ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

 
ಇತರ ವಿಭಾಗಗಳು
 
ಇಷ್ಟೇ - ಇಷ್ಟು
ಅಂಶು: ನಟಿ
 

 

ನಟಿಯಾಗುವ ಮುನ್ನ...

ನೃತ್ಯ, ಶಾಲೆ, ಕಾಲೇಜು, ಸ್ಪರ್ಧೆಗಳು ಎಂದು ಕಳೆದು ಹೋಗಿತ್ತು. ಅಭಿನಯಕ್ಕೆ ಅವಕಾಶ ಇದ್ದಲ್ಲಿ ನಾನಿರುತ್ತಿದ್ದೆ.

ಪ್ರಪ್ರಥಮ ಬಾರಿ ಕ್ಯಾಮರಾ ಮುಂದೆ ನಿಂತಾಗ?

ಭಯ ಆಗಿಲ್ಲ. ನಾನು ಆ ಕ್ಷಣವನ್ನು ಮನತುಂಬಿ ಸಂಭ್ರಮಿಸಿದ್ದೆ. ಒಂಥರಾ ಹೊಸ ಜೋಶ್ ನನ್ನನ್ನು ಆವರಿಸಿತ್ತು.

ಈಗ ನಟಿಸುತ್ತಿರುವ 'ಟೀಮ್' ಚಿತ್ರದ ಬಗ್ಗೆ?

ಉತ್ತಮ ಚಿತ್ರ. ನಾವು ಮೂರು ಜನ ಹುಡುಗ-ಹುಡುಗೀರು. ಎಲ್ಲರೂ ಹೊಸಬರೇ ಇದ್ದೇವೆ. ಹೀಗಾಗಿ 'ಅಹಂ'ಗಳಿಲ್ಲ. ನನ್ನ ಮಟ್ಟಿಗೆ ಅತ್ಯುತ್ತಮ ಅನುಭವ.

ಚಿತ್ರರಂಗದಲ್ಲಿ ಕನ್ನಡ ನಟಿಯರ ಸ್ಥಾನಮಾನ?

ಕನ್ನಡ ನಟಿಯರಿಗೆ ಅವಕಾಶಗಳನ್ನೇ ಕೊಡಲ್ಲ. ಯಾವುದೋ ಒಂದು ಚಿತ್ರ ಸೂಪರ್ ಹಿಟ್ ಆದರೆ ಆ ನಟಿಯ ಬೆನ್ನ ಹಿಂದೆ ಬೀಳೋದೇ ಆಯ್ತು.

ಇತರ ಭಾಷಾ ನಟಿಯರು ವೃತ್ತಿಪರರು ಆದರೆ ಕನ್ನಡ ನಟಿಯರು ಅಲ್ಲ ಎನ್ನುತ್ತಾರಲ್ಲ?

ಹಾಗೇನಿಲ್ಲ. ಕನ್ನಡದಲ್ಲಿ ವೃತ್ತಿಪರ ನಟಿಯರಿದ್ದಾರೆ. ಆದರೆ ಉತ್ತಮ ನಟಿಯರನ್ನು ಹುಡುಕಿ ಅವಕಾಶ ಕೊಡಬೇಕು. ಯಾರೋ ಕೆಲಸ ಗೊತ್ತಿಲ್ಲದವರನ್ನು ಕರೆ ತಂದು ಕನ್ನಡ ನಟಿಯರೆಲ್ಲಾ ವೃತ್ತಿಪರರಲ್ಲ ಎನ್ನುವುದು ಸರಿಯಲ್ಲ.

ಭವಿಷ್ಯದ ಯೋಜನೆಗಳು?

ಎಲ್ಲಾ ಅವಕಾಶಗಳನ್ನೂ ಒಪ್ಪಿಕೊಳ್ಳುತ್ತಿಲ್ಲ. ಸ್ವಲ್ಪ ಚ್ಯೂಸಿಯಾಗಿದ್ದೇನೆ.

ಟಿಎಸ್‌ಐ

ಎನ್.ಕೆ. ಸುಪ್ರಭಾ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .