ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಮುಖಪುಟ ಲೇಖನ
ಸಿನಿಮಾ ಪ್ರಪಂಚ : ಬಾಲಿವುಡ್ ಕನಸುಗಳು
 

.

ನಿಮ್ಮ ಅಚ್ಚುಮೆಚ್ಚಿನ ಬಾಲಿವುಡ್ ನಟ ಯಾರು?

ನಿರೀಕ್ಷೆಯಂತೆಯೇ ಕಿಂಗ್ ಖಾನ್ ಹದಿಹರೆಯದವರ ಹೃದಯಕ್ಕೆ ಕಿಚ್ಚು ಹಚ್ಚಿರುವ ನಟ. ನಗರ ಪ್ರದೇಶದ ಶೇಕಡಾ 2೬ರಷ್ಟು ಹದಿಹರೆಯದ ಹೃದಯಗಳಿಗೆ ಶಾರುಖ್ ಖಾನ್ ಅಚ್ಚುಮೆಚ್ಚು. ಉಳಿದಂತೆ ಇಬ್ಬರಿಗೆ ಮಾತ್ರ ಶೇಕಡಾ 10ರಷ್ಟು ಬೆಂಬಲ ಸಿಕ್ಕಿದೆ. ಸಲ್ಮಾನ್ ಖಾನ್‌ಗೆ ಶೇಕಡಾ 13ರಷ್ಟು ಮತ್ತು ಹೃತಿಕ್ ರೋಷನ್‌ಗೆ ಶೇಕಡಾ 11ರಷ್ಟು ಬೆಂಬಲ ದೊರಕಿದೆ. ಆದರೆ, ಮೆಟ್ರೊ ಹಾಗೂ ಸಣ್ಣ ನಗರಗಳಲ್ಲಿರುವ ಹದಿಹರೆಯದ ಹೃದಯ ಕಲರವದಲ್ಲಿ ವ್ಯತ್ಯಾಸವಿದೆ. ಮೆಟ್ರೊ ಪೈಕಿ ಶಾರುಖ್‌ಗೆ ಶೇಕಡಾ 32ರಷ್ಟು ಬೆಂಬಲ ದೊರಕಿದ್ದರೆ, ಸಣ್ಣನಗರಗಳ ಹದಿಹರೆಯದ ಮಂದಿ ಪೈಕಿ ಶೇಕಡಾ 18ರಷ್ಟು ಮಂದಿ ಮಾತ್ರ ಅವರ ಬೆನ್ನ ಹಿಂದೆ ನಿಂತಿದ್ದಾರೆ. ಮೆಟ್ರೋಗಳಲ್ಲಿ ಸಲ್ಮಾನ್‌ಗೆ ಶೇಕಡಾ 10ರಷ್ಟು ಮತ್ತು ಸಣ್ಣ ನಗರಗಳಲ್ಲಿ ಶೇಕಡಾ 18ರಷ್ಟು ಮತ ಸಿಕ್ಕಿದೆ. ಹಾ! ಸಣ್ಣ ನಗರಗಳಲ್ಲಿ ಸಲ್ಮಾನ್ ಅವರು ಶಾರುಖ್ ಅವರಷ್ಟೇ ಜನಪ್ರಿಯ.

ನಿಮಗೆ ಬಾಲಿವುಡ್ ಅಥವಾ ಹಾಲಿವುಡ್ ಸಿನಿಮಾ ಪೈಕಿ ಯಾವುದು ಇಷ್ಟ?

ಮೇಲಿನ ಪ್ರಶ್ನೆಗೆ ಭಾರತದ ಹದಿಹರೆಯದ ಪಡೆ ಆಶ್ಚರ್ಯಕರ ಉತ್ತರ ನೀಡಿದೆ. ಮೆಟ್ರೋ ಹಾಗೂ ಸಣ್ಣ ನಗರಗಳೆರಡರಲ್ಲಿಯೂ ಒಂದೇ ಪ್ರಮಾಣದಲ್ಲಿ ಹದಿಹರೆಯದವರು ಹಾಲಿವುಡ್ ಸಿನಿಮಾಗಳನ್ನು ನೋಡುವುದೆಂದರೆ ನಮಗೆ ಬಹಳ ಇಷ್ಟ ಎಂದಿದ್ದಾರೆ. ಇದನ್ನು ನೀವು ಜಾಗತೀಕರಣದ ಪರಿಣಾಮ ಎನ್ನಿ ಅಥವಾ ಬಯಕೆಗಳ ಮೇಲಾಟ ಎನ್ನಿ. ಉತ್ತರ ಹಾಗೂ ದಕ್ಷಿಣ ಭಾರತದ ಸಣ್ಣ ನಗರಗಳಲ್ಲಿನ ಹದಿಹರೆಯದವರ ಪಾಲಿಗೆ ಹಾಲಿವುಡ್ ಎಂದರೆ ಅಚ್ಚುಮೆಚ್ಚು. ಇನ್ನು ದೇಶದ ಪೂರ್ವ ಭಾಗದಲ್ಲಿನ ಹದಿಹರೆಯದವರ ಪಾಲಿಗೆ ಬಾಲಿವುಡ್ ಸಿನಿಮಾಗಳೆಂದರೆ ಪಂಚಪ್ರಾಣ. ಅವರಿಂದಾಗಿಯೇ ಒಟ್ಟಾರೆ ಸಮೀಕ್ಷೆಯಲ್ಲಿ ಹಾಲಿವುಡ್ ಮೀರಿ ಬಾಲಿವುಡ್ ನಿಂತಿರುವುದು. ಇಲ್ಲಿ ಬಾಲಿವುಡ್- ಹಾಲಿವುಡ್ ಸಮಾನಾಂತರವಾಗಿವೆ.

ನಿಮ್ಮ ಹೃದಯಕ್ಕೆ ಕಿಚ್ಚು ಹಚ್ಚಿದ ಮಾದಕ ತಾರೆ ಯಾರು?

ಈ ಪ್ರಶ್ನೆಗೆ ಉತ್ತರ ಹುಡುಕಲು ಹೊರಟಾಗ ಭಾರತ ಮತ್ತು ಇಂಡಿಯ ನಡುವಿನ ಸಂಘರ್ಷ ಎದ್ದು ಕಾಣಿಸಿತು. ಸಮೀಕ್ಷೆಯ ಪ್ರಕಾರ ಬಿಪಾಷ ಬಸು ಹಾಗೂ ಮಲ್ಲಿಕಾ ಶೆರಾವತ್‌ಗೆ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ದೊರಕಿದೆ. ಈ ಪೈಕಿ ಬಿಪಾಷ ಮೆಟ್ರೋಗಳಲ್ಲಿ ಮೆರೆದರೆ, ಮಲ್ಲಿಕಾ ಸಣ್ಣ ನಗರಗಳಲ್ಲಿ ಸೊಂಟ ಬಳುಕಿಸಿದ್ದಾರೆ. ಅಚ್ಚರಿಯ ವಿಷಯವೆಂದರೆ ಟೆನಿಸ್ ತಾರೆ ಸಾನಿಯ ಮಿರ್ಜಾ ಮೆಟ್ರೋಗಳಲ್ಲಿ ಹಾಗೂ ರಾಖಿ ಸಾವಂತ್ ಸಣ್ಣ ನಗರಗಳಲ್ಲಿ ಮೂರನೇ ಸ್ಪರ್ಧಿಗಳಾಗಿ ಹೊರಹೊಮ್ಮಿರುವುದು. ಇನ್ನೂ ಆಶ್ಚರ್ಯ! ಮೆಟ್ರೋಗಳಲ್ಲಿ ಮತ ಚಲಾಯಿಸಿದವರ ಕಣ್ಣಿಗೆ ಸಲ್ಮಾನ್ ಖಾನ್ ಈ ಪಟ್ಟಿಯಲ್ಲಿ ಐದನೇಯವರಾಗಿ ಬಿದ್ದಿದ್ದಾರೆ. ಅರ್ಬಾಜ್ ಖಾನ್‌ಗೆ ಸಣ್ಣ ನಗರಗಳಲ್ಲಿ ಅಗ್ರಸ್ಥಾನ. ಕೇವಲ ಶೇಕಡಾ 2ರಷ್ಟು ಮಂದಿ ಮಾತ್ರ ಶಾರುಖ್ ಕಡೆ ಒಲವು ತೋರಿದ್ದಾರೆ.

ನಿಮ್ಮ ಅಚ್ಚುಮೆಚ್ಚಿನ ಬಾಲಿವುಡ್ ನಟಿ ಯಾರು?

ಮೆಟ್ರೋ ಹಾಗೂ ಸಣ್ಣನಗರಗಳ ನಡುವೆ ಅಪಾರ ವ್ಯತ್ಯಾಸ ಮೂಡಿದೆ. ಎರಡೂ ವಿಭಾಗಗಳಲ್ಲಿ ಸ್ಥಾನ ಕಾಪಾಡಿಕೊಂಡಿರುವುದು ಮೂರನೇಯದಾಗಿ ಆಯ್ಕೆಯಾದ ರಾಣಿ ಮುಖರ್ಜಿ ಮಾತ್ರ. ದೊಡ್ಡ ನಗರಗಳನ್ನು ತೆಗೆದುಕೊಂಡರೆ ಐಶ್ವರ್ಯ ರೈ ಬಚ್ಚನ್ ಎಲ್ಲರಿಗಿಂತ ಮೈಲುಗಟ್ಟಲೇ ಮುಂದಿದ್ದಾರೆ. ಸಣ್ಣನಗರಗಳಲ್ಲಿ ಆ ಸ್ಥಾನವನ್ನು ಕತ್ರೀನಾ ಕೈಫ್ ಆಕ್ರಮಿಸಿಕೊಂಡಿದ್ದಾರೆ. ಈ ಬಗ್ಗೆ ಸಮಾಜಶಾಸ್ತ್ರಜ್ಞರ ಬಳಿ ಅವರದೇ ಆದ ಸಿದ್ಧಾಂತಗಳು ಇರಬಹುದು. ಸಣ್ಣ ನಗರಗಳಲ್ಲಿನ ಹದಿಹರೆಯದವರು ಹೆಚ್ಚು ಮಹತ್ವಾಕಾಂಕ್ಷೆಯುಳ್ಳವರು ಎಂದು ಇದರ ಅರ್ಥವೇ?

 

ಟಿಎಸ್‌ಐ

ಮುಖಪುಟ ಲೇಖನದಲ್ಲಿ ಇನ್ನೇನಿದೆ

ರಾಷ್ಟ್ರ ಮಟ್ಟದ ಪ್ರಪ್ರಥಮ ಐಸಿಎಂಆರ್-ಟಿಎಸ್‌ಐ ಸಮೀಕ್ಷೆ

ಹದಿಹರೆಯದ ಹೃದಯದಾಳದಲ್ಲಿ :  ಭವಿಷ್ಯದ ಬೆಳಕು ನಾಳೆಗಳ ನಂಟಿನ ಹರೆಯ...

ಹದಿಹರೆಯದ ಪ್ರಬುದ್ಧತೆ : ರಾಷ್ಟ್ರೀಯ

ರಾಷ್ಟ್ರೀಯ: ದೇಶ ಕಾಯುವವರ ಮಕ್ಕಳ ಕಾಯುವವರ್‍ಯಾರು?

ರಾಜಕೀಯ : ಯಾರು ಹಿತವರು ನಮಗೆ...

ರಾಜಕೀಯ: ಕೀಳು ರಾಜಕೀಯವನ್ನು ತೆಗಳಿ, ರಾಜಕಾರಣವನ್ನಲ್ಲ

ಬಾಂಧವ್ಯ : ಕುಟುಂಬ, ಹಣ, ಕಾಮ-ಪ್ರೇಮ...

ಬಾಂಧವ್ಯ: ಹದಿಹರೆಯಕ್ಕೆ ಅಧ್ಯಾತ್ಮದ ಸ್ಪರ್ಶ

ಸಂಗೀತ ಲೋಕ: ಹದಿಹರೆಯದ ಸಂಗೀತಗಾಥೆ

ಸಿನಿಮಾ ಪ್ರಪಂಚ : ಬಾಲಿವುಡ್ ಕನಸುಗಳು

ಕ್ರೀಡಾ ಲೋಕ : ಬೆಂಕಿಯ ಚಿಲುಮೆ ಎಲ್ಲಿದೆ?

ಕ್ರೀಡಾ ಲೋಕ: ಬದ್ಧತೆಯಿದ್ದಲ್ಲಿ ಬಯಕೆ ಕೈಗೂಡುವುದು ಖಚಿತ

ವೈವಿಧ್ಯಮಯ : ದೇವರು, ಧರ್ಮ ಮತ್ತು ಆದರ್ಶ ಪ್ರಾಯರು

ವೈವಿಧ್ಯಮಯ: ತಾರುಣ್ಯದ ಕನಸು- ಕನವರಿಕೆಯ ನಡುವೆ

ಡಿಂಪಲ್ ಚೆಲುವೆ ದೀಪಿಕಾ

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .