|
ಅಸ್ಸಾಂ: ಉಲ್ಫಾ
ಉಲ್ಫಾ ಶರಣಾಗತಿ ಸಾಧ್ಯವೆ?

ಅಸ್ಸಾಂ ಸರ್ಕಾರ ರಾಜ್ಯದಲ್ಲಿ ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸ್ಸಾಂ
(ಉಲ್ಫಾ)
ಸದ್ದಡಗಿಸಲು ಮೂರು ಅಂಶದ ಕಾರ್ಯತಂತ್ರಗಳನ್ನು
ರೂಪಿಸಿದೆ.
ಕಳೆದ ಏಳು ವರ್ಷಗಳಿಂದ ಅಧಿಕಾರದಲ್ಲಿದ್ದರೂ ಸಾಧ್ಯವಾಗದ
ಸಂಧಾನ ಕಾರ್ಯ ಈ ಬಾರಿ ಯಶಸ್ವಿಯಾಗಿಸಲು ಸರ್ಕಾರ ಪಣತೊಟ್ಟಿದೆ.
ಸಾಧ್ಯವಾಗದೆ ಇದ್ದಲ್ಲಿ ನಿರ್ದಯವಾಗಿ ಉಗ್ರರ ಕೊಲೆ,
ಉಲ್ಫಾ ಸಂಘಟನೆಗೆ ಪ್ರೋತ್ಸಾಹ ನೀಡುವ
ರಾಜಕಾರಣಿಗಳನ್ನು ಬಗ್ಗುಬಡಿಯುವ ಮೂಲಕ ಒಟ್ಟಾರೆ ಉಲ್ಫಾದ
28ನೇ
ಬೆಟಾಲಿಯನ್ ಅನ್ನು ಶತಾಯಗತಾಯ ಶರಣಾಗುವಂತೆ ಮಾಡಲು ಸರ್ಕಾರ ಯೋಜನೆ ಹಾಕಿದೆ.
ಸರ್ಕಾರ ಮತ್ತು ಉಲ್ಫಾ ನಡುವೆ ಮಧ್ಯಸ್ಥಿಕೆಗಾಗಿ ರಚಿಸಲಾಗಿದ್ದ ಪೀಪಲ್ಸ್
ಕನ್ಸಲೇಟಿವ್ ಗ್ರೂಪ್(ಪಿಸಿಜಿ)ನ
ಮತ್ತೊಬ್ಬ ಸದಸ್ಯ ಹಿರಣ್ಯಾ ಸೈಕಿಯಾನನ್ನು ಇತ್ತೀಚೆಗೆ ಬಂಧಿಸಲಾಗಿದೆ.
ಕಳೆದ ಫೆಬ್ರುವರಿಯಲ್ಲಿ ಬಂಧಿಸಲಾದ ಪಿಸಿಜಿ
ಸದಸ್ಯ ಲಚಿತ್ ಬೊರ್ಡೋಲೊಯ್ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಇನ್ನೂ
ಸೆರೆಯಲ್ಲಿದ್ದಾನೆ.
ಕಳೆದ ಕೆಲ ವರ್ಷಗಳಿಂದ ಸರಣಿ ಬಾಂಬುಗಳ ಮೂಲಕ ಗುವಾಹತಿಯಲ್ಲಿ ಆತಂಕ
ಸೃಷ್ಟಿಸಿದ ಉಲ್ಫಾದ 28ನೇ
ಬೆಟಾಲಿಯನ್ ಸದಸ್ಯ ಮೃಣಾಲ್ ಹಜಾರಿಕಾನನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ.
ಹಜಾರಿಕಾ ಬೆಟಾಲಿಯನ್‌ನ ಇತರ ಕೆಲ ಸದಸ್ಯರನ್ನು
ಶರಣಾಗತಿಗೆ ಮನವೊಲಿಸುತ್ತಾನೆಂಬ ನಂಬಿಕೆ ಇದೆ.
'ಮೋಸ್ಟ್
ವಾಂಟೆಡ್'
ಬೆಟಾಲಿಯನ್ ಮುಖಂಡ ಪ್ರಬಾಲ್ ನ್ಯಾಗೋನನ್ನು ಇತ್ತೀಚೆಗೆ ಪತ್ನಿ ಮತ್ತು
ಮಗುವಿನ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಬಂಧಿಸಲಾಗಿದೆ.
ಈಗ ಹೇಳುವಂಥದ್ದು ಏನೂ ಇಲ್ಲ.
ಮೂರ್‍ನಾಲ್ಕು ದಿನಗಳಲ್ಲಿ ವಿವರ ನಿಮಗೇ
ತಿಳಿಯಲಿದೆ.
ಉಲ್ಫಾದ 28ನೇ
ಬೆಟಾಲಿಯನ್ ಮಾತ್ರವಲ್ಲ,
ಶರಣಾಗಲು ಬಯಸುತ್ತಿರುವ ಹಲವು ಸಂಘಟನೆಗಳಿವೆ ಎನ್ನುತ್ತಾರೆ
ವಿಶೇಷ ಪಡೆಯ ಐಜಿ ಖಾಗೆನ್ ಶರ್ಮಾ.
ಈ ಮಧ್ಯೆ,
ಶರಣಾಗತಿ ಮತ್ತು ಕದನ ವಿರಾಮಗಳ ಬಗ್ಗೆ ಉಲ್ಫಾದ ಕೇಂದ್ರ
ಸಮಿತಿಯಲ್ಲಿ ಚರ್ಚೆಯಾಗಿದೆ.
ಸರ್ಕಾರ ನಮ್ಮ ಸಂಘಟನೆಯಲ್ಲಿ ಒಡಕು ಮೂಡಿಸಲು
ಪ್ರಯತ್ನಿಸುತ್ತಿದೆ ಎನ್ನುತ್ತಾರೆ
28ನೇ
ಬೆಟಾಲಿಯನ್ ಮುಖಂಡ ಬಿಜೈ ಚೈನೀಸ್.
ಬೇರುಮಟ್ಟದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.
ಕಳೆದ ಏಳು ವರ್ಷಗಳಲ್ಲಿ ಸರ್ಕಾರ ಉಲ್ಫಾದ ಪ್ರಮುಖ
ನಾಯಕರನ್ನು ಮಾತುಕತೆಗೆ ಒಪ್ಪಿಸುವಲ್ಲಿ ವಿಫಲವಾಗಿದೆ.
ಸರ್ಕಾರ
1990ರಲ್ಲಿ
ಹಿತೇಶ್ವರ್ ಸೈಕಿಯಾ ಆಡಳಿತದ ಸಂದರ್ಭದಲ್ಲಿ ಉಲ್ಫಾ ಸಂಘಟನೆಯ ಜೊತೆಗೆ
ಮಾತುಕತೆ ನಡೆಸಿತ್ತು.
ಆದರೆ 'ಸುಲ್ಫಾ'
ಎಂದು ಕರೆಸಿಕೊಂಡು ಶರಣಾಗತಿಯಾದ ಉಲ್ಫಾ ಸದಸ್ಯರು ರಾಜ್ಯದ ಕಾನೂನು ಮತ್ತು
ಸುವ್ಯವಸ್ಥೆಗೆ ಮಾರಕವಾಗಿ ಪರಿಣಮಿಸಿ,
ಹೆಚ್ಚುವರಿ ಸಮಸ್ಯೆ ಸೃಷ್ಟಿಯಾಗಿರುವುದನ್ನು
ಇಲ್ಲಿ ನೆನಪಿಸಿಕೊಳ್ಳಬಹುದು.
ಟಿಎಸ್‌ಐ
ಮೊನಾಲಿಸಾ ಗೊಗೋಯಿ
ಕೇರಳ: ಕ್ರೈಸ್ತ ಸಮುದಾಯ
ಕುಟುಂಬ ಯೋಜನೆ ಬೇಡ!
ರಾಜ್ಯದಲ್ಲಿ ಕ್ರೈಸ್ತರ ಸಂಖ್ಯೆ ಹೆಚ್ಚಳಕ್ಕೆ ಕೆಸಿಬಿಸಿಯ ಹೊಸ ಒಡಂಬಡಿಕೆ

ಜನನ ಅಪರಾಧವಲ್ಲ!
ಅದು ಅನುಗ್ರಹ.
ತಾಯಂದಿರೇ,
ಹಿಂಜರಿಯಬೇಡಿ!
ನಿಮ್ಮ ತಾಯ್ತನದ ಬಗ್ಗೆ ಹೆಮ್ಮೆಪಡಿ.
ಹೆಚ್ಚು ಮಕ್ಕಳಿಗೆ ಜನ್ಮನೀಡಿ ಇದು ಕೇರಳ
ಕ್ಯಾಥೋಲಿಕ್ ಬಿಷಪ್ ಕೌನ್ಸಿಲ್ (ಕೆಸಿಬಿಸಿ)ನ
ಹೊಸ ಘೋಷಣೆ.
29 ಕ್ಯಾಥೋಲಿಕ್
ಪ್ರಾಂತಗಳು ಇತ್ತೀಚೆಗೆ ಕೊಚ್ಚಿಯಲ್ಲಿ ನಡೆಸಿದ ಎರಡು ದಿನಗಳ ಸಮಾವೇಶದಲ್ಲಿ
ಈ ನಿರ್ಧಾರಕ್ಕೆ ಬರಲಾಗಿದೆ.
ಕೆಸಿಬಿಸಿ ಅಧ್ಯಕ್ಷ ಬಿಷಪ್ ಮ್ಯಾಥ್ಯೂ
ಅನಿಕ್ಕುಳಿಕ್ಕಟ್ಟಿಲ್ ಅವರಿಗೆ ಸಲ್ಲಿಸಲಾಗಿರುವ ಕರಡು ಪ್ರತಿಯ ಪ್ರಕಾರ,
ರಾಜ್ಯದ ಎಲ್ಲಾ ಕ್ಯಾಥೋಲಿಕ್ ಆಡಳಿತ
ಪ್ರಾಂತಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದು.
ಈ ತರಾತುರಿಯ ಘೋಷಣೆಗಳೇಕೆ?
ಕಳೆದ ಜನಗಣತಿಯ ಪ್ರಕಾರ,
ಕ್ರೈಸ್ತ ಜನಸಂಖ್ಯಾ ಪ್ರಗತಿ ಶೇ.
22ರಿಂದ
ಶೇ.
19.2ರಷ್ಟು
ಇಳಿಮುಖವಾಗಿದೆ ಎನ್ನುವುದು ಸಮಿತಿಯ ವಾದ.
ಕ್ರೈಸ್ತರು
'2 ಮಕ್ಕಳು
ಸಾಕು'
ನಿಯಮ ಪಾಲಿಸುತ್ತಾರೆ.
ಪರಿಣಾಮವಾಗಿ ಕ್ರೈಸ್ತ ಮಕ್ಕಳ ಸಂಖ್ಯೆ ಇಳಿಯುತ್ತಿದೆ
ಎನ್ನುತ್ತಾರೆ ಟಿಎಸ್‌ಐ ಜೊತೆ ಮಾತನಾಡಿದ ಕೆಸಿಬಿಸಿಯ ಉಪಕಾರ್ಯದರ್ಶಿ ಮತ್ತು
ವಕ್ತಾರ ಸ್ಟೀಫನ್ ಅಲಥಾರ.
ಕೆಸಿಬಿಸಿ ಯೋಜನೆ ಪ್ರಕಾರ ಕ್ರೈಸ್ತ ಸಮುದಾಯದ
ಕುಟುಂಬ ಕಲ್ಯಾಣ ಯೋಜನಾ ಮನಸ್ಥಿತಿ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗುವುದು.
ಸಂತಾನಹರಣ ಚಿಕಿತ್ಸೆ ಪಡೆದುಕೊಂಡವರಿಗೆ ಕ್ರೈಸ್ತ
ಆಸ್ಪತ್ರೆಗಳಲ್ಲಿ ಮರುಚಿಕಿತ್ಸೆ ಪಡೆದುಕೊಳ್ಳಲು ಉತ್ತೇಜಿಸಲಾಗುವುದು.
ಆದರೆ ನಿಯಾವಳಿಗಳ ಪ್ರಕಾರ ಈ ಆಸ್ಪತ್ರೆಗಳಲ್ಲಿ
ಭ್ರೂಣಹತ್ಯೆ ಮತ್ತು ಸಂತಾನಹರಣ ಚಿಕಿತ್ಸೆಗೆ ಅವಕಾಶವಿಲ್ಲ!
ಇದಲ್ಲದೆ
'ಮೆಡಿಕಲ್
ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ ಆಕ್ಟ್'ನ್ನು
ಹಿಂದಕ್ಕೆ ಪಡೆಯಲು ಕೂಡ ಯೋಜನೆ ಹಾಕಿಕೊಳ್ಳಲಾಗಿದೆ.
ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಕ್ರೈಸ್ತ
ಕುಟುಂಬದಲ್ಲಿ ಹುಟ್ಟಿರುವ ಮೂರನೇ ಮಗುವಿಗೆ ಶಿಕ್ಷಣದಲ್ಲಿ ಅರ್ಧದಷ್ಟು
ಶುಲ್ಕ ಕಡಿತ,
ನಾಲ್ಕನೇ ಮಗುವಿಗೆ ಉಚಿತ ಶಿಕ್ಷಣ ಮತ್ತು ನಾಲ್ಕರ ಮೇಲೆ
ಮಕ್ಕಳು ಜನಿಸಿದರೆ ಸಾರ್ವಜನಿಕ ಅಭಿನಂದನೆಗೆ ಯೋಜನೆ ಹಾಕಿಕೊಳ್ಳಲಾಗಿದೆ.
ವ್ಯಕ್ತಿಯ ಖಾಸಗಿ ವ್ಯವಹಾರದಲ್ಲಿ
ಮಧ್ಯಪ್ರವೇಶಿಸುವ ಹಕ್ಕು ಯಾರಿಗೂ ಇಲ್ಲ.
ಏನು ಮಾಡಬೇಕೆಂಬುದನ್ನು ಹೆತ್ತವರೇ
ನಿರ್ಧರಿಸಬಹುದು ಎನ್ನುತ್ತಾರೆ ಕ್ಯಾಥೋಲಿಕ್ ಚರ್ಚ್‌ನ ಪ್ರಧಾನ ವಿಮರ್ಶಕ
ಮತ್ತು ಭಾರತೀಯ ಕ್ರೈಸ್ತ ಅಧ್ಯಯನ ಸಂಸ್ಥೆಯ ನಿರ್ದೇಶಕ ಜೋಸೆಫ್
ಪುಳಿಕ್ಕುನ್ನೆಲ್.
ಈ ಬಗ್ಗೆ ರಾಜಕೀಯ ಪಕ್ಷಗಳು ಅಭಿಪ್ರಾಯ ವ್ಯಕ್ತಪಡಿಸಲು
ನಿರಾಕರಿಸಿವೆ.
ಕೆಸಿಬಿಸಿಯ ಈ ಒಡಂಬಡಿಕೆಯನ್ನು ದೇಶದ ಎಲ್ಲರೂ ಪಾಲಿಸಿದರೆ
ಜನಸಂಖ್ಯೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗದೆ ಪರದಾಡುತ್ತಿರುವ ದೇಶದ
ಸ್ಥಿತಿ ಯಾವ ಮಟ್ಟಕ್ಕೆ ತಲುಪಬಹುದು?
ಟಿಎಸ್‌ಐ
ಎ.ಟಿ. ಶ್ರೀಕುಮಾರ್
|