|
| ಗೋಪಾಲ್ ಪಾರ್ಥಸಾರಥಿ
|
ಮಾಜಿ ಐಎಫ್‌ಎಸ್ ಅಧಿಕಾರಿ
|
ಜಾಗತಿಕವಾಗಿ ಭಾರತವನ್ನು ಅತೀ ದುರ್ಬಲ ದೇಶ ಎಂದು ತಿಳಿಯಲಾಗುತ್ತದೆ
ಎನ್ನುವ ಅಭಿಪ್ರಾಯವಿದೆ.
ಸಿಕ್ಕಿಂ ವಿಷಯದಲ್ಲಿ ಭಾರತದ ನಿಲುವು ತೃಪ್ತಿಕರವಾಗಿಲ್ಲ
ಎನ್ನುವ ಹಿನ್ನೆಲೆಯಲ್ಲಿ ಬಂದ ಧೋರಣೆ ಇದು.
1962
ಯುದ್ಧದ ನಂತರ ಭಾರತದ ವಿದೇಶಿ ತಜ್ಞರೆಲ್ಲಾ ದೇಶವನ್ನು ತಪ್ಪಾಗಿ
ಅರ್ಥೈಸಿಕೊಳ್ಳಲು ಆರಂಭಿಸಿದ್ದಾರೆ ಎಂದೇ ನನ್ನ ಭಾವನೆ.
ನಾವು ಚೀನಾವನ್ನು ಸೋಲಿಸುವುದು ಸಾಧ್ಯವೇ ಇಲ್ಲ
ಎಂಬ ಭಾವನೆ ಅವರ ಮನದಲ್ಲಿ ಅಚ್ಚೊತ್ತಿದೆ.
ಅವರೆಲ್ಲಾ
'1962ರ ಯುದ್ಧ'
ಎಂಬ ಜಾಡ್ಯ ಅಂಟಿಸಿಕೊಂಡಿದ್ದಾರೆ ಎನ್ನುವುದು ಖಚಿತ.
ಎದೆಗಾರಿಕೆ ತೋರುವ ಮತ್ತು ಬಲ ಪ್ರದರ್ಶಿಸುವ
ಪ್ರಸಂಗ ಬಂದಾಗಲೆಲ್ಲ ನಾವು ಚೀನಾ ಜೊತೆ ತಲೆ ಎತ್ತಿ ವ್ಯವಹರಿಸುವ ಬದಲಾಗಿ
ಔಪಚಾರಿಕವಾಗಿ ವರ್ತಿಸುತ್ತಾ ನೇರ ಸಂಘರ್ಷ ತಪ್ಪಿಸಿಕೊಳ್ಳುತ್ತಾ ಬಂದಿದ್ದೇವೆ.
ಒಂದು ಕಡೆ ಚೀನೀಯರು ಬಹಿರಂಗವಾಗಿಯೇ ತವಾಂಗ್
ಕುರಿತ ಬೇಡಿಕೆ ಇಡುತ್ತಿದ್ದಾರೆ.
ಮತ್ತೊಂದು ಕಡೆ ನಾವು ಕೈಲಾಶ್ ಮಾನಸ ಸರೋವರಕ್ಕೆ
ಯಾತ್ರೆಗೆ ಅನುಮತಿ ಕೇಳಲೂ ಮೀನಾ-ಮೇಷ
ಎಣಿಸುತ್ತೇವೆ.
ಚೀನಾ ಕಳೆದ 30
ವರ್ಷಗಳಿಂದ ಪರಮಾಣು ಇಂಧನ,
ಪ್ಲುಟೋನಿಯಂ ಸಂಸ್ಕರಣಕ್ಕೆ ಪರಮಾಣು ಘಟಕಗಳನ್ನು
ಸರಬರಾಜು ಮಾಡುತ್ತಿದೆ.
ಆದರೂ ನಾವು ಚಕಾರವೆತ್ತಿಲ್ಲ.
ಪರಿಸ್ಥಿತಿ ಎಷ್ಟು ಶೋಚನೀಯವಾಗಿದೆ ಎಂದರೆ,
ಟಿಬೆಟ್ ಸಮಸ್ಯೆ ಉದ್ಭವಿಸಿದಾಗ ಅದು ಚೀನಾದ
ಆಂತರಿಕ ಸಮಸ್ಯೆ ಎನ್ನುವ ಹೇಳಿಕೆ ಕೊಡಲೂ ಹೇಸಲಿಲ್ಲ!
ಆಗಲೇ ನಾವು ಸ್ವಲ್ಪ ಧೈರ್ಯ ತೋರಿಸಿದ್ದರೆ?
ಚೀನಾವನ್ನು
1950ರ
ಒಪ್ಪಂದಕ್ಕೆ ಬದ್ಧರಾಗಿರುವಂತೆ ಕೇಳಿಕೊಳ್ಳಬಹುದಾಗಿತ್ತು.
ನಾವು ಯುದ್ಧರಂಗಕ್ಕೆ ಹೋಗುವ ಕುರಿತ ಆಲೋಚನೆ
ಮಾಡುವ ಮುನ್ನವೇ ತಲೆಬಾಗಿ ಬಿಡುತ್ತಿರುವಂತೆ ಗೋಚರಿಸುತ್ತಿದೆ.
ಎನ್‌ಡಿಎ ಮತ್ತು ಯುಪಿಎ ಸರ್ಕಾರಗಳೆರಡೂ ಸಂಪೂರ್ಣ
ವಿಫಲವಾಗಿರುವುದರ ಧ್ಯೋತಕವಿದು.
ಜಮ್ಮು-ಕಾಶ್ಮೀರದಲ್ಲಿ
3,400
ಕಿ.ಮೀ.
ಉದ್ದದ ಈಶಾನ್ಯದ ಸಿಯಾಚಿನ್ ಪ್ರಾಂತ ಶಾಕ್‌ಗಮ್‌ನ್ನು
1963ರಲ್ಲಿ
ಚೀನೀಯರು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಆದರೆ ನಾವು ಇದರ ವಿರುದ್ಧ ಎಂದೂ ಧ್ವನಿ ಎತ್ತಲೇ
ಇಲ್ಲ.
ಭಾರತದ ಮೇಲೆ ಚೀನಾ ಕುರಿತ ಆತಂಕ ಎಷ್ಟಿದೆ ಎಂದರೆ,
ನಾವು ಈ ಬಗ್ಗೆ ಮಾತನಾಡುವುದಕ್ಕಿಂತ
ಸುಮ್ಮನಿರುವುದೇ ಲೇಸು ಎಂದುಕೊಂಡಿದ್ದೇವೆ.
ಈಗ ಭಾರತ-ಅಮೆರಿಕ
ಅಣು ಒಪ್ಪಂದದ ಬಗ್ಗೆ ಸತತ ಚರ್ಚೆಗಳು ನಡೆಯುತ್ತಿವೆ.
ಆದರೆ ಚೀನಾ ಮತ್ತು ಪಾಕಿಸ್ತಾನಿ ಲಾಬಿಗಳು
'ಪರಮಾಣು
ಸರಬರಾಜು ತಂಡ'ದ
ಎಲ್ಲಾ 45
ಸದಸ್ಯ ರಾಷ್ಟ್ರಗಳ ಬಳಿ ತೆರಳಿ ಭಾರತದ ವಿರುದ್ಧ ಮಸಲತ್ತು ನಡೆಸುತ್ತಿದ್ದಾರೆ
ಎನ್ನುವ ವಿವರ ಬೆರಳೆಣಿಕೆಯ ಜನರಿಗಷ್ಟೇ ತಿಳಿದಿದೆ.
ಈ ಲಾಬಿಕೋರರು ಅಮೆರಿಕದ ಕಾಂಗ್ರೆಸ್‌ನ್ನೂ
ತಲುಪಿದ್ದಾರೆ.
ಅಲ್ಲಿನ ಅಧಿಕಾರಿಗಳನ್ನು ಭಾರತದ ವಿರುದ್ಧ ಸೆಟೆದು
ನಿಲ್ಲಲು ಪ್ರಚೋದಿಸಿದ್ದಾರೆ.
ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ
ಶಾಶ್ವತ ಸ್ಥಾನ ಸಿಗದಂತೆ ಮಾಡುವಲ್ಲಿ ಚೀನಾ ಲಾಬಿಯೇ ಹೆಚ್ಚಾಗಿತ್ತು ಎನ್ನುವ
ಸತ್ಯ ಸ್ಪಷ್ಟ ಗೋಚರವಾಗಿದ್ದರೂ ನಾವು ಸುಮ್ಮನಿದ್ದೇವೆ.
ಈ ವಿಷಯಗಳನ್ನು ಎರಡು ವಿಧದಲ್ಲಿ ವಿರೋಧಿಸಬಹುದು ಅಥವಾ ಪ್ರತಿಭಟಿಸಬಹುದು.
ಕೆಲವೆಡೆ ಬಹಿರಂಗವಾಗಿ ಹೇಳಬಹುದು.
ಇನ್ನು ಕೆಲವೆಡೆ ಪರೋಕ್ಷ ಹಾದಿ ಹಿಡಿದು
ರಹಸ್ಯವಾಗಿ ಗುರಿ ಸಾಧಿಸಬಹುದು.
ಆದರೆ ಭಾರತ ಎರಡರಲ್ಲೂ ವಿಫಲವಾಗಿದೆ.
ನಾವು
1971ರಲ್ಲಿ ಬಾಂಗ್ಲಾದೇಶ ಸ್ವಾತಂತ್ರ್ಯ ಹೋರಾಟದ
ಸಂದರ್ಭದಲ್ಲಿ ಯಾವ ವೀರಾವೇಶದಿಂದ ಹೋರಾಡಿದ್ದೆವೋ,
ಆ ಎದೆಗಾರಿಕೆಯನ್ನು ಮತ್ತೆಂದೂ ತೋರಿಸಿಲ್ಲ.
ಇಂದು ನಾನು ಒಂದು ವಿಷಯ ಮಾತ್ರ ಯಾವುದೇ ಹಿಂಜರಿಕೆ
ಇಲ್ಲದೆ ಒಪ್ಪಿಕೊಳ್ಳಬಲ್ಲೆ.
ಇಂದಿರಾಗಾಂಧಿ ಅವರಿಗಿದ್ದ ಎಂಟೆದೆ ಮತ್ತಾರಿಗೂ
ಇಲ್ಲ.
ಅಂತರ್ ರಾಷ್ಟ್ರೀಯ ವಿಚಾರಗಳಲ್ಲಿ ಅವರು ತೋರಿಸಿದ
ದಾರ್ಷ್ಟ್ಯವನ್ನು ಆನಂತರ ಅಧಿಕಾರಕ್ಕೆ ಬಂದ ಮತ್ಯಾರೂ ತೋರಿಸಿಲ್ಲ.
ಮುಖ್ಯವಾಗಿ ನೆರೆಯ ರಾಷ್ಟ್ರಗಳ ಬಗ್ಗೆ
ನಿರ್ಧಾರಕ್ಕೆ ಬರಬೇಕಾದ ಸಂದರ್ಭಗಳಲ್ಲಿ.
ಅದು ಟಿಬೆಟಿಯನ್ನರ ಮೇಲೆ ನಡೆದ ಅಸಹನೀಯ
ದೌರ್ಜನ್ಯವೇ ಇರಬಹುದು ಅಥವಾ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯೇ
ಆಗಿರಬಹುದು.
ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನಡೆದುಕೊಂಡಿಲ್ಲ.
ನಾವು ಇಂದು ಅಮೆರಿಕದ ಜೊತೆ
123 ಒಪ್ಪಂದಕ್ಕೆ ಸಹಿ ಹಾಕಲು ಉದ್ದೇಶಿಸಿದ್ದೇವೆ.
ಇದರರ್ಥ ನಾವು ಈಗಿಂದೀಗಲೇ ಎಲ್ಲಾ ಪರಮಾಣು
ಸಂಬಂಧಿತ ವಿಚಾರದಲ್ಲಿ ಅಮೆರಿಕದ ಜೊತೆ ಸಹಯೋಗ ಆರಂಭಿಸಬೇಕು ಎಂದಲ್ಲ.
ನಾವಿನ್ನೂ ಪ್ರಾಥಮಿಕ ಹಂತದಲ್ಲೇ ಇದ್ದೇವೆ.
ಪರಮಾಣು ಒಪ್ಪಂದದ ಬಗ್ಗೆ ತಮ್ಮ ಅಭಿಪ್ರಾಯ
ವ್ಯಕ್ತ ಪಡಿಸುವವರೆಲ್ಲಾ ಮೊತ್ತ ಮೊದಲನೆಯದಾಗಿ ತಾವೇನು ಮಾತನಾಡುತ್ತಿದ್ದೇವೆ
ಎಂದು ಪರಿಶೀಲಿಸುವುದು ಒಳಿತು.
ಭಾರತ ಪರಮಾಣು ಅಸ್ತ್ರಗಳನ್ನು ಪಡೆಯಲೇಬಾರದು ಎಂದು
ಎಡಪಕ್ಷಗಳು ಒತ್ತಾಯಿಸುತ್ತಿವೆ.
ಮತ್ತೊಂದು ಕಡೆ ರಾಶಿಗಟ್ಟಲೆ ಅಣ್ವಸ್ತ್ರಗಳನ್ನು
ಶೇಖರಿಸಿಟ್ಟಿರುವ ಚೀನಾವನ್ನು ಅವರು ಬೆಂಬಲಿಸುತ್ತಿದ್ದಾರೆ.
ಭಾರತದ ಮೇಲೆ ವಿಶೇಷ ಕಾಳಜಿ ತೋರುತ್ತಿರುವ ಇದೇ
ಸಿಪಿಎಂ ಪಕ್ಷ 2004ರ
ತನ್ನ ಪ್ರಣಾಳಿಕೆಯಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಬಗ್ಗೆ
ಚಕಾರವೆತ್ತಿರಲಿಲ್ಲ ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ.
ಇವೆಲ್ಲವನ್ನೂ ನೀವು ಏನೆಂದು ಕರೆಯುತ್ತೀರಿ?
ಮಾಜಿ ಐಎಸ್‌ಐ ಮುಖ್ಯಸ್ಥ ಮತ್ತು ಜನರಲ್ ಪರ್ವೇಜ್ ಮುಷರಫ್ ಅವರ
ಆಡಳಿತಾವಧಿಯಲ್ಲಿ ಪಾಕಿಸ್ತಾನದ ರೈಲ್ವೆ ಸಚಿವರಾಗಿದ್ದ ನಿವೃತ್ತ ಜನರಲ್ ಎಲ್.ಜೆ.
ಜಾವೆದ್ ಅಶ್ರಫ್ ಖಾಜಿ
2005ರಲ್ಲಿ
ಭಾರತೀಯ ಸಂಸತ್ತಿನ ಮೇಲೆ ನಡೆದ ದಾಳಿಯಲ್ಲಿ
'ಜೈಶ್-ಎ-ಮೊಹಮ್ಮದ್'
ಕೈವಾಡವಿತ್ತು ಎನ್ನುವುದನ್ನು ಒಪ್ಪಿಕೊಂಡಿದ್ದರು.
ನಮ್ಮ ಮಾಜಿ ವಿದೇಶಿ ಸಚಿವ ಜಸ್ವಂತ್ ಸಿಂಗ್ ಅವರು
ಬಿಡುಗಡೆ ಮಾಡಿದ್ದ ಮೌಲಾನಾ ಮಸೂದ್ ಅಜರ್ ಆ ಸಂಘಟನೆಯ ಜನರಲ್ ಎನ್ನುವುದು
ಎಲ್ಲರಿಗೂ ಗೊತ್ತಿದ್ದದ್ದೇ.
ಕಂದಹಾರ್ ವಿಮಾನ ಅಪಹರಣ ನೆನಪಿಸಿಕೊಳ್ಳಿ!
ವಿಮಾನದ ಪ್ರಯಾಣಿಕರನ್ನು ರಕ್ಷಿಸಲು ನಾವು ಮಸೂದ್‌ನನ್ನು
ಬಿಡುಗಡೆ ಮಾಡಿದ್ದೆವು.
ಎರಡೇ ವರ್ಷಗಳಲ್ಲಿ ಆತ ಸಂಸತ್ತಿನ ಮೇಲೆ ದಾಳಿ ನಡೆಸುವ
ಯೋಜನೆ ಸಿದ್ಧ ಪಡಿಸಿದ.
ಕಂದಹಾರ್ ಅಪಹರಣವಾದಾಗ ನಾನು ಪಾಕಿಸ್ತಾನದ
ರಾಯಭಾರಿಯಾಗಿದ್ದೆ.
ನನ್ನ ದೇಶದ ಪರವಾಗಿ ತಾಲಿಬಾನ್ ನಾಯಕರ ಜೊತೆ ಆರಂಭಿಕ
ಹಂತದಲ್ಲಿ ಸಂಧಾನ ನಡೆಸುತ್ತಿದ್ದಾಗ ಅವರ ಧೋರಣೆಯೊಂದು ನನಗೆ ತಿಳಿದಿತ್ತು.
ಈ ಹಿಂದೆ ರುಬಿಯಾ ಸಯ್ಯದ್‌ಳ ಬಿಡುಗಡೆಗಾಗಿ
ಉಗ್ರರ ಬೇಡಿಕೆಯನ್ನು ಪೂರೈಸಿದ್ದ ನೀವು ಈಗಿನ ಬೇಡಿಕೆಯಂತೆ ಭಯೋತ್ಪಾದಕರನ್ನು
ಬಿಡುಗಡೆ ಮಾಡಲು ಒಪ್ಪುತ್ತಿಲ್ಲವೇಕೆ ಎಂದು ಅವರು ಪ್ರಶ್ನಿಸಿದ್ದರು.
ನಾವು ಹಿಂದೆ ರುಬಿಯಾ ಸಯ್ಯದ್ ಪ್ರಕರಣದಲ್ಲಿ
ನಡೆಸಿದ ತಪ್ಪನ್ನೇ ಕಂದಹಾರ್ ವಿಚಾರದಲ್ಲೂ ಎಸಗಿದ್ದೇವೆ ಎನ್ನುವುದು ಇಲ್ಲಿ
ಸ್ಪಷ್ಟ.
ನಾನು ಈ ಬಾರಿ ಅಂತಹ ಸಾಧ್ಯತೆಗಳು ಖಂಡಿತಾ ಇಲ್ಲ ಎಂದು
ಖಡಾಖಂಡಿತವಾಗಿ ಹೇಳಿದ್ದೆನಾದರೂ,
ಅಲ್ಲಿಗೆ ಧಾವಿಸಿದ ರಾ,
ಐಬಿ ಮತ್ತು ವಿದೇಶಿ ಸಚಿವಾಲಯದ ವಿಶೇಷ
ಅಧಿಕಾರಿಗಳ ತಂಡ ಮಾತುಕತೆಗೆ ಮುಂದಾಯಿತು.
ಕೊನೆಗೆ ನನ್ನ ಸಮ್ಮತಿ ಇಲ್ಲದೆಯೇ ಭಯೋತ್ಪಾದಕರ
ಬಿಡುಗಡೆಗೆ ಸಿದ್ಧರಾದರು.
ಇಂದು ಪಾಕಿಸ್ತಾನದ ಬಹಾವಾಲ್ಪುರ ಎಲ್ಲಾ
ಭಯೋತ್ಪಾದನಾ ಚಟುವಟಿಕೆಗಳ ಕೇಂದ್ರ ಸ್ಥಾನವಾಗಿದೆ.
ಇಲ್ಲಿನ ವ್ಯಂಗ್ಯವೆಂದರೆ,
ಮುಖ್ಯವಾಗಿ
9/11 ದಾಳಿಯ
ನಂತರ ಎಲ್ಲ ದೇಶಗಳೂ ತಮ್ಮ ಭಯೋತ್ಪಾದನಾ ನಿಯಮಗಳನ್ನು ಇನ್ನೂ ಕಠಿಣವಾಗಿಸಲು
ಕ್ರಮ ಕೈಗೊಂಡಿವೆ.
ಭಾರತ ಇಷ್ಟೆಲ್ಲಾ ದಾಳಿಗಳನ್ನು ಎದುರಿಸಿಯೂ ತೀವ್ರ ಕ್ರಮ
ಕೈಗೊಳ್ಳುವಲ್ಲಿ ಹಿಂದೆ ಬಿದ್ದಿದೆ.
ಭಯೋತ್ಪಾದನೆಯನ್ನು ನಿಗ್ರಹಿಸಲು ಯಾವುದೇ
ಕೇಂದ್ರೀಯ ಸಂಸ್ಥೆ ಅಥವಾ ವಿಶೇಷ ನ್ಯಾಯಾಲಯ ಭಾರತದಲ್ಲಿಲ್ಲ.
ನಿಜ ಹೇಳಬೇಕೆಂದರೆ ಇವು ಈಗಿನ ತುರ್ತು.
ಆದರೆ ಈ ಬಗ್ಗೆ ಗಮನ ಹರಿಸಬೇಕು ಎಂಬ ಆತಂಕ ಮಾತ್ರ
ಯಾರಿಗೂ ಇದ್ದಂತಿಲ್ಲ.
ಟಿಎಸ್‌ಐ |