ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

 
ಇತರ ವಿಭಾಗಗಳು
 
ಇಷ್ಟೇ - ಇಷ್ಟು
ಸ್ಮಿತಾ: ನಟಿ
 

 

'ಅವ್ವ' ಚಿತ್ರದಲ್ಲಿನ ನಿಮ್ಮ ಅಭಿನಯ ಮೆಚ್ಚುಗೆಗೆ ಪಾತ್ರವಾದರೂ ಜನಪ್ರಿಯತೆ ಸಿಕ್ಕಿದ್ದು ಕಡಿಮೆ...

'ಅವ್ವ' ಅಂತಹ ಹಿಟ್ ಚಿತ್ರವೇನೂ ಅಲ್ಲ. ಆ ಚಿತ್ರ ನೋಡಿದ್ದು ಸೀಮಿತ ಪ್ರೇಕ್ಷಕ ವರ್ಗ. ಹಾಗಾಗಿ ನನ್ನನ್ನು ಜನ ಗುರುತಿಸಿದ್ದೂ ಕಡಿಮೆ. ಜನಪ್ರಿಯತೆ ಸಿಗದೆ ಇರುವುದಕ್ಕೆ ಇಂತಹುದೇ ಕಾರಣ ಎಂದು ಹೇಳುವುದು ಕಷ್ಟ.

ಕಲಾತ್ಮಕ ಪಾತ್ರಗಳಷ್ಟೇ ನಿಮಗೊಪ್ಪುವುದು ಎಂಬ ಮಾತಿಗೆ ಏನೆನ್ನುತ್ತೀರಿ?

ಸಂಕುಚಿತ ಮನೋಭಾವ ಇರುವವರು ಹಾಗೆ ಹೇಳಿದರೆ ಏನು ಮಾಡಲಾಗುತ್ತದೆ? ನಟಿಯಾಗಿ ಎಲ್ಲಾ ತರಹದ ಪಾತ್ರಗಳಲ್ಲೂ ನಾನು ಅಭಿನಯಿಸಿದ್ದೇನೆ. 'ಆಕಾಶ ಗಂಗೆ', 'ದೀನ'ದಲ್ಲಿ ನನಗೆ ಸಿಟಿ ಹುಡುಗಿಯ ಲುಕ್ ಇದೆ. ಕಲಾತ್ಮಕ ಚಿತ್ರಗಳಷ್ಟೇ ಒಪ್ಪುವುದು ಎಂಬ ಮಾತು ಸುಳ್ಳು.

ನೀವು ಸೆಟ್‌ಗೆ ಸರಿಯಾಗಿ ಬರೋಲ್ಲ ಎಂಬ ಬಗ್ಗೆ...

'ದೀನ' ಚಿತ್ರದ ಸಂದರ್ಭದಲ್ಲಿ ಸ್ವಲ್ಪ ಸಮಸ್ಯೆ ಸೃಷ್ಟಿಯಾಗಿತ್ತು. ಆದರೆ ನಾನು ಪತ್ರಿಕಾಗೋಷ್ಠಿಗೆ ಹೋಗುವಾಗ ಅನಿವಾರ್ಯ ಕಾರಣದಿಂದ ತಡವಾಗಿತ್ತೇ ಹೊರತು ಸೆಟ್‌ಗೆ ಸರಿಯಾಗಿ ಬರೋದಿಲ್ಲ ಎಂಬುದು ಕೇವಲ ಕಲ್ಪಿತ ಸುದ್ದಿ.

ಮುಂದಿನ ಚಿತ್ರಗಳು?

'ದೀನ' ಬಿಡುಗಡೆಗೆ ಸಿದ್ಧವಾಗಿದೆ. 'ಗಾಂಧಿ ಸ್ಮೈಲ್ಸ್' ಕಲಾತ್ಮಕ ಚಿತ್ರದಲ್ಲಿ ಸಿನಿಮಾ ನಟಿಯ ಪಾತ್ರವಿದೆ. ಬಿಡುಗಡೆಯಾಗಿರುವ 'ಆತ್ಮೀಯ' ಚಿತ್ರದಲ್ಲಿನ ಅಭಿನಯವನ್ನೂ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಆ ಪಾತ್ರ ನನಗೂ ಹಿಡಿಸಿದೆ.

ಟಿಎಸ್‌ಐ

ಡಿ.ಎಸ್. ಶ್ರೀಕಲಾ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .