ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಮುಖಪುಟ ಲೇಖನ : ಸಾಧನಾ ಲೋಕ
ವೈವಿಧ್ಯಮಯ : ದೇವರು, ಧರ್ಮ ಮತ್ತು ಆದರ್ಶ ಪ್ರಾಯರು
 ಪರಿಪೂರ್ಣ ಹದಿಹರೆಯ
ಹದಿಹರೆಯದಲ್ಲೇ ಯಶಸ್ಸಿನ ಏಣಿ ಏರಿದ ಯುವ ಸಾಧಕರನ್ನು ಭೇಟಿಯಾಗಿ. ಒಂದು ತಲೆಮಾರನ್ನೇ ಪ್ರೇರೇಪಿಸಿದ ಮತ್ತು ದೇಶಕ್ಕೆ ಕೀರ್ತಿ ತಂದುಕೊಟ್ಟವರಿವರು. ಇವರ ಪಾಲಿಗೆ ಇದು ಒಂದು ಆರಂಭ ಅಷ್ಟೆ...

'ನಮಗೆ ಜಗತ್ತು ಬೇಕು, ಈಗಲೇ ಬೇಕು'

-'ದ ಡೋರ್‍ಸ್' ರಾಕ್ ತಂಡದ 'ವೆನ್ ದ ಮ್ಯೂಸಿಕ್ ಈಸ್ ಓವರ್' ಆಲ್ಬಂನ ಒಂದು ಸಾಲು

ಹದಿಹರೆಯದವರಲ್ಲಿ ಜಿಮ್ ಮಾರಿಸನ್ ಟೀ ಶರ್ಟ್‌ಗಳು ಹೆಚ್ಚು ಪ್ರಿಯವಾಗುತ್ತವೆ. ಮಾರಿಸನ್ ಅವರೇ ಮೇಲಿನ ಸಾಲನ್ನು ಬರೆದವರು. ಭಾರತದ ಈಗಿನ ಯುವಜನತೆ ಜಗತ್ತನ್ನು ನೋಡುವ ದೃಷ್ಟಿಗೆ ಮತ್ತು ಅವರ ಭಾವನೆಗಳಿಗೆ ಇದು ಅತ್ಯುತ್ತಮ ವ್ಯಾಖ್ಯಾನ. ತಮ್ಮ ಕನಸುಗಳನ್ನು ಸಾಕಾರಗೊಳಿಸಿದ ಮತ್ತು ಆಶಯಗಳನ್ನು ಹದಿಹರೆಯದಲ್ಲೇ ನಿಜವಾಗಿಸಿ ತೋರಿಸಿ ಯಶಸ್ಸಿನ ಏಣಿ ಏರಿದ ಯುವ ಜನರ ಒಂದು ಸಮೂಹವೇ ನಮ್ಮ ಮುಂದಿದೆ. ತಮ್ಮ- ತಮ್ಮ ಕ್ಷೇತ್ರಗಳಲ್ಲಿ ಅಸಾಧ್ಯವಾದುದನ್ನು ಸಾಧಿಸಿ ಅಗಾಧವಾಗಿ ಬೆಳೆದ ಕುಡಿಗಳಿವರು. ಯಶಸ್ಸು ಪಡೆಯುವ ಮುನ್ನವೇ ಮೊಡವೆ ಏಳುವ, ಏಕಾಗ್ರತೆ ಸಾಧಿಸುವ ಮುನ್ನ ಹುಚ್ಚು ಕೋಪ ಪ್ರದರ್ಶಿಸುವ ವಯಸ್ಸದು. ಆದರೆ ಈ ಯುವಜನರು ತಮ್ಮ ಸಾಧನೆಗಳಿಂದ ಹೊಸ ಭಾಷ್ಯ ಬರೆದು ಉಳಿದ ಪೋರರಿಗೆ ದಾರಿದೀಪವಾಗಿದ್ದಾರೆ. ಹದಿಹರೆಯದಲ್ಲಿ ಯಾವುದೇ ರಚನಾತ್ಮಕ ಕೆಲಸ ಸಾಧಿಸಲು ಅಸಾಧ್ಯ ಎನ್ನುವವರ ದೃಷ್ಟಿಕೋನದಲ್ಲೇನೋ ಊನವಾಗಿದೆ ಎಂದು ತೋರಿಸಿಕೊಟ್ಟಿದ್ದಾರೆ ಸುಹಾಸ್ ಗೋಪಿನಾಥ್, ಅಂಕಿತ್ ಫಾಡಿಯಾ, ಪ್ರಾಚಿ ದೇಸಾಯಿ ಮತ್ತು ಸುನಿಧಿ ಚೌಹಾಣ್. ಇವರೆಲ್ಲ ವಿಭಿನ್ನ ಕ್ಷೇತ್ರಗಳಲ್ಲಿ ಹೆಸರು ಮಾಡಿದವರು.

ಕಂಪ್ಯೂಟರ್‌ಗಳು ಯಾವುದೇ ಯುವ ಮತ್ತು ಜಿಜ್ಞಾಸೆ ಹುಟ್ಟಿಸುವ ಮನಸ್ಸುಗಳಿಗೆ ಮೋಡಿ ಹಾಕುವ ಸಾ ಮ್ರಾಜ್ಯ. ಆದರೆ ಅಂಕಿತ್ ಫಾಡಿಯಾ ಇದಕ್ಕೆ ಹೊರತಾಗಿದ್ದಾರೆ. ಇವರು 'ಎಥಿಕಲ್ ಕಂಪ್ಯೂಟರ್ ಹ್ಯಾಕಿಂಗ್' (ನೈತಿಕ ಕಂಪ್ಯೂಟರ್ ಹ್ಯಾಕಿಂಗ್) ಜಗತ್ತಿನತ್ತ ಆಕರ್ಷಿತನಾಗಿದ್ದ ಹುಡುಗ. ಸಾಮಾನ್ಯ ಪ್ರೋಗ್ರಾಮ್‌ಗಳು/ ಸಾಫ್ಟ್‌ವೇರ್‌ಗಳಿಗೆ ಹೊರತಾಗಿರುವ ಒಂದು ಉದ್ದೇಶವನ್ನು ಪೂರೈಸಲು ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ತಯಾರಿಯಲ್ಲಿ ತೊಡಗಿಸಿಕೊಂಡಿದ್ದ. ಆಗ ಆತನ ವಯಸ್ಸು? ಹನ್ನೆರಡು! ಈ ಅದ್ಭುತ ಪ್ರತಿಭೆ ಎಲ್ಲರ ಗಮನ ಸೆಳೆದದ್ದು 14ರ ಪ್ರಾಯದಲ್ಲಿ. ತಾನೇ ಬರೆದ 'ಅನ್ ಅಫಿಶಿಯಲ್ ಗೈಡ್ ಟು ಎಥಿಕಲ್ ಹ್ಯಾಕಿಂಗ್' (ನೈತಿಕ ಹ್ಯಾಕಿಂಗ್‌ಗೆ ಅಧಿಕೃತ ಮಾರ್ಗದರ್ಶಿ) ಪುಸ್ತಕ ಪ್ರಕಟಿಸಿದಾಗ. ಜಗತ್ತಿನಾದ್ಯಂತ ಈ ಪುಸ್ತಕದ ಐದು ಲಕ್ಷಗಳಿಗೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ. ಕೆಲ ಸಮಯದಲ್ಲೇ ಈ ವಿಷಯಕ್ಕೆ ಸಂಬಂಧಿಸಿ ಹಲವಾರು ಪುಸ್ತಕಗಳನ್ನು ಬರೆದ ಫಾಡಿಯಾ ಆ ಕ್ಷೇತ್ರದಲ್ಲಿ ತರಬೇತುದಾರನಾದ. 16ನೇ ವಯಸ್ಸಿನಲ್ಲಿ ಫಾಡಿಯಾ ಅಲ್-ಖೈದಾ ಭಯೋತ್ಪಾದನಾ ಜಾಲ ಉನ್ನತ ಗುಪ್ತಚರ ಸಂಸ್ಥೆಗೆ ಕಳುಹಿಸಿದ ಇ- ಮೇಲ್ ಗುಪ್ತ ಸಂದೇಶವನ್ನು ಹ್ಯಾಕ್ ಮಾಡಿದ್ದ. ಉಳಿದ ಮಕ್ಕಳೆಲ್ಲಾ ಪತ್ತೇದಾರಿ ಕಾದಂಬರಿಗಳನ್ನು ಓದಿ ಸಂತೃಪ್ತಿ ಪಡುವ ವಯಸ್ಸಿನಲ್ಲಿ ಅಂಕಿತ್ ಈ ಸಾಧನೆ ಮಾಡಿದ್ದ. ಒಬ್ಬ ಹದಿನಾರರ ಹುಡುಗ ಹೇಗೆ ಇದನ್ನು ಸಾಧಿಸಿದ? "ಅಡಗಿಸಿಟ್ಟ ಹಣ್ಣುಗಳತ್ತಲೇ ಯಾವಾಗಲೂ ಆಕರ್ಷಿತರಾಗುವುದು ಎನ್ನುವ ಮಾತಿದೆ. ಹ್ಯಾಕಿಂಗ್ ಇಂತಹುದೇ ಒಂದು ಗೂಢ ಜಗತ್ತು. ಆರಂಭದ ಹಂತದಲ್ಲಿ ಇದೇ ಕಾರಣಕ್ಕೆ ನಾನು ಈ ಕ್ಷೇತ್ರದ ಕಡೆಗೆ ಆಕರ್ಷಿತನಾಗಿದ್ದೆ. ಇದು ಅಂತಹ ರೋಮಾಂಚಕ ಮತ್ತು ಮೋಡಿ ಮಾಡುವ ಕ್ಷೇತ್ರ. ಬಿಡುವುದು ಸಾಧ್ಯವೇ ಇಲ್ಲ" ಎನ್ನುತ್ತಾರೆ ಅಂಕಿತ್. 22 ವರ್ಷದ ಅಂಕಿತ್ ಈಗ ಸ್ವಂತ ಕನ್ಸಲ್ಟಿಂಗ್ ಸಂಸ್ಥೆ ನಡೆಸುತ್ತಿದ್ದಾರೆ. ಸುಮಾರು 25 ದೇಶಗಳಲ್ಲಿ 1000 ತರಬೇತಿ ಶಿಬಿರಗಳನ್ನು ನಡೆಸಿದ ಕೀರ್ತಿ ಸಂಪಾದಿಸಿದ್ದಾರೆ. ಪ್ರಸ್ತುತ 'ಎಥಿಕಲ್ ಹ್ಯಾಕಿಂಗ್' ಮತ್ತು 'ಸೈಬರ್ ಭಯೋತ್ಪಾದನೆ'ಗೆ ಸಂಬಂಧಿಸಿದಂತೆ ಹೋರಾಟದಲ್ಲಿ ಅವರು ವಿಶ್ವದಾದ್ಯಂತ ಪರಿಚಿತ ತಜ್ಞ ಮತ್ತು ಜನಪ್ರಿಯ ವ್ಯಕ್ತಿ.
ದೇಶಾದ್ಯಂತ ಕೆಲ ಮಕ್ಕಳಿಗೆ ಸಿಇಒ (ಕಾರ್ಯನಿರ್ವಾಹಕ ಅಧಿಕಾರಿ) ಎಂಬ ಪದದ ಅರ್ಥ ಏನು ಎಂದು ತಿಳಿಯದೆ ಇರುವ ವಯಸ್ಸಿನಲ್ಲಿ ಸುಹಾಸ್ ಗೋಪಿನಾಥ್ ದೊಡ್ಡ ಸಾಧನೆಯನ್ನೇ ಮಾಡಿದ್ದರು. ಅವರು ಸಿಇಒ ಆಗಿದ್ದರು. 'ಗ್ಲೋಬಲ್ಸ್ ಇನ್‌ಕಾರ್ಪೋರೇಟೆಡ್' ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಅಪ್ರಾಪ್ತ ವಯಸ್ಸು ಎಂಬ ಕಾರಣದಿಂದ ಭಾರತದಲ್ಲಿ ಸಂಸ್ಥೆ ಆರಂಭಿಸಲು ಅವಕಾಶ ಸಿಗದ ಕಾರಣ ಅವರು ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌ನಲ್ಲಿ ತಮ್ಮದೇ ಸಂಸ್ಥೆಯನ್ನು ಆರಂಭಿಸಿದ್ದರು. ತಮ್ಮ ಹದಿನಾರನೇ ವಯಸ್ಸಿನಲ್ಲಿ ಅವರು 'ಗ್ಲೋಬಲ್ ಇಂಕ್' (ಜಗತ್ತಿನ ಅತೀ ಕಿರಿಯ ಸಿಇಒ ಎಂಬ ದಾಖಲೆ- ಲಿಮ್ಕಾ ರೆಕಾರ್ಡ್) ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು. ಇದಕ್ಕೆ ಮೊದಲು ಅವರು ವೆಬ್ ಅಭಿವೃದ್ಧಿ ಪಡಿಸುವುದರಲ್ಲಿ ಜಗತ್ತನ್ನೇ ನಿಬ್ಬೆರಗಾಗಿಸಿದ್ದಷ್ಟೇ ಅಲ್ಲ, 'ಫಾರ್ಚೂನ್ 500 ಕಾರ್ಪೋರೇಷನ್' ನೀಡಿದ ಅತ್ಯುತ್ತಮ ಕೊಡುಗೆಗಳನ್ನು ತಿರಿಸ್ಕರಿಸಿದ್ದರು.

ಆಕೆ ಭಾರತೀಯ ಟೆಲಿವಿಷನ್ ಜಗತ್ತಿನ ಮೊದಲ ರಿಯಾಲಿಟಿ ಶೋ ಒಂದರ ವಿಜೇತೆ. ಬಹಳ ಹಿಂದೆಯೇ, ವೀಕ್ಷಕರ ಮತಗಳು ಮತ್ತಿತರ ಗಿಮಿಕ್‌ಗಳಿಲ್ಲದ ಕಾಲದಲ್ಲೇ ಸುನಿಧಿ ಚೌಹಾಣ್ 'ಮೇರಿ ಆವಾಜ್ ಸುನೋ' ಕಾರ್ಯಕ್ರಮದಲ್ಲಿ ತೀರ್ಪುಗಾರರ ಮನ ಗೆದ್ದಾಕೆ. ಈ ಸಾಧನೆಯಿಂದಾಗಿ ಈಗಿನ ಭಾರತೀಯ ಹಿನ್ನೆಲೆ ಗಾಯಕಿಯರಿಗೆ ಆದರ್ಶಪ್ರಾಯರಾಗಿದ್ದಾರೆ. ಪ್ರತಿಭೆ ಇದ್ದಲ್ಲಿ ಏಕಾಗ್ರತೆ ಮತ್ತು ಸಮರ್ಪಣಾ ಮನೋಭಾವದಿಂದ ಕಿರು ವಯಸ್ಸಲ್ಲೇ ಅಸಾಧ್ಯ ಯಶಸ್ಸು ಸಾಧಿಸಬಹುದು ಎಂದು ತೋರಿಸಿ ಕೊಟ್ಟಿದ್ದಾರೆ. ಭಾರತೀಯ ಟೆಲಿವಿಷನ್ ಒಂದು ಅಸ್ತವ್ಯಸ್ತ ಪ್ರಪಂಚ. ಆದರೆ ಪ್ರಾಚಿ ದೇಸಾಯಿ ಈ ಅಸ್ತವ್ಯಸ್ತ ಲೋಕದಿಂದ ಹೊರತಾಗಿ ನಿಂತಿದ್ದಾರೆ. ಅನೇಕರು ತಮ್ಮ ಬೆಡ್‌ರೂಂನಲ್ಲಿ ಯಾವ ನಟನ ಪೋಸ್ಟರ್ ಅಂಟಿಸಿಕೊಳ್ಳಬೇಕು ಎಂಬ ಚಿಂತೆಯಲ್ಲಿ ಇರುವ ವಯಸ್ಸಿನಲ್ಲಿ ಪ್ರಾಚಿ ದೇಸಾಯಿ ಸ್ವತಃ ಅನೇಕ ಮನೆಗಳ ಪೋಸ್ಟರ್‌ಗಳಲ್ಲಿ ರಾರಾಜಿಸಬಲ್ಲ ಸಾಧನೆ ಮಾಡಿದ್ದಾರೆ. ಅಭೂತಪೂರ್ವ ಜನಮನ್ನಣೆ ಪಡೆದ ನಟಿ ಪ್ರಾಚಿ. "ನಾನು ಹದಿಹರೆಯದವಳಾಗಿದ್ದೆ ಮತ್ತು ಈಗಲೂ ಹದಿಹರೆಯದವಳೇ. ಆದರೆ ನಾನು ಆಯ್ದುಕೊಂಡ ವೃತ್ತಿಯಿಂದಾಗಿ ಇಷ್ಟು ವೇಗವಾಗಿ ಬೆಳೆಯಲು ಸಾಧ್ಯವಾಯಿತು" ಎನ್ನುತ್ತಾರೆ ಅವರು. ಪ್ರಾಚಿ ದೇಸಾಯಿ ಇಷ್ಟಕ್ಕೇ ತೃಪ್ತಿ ಹೊಂದಿಲ್ಲ. ಆಕೆಯ ಮಹಾತ್ವಾಕಾಂಕ್ಷೆ ಮಾತ್ರ ಬೇರೆಯೇ ಇದೆ. "ಇತರ ಹದಿಹರೆಯದ ಯುವತಿಯರಂತಲ್ಲ. ನಾನು ನನ್ನ ವೃತ್ತಿ ಮತ್ತು ನಟನಾ ಕೌಶಲ್ಯವನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡಿದ್ದೇನೆ. ನನಗೆ ಜನಪ್ರಿಯತೆ, ಕೀರ್ತಿ ಮತ್ತು ತಾರಾಮೌಲ್ಯವನ್ನು ಪಡೆಯುವ ಆಸೆ ಇದೆ. ಸಾಮಾನ್ಯ ಉಳಿದ ಹದಿಹರೆಯದ ಯುವತಿಯರಂತೆ ಈ ಕ್ಷೇತ್ರದ ಗ್ಲಾಮರ್ ಮತ್ತು ಪ್ರಸಿದ್ಧಿಗೆ ಹಾತೊರೆದು ಬಂದಿಲ್ಲ. ಇದರಿಂದಾಗಿಯೇ ನಾನು ಆ ವೃತ್ತಿ ನಿರೀಕ್ಷಿಸುವ ಕಠಿಣಶ್ರಮ ಮತ್ತು ಸಮರ್ಪಣಾ ಭಾವವನ್ನು ಪ್ರದರ್ಶಿಸುವುದರಲ್ಲಿ ಯಶಸ್ವಿಯಾಗಿದ್ದೇನೆ" ಎನ್ನುತ್ತಾರೆ. ಪ್ರಾಚಿ 'ಝಲಕ್ ದಿಕ್‌ಲಾ ಜಾ' ಎಂಬ ಡ್ಯಾನ್ಸ್ ರಿಯಾಲಿಟಿ ಶೋ ವಿಜೇತೆ ಕೂಡ.

ಕಂಪ್ಯೂಟರ್‌ಗಳು, ಉದ್ಯಮ, ಶೋಬಿಜ್ ಮತ್ತು ಕ್ರೀಡೆ... ಹೀಗೆ ಯಾವುದೇ ಕ್ಷೇತ್ರವಾಗಿರಲಿ ಒಂದು ಮಾತಂದೂ ನಿಜ. ಪುಟ್ಟ ವಯಸ್ಸಿನಲ್ಲೇ ಅಗಾಧ ಸಾಧನೆ ಮಾಡಬೇಕೆಂದಿದ್ದಲ್ಲಿ ಪ್ರತಿಭೆ ಮುಖ್ಯ. ಆದರೆ ಅದೊಂದಿದ್ದಲ್ಲಿ ಸಾಲದು. ಪ್ರತಿಭೆಯನ್ನು ಸಾಕಾರಗೊಳಿಸಲು, ಯಶಸ್ಸಿನ ಹಾದಿಯಲ್ಲಿ ಮುನ್ನುಗ್ಗಲು ಉತ್ಸಾಹ, ಕನಸು ಮತ್ತು ಬದ್ಧತೆ ಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳ ಪ್ರತಿಭೆಯನ್ನು ಬೆಂಬಲಿಸುವ ಕುಟುಂಬ ಬೇಕು. ಸುನಿಧಿ ಚೌಹಾಣ್ ಅವರು ಇದರಲ್ಲಿ ನಿಸ್ಸೀಮರು. "ನನಗೆ ಗಾಯಕಿ ಆಗಬೇಕೆಂಬ ಕನಸಿತ್ತು. ತಂದೆಯ ಪ್ರೋತ್ಸಾಹ ನನಗಿದ್ದ ಕಾರಣ ಹದಿಹರೆಯದಲ್ಲೇ ಆ ಕನಸನ್ನು ಸಾಕಾರಗೊಳಿಸುವುದು ಕಷ್ಟವಾಗಲೇ ಇಲ್ಲ. ಅವರು ಎಲ್ಲವನ್ನೂ ಮತ್ತು ನನ್ನನ್ನೂ ಸಹ ಅಕ್ಕರೆಯಿಂದ ನೋಡಿಕೊಂಡಿದ್ದರು. ನಾನು ಈ ಕ್ಷೇತ್ರದಲ್ಲಿ ಮುಂದೆ ಬರಬೇಕು ಎಂದು ನಿಜಕ್ಕೂ ಶ್ರಮ ಪಟ್ಟವರು ಅವರು." ಹಾಗಿದ್ದಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗುವ ಮೂಲಮಂತ್ರವೇನು? ಅಂಕಿತ್ ಫಾಯಿಡಾ ಅವರು ಈ ಸಂಬಂಧ ಸೂಕ್ತ ಸಲಹೆಗಳನ್ನು ನೀಡಿದ್ದಾರೆ, "ಏಕಾಗ್ರತೆ, ಸ್ಪಷ್ಟ ಚಿಂತನೆ, ಕಠಿಣ ಶ್ರಮ, ಕಲಿಕೆಯ ಉತ್ಸಾಹ ಮತ್ತು ಪರಿಪೂರ್ಣತೆ ಸಾಧಿಸುವ ಆಶಯ ಇರಬೇಕು." ಪ್ರಾಚಿ ಕೂಡ ತಮ್ಮ ಅನುಭವದ ಹಿನ್ನೆಲೆಯಲ್ಲಿ ಸಲಹೆ ನೀಡಿದ್ದಾರೆ, "ಈ ಕ್ಷೇತ್ರವನ್ನು ಪ್ರವೇಶಿಸುವುದು ಸುಲಭ ಸಾಧ್ಯವಲ್ಲ. ಅದೃಷ್ಟವೂ ಇರಬೇಕು. ಬಹಳ ಪರಿಶ್ರಮ ಹಾಕಬೇಕು. ಇಲ್ಲಿ ಯಶಸ್ಸು ಸಿಗದೆ ಇದ್ದಲ್ಲಿ ಬೇರೆ ಕ್ಷೇತ್ರಗಳನ್ನು ಆರಿಸಿಕೊಳ್ಳಬೇಕಾಗುತ್ತದೆ ಎಂಬ ಸತ್ಯವನ್ನು ಅರಿತುಕೊಂಡು ಶೈಕ್ಷಣಿಕವಾಗಿಯೂ ಪ್ರಗತಿ ಸಾಧಿಸಬೇಕಿದೆ." ಹದಿಹರೆಯದ ಮನಸ್ಸಿನ ಡೋಲಾಯಮಾನ ಮನಸ್ಥಿತಿ ಮತ್ತು ವೃತ್ತಿಪರ ಬೇಡಿಕೆಗಳೆರಡನ್ನೂ ಹೇಗೆ ನಿಭಾಯಿಸುತ್ತೀರಿ ಎಂದು ಫಾಯಿಡಾ ಅವರನ್ನು ಪ್ರಶ್ನಿಸಿ ನೋಡಿ, "ಪ್ರಮುಖ ಕೆಲಸಗಳನ್ನು ಆದ್ಯತೆಗೆ ಅನುಸಾರವಾಗಿ ಸಕಾಲಕ್ಕೆ ಯಶಸ್ವಿಯಾಗಿ ಮುಗಿಸುವುದು ಮುಖ್ಯ. ಸಮಯದ ಪರಿವೆ ಇಲ್ಲದೆ ದೀರ್ಘಕಾಲ ಕೆಲಸ ಮಾಡಲು ಸಿದ್ಧರಿರಬೇಕು. ಕೆಲ ಬಾರಿ ವೃತ್ತಿಯ ನಿರೀಕ್ಷೆಯನ್ನು ಗಮನದಲ್ಲಿರಿಸಿಕೊಂಡು ಕೆಲ ತ್ಯಾಗಗಳನ್ನೂ ಮಾಡಬೇಕಾಗುತ್ತದೆ". ಫಾಡಿಯಾ ಮಾತಿನಲ್ಲೇ ಹೇಳುವುದಾದರೆ, "ಪ್ರತಿ ದಿನ ಬೆಳಗ್ಗೆ ಏಳುವಾಗ ಈ ಜಗತ್ತಿನಲ್ಲಿ ಬದಲಾವಣೆ ತರಲು ಏನು ಮಾಡಬಹುದು ಎಂಬ ಬಗ್ಗೆ ಚಿಂತಿಸಬೇಕು. ನಂತರ ಆ ಮಹತ್ವಾಕಾಂಕ್ಷೆಯನ್ನು ನಿಜವಾಗಿಸಲು ಪ್ರಯತ್ನಿಸಬೇಕು"

ಟಿಎಸ್‌ಐ

ಮುಖಪುಟ ಲೇಖನದಲ್ಲಿ ಇನ್ನೇನಿದೆ

ರಾಷ್ಟ್ರ ಮಟ್ಟದ ಪ್ರಪ್ರಥಮ ಐಸಿಎಂಆರ್-ಟಿಎಸ್‌ಐ ಸಮೀಕ್ಷೆ

ಹದಿಹರೆಯದ ಹೃದಯದಾಳದಲ್ಲಿ :  ಭವಿಷ್ಯದ ಬೆಳಕು ನಾಳೆಗಳ ನಂಟಿನ ಹರೆಯ...

ಹದಿಹರೆಯದ ಪ್ರಬುದ್ಧತೆ : ರಾಷ್ಟ್ರೀಯ

ರಾಷ್ಟ್ರೀಯ: ದೇಶ ಕಾಯುವವರ ಮಕ್ಕಳ ಕಾಯುವವರ್‍ಯಾರು?

ರಾಜಕೀಯ : ಯಾರು ಹಿತವರು ನಮಗೆ...

ರಾಜಕೀಯ: ಕೀಳು ರಾಜಕೀಯವನ್ನು ತೆಗಳಿ, ರಾಜಕಾರಣವನ್ನಲ್ಲ

ಬಾಂಧವ್ಯ : ಕುಟುಂಬ, ಹಣ, ಕಾಮ-ಪ್ರೇಮ...

ಬಾಂಧವ್ಯ: ಹದಿಹರೆಯಕ್ಕೆ ಅಧ್ಯಾತ್ಮದ ಸ್ಪರ್ಶ

ಸಂಗೀತ ಲೋಕ: ಹದಿಹರೆಯದ ಸಂಗೀತಗಾಥೆ

ಸಿನಿಮಾ ಪ್ರಪಂಚ : ಬಾಲಿವುಡ್ ಕನಸುಗಳು

ಕ್ರೀಡಾ ಲೋಕ : ಬೆಂಕಿಯ ಚಿಲುಮೆ ಎಲ್ಲಿದೆ?

ಕ್ರೀಡಾ ಲೋಕ: ಬದ್ಧತೆಯಿದ್ದಲ್ಲಿ ಬಯಕೆ ಕೈಗೂಡುವುದು ಖಚಿತ

ವೈವಿಧ್ಯಮಯ : ದೇವರು, ಧರ್ಮ ಮತ್ತು ಆದರ್ಶ ಪ್ರಾಯರು

ವೈವಿಧ್ಯಮಯ: ತಾರುಣ್ಯದ ಕನಸು- ಕನವರಿಕೆಯ ನಡುವೆ

ಡಿಂಪಲ್ ಚೆಲುವೆ ದೀಪಿಕಾ

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .