ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಸಂಬಂಧ ವೃದ್ಧಿ
 
ಸಾಮರ್ಥ್ಯ ಹೆಚ್ಚಳಕ್ಕೆ ಆದ್ಯತೆ
 

ಬಾರಕ್ ಒಬಾಮ ಆದ್ಯತೆಗಳನ್ನು ಬದಲಿಸಿಕೊಳ್ಳದಿದ್ದರೆ ಕೊನೆಗೆ ಅವರೇ ನಷ್ಟ ಅನುಭವಿಸಬೇಕಾಗುತ್ತದೆ

ಥಾಮಸ್ ಫ್ರೀಡ್ಮನ್

ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ, 'ನ್ಯೂಯಾರ್ಕ್ ಟೈಮ್ಸ್' ಮಾಜಿ ಪತ್ರಕರ್ತ

ಬಾರಕ್ ಒಬಾಮ ತಮ್ಮ ಕತ್ತಿಗೆ ತಾವೇ ನೇಣು ಬಿಗಿದುಕೊಳ್ಳಲು ಹೊರಟಂತಿದೆ. ತಾನು ಅಮೆರಿಕದ ಶತ್ರುವಾದ ಇರಾನ್‌ನಂತಹ ರಾಷ್ಟ್ರಗಳೊಂದಿಗೆ ಷರತ್ತುರಹಿತವಾಗಿ ಮಾತುಕತೆ ನಡೆಸುವ ಬಗ್ಗೆ ವಿವರಣೆ ನೀಡುವುದರೊಂದಿಗೆ ಅವರು ಈ ಯಾತನಾದಾಯಕ ಹಂತವನ್ನು ಸಮೀಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅವರ ಇತ್ತೀಚೆಗಿನ ವಿವರಣೆ ಏನೆಂದರೆ, ಶತ್ರುಗಳೊಂದಿಗಿನ ಮಾತುಕತೆಗೆ 'ಸಿದ್ಧತೆ' ಹಾಗೂ 'ಷರತ್ತಿಗೆ ಒಳಪಡುವುದು' ಇವೆರಡರ ಮಧ್ಯೆ ಬಹಳಷ್ಟು ಅಂತರವಿದೆ ಎಂಬುದಾಗಿತ್ತು. ಈ ರೀತಿಯ ಬೆಣ್ಣೆಯಿಂದ ಕೂದಲು ತೆಗೆಯುವಂತಹ ಶಬ್ಧಜಾಲಗಳು ಆತ್ಮವಿಶ್ವಾಸವನ್ನು ವೃದ್ಧಿಸುವುದಿಲ್ಲ. ಬದಲಾಗಿ ಟೀಕಾಕಾರರ ಬಾಯಿಗೆ ಆಹಾರವಾಗುತ್ತವೆ. ಕಟ್ಟಕಡೆಯದಾಗಿ ರಾಷ್ಟ್ರೀಯ ಭದ್ರತೆಯ ಕುರಿತಾಗಿಯೂ ಒಬಾಮ ಅನಿಶ್ಚಿತ ಧೋರಣೆ ವ್ಯಕ್ತಪಡಿಸುತ್ತಾರೆ.

ಸತ್ಯಾಂಶವೇನೆಂದರೆ, ಶತ್ರು ರಾಷ್ಟ್ರಗಳು ಅಮೆರಿಕದ ಹಿತಾಸಕ್ತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಬದ್ಧವಾದರೆ ಅವುಗಳೊಂದಿಗೆ ಮಾತುಕತೆಗೆ ಸಿದ್ಧ ಎಂದು ಒಬಾಮ ಸರಿಯಾಗಿಯೇ ಹೇಳಿದ್ದರು. ಪ್ಯಾನ್ ಆಮ್ 103 ವಿಮಾನದಲ್ಲಿದ್ದ ಅಮೆರಿಕನ್ನರನ್ನು ಉಡಾಯಿಸಿದ ಹೊಣೆಯನ್ನು ಲಿಬಿಯಾ ಹೊತ್ತುಕೊಂಡ ಮೇಲೂ, ಬುಷ್ ತಂಡ ಲಿಬಿಯಾ ತನ್ನ ಪರಮಾಣು ಕಾರ್ಯಕ್ರಮವನ್ನು ತ್ಯಜಿಸುವಂತೆ ಮಾಡಲು ಅದರೊಂದಿಗೆ ಮಾತುಕತೆ ನಡೆಸಿತ್ತು. ಆ ಮಾತುಕತೆ ಯಶಸ್ವಿಯಾಯಿತು. ಆದರೆ ಇದಕ್ಕೆ ಬುಷ್ ಉತ್ತಮ ಸಿದ್ಧತೆ ನಡೆಸಿದ್ದರು ಎಂಬುದು ಕಾರಣವಲ್ಲ. ಬದಲಾಗಿ, ಆ ಸಮಯದಲ್ಲಿ, ಇರಾಕ್ ಮೇಲೆ ದಾಳಿ ನಡೆಸಿದ ಬಳಿಕ ಬುಷ್ ತಮ್ಮ ಸಾಮರ್ಥ್ಯ ಮೆರೆದಿದ್ದರು. ಅಲ್ಲದೆ ಆಗಿನ್ನೂ ಇರಾಕ್ ಛಿದ್ರವಾಗಿರಲಿಲ್ಲ.

ಒಬಾಮ ಅವರು ತಮ್ಮ ಗಮನವನ್ನು, ತಾವು ಮಾತನಾಡಬೇಕಾಗಿರುವ ಶತ್ರ್ರು ರಾಷ್ಟ್ರಗಳ ನಾಯಕರ ಪಟ್ಟಿಯಿಂದ, ಅಧ್ಯಕ್ಷನಾಗಿ ಅಮೆರಿಕವನ್ನು ಮತ್ತಷ್ಟು ಶಕ್ತಿಶಾಲಿ ರಾಷ್ಟ್ರವನ್ನಾಗಿಸಲು ತಾನು ಮಾಡಲು ಉದ್ದೇಶಿಸಿರುವ ಕಾರ್ಯಗಳ ಪಟ್ಟಿಯತ್ತ ಹರಿಸಿದರೆ ತಮಗೆ ತಾವೇ ದೊಡ್ಡ ಉಪಕಾರ ಮಾಡಿಕೊಂಡಂತಾಗುತ್ತದೆ. ಇದರಿಂದ ನಾವು ಯಾರೊಂದಿಗೆ ಮಾತನಾಡಬೇಕು ಎಂದು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಏಕೆಂದರೆ ನಾವು ಬಲಶಾಲಿಗಳಾದಲ್ಲಿ ಯಾರೊಂದಿಗೆ ಮಾತುಕತೆ ನಡೆಸಿದರೂ ಫಲಿತಾಂಶ ನಮ್ಮ ಪರವಾಗಿಯೇ ಇರುತ್ತದೆ.

ನಾನು ಮೊದಲೇ ವಾದಿಸಿದ ಪ್ರಕಾರ: ನಿಮ್ಮಲ್ಲಿ ಬಲವಿದ್ದಾಗ ಮಾತನಾಡಿ. ನಿಮ್ಮಲ್ಲಿ ಬಲ ಇಲ್ಲದೇ ಇದ್ದಾಗ, ಮೊದಲು ಕೊಂಚ ಬಲವನ್ನು ಗಳಿಸಿ. ನಂತರ ಮಾತುಕತೆಗೆ ಮುಂದಾಗಿ. ಇಂದು ಇರಾನ್ ಹಾಗೂ ಅದರ ಮಿತ್ರರಾಷ್ಟ್ರಗಳ (ಹಿಜ್ಬುಲ್ಲಾ, ಹಮಾಸ್ ಹಾಗೂ ಸಿರಿಯಾ) ಬಳಿ ಒಂದು ಯೋಜನೆಯಿದೆ. ಈ ಯೋಜನೆ ಅವುಗಳಿಗೆ ಸಾಮರ್ಥ್ಯವನ್ನು ಗಳಿಸಿಕೊಟ್ಟಿದೆ. ಈ ಕಾರಣದಿಂದ ಅಮೆರಿಕದ ಮುಂದಿನ ಅಧ್ಯಕ್ಷರು ಈ ಸಾಮರ್ಥ್ಯವನ್ನು ಎದುರಿಸುವುದು ಹೇಗೆ ಎನ್ನುವುದರ ಕುರಿತು ಹೊಸದಾಗಿ ಯೋಚನೆ ಮಾಡಬೇಕಾಗುತ್ತದೆ. ಇರಾನ್ ಹಾಗೂ ಅದರ ಮಿತ್ರರಾಷ್ಟ್ರಗಳ ಯೋಜನೆ ೫ ಮೂಲ ತತ್ವಗಳ ಮೇಲೆ ರೂಪಿತವಾಗಿದೆ.

ಮೊದಲನೇ ತತ್ವ: ಯಾವಾಗಲೂ ಜವಾಬ್ದಾರಿ ತೆಗೆದುಕೊಳ್ಳದೆ, ಕೇವಲ ನಿಯಂತ್ರಣ ವ್ಯವಸ್ಥೆಯನ್ನು ಆಧರಿಸುವುದು. ಲೆಬನಾನ್, ಗಾಜಾ, ಇರಾಕ್ ಮತ್ತು ಇರಾನ್ ಸ್ನೇಹಿತರಿಗೆ ಆ ರಾಷ್ಟ್ರಕ್ಕೆ ವಿದ್ಯುತ್ ಒದಗಿಸುವ ಬದ್ಧತೆ, ಜವಾಬ್ದಾರಿ ಇಲ್ಲದಿದ್ದರೂ ಅಲ್ಲಿನ ರಾಜಕೀಯದ ಮೇಲೆ ವಿಟೋ ಅಧಿಕಾರವಿದೆ. ಇದಕ್ಕೆ ವ್ಯತಿರಿಕ್ತವಾಗಿ ಅಮೆರಿಕ ಮಿತ್ರರಾಷ್ಟ್ರಗಳು ನಿಯಂತ್ರಣ ಇಲ್ಲದೆ, ಕೇವಲ ಜವಾಬ್ದಾರಿಯನ್ನು ಮಾತ್ರ ಹೊರಬೇಕಾಗಿದೆ.

ಎರಡನೇ ತತ್ವ: ಯಾವಾಗಲೂ, ರಾಜಕೀಯ ವ್ಯವಸ್ಥೆಯನ್ನು ಮುನ್ನಡೆಸಲು ಹಾಗೂ ಶಸ್ತ್ರಾಸ್ತ್ರಗಳನ್ನು ಸಹಿಸಲು ಸಿದ್ಧರಾಗಿರುವುದನ್ನು ಖಾತ್ರಿಪಡಿಸಿಕೊಳ್ಳುವುದು. ಲೆಬನಾನ್, ಗಾಜಾ ಹಾಗೂ ಇರಾಕ್‌ನಲ್ಲಿ, ಅಮೆರಿಕ ವಿರೋಧಿಗಳು ಸರ್ಕಾರದಲ್ಲಿ ಭಾಗಿಯಾಗಿರುವುದರ ಜೊತೆಜೊತೆಗೆ ತಮ್ಮದೇ ಆದ ಸಶಸ್ತ್ರ ಸೇನೆಗಳನ್ನು ಹೊಂದಿದ್ದಾರೆ.

ಮೂರನೇ ತತ್ವ: ತಮ್ಮ ಹಾದಿಗೆ ಅಡ್ಡಿಯಾಗುವವರ ವಿರುದ್ಧ ಮಾನವ ಬಾಂಬ್ ಹಾಗೂ ನಿರ್ದೇಶಿತ ದಾಳಿಗಳನ್ನು ನಡೆಸುವುದು. ಲೆಬನಾನ್‌ನಲ್ಲಿ, ಸಿರಿಯಾ ವಿರೋಧಿ ಪತ್ರಕರ್ತ ಹಾಗೂ ಸಂಸದರ ಸರಣಿ ಹತ್ಯೆಯಲ್ಲಿ ಸಿರಿಯಾದ ಕೈವಾಡ ಇರುವ ಬಗ್ಗೆ ವ್ಯಾಪಕ ಶಂಕೆಯಿದೆ. ಆದರೆ ಇರಾಕ್‌ನ ಒಬ್ಬ ಪ್ರಮುಖ ಅಧಿಕಾರಿಯ ಮೇಲೆ ಅತ್ಮಹತ್ಯಾ ದಾಳಿ ನಡೆಸಿದರೆ ಅದು ಅಮೆರಿಕದ ಸಾರ್ವಭೌಮ ಶಕ್ತಿಗೆ ಧಕ್ಕೆ ತರುತ್ತದೆ.

ನಾಲ್ಕನೇ ತತ್ವ: ಅಂತರ್ಜಾಲವನ್ನು ನಿಧಿಸಂಗ್ರಹಣೆ, ನೇಮಕಾತಿ ಹಾಗೂ ಕಾರ್ಯಾಚರಣೆಗಳಿಗೆ ಆದೇಶ ನೀಡುವ ಹಾಗೂ ನಿಯಂತ್ರಣ ಮಾಡುವ ಮುಕ್ತ ಮಾಧ್ಯಮವಾಗಿ ಬಳಸಿಕೊಳ್ಳುವುದು.

ಐದನೇ ತತ್ವ: ಇಸ್ರೇಲ್ ಹಾಗೂ ಅಮೆರಿಕ ಪ್ರತಿರೋಧ ಮನೋಭಾವವನ್ನು ಬೆಳೆಸಿಕೊಳ್ಳುವುದು. ಇದರಿಂದ ನಿಮ್ಮ ವಿರುದ್ಧ ವ್ಯಕ್ತವಾಗುವ ಎಲ್ಲಾ ವಿರೋಧಗಳೂ ಅಮೆರಿಕ ಹಾಗೂ ಇರಾಕ್‌ಗೆ ಬೆಂಬಲ ವ್ಯಕ್ತಪಡಿಸುವುದಕ್ಕೆ ಸಮಾನವಾಗಿರುತ್ತವೆ. ಇದರಿಂದ ನಿಮಗೆಷ್ಟೇ ತೊಂದರೆಯಾದರೂ, ಪ್ರತಿರೋಧ ವ್ಯಕ್ತಪಡಿಸುವುದರಿಂದ ಅಂತಿಮವಾಗಿ ನೀವು ಏನನ್ನೂ ಕಳೆದುಕೊಳ್ಳುವುದಿಲ್ಲ.

ಅಮೆರಿಕ ಪರ ನಿಲುವನ್ನು ಹೊಂದಿರುವ ಅರಬ್ ಸೌಮ್ಯವಾದಿಗಳ ಬಳಿ ಈ ಶಕ್ತಿಪ್ರದರ್ಶನಕ್ಕೆ ವ್ಯತಿರಿಕ್ತವಾದ ಯೋಜನೆ ಇದೆಯೇ? ನನಗೆ ಈಗಷ್ಟೆ, ಜೋರ್ಡನ್‌ನ ಮಾಜಿ ವಿದೇಶಾಂಗ ಸಚಿವ, ಮಾರ್ವನ್ ಮೌಷರ್ ಬರೆದ 'ದ ಅರಬ್ ಸೆಂಟರ್' ಎಂಬ ಕೃತಿ ದೊರಕಿತು. ಅರಬ್‌ನ ನಿವೃತ್ತ ರಾಜಕೀಯ ಮುತ್ಸದ್ದಿಗಳು ತಮ್ಮ ಅಧಿಕಾರಾವಧಿಯ ಅನುಭವಗಳ ಬಗ್ಗೆ ಹಾಗೆಲ್ಲ ಪುಸ್ತಕಗಳನ್ನು ಬರೆಯುವುದಿಲ್ಲ. ಆದರೆ ಮಾಷರ್ ಬರೆದಿದ್ದಾರೆ ಹಾಗೂ ಅವರ ವಾದಗಳು ಬಹಳ ಸತ್ವಯುತವಾಗಿವೆ. ಅರಬ್ ಸೌಮ್ಯವಾದಿಗಳು ಯಾವಾಗಲೂ ರಕ್ಷಣಾತ್ಮಕವಾಗಿದ್ದರು. ಏಕೆಂದರೆ ಅವರು 'ಒಂದು ಕೋನದ ಸೌಮ್ಯವಾದಿಗಳಾಗಿದ್ದರು.' ಅವರು ಇಸ್ರೇಲ್ ಜೊತೆಗೆ ಶಾಂತಿ ಒಪ್ಪಂದ ಮಾಡಿಕೊಳ್ಳುವಂತಹ ಸೌಮ್ಯ ಪ್ರಸ್ತಾವನೆಗಳತ್ತ ಮಾತ್ರವೇ ಗಮನ ಕೇಂದ್ರೀಕರಿಸಿ, ಅರಬ್ ಪ್ರಜೆಗಳ ಪಾಲಿಗೆ ಬಹಳ ಪ್ರಮುಖವಾದ ಉತ್ತಮ ಸರ್ಕಾರ, ರಾಜಕೀಯ ಸುಧಾರಣೆ, ಆರ್ಥಿಕ ಬೆಳವಣಿಗೆ, ಮಹಿಳಾ ಹಕ್ಕು ಹಾಗೂ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಗಳನ್ನು ಸಂಪೂರ್ಣವಾಗಿ ನಿರ್ಲ್ಯಕ್ಷಿಸಿದ್ದಾರೆ.

'ಅರಬ್ ಸೌಮ್ಯವಾದಿಗಳು ಜನರ ವಿಶ್ವಾಸಾರ್ಹತೆಯನ್ನು ಗಳಿಸಬೇಕೆಂದರೆ, ಅವರು ಇನ್ನಷ್ಟು ಜವಾಬ್ದಾರಿಗಳನ್ನು ಹೊರಬೇಕು' ಎನ್ನುತ್ತಾರೆ ಮೌಷರ್. ಅರಬ್ ಸೌಮ್ಯವಾದಿಗಳು ಒತ್ತು ನೀಡುವ ಪ್ಯಾಲೆಸ್ತೀನ್- ಇಸ್ರೇಲ್ ಶಾಂತಿ ಒಪ್ಪಂದಕ್ಕೆ ಸಹಕರಿಸುವ ಮೂಲಕ ಅಮೆರಿಕ ಅವರಿಗೆ ನೆರವು ನೀಡಬಹುದು.

ಇರಾಕ್, ಲೆಬನಾನ್, ವೆಸ್ಟ್ ಬ್ಯಾಂಕ್‌ನಲ್ಲಿನ ಭಯೋತ್ಪಾದಕರ ವಿರುದ್ಧ ಕೆಲವು ಸೌಮ್ಯವಾದಿ ಪ್ರತಿರೋಧ ಕಂಡುಬಂದಿತ್ತು. ಅದು ನಿಜಕ್ಕೂ ಗಮನೀಯವಾಗಿದ್ದರೂ, ಈ ಬೆಳವಣಿಗೆ ಬಹಳ ದುರ್ಬಲವಾಗಿತ್ತು. ಅಮೆರಿಕದ ಮಿತ್ರರಾಷ್ಟ್ರಗಳು ಎಲ್ಲಾ ಸಮಸ್ಯೆಗಳನ್ನು ನಿಭಾಯಿಸಲು ಒಂದು ಸೂಕ್ತ, ಸತ್ವಯುತ ಯೋಜನೆಯನ್ನು ಹೊಂದುವವರೆಗೂ ಅಮೆರಿಕದ ಸಾಮರ್ಥ್ಯಕ್ಕೆ ಒಂದು ನಿರ್ದಿಷ್ಟ ಇತಿ-ಮಿತಿ ಇದ್ದೇ ಇರುತ್ತದೆ.

ಈ ಚುನಾವಣೆಯ ಅವಧಿ ಮುಗಿದ ಮೇಲಾದರೂ ಮೆಕೈನ್ ಹಾಗೂ ಒಬಾಮ ಪಾಳೆಯಗಳು ಶತ್ರುಗಳೊಂದಿಗೆ ಮಾತನಾಡುವುದೋ? ಬೇಡವೋ? ಎನ್ನುವ ಕಾಳಗವನ್ನು ನಿಲ್ಲಿಸಿ, ಅಮೆರಿಕ ಹಾಗೂ ಸ್ನೇಹಿತರು, ಈಗ ಕಡಿಮೆಯಾಗಿರುವ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವುದು ಹೇಗೆ? ಎನ್ನುವುದರ ಕುರಿತಾಗಿ ಗಮನ ಹರಿಸುತ್ತಾರೆ ಎಂದು ಭರವಸೆ ಇರಿಸಿಕೊಳ್ಳೋಣ. ಸದಕ್ಕೆ ಭರವಸೆಯೊಂದೇ ನಮ್ಮ ವಿಶ್ವಾಸವನ್ನು ವೃದ್ಧಿಸುವ ದಿವ್ಯೌಷಧಿ ಎಂದುಕೊಳ್ಳೋಣ.

ಟಿಎಸ್‌ಐ

 

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .