|

'ಕಾಮಣ್ಣನ
ಮಕ್ಕಳು'
ನಿರ್ದೇಶನದ ಅನುಭವ ಹೇಗಿತ್ತು?
ಫೆಂಟಾಸ್ಟಿಕ್! ನಿರ್ದೇಶಕ/ ಅನುಭವಿ ನಟ
ಸುದೀಪ್ ಜೊತೆ ಕೆಲಸ ಮಾಡಿದ್ದು ಒಳ್ಳೆಯ ಅನುಭವ.
ರಿಮೇಕ್ ಚಿತ್ರಕ್ಕೆ
ಮೊರೆಹೋಗುವ ಅಗತ್ಯವಿತ್ತೆ?
ರಿಮೇಕ್ ತಪ್ಪೇನಲ್ಲ. ಕೈಗೆ ಕೆಲಸ ಸಿಗುವುದು
ಮುಖ್ಯ. ತಮಿಳಿನ 'ಮಜಾ'
ಒಳ್ಳೆಯ ಚಿತ್ರ. ಉತ್ತಮ ಪರಿಕಲ್ಪನೆಯ ಚಿತ್ರವೊಂದನ್ನು ಜನತೆಗೆ ನೀಡಿದ್ದೇನೆ.
ನಿಮ್ಮ ಹಿಂದಿನ ಚಿತ್ರ 'ದತ್ತ'
ನಷ್ಟ ಎನ್ನುತ್ತೀರಿ, ಆದರೆ
ಚಿತ್ರದ ನಾಯಕ ದರ್ಶನ್ ಚಿತ್ರ ಗೆದ್ದಿದೆ ಅಂತಾರಲ್ಲಾ?
ಇಲ್ಲಿ ನನ್ನ ಕಡೆಯಿಂದಲೇ ತಪ್ಪಾಗಿದೆ. ನಾನು
ಆ ಚಿತ್ರಕ್ಕೆ ಹೆಚ್ಚು ಖರ್ಚು ಮಾಡಿದ್ದೆ. ಆ ದುಡ್ಡು ಬಂದಿಲ್ಲ. ಜನರು
ಚಿತ್ರವನ್ನು ಒಪ್ಪಿಕೊಂಡಿದ್ದಾರೆ ಎನ್ನುವುದು ನಿಜ.
ತಂದೆ ಚಿ. ಉದಯಶಂಕರ್ ಅವರ ಹಾಗೆ
ಸಾಹಿತ್ಯದತ್ತ
ಒಲವು...?
ಎಲ್ಲಾ ಮಕ್ಕಳೂ ಬುದ್ಧಿವಂತರಾಗಿ
ಹುಟ್ಟುವುದಿಲ್ಲ. ನನ್ನ ತಮ್ಮನಿಗೆ ಸಾಹಿತ್ಯದಲ್ಲಿ ಆಸಕ್ತಿ. ನನಗೆ ಸಾಹಿತ್ಯ
ಅಷ್ಟಕಷ್ಟೇ.
ಮುಂದಿನ ಯೋಜನೆಗಳು..?
ಸದ್ಯಕ್ಕೆ 2
ಚಿತ್ರಗಳನ್ನು ನಿರ್ದೇಶಿಸಲು ಯೋಚಿಸಿದ್ದೇನೆ. ಒಂದರಲ್ಲಿ ಸುದೀಪ್ ಅವರನ್ನೇ
ಆಯ್ಕೆ ಮಾಡಿಕೊಂಡರೆ, ಇನ್ನೊಂದಕ್ಕೆ ಹೊಸಬರನ್ನು ಹುಡುಕಬೇಕು.
ಟಿಎಸ್‌ಐ
ಚಿತ್ರಾ ಕರ್ಕೇರಾ
|