ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಮುಖಪುಟ ಲೇಖನ
ಬಾಂಧವ್ಯ : ಕುಟುಂಬ, ಹಣ, ಕಾಮ-ಪ್ರೇಮ...
 

.

ನೀವು ಯಾರೊಂದಿಗಾದರೂ ಸಂಬಂಧ ಇಟ್ಟುಕೊಂಡಿದ್ದೀರಾ?

ವಿಷಯಕ್ಕೆ ಸಂಬಂಧಿಸಿದಂತೆ ಮೆಟ್ರೋವಾಸಿ ಹದಿಹರೆಯದವರು ಆತ್ಮವಂಚನೆಯ ಪ್ರತೀಕವಾಗಿ ಕಂಡು ಬರುತ್ತಾರೆ. ಒಟ್ಟಾರೆ ಭಾರತೀಯ ಹದಿಹರೆಯದವರ ಪೈಕಿ ಶೇಕಡಾ 55ರಷ್ಟು ಮಂದಿ 'ನಾವು ಸಂಬಂಧಗಳನ್ನು ಇಟ್ಟುಕೊಂಡಿದ್ದೇವೆ' ಎಂದು ಹೇಳಿದ್ದಾರೆ. ಆ ಪೈಕಿ ಮೆಟ್ರೋವಾಸಿಗಳಲ್ಲಿ ಶೇಕಡಾ 50 ಮಂದಿ 'ಹೌದು' ಎಂದಿದ್ದಾರೆ. ಅದೇ ಸಣ್ಣ ನಗರಗಳಲ್ಲಿನ ಶೇಕಡಾ 60ರಷ್ಟು ಹದಿಹರೆಯದವರು ಮುಕ್ತವಾಗಿ 'ಹೌದು' ಎಂಬ ಉತ್ತರ ನೀಡಿದ್ದಾರೆ. ಇದರರ್ಥ ಸಣ್ಣ ನಗರಗಳಲ್ಲಿನ ಹದಿಹರೆಯದವರ ಪಡೆ ಹೆಚ್ಚು ಮುಕ್ತವಾಗಿದೆಯೇ? ಮುಂದಿನ ಪ್ರಶ್ನೆಗಳಿಗೆ ಬಂದ ಉತ್ತರ ನೋಡಿದರೆ, ಮೆಟ್ರೋ ಮಂದಿ ಸತ್ಯಾಂಶ ಮುಚ್ಚಿಡುವ ಯತ್ನ ಮಾಡಿರುವುದು ಸ್ಪಷ್ಟವಾಗುತ್ತದೆ. ಪಶ್ಚಿಮ ಭಾರತದಲ್ಲಿ ಶೇಕಡಾ 75ರಷ್ಟು ಎಳೆಯ ಹೃದಯಗಳು ಸಂಬಂಧಗಳಲ್ಲಿ ಬಂಧಿಯಾಗಿವೆ. ಪೂರ್ವದಲ್ಲಿ ಶೇಕಡಾ 25!

ನೀವು ಯಾರ ಜೊತೆಯಾದರೂ ದೈಹಿಕ ಸಂಬಂಧ ಬೆಳಸಿದ್ದಿರಾ?

ಮೆಟ್ರೋವಾಸಿ ಹದಿಹರೆಯದವರು ಆತ್ಮವಂಚಕರು ಎನ್ನುವುದು ಇಲ್ಲಿ ಸ್ಪಷ್ಟವಾಗಿ ಸಾಬೀತಾಗಿದೆ. ಏಕೆಂದರೆ ಅವರ ಪೈಕಿ ಶೇಕಡಾ 22ರಷ್ಟು ಮಂದಿ ಮಾತ್ರ ಈ ಪ್ರಶ್ನೆಗೆ ಮುಕ್ತವಾಗಿ 'ಹೌದು' ಎಂಬ ಉತ್ತರ ನೀಡಿದ್ದಾರೆ. ಶೇಕಡಾ 35ರಷ್ಟು ಸಣ್ಣನಗರವಾಸಿ ಹದಿಹರೆಯದವರು ಸಂಗಾತಿಯ ಜೊತೆ ದೈಹಿಕ ಸಂಬಂಧ ಇಟ್ಟುಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಭಾರತದಲ್ಲಿ ಸಮಾಜಶಾಸ್ತ್ರಜ್ಞರು ಯಾವುದಾದರೂ ಸಾಮಾಜಿಕ ಕ್ರಾಂತಿಯನ್ನು ಅರಿತುಕೊಳ್ಳಲು ವಿಫಲರಾಗುತ್ತಿದ್ದಾರೆಯೇ? ಅಥವಾ ಮೆಟ್ರೋವಾಸಿಗಳನ್ನು ರಕ್ಷಿಸಿಕೊಳ್ಳುವ ಆಟವಾಡುತ್ತಿದ್ದಾರೆಯೇ? ಪೂರ್ವ ಭಾರತದಲ್ಲಿ ಈ ಪ್ರಮಾಣ ಶೇಕಡಾ 5ದಂತೆ! ಅದೇ ಪಶ್ಚಿಮ ಭಾರತದಲ್ಲಿ ಅದು ಶೇಕಡಾ 50ರ ಹತ್ತಿರವಿದೆ. ಹಾಗಿದ್ದರೆ ಇವರ ನಡುವಿನ ವ್ಯತ್ಯಾಸ?

ನೀವು ಸುರಕ್ಷಿತ ಲೈಂಗಿಕ ಕ್ರಿಯೆಗೆ ಆದ್ಯತೆ ನೀಡುತ್ತೀರಾ?

ಮೆಟ್ರೋವಾಸಿ ಹದಿಹರೆಯದವರ ಅಂತರಂಗದಲ್ಲಿ ಏನಿದೆ ಎನ್ನುವುದನ್ನು ಈ ಪ್ರಶ್ನೆ ಬಹಿರಂಗ ಪಡಿಸಿದೆ. ಆ ಪೈಕಿ ಶೇಕಡಾ ೮5ರಷ್ಟು ಮಂದಿ ನಾವು ಲೈಂಗಿಕ ಕ್ರಿಯೆ ನಡೆಸಿಯೇ ಇಲ್ಲ ಎಂದಿದ್ದಾರೆ. ನಾವು ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸುತ್ತಲೇ ಇಲ್ಲ. ಆದ್ದರಿಂದ ಈ ಪ್ರಶ್ನೆ ನಮಗೆ ಅನ್ವಯವಾಗುವುದಿಲ್ಲ ಎಂದು ಶೇಕಡಾ 47 ಹದಿಹರೆಯದವರು ಉತ್ತರಿಸಿದ್ದಾರೆ. ಆದರೆ, ಸಣ್ಣನಗರಗಳಲ್ಲಿನ ಹದಿಹರೆಯದವರು ಮಾತ್ರ ಸಹಜವಾಗಿಯೇ ಈ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿದ್ದಾರೆ. ಈ ಎರಡೂ ಪ್ರಶ್ನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ನಗರ ಪ್ರದೇಶಗಳಲ್ಲಿನ ಭಾರತೀಯ ಹದಿಹರೆಯದವರ ಪೈಕಿ ಶೇಕಡಾ 40 ಮಂದಿ ಲೈಂಗಿಕ ಕ್ರಿಯೆಯಲ್ಲಿ ಅವರನ್ನು ತೊಡಗಿಸಿಕೊಂಡಿದ್ದಾರೆ. ಪೋಷಕರು ಯೋಚಿಸಬೇಕು!

ನಿಮ್ಮ ಪೋಷಕರ ಬಳಿ ಸುಳ್ಳು ಹೇಳುತ್ತೀರಾ?

ಮೂರರ ಪೈಕಿ ಇಬ್ಬರು ಪಟ್ಟಣವಾಸಿ ಭಾರತೀಯ ಹದಿಹರೆಯದವರು 'ನಾವು ಪೋಷಕರ ಬಳಿ ಸುಳ್ಳು ಹೇಳುತ್ತೇವೆ' ಎಂದು ಒಪ್ಪಿಕೊಂಡಿದ್ದಾರೆ. ಅದು ಯಾವಾಗಲೂ ಅಥವಾ ಯಾವಾಗಲಾದರೂ ಒಮ್ಮೆ ಎಂದು. ಆ ಪೈಕಿ ಶೇಕಡಾ 65ರಷ್ಟು ಹದಿಹರೆಯದವರು 'ಸುಳ್ಳು ಹೇಳುವುದು ಉತ್ತಮ ಅಭ್ಯಾಸ' ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇಕಡಾ 11ರಷ್ಟು ಮಂದಿ 'ಸುಳ್ಳು ಹೇಳುವುದು ತಪ್ಪು' ಎಂದು ಒಪ್ಪಿಕೊಂಡಿದ್ದಾರೆ. ಭಾರತೀಯ ಕುಟುಂಬ ಪದ್ಧತಿ ಒತ್ತಡಕ್ಕೆ ಸಿಲುಕಿದೆ ಮತ್ತು ಮಕ್ಕಳು ಹೇಗೆ ಪೋಷಕರಿಂದ ದೂರವಾಗಿದ್ದಾರೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ.

ನಿಮ್ಮ ದೃಷ್ಟಿಯಲ್ಲಿ ಯಾವುದು ಮಹತ್ವದ್ದು?

ಭಾರತೀಯ ಹದಿಹರೆಯದವರಿಂದ ಕುಟುಂಬಕ್ಕಿಂತ ನನಗೆ ಹಣ ಮುಖ್ಯ ಎಂಬ ಉತ್ತರವನ್ನು ಎಂದಾದರೂ ನಿರೀಕ್ಷಿಸಲು ಸಾಧ್ಯವೇ? ಈ ನಡುವೆಯೂ ಪೂರ್ವ ಭಾರತದಲ್ಲಿ ಶೇಕಡಾ 10ರಷ್ಟು ಹದಿಹರೆಯದವರು ನಮಗೆ ಕುಟುಂಬಕ್ಕಿಂತ ಹಣ ಮುಖ್ಯ ಎಂದು ಹೇಳಿ ಅಚ್ಚರಿಯ ಅಲೆ ಎಬ್ಬಿಸಿದ್ದಾರೆ. ಪಶ್ಚಿಮ ಭಾರತದಲ್ಲಿ ಶೇಕಡಾ 5ರಷ್ಟು ಮಂದಿ ಮಾತ್ರ ನಮಗೆ ಕುಟುಂಬಕ್ಕಿಂತ ಹಣ ಮುಖ್ಯ ಎಂಬ ಉತ್ತರ ನೀಡಿದ್ದಾರೆ

ಟಿಎಸ್‌ಐ

ಮುಖಪುಟ ಲೇಖನದಲ್ಲಿ ಇನ್ನೇನಿದೆ

ರಾಷ್ಟ್ರ ಮಟ್ಟದ ಪ್ರಪ್ರಥಮ ಐಸಿಎಂಆರ್-ಟಿಎಸ್‌ಐ ಸಮೀಕ್ಷೆ

ಹದಿಹರೆಯದ ಹೃದಯದಾಳದಲ್ಲಿ :  ಭವಿಷ್ಯದ ಬೆಳಕು ನಾಳೆಗಳ ನಂಟಿನ ಹರೆಯ...

ಹದಿಹರೆಯದ ಪ್ರಬುದ್ಧತೆ : ರಾಷ್ಟ್ರೀಯ

ರಾಷ್ಟ್ರೀಯ: ದೇಶ ಕಾಯುವವರ ಮಕ್ಕಳ ಕಾಯುವವರ್‍ಯಾರು?

ರಾಜಕೀಯ : ಯಾರು ಹಿತವರು ನಮಗೆ...

ರಾಜಕೀಯ: ಕೀಳು ರಾಜಕೀಯವನ್ನು ತೆಗಳಿ, ರಾಜಕಾರಣವನ್ನಲ್ಲ

ಬಾಂಧವ್ಯ : ಕುಟುಂಬ, ಹಣ, ಕಾಮ-ಪ್ರೇಮ...

ಬಾಂಧವ್ಯ: ಹದಿಹರೆಯಕ್ಕೆ ಅಧ್ಯಾತ್ಮದ ಸ್ಪರ್ಶ

ಸಂಗೀತ ಲೋಕ: ಹದಿಹರೆಯದ ಸಂಗೀತಗಾಥೆ

ಸಿನಿಮಾ ಪ್ರಪಂಚ : ಬಾಲಿವುಡ್ ಕನಸುಗಳು

ಕ್ರೀಡಾ ಲೋಕ : ಬೆಂಕಿಯ ಚಿಲುಮೆ ಎಲ್ಲಿದೆ?

ಕ್ರೀಡಾ ಲೋಕ: ಬದ್ಧತೆಯಿದ್ದಲ್ಲಿ ಬಯಕೆ ಕೈಗೂಡುವುದು ಖಚಿತ

ವೈವಿಧ್ಯಮಯ : ದೇವರು, ಧರ್ಮ ಮತ್ತು ಆದರ್ಶ ಪ್ರಾಯರು

ವೈವಿಧ್ಯಮಯ: ತಾರುಣ್ಯದ ಕನಸು- ಕನವರಿಕೆಯ ನಡುವೆ

ಡಿಂಪಲ್ ಚೆಲುವೆ ದೀಪಿಕಾ

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .