|

ಏಕೆ?
ಬಿಹಾರದಲ್ಲಿ ಹರಿಯುವ ಹೆಚ್ಚಿನ ನದಿಗಳ
ಮೂಲವಿರುವುದು ನೇಪಾಳದಲ್ಲಿ.
ಮಳೆಗಾಲದ ಸಂದರ್ಭದಲ್ಲಿ ಪ್ರವಾಹವು ಸಾವಿರಾರು
ಜನರನ್ನು ಬೀದಿಪಾಲು ಮಾಡುವುದರ ಜೊತೆಗೆ ಪೈರು,
ಎಕರೆಗಟ್ಟಲೆ ಭೂಮಿ,
ಸಾವಿರಾರು ಮನೆಗಳು,
ರಸ್ತೆ,
ಸೇತುವೆ,
ಅಣೆಕಟ್ಟು ಮತ್ತು ನೂರಾರು ಶಾಲೆಗಳನ್ನು ಧ್ವಂಸ
ಮಾಡುತ್ತಿದೆ.
ನೀರಿನ ಮಟ್ಟ ತಗ್ಗಿದರೂ ಮಕ್ಕಳಿಗೆ ತಿಂಗಳಿಡೀ ಶಾಲೆಗೆ ಹೋಗಲು
ಸಾಧ್ಯವಾಗುವುದಿಲ್ಲ.
ದೇಶದಲ್ಲಿಯೇ ಬಿಹಾರ ರಾಜ್ಯ ಅತ್ಯಂತ ನಿಧಾನವಾಗಿ ಅಭಿವೃದ್ಧಿ
ಹೊಂದಲು ಪ್ರಮುಖ ಕಾರಣವೇ ಪ್ರವಾಹ ಬಾಧೆ.
ಗ್ರಾಮೀಣ ಆರ್ಥಿಕತೆ ಹೊಂದಿರುವ ಬಿಹಾರದಲ್ಲಿ
ಹೇಳಿಕೊಳ್ಳುವಂತಹ ಉದ್ಯಮಗಳೂ ಇಲ್ಲ.
83 ದಶಲಕ್ಷ ಮಂದಿ ಜೀವನೋಪಾಯಕ್ಕಾಗಿ ಕೃಷಿಯನ್ನೇ
ನೆಚ್ಚಿಕೊಂಡಿದ್ದಾರೆ.
ಬಿಹಾರದ 'ಜಲಸಂಪನ್ಮೂಲ
ಇಲಾಖೆ'
ರಾಜ್ಯದಲ್ಲಿ ಇಂತಹ ಸ್ಥಿತಿ ಸೃಷ್ಟಿಯಾಗಲು ಕೇಂದ್ರವೇ ಕಾರಣ ಎಂದು ತನ್ನ
ವಾರ್ಷಿಕ ವರದಿಯಲ್ಲಿ ತಿಳಿಸಿದೆ.
ಬಿಹಾರದಲ್ಲಿ ಪ್ರವಾಹ ನಿಯಂತ್ರಿಸಲು ನೇಪಾಳದಲ್ಲಿ
ನದಿಗಳಿಗೆ ಅಣೆಕಟ್ಟು ಕಟ್ಟಬೇಕಾಗಿದ್ದು,
ಕೇಂದ್ರ ಸರ್ಕಾರ ಈ ಕುರಿತು ನೇಪಾಳದೊಂದಿಗಿನ
ಮಾತುಕತೆ ತ್ವರಿತಗೊಳಿಸಬೇಕಾಗುತ್ತದೆ.
ಆದರೆ ಕಳೆದ 60 ವರ್ಷಗಳಿಂದಲೂ ಮಾತುಕತೆ ನಡೆಯುತ್ತಲೇ
ಇದೆ.
ಈಗೇನು ಅಗತ್ಯ?
ಕೇಂದ್ರ ಸರ್ಕಾರ ನೇಪಾಳದೊಂದಿಗೆ ಈ ಕುರಿತು
ಮಾತುಕತೆ ನಡೆಸಬೇಕು.
ಟಿಎಸ್‌ಐ
ವಿಕಾಸ್ ಕುಮಾರ್ |