ಆಫ್ರಿಕಾ: ಹಣದುಬ್ಬರ
ಸಿಡಿಲು ಬಡಿದವನಿಗೆ ಹಾವು ಕಚ್ಚಿತು!
ಸಿಡಿಲು ಬಡಿದವನಿಗೆ ಹಾವು ಕಚ್ಚಿತು!

ಯಾರು ಸಹಾಯವನ್ನು ಅಪೇಕ್ಷಿಸುತ್ತಿದ್ದಾರೋ ಅವರೇ
ತಮ್ಮ ಅಭಿವೃದ್ಧಿ ಪಥಕ್ಕೆ ಅಡ್ಡಗಾಲಾಗಿದ್ದಾರೆ ಎಂಬುದು ವಿಚಿತ್ರವೆನಿಸಿದರೂ
ಕಟು ವಾಸ್ತವ.
ಇತ್ತೀಚೆಗೆ ಬರ ಹಾಗೂ ಪ್ರವಾಹದಿಂದ
(ಆ ದೇಶದ ಮಾಮೂಲು
ಪರಿಸ್ಥಿತಿ)
ಕಂಗೆಟ್ಟ ಮೊಝಾಂಬಿಕ್ ಈಗ ಹಣದುಬ್ಬರದ ಬಲಿಪಶು.
ದಿನೋಪಯೋಗಿ ಆಹಾರ ಧಾನ್ಯಗಳ ಬೆಲೆ ಗಗನಕ್ಕೇರಿ
ಕಂಗಾಲಾಗಿರುವ ಸೂಡಾನ್,
ಸೋಮಾಲಿಯಾ,
ಸೆನೆಗಲ್,
ನೈಜೀರಿಯಾ,
ಇಥಿಯೋಪಿಯಾ,
ಉಗಾಂಡಾ ಮುಂತಾದ ಆಫ್ರಿಕಾದ ಬಡ ರಾಷ್ಟ್ರಗಳ ಪಟ್ಟಿಗೆ
ಮೊಝಾಂಬಿಕ್ ಹೊಸ ಸೇರ್ಪಡೆ.
ಇತರ ಆಫ್ರಿಕನ್ ರಾಷ್ಟ್ರಗಳಂತಲ್ಲದೆ ಸುಭದ್ರ
ರಾಜಕೀಯ ವ್ಯವಸ್ಥೆ ಹೊಂದಿದ್ದೇವೆ ಎಂದು ಕೊಚ್ಚಿಕೊಳ್ಳುವ ಮೊಝಾಂಬಿಕ್
ಭ್ರಷ್ಟಾಚಾರದ ವಿಷಯ ಬಂದಾಗ ತಲೆ ತಗ್ಗಿಸಲೇಬೇಕು.
ಎಲ್ಲೆ ಮೀರಿ ಬೆಳೆದಿರುವ ಭ್ರಷ್ಟಾಚಾರದ ಭೂತ
ಮೊಝಾಂಬಿಕ್ ಪಾಲಿಗೆ ಬಗೆಹರಿಯಲಾಗದ ಸಮಸ್ಯೆ ಎನ್ನಲು ಅಡ್ಡಿಯಿಲ್ಲ.
ಈಗಾಗಲೇ ಹಲವಾರು ಸಮಸ್ಯೆಗಳಿಂದ ನಲುಗುತ್ತಿರುವ ಈ
ರಾಷ್ಟ್ರದ ಮೇಲೆ ಪ್ರಕೃತಿಯೂ ಮುನಿಸಿಕೊಂಡಂತಿದೆ.
ಗಾಯದ ಮೇಲೆ ಬರೆ ಎಳೆದ ಹಾಗೆ ಪ್ರಾಕೃತಿಕ ವಿಕೋಪ
ಹಾಗೂ ಆರ್ಥಿಕ ವಿಷಮತೆ ಏಕಕಾಲಕ್ಕೇ ಅಪ್ಪಳಿಸಿದಾಗ ಭ್ರಷ್ಟಾಚಾರ ಒಂದು
ರಾಷ್ಟ್ರದ ಪರಿಸ್ಥಿತಿಯನ್ನು ತೀರಾ ಹದಗೆಡಿಸಿಬಿಡುತ್ತದೆ.
ಭ್ರಷ್ಟಾಚಾರದ ಕೊಂಪೆಯಾಗಿರುವ ಆ ರಾಷ್ಟ್ರದ ಬಗ್ಗೆ
ಹೇಳದಿರುವುದೇ ಒಳಿತು.
ಮಾಪುಟೊ ರಸ್ತೆಯಲ್ಲಿ ಪತ್ರಕರ್ತ ಕಾರ್ಲೊಸ್ ಕಾರ್ಡೊಸೊನ
ಹತ್ಯೆ;
ಸಾಮಾಜಿಕ ಭದ್ರತೆಯ 8
ದಶಲಕ್ಷ ಡಾಲರ್‌ಗಳ ನಾಪತ್ತೆ;
ಕೊನೆಗೆ ದರೋಡೆ ಎಂಬ ಶಂಕೆ ಇವೆಲ್ಲವೂ ಆ ದೇಶದ
ಭ್ರಷ್ಟಾಚಾರಕ್ಕೆ ಕೆಲವು ನಿದರ್ಶನಗಳಷ್ಟೇ.
ಈ ಮಧ್ಯೆ ಆ ದೇಶಕ್ಕೆ ಅಪ್ಪಳಿಸಿರುವ ಬರಗಾಲ ಅಲ್ಲಿನ
ಜನರ ಜೀವನವನ್ನು ಮತ್ತಷ್ಟು ದುಸ್ತರಗೊಳಿಸಿದೆ.
ಪ್ರತಿಯೊಂದಕ್ಕೂ ಸರ್ಕಾರದ ನೆರವಿಗಾಗಿ ಕಾದು
ಕುಳಿತುಕೊಂಡಿರಬೇಕಾದ ಪರಿಸ್ಥಿತಿ ಅಲ್ಲಿನ ನಾಗರಿಕರನ್ನು ಕಂಗೆಡಿಸಿದೆ.
ಜೀವ ಉಳಿಸಿಕೊಳ್ಳುವುದಕ್ಕಾಗಿ ಒಂದು ಹೊತ್ತಿನ ಆಹಾರ
ತಿನ್ನೋಣ ಎಂದರೆ ಅದಕ್ಕೂ ಹಣದುಬ್ಬರದ ಬಿಸಿ ತಟ್ಟಿದೆ.
ಪ್ರಯತ್ನ ಪಟ್ಟರೆ ಕೆಲವೇ ತಿಂಗಳಲ್ಲಿ ಶೇ
.40ರಷ್ಟು
ಹೆಚ್ಚಳ ಕಂಡ ದಿನೋಪಯೋಗಿ ಆಹಾರ ಧಾನ್ಯಗಳ ಬೆಲೆಯನ್ನು ಹತೋಟಿಗೆ ತರಲು
ಸಾಧ್ಯವಾಗಬಹುದೇನೋ.
ಆದರೆ ಮಾಪುಟೊದಲ್ಲಿ ಒಂದೇ ಒಂದು ವರ್ಷದ ಅವಧಿಯಲ್ಲಿ ಶೇ.
43ರಷ್ಟು
ಹೆಚ್ಚಳ ಕಂಡ ಜೋಳದ ಬೆಲೆಯನ್ನು ಇಳಿಸುವ ಪರಿಯಾದರೂ ಏನು?
ಆಗಸ್ಟ್ ತಿಂಗಳ ಒಳಗಾಗಿ ಕನಿಷ್ಠ
1.25
ದಶಲಕ್ಷ ಟನ್ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳಬೇಕು,
ಆಹಾರ ಧಾನ್ಯಗಳ ಬೆಲೆ ಗಗನಕ್ಕೇರಿದ್ದರೂ
4,71,000
ನೆರೆ ಹಾಗೂ ಬರ ಪೀಡಿತರಿಗೆ 25,600
ಮೆಟ್ರಿಕ್ ಟನ್‌ಗಳಷ್ಟು ಆಹಾರ ವಿತರಿಸಬೇಕು ಹಾಗೂ
99,248ರಷ್ಟು
ನಿರ್ಗತಿಕರಿಗೆ ಪುನರ್ವಸತಿ ಒದಗಿಸಿದರೂ ದೇಶದೊಳಗಿನ ಪ್ರಕ್ಷುಬ್ಧ
ವಾತಾವರಣದಿಂದಾಗಿ ಪ್ರಸ್ತುತ ಪರಿಸ್ಥಿತಿ ಹತೋಟಿಗೆ ಬರುವಂಥ ಯಾವುದೇ ಲಕ್ಷಣಗಳೂ
ಕಾಣುತ್ತಿಲ್ಲ ಎಂಬುದು ಮೊಝಾಂಬಿಕ್ ಸರ್ಕಾರಕ್ಕೂ ಅರ್ಥವಾಗಿದೆ.
ಲೂಟಿ,
ರಸ್ತೆ ತಡೆ,
ಟಯರುಗಳಿಗೆ ಬೆಂಕಿ ಇವೆಲ್ಲವೂ ಬಸ್ ಪ್ರಯಾಣ ದರ
ಏರಿಕೆಯ ಪರಿಣಾಮಗಳು.
ಇವೆಲ್ಲವೂ ಮೊಝಾಂಬಿಕ್ ಎಂಬ ರಾಷ್ಟ್ರದ ಉದ್ವಿಗ್ನ
ಪರಿಸ್ಥಿತಿಯ ತುಣುಕುಗಳು ಮಾತ್ರ.
ನಿಜ ಹೇಳಬೇಕೆಂದರೆ ಈ ಪ್ರಕ್ಷುಬ್ಧ ಪರಿಸ್ಥಿತಿ ಕಾಲ
ಸರಿದಂತೆ ಹೆಚ್ಚುತ್ತಲೇ ಇದೆ ಮತ್ತು ಬೆಂಕಿಗೆ ತುಪ್ಪ ಒದಗಿಸುತ್ತಲೇ ಇದೆ.
ಇವೆಲ್ಲದಕ್ಕೂ ಯಾರು ಹೊಣೆ?
ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಹುಡುಕುವುದು
ಕಷ್ಟಸಾಧ್ಯವೆ.
ಆದರೆ ನೈಸರ್ಗಿಕ ಹಾಗೂ ಆರ್ಥಿಕ ಬಿಕ್ಕಟ್ಟುಗಳಿಂದ ಕಂಗೆಟ್ಟ
ದೇಶದಲ್ಲಿ ಜನರೂ ದಂಗೆ ಏಳುತ್ತಿರುವುದು ಮಾತ್ರ ವಿಪರ್ಯಾಸ.
ಸಿಡಿಲು ಬಡಿದವನಿಗೆ ಹಾವು ಕಚ್ಚಿತು ಅನ್ನೋದು
ಇದಕ್ಕೇ ಇರಬೇಕು!
ಐಐಪಿಎಂ
'ಥಿಂಕ್ ಟ್ಯಾಂಕ್
ತನಯಾ ಬೋಸ್
ಮಣಿಪುರ: ಪರವಾನಗಿ
ಆತ್ಮರಕ್ಷಣೆಯೂ ಒಂದು ಹಕ್ಕು!
ಈ ನೀತಿ ಜಾರಿಗೆ ಬಂದಲ್ಲೆಲ್ಲಾ ಆಕ್ರಮಣಗಳ ಸಂಖ್ಯೆ ಸಾಕಷ್ಟು ಕಡಿಮೆಯಾಗಿದೆ

ತೌಬಾಲ್ ಹಾಗೂ ಇಂಫಾಲ ಪಶ್ಚಿಮ
ಜಿಲ್ಲೆಗಳಲ್ಲಿರುವ ಹೈರೋಕ್ ಹಾಗೂ ಚಾಜಿಂಗ್ ಕೋಜೆಂಗ್ ಲೈಕಾಯಿ
ಗ್ರಾಮಗಳಲ್ಲಿನ ಸುಮಾರು 500
ಯುವ ಸ್ವಯಂಸೇವಕರಿಗೆ ಬಂದೂಕಿನ ಪರವಾನಗಿ ನೀಡಲು ಮಣಿಪುರ ಸರ್ಕಾರ
ನಿರ್ಧರಿಸಿದೆ.
ಕಾಂಗ್ಲೈಪಾಕ್‌ನ
'ಪೀಪಲ್ಸ್
ರೆವಲೂಷನರಿ ಪಾರ್ಟಿ'ಯ
ದಾಳಿಗೆ ಹೈರೋಕ್‌ನ ಮೂರು ಜನರು ಹಾಗೂ
'ಕಾಂಗ್ಲೈಪಾಕ್
ಕಮ್ಯುನಿಸ್ಟ್ ಪಾರ್ಟಿ'
(ಕೆಸಿಪಿ)ಯ
ಅಟ್ಟಹಾಸಕ್ಕೆ ಚಾಜಿಂಗ್ ಕೋಜೆಂಗ್ ಲೈಕಾಯಿನ ಜನರು ಮೃತಪಟ್ಟ ಹಿನ್ನೆಲೆಯಲ್ಲಿ
ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಶೋಷಿತರು ಹಾಗೂ ಹಿಂದುಳಿದವರ ಉದ್ಧಾರಕ್ಕಾಗಿಯೇ
ನಾವು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡವರು ಎಂದು ಭಾರೀ ಭಾಷಣ
ಬಿಗಿಯುವವರಿಂದಲೇ ಪದೇ ಪದೇ ಕ್ರೂರ ಆಕ್ರಮಣಗಳನ್ನೂ,
ಕಿರುಕುಳಗಳನ್ನೂ ಎದುರಿಸಿ ರೋಸಿ ಹೋದ ಜನರು
ಆತ್ಮರಕ್ಷಣೆಗಾಗಿ ಸರ್ಕಾರದ ಬಳಿ ಶಸ್ತ್ರಾಸ್ತ್ರಗಳಿಗೆ ಬೇಡಿಕೆ ಇತ್ತಿದ್ದಾರೆ.
ಸರ್ಕಾರ ಜನರ ಬೇಡಿಕೆಗೆ ಒಪ್ಪಿದ ಮರುಕ್ಷಣವೇ
ಬಂಡುಕೋರ ಗುಂಪುಗಳಲ್ಲಿ ವಿಚಿತ್ರ ಗೊಂದಲ-
ಕಂಪನ ಮನೆ ಮಾಡಿದ್ದು ಸುಳ್ಳಲ್ಲ.
ಅದೇ ರೀತಿ ಮಾನವ ಹಕ್ಕುಗಳ ಕಾರ್ಯಕರ್ತರೂ ಇದು
ಮಣಿಪುರದ ಜನರು ಒಬ್ಬರನ್ನೊಬ್ಬರು ಕೊಂದು ಸಾಯಲು ಸರ್ಕಾರ ನೀಡಿದ ಪರವಾನಗಿ
ಎಂದು ಸರ್ಕಾರವನ್ನು ಈ ಬಾರಿ ಘಂಟಾಘೋಷವಾಗಿಯೇ ಹಳಿದರು.
ಹಲವರು ಛತ್ತೀಸ್‌ಗಢದ ಸಲ್ವಾ ಜುಡಂ ಚಳವಳಿ ಹಾಗೂ
ಜಮ್ಮು ಮತ್ತು ಕಾಶ್ಮೀರದ 'ಗ್ರಾಮ
ರಕ್ಷಣಾ ಸಮಿತಿ'ಗಳ
ನಡುವಿನ ಸಾದೃಶ್ಯವನ್ನು ಬಿಡಿಸಿಡತೊಡಗಿದರು.
ಈ ಸಲ್ವಾ ಜುಡಂ ಹಾಗೂ
'ಗ್ರಾಮ ರಕ್ಷಣಾ
ಸಮಿತಿ'ಗಳಲ್ಲಿ
ಬಂಡುಕೋರರನ್ನು ಹತ್ತಿಕ್ಕುವ ಸರ್ಕಾರದ ಯತ್ನಕ್ಕೆ ನೆರವಾಗಲು ಗ್ರಾಮೀಣರನ್ನು
ವಿಶೇಷ ಪೊಲೀಸ್ ಅಧಿಕಾರಿಗಳನ್ನಾಗಿಸಿ ಅವರ ಕೈಗೆ ಶಸ್ತ್ರಾಸ್ತ್ರಗಳನ್ನು
ನೀಡಲಾಯಿತು.
ಬಂಡುಕೋರರ ಹುಟ್ಟಡಗಿಸಲು ನಾಗರಿಕರ ಕೈಗೆ ಬಂದೂಕು
ನೀಡುವುದು ಹಾಗೂ ಸಾಮಾನ್ಯವಾಗಿ ಸಶಸ್ತ್ರ ಪಡೆಗಳು ಮಾಡುವ ಕೆಲಸವನ್ನು
ನಾಗರಿಕರು ಮಾಡುವುದು ಎಂದಿದ್ದರೂ ಚರ್ಚಾರ್ಹ ವಿಷಯವೇ.
ಆದಾಗ್ಯೂ ಇಂಥ ನೀತಿ ಜಾರಿಗೆ ಬಂದಲ್ಲೆಲ್ಲಾ
ಮುಗ್ಧ ಜನರ ಮೇಲಿನ ಆಕ್ರಮಣ ಹತೋಟಿಗೆ ಬಂದಿದೆ.
ಜಮ್ಮು ಕಾಶ್ಮೀರದಲ್ಲಿ ಉಗ್ರಗಾಮಿಗಳ ಹಾವಳಿ
ಗಣನೀಯವಾಗಿ ಕಡಿಮೆಯಾಗಿದ್ದು ಜನಜೀವನ ಸಾಮಾನ್ಯವಾಗಿದೆ ಮಾತ್ರವಲ್ಲದೆ ಸಂತೋಷ್
ಟ್ರೋಫಿ ಮುಂತಾದ ಕ್ರೀಡಾಕೂಟಗಳೂ ಅಲ್ಲಿ ನಡೆಯತೊಡಗಿವೆ.
ಛತ್ತೀಸ್‌ಗಢದಲ್ಲಿನ ಬದಲಾದ ಪರಿಸ್ಥಿತಿ,
ದಸ್ತಗಿರಿ ಹಾಗೂ ಗಣನೀಯವಾಗಿ ಇಳಿಯುತ್ತಿರುವ
ಸದಸ್ಯರ ಸಂಖ್ಯೆ ನಕ್ಸಲರಲ್ಲಿ ನಡುಕ ಹುಟ್ಟಿಸಿದೆ.
ಅಲ್ಲದೆ ಸಲ್ವಾ ಜುಡಂ ಶಿಬಿರಗಳ ಮೇಲಿನ ದಾಳಿಯೂ
ಕಡಿಮೆಯಾಗಿದೆ.
ನಾಗರಿಕರ ಕೈಗೆ ಶಸ್ತ್ರಾಸ್ತ್ರಗಳನ್ನು ನೀಡುವುದು ಸಣ್ಣ
ಪುಟ್ಟ ಗೆಲುವುಗಳನ್ನು ನೀಡಿದರೂ ಸೂಕ್ತ ನಿರ್ವಹಣೆ ಇಲ್ಲದೇ ಹೋದರೆ ಮುಂದೆ
ಗಂಡಾಂತರವನ್ನೇ ಎದುರಿಸಬೇಕಾಗುತ್ತದೆ ಎಂಬ ಮಾತನ್ನು ತಳ್ಳಿಹಾಕಲಾಗುವುದಿಲ್ಲ.
ಆದರೆ ಪ್ರತಿ ಒಂದು ಲಕ್ಷ ಜನರಿಗೆ ಕೇವಲ
142
ಪೊಲೀಸರಿರುವ ಈ ನಾಡಿನಲ್ಲಿ (ಗ್ರಾಮಾಂತರ
ಪ್ರದೇಶಗಳಲ್ಲಿ ಈ ಅನುಪಾತ ಇನ್ನಷ್ಟು ಆಭಾಸಕಾರಿಯಾಗಿದೆ)
ಮಾನವ ಹಕ್ಕುಗಳ ಕಾರ್ಯಕರ್ತರನ್ನು ಸಮಾಧಾನಪಡಿಸುವ
ಒಂದೇ ಒಂದು ಕಾರಣಕ್ಕೆ ಮುಗ್ಧ ಜನರನ್ನು ಬಂಡುಕೋರರ,
ಉಗ್ರಗಾಮಿಗಳ ಮುಂದೆ ಎಸೆಯುವುದು ಎಷ್ಟು ಸರಿ?
ಭ್ರಷ್ಟಾಚಾರ,
ಅಧಿಕಾರಶಾಹಿ ನೀತಿ,
ಸರ್ಕಾರದ ಅಸಡ್ಡೆ,
ಗ್ರಾಮೀಣ ಹಾಗೂ ನಗರ ಭಾರತದ ನಡುವಿನ ಆಳ ಕಂದರ
ಮುಂತಾದ ಹತ್ತು ಹಲವು ಕಾರಣಗಳು ಕಾಶ್ಮೀರ,
ಛತ್ತೀಸ್‌ಗಢ ಅಥವಾ ಮಣಿಪುರದ ಕುಗ್ರಾಮವೊಂದನ್ನು
ಬೇಕಾದ ಸೌಲಭ್ಯದಿಂದ ವಂಚಿವಾಗಿಸುತ್ತಿವೆ.
ಇಂಥ ಪ್ರದೇಶಗಳಲ್ಲಿನ ಜನರ ಕೈಗೇ
ಶಸ್ತ್ರಾಸ್ತ್ರಗಳನ್ನು ನೀಡಿಯಾದರೂ ಸರ್ಕಾರ ಅವರ ಜೀವ ಉಳಿಸಲಿ.
ಬಂಡುಕೋರರ ಅಮಾನವೀಯ ಕೃತ್ಯಗಳಿಗೆ ಜಾಣ ಕುರುಡು
ತೋರಿ,
ಸಾವು ನೋವು ಸಂಭವಿಸಿದಾಗ ಮಾತ್ರ ದನಿಯೆತ್ತುವ ಮಾನವ
ಹಕ್ಕುಗಳ ಕಾರ್ಯಕರ್ತರಿಗೆ ಒಂದು ಮಾತು ನೆನಪಿರಲಿ,
ಆತ್ಮರಕ್ಷಣೆಯೂ ಒಂದು ಮಾನವ ಹಕ್ಕು...
ಐಐಪಿಎಂ
'ಥಿಂಕ್ ಟ್ಯಾಂಕ್'
ಪಥಿಕೃತ್ ಪಾಯ್ನೆ
|