|

'ಕಾಡ
ಬೆಳದಿಂಗಳು'
ಕಥೆ ಸಿನಿಮಾ ಮಾಡಬೇಕೆಂದು ಏಕನಿಸಿತು?
'ಕಾಡ
ಬೆಳದಿಂಗಳು'
ಕಥೆ ಪ್ರಸ್ತುತ ಕಾಲಘಟ್ಟಕ್ಕೆ ಅನ್ವಯಿಸುತ್ತದೆ. ಈಗಿನ ಕಾಲದಲ್ಲಿ ಮಕ್ಕಳು
ವೃದ್ಧ ತಂದೆ-ತಾಯಿಯರನ್ನು ಬಿಟ್ಟು ನೆಲೆಸುತ್ತಾರೆ. ನಾನೂ ಇದಕ್ಕೆ ಹೊರತಲ್ಲ.
ಈ ಚಿತ್ರ ನಿರ್ದೇಶನದ ಅನುಭವ
ಹೇಗಿತ್ತು?
ಅದ್ಭುತ ಅನುಭವ. ನಾನಷ್ಟೇ ಅಲ್ಲ; ಒಂಬತ್ತು
ಜನರ ತಂಡ ಒಟ್ಟಾಗಿ ಚಿತ್ರಕ್ಕೆ ದುಡಿದಿದ್ದೇವೆ. ಒಳ್ಳೆ ಚಿತ್ರವನ್ನು ಜನರಿಗೆ
ನೀಡಬೇಕೆಂಬುದೇ ನನ್ನ ಉದ್ದೇಶವಾಗಿತ್ತು.
ಸೃಜನಶೀಲ ಚಿತ್ರಗಳು ಕನ್ನಡದಲ್ಲಿ
ಕಡಿಮೆಯಾಗುತ್ತಿರಲು ಕಾರಣ?
ನಮ್ಮ ವ್ಯವಸ್ಥೆ ಸೃಜನಶೀಲ ಚಿತ್ರಗಳಿಗೆ
ಪೂರಕವಾಗಿಲ್ಲ. ಮಾರುಕಟ್ಟೆ ಬೇಕು, ಅದಕ್ಕಾಗಿ ಕಮರ್ಶಿಯಲ್ ಚಿತ್ರಗಳನ್ನು
ಮಾಡುತ್ತಿದ್ದಾರೆ. ಜನರ ನಾಡಿಮಿಡಿತವನ್ನು ಅರ್ಥಮಾಡಿಕೊಳ್ಳದೆ ಕೇವಲ
ದುಡ್ಡಿಗಾಗಿ ಚಿತ್ರ ನಿರ್ಮಾಣ
ಮಾಡುತ್ತಿರುವುದು ಕನ್ನಡ
ಚಿತ್ರಗಳು
ಸೋಲಲು ಪ್ರಮುಖ ಕಾರಣ.
ಪ್ರಭಾವಿಗಳಿಗಷ್ಟೇ ಪ್ರಶಸ್ತಿ ಸಿಗುತ್ತೆ ಎಂಬ
ಅಭಿಪ್ರಾಯವಿದೆಯಲ್ಲಾ... ಏನೂ ಇಲ್ಲದೇ ಎಲ್ಲಾ ಸಿಗುತ್ತೆ ಅಂದುಕೊಳ್ಳುವುದು
ತಪ್ಪು. ಕೆಲವೊಮ್ಮೆ ಪ್ರಶಸ್ತಿಗೆ ಆಯ್ಕೆ ಮಾಡುವಾಗ ಒಳ ರಾಜಕೀಯ ನಡೆಯಬಹುದು.
ಹಾಗೆಂದು ಪ್ರಶಸ್ತಿಗಳೆಲ್ಲಾ ಪ್ರಭಾವಿಗಳಿಗೇ ಸಿಗುತ್ತೆ ಎಂದರೆ ತಪ್ಪಾದೀತು.
ಮುಂದಿನ ಯೋಜನೆಗಳು?
ಟಿ.ವಿ. ಚಾನೆಲ್‌ಗಳಲ್ಲಿನ ಮಕ್ಕಳ
'ರಿಯಾಲಿಟಿ ಶೋ'ಗಳನ್ನು
ಆಧರಿಸಿ ಚಿತ್ರ ನಿರ್ದೇಶಿಸಬೇಕೆಂಬ ಆಸೆ.
ಟಿಎಸ್‌ಐ
ಚಿತ್ರಾ ಕರ್ಕೇರಾ
|