ಭೋಪಾಲ್ ದುರಂತದ ವಿಷತ್ಯಾಜ್ಯಗಳು ಇನ್ನೂ ಉಳಿದಿದ್ದು, ನಗರವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡಿದೆ.
ಏಕೆ?
1984
ರಲ್ಲಿ ಭೋಪಾಲ್
ನಗರದ `ಯೂನಿಯನ್
ಕಾರ್ಬೈಡ್`
ಕಾರ್ಖಾನೆಯಲ್ಲಿ ದೊಡ್ಡ ಮಟ್ಟದ ಅನಿಲ ದುರಂತ ಸಂಭವಿಸಿತು. ಮೀಥೈಲ್ ಐಸೋ ಸಯನೈಡ್
ಅನಿಲ ಸೋರಿಕೆಯಿಂದಾಗಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡರು. ಈ ದುರಂತ ನಡೆದು
೨೪ ವರ್ಷಗಳೇ ಕಳೆದಿದ್ದರೂ ಇನ್ನೂ ವಿಷತ್ಯಾಜ್ಯಗಳು ಸ್ಥಳದಲ್ಲೇ ಇದ್ದು ಇವುಗಳ
ಪ್ರಮಾಣ ೩೭೬ ಟನ್‌ಗಳಷ್ಟಿವೆ. ಪರಿಣಾಮವಾಗಿ ಈಗಲೂ ಹಲವಾರು ಜನರು ಅನಾರೋಗ್ಯ
ಪೀಡಿತರಾಗುತ್ತಿದ್ದಾರೆ. ಇದರ ಜೊತೆಗೆ ೮೦೦೦ ಟನ್ ತ್ಯಾಜ್ಯ ಭೂಮಿಯ
ಅಡಿಭಾಗದಲ್ಲಿದ್ದು ಇದು ಆ ಪ್ರದೇಶದ ಅಂತರ್ಜಲವನ್ನು ಮಲಿನಗೊಳಿಸುತ್ತಿದೆ.
`ಗುಜರಾತ್
ಮಾಲಿನ್ಯ ನಿಯಂತ್ರಣ ಮಂಡಳಿ`
ಇತ್ತೀಚೆಗೆ ವಿಷತ್ಯಾಜ್ಯ ಸ್ವೀಕರಿಸುವುದಿಲ್ಲ ಎಂಬುದಾಗಿ ಹೇಳಿದೆ. ಹಲವು
ಸರ್ಕಾರೇತರ ಸಂಘಟನೆಗಳು ದುರಂತಕ್ಕೆ ಬಲಿಯಾದವರ ಸಲುವಾಗಿ ಹೋರಾಡುತ್ತಿದ್ದು,
`ಡೌ
ಕೆಮಿಕಲ್ಸ್`
(`ಯೂನಿಯನ್
ಕಾರ್ಬೈಡ್`
ಕಾರ್ಖಾನೆ ಪಡೆದಿರುವ) ವಿಷತ್ಯಾಜ್ಯಗಳನ್ನು ತೆಗೆದುಹಾಕಬೇಕು ಎಂದು ಹೇಳಿದೆ.
ಹಲವು ಸರ್ಕಾರೇತರ ಸಂಸ್ಥೆಗಳು ಹಿಂದೆ ಇದೇ ವಿಚಾರವನ್ನು ಎತ್ತಿದ್ದರೂ ಸರ್ಕಾರ
ಈ ಕುರಿತು ದೃಷ್ಟಿ ಹರಿಸಿಯೇ ಇಲ್ಲ.
ಈಗಿನ ಅಗತ್ಯವೇನು?
ವಿಷತ್ಯಾಜ್ಯವನ್ನು ನಾಶಮಾಡಲು ಸರ್ಕಾರ ಸಮರ್ಪಕ
ಕ್ರಮ ಕೈಗೊಳ್ಳಬೇಕು