ಮಕರ
(ಡಿ.22-ಜ.21)
ಹೊಸ ಚಿಂತನೆಗಳ ಬಗ್ಗೆ ನೀವು ಕಾರ್ಯಪ್ರವೃತ್ತರಾಗುವವರಗೆ ಅವು ನಿಮ್ಮಲ್ಲೇ ಇರಲಿ. ಆಪ್ತರ ಎಲ್ಲಾ ಅಭಿಪ್ರಾಯಗಳನ್ನು ಒಪ್ಪಿಕೊಳ್ಳಬೇಕಾಗಿಲ್ಲವಾದರೂ ತಾಳ್ಮೆಯಿಂದ ಆಲಿಸುವುದು ಉತ್ತಮ. ಸವಾಲುಗಳನ್ನು ಎದುರಿಸಲು ಸಿದ್ಧವಿರುವಿರಾದರೆ ಗೆಲುವು ನಿಮ್ಮದೇ. ಆದರೆ ಅತಿ ಉತ್ಸಾಹದಿಂದ ಮುನ್ನುಗ್ಗುವುದೂ ಒಳಿತಲ್ಲ.
ವೃಷಭ
(ಏ.21-ಮೇ.20)
ಹೊಸ ಜವಾಬ್ದಾರಿಗಳನ್ನು ನೀಡುವ ಮೊದಲು ಹಿರಿಯ ಅಧಿಕಾರಿಗಳು ನಿಮ್ಮ ಕಾರ್ಯಕ್ಷಮತೆ ಪರಿಶೀಲಿಸಲಿರುವುದರಿಂದ ಕೈಗೊಪ್ಪಿಸಿದ ಕೆಲಸಗಳನ್ನು ಗಡುವಿನೊಳಗೆ ಪೂರ್ಣಗೊಳಿಸಿ. ಪ್ರೇಮ ಜೀವನದಿಂದ ಸಂತಸ. ಅವಿವಾಹಿತರು ಹೊಸ ಸಂಬಂಧಗಳ ನಿರೀಕ್ಷೆಗಳ ಕುರಿತು ವಾಸ್ತವಿಕ ಚಿಂತನೆ ಇಟ್ಟುಕೊಳ್ಳಿ.
ಕನ್ಯಾ
(ಆ.24-ಸೆ.23)
ಈ ವಾರ ಅಧಿಕ ಕಾರ್ಯದೊತ್ತಡ ತೀರಾ ಕಿರಿಕಿರಿ ಎನಿಸಲಿವೆ. ಯಾವುದೇ ಸಂದರ್ಭದಲ್ಲಿ ತಾಳ್ಮೆ ಅತ್ಯಗತ್ಯ ಎಂಬುದನ್ನು ಮರೆಯಬೇಡಿ. ಸ್ವಾತಂತ್ರ್ಯವಿಲ್ಲವೆಂಬ ಭಾವನೆ ಕಾಡಬಹುದು. ಆದರೆ ಇತರರು ಕೂಡ ಅವರದೇ ಆದ ಒತ್ತಡಗಳಲ್ಲಿರುತ್ತಾರೆ ಎನ್ನುವುದನ್ನು ನೆನಪಿಸಿಕೊಂಡು ಅವರಿಗೂ ಅವಕಾಶ ಕೊಡಿ. ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಶುಭಸುದ್ದಿ.
ಕುಂಭ
(ಜ.22-ಫೆ.19)
ವೃತ್ತಿ ಮತ್ತು ಕೌಟುಂಬಿಕ ವಲಯದಲ್ಲಿ ಕಾರ್ಯಸಾಧನೆ. ಪ್ರಯತ್ನ ಮತ್ತು ಸಾಧನೆಗಳಿಂದ ಮೇಲಧಿಕಾರಿಗಳು, ಜೊತೆಗಾರರ ಮನಗೆಲ್ಲುವ ಮೂಲಕ ಹೊಸ ಅವಕಾಶಗಳನ್ನು ನಿಮ್ಮದಾಗಿಸಿಕೊಳ್ಳುವಿರಿ. ಗೊಂದಲ ಬದಿಗೊತ್ತಿ, ಸಂಗಾತಿ ಜೊತೆ ಹೆಚ್ಚು ಕಾಲ ಕಳೆಯಿರಿ. ಪ್ರೀತಿಪಾತ್ರರೊಂದಿಗಿನ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳಿಗೆ ಚಿಂತಿಸಬೇಕಾಗಿಲ್ಲ.
ಮಿಥುನ
(ಮೇ.21-ಜೂ.21)
ಕಾರ್ಯಕ್ಷೇತ್ರಕ್ಕೆ ಆದ್ಯತೆ ನೀಡಿದಲ್ಲಿ ಅಸಾಧ್ಯವೆನಿಸಿದ ಯೋಜನೆಗಳಲ್ಲೂ ಕಾರ್ಯಸಾಧನೆ. ನೀವು ಬಹಳ ಆಶಾವಾದಿಗಳಾಗಿರುವುದರಿಂದ ಪ್ರೀತಿಪಾತ್ರರ ಜೊತೆಗಿನ ಭಿನ್ನಾಭಿಪ್ರಾಯ ಬಗೆಹರಿಸಲು ಪ್ರಯತ್ನಿಸುವಿರಿ. ವಿದ್ಯಾರ್ಥಿಗಳು ಲಭಿಸುವ ಅವಕಾಶಗಳ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಿ; ವೃತ್ತಿಜೀವನದೆಡೆಗೆ ಮಹತ್ವದ ತೀರ್ಮಾನವಾಗಲಿದೆ.
ತುಲಾ
(ಸೆ.24-ಅ.23)
ಈ ವಾರ ಗೆಲುವು ಬೆಂಬತ್ತಿ ಬರಲಿದೆ. ಇದರಿಂದ ನಿಮಗೆ ಇನ್ನಷ್ಟು ಹುರುಪು. ಪ್ರೀತಿಪಾತ್ರರು ಸಲಹೆ ಅಥವಾ ಸಾಮರಸ್ಯಕ್ಕಾಗಿ ನಿಮ್ಮೆಡೆಗೆ ತಿರುಗಬಹುದು. ಸಕಾರಾತ್ಮಕ ಜೀವನ ಶೈಲಿಯನ್ನು ರೂಪಿಸಿಕೊಳ್ಳಲು ಸಕಾಲ. ಆರ್ಥಿಕ ವಿಚಾರದಲ್ಲಿ ಎಚ್ಚರಿಕೆಯಿಂದ ಮುಂದುವರೆಯಿರಿ. ಏಕೆಂದರೆ ಆತುರದ ನಿರ್ಧಾರಗಳಿಂದ ನಿರಾಶೆ ಖಂಡಿತ.
ಮೀನ
(ಫೆ.20-ಮಾ.20)
ಹೊಸ ಅವಕಾಶಗಳು ಅರಸಿ ಬರಲಿವೆ, ಆದರೆ ಹೊಸ ಯೋಜನೆ ಕೈಗೆತ್ತಿಕೊಳ್ಳುವ ಮುನ್ನ ಆಯ್ಕೆಗಳನ್ನು ಸ್ಪಷ್ಟಪಡಿಸಿಕೊಳ್ಳಿ. ಹಾಗೆಂದು ಆಕಾಶಕ್ಕೆ ಏಣಿ ಚಾಚುವ ಕೆಲಸ ಬೇಡ. ಕಾರ್ಯದೊತ್ತಡದಿಂದ ಆರೋಗ್ಯದ ಮೇಲೆ ಪರಿಣಾಮ. ಅವಿವಾಹಿತ ಪ್ರಣಯಿಗಳಿಗೆ ಸಂಭ್ರಮದ ಕಾಲ. ಅನಗತ್ಯ ಖರ್ಚು ಬೇಡ.
ಕಟಕ
(ಜೂ.22-ಜು.22)
ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ ನಿರ್ಧಾರ ಕೈಗೊಳ್ಳಿ. ಕಾರ್ಯಕ್ಷೇತ್ರದಲ್ಲಿ ಉಂಟಾಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ ನಿಮಗಿದೆ. ಸಂಗಾತಿಯ ಅಭಿಪ್ರಾಯ ಕೇಳದೆ ನಿರ್ಧರಿಸಿದರೆ ಅಥವಾ ಪರಸ್ಪರ ರಾಜಿ ಇಲ್ಲದೆ ಹೋದಲ್ಲಿ ಪ್ರೇಮ ಜೀವನದಲ್ಲಿ ವಿರಸ ಖಂಡಿತ. ವೃಶ್ಚಿಕ
(ಅ.24-ನ.22)
ಅಧಿಕ ಕಾರ್ಯದೊತ್ತಡಗಳಿದ್ದರೂ, ಕಾರ್ಯಪ್ರಗತಿ. ಸಹೋದ್ಯೋಗಿಗಳಿಂದ ನೆರವು. ಸ್ಪೂರ್ತಿಯುತ ಚಿಂತನೆಗಳು ಗೆಲುವು ಸಾಧಿಸಲು ನೆರವಾಗಲಿವೆ. ಯಾವುದೇ ವಿಚಾರಗಳ ಕುರಿತು ನಿರ್ಧರಿಸಲು ಸಾಕಷ್ಟು ಕಾಲಾವಕಾಶ ತೆಗೆದುಕೊಳ್ಳಿ,.ಹಾಗಿದ್ದಲ್ಲಿ ಮಾತ್ರ ನಿಮಗೆ ಆ ಬಗ್ಗೆ ಸ್ಪಷ್ಟ ಚಿತ್ರಣ ಸಿಗಬಹುದು. ಪ್ರೇಮ ಜೀವನಕ್ಕೆ ಆದ್ಯತೆಯಿರಲಿ.
ಮೇಷ
(ಮಾ.21-ಏ.20)
ಪ್ರತಿಯೊಬ್ಬರೂ ತಮ್ಮ ಗುರಿಗಳತ್ತ ಗಮನ ಕೇಂದ್ರೀಕರಿಸಿರುವುದರಿಂದ, ಹೊಂದಾಣಿಕೆ ಅಸಾಧ್ಯವಾಗಿ ಕಾರ್ಯಗಳು ನಿಧಾನವಾಗಲಿವೆ. ಯಾವುದೇ ವಿಚಾರಗಳಲ್ಲಿ ಭಾವನಾತ್ಮಕ ಚಿಂತನೆ ಬೇಡ. ಸ್ವ ಸಂತೋಷದತ್ತ ಗಮನ ಹರಿಸಲಿರುವಿರಿ, ಆದರೆ ಗೃಹ ಸಂಬಂಧಿತ ವಿಚಾರಗಳನ್ನು ನಿರ್ಲಕ್ಷಿಸಬೇಡಿ. ಆರೋಗ್ಯ ಭಾಗ್ಯ.
ಸಿಂಹ
(ಜು.23-ಆ.23)
ವೃತ್ತಿರಂಗದಲ್ಲಿ ಅಧಿಕ ಒತ್ತಡ, ಆದರೆ ಈ ವಾರ ತೃಪ್ತಿಕರವೂ ಹೌದು. ನಿಮ್ಮ ಚಿಂತನೆಗಳನ್ನು ಇತರರ ಜೊತೆ ಹಂಚಿಕೊಳ್ಳಬೇಡಿ, ಏಕೆಂದರೆ ಸ್ಪಷ್ಟ ಮಾಹಿತಿ ನೀಡದೆ ಇದ್ದಲ್ಲಿ ಅವರನ್ನು ಒಪ್ಪಿಸುವುದು ಕಷ್ಟವಾದೀತು. ಪ್ರೀತಿಪಾತ್ರರೊಂದಿಗಿನ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳು ಸದ್ಯದಲ್ಲಿಯೇ ಪರಿಹಾರಗೊಳ್ಳಲಿವೆ.
ಧನು
(ನ.23-ಡಿ.21)
ಸ್ಪರ್ಧಾತ್ಮಕ ಮನೋಭಾವವುಳ್ಳ ನೀವು ಕಾರ್ಯಯೋಜನೆಗಳನ್ನು ಸುಗಮವಾಗಿ ಪೂರ್ಣಗೊಳಿಸಲಿದ್ದೀರಿ; ಆದರೆ ಸಹೋದ್ಯೋಗಿಗಳ ಅಭಿಪ್ರಾಯಗಳಿಗೆ ಮನ್ನಣೆ ನೀಡದೆ ಇದ್ದಲ್ಲಿ ಮನಸ್ತಾಪ ಖಂಡಿತ. ಹೊಸ ಆರ್ಥಿಕ ಪ್ರಸ್ತಾಪಗಳಲ್ಲಿ ಭಾವನಾತ್ಮಕವಾಗಿ ಯೋಚಿಸದೆ, ಎಚ್ಚರಿಕೆಯಿಂದ ಮುಂದಡಿಯಿಡಿ. ವಿಶ್ರಾಂತಿಗೆ ಸಮಯ ಮೀಸಲಿಡಿ.
ಟಿ.ಎಸ್.ಐ |