|

ಸಾಮಾಜಿಕ ಮಾನದಂಡದಿಂದ ಅವಲೋಕಿಸಿದಾಗ ರಾಷ್ಟ್ರೀಯ
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಭ್ರಷ್ಟಾಚಾರದ ಕೂಪ ಎಂಬುದು ಸ್ಪಷ್ಟ.
ಇದರ ಬಗ್ಗೆ ಏನನ್ನುವಿರಿ?
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ
ಬಗ್ಗೆ ಸಾಮಾಜಿಕ ಮಾನದಂಡದ ಆಧಾರದ ಮೇಲೆ ಗ್ರಾಮಸಭೆ ನಡೆಸಿದ ಮೌಲ್ಯಮಾಪನ
ಭ್ರಷ್ಟಾಚಾರವನ್ನು ಕಿತ್ತು ಹಾಕುವ ಹಾಗೂ ಯೋಜನೆಯಲ್ಲಿ ಪಾರದರ್ಶಕತೆ ತರುವ
ನಿಟ್ಟಿನಲ್ಲಿ ಪರಿಣಾಮಕಾರಿ ಅಸ್ತ್ರ.
ಅಲ್ಲದೆ ಹೊಸ-
ಹೊಸ ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆಳೆಯಲು
ಹಾಗೂ ಅದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲೂ ಇದು ಸಹಕಾರಿ.
ಹಿಂದಿನ ಯೋಜನೆಗಳಲ್ಲಿ ಇಂಥ ಸಾಧ್ಯತೆಗಳು ಇರಲಿಲ್ಲ.
ಮಾಧ್ಯಮಗಳು ಒಂದು ಮಾತನ್ನು
ನೆನಪಿನಲ್ಲಿಟ್ಟುಕೊಳ್ಳಬೇಕು,
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ
ಎಂಬುದು ಅತ್ಯಂತ ಪಾರದರ್ಶಕ ಯೋಜನೆ.
ನಮ್ಮ ವೆಬ್‌ಸೈಟ್‌ನಲ್ಲಿ ಯೋಜನೆಯ ಕುರಿತ ಪ್ರತಿ
ಕ್ಷಣದ ಮಾಹಿತಿಯೂ ದೊರಕುತ್ತದೆ.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ
ಮೊದಲು ಜಾರಿಗೊಂಡ 200
ಹಳ್ಳಿಗಳಲ್ಲಿ ಶೇ.5ರಷ್ಟು
ಜನರಿಗೂ ಅದರ ಪ್ರಯೋಜನ ಸಿಕ್ಕಿಲ್ಲ ಎಂದು ಭಾರತೀಯ ಮಹಾ ಲೆಕ್ಕಪರಿಶೋಧಕರ
(ಸಿಎಜಿ)
ವರದಿಯೇ
ಬಹಿರಂಗಗೊಳಿಸಿದೆ.
ಆ ಬಳಿಕ ಯೋಜನೆಯನ್ನು ಇನ್ನಷ್ಟು ಜಿಲ್ಲೆಗಳಿಗೆ
ವಿಸ್ತರಿಸಲಾಯಿತು,
ಮುಂದೆಯೂ ಮತ್ತಷ್ಟು ಜಿಲ್ಲೆಗಳಿಗೆ ವಿಸ್ತರಿಸಲಾಗುವುದು.
ಯೋಜನೆಯ ಫಲಿತಾಂಶವನ್ನು ಗಮನಿಸಿದ ಮೇಲೂ ಯೋಜನೆಯನ್ನು
ರಾಷ್ಟ್ರದಾದ್ಯಂತ ವಿಸ್ತರಿಸುವ ಸ್ಥಿತಿಯಲ್ಲಿ ನಾವಿದ್ದೇವೆಯೇ?
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ
ಜಾರಿಯ ಕುರಿತ ಕೆಲವು ಅಂಶಗಳನ್ನು ಸಿಎಜಿ ಬೆಳಕಿಗೆ ತಂದಿದೆ.
ಆದರೆ ಆ ವರದಿಯೇ ಅಂತಿಮವಲ್ಲ.
ಯೋಜನೆಯ ಜಾರಿಯನ್ನು ಹೇಗೆ ಮತ್ತಷ್ಟು
ಪರಿಣಾಮಕಾರಿಯನ್ನಾಗಿಸಬಹುದು ಎಂಬುದನ್ನು ಆ ವರದಿಗಳು ವಿವರಿಸಿದ್ದವು.
ರಾಜ್ಯ,
ಜಿಲ್ಲೆ ಹಾಗೂ ತಾಲ್ಲೂಕುಗಳ ಆಡಳಿತ ವ್ಯವಸ್ಥೆ ಹಾಗೂ
ಆಡಳಿತ ತಂತ್ರಗಳನ್ನು ಚುರುಕುಗೊಳಿಸಿದರೆ ಯೋಜನೆಯ ಜಾರಿ ಮತ್ತಷ್ಟು
ಪರಿಣಾಮಕಾರಿಯಾಗಬಲ್ಲದು ಎಂಬುದನ್ನು ಆ ವರದಿಯಲ್ಲಿ ಸ್ಪಷ್ಟಪಡಿಸಲಾಗಿತ್ತು.
ಮತ್ತೊಂದು ಮಾತನ್ನು ಸ್ಪಷ್ಟಪಡಿಸುತ್ತೇನೆ,
ಸಿಎಜಿ ವರದಿ ಸಿದ್ಧಪಡಿಸಿದ್ದು ಗ್ರಾಮೀಣಾಭಿವೃದ್ಧಿ
ಸಚಿವಾಲಯದ ವಿನಂತಿಯ ಮೇರೆಗೆ ಹಾಗೂ ವರದಿ ಸಲ್ಲಿಕೆಯ ಮುಂಚಿತವಾಗಿಯೇ ನಾವು
ಯೋಜನೆಯ ಪರಿಣಾಮಕಾರಿ ಜಾರಿಯ ನಿಟ್ಟಿನಲ್ಲಿ ಹೆಜ್ಜೆಗಳನ್ನು ಇಟ್ಟಿದ್ದೆವು.
ವರದಿಯ ಕರಡು ಪ್ರತಿಯಲ್ಲಿ ಸರಾಸರಿಯಾಗಿ,
ನೋಂದಣಿಯಾದ ಪ್ರತಿ ಮನೆಗೆ
18 ದಿನಗಳ
ಉದ್ಯೋಗಾವಕಾಶ ಕಲ್ಪಿಸಲಾಗಿದೆ ಎಂದಿತ್ತು.
ನೋಂದಣಿಯಾದವರಲ್ಲಿ ಶೇ.3.2ರಷ್ಟು
ಕುಟುಂಬಗಳು 100
ಮತ್ತು ಅಧಿಕ ದಿನಗಳ ಉದ್ಯೋಗಾವಕಾಶವನ್ನು ಪಡೆದಿದ್ದಾರೆ ಎಂಬುದೂ ಆ
ವರದಿಯಲ್ಲಿತ್ತು.
ಆದರೆ ಆ ಅಂಶಗಳು ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಯ್ದೆಯ
ನಿಯಮಗಳನ್ನು ಪಾಲಿಸುವುದಿಲ್ಲ.
ಇದು ಬೇಡಿಕೆಯನ್ನಾಧರಿಸಿದ ಯೋಜನೆ.
ಕುಟುಂಬಗಳು ನೋಂದಣಿಯಾದ ಕೂಡಲೇ ಯಾಂತ್ರಿಕವಾಗಿ
ಅವುಗಳಿಗೆಲ್ಲಾ ಉದ್ಯೋಗಗಳು ಸಿಗುವುದಿಲ್ಲ.
ಉದ್ಯೋಗ ನೀಡುವುದು ನೋಂದಣಿಯಾದ ಮನೆಗಳಿಗಲ್ಲ,
ಬದಲಿಗೆ ಉದ್ಯೋಗ ಚೀಟಿ ಹೊಂದಿರುವ ಅರ್ಜಿದಾರರಿಗೆ
ಮಾತ್ರ.
2006-07ರಲ್ಲಿ
ಪ್ರತಿ ಮನೆಗೆ 44
ದಿನಗಳ ಉದ್ಯೋಗಾವಕಾಶ ಕಲ್ಪಿಸಲಾಗಿತ್ತು.
ಕಾಯ್ದೆ ಹೊಸದಾಗಿ ಜಾರಿಯಾದ ಜಿಲ್ಲೆಗಳಲ್ಲಿನ ಯಶಸ್ವಿ
ಕಾರ್ಯಾಚರಣೆಗಾಗಿ ಸಾಕಷ್ಟು ಹಣ ಬಿಡುಗಡೆ ಮಾಡಲಾಗಿದೆ.
ಜಾಗೃತಿ ಕಾರ್ಯಕ್ರಮಗಳು,
ಸಿಬ್ಬಂದಿ ನೇಮಕಾತಿ,
ತರಬೇತಿ,
ಅರ್ಜಿ,
ದಾಖಲಾತಿ ಹಾಗೂ ಇತರೆ ಅವಶ್ಯಕತೆಗಳನ್ನು ಈ ಮೂಲಕ
ಸುಧಾರಿಸಬಹುದು.
9105.74
ಕೋಟಿ ರೂಪಾಯಿ ಖರ್ಚಿನಲ್ಲಿ ಈಗಾಗಲೇ ಒಟ್ಟು
2.8
ಕೋಟಿ ಕುಟುಂಬಗಳಿಗೆ ಉದ್ಯೋಗ ಒದಗಿಸಲಾಗಿದೆ.
ಉದ್ಯೋಗ ಚೀಟಿ ವಿತರಣೆ ನ್ಯೂನತೆ ಯೋಜನೆಯ
ಮೂಲೋದ್ದೇಶವನ್ನೇ ಹಾಳುಗೆಡವಿದೆ ಎನಿಸುವುದಿಲ್ಲವೇ?
ಯೋಜನೆಯ ವ್ಯಾಪಕತೆಯನ್ನು ಗಮನಿಸಿದರೆ ಅಸಮರ್ಪಕ
ವಿತರಣೆ ಪ್ರಮಾಣ ನಗಣ್ಯವೆನಿಸುತ್ತದೆ.
ಸಂಪೂರ್ಣ ಯೋಜನೆಯನ್ನು ಸಮಗ್ರವಾಗಿ ಪರೀಕ್ಷಿಸಬೇಕೇ
ವಿನಃ ಎಲ್ಲೋ ಅಲ್ಲಲ್ಲಿ ಕಂಡುಬಂದ ಭ್ರಷ್ಟಾಚಾರ ಹಾಗೂ ನ್ಯೂನತೆಗಳನ್ನೇ ದೊಡ್ಡದು
ಮಾಡುವುದಲ್ಲ.
ಯೋಜನೆಯಲ್ಲಿ ವಂಚನೆ ನಡೆದಿರುವುದು ಕಂಡುಬಂದಲ್ಲಿ
ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತೇವೆ.
ಶ್ರೀಸಾಮಾನ್ಯ ಸೇರಿದಂತೆ ಎಲ್ಲರೂ ಯೋಜನೆಯ ಬಗ್ಗೆ
ಜಾಗೃತರಾಗಿರಬೇಕೆಂದು ನಾವು ಕರೆ ನೀಡಿದ್ದೇವೆ.
ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಪರಿಶೀಲನಾ
ಹಾಗೂ ಆಡಳಿತಾತ್ಮಕ ಸಮಿತಿಗಳು ಭ್ರಷ್ಟಾಚಾರ ಹಾಗೂ ನ್ಯೂನತೆಗಳ ವಿರುದ್ಧ ಸದಾ
ಜಾಗೃತರಾಗಿದ್ದಾರೆ.
ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಯೋಜನೆಯ ಯಶಸ್ವಿ ಜಾರಿ
ಹಾಗೂ ಆಂದೋಲನಕ್ಕೆ ನೆರವಾಗುವಂತೆ ನಾವು ಸರ್ಕಾರೇತರ ಸಂಸ್ಥೆಗಳಿಗೂ ಹೇಳಿದ್ದೇವೆ.
ದುರ್ಬಳಕೆಯನ್ನು ತಡೆಯುವ ಹಾಗೂ ರಾಷ್ಟ್ರೀಯ
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿಗಳಿಗೆ ದುಡಿಮೆಯ ಫಲ ಕಿಂಚಿತ್ತೂ
ಕಡಿತವಾಗದಂತೆ ದೊರಕಬೇಕು ಎಂಬ ಉದ್ದೇಶದಿಂದ ಅಂಚೆ ಕಚೇರಿ ಹಾಗೂ ಬ್ಯಾಂಕ್‌ಗಳ
ಮೂಲಕ ವೇತನ ವಿತರಿಸುವ ವ್ಯವಸ್ಥೆ ಒದಗಿಸಲಾಗಿದೆ.
ಅಭಿವೃದ್ಧಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ
ತರುವಷ್ಟು ಬಂಡವಾಳ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಬಳಿ ಇದೆಯೇ?
ಮುಂದಿನ ಬಜೆಟ್ ಅನುದಾನದಲ್ಲಿ ಎಷ್ಟು ಪ್ರಮಾಣದ
ಹೆಚ್ಚಳವನ್ನು ನಿರೀಕ್ಷಿಸುತ್ತೀರಿ...?
ಪ್ರಸಕ್ತ ವರ್ಷಕ್ಕೆ ರಾಷ್ಟ್ರೀಯ ಗ್ರಾಮೀಣ
ಉದ್ಯೋಗ ಖಾತ್ರಿ ಯೋಜನೆಗೆ 12,000
ಕೋಟಿ ರೂಪಾಯಿ ಮಂಜೂರಾಗಿದೆ.
ಮುಂದಿನ ವರ್ಷ ಅದನ್ನು
16,000
ಕೋಟಿ ರೂಪಾಯಿಗೆ ಏರಿಸುವ ಪ್ರಸ್ತಾಪವಿದೆ.
ಉದ್ಯೋಗ ಖಾತ್ರಿಯಾಗಿರುವುದರಿಂದ ಬೇಕೆಂದಾಗ ನಾವು
ಬಜೆಟ್ ಅನುದಾನವನ್ನು ಹೆಚ್ಚಿಸಬಹುದು.
ಆದರೆ ಅನುದಾನಕ್ಕೆ ತಕ್ಕನಾಗಿ ಉದ್ಯೋಗಕ್ಕೆ ಬೇಡಿಕೆ
ಇರಬೇಕಷ್ಟೇ.
ಯಾವುದೇ ಯೋಜನೆ ಜಾರಿಯಾದರೂ ಸಮಾಜದ ಕಟ್ಟಕಡೆಯ
ವ್ಯಕ್ತಿಯೂ ಅದರ ಫಲವುಣ್ಣುವಂತಾಗಬೇಕು ಎಂದು ಸರ್ಕಾರ ಹೇಳುತ್ತದೆ.
ಆದರೆ,
ಆ ರೀತಿ ಆಗುವುದೇ ಇಲ್ಲ.
ಹಲವು ಅಭಿವೃದ್ಧಿ ಯೋಜನೆಗಳನ್ನು ಇಟ್ಟುಕೊಂಡಿರುವ
ಗ್ರಾಮೀಣಾಭಿವೃದ್ಧಿ ಸಚಿವರಾಗಿರುವ ನೀವು ಆ ನಿಟ್ಟಿನಲ್ಲಿರುವ ಅಡೆ-ತಡೆಗಳನ್ನು
ಕಿತ್ತೊಗೆಯುವ ಬಗ್ಗೆ ಏನು ಹೇಳುವಿರಿ?
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ
ಯೋಜನೆಯಡಿಯಲ್ಲಿ ಸರ್ಕಾರದ ಭರವಸೆಗಳು ಕಾನೂನಿನ ನಿರ್ದಿಷ್ಟ ನಿಬಂಧನೆಗಳಿಗೆ
ಒಳಪಟ್ಟಿವೆ.
ಇದು ಕೇವಲ ಭರವಸೆಯಲ್ಲ,
ಕೇಂದ್ರ ಹಾಗೂ ಪ್ರತಿ ರಾಜ್ಯ ಸರ್ಕಾರಗಳ ಕರ್ತವ್ಯ.
ನಾವು ಈಗಾಗಲೇ ನೂರು ಕೋಟಿ ಮಾನವ ದಿನಗಳನ್ನು
ಸೃಷ್ಟಿಸಿದ್ದೇವೆ.
ಅದರಲ್ಲಿ ಶೇ.57ರಷ್ಟು
ಪಾಲು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ್ದಾದರೆ,
ಶೇ.43ರಷ್ಟು
ಪಾಲು ಮಹಿಳೆಯರದ್ದು.
ಕಟ್ಟಕಡೆಯ ವ್ಯಕ್ತಿಯನ್ನು ತಲುಪುವುದರಲ್ಲಿ ರಾಷ್ಟ್ರೀಯ
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಫಲವಾಗಿದೆ.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳ ಸಾಧನೆಯನ್ನು
ಅಂದಾಜು ಮಾಡಿದರೆ ಯಾವ ಯಾವ ರಾಜ್ಯವನ್ನು ಟಾಪ್
3 ಅಥವಾ ಟಾಪ್
5ರ
ಪಟ್ಟಿಯಲ್ಲಿ ಸೇರಿಸುವಿರಿ?
ನೋಡಿ,
ಇದು ಬೇಡಿಕೆಗಳನ್ನು ಆಧರಿಸಿ ಹುಟ್ಟಿಕೊಂಡಂಥ ಯೋಜನೆ.
ಎಷ್ಟು ಹಣ ಖರ್ಚಾಯಿತು ಅಥವಾ ಎಷ್ಟು ಕೆಲಸಗಳು
ಪೂರ್ಣಗೊಂಡವು ಎಂಬುದರ ಮೇಲೆ ರಾಜ್ಯ ಸರ್ಕಾರಗಳ ಸಾಧನೆಯನ್ನು ಅಳೆಯುವುದು
ಅಸಾಧ್ಯ.
ಇದು ಹಿಂದಿನ ಉದ್ಯೋಗ ಯೋಜನೆಗಳಿಗಿಂತ ಭಿನ್ನ.
ಅಲ್ಲಿ ಖರ್ಚಾದ ಹಣದ ಆಧಾರದ ಮೇಲೆ ರಾಜ್ಯಗಳ
ಸಾಧನೆಗಳನ್ನು ಅಳೆಯಲಾಗುತ್ತಿತ್ತು.
ಎಲ್ಲಾ ರಾಜ್ಯ ಸರ್ಕಾರಗಳೂ ಒಂದೇ ಸ್ಥಿತಿಯಲ್ಲಿಲ್ಲ
ಎಂಬುದನ್ನೂ ಗಮನಿಸಬೇಕಾಗುತ್ತದೆ.
ಪಂಚಾಯತ್ ರಾಜ್ ಸಿಬ್ಬಂದಿ ಮತ್ತು ಜನಪ್ರತಿನಿಧಿಗಳು
ಈ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಶ್ರಮಿಸುತ್ತಿದ್ದಾರೆ.
ಕೆಲವು
ತಿಂಗಳ ಹಿಂದೆ,
ಎಸ್‌ಇಝಡ್‌ಗಳು ಕೃಷಿಕರ ಪರವಾಗಿಲ್ಲ ಹಾಗಾಗಿ ಕೃಷಿ ಭೂಮಿ
ಸ್ವಾಧೀನಕ್ಕೆ ಕಡಿವಾಣ ಹಾಕಲು ಹೊಸ ಕಾಯ್ದೆ ಜಾರಿಗೆ ತರಲಾಗುವುದು ಎಂದು
ಹೇಳಿದ್ದಿರಿ.
ಆದರೆ ನನಗನಿಸುವ ಪ್ರಕಾರ ಆ ನಂತರ ನೀವು ಅದನ್ನು
ಮರೆತೇಬಿಟ್ಟಿದ್ದೀರಿ...
ಭೂಸ್ವಾಧೀನ ತಿದ್ದುಪಡಿ ಮಸೂದೆ
2007ಕ್ಕೆ
ಕ್ಯಾಬಿನೆಟ್ ಅನುಮೋದನೆ ನೀಡಿದೆ.
2007ರ
ಚಳಿಗಾಲದ ಅಧಿವೇಶನದಲ್ಲಿ ನಾವು ಮಸೂದೆಯನ್ನು ಮಂಡಿಸಿದ್ದೆವು.
ಗ್ರಾಮೀಣ ಅಭಿವೃದ್ಧಿ ಇಲಾಖೆಯ ಪ್ರಸ್ತುತ ಸಮಿತಿ ಆ
ನಿಟ್ಟಿನಲ್ಲಿ ಕಾರ್ಯಮಗ್ನವಾಗಿದೆ.
ನನ್ನ ಸಚಿವಾಲಯ ಹಾಗೂ ಸರ್ಕಾರ ಅದನ್ನು ಗಂಭೀರವಾಗಿ
ಪರಿಗಣಿಸಿವೆ.
ಬಡವರ ಹಿತರಕ್ಷಣೆಯ ವಿಷಯ ಬಂದಾಗ ನಾನು ಎಂದಿಗೂ ಹಿಂಜರಿಯಲಾರೆ.
ಈ ಬಾರಿಯೂ ಹಾಗೆಯೇ.
ನಿಮ್ಮ ಸಚಿವಾಲಯ ಕೈಗೊಂಡ ಎಲ್ಲಾ ಯೋಜನೆಗಳನ್ನೂ
ಅನುಷ್ಠಾನಗೊಳಿಸುವಷ್ಟು ಕಾಲಾವಕಾಶ ನಿಮ್ಮ ಮುಂದಿದೆಯೇ?
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ
ದೇಶದಾದ್ಯಂತ ಜಾರಿಯಾಗಿ ಕೇವಲ ಆರು ತಿಂಗಳುಗಳಾಗಿವೆ ಅಷ್ಟೆ...
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ
ಅನುಷ್ಠಾನದ ಬಗ್ಗೆ ಹೇಳಬೇಕೆಂದರೆ,
ಅದೊಂದು ಬಹಳ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು,
ಅನುಷ್ಠಾನಕ್ಕೂ ಮುನ್ನ ಹಲವು ಪೂರ್ವತಯಾರಿಗಳನ್ನು
ಮಾಡಿಕೊಳ್ಳುವ ಅಗತ್ಯವಿತ್ತು.
ಅದಕ್ಕೆಂದೇ ನಾವು ಆ ಯೋಜನೆಯ ಜಾರಿಯನ್ನು ಹಂತ
ಹಂತವಾಗಿ ಮಾಡಿದೆವು.
ಯೋಜನೆಯ ಕಾರ್ಯ ವೈಖರಿ ನನಗೆ ತೃಪ್ತಿ ನೀಡಿದೆ.
ಯೋಜನೆಯ ಮುಂದಿನ ಹಂತ ಜನತೆ ನಮಗೆ ನೀಡುವ ಜನಾದೇಶದ
ಮೇಲೆ ಅವಲಂಬಿತವಾಗಿದೆ.
ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ನಾವಂತೂ ಪ್ರಾಮಾಣಿಕ
ಪ್ರಯತ್ನ ಮಾಡಿದ್ದೇವೆ,
ಜನ ನಮ್ಮನ್ನು ಗಮನಿಸುತ್ತಿದ್ದಾರೆ.
ಮುಂದಿನ ಬಾರಿಯೂ ಆಡಳಿತ ಚುಕ್ಕಾಣಿ ಹಿಡಿಯುವ
ಅವಕಾಶವನ್ನು ನೀಡುತ್ತಾರೆ ಎಂಬ ಭರವಸೆ ನಮಗಿದೆ.
ಯುಪಿಎ ಸರ್ಕಾರದ ನಾಲ್ಕು ವರ್ಷಗಳ ಆಡಳಿತ ನಿಮಗೆ
ತೃಪ್ತಿ ನೀಡಿದೆಯೇ?
ಖಂಡಿತ.
ಸರ್ಕಾರದ ಕಾರ್ಯ ವೈಖರಿಯನ್ನು ಎಲ್ಲಾ ರೀತಿಯಿಂದಲೂ
ಜನ ಮೆಚ್ಚಿಕೊಂಡಿದ್ದಾರೆ.
ಆದರೂ ನಿಮ್ಮ ಮೇಲೆ ಎಲ್ಲಾ ಕಡೆಯಿಂದಲೂ ಟೀಕಾಸ್ತ್ರಗಳ
ಪ್ರಹಾರ ನಡೆಯುತ್ತಲೇ ಇದೆ!
ನಿಮ್ಮದೇ ಮಿತ್ರರಾದ ಎಡಪಕ್ಷಗಳು ಹಾಗೂ ಕೆಲವೊಮ್ಮೆ ನಿಮ್ಮ
ಪಕ್ಷದವರೇ ಹುಯಿಲೆಬ್ಬಿಸುತ್ತಿದ್ದಾರೆ...
ನಿಂದಕರಿರಬೇಕು ಎಂದು ದಾಸರೇ ಹೇಳಿದ್ದಾರಲ್ಲವೇ?
ಅಂಥ ನಿಂದಕರಿದ್ದರೇನೇ ನಮ್ಮ ಸಾಮರ್ಥ್ಯ ಏನು ಎಂಬುದು
ಗೊತ್ತಾಗುವುದು.
ಹಾಗಾಗಿ ಅವರೆಲ್ಲಾ ನನ್ನ ಮಿತ್ರರು,
ಶತ್ರುಗಳಲ್ಲ.
ಅವರು ತಪ್ಪುಗಳನ್ನು ಹುಡುಕಿ ಎಚ್ಚರಿಸಿ,
ನಾವು ಮುಂದೆ ಎಡವದಂತೆ ನೋಡಿಕೊಂಡಿದ್ದಾರೆ.
ಅದೆಲ್ಲಾ ನಮ್ಮ ಒಳಿತಿಗಾಗಿಯೇ ವಿನಃ ಅಲ್ಲಿ
ದುರುದ್ದೇಶಗಳಿಲ್ಲ ಎಂದುಕೊಳ್ಳುವೆ!
ಟಿಎಸ್‌ಐ |