ವಲಸೆ ನೀತಿ: ಅತಿ ಸರಳ!
ಕೈಬೀಸಿ ಕರೆಯುತ್ತಿದೆ ಸಿಂಗಾಪುರ
ಜನಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಹೆಚ್ಚೆಚ್ಚು ಪ್ರೋತ್ಸಾಹ ನೀಡುತ್ತಿದೆ

ದಕ್ಷಿಣ ಏಷ್ಯಾದ ಅತೀ ಮುಂದುವರಿದ ದೇಶ ತನ್ನ ಅಸ್ತಿತ್ವ ಹಾಗೂ
ಅಭಿವೃದ್ಧಿಗಾಗಿ ವಿದೇಶಿಯರನ್ನು ತನ್ನತ್ತ ಸೆಳೆಯಲು ಶತಾಯಗತಾಯ ಪ್ರಯತ್ನ
ಮಾಡುತ್ತಿದೆ.
ಕೇವಲ 37
ಲಕ್ಷ ಖಾಯಂ ನಿವಾಸಿಗಳಿರುವ ಸಿಂಗಾಪುರ ತನ್ನ
'ಕರೆಯುತ್ತಿದೆ
ಸಿಂಗಾಪುರ'
ಅಭಿಯಾನದ ಪ್ರಚಾರಕ್ಕಾಗಿ ಅಕ್ಷರಶಃ ಹೆಣಗಾಡುತ್ತಿದೆ.
ಸಿಂಗಾಪುರ ಜನಸಂಖ್ಯೆ ಶೇ.
75.2ರಷ್ಟು
ಚೀನೀಯರು,
ಶೇ.
13.6
ಮಲೇಷ್ಯನ್ನರು ಹಾಗೂ ಶೇ.
8.8
ರಷ್ಟು ಭಾರತೀಯರನ್ನು ಒಳಗೊಂಡಿದೆ.
ಅಂದಾಜಿನ ಪ್ರಕಾರ ತಲಾ ಒಂದು ಸಾವಿರಕ್ಕೆ ಜನನ
ಪ್ರಮಾಣ 10.1
ಆಗಿದ್ದರೆ ಮರಣ ಪ್ರಮಾಣ 7.3ರಷ್ಟಿದೆ.
ಇನ್ನೂ ಒಂದು ಆಭಾಸಕಾರಿ ಸಂಗತಿಯೆಂದರೆ,
ಪ್ರತಿ ಮಹಿಳೆಯೊಬ್ಬಳ ಸಂತಾನೋತ್ಪತಿ ಪ್ರಮಾಣ ಕೇವಲ
1.26ರಷ್ಟು
ಮಾತ್ರ!
ಒಟ್ಟಾರೆ ಜನಸಂಖ್ಯಾ ವೃದ್ಧಿ ದರ ಶೇ.
7.7ರಷ್ಟು
ಮಾತ್ರ.
ಅದರಲ್ಲಿ ಸಿಂಗಾಪುರದ ಜನರ ಜನಸಂಖ್ಯಾ ವೃದ್ಧಿ ದರ ಶೇ.
1.8ರಷ್ಟು.
ಹೇಳಬೇಕೆಂದರೆ ಸರ್ಕಾರವೇ ಈ ರೀತಿಯ ವಿಪರ್ಯಾಸಕ್ಕೆ
ಹೊಣೆ.
ರಾಷ್ಟ್ರದ ಕಡಿಮೆ ನೈಸರ್ಗಿಕ ಸಂಪನ್ಮೂಲವನ್ನು ಗಮನಿಸಿ
1950ರಲ್ಲಿ
ಸಿಂಗಾಪುರ ಸರ್ಕಾರ ಜನನ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದಿತ್ತು.
ಇಂದು ಉಳಿದ ದೇಶದ ಜನರನ್ನು ತಮ್ಮಲ್ಲಿಗೆ
ಆಮಂತ್ರಿಸುವಂತೆ ಮಾಡಿದ್ದೂ ಆ ಕಾಯ್ದೆಯೇ!
2000ನೇ
ಇಸವಿಯಲ್ಲಿ ಸಿಂಗಾಪುರ ಸರ್ಕಾರ 'ಬೇಬಿ
ಬೋನಸ್'
ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದು ಸಂತಾನೋತ್ಪತ್ತಿಯನ್ನು
ಪ್ರೋತ್ಸಹಿಸುತ್ತಿದೆ.
ಈ ಯೋಜನೆಯಂತೆ ಸಿಂಗಾಪುರದಲ್ಲಿ ಹುಟ್ಟುವ ಮಕ್ಕಳಿಗೆ ಸರ್ಕಾರ
ಇಂತಿಷ್ಟು ಪ್ರಮಾಣದ ಹಣವನ್ನು ಠೇವಣಿಯಿಡುತ್ತದೆ.
ಆದರೆ ಈ ಯೋಜನೆಯಲ್ಲಿ ಮೊದಲ ಮಗುವಿಗೆ ಯಾವುದೇ
ಲಾಭವಿಲ್ಲ!
ಎರಡನೇ ಮಗುವಿನ ಹೆಸರಿನಲ್ಲಿ
500 ಸಿಂಗಾಪುರ
ಡಾಲರ್ ಹಾಗೂ ಮೂರನೇ ಮಗುವಿನ ಹೆಸರಿನಲ್ಲಿ
1000 ಸಿಂಗಾಪುರ
ಡಾಲರ್‌ನ್ನು ಸರ್ಕಾರ ಠೇವಣಿಯಿಡುತ್ತದೆ.
ಎರಡನೇ ಹಾಗೂ ಮೂರನೇ ಮಗುವಿನ ಮೇಲೆ ಸರ್ಕಾರ ಇದೇ
ರೀತಿ ಐದು ವರ್ಷಗಳವರೆಗೆ ಠೇವಣಿಯಿಡುತ್ತದೆ.
ಹಾಗೆ ಎರಡನೇ ಮಗು
3000 ಹಾಗೂ ಮೂರನೇ
ಮಗು 6000
ಸಿಂಗಾಪುರ ಡಾಲರುಗಳನ್ನು ಪಡೆಯುತ್ತದೆ.
ವಿದೇಶಿಯರನ್ನು ಸೆಳೆಯುವ ಪ್ರಕ್ರಿಯೆ ಸಿಂಗಾಪುರದ
'ಎ ಸ್ಟಾರ್'
ವಿದ್ಯಾರ್ಥಿವೇತನದಿಂದ ಆರಂಭವಾಗುತ್ತದೆ.
ಇದು ವಿದೇಶಿ ವಿದ್ಯಾರ್ಥಿಗಳಿಗಾಗಿಯೇ ಇರುವ
(8,00,000
ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ)
ವಿದ್ಯಾರ್ಥಿವೇತನ.
ಈ ವಿದ್ಯಾರ್ಥಿವೇತನ
(ಏಳು ಅಥವಾ ಎಂಟನೇ
ತರಗತಿ ಉತ್ತೀರ್ಣರಾದವರಿಗೂ ಈ ವಿದ್ಯಾರ್ಥಿವೇತನ ದೊರಕುತ್ತದೆ)
ಸಮಾನ್ಯವಾಗಿ ಎಲ್ಲಾ ಅನುದಾನಗಳನ್ನೂ ಜೊತೆಗೆ ದ್ವೈ
ವಾರ್ಷಿಕ ವಾಯು ಯಾನ ದರವನ್ನೂ ಒಳಗೊಂಡಿರುತ್ತದೆ.
ಈ ವಿದ್ಯಾರ್ಥಿ ವೇತನದ ಫಲಾನುಭವಿಗಳು
ಸಿಂಗಾಪುರದಲ್ಲೇ ಇರುವ ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ತಮ್ಮ
ಶಿಕ್ಷಣವನ್ನು ಮುಂದುವರಿಸಬಹುದು.
ಎಳೆ ಪ್ರಾಯದಲ್ಲಿ ಸಿಂಗಾಪುರಕ್ಕೆ ಬರುವ ಮಕ್ಕಳು
ಸಿಂಗಾಪುರದ ಸಂಸ್ಕೃತಿಗೆ ಒಗ್ಗುತ್ತಾ ಅದನ್ನೇ ಕಲಿಯುತ್ತಾ ಹೋಗುತ್ತಾರೆ ಹಾಗೂ
ಆ ಸುಂದರ ನಾಡಿನಲ್ಲೇ ನೆಲೆಸಲು ಬಯಸುತ್ತಾರೆ ಕೂಡ!
ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳಿಗೆ ಉದ್ಯೋಗ ಒಂದು ಸಮಸ್ಯೆಯೇ ಅಲ್ಲ.
ಪದವಿ ಮುಗಿಸಿದ ವಿದ್ಯಾರ್ಥಿಗಳು ತಮ್ಮದೇ ಆದ
ಉದ್ಯಮವನ್ನು ಆರಂಭಿಸುತ್ತಾರೆ ಕೂಡ.
ಆದ್ದರಿಂದಲೇ ಸುಲಭವಾಗಿ ಉದ್ಯಮ ನಡೆಸುವ ವಿಷಯದಲ್ಲಿ
ಸಿಂಗಾಪುರ ಜಗತ್ತಿನ ನಂ.
1 ರಾಷ್ಟ್ರ.
ಮೊದಲು ಸಿಂಗಾಪುರ ಈ ವಲಸೆ ಪರ ನೀತಿಯನ್ನು ಜಾರಿಗೆ
ತಂದಿದ್ದು ತಮ್ಮ ಗಮ್ಯವಾಗಿದ್ದ ಜಾಗತಿಕ ಆರ್ಥಿಕತೆಯ ನಿಪುಣ
ರಾಜಧಾನಿಯೆನಿಸಿಕೊಳ್ಳಲು.
ಈ ನೀತಿ ಮುಂದೆ ವಿದೇಶಿಯರು ಖಾಯಂ ನಿವಾಸಿಗಳಾಗಲು ಹಾಗೂ
ಕ್ರಮೇಣ ಪೌರತ್ವವನ್ನು ಪಡೆಯಲು ಸುಲಭವಾಗುವಂತೆ ಮಾಡಿತು.
ಒಂದಂತೂ ಸ್ಪಷ್ಟ,
ಕಠಿಣ ಹಾಗೂ ಅವಿರತ ಶ್ರಮದಿಂದ ಸಿಂಗಾಪುರ ತನ್ನ ಗುರಿ
ಮುಟ್ಟುವುದರಲ್ಲಿ ಸಂಶಯವಿಲ್ಲ..
ಐಐಪಿಎಂ
'ಥಿಂಕ್ ಟ್ಯಾಂಕ್
ಸ್ರೇ ಅಗರ್‌ವಾಲ್
ಸೇನೆ: ಪಕ್ಷಪಾತ
ಈ ಜೀವಕ್ಕೆ ಬೆಲೆ ಇಲ್ಲವೇ?
ಅರೆ ಸೇನಾ ಪಡೆಯ ಯೋಧರ ಪ್ರಾಣ ತ್ಯಾಗವೂ ದೇಶಕ್ಕಾಗಿಯೇ

ಅಮರ್ ಜವಾನ್ ಜ್ಯೋತಿ ಪ್ರತಿಯೊಬ್ಬ ಭಾರತೀಯನೂ
ಅತ್ಯಂತ ಗೌರವಾದರಗಳೊಂದಿಗೆ ಕಾಣುವ ಸ್ಮಾರಕ.
'ಇಂಡಿಯಾ
ಗೇಟ್'
ಕಮಾನಿನ ಕೆಳಗೆ ಉರಿಯುತ್ತಿರುವ ದೀಪ,
ಬಂದೂಕು ಹಾಗೂ ಅದರ ಮೇಲಿನ ಸೈನಿಕನ ಟೋಪಿ
ಇವೆಲ್ಲವೂ ಸೈನಿಕರ ಸದ್ದಿಲ್ಲದ ನಿಸ್ವಾರ್ಥ ತ್ಯಾಗಕ್ಕೆ ಸಾಕ್ಷಿ.
ದೇಶದ ವರ್ತಮಾನ ಹಾಗೂ ಭವಿಷ್ಯ ನಿಂತಿರುವುದೇ
ಮಡಿದರೂ ಅಮರರಾಗಿ ಉಳಿದಿರುವ ಆ ಯೋಧರ ತ್ಯಾಗದಲ್ಲಿ.
ಪ್ರಮುಖ ಪ್ರವಾಸಿ ತಾಣವಾಗಿರುವುದು
ಮಾತ್ರವಲ್ಲದೆ ಅಮರ್ ಜವಾನ್ ಜ್ಯೋತಿ ಗಣರಾಜ್ಯೋತ್ಸವ,
ಸ್ವಾತಂತ್ರ್ಯ ದಿನಾಚರಣೆ,
ಭೂಸೇನೆ-
ವಾಯುದಳ ಹಾಗೂ ನೌಕಾ ಪಡೆ ದಿನಾಚರಣೆ,
'ವಿಜಯ್
ದಿವಸ್'
(ಡಿಸೆಂಬರ್
16ರಂದು
ಆಚರಿಸಲಾಗುವ ಈ ದಿನ 1971ರ
ಯುದ್ಧದಲ್ಲಿ ಭಾರತ ಪಾಕಿಸ್ತಾನದ ಮೇಲೆ ಗಳಿಸಿದ ಗೆಲುವಿನ ಸ್ಮರಣಾರ್ಥ)
ಮುಂತಾದ ಪ್ರಮುಖ ಸಂದರ್ಭಗಳಲ್ಲಿ ರಾಷ್ಟ್ರಪತಿ,
ಪ್ರಧಾನ ಮಂತ್ರಿ,
ರಕ್ಷಣಾ ಸಚಿವರು ಹಾಗೂ ಮೂರೂ ಸೇನಾ ಪಡೆಗಳ
ಮುಖ್ಯಸ್ಥರು ರಾಷ್ಟ್ರ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಧಾರೆಯೆರೆದ ಈ
ಯೋಧರಿಗೆ ನಮಿಸುತ್ತಾರೆ.
ವಿಷಯದ ಒಳ ಹೊಕ್ಕು ನೋಡಬೇಕು ಎಂದೆನಿಸುವುದು ಇಲ್ಲೇ.
ರಣ ರಂಗದಲ್ಲಿ ಪರಾಕ್ರಮ ತೋರಿ ಮಡಿದ ಯೋಧರ ಬಗ್ಗೆ
ಅಥವಾ ಯಾರ ಕಣ್ಣಿಗೂ ಬೀಳದೆ ಹಾಗೇ ಮರೆಯಾಗಿ ಹೋದ ಸೈನಿಕನ ಅಮರ ಚೈತನ್ಯದ
ಬಗ್ಗೆ ಮಾತನಾಡುವಾಗ ಅದು ಕೇವಲ ಭೂ ಸೇನೆ-
ಮಾಯುದಳ ಹಾಗೂ ನೌಕಾಪಡೆಗೆ ಮಾತ್ರ
ಸೀಮಿತವಾಗಿರಬೇಕೆ?
ಗಣರಾಜ್ಯೋತ್ಸವದಂಥ ದಿನಗಳಲ್ಲಿ ಅಮರ ಜ್ಯೋತಿಯಲ್ಲಿ
ರಾಷ್ಟ್ರಪತಿ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿರುವಾಗ ಮೂರೂ ಸೇನಾ
ವಿಭಾಗದ ಮುಖ್ಯಸ್ಥರು ಅವರನ್ನು ಸುತ್ತುವರಿದಿರುತ್ತಾರೆ,
ಬಿಟ್ಟರೆ ಅಲ್ಲಿ ಅರೆ ಸೇನಾ ಪಡೆಗಳ ಮುಖ್ಯಸ್ಥರ
ಸುಳಿವೇ ಇರುವುದಿಲ್ಲ ಏಕೆ?
ಇಂದಿನ ಭಾರತದಲ್ಲಿ ಸೇನಾ ಪಡೆ ಹಾಗೂ ದೇಶದ
ಆಂತರಿಕ ಭದ್ರತೆ ಕಾಪಾಡುವ ಹಾಗೂ ಭಾರತ ಎದುರಿಸುವ ಹಲವು ಸಮಸ್ಯೆಗಳನ್ನು
ಸಮರ್ಥವಾಗಿ ನಿಭಾಯಿಸುವ ಅರೆ ಸೇನಾ ಪಡೆಗಳ ಮಧ್ಯೆ ಏನಾದರೂ ವ್ಯತ್ಯಾಸಗಳಿವೆಯೇ?
2005ರಿಂದೀಚೆಗೆ
ನಕ್ಸಲ್ ವಿರುದ್ಧದ ಕಾಳಗದಲ್ಲೇ
500ಕ್ಕೂ ಅಧಿಕ ಭದ್ರತಾ ಸಿಬ್ಬಂದಿ
ಸಾವನ್ನಪ್ಪಿದ್ದಾರೆ.
ಸಾವನ್ನಪ್ಪಿದ ಈ ಸಿಬ್ಬಂದಿ ಕೇಂದ್ರ ಮೀಸಲು ಪೊಲೀಸ್ ಪಡೆ
(ಸಿಆರ್‌ಪಿಎಫ್)ನಂಥ
ಅರೆ ಸೇನಾ ಪಡೆ ಅಥವಾ ರಾಜ್ಯ ಪೊಲೀಸ್ ಸಿಬ್ಬಂದಿ ಎಂಬುದನ್ನು ಮತ್ತೊಮ್ಮೆ
ಹೇಳಬೇಕಾಗಿಲ್ಲ.
ಭಾರತದ ಆಂತರಿಕ ಭದ್ರತೆ ಎಷ್ಟೊಂದು ಜಟಿಲವಾಗುತ್ತಿದೆ
ಎಂದರೆ ಆಂತರಿಕ ಭದ್ರತೆಯ ವಿಷಯವನ್ನು ನಿಭಾಯಿಸುವುದಕ್ಕಾಗಿ ಸಿಆರ್‌ಪಿಎಫ್
ಯೋಧರನ್ನು ವಿಶೇಷ ಆಂತರಿಕ ಭದ್ರತಾ ಪಡೆಯಾಗಿ ಪರಿವರ್ತಿಸಬೇಕು ಎಂದು ಸರ್ಕಾರ
ಆದೇಶ ಹೊರಡಿಸಿದೆ.
ಇದರ ಜೊತೆಗೆ ಆಯಾ ರಾಜ್ಯ ಸರ್ಕಾರಗಳು ಭಯೋತ್ಪಾದನೆಯನ್ನು
ಸಮರ್ಥವಾಗಿ ನಿಭಾಯಿಸಲು ಕೇಂದ್ರ ಮೀಸಲು ಪಡೆಯನ್ನು ಹೆಚ್ಚಿಸಲೂ ಸರ್ಕಾರ
ನಿರ್ಧರಿಸಿದೆ.
ಇಂದು 185
ಸಾಮಾನ್ಯ ಕರ್ತವ್ಯ ನಿರ್ವಹಣಾ ಪಡೆಗಳನ್ನು ಹೊಂದಿರುವ ಸಿಆರ್‌ಪಿಎಫ್ ಬಲಿಷ್ಠ
ಅರೆ ಸೇನಾ ಪಡೆ ಎನಿಸಿಕೊಂಡರೆ,
ಗಡಿ ಭದ್ರತಾ ಪಡೆ
157 ಪಡೆಗಳನ್ನು
ಹೊಂದಿದೆ.
ಇನ್ನು ಅಸ್ಸಾಂ ರೈಫಲ್ಸ್‌ನಲ್ಲಿ
76 ಪಡೆಗಳು
ಹಾಗೂ ಭಾರತ-
ಟಿಬೆಟ್ ಗಡಿ ಪೊಲೀಸ್ ಪಡೆ
(ಐಟಿಬಿಪಿ)ನಲ್ಲಿ
ಹಾಗೂ ಗಡಿ ಕಾವಲು ಪಡೆ (ಎಸ್‌ಎಸ್‌ಬಿ)ನಲ್ಲಿ
ತಲಾ 75
ಹಾಗೂ 71
ಪಡೆಗಳಿವೆ.
2007ರಲ್ಲಿ ಎಲ್ಲಾ
ಅರೆ ಸೇನಾ ಪಡೆಗಳ ಒಟ್ಟು ಸಂಖ್ಯೆ
7,76,878
ಇತ್ತು.
ಅರೆ ಸೇನಾ ಪಡೆಯೇ ಇಲ್ಲದಿದ್ದರೆ ಆಂತರಿಕ ಭದ್ರತೆಯ ಎಲ್ಲಾ
ಜವಾಬ್ದಾರಿಯನ್ನು ಸೇನಾಪಡೆಯಿಂದ ನಿಭಾಯಿಸುವುದು ಸಾಧ್ಯವೇ?
ಒಂದು ವೇಳೆ ಇಲ್ಲವೆಂದಾದರೆ ಸೇನಾ ಪಡೆಗಳಿಗೆ
ದೊರಕುವಂಥ ಗೌರವ,
ಘನತೆ,
ಅನುದಾನಗಳು ಅರೆ ಸೇನಾಪಡೆಗಳಿಗೆ ಏಕೆ ದೊರಕುತ್ತಿಲ್ಲ?
ಸಿಆರ್‌ಪಿಎಫ್,
ಬಿಎಸ್‌ಎಫ್ ಹಾಗೂ ಜಮ್ಮು ಕಾಶ್ಮೀರದ ಪೊಲೀಸರು
ಗಡಿಯಲ್ಲಿ ಸೇನಾ ಪಡೆಗಳ ಭುಜಕ್ಕೆ ಭುಜಕೊಟ್ಟು ದೇಶವನ್ನು ಕಾಪಾಡುತ್ತಾರೆ.
ಒಬ್ಬನ ವೀರಾವೇಶಗಳನ್ನು ಕೊಂಡಾಡಿ,
ಗೌರವಿಸಿ ಮತ್ತೊಬ್ಬನ ತ್ಯಾಗವನ್ನು ಲೆಕ್ಕಕ್ಕೇ
ತೆಗೆದುಕೊಳ್ಳದಿದ್ದರೆ?
ಎಲ್ಲರ ಜೀವ ಅಮೂಲ್ಯ-
ಆದರೆ ಅದನ್ನೇ ತ್ಯಾಗಮಾಡುವವರ ನಡುವೆ ಪಕ್ಷಪಾತ
ತೋರುವುದು ಎಷ್ಟು ಸರಿ?
ಐಐಪಿಎಂ
'ಥಿಂಕ್ ಟ್ಯಾಂಕ್'
ಪಥಿಕೃತ್ ಪಾಯ್ನೆ
|