ಮಾರುಕಟ್ಟೆ: ಸಮಸ್ಯೆ
ಬೇಕೇ ಅಥವಾ ಬೇಡವೇ?
ವಿದೇಶಿ ಬ್ಯಾಂಕುಗಳ ಜಾಲದೊಳಗೆ ಸಿಲುಕಿ ಪಾರಾಗುವ ಹಾದಿ

ವಿದೇಶಿ ಸಂಸ್ಥೆಗಳನ್ನು ಆಹ್ವಾನಿಸಿದ್ದೇವೆ ಎಂದರೆ ಜೊತೆಯಲ್ಲೇ ಆರ್ಥಿಕ
ಮುಗ್ಗಟ್ಟಿನ ಆತಂಕ ಇದ್ದೇ ಇರುತ್ತದೆ.
ಪ್ರಗತಿಯ ಕಡೆಗೆ ದಾಪುಗಾಲು ಹಾಕುತ್ತಿರುವ
ಅರ್ಥವ್ಯವಸ್ಥೆಗಳತ್ತ ಆಕರ್ಷಿತವಾಗುತ್ತಿರುವ ವಿದೇಶಿ ಬ್ಯಾಂಕುಗಳಿಗೂ ಇದೇ
ಅನ್ವಯಿಸುತ್ತಿದೆ.
ವಿದೇಶಿ ಬ್ಯಾಂಕುಗಳ ಬೆಳವಣಿಗೆ ಅನಿರೀಕ್ಷಿತವಾಗಿ ಅಥವಾ
ಪ್ರಮಾದವಶಾತ್ ನಡೆದುದಲ್ಲ.
ಆಫ್ರಿಕಾದ ಉಪನಗರಗಳಲ್ಲಿ ಅಂತರ್ ರಾಷ್ಟ್ರೀಯ ಬ್ಯಾಂಕುಗಳು
ಪ್ರವೇಶಿಸಲು ಕಾರಣ ಅಲ್ಲಿನ ಸ್ಥಳೀಯ ಬ್ಯಾಂಕಿಂಗ್ ಮೂಲಸೌಕರ್ಯದ ಕೊರತೆ,
ಮಧ್ಯ ಮತ್ತು ಪೂರ್ವ ಯುರೋಪ್‌ನಲ್ಲಿ ಅಂತರ್
ರಾಷ್ಟ್ರೀಯ ಬ್ಯಾಂಕುಗಳು ಒಡಮೂಡಿದ್ದು ಅಲ್ಲಿನ ದೇಶಗಳ ಏಕತೆ ಮತ್ತು ಯುರೋಪಿಯನ್
ಒಕ್ಕೂಟದ ಬಲದಿಂದ.
ಎಲ್ಲಕ್ಕಿಂತ ಮುಖ್ಯವಾಗಿ ಅಭಿವೃದ್ಧಿ ಹೊಂದಿದ ದೇಶಗಳಿಗೆ
ಹೋಲಿಸಿದಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಬಡ್ಡಿ ದರಗಳು
ಹೆಚ್ಚಿದ್ದರಿಂದ ವಿದೇಶಿ ಬ್ಯಾಂಕುಗಳು ಅಭಿವೃದ್ಧಿ ಹೊಂದುತ್ತಿರುವ ದೇಶಗಳ
ಕಡೆಗೆ ಹೆಚ್ಚು ವಾಲಿದವು.
ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ
2002ರಲ್ಲಿ
ವಿದೇಶಿ ಬ್ಯಾಂಕುಗಳು ಗ್ರಾಹಕರಿಗೆ ನೀಡಿರುವ ಸಾಲ ಪ್ರಮಾಣ ಸುಮಾರು
1.1
ಟ್ರಿಲಿಯನ್ ಡಾಲರ್‌ಗಳಿದ್ದರೆ,
2007ರಲ್ಲಿ
ಈ ಪ್ರಮಾಣ 4
ಟ್ರಿಲಿಯನ್ ಡಾಲರ್‌ಗಳಿಗೆ ಏರಿತ್ತು.
ಆದರೆ ಇವುಗಳ ವ್ಯಾಪಕ ಪ್ರಗತಿ ಅಭಿವೃದ್ಧಿ
ಹೊಂದುತ್ತಿರುವ ದೇಶಗಳ ಅರ್ಥವ್ಯವಸ್ಥೆಗಳ ಮೇಲೆ ಪರಿಣಾಮ ಬೀರಲಿವೆ.
ಮುಖ್ಯವಾಗಿ ಸಾಲ ಬಿಕ್ಕಟ್ಟಿನಂತಹ ವಿಷಮ ಸ್ಥಿತಿ
ಬಂದೊದಗಿರುವ ನಂತರ.
ಬಿಗಿಯಾದ ಆಂತರಿಕ ಬ್ಯಾಂಕಿಂಗ್ ಮಾರುಕಟ್ಟೆ ವ್ಯವಸ್ಥೆ
ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆ ವ್ಯವಸ್ಥೆಯ ಸಾಲ ವ್ಯವಹಾರಗಳ ಮೇಲೆ
ಗಂಭೀರ ಪರಿಣಾಮ ಬೀರಲಿವೆ ಎಂದು ಇತ್ತೀಚೆಗೆ ವಿಶ್ವಬ್ಯಾಂಕ್ ಎಚ್ಚರಿಕೆ ನೀಡಿದೆ.
'ಲಂಡನ್
ಇಂಟರ್‌ಬ್ಯಾಂಕ್ ಆಫರ್ ರೇಟ್'
ಮತ್ತು 'ಓವರ್‌ನೈಟ್
ಇಂಡೆಕ್ಸ್‌ಡ್ ಸ್ವೆಪ್ಟ್'ನಂತಹ
ಎರಡು ಹಣಕಾಸು ಮಾರುಕಟ್ಟೆ ವ್ಯವಸ್ಥೆಗಳ ನಡುವಿನ ಬಡ್ಡಿದರಗಳಲ್ಲಿ ಕನಿಷ್ಠ
ಹತ್ತು ಮೂಲ ಅಂಶಗಳ ಅಂತರ ಸಾಲಗಳನ್ನು ಸುಮಾರು ಶೇ.
3ರಷ್ಟು
ಕಡಿಮೆ ಮಾಡಲಿವೆ ಎಂದು ಇದರ 'ಜಾಗತಿಕ
ಅಭಿವೃದ್ಧಿ ಹಣಕಾಸು'
ವರದಿ ತಿಳಿಸಿದೆ.
ಆದರೆ ಸಂಶೋಧಕರು ದೀರ್ಘಕಾಲದವರೆಗೂ ಈ ಅಂತರ
10 ಮೂಲ
ಅಂಶಗಳನ್ನು ಮೀರಿವೆ ಎಂದೇ ತೋರಿಸುತ್ತಾ ಬಂದಿದ್ದರು.
ಹಾಗಿದ್ದರೂ,
ಅಭಿವೃದ್ಧಿ ಹೊಂದುತ್ತಿರುವ ಅರ್ಥವ್ಯವಸ್ಥೆಗಳಲ್ಲಿ ಅಂತರ್
ರಾಷ್ಟ್ರೀಯ ಬ್ಯಾಂಕುಗಳ ಉಪಸ್ಥಿತಿ ಹೆಚ್ಚಾಗುತ್ತಾ ಹೋದಂತೆಲ್ಲಾ ಸ್ವದೇಶಿ
ನಿಯಂತ್ರಣ ನಿಯಮಾವಳಿಗಳ ಪ್ರಭಾವವೆಲ್ಲಾ ಕಡಿಮೆಯಾಗಿ ಬಿಡುತ್ತವೆ.
ಅರ್ಜೆಂಟೀನಾ,
ಮೆಕ್ಸಿಕೊ,
ಝೆಕ್ ರಿಪಬ್ಲಿಕ್,
ಪೋಲಂಡ್,
ಲಿಥುವೇನಿಯಾ,
ಹಂಗೇರಿ ಇತ್ಯಾದಿ ದೇಶಗಳಲ್ಲಿ ಅರ್ಧದಷ್ಟು ಆಸ್ತಿ
ವಿದೇಶಿ ಬ್ಯಾಂಕುಗಳ ನಿಯಂತ್ರಣದಲ್ಲೇ ಇವೆ.
ವಿಶ್ವಬ್ಯಾಂಕ್ ವರದಿ ಈ ಬಗ್ಗೆ ವಿವರಗಳನ್ನು
ನೀಡಿದ್ದು,
ವಿದೇಶಿ ಬ್ಯಾಂಕುಗಳ ಸಂಖ್ಯೆ ಹೆಚ್ಚಾದಂತೆ ಕೇಂದ್ರ
ಬ್ಯಾಂಕುಗಳಿಗೆ ವಿದೇಶಿ ಬ್ಯಾಂಕುಗಳು ನೀಡುವ ಸಾಲದ ಪ್ರಮಾಣ ಸಹಜವಾಗಿ
ಕಡಿಮೆಯಾಗುತ್ತಾ ಹೋಗುತ್ತದೆ.
ಅವುಗಳು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹಣ
ಸಂಗ್ರಹಿಸುವ ಮಟ್ಟಕ್ಕೆ ತಲುಪಿರುತ್ತವೆ.
ಹಾಗಾಗಿ ಸಮತೋಲನ ಕಾಪಾಡಿಕೊಳ್ಳಲು ಬಯಸುವ
ಅರ್ಥವ್ಯವಸ್ಥೆಗಳು ಅಥವಾ ಇತ್ತೀಚೆಗಿನ ಆಸ್ತಿ ಗುಳ್ಳೆಯಂತಹ
(ಆಸ್ತಿ ಸಾಲ
ಬಿಕ್ಕಟ್ಟು)
ಪ್ರಮಾದಗಳಿಂದ ಪುನಶ್ಚೇತನ ಪಡೆದುಕೊಳ್ಳಲು ಮತ್ತು ನಿಯಂತ್ರಣ
ಸಾಧಿಸಲು ದೇಶಗಳು ವಿಫಲವಾಗುತ್ತವೆ.
ಅಂತರ್ ರಾಷ್ಟ್ರೀಯ ಬ್ಯಾಂಕುಗಳ ಹುಟ್ಟನ್ನು ತಡೆಯುವುದು ಸಾಧ್ಯವೇ
ಇಲ್ಲವಾದರೂ,
ಅವುಗಳ ಚಟುವಟಿಕೆಗಳ ನಿರ್ದಿಷ್ಟ ಸಿಂಹಾವಲೋಕನ ಅಗತ್ಯ.
ಆನಂತರ ಅದಕ್ಕೆ ಸೂಕ್ತ ನಿಯಮಾವಳಿಗಳನ್ನು
ರೂಪಿಸುವುದರಿಂದ ಇಂತಹ ಸಮಸ್ಯೆಗಳಿಂದ ಪಾರಾಗಬಹುದು.
ಐಐಪಿಎಂ
'ಥಿಂಕ್ ಟ್ಯಾಂಕ್
ಅಕ್ರಂ ಹಕ್
ಬಲಿಷ್ಠ ಭಾರತ: ಸಾಧನೆ
ವಿವೇಚನಾಶೀಲ ನಿಯಂತ್ರಣ
ಸಮಗ್ರ ಭಾರತಕ್ಕೆ ಬಲಿಷ್ಠ ನಿಯಂತ್ರಣ ಪ್ರಾಧಿಕಾರಗಳ ಅಗತ್ಯವಿದೆ

ವಿಮೆ,
ಬ್ಯಾಂಕಿಂಗ್,
ಟೆಲಿಕಾಂ ಮತ್ತು ಕೇಂದ್ರ-ರಾಜ್ಯಗಳ
ಚುನಾವಣಾ ಪ್ರಕ್ರಿಯೆಯನ್ನು ಪರಿಶೀಲಿಸಿ.
ಈ ವಿವಿಧ ಕ್ಷೇತ್ರಗಳನ್ನೂ ಒಂದೆಡೆ ಬಂಧಿಸಿರುವ
ತಂತಿ ಯಾವುದು?
ಈ ಪ್ರತಿಯೊಂದು ಕ್ಷೇತ್ರವನ್ನೂ ಸಮರ್ಥ,
ದೂರದೃಷ್ಟಿಯುತ ಮತ್ತು ಚೈತನ್ಯಶೀಲ ನಿಯಂತ್ರಣಾ
ಪ್ರಾಧಿಕಾರವೊಂದು ಅತ್ಯುತ್ತಮವಾಗಿ ನಿರ್ವಹಿಸುತ್ತಿದೆ.
ಈ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತ ಮಹತ್ತರ
ಸಾಧನೆಯನ್ನೇ ಮಾಡಿದೆ.
ಟೆಲಿಕಾಂ ಕ್ಷೇತ್ರ ವ್ಯಾಪಕ ಏಳ್ಗೆಯನ್ನು ಸಾಧಿಸಿರುವ ಜೊತೆ
ಜೊತೆಯಲ್ಲೇ ಆರ್ಥಿಕವಾಗಿ ದುರ್ಬಲ ಎನಿಸಿರುವಂತಹ ವ್ಯಕ್ತಿಯ ಕೈಗೂ ಎಟುಕಬಲ್ಲ
ವಸ್ತುವಾಗಿರುವುದಕ್ಕೆ ಟ್ರಾಯ್ (ಭಾರತೀಯ
ಟೆಲಿಕಾಂ ನಿಯಂತ್ರಣ ಪ್ರಾಧಿಕಾರ)ಗೆ
ಧನ್ಯವಾದ ಅರ್ಪಿಸಲೇಬೇಕು.
ಇತ್ತೀಚೆಗಿನ ವರದಿಗಳ ಪ್ರಕಾರ ಭಾರತದಲ್ಲಿ ಒಟ್ಟು
308
ದಶಲಕ್ಷಗಳಷ್ಟು ಟೆಲಿಕಾಂ ಸಂಪರ್ಕಗಳು ಇವೆ.
ಇದು ಅಮೆರಿಕಕ್ಕಿಂತಲೂ ಹೆಚ್ಚು.
ಹಾಗೆಯೇ ವಿಮಾ ಕ್ಷೇತ್ರದಲ್ಲಿ ಸುಮಾರು
105 ದಶಲಕ್ಷ
ಮಂದಿ (ಒಟ್ಟು
ವೃತ್ತಿನಿರತರಲ್ಲಿ ಶೇ.
33ರಷ್ಟು)
ವಿಮೆ ಮಾಡಿಸಿಕೊಂಡಿದ್ದಾರೆ.
ಇವರಲ್ಲಿ ಅತೀ ಹೆಚ್ಚು ಮಂದಿ ಗ್ರಾಮೀಣ
ಪ್ರದೇಶದವರು (ಶೇ.
58).
ಐಆರ್‌ಡಿಎ
(ವಿಮಾ
ಕ್ಷೇತ್ರ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ)
ಸುವ್ಯವಸ್ಥಿತ ನಿಯಂತ್ರಣದಡಿ ಖಾಸಗಿ ಕ್ಷೇತ್ರಗಳು
ರೋಮಾಂಚಕ ಪ್ರಗತಿ ಸಾಧಿಸಿವೆ.
ಬ್ಯಾಂಕಿಂಗ್ ಕ್ಷೇತ್ರಕ್ಕೆ ಬಂದಲ್ಲಿ ದೃಢ ಮತ್ತು
ಸ್ವಾಭಿಪ್ರಾಯರೂಢ ನಿಯಂತ್ರಣಗಳ ನಡುವೆಯೂ ಸಾರ್ವಜನಿಕ ಕ್ಷೇತ್ರಗಳ
ಬ್ಯಾಂಕುಗಳು ಅತ್ಯುತ್ತಮ ತಂತ್ರಜ್ಞಾನಗಳ ಅಳವಡಿಕೆಗಳಿಂದ ಆರಂಭಿಸಿ,
ಹೆಚ್ಚು ಗ್ರಾಹಕ ಕೇಂದ್ರಿತವಾಗುವಂತೆ ಮತ್ತು ಹೊಸ
ತಲೆಮಾರಿನ ಬ್ಯಾಂಕುಗಳಿಗೆ ಸೂಕ್ತ ಸ್ಪರ್ಧೆ ನೀಡಬಲ್ಲ ಸಾಮರ್ಥ್ಯವನ್ನು
ಬೆಳೆಸಿಕೊಳ್ಳುವತ್ತ ಆರ್‌ಬಿಐ (ರಿಸರ್ವ್
ಬ್ಯಾಂಕ್ ಆಫ್ ಇಂಡಿಯಾ)
ಗಮನಹರಿಸಿದೆ.
ಹೀಗಾಗಿ ಸಂಪೂರ್ಣ ವ್ಯವಸ್ಥೆಯಲ್ಲೇ ಮಹತ್ತರ
ಬದಲಾವಣೆಯಾಗಿದೆ.
ಈ ಮೂರು ಕ್ಷೇತ್ರಗಳೂ ತಮ್ಮ ವ್ಯಾಪ್ತಿಯನ್ನು
ವಿಸ್ತರಿಸುತ್ತಾ ಶ್ರೀಸಾಮಾನ್ಯರನ್ನು ಸಮೃದ್ಧಿಯ ಕಡೆಗೆ ಮುನ್ನಡೆಸಿದ್ದೇ
ಅಲ್ಲದೆ,
ನೇರ ಹಾಗೂ ಪರೋಕ್ಷವಾಗಿ ಲಕ್ಷಾಂತರ ಹೊಸ ಉದ್ಯೋಗಗಳನ್ನು
ಸೃಷ್ಟಿಸಿವೆ.
ಇದೇ ಪಟ್ಟಿಯಲ್ಲಿ ಚುನಾವಣಾ ಆಯೋಗವನ್ನೂ ಇಟ್ಟು
ನೋಡಿ.
ಚುನಾವಣೆ ಸಂದರ್ಭ ಮೋಸ,
ಹಿಂಸೆ ಮತ್ತು ಆಡಳಿತ ಸರ್ಕಾರ ಅಧಿಕಾರವನ್ನು
ದುರುಪಯೋಗಪಡಿಸಿಕೊಳ್ಳುವುದು ಸಾಮಾನ್ಯವಾಗಿರುತ್ತಿದ್ದ ದೇಶವೊಂದರಲ್ಲಿ
ಚುನಾವಣಾ ಆಯೋಗ ಸಾರ್ವತ್ರಿಕ ಅಥವಾ ಪ್ರಾದೇಶಿಕ ಚುನಾವಣೆಗಳನ್ನು ಅತೀ
ನಿಷ್ಪಕ್ಷಪಾತ,
ಲೋಪದೋಷಗಳೇ ಇಲ್ಲದ ಮತ್ತು ನಿಷ್ಕಳಂಕ ಚಟುವಟಿಕೆಯನ್ನಾಗಿ
ಪರಿವರ್ತಿಸಿದೆ.
ಭದ್ರತಾ ಪಡೆಗಳನ್ನು ವ್ಯವಸ್ಥೆ ಮಾಡುವುದು,
ಕಠಿಣ ನಿಯಂತ್ರಣ,
ಎಲೆಕ್ಟ್ರಾನಿಕ್ ಮತ ಚಲಾವಣೆ,
ಲಕ್ಷಾಂತರ ಮತದಾರರನ್ನು ನಿರ್ವಹಿಸಿ
ಫಲಿತಾಂಶವನ್ನು ಕೆಲವೇ ದಿನಗಳ ಒಳಗೆ ನೀಡುವುದು...
ಒಟ್ಟಾರೆ ಚುನಾವಣಾ ಆಯೋಗ ಅಕ್ಷರಶಃ ಚುನಾವಣೆಯ
ಸ್ವರೂಪವನ್ನೇ ಬದಲಿಸಿದೆ.
ರಾಜಕೀಯ ಹಸ್ತಕ್ಷೇಪ ಕಡಿಮೆಯಾದಲ್ಲಿ ಮತ್ತು
ನಿಯತ್ರಣಗಳನ್ನು ವೃತ್ತಿಪರವಾಗಿಸಿದಲ್ಲಿ ಅದ್ಭುತ ಬದಲಾವಣೆಗಳನ್ನು ತರಬಹುದು
ಎನ್ನುವುದನ್ನು ಈ ನಾಲ್ಕೂ ನಿಯಂತ್ರಣ ಸಂಸ್ಥೆಗಳು ತೋರಿಸಿಕೊಟ್ಟಿವೆ.
ಇತರ ಕ್ಷೇತ್ರಗಳಲ್ಲೂ ಇಂತಹ ನಿಯಂತ್ರಣ
ಸಂಸ್ಥೆಗಳನ್ನು ರಚಿಸುವಲ್ಲಿ ರಾಜಕಾರಣಿಗಳು ಆಸಕ್ತಿ ತೋರದಿರುವುದಕ್ಕೆ
ಕಾರಣವೂ ಸರ್ವವಿಧಿತ.
ಅತ್ಯುತ್ತಮ ನಿಯಂತ್ರಣ ವ್ಯವಸ್ಥೆ ಇದ್ದಲ್ಲಿ ರಾಜಕಾರಣಿಗಳು
ಅಧಿಕಾರವನ್ನು ಮನಸೋ ಇಚ್ಛೆ ಬಳಸಲು
(ದುರ್ಬಳಕೆ)
ಸಾಧ್ಯವಾಗದು.
ಇಲ್ಲದೆ ಹೋದಲ್ಲಿ,
ನಮ್ಮಲ್ಲಿ ಮತಬ್ಯಾಂಕ್‌ಗಳನ್ನು ಇನ್ನೂ
ದೃಢವಾಗಿಸಲು ದಾಳವಾಗಿರುವ ಜಾತಿ ಆಧಾರಿತ ಮೀಸಲಾತಿ ವ್ಯವಸ್ಥೆಯ
ನಿಯಂತ್ರಣಕ್ಕಾಗಿ ಸೂಕ್ತ ಸಂಸ್ಥೆಗಳಿಲ್ಲದೆ ಇರುವುದಾದರೂ ಏತಕ್ಕೆ?
ವೃತ್ತಿಪರ ತೈಲ ನಿಯಂತ್ರಣ
ಪ್ರಾಧಿಕಾರವಿದ್ದಿದ್ದಲ್ಲಿ ಇಂಧನ ಬೆಲೆ ಏರಿಕೆ ಗೊಂದಲಗಳನ್ನು
ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಬಹುದಾಗಿತ್ತು.
ಖರೀದಿಸುವ ಪ್ರತಿ ಲೀಟರು ಇಂಧನದ ಮೇಲೂ ಶೇ.
52ರಷ್ಟು
ತೆರಿಗೆ ವಿಧಿಸುವುದು ಏಕೆ?
ವಿಮಾನಯಾನಕ್ಕೆ ತೆರುವ ಹಣದಲ್ಲಿ ಶೇ.
60
ತೆರಿಗೆಗೆ ಹೋಗುವುದು ಏಕೆ?
ಭಯೋತ್ಪಾದನೆಯನ್ನು ಹೊಡೆದೋಡಿಸಲು ಸಾಕಷ್ಟು
ಅಧಿಕಾರಗಳಿರುವ ಸಮರ್ಥ 'ಭಯೋತ್ಪಾದನಾ
ವಿರೋಧಿ ಆಯೋಗ'
ಏಕಿಲ್ಲ?
ಕೃಷಿ ನಿಯಂತ್ರಣಗಳು ಮತ್ತು ಅಭಿವೃದ್ಧಿ ಪ್ರಾಧಿಕಾರ ಅಥವಾ
ಮೂಲಸೌಕರ್ಯ ನಿಯಂತ್ರಣ ಪ್ರಾಧಿಕಾರಗಳೇಕಿಲ್ಲ?
ಹೌದು,
ಈ ಪ್ರಶ್ನೆಗಳ ಪಟ್ಟಿಗೆ ಕೊನೆಯೇ ಇಲ್ಲ,
ಆದರೆ ಇವೆಲ್ಲಕ್ಕೂ ಕಾರಣ ಮಾತ್ರ ಒಂದೇ.
ಐಐಪಿಎಂ
'ಥಿಂಕ್ ಟ್ಯಾಂಕ್'
ಪಥಿಕೃತ್ ಪಾಯ್ನೆ
|