|
|
ಪ್ರಸೂನ್ ಮಜುಂದಾರ್ |
ವಾಣಿಜ್ಯ ಸಂಪಾದಕ
ದ ಸಂಡೆ ಇಂಡಿಯನ್
|
ಒಬ್ಬ
ವಿದ್ಯಾರ್ಥಿಯ ಪೋಷಕರೊಂದಿಗೆ ಮಾತನಾಡುತ್ತಿದ್ದೆ.
ಹಾಗೆ ಮಾತು ಮುಂದುವರಿಯುತ್ತಿದ್ದಂತೆ ಅವರು
ತಮ್ಮ ಔಷಧಿ ತಯಾರಿಕಾ ಕಂಪನಿಯನ್ನು ಮುಚ್ಚಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ
ಇಳಿಯಲಿದ್ದಾರೆ ಎಂದು ತಿಳಿಸಿದರು.
ಈ ಬದಲಾವಣೆ ನನ್ನನ್ನು ಚಕಿತಗೊಳಿಸಿತು.
ಲಾಭ ತರುವಂತಹ ಔಷಧ ತಯಾರಿಕಾ ಕಂಪನಿಯನ್ನು
ದಿಢೀರ್ ಆಗಿ ಮುಚ್ಚಲು ಬಲವಾದ ಕಾರಣಗಳು ಇರಲೇಬೇಕಲ್ಲವೆ?
ಅದಕ್ಕಾಗಿ ಔಷಧ ತಯಾರಿಕೆಯಿಂದ ಹಠಾತ್ತಾಗಿ
ರಿಯಲ್ ಎಸ್ಟೇಟ್‌ಗೆ ಇಳಿಯಲು ಏನು ಕಾರಣ ಎಂದು ಕೇಳಿದಾಗ,
ಸಣ್ಣ ಹಾಗೂ ತಕ್ಕಮಟ್ಟಿಗಿನ ಔಷಧ ತಯಾರಕರ
ಮುಂದಿರುವ ಸವಾಲುಗಳು ಹಾಗೂ ಉದ್ಯಮವನ್ನು ಮುನ್ನಡೆಸುವಲ್ಲಿ ಅವರು
ಎದುರಿಸುತ್ತಿರುವ ಕಷ್ಟಗಳ ಬಗ್ಗೆ ವಿವರಿಸುತ್ತಾ ಹೋದರು.
ಇಲ್ಲಿರುವ ಪೈಪೋಟಿಗೆ ಎಲ್ಲೆ ಎಂಬುದಿಲ್ಲ
ಎನ್ನುತ್ತಾ ಅವರು ಉದ್ಯಮದ ಹಲವು ಸಮಸ್ಯೆಗಳನ್ನು ನನ್ನ ಮುಂದೆ
ಬಿಡಿಸಿಟ್ಟರು.
ತಮ್ಮ ಕಂಪನಿಯಲ್ಲಿ ತಯಾರಾದ ಔಷಧವನ್ನು ರೋಗಿಗಳಿಗೆ
ಶಿಫಾರಸು ಮಾಡಲು ವೈದ್ಯರು ಹಾಗೂ ರಾಸಾಯನಿಕ ತಜ್ಞರನ್ನು
ಪ್ರೇರೇಪಿಸಬೇಕಾಗುತ್ತದೆ ಹಾಗೂ ಇದು ಔಷಧ ತಯಾರಕರ ಉದ್ಯಮವನ್ನು ಮತ್ತಷ್ಟು
ಕಷ್ಟಸಾಧ್ಯವಾಗಿಸುತ್ತದೆ ಎಂದರು ಅವರು.
ಸುಮಾರು
1300 ಕೋಟಿ
ರೂಪಾಯಿ ಮಾರುಕಟ್ಟೆ ಬೆಲೆಯಿರುವ ಈ ಉದ್ಯಮಲೋಕದಲ್ಲಿ ಸುಮಾರು
20,000
ಔಷಧ ತಯಾರಿಕಾ ಕಂಪನಿಗಳು ಸ್ಪರ್ಧಾಕಣದಲ್ಲಿವೆ.
ಒಂದು ರೀತಿಯಲ್ಲಿ ಅನಾರೋಗ್ಯಕರ ಎಂದೇ
ಹೇಳಬಹುದಾದ ತೀವ್ರ ಸ್ಪರ್ಧೆ ಇರುವ ಈ ಕ್ಷೇತ್ರದಲ್ಲಿ,
ಉಳಿದ ಉತ್ಪನ್ನಗಳ ರೀತಿಯಲ್ಲಿ ತಮ್ಮ
ಗ್ರಾಹಕರನ್ನು ಸೆಳೆಯಲು ನೇರ ಪ್ರಚಾರ ಅಥವಾ ಜಾಹೀರಾತುಗಳಿಂದ ಯಾವುದೇ
ಪ್ರಯೋಜನವಿಲ್ಲ ಎಂಬ ಕಟುವಾಸ್ತವ ಈ ಉದ್ಯಮವನ್ನು ಮತ್ತಷ್ಟು
ಸಂಕೀರ್ಣವಾಗಿಸಿದೆ.
ವೃತ್ತಿ ಕ್ಷೇತ್ರದಲ್ಲಿರುವ ಈ ಎಲ್ಲಾ ಕಾರಣಗಳಿಂದ
ವೈದ್ಯರು ಹಾಗೂ ರಾಸಾಯನಿಕ ತಜ್ಞರಲ್ಲಿ
'ಅರಿವು
ಮೂಡಿಸುವುದಲ್ಲದೆ'
ಇವರ ಮುಂದೆ ಬೇರಾವ ಮಾರ್ಗೋಪಾಯಗಳೂ ಇಲ್ಲ.
ಅಲ್ಲದೆ,
ಕಡ್ಡಾಯ ಆದೇಶಗಳ ಗೈರಿನಿಂದಾಗಿ ವೈದ್ಯರು ಹಾಗೂ
ರಾಸಾಯನಿಕ ತಜ್ಞರು ತಮ್ಮ ವೈದ್ಯಕೀಯ ಶಿಕ್ಷಣದ ಮುಂದುವರಿಕೆಗೆ ಅಥವಾ ಪುನರ್
ದೃಢೀಕರಣಕ್ಕೆ ಔಷಧ ತಯಾರಿಕಾ ಕಂಪನಿಗಳು ನೇಮಿಸಿರುವ ಮೆಡಿಕಲ್
ರೆಪ್ರಸೆಂಟೇಟಿವ್ಸ್‌ಗಳನ್ನು ಅವಲಂಬಿಸುತ್ತಾರೆ.
ಏಕೆಂದರೆ ಅವರಿಗೆ ಅಗತ್ಯವಿರುವ ಮಾಹಿತಿಗಳ
ಏಕೈಕ ಮೂಲವೆಂದರೆ ಈ ಮೆಡಿಕಲ್ ರೆಪ್‌ಗಳು ಮಾತ್ರ!
ಹೀಗೆ ಬಹುತೇಕ ಎಲ್ಲಾ ಔಷಧ ತಯಾರಿಕಾ
ಕಂಪನಿಗಳೂ ಮಾಹಿತಿ ಒದಗಿಸುವ ನೆಪದಲ್ಲಿ ವೈದ್ಯರು ಹಾಗೂ ರಾಸಾಯನಿಕ
ತಜ್ಞರನ್ನು ತಮ್ಮ ಮಾರಾಟ ಹೆಚ್ಚಿಸುವ ಸಲಕರಣೆಗಳನ್ನಾಗಿ ಬಳಸುತ್ತಿವೆ.
ಉದ್ಯಮವನ್ನು ಅದರಲ್ಲೂ ಸಣ್ಣ ಪ್ರಮಾಣದ
ತಯಾರಕರನ್ನು ಕಾಡುತ್ತಿರುವುದು ಕೂಡಾ ಇದೇ ಮಾರುಕಟ್ಟೆ ಲಾಬಿ.
ಸಣ್ಣ ಅಂಗಡಿಗಳು,
ವೈದ್ಯರ ಮೇಜಿನಿಂದ ಹಿಡಿದು ಎಲ್ಲಾ ಕಡೆ ತನ್ನ
ಪರಾಕ್ರಮಗಳನ್ನು ತೋರಿಸುತ್ತಿರುವ ಇದು ಸಣ್ಣ ಪ್ರಮಾಣದ ತಯಾರಕರು ಈ
ಉದ್ಯಮದಲ್ಲಿ ಉಳಿಯುವುದನ್ನೇ ಅಸಾಧ್ಯವಾಗಿಸಿದೆ.
ನೇರ ಮಾರಾಟ ಅಥವಾ ಒಡವೆ,
ಎಲೆಕ್ಟ್ರಾನಿಕ್ ವಸ್ತುಗಳನ್ನು ನೀಡಿ
ವೈದ್ಯರನ್ನೂ,
ರಾಸಾಯನಿಕ ತಜ್ಞರನ್ನೂ ಔಷಧ ತಯಾರಿಕಾ ಕಂಪನಿಗಳು
ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ ಕಾಲ ಹಳೆಯದಾಯಿತು.
ಈಗ ಔಷಧ ತಯಾರಕರು ಮತ್ತೊಂದು ಹೆಜ್ಜೆ ಮುಂದೆ
ಹೋಗಿ,
ವೈದ್ಯರ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವುದಷ್ಟೇ
ಅಲ್ಲದೆ,
ಶಿಫಾರಸು ಮಾಡಿದ ಔಷಧಿಯ ಮೇಲೆ ಹಾಗೂ ಔಷಧಿಯ ಮಾರಾಟದ
ಮೇಲೆ ವೈದ್ಯರಿಗೆ ಒಂದಷ್ಟು ಪ್ರಮಾಣವನ್ನು ನೀಡುತ್ತಿವೆ.
ಈ ರೀತಿ ದೊಡ್ಡ ಪ್ರಮಾಣದ ಪೈಪೋಟಿ ನೀಡಿ ಇದೇ
ಕ್ಷೇತ್ರದಲ್ಲಿ ಮುಂದುವರೆಯುವುದು ಸಣ್ಣ ಪ್ರಮಾಣದ ಔಷಧ ಉತ್ಪನ್ನ
ಕಂಪನಿಗಳಿಗೆ ಸಾಧ್ಯವಾಗದ ಮಾತು.
ಇಲ್ಲಿ ಪ್ರಾಥಮಿಕ ಅರ್ಥಶಾಸ್ತ್ರವೇ
ಮಸಿಬಳಿದುಕೊಂಡಿದೆ ಎಂದರೆ ತಪ್ಪಾಗಲಾರದು.
ಇದು ಇದೇ ರೀತಿ ಮುಂದುವರಿದರೆ ಮುಂದೊಂದು ದಿನ
ಬಹುತೇಕ ಎಲ್ಲಾ ಔಷಧ ತಯಾರಕರೂ ಪರ್ಯಾಯ ಮಾರ್ಗಗಳನ್ನು ಅರಸುತ್ತಾ ಈ ಉದ್ಯಮ
ಕ್ಷೇತ್ರದಿಂದ ದೂರ ಸರಿಯುತ್ತಾರೆ,
ಹಾಗೆ ಕೆಲವೇ ಕೆಲವು ಮಂದಿಯ ಏಕಸ್ವಾಮ್ಯದ
ಅತಿದೊಡ್ಡ ಔಷಧ ಮಾರುಕಟ್ಟೆ ಅಸ್ತಿತ್ವಕ್ಕೆ ಬರುತ್ತದೆ.
ಒಂದು ವೇಳೆ ಹಾಗಾದಲ್ಲಿ ನಂತರದ
ಪರಿಸ್ಥಿತಿಯನ್ನು ಊಹಿಸಿನೋಡಿ.
ಈ ಏಕಸ್ವಾಮ್ಯ ಆ ಉದ್ಯಮ ಕ್ಷೇತ್ರದ
ವರ್ಚಸ್ಸನ್ನೇ ಕುಂದಿಸುವಂಥದ್ದು.
ಬಹುಶಃ ಈ ಎಲ್ಲಾ ಗೊಂದಲಗಳಿಗಿರುವ ಒಂದೇ ಒಂದು
ಪರಿಹಾರವೆಂದರೆ ಮರು ದೃಢೀಕರಣ ಹಾಗೂ ವೈದ್ಯಕೀಯ ಶಿಕ್ಷಣದ
ಮುಂದುವರಿಕೆಯನ್ನು ಕಡ್ಡಾಯವನ್ನಾಗಿಸಬೇಕು.
ಇದರಿಂದ ವೈದ್ಯರು ಹಾಗೂ ರಾಸಾಯನಿಕ ತಜ್ಞರು
ಮಾಹಿತಿಗಾಗಿ ಮೆಡಿಕಲ್ ರೆಪ್ರಸೆಂಟೇಟಿವ್ಸ್‌ನ್ನು ಅವಲಂಬಿಸುವುದು
ತಪ್ಪುತ್ತದೆ ಹಾಗೂ ಔಷಧಗಳು ನ್ಯಾಯಯುತವಾಗಿ ಮಾರಾಟವಾಗುತ್ತವೆ.
ಔಷಧಿ ಹಾಗೂ ಚಿಕಿತ್ಸೆಗೆ ಸಂಬಂಧಪಟ್ಟ ಎಲ್ಲರೂ
ಒಂದು ಮಾತನ್ನು ನೆನಪಿನಲ್ಲಿಡಬೇಕು,
ರೋಗಿಗಳ ಜೀವ ನಿಂತಿರುವುದೇ ಔಷಧಿಗಳ ಮೇಲೆ!
ಐಐಪಿಎಂ
'ಥಿಂಕ್ ಟ್ಯಾಂಕ್'
|