ ಮಂಡಳಿ ಅನುಮೋದನೆ ನೀಡಿದೆ. ಈ ಕಾನೂನು ಸಾಮಾನ್ಯ ಜನತೆಯ ಜೀವನಕ್ಕೆ ಅವಶ್ಯಕವಾದ ಜರ್ಮನಿಯ ಪ್ರಜಾತಾಂತ್ರಿಕ ಸಂಪ್ರದಾಯ, ಪ್ರಾತಿನಿಧಿಕ ಸರ್ಕಾರ ಮತ್ತು ಕಾನೂನನ್ನು ಬೆಸೆಯುತ್ತದೆ ಎಂದು ನೀವು ಅಭಿಪ್ರಾಯಪಡುತ್ತೀರಿ. 144(1)ನೇ ವಿಧಿ ಅನ್ವಯ ಈ ಕಾನೂನನ್ನು ಅನುಮೋದನೆಗೋಸ್ಕರ ಜರ್ಮನಿಯ ಜನತೆಯ ಎದುರಿಗಿಡುವ ಮುನ್ನ ಹಲವು ರೀತಿಯ ನಿರ್ಬಂಧಗಳನ್ನು ನಿಗದಿ ಮಾಡಬೇಕಾದ ನಮ್ಮ ಅನಿವಾರ್ಯತೆ ತಮಗೆ ಅರ್ಥವಾಗುತ್ತದೆ ಎಂದು ನಾವು ಭಾವಿಸುತ್ತೇವೆ. ನಾವು ನಿಮಗೆ ಮೊದಲೇ ತಿಳಿಸಿದಂತೆ ಮತ್ತು ಈಗಾಗಲೇ ಜನತೆಗೆ ತಿಳಿದಿರುವಂತೆ 'ಸಂವಿಧಾನ' (ಬೇಸಿಕ್ ಲಾ) ಎಲ್ಲಾ ರೀತಿಯ ಅಧಿಕಾರವನ್ನೂ ಒಕ್ಕೂಟಕ್ಕೆ ನೀಡಿದೆ. ಪ್ರಾಂತೀಯ ಸರ್ಕಾರ ಮತ್ತು ರಾಜ್ಯ ವಿಲೀನ ಒಪ್ಪಂದದ ನಿಯಮದಂತೆ ಒಕ್ಕೂಟ ಆ ಅಧಿಕಾರವನ್ನು ಚಲಾಯಿಸುತ್ತದೆ.

ಮತ್ತೊಂದು ಷರತ್ತೆಂದರೆ; ಒಕ್ಕೂಟದಲ್ಲಿ ಗ್ರೇಟರ್ ಬರ್ಲಿನ್ ಸಕ್ರೀಯವಾಗಿ ಭಾಗವಹಿಸುವ ಕುರಿತು ಕಾಳಜಿ ಹೊಂದಿದೆ. 'ಸಂವಿಧಾನ' (ಬೇಸಿಕ್ ಲಾ)ದ 23 ಮತ್ತು 144(1) ವಿಧಿಗಳು ಬರ್ಲಿನ್, ಬಂದ್‌ಸ್ಟೇಗ್ ಅಥವಾ ಬಂದ್‌ಸ್ಟ್ರಟ್‌ನಲ್ಲಿ ಚುನಾಯಿತ ಸದಸ್ಯತ್ವ ಪಡೆಯದ ಮತ್ತು ಒಕ್ಕೂಟದ ಆಳ್ವಿಕೆಗೆ ಒಳಪಡದ ಪಕ್ಷದಲ್ಲಿ, ಅದು ತನ್ನ ಕೆಲವು ಚುನಾಯಿತ ಪ್ರತಿನಿಧಿಗಳನ್ನು ಶಾಸಕಾಂಗದ ಸಭೆಗಳಿಗೆ ಕಳಿಸುವ ಕುರಿತ ನಮ್ಮ ಹಿಂದಿನ ಬೇಡಿಕೆಗೆ ಒಪ್ಪಿಗೆ ಸೂಚಿಸುವಂತೆ ಕಂಡುಬರುತ್ತದೆ. ಹಾಗೇ, 29 ಮತ್ತು 118ನೇ ವಿಧಿಗಳು ಮತ್ತು ರಾಜ್ಯಗಳ ಗಡಿಗಳ ಪುನರ್ ವಿಂಗಡಣೆಯನ್ನು ಕುರಿತಾಗಿದೆ. ನಿಮ್ಮೊಂದಿಗೆ ಮಾರ್ಚ್ 2ರಂದು ನಡೆಸಿದ ಮಾತುಕತೆಯ ನಂತರ, ಯುಟೆನ್‌ಬರ್ಗ್-ಬೆಡನ್ ಮತ್ತು ಒಹೆನ್ಜೋಲರ್ನ್ ವಿಷಯ ಹೊರತು ಪಡಿಸಿ, ಮೇಲ್ಕಂಡ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ನಮ್ಮ ಈಗಿನ ನಿಲುವಿನ ಬದಲಾವಣೆ ಕುರಿತು ಹೈಕಮೀಷನರ್ ಒಮ್ಮತದ ಒಪ್ಪಿಗೆ ನೀಡದ ಹೊರತು ಈ ವಿಧಿಗಳು ನೀಡುವ ಅಧಿಕಾರವನ್ನು ಚಲಾಯಿಸಲು ಸಾಧ್ಯವಿಲ್ಲ ಮತ್ತು ಯುಟೆನ್‌ಬರ್ಗ್-ಬೆಡನ್ ಹಾಗೂ ಒಹೆನ್ಜೋಲರ್ನ್ ಹೊರತುಪಡಿಸಿ, ರಾಜ್ಯಗಳ ಗಡಿಗಳು ಶಾಂತಿ ಒಪ್ಪಂದ ಏರ್ಪಡುವ ವರೆಗೆ ಯಥಾಸ್ಥಿತಿಯಲ್ಲೇ ಮುಂದುವರಿಯುತ್ತವೆ.

ಮುಂದೆ ಸಂಭವಿಸಬಹುದಾದಂತಹ ಕಾನೂನು ವಿವಾದಗಳನ್ನು ತಪ್ಪಿಸುವ ದೆಸೆಯಲ್ಲಿ ರಾಜ್ಯಗಳಿಗೆ ಒಪ್ಪಿತ ಸಂವಿಧಾನ ನೀಡಿದ ಕ್ಷಣದಲ್ಲಿಯೇ ಆ ಸಂವಿಧಾನ ಏನನ್ನು ಒಳಗೊಂಡಿರುವುದಿಲ್ಲವೋ ಆ ಅಂಶಗಳನ್ನು ಒಕ್ಕೂಟದ ಸಾಂವೈಧಾನಿಕ ನಿಬಂಧನೆಗಳಿಗೆ ವಿರುದ್ಧದ ಅಂಶಗಳೆಂದು ನಾವು ಭಾವಿಸಬಹುದು. ತಾತ್ಕಾಲಿಕ ಒಕ್ಕೂಟದ ಸಂವಿಧಾನದ ಒಳಿತಿಗೋಸ್ಕರ ಅದರ ಮತ್ತು ರಾಜ್ಯಗಳ ಸಂವಿಧಾನಗಳ ನಡುವಿನ ಬಿನ್ನಾಭಿಪ್ರಾಯವನ್ನು ಬಗೆಹರಿಸಿಕೊಳ್ಳುವುದೊಳಿತು.

ಸಂವಿಧಾನದಲ್ಲಿ ಹೆಸರಿಸಲಾಗಿರುವ ಶಾಸಕಾಂಗ ಸಭೆಗಳ ಒಪ್ಪಿಗೆ ಬಳಿಕ, ರಾಷ್ಟ್ರಾಧ್ಯಕ್ಷರನ್ನು ಚುನಾಯಿಸಿದ ನಂತರ ಮತ್ತು ಚಾನ್ಸ್‌ಲರ್ ನೇಮಕವಾದ ಮೇಲೆ ಹಾಗೂ ಒಕ್ಕೂಟದ ಸಚಿವರುಗಳು ಕ್ರಮವಾಗಿ ಅಧಿಕಾರ ಸ್ವೀಕರಿಸಬೇಕು. ಆ ಬಳಿಕವಷ್ಟೇ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿಯ ಅಧಿಕೃತ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಮತ್ತು ರಾಜ್ಯಗಳ ವಿಲೀನ ಒಪ್ಪಂದ ಅನುಷ್ಠಾನಕ್ಕೆ ಬರಲಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಲ್ಲಿರಿ ಎಂದುಕೊಂಡಿದ್ದೇವೆ.

ನಾವು ಈ ಸಂದರ್ಭದಲ್ಲಿ ಅತ್ಯಂತ ಕಷ್ಟಕರ ಸನ್ನಿವೇಶದಲ್ಲೂ ತುಂಬಾ ಜಾಗ್ರತೆಯಿಂದ ಈ ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ, ಪ್ರಜಾತಾಂತ್ರಿಕ ಮೌಲ್ಯಗಳೆಡೆಗಿನ ತಮ್ಮ ಬದ್ಧತೆಯನ್ನು ಮೆರೆದ ಸಂಸದೀಯ ಸಮಿತಿಯ ಸದಸ್ಯರಿಗೆ ಅಭಿನಂದನೆ ಸಲ್ಲಿಸಲೇಬೇಕು.

ಲುಸಿಯಸ್ ಡಿ. ಕ್ಲೇ.
ಯು.ಎಸ್ ಆರ್ಮಿ ಜನರಲ್, ಮಿಲಿಟರಿ ಗವರ್ನರ್, ಅಮೇರಿಕ ವಲಯ.

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .