ಮಕರ
(ಡಿ.22-ಜ.21)
ಕಾರ್ಯಯೋಜನೆಗಳನ್ನು ದಕ್ಷತೆಯಿಂದ ನಿರ್ವಹಿಸುವ ಉದ್ದೇಶದಿಂದ ಮರು ಕಾರ್ಯಾರಂಭಕ್ಕೆ ನಿರ್ಧರಿಸುವಿರಿ. ಈ ವಾರ ಒತ್ತಡಭರಿತ ಕಾರ್ಯಚಟುವಟಿಕೆಗಳಿದ್ದರೂ ಅಲ್ಪಾವಧಿಯ ಗುರಿ ಸಾಧನೆಗೆ ಇವು ಪೂರಕ. ಗೃಹವಲಯದಲ್ಲಿ ಸರ್ವಾಧಿಕಾರಿಯಂತೆ ವರ್ತಿಸಿದರೆ ಭಿನ್ನಾಭಿಪ್ರಾಯಗಳು ಖಂಡಿತ.
ವೃಷಭ
(ಏ.21-ಮೇ.20)
ದುಡುಕಿನ ನಿರ್ಧಾರದಿಂದ ನಿರಾಶೆ ಗೊಳಗಾಗಬಹುದು. ಕೆಲವೊಂದು ವಿಚಾರಗಳಲ್ಲಿ ದ್ವಂದ್ವಗಳಿದ್ದರೆ ಪ್ರೀತಿಪಾತ್ರರ ಸಲಹೆ ಪಡೆಯುವುದು ಉತ್ತಮ. ಕುಶಲತೆಯಿಂದ ಪ್ರೀತಿಪಾತ್ರರೊಂದಿಗಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿ. ಅವಿವಾಹಿತರು ಸಂಗಾತಿಯಿಂದ ಬಯಸುವ ನಿರೀಕ್ಷೆಗಳ ಕುರಿತು ವಾಸ್ತವವಾದಿಯಾಗಿರಿ.
ಕನ್ಯಾ
(ಆ.24-ಸೆ.23)
ಕಾರ್ಯದೊತ್ತಡ ಹೆಚ್ಚಲಿದೆ, ಆದರೆ ಗುರಿಸಾಧನೆಗೆ ಯಾವುದೇ ಅಡ್ಡಿಯಿಲ್ಲ. ಪರಿಣಾಮಕಾರಿ ಸಂವಹನ ಕಲೆ ಮತ್ತು ಸೂಕ್ತ ಸಮಯಕ್ಕಾಗಿ ಕಾಯುವುದರಿಂದ ಕಾರ್ಯಯೋಜನೆಗಳಲ್ಲಿ ಉದ್ಭವಿಸಿದ ಗೊಂದಲಗಳಿಂದ ಪಾರಾಗಬಹುದು. ಒಂದು ವೇಳೆ ನೀವು ಸಾಗಿದ ದಾರಿ ತಪ್ಪೆನಿಸಿದಲ್ಲಿ ದುಡುಕಬೇಡಿ. ಪ್ರೇಮಿಗಳಿಗೆ ಪರ್ವಕಾಲ. ಆರೋಗ್ಯದತ್ತ ನಿರ್ಲಕ್ಷ ಬೇಡ.
ಕುಂಭ
(ಜ.22-ಫೆ.19)
ಕೆಲವೊಂದು ಯೋಜನೆಗಳ ಕುರಿತು ಉತ್ಸಾಹದಲ್ಲಿರುವಿರಿ, ಇದರಿಂದ ಅಗತ್ಯ ಸಂಪನ್ಮೂಲಗಳನ್ನು ಕ್ರೋಡೀಕರಿಸುವಲ್ಲಿ ಗಮನಹರಿಸಲು ಸಾಧ್ಯವಾಗುತ್ತದೆ. ಹೂಡಿಕೆಗೆ ಇದು ಸಕಾಲ. ಪರಸ್ಪರ ಹೊಂದಾಣಿಕೆ ಮತ್ತು ಸಾಮರಸ್ಯದಿಂದ ಪ್ರೇಮಜೀವನದಲ್ಲಿ ಇನ್ನಷ್ಟು ಹುರುಪು. ನಿರ್ಲಕ್ಷ್ಯದಿಂದ ಅನಾಹುತ ಖಂಡಿತ.
ಮಿಥುನ
(ಮೇ.21-ಜೂ.21)
ಅತಿಯಾದ ಆತ್ಮವಿಶ್ವಾಸ, ಅಸಡ್ಡೆಗೆ ಕಾರಣ. ಯಾವುದೇ ವಿಚಾರಗಳ ಕುರಿತು ಸ್ಥೂಲ ಪರಿಚಯ ನಿಮಗಾಗಬೇಕಿದ್ದಲ್ಲಿ, ಸಂಪೂರ್ಣ ಮಾಹಿತಿ ಕಲೆಹಾಕಿ. ವಸ್ತುನಿಷ್ಠ ವಿಶ್ಲೇಷಣೆಗಳು ಸಂಗಾತಿ ಜೊತೆಗಿನ ಸಂಬಂಧ ವೃದ್ಧಿಗೆ ಪೂರಕ. ಪ್ರಯಾಣದಲ್ಲಿ ಎಚ್ಚರಿಕೆಯಿರಲಿ. ಯಾವುದೇ ಸಮಾರಂಭಗಳಲ್ಲಿ ಅವಿವಾಹಿತರು ಕೇಂದ್ರಬಿಂದುಗಳಾಗಿರುತ್ತಾರೆ.
ತುಲಾ
(ಸೆ.24-ಅ.23)
ಕಾರ್ಯಕ್ಷೇತ್ರದಲ್ಲಿ ಸಮರ್ಪಕ ನಿರ್ಧಾರ ಕೈಗೊಳ್ಳಲು ಪ್ರಾಯೋಗಿಕ ದೃಷ್ಟಿಕೋನವೇ ಪೂರಕ ಎಂಬುದು ಮನದಲ್ಲಿರಲಿ. ವೃತ್ತಿರಂಗದಲ್ಲಿನ ಅನಿರೀಕ್ಷಿತ ಸಭೆಗಳಲ್ಲಿ ಹೊಸ ಅವಕಾಶಗಳು ದೊರೆಯಲಿವೆ. ಪ್ರಣಯ ಬದುಕು ಸುಸ್ಥಿರ. ಆರ್ಥಿಕ ಸುಧಾರಣೆಗೆ ಪ್ರಯತ್ನಿಸಿ, ಅನಗತ್ಯ ಒತ್ತಡಗಳಿಗೆ ಬಲಿಯಾಗಬೇಡಿ.
ಮೀನ
(ಫೆ.20-ಮಾ.20)
ಕಾರ್ಯಕ್ಷೇತ್ರದಲ್ಲಿ ವ್ಯವಹರಿಸುವಾಗ ಎಚ್ಚರಿಕೆಯಿರಲಿ. ಲೋಪದೋಷಗಳನ್ನು ನಿರ್ಧರಿಸುವ ಸಂದರ್ಭದಲ್ಲಿ ನಿಮಗೆ ಅರಿವಿಲ್ಲದೆಯೇ ಸುತ್ತಮುತ್ತಲಿನವರೊಂದಿಗೆ ನಿರ್ದಯವಾಗಿ ವರ್ತಿಸಲಿದ್ದೀರಿ. ಕಾರ್ಯಸಾಧ್ಯತೆಗಳ ಕುರಿತು ಸೂಕ್ತ ನಿರ್ಧಾರಕ್ಕೆ ಬರುವ ಮೊದಲು ಈ ಕುರಿತು ಸಂಪೂರ್ಣವಾಗಿ ಪರಿಶೀಲಿಸಿಕೊಳ್ಳಿ.
ಕಟಕ
(ಜೂ.22-ಜು.22)
ನಿಮ್ಮ ಮುಂದಿರುವ ಆಯ್ಕೆಗಳು ಅಸಮರ್ಪಕ ಎಂದೆನಿಸಿದ್ದಲ್ಲಿ ದುಡುಕಿನ ನಿರ್ಧಾರ ಸಲ್ಲದು. ತಾರ್ಕಿಕ ವಿಶ್ಲೇಷಣೆಯಲ್ಲಿ ಭಾವನಾತ್ಮಕ ಜವಾಬ್ದಾರಿಗಳನ್ನು ಸಂಯೋಜಿಸಲು ಸಾಕಷ್ಟು ಕಾಲಾವಕಾಶ ತೆಗೆದುಕೊಳ್ಳಿ. ಪ್ರೇಮಜೀವನ ಸ್ಥಿರ. ವಿದೇಶ ಕುರಿತು ಆಸಕ್ತರಿಗೆ ಶುಭಸುದ್ದಿ. ಆರೋಗ್ಯ ನಿರ್ಲಕ್ಷಿಸಬೇಡಿ.
ವೃಶ್ಚಿಕ
(ಅ.24-ನ.22)
ಕ್ರಿಯಾಶೀಲತೆ ಮತ್ತು ನೈಜತೆಯಿಂದ ಪ್ರಬಲವಾದ ಸ್ಪರ್ಧೆಯಲ್ಲಿ ಜಯಗಳಿಸಲು ಸಾಧ್ಯವಾಗುತ್ತದೆ. ಕಾರ್ಯಕ್ಷೇತ್ರದಲ್ಲಿ ಬಿಡುವಿಲ್ಲದ ಚಟುವಟಿಕೆಗಳು ಒತ್ತಡ ತರಲಿವೆ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ವ್ಯವಹರಿಸುವಾಗ ಮುಂಜಾಗ್ರತೆ ಅಗತ್ಯ. ಈ ನಡುವೆ ಪ್ರೇಮಜೀವನಕ್ಕೆ ಪ್ರಾಶಸ್ತ್ಯವಿರಲಿ ಮತ್ತು ಸಂಗಾತಿ ಜೊತೆ ಹೆಚ್ಚು ಸಮಯ ಕಳೆಯಿರಿ. ಆಕಸ್ಮಿಕ ಲಾಭ.
ಮೇಷ
(ಮಾ.21-ಏ.20)
ಮುಂಬರುವ ಸಭೆ ಮತ್ತು ಚರ್ಚೆಗಳಲ್ಲಿ ನಿಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಸ್ಪಷ್ಟ ಯೋಚನಾಲಹರಿ ರಹದಾರಿಯಾಗಲಿದೆ. ಆಪ್ತರು ಅಥವಾ ಸಹೋದ್ಯೋಗಿಗಳು ನಿಮ್ಮ ಕಾರ್ಯಗಳನ್ನು ಪರಿಗಣಿಸದಿದ್ದಲ್ಲಿ ಅದನ್ನು ತೀರ ಮನಸ್ಸಿಗೆ ಹಚ್ಚಿಕೊಳ್ಳಬೇಡಿ; ಅವರು ಸ್ವಂತ ಕಾರ್ಯಗಳ ಒತ್ತಡದಲ್ಲಿದ್ದಾರೆಂಬುದನ್ನು ಅರಿತುಕೊಳ್ಳಿ.
ಸಿಂಹ
(ಜು.23-ಆ.23)
ಹೊಸ ಅವಕಾಶಗಳು ಮತ್ತು ವೃತ್ತಿರಂಗದ ಆಯ್ಕೆಗಳ ಕುರಿತು ಆಶಾವಾದಿಗಳಾಗಿರುವಿರಿ. ನಿಮ್ಮ ಕಾರ್ಯಸೂಚಿಗಳನ್ನು ಯೋಜಿಸಲು ಉತ್ತಮ ಅವಕಾಶಗಳು ನಿಮಗಿವೆ. ಪ್ರೀತಿಪಾತ್ರರೊಂದಿಗೆ ಮಾನಸಿಕ ಕ್ಷೆಭೆ ಹೆಚ್ಚಲಿದೆ. ಪ್ರೇಮಜೀವನದಲ್ಲಿಯೂ ಭಿನ್ನಾಭಿಪ್ರಾಯ ಖಚಿತ. ಅನಿರೀಕ್ಷಿತ ಖರ್ಚುಗಳಿಂದ ಆರ್ಥಿಕ ಬಿಕ್ಕಟ್ಟು.
ಧನು
(ನ.23-ಡಿ.21)
ನಿಮ್ಮ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಲು ಹೊಸ ಅವಕಾಶಗಳ ಸುಯೋಗ. ನಿಮ್ಮ ಯೋಚನೆಗಳ ಕುರಿತು ಆಪ್ತರ ಜೊತೆ ಚರ್ಚಿಸಿ ಹಾಗೂ ಅವರ ಸಲಹೆಗಳನ್ನು ಮುಕ್ತವಾಗಿ ಸ್ವೀಕರಿಸಿ. ಸಂಗಾತಿ ಜೊತೆ ನಿಮ್ಮ ವಸ್ತುನಿಷ್ಠ ಚರ್ಚೆ ಮುಂದುವರಿಯಲಿದೆ. ಆರ್ಥಿಕ ಸುಸ್ಥಿರತೆ. ಮನೆ ಖರೀದಿಗೆ ಸಕಾಲ.
ಟಿ.ಎಸ್.ಐ |