ಮಕರ
(ಡಿ.22-ಜ.21)
ಪ್ರತಿಯೊಂದಕ್ಕೂ ನಿಮ್ಮನ್ನು ನೀವೇ ದೂಷಿಸಿಕೊಳ್ಳುವ ಬದಲು ಹೆಚ್ಚು ಪ್ರಾಯೋಗಿಕವಾಗಿ ಯೋಚಿಸಿ ಮುಂದಿನ ಹೆಜ್ಜೆಯಿಡಿ. ಪ್ರೇಮಜೀವನದಲ್ಲಿ ಭಿನ್ನಾಭಿಪ್ರಾಯಗಳು ಕಂಡು ಬರಬಹುದು. ಪರಸ್ಪರ ಅರ್ಥೈಸಿಕೊಳ್ಳುವುದು ಮತ್ತು ಹೊಂದಾಣಿಕೆಯಿಂದ ಸಮಸ್ಯೆಗೆ ಪರಿಹಾರ. ಕಾನೂನು ಸಂಬಂಧಿತ ವಿಚಾರಗಳು ಶೀಘ್ರ ಬಗೆಹರಿಯಲಿವೆ.
ವೃಷಭ
(ಏ.21-ಮೇ.20)
ಮಹತ್ವದ ಸಭೆ ಮತ್ತು ಚರ್ಚೆಗಳಿಗೆ ಸಿದ್ಧತೆ ಮಾಡಿಕೊಳ್ಳಿ. ಸ್ಪಷ್ಟವಾಗಿ ಒಂದೇ ವಿಷಯಕ್ಕೆ ಒತ್ತು ಕೊಟ್ಟು ಮಾತನಾಡಿ. ವಿಷಯಾಂತರದಿಂದ ಸಂವಹನದ ಪ್ರಭಾವ ಕಡಿಮೆಯಾಗುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ವಿಶಿಷ್ಟವಾದ ಸಮಯ ಕಳೆಯಬೇಕೆಂಬ ನಿರೀಕ್ಷೆ ಇದ್ದರೂ, ಅವರು ಸ್ಪಂದಿಸದೆ ಇದ್ದಾಗ ನಿರಾಶೆ ಉಂಟಾಗಬಹುದು.
ಕನ್ಯಾ
(ಆ.24-ಸೆ.23)
ನಿರ್ಧಾರಗಳನ್ನು ತೆಗೆದುಕೊಳ್ಳಲು ದ್ವಂದ್ವವಿದ್ದಲ್ಲಿ ಅವಸರ ಬೇಡ. ಉದ್ಯಮ ಸಂಬಂಧಿ ಮಾತುಕತೆಗಳು ಫಲಪ್ರದವಾಗಲಿದ್ದು, ಹೊಸ ಕಾರ್ಯಗಳನ್ನು ಆರಂಭಿಸಲು ಮುನ್ನುಡಿಯಾಗಲಿದೆ. ಸಾಮಾಜಿಕವಾಗಿ ಬೆರೆಯುವುದರಿಂದ ಹೊಸ ಅವಕಾಶಗಳಿಗೆ ತೆರೆದುಕೊಳ್ಳಲು ಮತ್ತು ಸಂಪರ್ಕ ವಿಸ್ತರಿಸಿಕೊಳ್ಳಲು ಸಾಧ್ಯವಾಗುತ್ತದೆ. ಪ್ರಯಾಣ ಯೋಗ.
ಕುಂಭ
(ಜ.22-ಫೆ.19)
ಅಭಿವೃದ್ಧಿ ಕಾರ್ಯಗಳ ಕುರಿತು ಸಾಕಷ್ಟು ಉತ್ಸುಕರಾಗಿದ್ದೀರಿ. ಆದರೆ ಅವಸರ ಬೇಡ. ಕಾರ್ಯಕ್ಷೇತ್ರದ ಒತ್ತಡಭರಿತ ವಾತಾವರಣ ಭಿನ್ನಾಭಿಪ್ರಾಯ ಸೃಷ್ಟಿಗೆ ಕಾರಣವಾಗಬಹುದು. ವಾದ-ವಿವಾದಗಳಲ್ಲಿ ತೊಡಗದೆ ಚಾಣಾಕ್ಷತನದಿಂದ ಪರಿಸ್ಥಿತಿಯನ್ನು ನಿಭಾಯಿಸಿ. ಆಸ್ತಿ ವ್ಯವಹಾರದಲ್ಲಿ ಲಾಭವಾಗುವ ಸಂಭವನೀಯತೆ ಇದೆ.
ಮಿಥುನ
(ಮೇ.21-ಜೂ.21)
ಭಾವುಕರಾಗುವುದರಿಂದ ನಿಮ್ಮ ಒಳನೋಟಗಳು ವಿರೂಪಗೊಳ್ಳುವ ಸಾಧ್ಯತೆ ಇದೆ. ಈ ಕುರಿತು ಆಪ್ತರ ಬಳಿ ಸಲಹೆ ಪಡೆಯುವುದು ಉತ್ತಮ. ವೈಯಕ್ತಿಕ ಅಥವಾ ವೃತ್ತಿಕ್ಷೇತ್ರದಲ್ಲಿ ಹೊಸ ಅವಕಾಶಗಳು ಲಭಿಸಲಿವೆ. ಆರ್ಥಿಕ ಸುಸ್ಥಿರತೆ; ಹಾಗೆಂದ ಮಾತ್ರಕ್ಕೆ ಶಾಪಿಂಗ್ ಮಾಡಿ ಅನಗತ್ಯ ಖರ್ಚು ಮಾಡದಿರಿ.
ತುಲಾ
(ಸೆ.24-ಅ.23)
ನಿಷ್ಪಕ್ಷಪಾತ ಮನೋಭಾವ ನಿಮ್ಮ ಸಹೋದ್ಯೋಗಿಗಳ ಅಥವಾ ಪ್ರೀತಿಪಾತ್ರರ ನಡುವಿನ ಸಂಘರ್ಷಗಳನ್ನು ಬಗೆಹರಿಸಲು ಸಹಕರಿಸಲಿದೆ. ಆದರೆ ನಿಮ್ಮ ಭಾವನೆಗಳನ್ನು ತಪ್ಪಾಗಿ ಅರ್ಥೈಸಿಬಿಡುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಮುನ್ನಡೆಯಿರಿ. ಆರ್ಥಿಕ ವಿಚಾರಗಳಲ್ಲಿ ಮುಂಜಾಗ್ರತೆಯಿರಲಿ. ಆರೋಗ್ಯ ಕಾಳಜಿ ಅಗತ್ಯ.
ಮೀನ
(ಫೆ.20-ಮಾ.20)
ಹಠಾತ್ ನಿರ್ಧಾರ ಕೈಗೊಳ್ಳುವುದು ಅವಿವೇಕದ ಕಾರ್ಯ. ಇಂತಹ ಸಂದರ್ಭದಲ್ಲಿ ಪ್ರೀತಿಪಾತ್ರರು ಮತ್ತು ಸಹೋದ್ಯೋಗಿಗಳ ಸಹಾಯ ಪಡೆಯುವುದು ಉತ್ತಮ. ಪ್ರೇಮಜೀವನವನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸಿದಲ್ಲಿ ಕೆಲವು ಅವಾಸ್ತವ ನಿರೀಕ್ಷೆಗಳನ್ನು ಹೋಗಲಾಡಿಸಬಹುದು. ಹಣಕಾಸು ವಿಚಾರಗಳಲ್ಲಿ ಎಚ್ಚರಿಕೆ ಅಗತ್ಯ.
ಕಟಕ
(ಜೂ.22-ಜು.22)
ನಿಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚುವ ವ್ಯಕ್ತಿಗಳಿರುವುದರಿಂದ ಅವಧಿಯೊಳಗೆ ಕೆಲಸ ಪೂರೈಸುವುದು ಒಳ್ಳೆಯದು. ವಿದೇಶದಿಂದ ಶುಭಸುದ್ದಿ. ಕೆಲವು ವಿಚಾರಗಳು ನಿಮ್ಮನ್ನು ಸಂದಿಗ್ಧ ಪರಿಸ್ಥಿತಿಗೆ ತಳ್ಳಬಹುದು. ನಿಮ್ಮ ಗೊಂದಲಗಳನ್ನು ಕಡಿಮೆ ಮಾಡಿಕೊಳ್ಳಿ. ವಿಚಾರ ರಹಿತ ವಾದಗಳು ವ್ಯತಿರಿಕ್ತ ಪರಿಣಾಮ ಸೃಷ್ಟಿಸಬಹುದು.
ವೃಶ್ಚಿಕ
(ಅ.24-ನ.22)
ಕಾರ್ಯಕ್ಷೇತ್ರದೆಡೆಗೆ ಹೆಚ್ಚಿನ ಏಕಾಗ್ರತೆ ನೀಡುವುದರಿಂದ ಯಶಸ್ಸು. ಪ್ರಣಯ ಜೀವನದಲ್ಲಿ ಸಂತಸ. ಕುಟುಂಬ ಸದಸ್ಯರಿಗಾಗಿ ಸಮಯ ಮೀಸಲಿಡಿ. ಏಕತಾನತೆಯಿಂದ ಹೊರಬರಲು ಹೊಸ ದಾರಿ ಕಂಡುಕೊಳ್ಳುವಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಯಾವುದಾದರೂ ವಿಷಯಗಳೆಡೆಗೆ ಸಂದೇಹವಿದ್ದಲ್ಲಿ ದೃಢ ನಿರ್ಧಾರ ಕೈಗೊಂಡು ಮುಂದಡಿಯಿಡಿ.
ಮೇಷ
(ಮಾ.21-ಏ.20)
ವೈಯಕ್ತಿಕ ವಿಚಾರಗಳಿಗಿಂತ ಉದ್ಯೋಗ ಸಂಬಂಧಿ ವಿಷಯಗಳಿಗೇ ಹೆಚ್ಚಿನ ಸಮಯ ವ್ಯಯಿಸಬೇಕಾಗುತ್ತದೆ. ಒಂದು ವೇಳೆ ನೀವು ವಿಶ್ರಾಂತಿ ರಹಿತ ಸ್ಥಿತಿಯಲ್ಲಿದ್ದರೆ ಸಕಾರಾತ್ಮಕವಾದ ಶಕ್ತಿ ಒಗ್ಗೂಡಿಸಿ ಕಾರ್ಯ ಪೂರ್ಣಗೊಳಿಸಲು ಪ್ರಯತ್ನಿಸಿದಲ್ಲಿ ಯಶಸ್ಸು ದೊರೆಯುತ್ತದೆ. ಆರೋಗ್ಯ ವೃದ್ಧಿ. ಆಧ್ಯಾತ್ಮಿಕ ವಿಚಾರಗಳೆಡೆ ಆಸಕ್ತಿ ಹೆಚ್ಚುವ ಸಾಧ್ಯತೆ.
ಸಿಂಹ
(ಜು.23-ಆ.23)
ಇತರರು ನಿಮ್ಮನ್ನು ಲಘುವಾಗಿ ಪರಿಗಣಿಸದಂತೆ ನಿಮ್ಮ ಸುತ್ತ ಆವರಣ ಸೃಷ್ಟಿಸಿಕೊಳ್ಳಿ. ಪ್ರೀತಿಪಾತ್ರರೆದುರು ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ತೆರೆದಿಡಿ. ಥಟ್ಟನೆ ಕೈಗೊಳ್ಳುವ ನಿರ್ಧಾರಗಳು ಪ್ರೇಮ ಜೀವನದಲ್ಲಿ ಉದ್ವಿಗ್ನ ಪರಿಸ್ಥಿತಿಯ ಸೃಷ್ಟಿಗೆ ಕಾರಣವಾದೀತು. ಹೊಸ ಯೋಜನೆಗಳನ್ನು ಆರಂಭಿಸುವಾಗ ಎಚ್ಚರಿಕೆ ಅಗತ್ಯ.
ಧನು
(ನ.23-ಡಿ.21)
ಯೋಜನೆಗಳಿಗೆ ತೊಂದರೆ ಉಂಟಾಗುವ ಸಾಧ್ಯತೆಗಳಿದ್ದು, ಸಂದೇಹ ಪ್ರವೃತ್ತಿಯ ಸಹೋದ್ಯೋಗಿಗಳನ್ನು ನಿಭಾಯಿಸಲು ಪ್ರಯತ್ನ ಪಡಬೇಕಾಗಿದೆ. ಪ್ರಣಯ ಜೀವನ ಗರಿಗೆದರಲಿದೆ. ವೈಯಕ್ತಿಕ ಜೀವನದಲ್ಲಿ ತೆಗೆದುಕೊಂಡ ನಿರ್ಧಾರಗಳು ಯಶಸ್ಸು ಕಾಣಲಿವೆ. ಹಳೆಯ ನೋವಿನ ಕ್ಷಣಗಳನ್ನು ಮರೆಯಲು ಕೆಲವು ಘಟನೆಗಳು ಕಾರಣವಾಗಲಿವೆ.
ಟಿ.ಎಸ್.ಐ |