|

ಸೂಪರ್ ಮಾಡೆಲ್ ಆಗಿ ವೃತ್ತಿಜೀವನ ಆರಂಭಿಸಿದ ನೀವು
1994ರಲ್ಲಿ
ವಿಶ್ವಸುಂದರಿ ಕಿರೀಟ ಧರಿಸಿದಿರಿ.
ಹಾಗಿದ್ದರೆ ನಟನಾ ವೃತ್ತಿಗೆ ಇಳಿದದ್ದು?
ನಿಜ ಹೇಳಬೇಕೆಂದರೆ...
ನನ್ನ ಸುತ್ತಮುತ್ತಲಿದ್ದವರೆಲ್ಲ ವಿಶಾಲ ಹೃದಯಿಗಳು.
ಅವರು ಅವಕಾಶಗಳನ್ನು ನನ್ನ ಮುಂದಿಟ್ಟಿದ್ದರು.
ಆದರೆ ನಾನೇ ಎರಡು ವರ್ಷ ತಳ್ಳಿದ್ದೆ.
ಹೀಗಾಗಿ ನನ್ನ ಜೀವನ ಒಂದು ನಿರ್ದಿಷ್ಟ
ದಿಕ್ಕಿನಲ್ಲಿ ಮುಂದುವರಿಯಿತು.
ಮಾಡೆಲಿಂಗ್‌ನಿಂದ ಆರಂಭಿಸಿ,
ವಿಶ್ವ ಸುಂದರಿ ನಂತರ ಸಿನಿಮಾ.
ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಲೂ ನನಗೆ
ಇಷ್ಟವಿರಲಿಲ್ಲ.
ಒಂದು ವರ್ಷ ಈ ಅವಕಾಶವನ್ನು ತಳ್ಳಿ ಹಾಕಿದ್ದೆ.
ನನ್ನ ಸುತ್ತಮುತ್ತಲ ಜನರ ಒತ್ತಾಯ ಮತ್ತು ಅವರು
ನನ್ನ ಮೇಲಿಟ್ಟಿದ್ದ ವಿಶ್ವಾಸಕ್ಕೆ ಮನ್ನಣೆ ಕೊಟ್ಟು ನಾನು ಭಾಗವಹಿಸಿದ್ದೆ.
ಪ್ರತಿಯೊಬ್ಬರೂ ನನ್ನ ಮೇಲೆ ಅಗಾಧ ನಂಬಿಕೆ
ಇಟ್ಟಿದ್ದರು.
ನಾನು ಓದಿನತ್ತಲೇ ಹೆಚ್ಚು ಗಮನ ಕೊಟ್ಟಿದ್ದೆ.
ಮಾಡೆಲಿಂಗ್ ನನಗೆ ಒಂದು ಹವ್ಯಾಸವಾಗಿತ್ತು ಅಷ್ಟೆ.
ಮಾಡೆಲಿಂಗ್ ವೃತ್ತಿ ಇರಲಿ,
ಸೌಂದರ್ಯ ಸ್ಪರ್ಧೆ ಇಲ್ಲವೇ ಚಲನಚಿತ್ರ ಆಗಿರಲಿ;
ದೇವರ ಕೃಪೆ ಹಾಗೂ ಜನರ ಪ್ರೀತ್ಯಾದರಗಳಿಂದಾಗಿ
ಪ್ರತಿಯೊಂದು ಅವಕಾಶಗಳಲ್ಲೂ ನಾನು ಅದ್ಭುತ ಯಶಸ್ಸು ಪಡೆದೆ.
ಚಿತ್ರರಂಗ ಪ್ರವೇಶಿಸುವ ಆಸಕ್ತಿ?
ಇದು ಪ್ರಜ್ಞಾಪೂರ್ವಕ ನಿರ್ಧಾರವೇ?
ಚಿತ್ರರಂಗದ ಮಟ್ಟಿಗೆ ನಾನು ಅವಕಾಶ ಬಂದಾಗ
ತೂರಿಕೊಂಡಿಲ್ಲ.
ಪ್ರಜ್ಞಾಪೂರ್ವಕವಾಗಿ ತೆಗೆದುಕೊಂಡ ನಿರ್ಧಾರವಿದು.
ವಿಶ್ವಸುಂದರಿ ಕಿರೀಟ ಪಡೆದ ಮೇಲೆ ನಾನು
ವಾಸ್ತುಶಿಲ್ಪ ಶಿಕ್ಷಣದಿಂದ ಸ್ವಲ್ಪ ಬಿಡುವು ತೆಗೆದುಕೊಂಡೆ.
ಹಾಗೇ ವಿದೇಶಕ್ಕೆ ಹೋಗೋ ಅವಕಾಶ ಸಿಕ್ತು.
ಆದರೆ ವಾಪಾಸಾದ ನಂತರ ನನಗೆ ಸಿಕ್ಕ ಮನ್ನಣೆ,
ನನ್ನ ಕಾಲೇಜಿನಲ್ಲೇ ನಡೆದ ಸನ್ಮಾನಗಳು ಮತ್ತು
ಮಾಧ್ಯಮಗಳ ದೃಷ್ಟಿ ನನ್ನತ್ತ ತಿರುಗಿದ್ದು ಎಲ್ಲವೂ ಜೀವನದ ದಿಕ್ಕನ್ನು
ಬದಲಾಯಿಸಿತು.
ನಾನೀಗ ಕೇವಲ ಕಾಲೇಜು ವಿದ್ಯಾರ್ಥಿನಿಯಾಗಿ ಉಳಿದಿಲ್ಲ
ಎನ್ನುವ ಸತ್ಯ ಅರಿವಾಯಿತು.
ಆಗಲೇ ನನಗೆ ಚಿತ್ರರಂಗದಲ್ಲಿ ನಟಿಸುವ ಅವಕಾಶ
ದೊರೆತಿತ್ತು.
ಪ್ರಸಿದ್ಧ ನಿರ್ದೇಶಕರು,
ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದವರು ನನ್ನ ಮೇಲೆ
ವಿಶ್ವಾಸ ತೋರಿದ್ದರು.
ಇದರಿಂದ ನನ್ನ ಮನ ಬದಲಾಯಿತು.
ಪ್ರಪ್ರಥಮ ಬಾರಿ ಕ್ಯಾಮರಾ ಎದುರಿಸಿದ್ದು?
ಓಹ್...
ನನ್ನ ಮೊದಲ ಚಿತ್ರದ ಚಿತ್ರೀಕರಣ.
ಅದೂ ಮಣಿರತ್ನಂ ಅವರ ಜೊತೆ.
ನಾನು ನಿಜವಾಗೂ ಸಂಭ್ರಮ ಪಟ್ಟಿದ್ದೆ.
ಚಿತ್ರತಂಡ ಮತ್ತು ಸಿನಿಮಾ ಎರಡೂ ನನಗೆ
ಇಷ್ಟವಾಗಿತ್ತು.
ಎಲ್ಲರ ಒತ್ತಾಯದಿಂದ ಈ ಕ್ಷೇತ್ರಕ್ಕೆ ಕಾಲಿರಿಸುವಂತೆ
ಮಾಡಿದ್ದಕ್ಕಾಗಿ ನಾನು ದೇವರಿಗೆ ಮನಸಾ ವಂದಿಸಿದೆ.
ಅಂದಿನಿಂದ ಈವರೆಗೆ ಎಲ್ಲವೂ ಸರಾಗವಾಗಿ
ನಡೆಯುತ್ತಿರುವುದಕ್ಕೆ ನನಗೆ ಖುಷಿಯಾಗಿದೆ.
ವಿಶ್ವ ಸುಂದರಿ ಸ್ಪರ್ಧೆ ಗೆದ್ದ ನಂತರ
ಅನಿರೀಕ್ಷಿತವಾಗಿ ಸಿಕ್ಕ ತಾರಾಮೌಲ್ಯದ ಬಗ್ಗೆ ಏನು ಹೇಳುವಿರಿ?
ಈ ಹಠಾತ್ ಪ್ರಸಿದ್ಧಿ ಮತ್ತು ಜನಪ್ರಿಯತೆಯನ್ನು
ಹೇಗೆ ನಿಭಾಯಿಸಿದಿರಿ?
ಅದನ್ನು ನಂಬಲೇ ಸಾಧ್ಯವಿರಲಿಲ್ಲ...
ಹೃದಯ ತುಂಬಿಹೋಗಿತ್ತು...
ಆ ಮನ್ನಣೆಯನ್ನು ಗೌರವಿಸಿದೆ,
ಸಂತೋಷದಿಂದ ಸ್ವೀಕರಿಸಿದೆ.
ಆದರೆ ಇದೇ ನನ್ನ ಅಸ್ತಿತ್ವಕ್ಕೆ ಆಸರೆಯಾಗಲಿಲ್ಲ.
ನಾನು ಈ ಜನಪ್ರಿಯತೆಯ ಆಟಾಟೋಪ ಪ್ರದರ್ಶನ ಅಥವಾ
ಅದನ್ನೇ ಹಿಡಿದು ಆಕಾಶಕ್ಕೆ ಏರಲು ಪ್ರಯತ್ನಿಸಲಿಲ್ಲ.
ಇದನ್ನೇ ನಾನು ನಟನಾ ವೃತ್ತಿಗೆ ಪ್ರೇರಣೆಯಾಗಿ
ಕಾಣಲಿಲ್ಲ.
ನನ್ನಲ್ಲಿದ್ದ ಮಗುವಿನ ಮುಗ್ಧತೆಯೇ ಕೆಲಸದ ಕಡೆ ನಿರಂತರ
ಒಲವು ಉಳಿಸಿಕೊಳ್ಳಲು ಕಾರಣವಾಯಿತು.
ಅಂದರೆ,
ಪ್ರತಿ ದಿನ ಹೊಸತನ ಹುಡುಕುವ ತವಕದಿಂದಾಗಿಯೇ ನಾನು
ಇಲ್ಲಿರುವೆ.
ನನ್ನ ಜೀವನದಲ್ಲಿ ನಾನು ಯಾರಿಗಾದರೂ ಧನ್ಯವಾದ
ಅರ್ಪಿಸಬೇಕಾಗಿದ್ದರೆ ಅದು ನನ್ನ ಕುಟುಂಬಕ್ಕೆ.
ಎಲ್ಲಾ ಕಾಲದಲ್ಲೂ ಅವರು ನನಗೆ ನೆರವಾಗಿ ನಿಂತವರು.
ನಿಮಗೆ ಸಿಕ್ಕ ಪಾತ್ರಗಳನ್ನು ನಿರ್ವಹಿಸಲು ಕಠಿಣ
ಶ್ರಮ ಪಟ್ಟಿದ್ದೀರೇನು?
ಅಥವಾ ನಿಮ್ಮ ಪ್ರತಿಭೆಯಿಂದಾಗಿ ಅತ್ಯುತ್ತಮ ಅಭಿನಯ
ಪ್ರದರ್ಶಿಸುತ್ತಿದ್ದಿರೆ?
ಮೊದಲಿನಿಂದಲೂ ಈ ಬಗ್ಗೆ ಸರಿಯಾದ ವಿವರಣೆ
ನೀಡಲು ನನ್ನಿಂದ ಸಾಧ್ಯವಾಗಿಲ್ಲ.
ಆದರೆ ನಾನು ಕಠಿಣ ಪರಿಶ್ರಮಿ.
ಹಾಗೆಯೇ ನಾನು ಪಾತ್ರವಾಗಿರುವ ಚಿತ್ರೀಕರಣ
ಸ್ಥಳಗಳಲ್ಲಿ ಶ್ಲಾಘನೆಗಳನ್ನು ಪಡೆಯುತ್ತಲೇ ಇರುವೆ.
ಇದು ನನ್ನ ವೈಯಕ್ತಿಕ ವಿಜಯ.
ನಿರ್ದೇಶಕರ ಮಹಾತ್ವಾಕಾಂಕ್ಷೆಯನ್ನು
ನನಸಾಗಿಸುವುದಕ್ಕೆ ನಾನು ಅತ್ಯಂತ ಹೆಚ್ಚಿನ ಮಹತ್ವ ಕೊಡುತ್ತೇನೆ.
ಐಶ್ವರ್ಯಾ ಬಚ್ಚನ್ ಮತ್ತು ಐಶ್ವರ್ಯಾ ರೈ ನಡುವೆ ಏನು
ವ್ಯತ್ಯಾಸವಿದೆ?
ಮದುವೆ ಐಶ್ವರ್ಯಾ ಅವರನ್ನು ಬದಲಾಯಿಸಿದೆಯೆ?
ನಿಮಗೆ ಮದುವೆಯಾಗಿದೆಯೆ?
ಆಹ್...
ಹಾಗಿದ್ದರೆ ನಿಮಗೆ ಎಲ್ಲಾ ಕಡೆ ಆದರದ ಸ್ವಾಗತ!!
ಇದು ನಿಜವಾಗಿಯೂ ಅದ್ಭುತ ಅನುಭವ.
ಇಂತಹ ಅದ್ಭುತ ವ್ಯಕ್ತಿ ಮತ್ತು ಕುಟುಂಬದ
ಸದಸ್ಯಳಾಗುವ ಅವಕಾಶ ಕಲ್ಪಿಸಿಕೊಟ್ಟಿರುವುದಕ್ಕೆ ನಾನು ದೇವರಿಗೆ ಮನಸಾ
ವಂದಿಸುವೆ.
ಅತ್ತೆ-
ಮಾವಂದಿರು ನನ್ನ ಅಪ್ಪ-ಅಮ್ಮನಂತಿದ್ದಾರೆ.
'ನಮಗೆ
ಎರಡು ಜೊತೆ ತಂದೆ-
ತಾಯಿ ಸಿಕ್ಕಿದ್ದಾರೆ'
ಎಂದು ನಾನು ಮತ್ತು ಅಭಿಷೇಕ್ ಹೇಳುತ್ತಾ ಇರುತ್ತೇವೆ.
ಬಹಳ ಹಿಂದಿನಿಂದಲೇ ಇದೇ ನನ್ನ ಮನೆಯಾಗಿತ್ತು
ಎಂಬಂತಾಗಿದೆ.
ವೃತ್ತಿಪರ ಮಹಿಳೆಯಾಗಿರುವುದರಿಂದ ಜೀವನ ಬಿಡುವಿಲ್ಲದೆ
ಸಾಗುತ್ತಿದೆ.
ಮದುವೆ ಪ್ರಜ್ಞಾಪೂರ್ವಕ ತೆಗೆದುಕೊಂಡ ನಿರ್ಧಾರ.
ಮದುವೆಗೆ ಒಪ್ಪಿಕೊಂಡ ಮೇಲೆ ಹಲವು ವಿಷಯಗಳಿಗೆ
ಆದ್ಯತೆ ನೀಡಬೇಕಾಗುತ್ತದೆ.
ಸಾಕಷ್ಟು ಗಮನ ನೀಡಿದಲ್ಲಿ ಮಾತ್ರ ಈ ಸಂಬಂಧವನ್ನು
ಕಾಪಾಡಿಕೊಳ್ಳಬಹುದು ಎನ್ನುವ ಸತ್ಯ ನನಗೆ ಗೊತ್ತು.
ಅದಕ್ಕೆ ನಾನು ಸದಾ ಬದ್ಧಳಾಗಿರುವೆ.
ವೃತ್ತಿ ಮತ್ತು ಮನೆ ಎರಡರ ನಡುವೆ ಸಮತೋಲನ
ಸಾಧಿಸಲು ಪ್ರಯತ್ನಿಸುತ್ತಿರುವೆ.
ಅದನ್ನು ಹೇಗೆ ಸಾಧಿಸಬೇಕು ಎಂಬುದನ್ನೂ ನಾನು
ಬಲ್ಲೆ.
ಜೀವನ ಪೂರ್ತಿ ಈ ಪ್ರಯತ್ನ ನಡೆಯುತ್ತಲೇ ಇರುತ್ತದೆ...
ಅಭಿಷೇಕ್ ಬಚ್ಚನ್ ಪತ್ನಿಯಾಗಿರುವುದು ನಿಮ್ಮ
ಚಿತ್ರರಂಗದ ಯೋಜನೆಗಳ ಮೇಲೆ ಪ್ರಭಾವ ಬೀರಿದೆಯೆ?
ನಾನು ಹಿಂದಿನಿಂದಲೂ ಆಯ್ದ ಚಿತ್ರಗಳಲ್ಲಿ
ಮಾತ್ರ ನಟಿಸುತ್ತಿದ್ದೆ.
ಅವಕಾಶ ಸಿಕ್ಕ ಕೂಡಲೇ ಒಪ್ಪಿಕೊಳ್ಳುವ ಜಾಯಮಾನ ನನ್ನಲ್ಲಿ
ಮೊದಲಿನಿಂದಲೂ ಇರಲಿಲ್ಲ.
ಇದು ಮದುವೆ ನಂತರ ಬಂದ ಬದಲಾವಣೆಯಂತೂ ಖಂಡಿತಾ ಅಲ್ಲ.
ಹಾಗಿದ್ದರೆ ಕರಣ್ ಜೋಹರ್ ಅವರ ಚಿತ್ರವನ್ನು
ಒಪ್ಪಿಕೊಳ್ಳದೆ ಇರಲು ಕಾರಣ?
ಕರಣ್ ಅವರ ಚಿತ್ರದಿಂದ ಹೊರಗುಳಿಯಲು ಕಾರಣವಿದೆ.
ಅದರಲ್ಲಿ ನಾನು ಅಭಿಷೇಕ್ ಮತ್ತು ಜಾನ್ ಅಬ್ರಹಾಂ
ಇರಬೇಕಿತ್ತು.
ಈಗ ಬಾಬಿ ಡಿಯೋಲ್ ಕೂಡ ಚಿತ್ರದ ಭಾಗವಾಗಿದ್ದಾರೆ ಎಂದು
ಕಾಣುತ್ತದೆ.
ನಾನು ಮದುವೆಗೆ ಮುನ್ನ ಆ ಚಿತ್ರವನ್ನು
ಒಪ್ಪಿಕೊಂಡಿದ್ದೆ.
ಮೊದಲಿಗೆ ನಾವೆಲ್ಲಾ ಜೊತೆಯಾಗಿ ಕೆಲಸ ಮಾಡಲು
ಉತ್ಸುಕರಾಗಿದ್ದೆವು.
ಹೀಗಾಗಿ ಒಪ್ಪಿಗೆ ಕೊಟ್ಟಿದ್ದೆ.
ಆದರೆ ನಾನು ಮದುವೆಯಾದ ಮೇಲೆ ಕೆಲ ವಿಷಯಗಳತ್ತ
ಗಮನಹರಿಸಲೇ ಬೇಕಾಗುತ್ತದೆ.
ಆ ಚಿತ್ರಕಥೆ ನನಗೆ ಹೊಂದಿಕೆಯಾಗುವುದು ಸಾಧ್ಯವೇ
ಇಲ್ಲ.
ಚಿತ್ರ ನೋಡಿದ ಮೇಲೆ ನಿಮಗೇ ಅದು ತಿಳಿಯುತ್ತದೆ.
ಆ ಚಿತ್ರದಲ್ಲಿ ಅಭಿಷೇಕ್‌ಗೆ ಅತ್ಯುತ್ತಮ
ಪಾತ್ರವಿದೆ.
ಅವರೇ ಅದಕ್ಕೆ ಸೂಕ್ತ ವ್ಯಕ್ತಿ.
ಆದರೆ ಯುವತಿಯ ಪಾತ್ರವನ್ನು ಯಾರು ಬೇಕಾದರೂ
ಮಾಡಬಹುದು.
ಹೀಗಾಗಿ ನಾನು ಮತ್ತು ಅಭಿಷೇಕ್ ಈ ಬಗ್ಗೆ ತುಂಬಾ
ಚರ್ಚಿಸಿದೆವು.
ಕೊನೆಗೆ ನಾನು ಆ ಚಿತ್ರದಿಂದ ಹೊರಬರುವ ತೀರ್ಮಾನ ಕೈಗೊಂಡೆ.
ನಾನು ಈ ಮಾತನ್ನು ಹೇಳುವಾಗ ನೀವೂ ಒಂದು ಸತ್ಯ
ತಿಳಿದುಕೊಳ್ಳಬೇಕು.
ನಾವು ಎಲ್ಲಾ ಚಿತ್ರಗಳಲ್ಲೂ ಪತಿ-
ಪತ್ನಿಯರಾಗೇ ಇರಬೇಕಾಗಿಲ್ಲ.
ಹಾಗೆಯೇ ಈ ಮಾತು ನಮ್ಮ ನಾಲ್ಕು ಜನರಿಗೂ
ಅನ್ವಯಿಸುತ್ತದೆ.
ನಾವು ತೆರೆ ಮೇಲೂ ನಿಜ ಜೀವನದ ಸಂಬಂಧವನ್ನೇ
ಬಿಂಬಿಸಬೇಕಾಗಿಲ್ಲ.
ಆದರೆ ಜೊತೆಯಾಗಿ ಕೆಲಸ ಮಾಡುವಾಗ ಹಾಸ್ಯಾಸ್ಪದವೆನಿಸುವ
ಸಂದರ್ಭಕ್ಕೆ ಎಡೆ ಮಾಡಿಕೊಡಬಾರದು.
ಹೀಗಾಗಿ ನಾನು ಚಿತ್ರಕಥೆಗಳ ಬಗ್ಗೆ ಇನ್ನೂ ಆಳವಾಗಿ
ಗಮನಿಸಬೇಕಾಗುತ್ತದೆ.
ನಿಮ್ಮಲ್ಲಿ ಎಲ್ಲವೂ ಇದೆ...
ವಿಶ್ವ ಸುಂದರಿ ಕಿರೀಟ,
ಜಗತ್ತಿನ ಅತೀ ಸುಂದರ ಯುವತಿಯರಲ್ಲಿ ಒಬ್ಬಾಕೆ,
ಜನಪ್ರಿಯ ನಟಿ,
2004ರಲ್ಲಿ
ಟೈಮ್ ಮ್ಯಾಗಜಿನ್ ನಿಮ್ಮನ್ನು ಜಗತ್ತಿನ
'100 ಅತೀ
ಪ್ರಭಾವೀ ವ್ಯಕ್ತಿ'ಗಳಲ್ಲಿ
ಒಬ್ಬರಾಗಿ ಆರಿಸಿತ್ತು,
ಟೈಮ್ ಮ್ಯಾಗಜೀನ್‌ನ ಮುಖಪುಟದಲ್ಲಿ ಮಿಂಚಿದ್ದೀರಿ,
ಡೇವಿಡ್ ಲೆಟರ್‌ಮ್ಯಾನ್ ಅವರ
'ಲೇಟ್ ಶೋ'ನಲ್ಲಿ
ಹಾಗೂ ಓರ್ಪಾ ಅವರ 'ವಿಮೆನ್
ಎಕ್ರಾಸ್ ಗ್ಲೋಬ್'
ಕಾರ್ಯಕ್ರಮದಲ್ಲಿ ದಾಖಲಾಗಿದ್ದೀರಿ,
ನಂತರ ನವವಧು...
ಐಶ್ವರ್ಯಾ ಇನ್ನೇನು ಬಯಸುತ್ತಾರೆ?
ಭವಿಷ್ಯದಲ್ಲಿ ನನಗೇನು ಕಾದಿದೆ ಎಂದು ನೋಡೋಣ.
ಜೀವನ ಅತಿ ಸುಂದರ.
ಬಹಳಷ್ಟು ಅನ್ವೇಷಣೆ ಮಾಡಲಿದ್ದೇನೆ.
ಪ್ರತಿದಿನವನ್ನು ಹೇಗೆ ಬರುತ್ತದೋ ಹಾಗೆಯೇ
ಕಳೆಯುತ್ತಿದ್ದೇನೆ.
ನಿಮ್ಮ ಹಿಂದಿನ ಚಿತ್ರ
'ಜೋಧಾ ಅಕ್ಬರ್'
ಬಿಡುಗಡೆಯಾಗಲು ಸುಮಾರು ಎರಡು ವರ್ಷಗಳೇ ಹಿಡಿದವು.
ಈ ಎರಡು ವರ್ಷಗಳಲ್ಲಿ ನಿಮ್ಮ ವೈಯಕ್ತಿಕ
ಜೀವನದಲ್ಲೂ ಹಲವು ಘಟನೆಗಳು ನಡೆದವು.
ನಿಮ್ಮ ಮದುವೆಗೆ ಸಣ್ಣ ಬ್ರೇಕ್ ತೆಗೆದುಕೊಂಡಿದ್ದು
ಸೇರಿ ಒಟ್ಟಾರೆಯಾಗಿ ಈ ಪಯಣ ಹೇಗಿತ್ತು?
ಅದು ನಿಜವಾಗೂ ಪುಟ್ಟ ಬ್ರೇಕ್.
ಆದರೆ ಮದುವೆ ಬಳಿಕ ನನಗೆ ಸಿಕ್ಕ ಅತೀ ದೊಡ್ಡ
ಮನ್ನಣೆ ಎಂದರೆ ಮದುವೆ ನಂತರ ಏನೂ ಬದಲಾವಣೆಯಾಗಿಲ್ಲ.
ನೀನಿಂದಿಗೂ ಅದೇ ಹಳೇ ಐಶ್ವರ್ಯಾ ಎನ್ನುವ ಆಶುತೋಷ್
ಅವರ ಮಾತು.
ಸಾಮಾನ್ಯವಾಗಿ ಜನರು ಮದುವೆ ನಂತರ ಕೆಲ ಬದಲಾವಣೆಗಳನ್ನು
ನಿರೀಕ್ಷಿಸುತ್ತಾರೆ.
ಚಿತ್ರದ ಮಟ್ಟಿಗೆ ಹೇಳಬೇಕೆಂದರೆ ನನಗೆ ಒಂದು ವೈಭವದ
ಅನುಭವ ಸಿಕ್ಕಿರುವುದಕ್ಕೆ ಖುಷಿಯಾಗಿದೆ.
ಮೂವರು ಬಚ್ಚನ್‌ಗಳು ಜೊತೆಯಾಗಿ ಬೆಳ್ಳಿತೆರೆ ಮೇಲೆ
ಕಾಣಿಸಿಕೊಳ್ಳುವ ಅವಕಾಶ ನೀಡಿದ 'ಸರ್ಕಾರ್
ರಾಜ್'
ಅನುಭವ?
ನಾವು ಈ ಹಿಂದೆಯೂ ಜೊತೆಯಾಗಿ ನಟಿಸಿದ್ದೇವೆ.
ಆದರೆ ಒಂದು ಕುಟುಂಬವಾಗಿ ಇದು ನಮ್ಮ ಮೊದಲ ಚಿತ್ರ.
ನಾವು ಕ್ಯಾಮರಾ ಮುಂದೆ ಇರುವಾಗ ಪಾತ್ರದೊಳಗೆ
ಸೇರಿರುತ್ತೇವೆ.
ಚಿತ್ರೀಕರಣದ ಬಳಿಕ ಎಂದಿನಂತೆ ಸಂತೃಪ್ತ ಕುಟುಂಬ.
ರಾಮು ಅವರ ಮಹಾತ್ವಾಕಾಂಕ್ಷೆಗೆ ತಕ್ಕನಾಗಿ ಈ
ಅದ್ಭುತ ಚಿತ್ರ ಪೂರ್ಣವಾಗಿದೆ..
ಟಿಎಸ್‌ಐ
|