|
ವಿಶ್ವಸಂಸ್ಥೆ: ಅಪರಾಧ
ಶಾಂತಿಪಡೆಗಳ ಕರ್ತವ್ಯ ಚ್ಯುತಿ
ಡಚ್ ನ್ಯಾಯಾಲಯದಲ್ಲಿ ಬೋಸ್ನಿಯಾ ನರಮೇಧ ವಿವಾದ

ಮುಂಬರುವ ದಿನಗಳಲ್ಲಿ ಎಲ್ಲರೂ ಯುರೋಪ್‌ನತ್ತ ದೃಷ್ಟಿ ನೆಡಬಹುದಾದ
ಅಭೂತಪೂರ್ವ ಚಟುವಟಿಕೆಯೊಂದಕ್ಕೆ ಚಾಲನೆ ದೊರೆತಿದೆ.
1995ರಲ್ಲಿ
ಸ್ರೆಬ್ರೆನಿಕಾದ ಬೋಸ್ನಿಯಾ ಪ್ರಾಂತದಲ್ಲಿ ನಡೆದ ನರಮೇಧದಲ್ಲಿ ತಮ್ಮ
ಕುಟುಂಬವನ್ನು ಕಾಪಾಡಲು ವಿಫಲವಾಗಿರುವ ಎರಡು ಬೋಸ್ನಿಯನ್ ಕುಟುಂಬಗಳು ನೆದರ್‌ಲ್ಯಾಂಡ್‌ನ
ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿ ಡಚ್ ನ್ಯಾಯಾಧಿಕರಣಕ್ಕೆ ಅರ್ಜಿ
ಸಲ್ಲಿಸಿವೆ.
ಕೊಲೆಯಾದ ವಿಶ್ವಸಂಸ್ಥೆಯ ಸಿಬ್ಬಂದಿ ಭಾಷಾಂತರಕಾರ ಹಸನ್
ನುಹಾನೊವಿಕ್ ಮತ್ತು ಎಲೆಕ್ಟ್ರಿಷಿಯನ್ ರಿಯೋ ಮುಸ್ತಾಫಿಕ್ ಅವರ ಎರಡು
ಪ್ರಕರಣಗಳು ಡಚ್ ನ್ಯಾಯಾಲಯದಲ್ಲಿ ನ್ಯಾಯದ ನಿರೀಕ್ಷೆಯಲ್ಲಿವೆ.
ವಿಶ್ವಸಂಸ್ಥೆ ನಿಯಮಾವಳಿಗಳ ಪ್ರಕಾರ,
ಶಾಂತಿ ಸೌಹಾರ್ದವನ್ನು ಎತ್ತಿಹಿಡಿಯಲು ಮತ್ತು
ಜಾಗತಿಕ ಭದ್ರತೆಗಾಗಿ ಎಲ್ಲಾ ಸದಸ್ಯ ರಾಷ್ಟ್ರಗಳು ಅಗತ್ಯ ಸಶಸ್ತ್ರ ಪಡೆ
ಹೊಂದಿರಬೇಕು.
ವಿಶ್ವಸಂಸ್ಥೆಯ ಕರೆಯ ಮೇರೆಗೆ ವಿಶ್ವದೆಲ್ಲೆಡೆ
ಕಾರ್ಯನಿರ್ವಹಿಸಲು ಇವು ಸಿದ್ಧರಿರಬೇಕು.
ವಿಶ್ವಸಂಸ್ಥೆಯ ಇಂತಹುದೇ ಒಂದು ಕರೆಗೆ ಮನ್ನಣೆ
ನೀಡಿದ ವಿವಿಧ ದೇಶಗಳ ಸೇನಾಪಡೆಗಳು ದಶಕಗಳ ಹಿಂದೆ ಬೋಸ್ನಿಯಾದಲ್ಲಿ
ಕಾರ್ಯಾಚರಣೆ ನಡೆಸಿದ್ದವು.
ಹಾಗಿದ್ದರೂ
1995ರಲ್ಲಿ
ವಿಶ್ವಸಂಸ್ಥೆಯ ನೇತೃತ್ವದಲ್ಲಿ ಸ್ರೆಬ್ರೆನಿಕಾದಲ್ಲಿ
ಕಾರ್ಯನಿರ್ವಹಿಸುತ್ತಿದ್ದ ಡಚ್ ಸೇನಾಪಡೆಗಳನ್ನು ಹೊಡೆದಟ್ಟಿ ಪ್ರಾಂತವನ್ನು
ಆಕ್ರಮಿಸಿದ ಬಲಶಾಲಿ ಸರ್ಬ್ ಪಡೆ,
ಸುಮಾರು
8,000
ಬೋಸ್ನಿಯಾ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸಿತ್ತು.
ಸರ್ಬ್‌ಗಳು ಪುರುಷರನ್ನು ಮತ್ತು ಮಹಿಳೆಯರನ್ನು
ಪ್ರತ್ಯೇಕಿಸಿ ಅವರನ್ನು ನರಮೇಧಕ್ಕೆ ಕೊಂಡೊಯ್ದಾಗ ಹಾಗೂ ಸುಮಾರು ಹತ್ತು
ಸಾವಿರಗಳಷ್ಟು ಮಂದಿಯನ್ನು,
ಮುಖ್ಯವಾಗಿ ನರಮೇಧ ಮಾಡಿದ ಪುರುಷರ ಪತ್ನಿಯರು
ಮತ್ತು ಮಕ್ಕಳನ್ನು ಹೊರದಬ್ಬಿದಾಗ ಡಚ್ ಸೈನಿಕರು ಮೂಕ ಪ್ರೇಕ್ಷಕರಾಗಿದ್ದರು.
ತಮಗೆ ಒಪ್ಪಿಸಲಾದ ಕರ್ತವ್ಯಕ್ಕೆ ಬದ್ಧರಾಗುವಲ್ಲಿ ಮತ್ತು ನರಮೇಧವನ್ನು
ತಪ್ಪಿಸಲು ಅವರು ವಿಫಲರಾಗಿದ್ದಾರೆ.
ಹಾಗಾಗಿ ವಿಶ್ವಸಂಸ್ಥೆ ಮತ್ತು ಡಚ್ಚರು ಈ
ನರಮೇಧಕ್ಕೆ ಕಾರಣಕರ್ತರು.
'ಸೇನಾಪಡೆಯ
ಸೈನಿಕರ ಪ್ರಾಣರಕ್ಷಣೆ ಮುಖ್ಯವೇ ಹೊರತು ನಾಗರಿಕರ ಪ್ರಾಣವಲ್ಲ'
ಎಂದು ಡಚ್ ಸರ್ಕಾರ ಯುದ್ಧಭೂಮಿಯಲ್ಲಿ ಕರ್ತವ್ಯ ನಿರತರಾಗಿದ್ದ ಪಡೆಗಳಿಗೆ
ನೇರ ಆದೇಶ ನೀಡಿರುವ ಬಗ್ಗೆ ನಮ್ಮಲ್ಲಿ ರುಜುವಾತುಗಳಿವೆ ಎನ್ನುತ್ತಾರೆ ಟಿಎಸ್‌ಐ
ಜೊತೆ ಮಾತನಾಡಿದ ಬೋಸ್ನಿಯಾದ ಮಾನವ ಹಕ್ಕು ಸಂಘಟನಾ ಕಾರ್ಯಕರ್ತ ಮತ್ತು
ಸ್ರೆಬ್ರೆನಿಕಾ ಬಲಿಪಶುಗಳ ಮಾತೆಯರ ಸಂಘಟನೆಯ ವಕೀಲ ಸೆಮಿರ್ ಗುಜಿನ್.
ಯುಗೋಸ್ಲೇವಿಯಾದ ಘರ್ಷಣೆಗಳಿಗೆ ಸಂಬಂಧಿಸಿದಂತೆ ನಡೆದಿರುವ
ಯುದ್ಧಾಪರಾಧಗಳನ್ನು ನೋಡಿಕೊಳ್ಳಲು ರಚಿಸಲಾಗಿರುವ ವಿಶ್ವಸಂಸ್ಥೆ
ಯುದ್ಧಾಪರಾಧಗಳ ನ್ಯಾಯಾಧಿಕರಣ ಸ್ರೆಬ್ರೆನಿಕಾ ನರಮೇಧಕ್ಕೆ ಸಂಬಂಧಪಟ್ಟಂತೆ
ಎರಡು ಪ್ರಮುಖ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ.
ಬೋಸ್ನಿಯಾದಲ್ಲಿ ಸರ್ಬ್ ಪಡೆಗಳ ನೇತೃತ್ವ
ವಹಿಸಿದ್ದ ಜನರಲ್ ರಾಟ್ಕೋ ಮಾಲ್ಡಿಕ್ ಮತ್ತು ಬೋಸ್ನಿಯಾದ ಸರ್ಬ್‌ಗಳ ಹಿರಿಯ
ರಾಜಕೀಯ ಮುಖ್ಯಸ್ಥ ರಾಡೋವನ್ ಕಾರಾಡ್ಜಿಕ್‌ರನ್ನು ವಿಶ್ವಸಂಸ್ಥೆ ಇನ್ನೂ
ಶೋಧಿಸುತ್ತಲೇ ಇದೆ!
ಈ ನಡುವೆ ಹಲವು ದೇಶಗಳು ನ್ಯಾಯಾಲಯದ ಆದೇಶಕ್ಕಾಗಿ ಕಾತುರರಾಗಿದ್ದಾರೆ.
ಸೇನಾಪಡೆಗಳು ಕಾರ್ಯ ನಿರ್ವಹಿಸಿದ ರೀತಿಯಿಂದಾಗಿ
ನೆದರ್‌ಲ್ಯಾಂಡ್ ಅಪರಾಧಿ ಸ್ಥಾನದಲ್ಲಿ ನಿಂತುಕೊಂಡಲ್ಲಿ,
ಶಾಂತಿ ಸ್ಥಾಪನೆ ಕಾರ್ಯಾಚರಣೆ ನಡೆಸಲು
ಸೇನಾಪಡೆಗಳನ್ನು ಕಳುಹಿಸುವ ಇತರ ಸರ್ಕಾರಗಳಿಗೂ ಎಚ್ಚರಿಕೆಯ ಗಂಟೆಯಾಗಲಿದೆ.
ಟಿಎಸ್‌ಐ
ಸೌರಭ್ ಕುಮಾರ್ ಶಾಹಿ
ನಿಕ್ಷೇಪ: ವಿವಾದ
ಸಂಬಂಧ ಸುಧಾರಣೆಯತ್ತ ಏಷ್ಯಾ ದೈತ್ಯರು
ಅನಿಲ ವಿವಾದ ಬಗೆಹರಿಸಲು ಒಪ್ಪಂದಕ್ಕೆ ಸಹಿ ಹಾಕಿದ ಚೀನಾ-ಜಪಾನ್

ಕಾಲ ಎಲ್ಲಕ್ಕೂ ಅತ್ಯುತ್ತಮ ಔಷಧಿ.
ತೀವ್ರ ಗಾಯಗಳನ್ನೂ ಇದು ಗುಣಪಡಿಸಿಬಿಡುತ್ತದೆ.
ಇದನ್ನು ನಾವು ಹಲವು ಸಂದರ್ಭಗಳಲ್ಲಿ
ಗಮನಿಸಿದ್ದೇವೆ.
ಈ ಬಾರಿ ಏಷ್ಯಾದ ದೈತ್ಯ ರಾಷ್ಟ್ರಗಳಾದ ಜಪಾನ್ ಮತ್ತು ಚೀನಾ
ಸರದಿ.
ಪರಸ್ಪರ ಕಡುವೈರದಿಂದ ತಮಗೇ ಹಾನಿ ಎನ್ನುವುದನ್ನು ಕೊನೆಗೂ
ಈ ಎರಡೂ ರಾಷ್ಟ್ರಗಳು ಅರಿತುಕೊಂಡಿವೆ.
ಇದೀಗ ಪೂರ್ವ ಚೀನಾ ಸಮುದ್ರದಲ್ಲಿ ನೈಸರ್ಗಿಕ
ಅನಿಲ ನಿಕ್ಷೇಪಗಳ ಮೇಲೆ ನಿಯಂತ್ರಣ ಸಾಧಿಸುವ ಕುರಿತ ವಿವಾದವನ್ನು ಬಗೆಹರಿಸಲು
ಒಪ್ಪಂದವೊಂದಕ್ಕೆ ಸಹಿ ಹಾಕಿವೆ.
ಎರಡು ದೇಶಗಳ ಸಂಬಂಧ ವಾಸ್ತವದಲ್ಲಿ
ವ್ಯಾವಹಾರಿಕ ತಿರುವು ಪಡೆದಿದೆ ಎನ್ನುವುದಕ್ಕೆ ಈ ಅನಿಲ ನಿಕ್ಷೇಪಗಳ ಕುರಿತ
ಒಪ್ಪಂದ ಸಾಕ್ಷಿ.
ಸಂಬಂಧ ಹದಗೆಟ್ಟು ತೀವ್ರ ಸ್ವರೂಪಕ್ಕೆ ಬಂದಿದೆ ಮತ್ತು
ನಿಜವಾದ ಬಿಕ್ಕಟ್ಟು ಸೃಷ್ಟಿಯಾಗುವ ಮುನ್ನ ಕ್ರಮ ಕೈಗೊಳ್ಳಬೇಕು ಎಂದು
ಅರಿತಿವೆ ಎನ್ನುತ್ತಾರೆ ಜಪಾನಿ ತಜ್ಞ.
ಆರಂಭಿಕ ಹಂತದಲ್ಲಿ,
ಈ ಅನಿಲ ನಿಕ್ಷೇಪಗಳು ತಮ್ಮ ಆರ್ಥಿಕ
ನಿಯಂತ್ರಣವಿರುವ ವ್ಯಾಪ್ತಿಯಲ್ಲಿವೆ ಎಂದು ವಾದಿಸಿದ ಚೀನಾ,
ದೊಡ್ಡ ಅನಿಲ ಕ್ಷೇತ್ರಕ್ಕೆ ಚುನ್‌ಕ್ಸಿಯಾವೋ ಎಂದು
ಹೆಸರಿಟ್ಟಿತ್ತು.
ಆದರೆ ಜಪಾನ್ ಇದನ್ನು ವಿರೋಧಿಸಿತ್ತು.
ಆ ಕ್ಷೇತ್ರಗಳು ತಮಗೆ ಸೇರಿದ್ದು ಎಂದ ಜಪಾನ್
ಅವುಗಳಿಗೆ ಶಿರಾಕಬ ಎಂದು ಹೆಸರಿಸಿತ್ತು.
ಹಾಗಿದ್ದರೂ,
ತರುವಾಯ ಈ ಕ್ಷೇತ್ರಗಳ ಅನ್ವೇಷಣೆಯ ನೇತೃತ್ವ
ವಹಿಸುವ ಚೀನಾದ ಪ್ರಸ್ತಾಪಕ್ಕೆ ಜಪಾನ್ ಒಪ್ಪಿಗೆ ಸೂಚಿಸಿತ್ತು.
ಚೀನಾದ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಿ
ಲಾಭಾಂಶವನ್ನು ಹಂಚಿಕೊಳ್ಳಲು ಒಪ್ಪಿತ್ತು.
ಅಂತಿಮವಾಗಿ ಚೀನಾ-ಜಪಾನ್
ಪರಿಹಾರ ಕಂಡುಕೊಂಡಿವೆ.
ಸಹಜವಾಗಿ ಜಪಾನ್‌ಗೆ ಸ್ವಲ್ಪ ಅಳುಕು ಇದ್ದೇ
ಇತ್ತು.
ಏಕೆಂದರೆ ಚೀನಾ ಜಪಾನ್ ವ್ಯಾಪ್ತಿಗೆ ಬರುವ ಪ್ರಾಂತದಲ್ಲಿ
ಅನಿಲ ಬಾವಿ ಕೊರೆಯಲು ವೇದಿಕೆ ಸಜ್ಜು ಮಾಡಿತ್ತು.
ಇದರಿಂದ ಜಪಾನ್ ವ್ಯಾಪ್ತಿಗೆ ಬರುವ ಅನಿಲವನ್ನೂ
ಹೀರಿಕೊಳ್ಳುವ ಅಪಾಯವಿತ್ತು.
ಹಾಗಾಗಿ ಪರಸ್ಪರ ಸಮ್ಮತಿ ಇರುವ ಒಡಂಬಡಿಕೆಯೇ
ಅತ್ಯುತ್ತಮ ಹಾದಿ ಎನ್ನುವುದನ್ನು ಎರಡೂ ದೇಶಗಳು ಅರಿತಿದ್ದವು.
ಪೂರ್ವ ಚೀನಾದ ಸಮುದ್ರದಾಳದಲ್ಲಿ ಇರುವ ಅನಿಲ
ನಿಕ್ಷೇಪಗಳು ಅಷ್ಟೇನೂ ಅಗಾಧವಾಗಿಲ್ಲ.
93
ದಶಲಕ್ಷ ಬ್ಯಾರೆಲ್‌ಗಳಷ್ಟು ಇಂಧನ ಸಾಮರ್ಥ್ಯವಿರುವ ನಿಕ್ಷೇಪಗಳವು.
ಇಷ್ಟೇ ಅಲ್ಲ,
ಚೀನಾ ಮತ್ತು ಜಪಾನ್‌ನ ಮಧ್ಯಭಾಗದ ಪೂರ್ವ
ಪ್ರಾಂತ್ಯದಲ್ಲಿ 3.26
ಶತಕೋಟಿ ಬ್ಯಾರೆಲ್ ಇಂಧನ ಸಾಮರ್ಥ್ಯ ಪಡೆದಿರುವುದಾಗಿ ಜಪಾನ್‌ನ ವಾಣಿಜ್ಯ
ಸಚಿವಾಲಯ ಈಗಾಗಲೇ ಸ್ಪಷ್ಟ ಪಡಿಸಿದೆ.
ಇದರಲ್ಲಿ ಸುಮಾರು
2.03
ಶತಕೋಟಿ ಬ್ಯಾರೆಲ್ ಇಂಧನವನ್ನು ಜಪಾನ್
2006ರಲ್ಲೇ
ಪಡೆದುಕೊಂಡಿದೆ.
ಚೀನಾ-
ಜಪಾನ್ ನಡುವಿನ ಸಂಘರ್ಷ ತುಂಬಾ ಹಳೆಯದು.
ಆದರೆ ಜಗತ್ತಿನ ಎರಡನೇ ಅತಿ ದೊಡ್ಡ ಇಂಧನ ಬಳಸುವ
ದೇಶವಾಗಿರುವ ಚೀನಾ ನಾಲ್ಕು ವರ್ಷಗಳ ಹಿಂದೆ ಏಕಪಕ್ಷೀಯವಾಗಿ ಈ ಭಾಗದ ಅನಿಲ
ನಿಕ್ಷೇಪಗಳಲ್ಲಿ ಇಂಧನ ತೆಗೆಯುವ ಕಾರ್ಯ ಆರಂಭಿಸಿದಾಗ ಈ ಬಿಕ್ಕಟ್ಟು ತೀವ್ರ
ಸ್ವರೂಪ ಪಡೆದಿತ್ತು.
ಇದಕ್ಕೆ ಪ್ರತಿಭಟನೆ ಸೂಚಿಸುವ ನಿಟ್ಟಿನಲ್ಲಿ ಜಪಾನ್ ತನ್ನ
ನೌಕಾಹಡಗುಗಳನ್ನು ಕಳುಹಿಸಿತ್ತಲ್ಲದೆ,
ಈ ಪ್ರಾಂತದ ಭದ್ರತೆಗಾಗಿ ವಾಯುಪಡೆಯ ಕಾವಲು
ಇರಿಸಿತ್ತು.
ಇದಕ್ಕೆ ಪೂರಕವಾಗಿ ಚೀನಾ ಕೂಡ ಜಪಾನ್ ಬಾಡಿಗೆ ಪಡೆದಿದ್ದ
ನಾರ್ವೆ ಮೂಲದ ಹಡಗು ಸಮುದ್ರದಾಳದಲ್ಲಿ ಸಮೀಕ್ಷೆ ನಡೆಸುವುದನ್ನು ತಡೆದಿತ್ತು.
ಶೀಘ್ರವೇ ಈ ವಿವಾದಗಳೆಲ್ಲಾ ಬಗೆಹರಿಯಲಿವೆ ಎಂದು
ಆಶಿಸೋಣ!
ಟಿಎಸ್‌ಐ
ಶಶಾಂಕ್ ತ್ರಿಪಾಠಿ
ಇಸ್ರೇಲ್: ರಾಜಕೀಯ
ತಾತ್ಕಾಲಿಕ ಕದನ ವಿರಾಮ
ಪ್ರತ್ಯೇಕ ಪ್ಯಾಲೆಸ್ತೀನ್ ರಚನೆಯಾದಲ್ಲಿ ಮಾತ್ರ ಶಾಶ್ವತ ಶಾಂತಿ

ಇಸ್ರೇಲಿಗರು ಮತ್ತು ಪ್ಯಾಲೆಸ್ತೀನಿಯನ್ನರು
ಕೆಲ ದಿನಗಳ ಮಟ್ಟಿಗಾದರೂ ಶಾಂತಿಯ ನಿಟ್ಟುಸಿರು ಬಿಟ್ಟಿದ್ದಾರೆ.
ತಿಂಗಳುಗಟ್ಟಲೆ ನಡೆದ ಮಾತುಕತೆ ಬಳಿಕ ಇಸ್ರೇಲ್
ಮತ್ತು ಪ್ಯಾಲೆಸ್ತೀನ್ ಕದನವಿರಾಮಕ್ಕೆ ಒಪ್ಪಿಕೊಂಡಿವೆ.
ಬಹುಶಃ ಸೆರೆ ಸಿಕ್ಕ ಯುದ್ಧ ಕೈದಿಗಳನ್ನು ವಿನಿಮಯ
ಮಾಡಿಕೊಳುವುದು ಈ ಕದನ ವಿರಾಮ ಮೊದಲ ಹೆಜ್ಜೆಯಾಗಲಿದೆ.
ಎರಡೂ ಪಕ್ಷದವರು ತಮ್ಮ ಶತ್ರುತ್ವವನ್ನು ಮರೆಯಲು
ತೀರ್ಮಾನಿಸಿವೆ.
ಸೇನಾ ಕಾರ್ಯಾಚರಣೆ ಸ್ಥಗಿತಗೊಳಿಸಲಿವೆ ಎಂದು ಈ ಕದನ
ವಿರಾಮದಲ್ಲಿ ಮಧ್ಯವರ್ತಿಯಾಗಿದ್ದ ಈಜಿಪ್ಟ್‌ನ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಫೆಬ್ರುವರಿ
2005ರಲ್ಲಿ
ಎರಡನೇ ಇಂಟಿಫಡಾ (ಗಾಜಾ
ಪಟ್ಟಿ ಮೇಲೆ ಆಕ್ರಮಣ ವಿರೋಧಿಸುವ ದಂಗೆ)
ಕೊನೆಯಾದ ಬಳಿಕ ಈ ಪ್ರಾಂತ ಕಂಡ ಸಕಾರಾತ್ಮಕ
ಒಡಂಬಡಿಕೆ ಇದು.
ದೀರ್ಘ ಕಾಲದಿಂದ ಈಜಿಪ್ಟ್‌ನ ಗುಪ್ತಚರ ಇಲಾಖೆಯ
ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಓಮರ್ ಸುಲೇಮಾನ್ ಅವರು
ತಿಂಗಳುಗಟ್ಟಲೆ ನಡೆಸಿದ ಸಂಧಾನಗಳ ನಂತರ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಈ ವಾರದಿಂದ ಜಾರಿಗೆ ಬರಲಿರುವ ಕದನ
ವಿರಾಮವನ್ನು ಎರಡೂ ಪಕ್ಷಗಳೂ ಸಕಾರಾತ್ಮಕವಾಗಿ ತೆಗೆದುಕೊಂಡಿವೆ.
ಪ್ರತಿಭಟನಾಕಾರರು ಶಸ್ತ್ರಾಸ್ತ್ರಗಳನ್ನು
ಬದಿಗಿಟ್ಟು ಒಪ್ಪಂದಕ್ಕೆ ಬೆಲೆ ಕೊಡಬೇಕು ಮತ್ತು ಗಾಜಾಪಟ್ಟಿಯ ಒಳಗೆ ಯಾವುದೇ
ರಾಕೆಟ್ ಉಡಾವಣೆ ಸಲ್ಲದು ಎಂಬ ತನ್ನ ನಿರೀಕ್ಷೆಯನ್ನು ಪ್ಯಾಲೆಸ್ತೀನ್
ಖಡಾಖಂಡಿತವಾಗಿ ತಿಳಿಸಿದೆ.
ಸಕಾಲದಲ್ಲಿ ಕದನವಿರಾಮ ಘೋಷಿಸಲಾಗಿರುವುದನ್ನು
ಇಲ್ಲಿ ಗಮನಿಸಬಹುದು.
ಈ ಹಿಂದೆ ಗಾಜಾಪಟ್ಟಿ ಮೇಲೆ ದಿಗ್ಭಂದನ ಹಾಕುವ ಮೂಲಕ ಹಮಾಸ್‌ಗಳನ್ನು
ಹೊರದಬ್ಬುವಲ್ಲಿ ಅಮೆರಿಕ ಮತ್ತು ಇಸ್ರೇಲ್ ಯಶಸ್ವಿಯಾಗಿದ್ದು
2006ರ
ಚುನಾವಣೆಯಲ್ಲಿ ಸಕಾರಾತ್ಮಕ ಫಲಿತಾಂಶ ಪಡೆಯುವಲ್ಲಿ ನೆರವಾಗಿದ್ದ ನಿಲುವು.
ಆದರೆ ಈ ಬಾರಿ ಮಾತ್ರ ಇಂತಹುದೇ ಪ್ರಯತ್ನಕ್ಕೆ ಕೈ
ಹಾಕಿ ಮಣ್ಣು ಮುಕ್ಕಬೇಕಾಗಿ ಬಂದಿದೆ.
ನಿರ್ನಾಮ ಮಾಡುವುದು ಅಥವಾ ದುರ್ಬಲಗೊಳಿಸುವುದು
ಅಷ್ಟು ಸುಲಭವಲ್ಲ ಎನ್ನುವುದನ್ನು ಹಮಾಸ್‌ಗಳು ತೋರಿಸಿಕೊಟ್ಟಿದ್ದಾರೆ.
ಈಗಲೂ ಅವರೇ ಗಾಜಾ ಪಟ್ಟಿ ಪ್ರಾಂತದಲ್ಲಿ ಆಡಳಿತ
ನಡೆಸುತ್ತಿದ್ದಾರೆ.
ಹಮಾಸ್ ಜೊತೆಗೆ ಕದನವಿರಾಮವೇ ಅತ್ಯುತ್ತಮ ದಾರಿ ಹಾಗೂ
ಕನಿಷ್ಠ ಹಾನಿಕರ ಹಾದಿ ಎನ್ನುವುದನ್ನು ಇಸ್ರೇಲ್ ತಿಳಿದುಕೊಂಡಿದೆ.
ಯುರೋಪ್ ಅಭಿಮತವೂ ಇದೇ ಎನ್ನುತ್ತಾರೆ ಟಿಎಸ್‌ಐ
ಜೊತೆ ಮಾತನಾಡಿದ ಪ್ಯಾಲೆಸ್ತೀನ್ ದಿನಪತ್ರಿಕೆ
'ಫಿಲಾಸ್ತಿನ್'ನ
ಪ್ರಮುಖ ರಾಜಕೀಯ ವಿಮರ್ಶಕ ಡಾ.
ಇಸಾಂ ಶಾವರ್.
ಈ ನಡುವೆ,
ಹಮಾಸ್‌ಗಳು ಗಾಜಾ ಪಟ್ಟಿಯ ಮೇಲೆ ಆಧಿಪತ್ಯ
ಸಾಧಿಸುವ ಮೊದಲು ಇದ್ದುದಕ್ಕಿಂತ ಶೇ.
30ರಷ್ಟು
ಅಗತ್ಯ ವಸ್ತುಗಳ ಪೂರೈಕೆಗೆ ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ
ಇಸ್ರೇಲಿ ನೇತೃತ್ವದ ಕರ್ನಿ ಮತ್ತು ಸುಫಾ ಕ್ರಾಸಿಂಗ್ ಪ್ರಾಂತಗಳು ಶೀಘ್ರವೇ
ಕಾರ್ಯಾಚರಣೆ ಆರಂಭಿಸಲಿವೆ ಎಂದು ಕದನವಿರಾಮ ಮಾತುಕತೆಯಲ್ಲಿ ಭಾಗವಹಿಸಿರುವ
ಪ್ಯಾಲೆಸ್ತೀನ್ ಮೂಲಗಳು ತಿಳಿಸಿವೆ.
10
ದಿನಗಳ ನಂತರ ಕರ್ನಿ ಮತ್ತು ಸೂಫಾಗಳಲ್ಲಿ ನಿರ್ಬಂಧಗಳನ್ನು ಸಡಿಲಿಸಲಾಗುವುದು.
ಬಾರಕ್ ಒಬಾಮಾ ಅವರು ಇಲ್ಲಿ ಕೆಲ ವಿಚಾರಗಳ ಕಡೆ
ಗಮನ ನೀಡಬೇಕು.
ಮೊದಲನೆಯದಾಗಿ ಶಸ್ತ್ರಾಸ್ತ್ರಗಳ ಮೂಲಕ ಹಮಾಸ್‌ಗಳನ್ನು
ಹಿಮ್ಮೆಟ್ಟಿಸುವ ಸಾಧ್ಯತೆಗಳು ಅರ್ಥ ಕಳೆದುಕೊಂಡಿವೆ.
ಎರಡನೆಯದಾಗಿ ಲೆಬನಾನ್ ಬಳಿಕ ಯಾವುದೇ ನಿರ್ದಿಷ್ಟ
ಫಲಿತಾಂಶಗಳಿಲ್ಲದೆ ಸುಮ್ಮನೆ ಅಪಾರ ಜೀವಹಾನಿಗೆ ಅವಕಾಶ ಕೊಡುವ
ಚಟುವಟಿಕೆಗಳತ್ತ ಸಾರ್ವಜನಿಕ ದೃಷ್ಟಿಕೋನವೂ ಬದಲಾಗಿದೆ.
ಆದರೆ ಈ ಹಿಂದೆ ನಾವು ಗಮನಿಸಿರುವಂತೆ ಇಸ್ರೇಲ್
ಶಾಂತಿ ಮಾತುಕತೆಗೆ ಅವಕಾಶ ಕೊಟ್ಟಾಗಲೆಲ್ಲ ಅದನ್ನು ಕಾರ್ಯಗತವಾಗಿಸುವಲ್ಲಿ
ಮಾತ್ರ ಶ್ರದ್ಧೆ ತೋರಿಸಿಲ್ಲ.
ಅಲ್ಲದೆ,
ಅಂತಹ ಒಪ್ಪಂದಗಳೆಲ್ಲಾ ತಾತ್ಕಾಲಿಕ
ಪರಿಹಾರವಾಗಿರುತ್ತಿದ್ದವು.
ಶಾಶ್ವತ ಶಾಂತಿ ನೆಲೆಸಬೇಕಾದಲ್ಲಿ ಅಂತಿಮವಾಗಿ
ಪ್ರತ್ಯೇಕ ಪ್ಯಾಲೆಸ್ತೀನ್ ರಚನೆಯಾಗಲೇಬೇಕು.
ಹಾಗೆಯೇ ಪೂರ್ವ ಜೆರುಸಲೇಮ್‌ನ ಸ್ಥಿತಿಗತಿಯ
ನಿರ್ಣಯವಾಗಬೇಕು.
ಟಿಎಸ್‌ಐ
ಸೌರಭ್ ಕುಮಾರ್ ಶಾಹಿ
|