|
ಏಷ್ಯಾ: ಸಾಮರಸ್ಯ
ಚೀನಾ- ತೈವಾನ್ ಒಪ್ಪಂದ
ತೈವಾನ್ ವಿದೇಶಾಂಗ ನೀತಿಗೆ ಮಾ ಯಿಂಗ್ ಹೊಸ ಸ್ಪರ್ಶ

ದಕ್ಷಿಣ ಚೀನಾ ಸಮುದ್ರದಂಚಿನ ಪ್ರಾಂತದಲ್ಲಿ ಹೊಸ ಶಕೆಯೊಂದು ಉದಯಿಸುವ
ಸಾಧ್ಯತೆ ಇದೆ. ಚೀನಾ-
ತೈವಾನ್ ನಡುವಿನ ಸ್ನೇಹ ಸೌಹಾರ್ದ ಮಾತುಕತೆ ಪ್ರಗತಿಯಲ್ಲಿದೆ.
ಚೀನಾ ಮತ್ತು ತೈವಾನ್ ಪ್ರಪ್ರಥಮ ಬಾರಿಗೆ ಪರಸ್ಪರ ದೇಶಗಳ
ರಾಜಧಾನಿಯಲ್ಲಿ ಶಾಶ್ವತ ಕಚೇರಿಯೊಂದನ್ನು ಸ್ಥಾಪಿಸುವ ಚಿಂತನೆ ನಡೆಸುತ್ತಿವೆ.
ಈ ಸಂಬಂಧ ಈಗಾಗಲೇ ಕರಾರೊಂದಕ್ಕೆ ಸಹಿ ಹಾಕಿದ್ದು,
ದಕ್ಷಿಣ ಚೀನಾ ಪ್ರಾಂತದಲ್ಲಿ ಭಿನ್ನಾಭಿಪ್ರಾಯಗಳನ್ನು ಅಡಗಿಸಿ ಶಾಂತಿ
ನೆಲೆಯೂರಿಸುವ ಪ್ರಯತ್ನಕ್ಕೆ ಮುಂದಡಿ ಇಟ್ಟಿದ್ದಾರೆ.
ಇದು ಐತಿಹಾಸಿಕ ಶತ್ರುಗಳ ನಡುವಿನ ಅತಿ ದೊಡ್ಡ ರಾಜತಾಂತ್ರಿಕ
ಹೆಜ್ಜೆಯಾಗಿದೆ. ಈ ಶಾಶ್ವತ
ಕಚೇರಿಗಳನ್ನು ಯಾವಾಗ ತೆರೆಯಲಾಗುವುದು ಎಂಬ ಕುರಿತು ಅಧಿಕೃತ ದಿನಾಂಕವನ್ನು
ಗೊತ್ತು ಪಡಿಸಲಾಗಿಲ್ಲ. ಆದರೆ ಈ
ಕಚೇರಿಗಳು ರಾಜತಾಂತ್ರಿಕ ವಿಚಾರಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡದೆ
ವ್ಯಾವಹಾರಿಕ ವಿಷಯಗಳತ್ತಲೇ ಗಮನ ನೀಡಲಿವೆ ಎನ್ನಲಾಗಿದೆ.
ಈ ಒಪ್ಪಂದದ ಮಾಹಿತಿ ಮತ್ತು ಸೂಕ್ಷ್ಮವ್ಯತ್ಯಾಸಗಳ ಬಗ್ಗೆ ಇನ್ನೂ
ಸಂಪೂರ್ಣ ವಿವರಗಳು ದೊರೆತಿಲ್ಲವಾದರೂ,
ಪ್ರತಿ ದಿನ 3,000
ಚೀನೀ ಪ್ರವಾಸಿಗರು ತೈವಾನ್‌ಗೆ ತೆರಳಲು ಅವಕಾಶ ಕಲ್ಪಿಸಿಕೊಡಲಾಗುವುದು ಎಂದು
ಈ ಮಾತುಕತೆಯ ಮಧ್ಯವರ್ತಿಗಳು ದೃಢಪಡಿಸಿದ್ದಾರೆ.
ಪ್ರಸ್ತುತ ಕೆಲ ಸಮಯದ ಮಟ್ಟಿಗೆ ಈ ವಿಮಾನಗಳು ಹಾಂಗ್‌ಕಾಂಗ್ ಮೂಲಕ
ತೈವಾನ್ ಪ್ರವೇಶಿಸಲಿವೆ. ಆದಷ್ಟು
ಶೀಘ್ರದಲ್ಲೇ ಎರಡೂ ದೇಶಗಳ ನಡುವೆ ನೇರ ವಿಮಾನಯಾನ ಆರಂಭಿಸಲಾಗುವುದು.
ಆದರೆ ಪ್ರಸ್ತುತ ಅತಿ ಮುಖ್ಯ ಚೀನೀ ರಜಾದಿನಗಳನ್ನು ಹೊರತುಪಡಿಸಿ
ಚೀನಾದಿಂದ ತೈವಾನ್‌ಗೆ ಯಾವುದೇ ಸಾಮಾನ್ಯ ವಿಮಾನಗಳು ಹಾರಾಡುತ್ತಿಲ್ಲ
ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಹಲವು ವರ್ಷಗಳ ಸತತ ಯುದ್ಧದ ನಂತರ
1949ರಲ್ಲಿ ಮಾವೋ ನೇತೃತ್ವದಲ್ಲಿ ಕಮ್ಯುನಿಸ್ಟರು ಚಿಯಾಂಗ್ ಕೈ ಶೆಕ್
ನೇತೃತ್ವದ 'ನ್ಯಾಷನಲಿಸ್ಟ್'ಗಳನ್ನು
ತೈವಾನ್ ಜಲಸಂಧಿಯ ಕಡೆಗಿನ ದ್ವೀಪದತ್ತ ಬೆಂಬತ್ತುವಲ್ಲಿ ಯಶಸ್ವಿಯಾಗಿದ್ದರು.
ಅಂದಿನಿಂದ ಈವರೆಗೆ ಚೀನಾದಿಂದ ಈ ಪ್ರಾಂತ್ಯಕ್ಕೆ ನೇರ ವಿಮಾನಯಾನ
ಇರಲಿಲ್ಲ.
ಚೀನಾದಿಂದ ಬೇರ್ಪಡುವ ಮುನ್ನ ತೈವಾನ್ ಪ್ರಾಂತ್ಯ ದೇಶದ ಪ್ರಮುಖ ಆರ್ಥಿಕ
ಶಕ್ತಿಯಾಗಿತ್ತು. ಪ್ರತಿ ವರ್ಷ
ಸುಮಾರು 4 ದಶಲಕ್ಷ ತೈವಾನಿಗಳು
ಚೀನಾಗೆ ಭೇಟಿ ನೀಡುತ್ತಿದ್ದಾರೆ.
ಆದರೆ ಕನಿಷ್ಠ 1,60,000
ಚೀನಾ ನಿವಾಸಿಗಳಿಗೆ ಮಾತ್ರ ತೈವಾನ್‌ಗೆ ಭೇಟಿ ನೀಡುವ ಅವಕಾಶ ಕಲ್ಪಿಸಲಾಗಿದೆ.
ಆದರೆ ತೈವಾನ್ ತನ್ನ ಬಹುತೇಕ ಭೂಮಿಯನ್ನು ಚೀನಾ ಪ್ರಾಂತದಲ್ಲೇ
ಕೈಚೆಲ್ಲಿದೆ ಎಂಬ ಭಾವನೆಯಲ್ಲಿರುವ ಭದ್ರತಾ ತಜ್ಞರು ಈ ಒಪ್ಪಂದದ ಬಗ್ಗೆ
ಮೆಚ್ಚುಗೆಯ ಮಾತುಗಳನ್ನೇ ಆಡುತ್ತಾರೆ.
ನೇರ ವಿಮಾನಗಳೆಂದರೆ ಷರತ್ತುಗಳನ್ನು ಒಳಗೊಂಡ
'ವಾಣಿಜ್ಯ ಮತ್ತು ನಿರ್ವಹಣೆ
ಒಪ್ಪಂದ'ದ ಅವಶ್ಯಕತೆ ಇದೆ.
ಹಾಗೆಯೇ ಈ ಒಪ್ಪಂದದಲ್ಲಿ ಸುರಕ್ಷಿತ ಆವರಣಗಳಿರಬೇಕು.
ಇದಕ್ಕೆ ತಪ್ಪಿದಲ್ಲಿ ಚೀನಾ ವಾಯುಪಡೆ ಸೇನಾ ದಾಳಿಗಳಿಗಾಗಿ ಆರಾಮವಾಗಿ
ಈ ಹಾದಿಯನ್ನು ಬಳಸಿಕೊಳ್ಳಬಹುದು ಎನ್ನುತ್ತಾರೆ ಟಿಎಸ್‌ಐ ಜೊತೆ ಮಾತನಾಡಿದ
ತೈಪೆಯಲ್ಲಿರುವ 'ಚೈನೀಸ್
ಕೌನ್ಸಿಲ್ ಆಫ್ ಅಡ್ವಾನ್ಸ್‌ಡ್ ಪಾಲಿಸಿ ಸ್ಟಡೀಸ್'ನ
ತೈವಾನ್ ಭದ್ರತಾ ತಜ್ಞ ಆಂಡ್ರ್ಯೂ ಯಾಂಗ್.
ಅದೆಲ್ಲಾ ಏನೇ ಇದ್ದರೂ ಪ್ರಸ್ತುತ ಒಪ್ಪಂದ ಚೀನಾ ಮತ್ತು ತೈವಾನ್ ನಡುವಿನ
ಸ್ನೇಹ ಸಂಬಂಧ ಪುನರ್ ಸ್ಥಾಪನೆ ನಿಟ್ಟಿನಲ್ಲಿ ಅತ್ಯುತ್ತಮ ಹೆಜ್ಜೆ.
ಕೆಲ ತಿಂಗಳುಗಳ ಹಿಂದೆ ತೈವಾನ್‌ನ ಅಧ್ಯಕ್ಷರಾಗಿ ಅಧಿಕಾರ
ವಹಿಸಿಕೊಂಡಿರುವ 'ಕ್ಯುಮಿನ್‌ಟಾಂಗ್'
ಪಕ್ಷದ ಮಾ ಯಿಂಗ್- ಜ್ಯೂ ಅವರು ಈ
ಒಪ್ಪಂದಕ್ಕೆ ವೇದಿಕೆ ಸಿದ್ಧಪಡಿಸಿದ್ದಾರೆ.
ಹಿಂದೆ ತೈವಾನ್‌ನ್ನು ಬೀಜಿಂಗ್ ವಿರುದ್ಧ ಎತ್ತಿಕಟ್ಟಿ ಅಧಿಕೃತ
ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಚೆನ್ ಶುಯ್-ಬಿಯಾನ್
ಅವರಿಗಿಂತ ಭಿನ್ನ ಚಿಂತನೆಯುಳ್ಳ ವ್ಯಕ್ತಿ ಮಾ ಯಿಂಗ್-
ಜ್ಯೂ ಅವರ ನೇತೃತ್ವದಲ್ಲಿ ತೈವಾನ್ ಈಗ ಚೀನಾ ಜೊತೆಗೆ ಆಪ್ತ ರಾಜಕೀಯ
ಮತ್ತು ವ್ಯಾಪಾರಿ ಸಂಬಂಧ ವೃದ್ಧಿಗೆ ಪ್ರಯತ್ನ ನಡೆಸುತ್ತಿದೆ.
ಟಿಎಸ್‌ಐ
ಸೌರಭ್ ಕುಮಾರ್ ಶಾಹಿ
ರಾಜಕೀಯ: ಪ್ರಕ್ಷುಬ್ಧತೆ
ಜಪಾನ್: ಆಂತರಿಕ ಗೊಂದಲ
ಸರ್ಕಾರಿ ಯೋಜನೆಗಳಿಗೆ ಮೇಲ್ಮನೆ ಅಡ್ಡಗಾಲು

ಇತ್ತೀಚಿನ ದಿನಗಳಲ್ಲಿ ಸುಮಾರು 4
ಟ್ರಿಲಿಯನ್ ಜಪಾನಿ ಅರ್ಥವ್ಯವಸ್ಥೆ ರಾಜಕೀಯ ಪ್ರಕ್ಷುಬ್ಧತೆಯಲ್ಲಿ ಬೆಂದು
ಹೋಗಿದೆ. ಎರಡನೇ ವಿಶ್ವಯುದ್ಧದ
ನಂತರ ಜಪಾನ್ ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಿದ್ದೇ ಇಲ್ಲ.
ಹಾಗೆಯೇ ಜಪಾನ್‌ನ 71
ವರ್ಷ ವಯಸ್ಸಿನ ಪ್ರಧಾನಿ ಯಸುವೋ ಫುಕುಡಾ ಅವರಿಗೂ ಇದು ಹೊಸ ಅನುಭವ.
ಸಂಸತ್ತಿನ ಮೇಲ್ಮನೆಯಲ್ಲಿ ಅಧಿಕಾರದಲ್ಲಿರುವ ವಿರೋಧ ಪಕ್ಷ
'ಡೆಮಾಕ್ರಟಿಕ್ ಪಾರ್ಟಿ ಆಫ್
ಜಪಾನ್' ಕಳೆದ ಆರು ದಶಕಗಳಿಂದ
ಅಧಿಕಾರದಲ್ಲಿರುವ ಆಡಳಿತ ಪಕ್ಷ 'ಲಿಬರಲ್
ಡೆಮಾಕ್ರಟಿಕ್ ಪಾರ್ಟಿ'ಯ ಮೇಲೆ
ಬೇಷರತ್ ಗೊತ್ತುವಳಿಯೊಂದನ್ನು ಮಂಡಿಸಿದೆ.
ಕಾರಣ? ರಾಜಕೀಯವಾಗಿ
ಇಬ್ಭಾಗವಾಗಿರುವ ಸಂಸತ್ತು ಫುಕುಡಾ ಅವರ ಸಾಮರ್ಥ್ಯದ ಬಗ್ಗೆ ಸಂಶಯ
ವ್ಯಕ್ತಪಡಿಸಿದ್ದು, ಜಪಾನ್‌ನ
ಆಂತರಿಕ ನೀತಿಯಲ್ಲಿ ಗೊಂದಲ ಸೃಷ್ಟಿಯಾಗಿರುವುದಕ್ಕೆ ಅವರೇ ಕಾರಣ ಎಂದು
ಮೇಲ್ಮನೆ ಆರೋಪ ಹೊರಿಸಿದೆ. ಕಳೆದು
ಹೋಗಿರುವ ಪಿಂಚಣಿ ದಾಖಲೆಗಳು,
ಹಿರಿಯರಿಗೆ ಆರೋಗ್ಯ ವೆಚ್ಚ ದುಬಾರಿಯಾಗಲು ಕಾರಣವಾದ ಕುಖ್ಯಾತ ಕಡ್ಡಾಯ
ಆರೋಗ್ಯ ವಿಮಾ ನೀತಿ, ಜಾಗತಿಕವಾಗಿ
ತೈಲ ಬೆಲೆ ಏರಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ತೆರಿಗೆಯ ಪುನರ್ ಅನುಷ್ಠಾನ
ಇತ್ಯಾದಿ ನೀತಿಗಳು ದೇಶವನ್ನು ಜರ್ಜರಿತಗೊಳಿಸಿವೆ ಎಂದು ಮೇಲ್ಮನೆ ಅಭಿಪ್ರಾಯ
ಪಟ್ಟಿದೆ.
ಹಾಗಿದ್ದರೂ ಪ್ರಭಾವೀ ಕೆಳಮನೆ ಸರ್ಕಾರದ ಬೆಂಬಲಕ್ಕೆ ಬಂದಿದೆ.
ಇಲ್ಲಿ ಫುಕುಡಾ ಅವರು 336-10
ಮತಗಳಿಂದ ವಿಶ್ವಾಸಮತ ಪಡೆದುಕೊಳ್ಳುವಲ್ಲಿ ಸಫಲರಾಗಿದ್ದಾರೆ.
ಆದರೆ ಪ್ರಮುಖ ವಿರೋಧ ಪಕ್ಷಗಳ ಅನುಪಸ್ಥಿತಿಯಲ್ಲಿ!!
ವಿವಿಧ ಸಮೀಕ್ಷೆಗಳಲ್ಲಿ ಜಪಾನೀಯರು ಕ್ಷಿಪ್ರ ಚುನಾವಣೆ
ಬಯಸುತ್ತಿರುವುದಾಗಿ ತಿಳಿದು ಬಂದಿದೆ.
ಶೇ.
56ರಷ್ಟು ಜಪಾನಿಯರು ಚುನಾವಣೆ
ಬಯಸಿದ್ದಾರೆ. ಅವಿಶ್ವಾಸ ನಿರ್ಣಯ
ಗೊತ್ತುವಳಿ ಎಂದರೆ ಅವರು ನನ್ನಿಂದ ಇನ್ನಷ್ಟು ಉತ್ತಮ ಕೆಲಸವನ್ನು
ಬಯಸಿದ್ದಾರೆ ಎಂದು ಒಂದು ಕಡೆ ಫುಕುಡಾ ಹೇಳಿಕೆ ನೀಡಿದ್ದಾರೆ.
ಮತ್ತೊಂದು ಕಡೆ ಡಿಪಿಜೆಯ ಸಂಸತ್ ವ್ಯವಹಾರಗಳ ಸಚಿವ ಕೆಂಜಿ ಯಮಾವೋಕಾ
ಈ ಹೇಳಿಕೆಯನ್ನು ವಿರೋಧಿಸಿದ್ದಾರೆ.
ವಿರೋಧ ಪಕ್ಷದವರು ಹಾಜರಾಗದೆ ಇದ್ದಾಗ ನಡೆದ ಪ್ರಕ್ರಿಯೆಗಳೆಲ್ಲ ಒಂದು
ಪ್ರದರ್ಶನ ಮಾತ್ರ. ನಿಜ
ಹೇಳಬೇಕೆಂದರೆ ಇದು ತೋರಿಕೆಗೆ ನಡೆಸಿದ ನಾಟಕ ಎನ್ನುತ್ತಾರೆ ಕೆಂಜಿ ಯಮಾವೋಕಾ.
ಸೆಪ್ಟೆಂಬರ್ 2007ರಲ್ಲಿ
ವಿರೋಧ ಪಕ್ಷ ಮೇಲ್ಮನೆಯಲ್ಲಿ ಬಹುಮತ ಗಳಿಸಿತ್ತು.
ಆಗಿನಿಂದಲೂ ಅದು ಪ್ರತಿನಿತ್ಯ ಸರ್ಕಾರದ ಕಾರ್ಯಕ್ರಮಗಳಿಗೆ ಅಡ್ಡಗಾಲು
ಹಾಕುತ್ತಲೇ ಇದೆ. ಸಂಸತ್ತು ಹೀಗೆ
ಇಬ್ಭಾಗವಾಗಿರುವ ಪರಿಣಾಮವಾಗಿ 'ಬ್ಯಾಂಕ್
ಆಫ್ ಜಪಾನ್'ನ ಗವರ್ನರ್ ನೇಮಕ
ಇನ್ನೂ ಗೊಂದಲದಲ್ಲಿದೆ. ಆದರೆ
ಬ್ಯಾಂಕ್‌ಗೆ ಗವರ್ನರ್ ನೇಮಕಾತಿಯಾಗಿಲ್ಲ ಎಂದು ಚಿಂತಿಸುವವರಾರು?
ಫುಕುಡಾ ಅವರು ಸಂಪೂರ್ಣವಾಗಿ ತಮ್ಮ ಘನತೆ ಗೌರವಗಳ ರಕ್ಷಣೆಯತ್ತಲೇ
ಕಣ್ಣಾಯಿಸುತ್ತಿದ್ದಾರೆ. ಅವರು
ಇದೇ ಜುಲೈನಲ್ಲಿ ಜಿ-8
ರಾಷ್ಟ್ರಗಳ ಶೃಂಗ ಸಮ್ಮೇಳನವನ್ನು ಆಯೋಜಿಸುವತ್ತ ದೃಷ್ಟಿ ನೆಟ್ಟಿದ್ದಾರೆ.
ಜಾಗತಿಕವಾಗಿ ಪ್ರಬಲವಾಗಿರುವ ಎಂಟು ಶ್ರೀಮಂತ ರಾಷ್ಟ್ರಗಳು
ಮತ್ತೊಮ್ಮೆ ಸಭೆ ಸೇರಲಿದ್ದು,
ವಾತಾವರಣದ ಏರುಪೇರುಗಳು, ಆಹಾರ
ಅಭಾವ ಮತ್ತು ತೈಲ ಬೆಲೆಗಳು ಈ ಶೃಂಗಸಮ್ಮೇಳನದಲ್ಲಿ ಚರ್ಚೆಗೆ ಬರಲಿವೆ.
ಜಿ-8
ಸಮ್ಮೇಳನದಲ್ಲಿ ಪ್ರಭಾವ ಬೀರುವ ಉದ್ದೇಶದಲ್ಲಿ ಫುಕುಡಾ ಅವರು ತಮ್ಮ ಪರಿಸರ
ಕಾಳಜಿಯನ್ನು ಬಿಂಬಿಸುತ್ತಾ 2050ರೊಳಗೆ
ಜಪಾನ್ ಗ್ರೀನ್‌ಹೌಸ್ ಅನಿಲ ಹೊರ ಸೂಸುವಿಕೆಯನ್ನು ಶೇ.
80ರಷ್ಟು ಕಡಿತ ಮಾಡಬೇಕು
ಎಂದು ಕರೆ ನೀಡಿದ್ದಾರೆ.
ಟಿಎಸ್‌ಐ
ಶಶಾಂಕ್ ತ್ರಿಪಾಠಿ
ಬ್ರಿಟನ್: ಭಿನ್ನಮತ
ಭಯೋತ್ಪಾದನಾ ವಿರೋಧಿ ಮಸೂದೆ
ಭದ್ರತಾ ತಜ್ಞರು-ಮುಸ್ಲಿಂ ಸಮುದಾಯದ ತೀವ್ರ ವಿರೋಧ

ಬ್ರಿಟಿಷ್ ರಾಜಕೀಯದಲ್ಲಿ ಎರಡು ಬಣಗಳನ್ನು ಸೃಷ್ಟಿಸಿದ ಮಸೂದೆ ಅದು.
ಕೊನೆಗೂ ಬ್ರಿಟಿಷ್ ಪ್ರಧಾನ ಮಂತ್ರಿ ಗಾರ್ಡನ್ ಬ್ರೌನ್ ಅವರು ಕಳೆದ
ವಾರ ಸಂಸತ್ತಿನಲ್ಲಿ ಈ ವಿವಾದಾಸ್ಪದ 'ಭಯೋತ್ಪಾದನಾ
ವಿರೋಧಿ ಮಸೂದೆ'ಗೆ ಸಮ್ಮತಿ
ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಆದರೆ ಬ್ರೌನ್ ಅವರ ನಿರ್ಧಾರಕ್ಕೆ ಸಿಕ್ಕ ಬೆಂಬಲವನ್ನು ಗಮನಿಸಿದಲ್ಲಿ ಇದು
ಮಹತ್ತರ ವಿಜಯವಾಗಲಾರದು ಎನ್ನುವುದು ತಜ್ಞರ ಅಂಬೋಣ.
ಶಂಕಿತ ಭಯೋತ್ಪಾದಕರನ್ನು ವಿಚಾರಣೆಗಾಗಿ ಬಂಧಿಸಿ ಆರೋಪರಹಿತವಾಗಿ
42 ದಿನಗಳ ಕಾಲ ಸೆರೆಯಲ್ಲಿಡುವ
ಅವಕಾಶವನ್ನು ಪೊಲೀಸರಿಗೆ ನೀಡುವ ಕುರಿತ ಈ ವಿವಾದಾಸ್ಪದ ಮಸೂದೆಗೆ
315ರಿಂದ
306 ಮತಗಳ ಮೂಲಕ
'ಹೌಸ್ ಆಫ್ ಕಾಮನ್ಸ್'
ಸಮ್ಮತಿ ನೀಡಿದೆ. ಈ ಹಿಂದೆ
ಆರೋಪರಹಿತವಾಗಿ ಶಂಕಿತರನ್ನು 28
ದಿನಗಳ ಕಾಲ ಮಾತ್ರ ಬಂಧನದಲ್ಲಿಡುವ ಅವಕಾಶವಿತ್ತು.
ಈ ಮಸೂದೆ ಪ್ರಧಾನಮಂತ್ರಿ ಬ್ರೌನ್ ಅವರ ಮುಂದಿದ್ದ ಅತಿ ದೊಡ್ಡ
ಸವಾಲಾಗಿತ್ತು. ಈ ಮಸೂದೆಗೆ
ಒಪ್ಪಿಗೆ ನೀಡುವ ನಿಟ್ಟಿನಲ್ಲಿ ಅವರು ಆಡಳಿತ ಪಕ್ಷ
'ಲೇಬರ್ ಪಾರ್ಟಿ'ಯ
36 ಶಾಸಕರ ವಿರೋಧ
ಕಟ್ಟಿಕೊಳ್ಳಬೇಕಾಗಿ ಬಂದಿದೆ.
'ಉತ್ತರ ಐರ್‍ಲೆಂಡ್‌ನ
ಡೆಮಾಕ್ರೆಟಿಕ್ ಯೂನಿಯನ್ ಪಾರ್ಟಿ'ಯ
ಒಂಭತ್ತು ಸಂಸದರ ಬೆಂಬಲದಿಂದ ಮಸೂದೆ ಸಂಸತ್ತಿನ ಒಪ್ಪಿಗೆ ಪಡೆದಿದೆ.
ಹೀಗಾಗಿ ಇದನ್ನು ಖಂಡಿತಾ ಸಂಸತ್ತಿನ ಪ್ರಭಾವೀ ನಿರ್ಣಯ ಎಂದು
ಪರಿಗಣಿಸಲು ಸಾಧ್ಯವೇ ಇಲ್ಲ.
ಈ ಭಯೋತ್ಪಾದನಾ ವಿರೋಧಿ ಕಾನೂನು ಜಾರಿಗೆ ತಂದು ಬ್ರೌನ್ ಅವರು
ರಾಜಧಾನಿಯಲ್ಲಿ ಉತ್ತಮ ರಾಜಕೀಯ ದಾಳ ಎಸೆದಿದ್ದಾರೆ.
ಕಳೆದ ತಿಂಗಳಿಡೀ ಬ್ರೌನ್ ಅವರು ಬಹಿರಂಗವಾಗಿ ಮತ್ತು
ಅತ್ಯುತ್ಸಾಹದಿಂದ ಈ ಮಸೂದೆಗೆ ಸಂಬಂಧಿಸಿದಂತೆ ಅಭಿಯಾನದಲ್ಲಿ ನಿರತರಾಗಿದ್ದರು.
ದೇಶ ಸಂಘಟಿತ ಭಯೋತ್ಪಾದನಾ ಪ್ರಕರಣಗಳನ್ನು ಎದುರಿಸುತ್ತಿರುವ
ಯುಗದಲ್ಲಿ ಸಂಬಂಧಪಟ್ಟ ಗುಪ್ತಚರ ಸಂಸ್ಥೆಗಳಿಗೆ ಈ ಭಯೋತ್ಪಾದನಾ ವಿರೋಧಿ
ಮಸೂದೆ ಅತೀ ಪ್ರಮುಖ ಅಸ್ತ್ರವಾಗಲಿದೆ ಎನ್ನುವುದು ಬ್ರೌನ್ ಅವರ ಅಭಿಪ್ರಾಯ.
ಹಾಗಿದ್ದರೂ ಪ್ರಧಾನಿ ಅವರಿಗೆ ಕರಾಳ ದಿನಗಳು ಕಾದಿವೆ.
ಈ ಮಸೂದೆ ಕಾರ್ಯರೂಪಕ್ಕೆ ಬರಬೇಕಾದಲ್ಲಿ ಇದಕ್ಕೆ
'ಹೌಸ್ ಆಫ್ ಲಾರ್ಡ್ಸ್'
ಒಪ್ಪಿಗೆಯೂ ಅಗತ್ಯ. ಸಂಸತ್ತಿನ
ಮೇಲ್ಮನೆ ಖಂಡಿತ ಈ ಮಸೂದೆಯನ್ನು ತಿರಸ್ಕರಿಸಲಿದೆ ಮತ್ತು
'ಹೌಸ್ ಆಫ್ ಕಾಮನ್ಸ್'ಗೆ
ಮರಳಿ ಕಳುಹಿಸಲಿದೆ ಎನ್ನುವುದು ತಜ್ಞರ ಅಭಿಪ್ರಾಯ.
ಆದರೆ ಮೇಲ್ಮನೆಗೆ ಈ ಮಸೂದೆಯನ್ನು ವಿಳಂಬ ಮಾಡುವ ಅಧಿಕಾರವಿದೆ ವಿನಾ
ಮಸೂದೆ ಕಾಯ್ದೆಯಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ
ಎನ್ನುವುದೂ ನಿಜವೇ.
ಈ ನಡುವೆ ಸ್ವದೇಶಿ ಭದ್ರತಾ ತಜ್ಞರು ಮತ್ತು ಬ್ರಿಟನ್‌ನ
1.6
ದಶಲಕ್ಷ ಬಲಿಷ್ಠ ಮುಸ್ಲಿಂ ಸಮುದಾಯ ಈ ಭಯೋತ್ಪಾದನಾ ವಿರೋಧಿ ಮಸೂದೆಗೆ ತಮ್ಮ
ವಿರೋಧ ವ್ಯಕ್ತಪಡಿಸಿವೆ.
ತಮ್ಮನ್ನು ಗುರಿಯಾಗಿಸಿ ಈ ಮಸೂದೆಯನ್ನು ರಚಿಸಲಾಗಿದೆ ಎಂದು ಬ್ರಿಟನ್‌ನ
ಮುಸ್ಲಿಂ ಸಮುದಾಯ ಅಭಿಪ್ರಾಯಪಟ್ಟಿದೆ.
ಇಂತಹ ಮಸೂದೆಯನ್ನು ಕಾರ್ಯರೂಪಕ್ಕೆ ತರುವ ಮೂಲಕ ಸರ್ಕಾರ ತೃಪ್ತಿಕರ
ನಿರ್ಣಯ ಕೈಗೊಂಡಿದೆ ಎಂದು ನಮಗನ್ನಿಸುತ್ತಿಲ್ಲ.
ಈ ಮಸೂದೆಯಿಂದಾಗಿ ಮುಸ್ಲಿಂ ಸಮುದಾಯದ ಯುವಕರು ಮತ್ತು ಪೊಲೀಸರ
ನಡುವಿನ ಸಂಬಂಧ ಹದಗೆಡುವ ಸಾಧ್ಯತೆ ಬಗ್ಗೆ ನಾವು ಚಿಂತಿತರಾಗಿದ್ದೇವೆ.
ಅದೂ ಅಲ್ಲದೆ ಈ ಮಸೂದೆ ಕೆಲವು ಮೂಲಭೂತವಾದಿ ಸಂಘಟನೆಗಳ
ಕೈಗೊಂಬೆಯಾಗುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಟಿಎಸ್‌ಐ ಜೊತೆ ಮಾತನಾಡಿದ
ಲಂಡನ್‌ನ 'ಮುಸ್ಲಿಂ ಕೌನ್ಸಿಲ್
ಆಫ್ ಬ್ರಿಟನ್'ನ ಪ್ರಧಾನ
ಕಾರ್ಯದರ್ಶಿ ಮುಹಮ್ಮದ್ ಅಬ್ದುಲ್ ಬಾರಿ.
ಬ್ರಿಟನ್‌ನ ಈ ಭಯೋತ್ಪಾದನಾ ವಿರೋಧಿ ಮಸೂದೆಗೆ ಇನ್ನೂ ಕೆಲ ಹಿನ್ನಡೆಗಳಿವೆ.
ಈ ಮಸೂದೆಯಿಂದಾಗಿ ಇತರ ಪಾಶ್ಚಾತ್ಯ ಪ್ರಜಾಪ್ರಭುತ್ವ ರಾಷ್ಟ್ರಗಳಂತೆ
ಬ್ರಿಟನ್‌ನಲ್ಲಿಯೂ ಶಂಕಿತರನ್ನು ವಿಚಾರಣೆ ನಡೆಸದೆ ನಿಶ್ಚಿತ ದಿನಗಳವರೆಗೆ
ಸೆರೆಯಲ್ಲಿಡುವ ಅವಕಾಶ ಸಿಕ್ಕಿದೆ.
ಅಂದ ಹಾಗೆ ಸದ್ಯದಲ್ಲೇ 'ಮಾನವ
ಹಕ್ಕುಗಳ ಯುರೋಪಿಯನ್ ಸಮ್ಮೇಳನ'
ನಡೆಯಲಿದ್ದು ಬ್ರಿಟನ್‌ನ ಈ ಭಯೋತ್ಪಾದನೆ ವಿರೋಧಿ ಮಸೂದೆಗೆ ಕಾನೂನಿನ
ಪರಿಧಿಯೊಳಗೆ ವಿರೋಧ ವ್ಯಕ್ತವಾಗುವ ನಿರೀಕ್ಷೆ ಇದೆ.
ಈಗಾಗಲೇ ಸಂಘಟನೆ ಅನೇಕ ಬಾರಿ ಬ್ರಿಟಿಷ್ ಸರ್ಕಾರಕ್ಕೆ ಈ
ನಿಟ್ಟಿನಲ್ಲಿ ಛೀಮಾರಿ ಹಾಕಿದೆ.
ಹಾಗಾಗಿ ಮುಂಬರುವ ದಿನಗಳಲ್ಲಿ ಎಲ್ಲಾ ಸುಗಮವಾಗಿ ನಡೆಯುವ ಸಾಧ್ಯತೆಗಳು
ಕಡಿಮೆಯೇ ಎನ್ನಬಹುದು.
ಟಿಎಸ್‌ಐ
ಸೌರಭ್ ಕುಮಾರ್ ಶಾಹಿ
ಅಮೆರಿಕ : ಅಧ್ಯಕ್ಷ ಸ್ಥಾನ
ವಿದೇಶಿಗರ ಹೃದಯ ಗೆದ್ದ ಒಬಾಮಾ
ಅಮೆರಿಕದ ಇಲಿನೋಯಿಸ್ ಸೆನೆಟ್ ಸದಸ್ಯ ಒಬಾಮಾ ವಿದೇಶಗಳಲ್ಲಿ ಅಚ್ಚುಮೆಚ್ಚಿನ ಅಧ್ಯಕ್ಷೀಯ ಅಭ್ಯರ್ಥಿ ಎನ್ನುತ್ತಾರೆ ಟಿಎಸ್‌ಐನ ಸೌರಭ್ ಕುಮಾರ್ ಶಾಹಿ

ಮುಂದಿನ ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ
ಚುನಾವಣೆಯಲ್ಲಿ ಬ್ರಿಟನ್,
ಫ್ರಾನ್ಸ್, ಜಪಾನ್ ಮತ್ತು
ತಾಂಜೇನಿಯಾದ ಪ್ರಜೆಗಳು ಮತ ಹಾಕುತ್ತಿಲ್ಲವಲ್ಲ ಎಂದು ಬಾರಕ್ ಒಬಾಮಾ ಬೇಸರ
ಪಡುತ್ತಿರಬಹುದು! ಅವರಿಗೆ ಮತ
ನೀಡುವ ಹಕ್ಕು ಇದ್ದಿದ್ದರೆ ಒಬಾಮಾ ಖಂಡಿತಾ ಜಯಭೇರಿ ಬಾರಿಸುತ್ತಿದ್ದರು.
ಡೆಮಾಕ್ರೆಟಿಕ್ ಅಭ್ಯರ್ಥಿ ಒಬಾಮಾ ಅವರ ಅಮೆರಿಕ ಸಂಯುಕ್ತ ಸಂಸ್ಥಾನದ
ಪ್ರಪ್ರಥಮ ಆಫ್ರಿಕನ್-ಅಮೆರಿಕನ್
ಅಧ್ಯಕ್ಷರಾಗುವ ಆಶಯಕ್ಕೆ ಯುರೋಪ್‌ನಿಂದ ತೊಡಗಿ ಆಫ್ರಿಕಾವರೆಗೆ
ಜಗತ್ತಿನಾದ್ಯಂತ ಸಂಭ್ರಮದ ಸ್ವಾಗತ ದೊರೆತಿದೆ.
ಹಾಗೆಯೇ ಅಮೆರಿಕದ ವಿದೇಶಿ ನೀತಿಯಲ್ಲಿ ಆಮೂಲಾಗ್ರ ಬದಲಾವಣೆಗಳಾಗಲಿವೆ
ಎಂದು ವ್ಯಾಪಕ ಅಭಿಪ್ರಾಯ ವ್ಯಕ್ತವಾಗಿದೆ.
ಅಂತರ್‌ರಾಷ್ಟ್ರೀಯ ಪಕ್ಷಾತೀತ ಸಂಸ್ಥೆ
'ಪ್ಯೂ ಗ್ಲೋಬಲ್ ಆಟಿಟ್ಯೂಡ್ಸ್'
ನಡೆಸಿದ ಸಮೀಕ್ಷೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.
ಕೀನ್ಯಾದ ತಂದೆ ಮತ್ತು ಬಿಳಿ ಅಮೆರಿಕನ್ ತಾಯಿಯ ಮಗನಾಗಿರುವ ಇಲಿನೋಯಿಸ್
ಸೆನೆಟ್ ಸದಸ್ಯ ಬಾರಕ್ ಒಬಾಮಾ ಎಷ್ಟರ ಮಟ್ಟಿಗೆ ವಿಶ್ವಾಸಾರ್ಹ ವ್ಯಕ್ತಿ
ಗೊತ್ತೇ? ತಾಂಜಾನಿಯಾ ಮತ್ತು
ಫ್ರಾನ್ಸ್‌ನಲ್ಲಿ ಅತ್ಯಧಿಕ ಶೇ.
84ರಷ್ಟು,
ಜರ್ಮನಿಯ ಶೇ.
82,
ಆಸ್ಟ್ರೇಲಿಯಾದ ಶೇ.
80,
ಜಪಾನ್‌ನ ಶೇ.
77 ಮತ್ತು ಬ್ರಿಟನ್‌ನ ಶೇ.
74ರಷ್ಟು ಮಂದಿ ಬಾರಕ್
ಪರ ಬೆಂಬಲ ಸೂಚಿಸಿದ್ದಾರೆ. ಬಾರಕ್
ಒಬಾಮಾ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೇರಲು ಅವರು ಸಮ್ಮತಿ ಸೂಚಿಸಿದ್ದಾರೆ.
ಟಿಎಸ್‌ಐ ಜೊತೆ ಮಾತನಾಡಿದ ಸಂಸ್ಥೆಯ ಹಿರಿಯ ಅಧ್ಯಯನಕಾರ ಎರಿನ್
ಕ್ಯಾರಿಯರ್ ಕ್ರೆಶ್ಮರ್,
ಮುಖ್ಯವಾಗಿ ಬಾರಕ್ ಒಬಾಮಾರ ಪರ ಅಪೂರ್ವವೆನಿಸುವ ದೃಢವಿಶ್ವಾಸ ಒಡಮೂಡಿದೆ.
ಅಮೆರಿಕದ ಇರಾಕ್ ನೀತಿಯನ್ನು ವಿರೋಧಿಸಿದ್ದ ಇತರ ಡೆಮಾಕ್ರಟ್‌ಗಳ
ಜೊತೆಗೆ ಒಬಾಮಾ ಅವರೂ ಇದ್ದುದರಿಂದ ಮತ್ತು ಚುನಾವಣಾ ಸಂದರ್ಭದಲ್ಲಿ ಅವರು
ಬೆಳೆಸಿಕೊಂಡ ವರ್ಚಸ್ಸಿನಿಂದಾಗಿ ಈ ವ್ಯಾಪಕ ನಂಬಿಕೆ ಬೆಳೆದಿರಬಹುದು.
ಎಲ್ಲೆಡೆಯಿಂದ ಅವರತ್ತ ಅಭಿಮಾನದ ಹೊಳೆ ಹರಿಯುತ್ತಿದೆ.
ಒಬಾಮಾ ಅವರು ಅಧ್ಯಕ್ಷರಾಗುವುದನ್ನು ಅವರು ಕಾದುನೋಡುತ್ತಿದ್ದಾರೆ
ಎನ್ನುತ್ತಾರೆ.
ಹಾಗೆಯೇ ಪರಂಪರಾಗತ ಅಮೆರಿಕ ಮಿತ್ರದೇಶಗಳಾದ ಪಶ್ಚಿಮ ಯೂರೋಪ್ ಮತ್ತು
ಆಸ್ಟ್ರೇಲಿಯ ಪ್ರಾಂತ್ಯಗಳಲ್ಲಿ ಒಬಾಮಾ ಅವರ ಹುಚ್ಚು ಆರಾಧನೆಯೇ ಆರಂಭವಾಗಿದೆ
ಎನ್ನುವುದನ್ನು ಅಧ್ಯಯನ ಬಹಿರಂಗಪಡಿಸಿದೆ.
ಈ ಪ್ರಾಂತ್ಯಗಳಲ್ಲಿ ಬುಷ್ ಆಡಳಿತದುದ್ದಕ್ಕೂ ಅಮೆರಿಕದ ಅಸಂಬದ್ಧ
ವಿದೇಶಿ ನೀತಿಯಿಂದಾಗಿ ಜನರಲ್ಲಿ ಪ್ರತ್ಯೇಕತಾ ಭಾವನೆ ಮೂಡಿತ್ತು ಎನ್ನಲಾಗಿದೆ.
ಒಬಾಮಾ ಅವರು ತಮ್ಮ ರಿಪಬ್ಲಿಕನ್ ವಿರೋಧಿ ಜಾನ್ ಮೆಕೇನ್‌ಗಿಂತ ಹೆಚ್ಚು
ಸಕಾರಾತ್ಮಕ ರೇಟಿಂಗ್‌ಗಳನ್ನು ಗಳಿಸಿದ್ದಾರೆ.
ಹಾಗಿದ್ದರೂ ಇವೆಲ್ಲಾ ನವೆಂಬರ್ ಚುನಾವಣೆಗೆ ಮುನ್ನ ಬದಲಾಗುವ ಸಂಭವ
ಕಡಿಮೆಯೇ. ಯಾರೇ ಹೊಸ
ಅಧ್ಯಕ್ಷರಾಗಲಿ ಅಮೆರಿಕದ ವಿದೇಶಿ ನೀತಿ ಮಾತ್ರ ಇನ್ನೂ ಕಳಪೆ ಮಟ್ಟಕ್ಕೆ
ತಲುಪಲಿದೆ ಎಂದು ಲೆಬನಾನ್,
ಈಜಿಪ್ಟ್ ಮತ್ತು ಜೋರ್ಡನ್‌ನ ಮೂರನೇ ಒಂದರಷ್ಟು ಮಂದಿ ಅಭಿಪ್ರಾಯ
ಪಟ್ಟಿದ್ದಾರೆ.
ಆದರೆ ಇದಕ್ಕೆ ತದ್ವಿರುದ್ಧವಾಗಿ,
ಫ್ರಾನ್ಸ್, ಸ್ಪೇನ್,
ನೈಜೀರಿಯಾ, ದಕ್ಷಿಣ
ಆಫ್ರಿಕಾ, ತಾಂಜೇನಿಯಾ ಮತ್ತು
ಜರ್ಮನಿಯಲ್ಲಿ ಪ್ರತಿಕ್ರಿಯೆ ನೀಡಿದವರು ಅಮೆರಿಕದ ವಿದೇಶಿ ನೀತಿಯಲ್ಲಿ
ಸಕಾರಾತ್ಮಕ ಬದಲಾವಣೆಗಳಾಗಲಿವೆ ಎಂದುಕೊಂಡಿದ್ದಾರೆ.
ಇರಾಕ್ ಯುದ್ಧ ಹಾಗೂ ಅಧ್ಯಕ್ಷ ಬುಷ್ ಅವರ ವಿದೇಶಿ ನೀತಿಯಿಂದಾಗಿ
ಜಾಗತಿಕವಾಗಿ ಕುಗ್ಗಿರುವ ಅಮೆರಿಕದ ವರ್ಚಸ್ಸನ್ನು ಒಬಾಮಾ ಪುನರ್
ಸ್ಥಾಪಿಸಲಿದ್ದಾರೆ ಎಂದು ಸಮೀಕ್ಷೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
ಪ್ರತಿ ಮುಸ್ಲಿಮೇತರ ದೇಶಗಳ ಸಮೀಕ್ಷೆಯಲ್ಲಿ ಬಹುಸಂಖ್ಯಾತರು ಹೊಸ
ಅಧ್ಯಕ್ಷರ ಅವಧಿಯಲ್ಲಿ ಅಮೆರಿಕ ವಿದೇಶಿ ನೀತಿ ಭೀಕರವಾಗಿರದೆ ತೃಪ್ತಿಕರವಾಗೇ
ಬದಲಾಯಿಸಬಹುದು ಎಂದು ಆಶಿಸಿದ್ದಾರೆ.
ಹಾಗಿದ್ದರೂ, ಸಮೀಕ್ಷೆಯಲ್ಲಿ
ಇಷ್ಟೊಂದು ಸಿಹಿ ಉಂಡು ಜಾಗತಿಕ ಮಟ್ಟದಲ್ಲಿ ಅಭಿಮಾನಿಗಳ ಹೃದಯ ಗೆದ್ದಿರುವ
ಬಾರಕ್ ಒಬಾಮಾ ಅವರಿಗೆ ತಜ್ಞರು ಎಚ್ಚರಿಕೆ ನೀಡುವುದನ್ನು ಮರೆತಿಲ್ಲ.
ತಮ್ಮನ್ನು ಯಾರು ಆಳಬೇಕು ಎನ್ನುವ ಬಗ್ಗೆ ವಿದೇಶಿಯರು ಅಭಿಪ್ರಾಯ
ವ್ಯಕ್ತಪಡಿಸುವುದು ಕೆಲವು ಅಮೆರಿಕನ್ನರಿಗೆ ಹಿಡಿಸುವುದಿಲ್ಲ.
ಹಾಗಾಗಿ ಒಬಾಮಾ ಅವರ ಈ ಜಾಗತಿಕ ಜನಪ್ರಿಯತೆ ಸ್ವದೇಶದಲ್ಲಿ ಎರಡು
ಅಲಗಿನ ಕತ್ತಿಯಾಗಿ ಬದಲಾಗಬಹುದು ಎನ್ನುವುದು ತಜ್ಞರ ಅಭಿಮತ.
ಎಲ್ಲಕ್ಕಿಂತ ಹೆಚ್ಚಾಗಿ ಜಾನ್ ಕೆರ್ರಿ ಅವರು
2004ರ ಚುನಾವಣೆಯಲ್ಲಿ ಆಡಳಿತ
ವಿರೋಧಿ ಅಲೆಯಲ್ಲಿದ್ದ ಜಾರ್ಜ್ ಬುಷ್ ಅವರನ್ನು ಗೆಲುವಿನ ಕಡೆಗೆ
ಮುನ್ನಡೆಸಿದ್ದು ಹೀಗೆಯೇ ತಾನೆ?
ಆಗ ಅಷ್ಟೇನೂ ಅಭೂತಪೂರ್ವ ಬಹುಮತ ಸಿಗದೆ ಇದ್ದರೂ,
ಬುಷ್ ಜಯ ಸಾಧಿಸಿ ಅಧ್ಯಕ್ಷ ಗಾದಿಯನ್ನು ಉಳಿಸಿಕೊಂಡಿದ್ದಂತೂ ನಿಜವೇ...
ಟಿಎಸ್‌ಐ
|